ಆಧ್ಯಾತ್ಮಿಕ ಮಟ್ಟದಲ್ಲಿ ನೇತೃತ್ವ ಕ್ಷಮತೆಯನ್ನು ಹೇಗೆ ವಿಕಸಿತಗೊಳಿಸಬೇಕು ?

ಸದ್ಗುರು ನಂದಕುಮಾರ ಜಾಧವ

ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯವನ್ನು ಮಾಡಲು ಸಕ್ರಿಯರಾಗಿ ಹಿಂದೂ ಸಮಾಜದ ನೇತೃತ್ವ ವಹಿಸಿಕೊಳ್ಳುವ ಜವಾಬ್ದಾರಿ ಹಿಂದೂ ರಾಷ್ಟ್ರ – ಸಂಘಟಕರದ್ದಾಗಿದೆ. ಇದರಿಂದ ಹಿಂದೂ ರಾಷ್ಟ್ರ ಸಂಘಟಕರು ಕೇವಲ ಸಂಘಟನಾ ಕೌಶಲ್ಯವಷ್ಟೇ ಅಲ್ಲ, ಅದರೊಂದಿಗೆ ಆಯೋಜನಾ ಕ್ಷಮತೆ, ನಿರ್ಣಯ ಕ್ಷಮತೆ ಮತ್ತು ನೇತೃತ್ವ ಕ್ಷಮತೆ ವಿಕಸಿತಗೊಳಿಸಬೇಕು. ಎಲ್ಲಕ್ಕಿಂತ ಮೊದಲು ನಾವು ಅರಿತುಕೊಳ್ಳಬೇಕಾಗಿರುವ ವಿಷಯವೆಂದರೆ, ನೇತೃತ್ವಕ್ಷಮತೆ, ವ್ಯಾವಹಾರಿಕ ಸ್ತರದಲ್ಲಿ ಆಗದೇ ಆಧ್ಯಾತ್ಮಿಕ ಸ್ತರದಲ್ಲಿ ವಿಕಸನಗೊಳ್ಳಬೇಕು ಸದ್ಗುರು ನಂದಕುಮಾರ ಜಾಧವ ಇವರು ಈ ವಿಷಯದ ಬಗ್ಗೆ ಮಾಡಿದ ಮಾರ್ಗದರ್ಶನದಲ್ಲಿನ ಕೆಲವು ಅಂಶಗಳನ್ನು ಅಂಶಗಳನ್ನು ನೋಡೋಣ.

ನೇತೃತ್ವ ಕ್ಷಮತೆಯ ವಿಕಾಸ ಆಧ್ಯಾತ್ಮಿಕ ಸ್ತರದಲ್ಲಾಗಲು ಮಾಡಬೇಕಾದ ಪ್ರಯತ್ನ

ನೇತೃತ್ವ ಕ್ಷಮತೆಯನ್ನು ಆಧ್ಯಾತ್ಮಿಕ ಸ್ತರದಲ್ಲಿ ವಿಕಾಸಗೊಳಿಸಲು ಪ್ರಯತ್ನಿಸಿದರೆ ಪರಿಪೂರ್ಣ ನೇತೃತ್ವಕ್ಷಮತೆ ವಿಕಾಸವಾಗುತ್ತದೆ. ಧರ್ಮನಿಷ್ಠ ಛತ್ರಪತಿ ಶಿವಾಜಿ ಮಹಾರಾಜರು ಆಧ್ಯಾತ್ಮಿಕ ನೇತೃತ್ವದ ಒಂದು ಉದಾಹರಣೆಯಾಗಿದ್ದಾರೆ.

ಅ. ಸ್ವಭಾವದೋಷ-ನಿರ್ಮೂಲನೆ ಮತ್ತು ಗುಣಸಂವರ್ಧನೆ ಪ್ರಕ್ರಿಯೆ ಮಾಡುವುದು

ಆತ್ಮಪ್ರತೀತಿದೃಢತಾ ವಿರಕ್ತಿರಿತಿ ತ್ರಯಂ ಸ್ವಾತ್ಮನಿ ಯೋ ದಧಾತಿ |
ನೇತಾ ಸ ಎವಾಸ್ತಿ ಸಮಸ್ತ ಶಿಷ್ಟ-ಗುಣಾಶ್ರಯತ್ವಾನ್ನಿಖಿಲಪ್ರಜಾನಾಂ ||

– ಮಹಾಸುಭಾಷಿತಸಂಗ್ರಹ

ಅರ್ಥ : ಸ್ವಕರ್ತೃತ್ವದ ಮೇಲೆ ವಿಶ್ವಾಸ, ದೃಢತೆ ಮತ್ತು ದೋಷವಿರಕ್ತಿ (ಕಾಮ, ಕ್ರೋಧ, ಲೋಭ, ಮೋಹ ಮುಂತಾದ ದುರ್ಗುಣಗಳ ನಿರ್ಮೂಲನೆ ಮಾಡಿದವನು) ಈ ಮೂರು ಗುಣಗಳು ಯಾವ ವ್ಯಕ್ತಿಯಲ್ಲಿರುತ್ತವೋ ಮತ್ತು ಅವನು ನಮ್ರತೆ ಮುಂತಾದ ಇತರ ಗುಣಗಳಿಂದಲೂ ಯುಕ್ತನಾಗಿದ್ದರೆ, ನಿಶ್ಚಿತವಾಗಿಯೂ ಆ ವ್ಯಕ್ತಿ ಸಮಸ್ತ ಪ್ರಜೆಗಳ ಯೋಗ್ಯ ನೇತೃತ್ವ ವಹಿಸಲು ಸಕ್ಷಮನಿರುತ್ತಾನೆ. ಸ್ವಲ್ಪ ಸ್ವಭಾವದೋಷಗಳಿದ್ದರೂ ಇಂತಹ ವ್ಯಕ್ತಿಗಳು ನೇತೃತ್ವ ವಹಿಸಲು ಯೋಗ್ಯರಿರುವುದಿಲ್ಲ. ಇದಕ್ಕಾಗಿ ಸ್ವಭಾವದೋಷ-ನಿರ್ಮೂಲನೆಯ ಪ್ರಯತ್ನ ಮಹತ್ವದ್ದಾಗಿದೆ ಹಾಗೂ ನಮ್ರತೆ ಗುಣವು ವಿಕಾಸವಾಗಲು ಅಹಂ-ನಿರ್ಮೂಲನೆಗಾಗಿ ಪ್ರಯತ್ನ ಮಾಡಬೇಕಾಗುತ್ತದೆ.

ಆ. ವಾತ್ಸಲ್ಯಭಾವ ಹೆಚ್ಚಿಸಲು ಪ್ರಯತ್ನಿಸುವುದು : ನೇತೃತ್ವವಹಿಸುವವನು ಸಮೂಹದಲ್ಲಿರುವ ಘಟಕಗಳೊಂದಿಗೆ ಪಿತೃಭಾವದಿಂದ ವರ್ತಿಸಬೇಕು. ತಾಯಿಯಂತೆ ವಾತ್ಸಲ್ಯಭಾವ (ನಿರಪೇಕ್ಷ ಪ್ರೇಮಭಾವದ ಒಂದು ವಿಧ)ವಿದ್ದರೆ ಮಾತ್ರ ಇಂತಹ ವರ್ತನೆ ಮಾಡಲು ಸಾಧ್ಯವಾಗುತ್ತದೆ. ಸಾಧನೆಯಿಂದಾಗಿ ಪ್ರಾಣಿಮಾತ್ರರನ್ನು ನಿರಪೇಕ್ಷ ಪ್ರೀತಿ ಮಾಡಲು ಆಗುತ್ತದೆ. ನಿರಪೇಕ್ಷ ಪ್ರೇಮದಿಂದಾಗಿ ಸಮೂಹದಲ್ಲಿನ ವ್ಯಕ್ತಿಗಳಿಂದಾಗುವ ತಪ್ಪುಗಳನ್ನು ಪ್ರೇಮದಿಂದ ತೋರಿಸಿ ಅದನ್ನು ಸುಧಾರಿಸಲು ಅವರ ಮಟ್ಟಕ್ಕೆ ಹೋಗಿ ಪ್ರಯತ್ನಿಸಲಾಗುತ್ತದೆ ಹಾಗೂ ನಿರಪೇಕ್ಷತೆಯಿಂದಾಗಿ ಸಮೂಹದಲ್ಲಿನ ವ್ಯಕ್ತಿಗಳ ಅಡಚಣೆಗಳನ್ನು ಅರಿತುಕೊಂಡು ಸಾತತ್ಯದಿಂದ ಸಹಾಯ ಮಾಡುವ ಸ್ಥಿತಿಯಲ್ಲಿರಲು ಸಾಧ್ಯವಾಗುತ್ತದೆ.

ಇ. ವ್ಯಷ್ಟಿ ಸಾಧನೆಯನ್ನು ಚೆನ್ನಾಗಿ ಮಾಡುವುದು : ನಾಮಜಪ, ಪ್ರಾರ್ಥನೆ, ಸ್ವಭಾವದೋಷ-ನಿರ್ಮೂಲನೆ ಮುಂತಾದ ವ್ಯಕ್ತಿಗತ ಸಾಧನೆಯನ್ನು ಚೆನ್ನಾಗಿ ಮಾಡಿದರೆ, ವಾಣಿಯಲ್ಲಿ ಚೈತನ್ಯ ನಿರ್ಮಾಣವಾಗುತ್ತದೆ. ವಾಣಿಯಲ್ಲಿ ಚೈತನ್ಯವಿದ್ದರೆ, ಮಾತ್ರ ಅನುಯಾಯಿಗಳು ನೇತೃತ್ವ ವಹಿಸುವವನ ಮಾತನ್ನು ಕೇಳುತ್ತಾರೆ.

ಈ. ತತ್ತ್ವನಿಷ್ಠೆ ಬೇಕು : ನಿರ್ಣಯ ತೆಗೆದುಕೊಳ್ಳುವಾಗ ತತ್ವನಿಷ್ಠತೆಯಿದ್ದರೆ, ಆ ನಿರ್ಣಯವು ಸಮೂಹದಲ್ಲಿನ ವ್ಯಕ್ತಿಗಳಿಗೆ ಸಹಜವಾಗಿ ಸ್ವೀಕರಿಸಲು ಸಾಧ್ಯವಾಗುತ್ತದೆ. ತತ್ತ್ವನಿಷ್ಠೆಯಿಂದಾಗಿ ಸಮೂಹದಲ್ಲಿರುವ ಒಬ್ಬರು ಹತ್ತಿರ ಮತ್ತು ಇನ್ನೊಬ್ಬರು ದೂರದವರೆನಿಸುವುದು, ಹೀಗಾಗುವುದಿಲ್ಲ. ನೇತೃತ್ವ ವಹಿಸುವವನಿಗೆ ಸಮೂಹದಲ್ಲಿನ ಎಲ್ಲರ ಅಯೋಗ್ಯ ಕೃತಿಗಳನ್ನು ಮತ್ತು ಸ್ವಭಾವದೋಷಗಳನ್ನು ತತ್ತ್ವನಿಷ್ಠೆಯಿಂದ ಹೇಳಲು ಸಾಧ್ಯವಾಗಬೇಕು. ಸಾಧನೆಯಿಂದಾಗಿ ಈಶ್ವರನಿಗೆ ಅಪೇಕ್ಷಿಸಿದ ತತ್ತ್ವದ ಆಚರಣೆ ಮಾಡಲು ಸುಲಭವಾಗುತ್ತದೆ.

ಉ. ಸತ್ಯನಿಷ್ಠರಾಗಬೇಕು : ನಾವು ಸಮೂಹದಲ್ಲಿನ ವ್ಯಕ್ತಿಗಳೊಂದಿಗೆ ಸುಳ್ಳು ಹೇಳಿ ಸಂಘಟನೆ ಮಾಡಬಹುದು. ಅಸತ್ಯದಿಂದ ಮಾಡಿದ ಕಾರ್ಯವು ಬಹಳ ಕಾಲ ಉಳಿಯುವುದಿಲ್ಲ; ಏಕೆಂದರೆ ಕೊನೆಗೆ ಸತ್ಯವೇ ಹೊರಗೆ ಬರುತ್ತದೆ ಹಾಗೆ ನೇತೃತ್ವ ವಹಿಸುವವನು ಪರಿಸ್ಥಿತಿಯ ಸತ್ಯತೆಯನ್ನು ಪರೀಶಿಲಿಸಿಯೇ ನಿರ್ಣಯ ಕೊಡುಬೇಕು. ಸತ್ಯವನ್ನು ಒಬ್ಬರದೇ ಕೇಳಿ ಅಥವಾ ಅಪೂರ್ಣ ಮಾಹಿತಿ ತೆಗೆದುಕೊಂಡು ನಿರ್ಣಯ ನೀಡಿದರೆ ಆ ನಿರ್ಣಯವು ಅಯೋಗ್ಯ ಮತ್ತು ಅನ್ಯಾಯಕಾರಿಯೆಂದು ನಿರ್ಧರಿಸಲಾಗುತ್ತದೆ.

ಊ. ಮನಮುಕ್ತವಾಗಿರಬೇಕು : ನೇತೃತ್ವ ವಹಿಸುವವನು ಎಲ್ಲರೊಂದಿಗೆ ಆತ್ಮೀಯತೆಯನ್ನು ಸಾಧಿಸಬೇಕು. ಮನಮುಕ್ತತೆಯಿಂದ ಆತ್ಮೀಯತೆಯನ್ನು ಸಾಧಿಸಿದರೆ ಕಾರ್ಯ ಮಾಡುವವನು ಮನಮುಕ್ತತೆಯಿಂದ ನೇತೃತ್ವ ವಹಿಸುವವನಲ್ಲಿ ಅಡಚಣೆಗಳನ್ನು ಹೇಳುತ್ತಾರೆ. ಮನಮುಕ್ತತೆಯಿದ್ದರೆ, ನೇತೃತ್ವ ವಹಿಸುವವನಿಗೂ ಅನುಯಾಯಿಗಳು ಅವನ ತಪ್ಪನ್ನೂ ಹೇಳಬಹುದು. ರಾಜಕೀಯ ಪಕ್ಷಗಳ ನೇತೃತ್ವ ವಹಿಸುವವರಲ್ಲಿ ಮನಮುಕ್ತತೆಯಿರುವುದಿಲ್ಲ. ಆದ್ದರಿಂದ ಅವರಿಗೆ ತಮ್ಮ ಕಾರ್ಯಕರ್ತರಿಗೆ ತಪ್ಪುಗಳನ್ನು ಹೇಳಲು ಸಾಧ್ಯವಾಗುವುದಿಲ್ಲ. ಇದರಿಂದ, ಗಮನಕ್ಕೆ ಬರುವುದೆಂದರೆ ಸಾಧನೆ ಉತ್ತಮವಾಗಿದ್ದರೆ, ಸಮಷ್ಟಿಯ ನೇತೃತ್ವವನ್ನು ಉತ್ತಮ ರೀತಿಯಲ್ಲಿ ಮಾಡಲು ಸಾಧ್ಯವಾಗುತ್ತದೆ. ಸಮಷ್ಟಿ ಸ್ತರದಲ್ಲಿ ಕಾರ್ಯ ಮಾಡುವ ಸಂತರೆಂದರೆ ಆಧ್ಯಾತ್ಮಿಕ ದೃಷ್ಟಿಯಿಂದ ಉತ್ತಮ ನೇತಾರರಾಗಿದ್ದಾರೆ.

ನೇತೃತ್ವಕ್ಷಮತೆ ಸಂದರ್ಭದಲ್ಲಿ ವ್ಯವಹಾರಿಕ ಸೂಚನೆ

ಅ. ನೇತೃತ್ವ ವಹಿಸುವವನಿಗೆ ಸಮೂಹದಲ್ಲಿನ ಪ್ರತಿಯೊಬ್ಬರೊಂದಿಗೆ ಯೋಗ್ಯ ರೀತಿಯಲ್ಲಿ ಗೌರವ-ಸನ್ಮಾನವನ್ನಿಟ್ಟುಕೊಂಡು ಮಾತನಾಡಲು ತಿಳಿದಿರಬೇಕು.

ಆ. ನೇತೃತ್ವ ವಹಿಸುವವನು ಸಮೂಹದಿಂದ ಕಾರ್ಯ ಮಾಡಿಸಿಕೊಳ್ಳುವಾಗ ಸ್ವತಃ ತಾನೂ ಆ ಕಾರ್ಯವನ್ನು ಮಾಡುವ ಆವಶ್ಯಕತೆಗನುಸಾರ ಶಾರೀರಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಸಿದ್ಧತೆ ಮಾಡಬೇಕು. ಇದರಿಂದ ಸಮೂಹಕ್ಕೆ ತರಬೇತಿ ಮಾಡಲು ಸುಲಭವಾಗುತ್ತದೆ ಹಾಗೂ ಸಮೂಹಕ್ಕೆ ನೇತಾರನ ಬಗ್ಗೆ ಆತ್ಮವಿಶ್ವಾಸವೆನಿಸುತ್ತದೆ.

ಇ. ನೇತೃತ್ವ ವಹಿಸುವವನು ಯಾವಾಗಲೂ ತಲೆಯ ಮೇಲೆ ಮಂಜುಗಡ್ಡೆ ಮತ್ತು ಬಾಯಿಯಲ್ಲಿ ಸಕ್ಕರೆಯನ್ನಿಟ್ಟುಕೊಳ್ಳಬೇಕು, ಅಂದರೆ ಶಾಂತವಾಗಿದ್ದು ಸದ್ವಿವೇಕಬುದ್ಧಿಯಿಂದ ನಿರ್ಣಯ ತೆಗೆದುಕೊಳ್ಳಬೇಕು ಮತ್ತು ಬಾಯಿಯಿಂದ ಯಾವಾಗಲೂ ಮಧುರ ಸಂವಾದ ಮಾಡಬೇಕು.

ಈ. ನೇತೃತ್ವ ವಹಿಸುವವನು ಆವಶ್ಯಕತೆಗಿಂತ ಹೆಚ್ಚು ಭಾವನಾಶೀಲ, ಸಂವೇದನಾಶೀಲ ಮತ್ತು ವೇಗವಾನ ಆಗುವುದು ಉಪಯೋಗವಿಲ್ಲ.

ಉ. ನೇತೃತ್ವ ವಹಿಸುವವನು ಸಮೂಹದ ಸೂಚನೆ ಕೇಳಿಕೊಳ್ಳಬೇಕು ಹಾಗೂ ಸಮೂಹದೊಂದಿಗೆ ತರ್ಕಪೂರ್ಣ ಪದ್ಧತಿಯಿಂದ ಚರ್ಚೆ ಮಾಡಬೇಕು.

ಊ. ನೇತೃತ್ವ ವಹಿಸುವವನು ಕಾರ್ಯದ ಯೋಗ್ಯ ಮೌಲ್ಯಾಂಕನ ಮಾಡಿ ಆವಶ್ಯಕತೆಗನುಸಾರ ಸಮೂಹದಲ್ಲಿನ ಘಟಕಗಳಿಗೆ ದಂಡಿಸುವ ಅಥವಾ ಪಾರಿತೋಷಕವನ್ನು ನೀಡುವ ಕ್ಷಮತೆಯನ್ನಿಟ್ಟುಕೊಳ್ಳಬೇಕು. ನೇತಾರನು ನೀಡಿದ ಪ್ರಶಂಸೆ ಇದು ನೇತೃತ್ವವನ್ನು ಸ್ವೀಕರಿಸುವವರಿಗೆ ಪಾರಿತೋಷಕದಂತೆಯೇ ಇದೆ.

ಎ. ಎಲ್ಲಕ್ಕಿಂತ ಮಹತ್ವದ ಅಂಶವೇನೆಂದರೆ ಯಾವುದೇ ಪರಿಸ್ಥಿತಿಯನ್ನು ಸ್ವೀಕರಿಸಲು ಸಿದ್ಧನಾಗಿರಬೇಕು. ಕಠಿಣ ಪರಿಸ್ಥಿತಿಯಲ್ಲಿಯೂ ವಿಚಲಿತನಾಗದೇ ಸಮೂಹಕ್ಕೆ ಧ್ಯೇಯಪ್ರಾಪ್ತಿಯೆಡೆಗೆ ಕರೆದುಕೊಂಡು ಹೋಗುವವನು ನಿಜವಾದ ನೇತಾರನಾಗಿರುತ್ತಾನೆ.

ಏ. ನೇತೃತ್ವ ವಹಿಸುವವನು ಸಮೂಹದಲ್ಲಿನ ಘಟಕಗಳು ಕೇಳಿದ ಸಮಯವನ್ನು ನೀಡಬೇಕು. ಇದರಿಂದ ನೇತೃತ್ವ ವಹಿಸುವವನ ಬಗ್ಗೆ ವಿಶ್ವಾಸ ನಿರ್ಮಾಣವಾಗುತ್ತದೆ.

ಒ. ನೇತೃತ್ವ ವಹಿಸುವವನು ತನ್ನ ನಂತರ ನೇತೃತ್ವವನ್ನು ವಹಿಸಬಲ್ಲ ಸಮೂಹದಲ್ಲಿನ ವ್ಯಕ್ತಿಗೆ ತರಬೇತಿಯನ್ನು ನೀಡಬೇಕು. ಅನೇಕ ನೇತಾರರನ್ನು ಸಿದ್ಧ ಮಾಡುವವನು ಎಲ್ಲರಿಗಿಂತ ಉತ್ತಮ ನೇತಾರನಾಗಿರುತ್ತಾನೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ !

Leave a Comment