ಧರ್ಮ, ಧರ್ಮಾಚರಣೆ ಮತ್ತು ಅಧ್ಯಾತ್ಮ ಹಾಗೂ ಸಾಧನೆ ಇವುಗಳ ಸಂಕಲ್ಪನೆಯ ಸಂದರ್ಭದಲ್ಲಿ ಜನಸಾಮಾನ್ಯರಲ್ಲಿ ಗೊಂದಲ ಇರುತ್ತದೆ. ಅನೇಕ ಧರ್ಮಗ್ರಂಥ, ಋಷಿಮುನಿಗಳು, ಧರ್ಮಾಚಾರ್ಯರು, ಸಂತ, ಅಭ್ಯಾಸಕರು ಅನೇಕ ರೀತಿಗಳಲ್ಲಿ ಇವುಗಳ ವ್ಯಾಖ್ಯೆ ನೀಡಿದ್ದಾರೆ. ಈ ನಾಲ್ಕು ಪದಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಬಹುದಾದ ಸಂಕಲ್ಪನೆ ಹೀಗಿದೆ.
೧. ಧರ್ಮ
ಈಶ್ವರಪ್ರಾಪ್ತಿ ಮಾಡಿಕೊಳ್ಳುವುದೇ ಈ ಭೂಮಿಯ ಮೇಲೆ ಪ್ರತಿಯೊಬ್ಬರ ಮೂಲ ಧ್ಯೇಯವಾಗಿದೆ. ಈ ಧ್ಯೇಯವನ್ನು ಸಾಧಿಸಲು ಪ್ರತಿಯೊಬ್ಬರಿಗೂ ಇತರರಿಂದ ಸಹಾಯ ಸಿಗಬೇಕೆಂದು ಈಶ್ವರನು ಪ್ರತಿಯೊಬ್ಬರಿಗೂ ಕೆಲವು ಕರ್ತವ್ಯ ಮತ್ತು ನಿಯಮಗಳನ್ನು ಹಾಕಿಕೊಟ್ಟಿದ್ದಾನೆ. ಅದನ್ನೇ ‘ಧರ್ಮ’ ಎಂದು ಕರೆಯಲಾಗುತ್ತದೆ.
೨. ಧರ್ಮಾಚರಣೆ
ಧರ್ಮವು ಹೇಳಿದನ್ನು ಆಚರಣೆಯಲ್ಲಿ ತರುವುದು, ಅಂದರೆ ಧರ್ಮಾಚರಣೆ !
೩. ಅಧ್ಯಾತ್ಮ
ಈಶ್ವರನಿರ್ಮಿತ ವಿಶ್ವದ ಕಾರ್ಯನಿರ್ವಹಣೆಯ ವಿಧಾನ, ಅದರ ನಿಯಮಗಳು ಮತ್ತು ಸಿದ್ಧಾಂತ ಹೇಳುವ ಶಾಸ್ತ್ರವೇ ಅಧ್ಯಾತ್ಮ.
೪. ಸಾಧನೆ
ಅಧ್ಯಾತ್ಮದಲ್ಲಿ ಹೇಳಿರುವ ಸಿದ್ಧಾಂತಕ್ಕನುಸಾರ ಈಶ್ವರಪ್ರಾಪ್ತಿಗಾಗಿ ಮನಸ್ಸು, ಬುದ್ಧಿ ಮತ್ತು ಅಹಂ ಇವುಗಳನ್ನು ಲಯಗೊಳಿಸಲು ಪ್ರಯತ್ನಿಸುವುದೇ ಸಾಧನೆ.
ಧರ್ಮಾಚರಣೆಯಿಂದ ಸಾಧನೆ ಆಗುತ್ತದೆಯೇ ?
ಧರ್ಮಾಚರಣೆಯಿಂದ ವ್ಯಕ್ತಿಯು ಸತ್ತ್ವಗುಣಿಯಾಗುತ್ತಾನೆ. ಆದರೆ ಕೇವಲ ಅದರಿಂದ ಮನಸ್ಸು, ಬುದ್ಧಿ ಮತ್ತು ಅಹಂಕಾರದ ತ್ಯಾಗವಾಗುವುದಿಲ್ಲ. ಉದಾಹರಣೆಗೆ, ಧರ್ಮಾಚರಣೆಯೆಂದು ಪಿತೃಗಳಿಗಾಗಿ ಶ್ರಾದ್ಧ ಮಾಡಿದರೆ, ಅದರಿಂದ ಪಿತೃಗಳಿಗೆ ಸದ್ಗತಿ ದೊರೆಯುತ್ತದೆ ಮತ್ತು ನಮ್ಮ ಸಾಧನೆಯಲ್ಲಿ ಪಿತೃಗಳಿಂದ ಬರುವ ಅಡೆತಡೆಗಳು ದೂರವಾಗುತ್ತವೆ. ಆದರೆ ಕೇವಲ ಶ್ರಾದ್ಧ ಮಾಡುವುದರಿಂದ ಮನಸ್ಸು, ಬುದ್ಧಿ ಮತ್ತು ಅಹಂಕಾರದ ಲಯವಾಗುವುದಿಲ್ಲ. ಅದಕ್ಕಾಗಿ ಪ್ರತ್ಯಕ್ಷ ಸಾಧನೆ ಮಾಡುವುದು ಆವಶ್ಯಕವಾಗಿದೆ. ಸತ್ಯ, ದ್ವಾಪರ, ತ್ರೇತಾ ಯುಗಗಳಲ್ಲಿ ಎಲ್ಲರೂ ಧರ್ಮಾಚರಣಿಗಳಾಗಿದ್ದರು; ಆದರೂ ಅವರು ತಮ್ಮ ಜೀವನದ ಸಾವಿರಾರು ವರ್ಷಗಳಲ್ಲಿ ಜ್ಞಾನಯೋಗ, ಧ್ಯಾನಯೋಗ, ತಪಶ್ಚರ್ಯೆ ಇಂತಹ ವಿವಿಧ ಮಾರ್ಗಗಳಿಂದ ಸಾಧನೆ ಮಾಡುತ್ತಿದ್ದರು.
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಗುರುದೇವರ ಅಮೂಲ್ಯ ವಿಚಾರಗಳು
ಪರಿಪೂರ್ಣತೆಯ ಮೂರ್ತಿಸ್ವರೂಪವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಹವಾಸದಲ್ಲಿ ಕಲಿಯಲು ಸಿಕ್ಕಿದ ಅಂಶಗಳು
ಸಾಧನೆಯ ಪ್ರವಾಸದಲ್ಲಿ ಸಾಧಕರನ್ನು ಲೀಲಾಜಾಲವಾಗಿ ಸಗುಣದಿಂದ ನಿರ್ಗುಣದ ಕಡೆಗೆ ಕರೆದುಕೊಂಡು ಹೋಗುವ ಪರಾತ್ಪರ ಗುರು ಡಾ. ಆಠವಲೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಮಾರ್ಗದರ್ಶನದ ಅಮೂಲ್ಯ ಅಂಶಗಳು
ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಅಮೃತ ಮಹೋತ್ಸವ ವರ್ಷದ ನಿಮಿತ್ತ…