ಪ್ರಾಣಶಕ್ತಿ (ಚೇತನಾ) ವಹನ ವ್ಯೂಹದಲ್ಲಿನ ಅಡಚಣೆಗಳಿಂದಾಗುವ ರೋಗಗಳಿಗೆ ಉಪಾಯ – ಭಾಗ ೧

ಪ್ರಾಣಶಕ್ತಿ ವಹನ ವ್ಯೂಹದಲ್ಲಿನ ಅಡಚಣೆಗಳನ್ನು ಸ್ವತಃ ಹುಡುಕಿ ದೂರಗೊಳಿಸಿ !

೧. ಉಪಾಯಪದ್ಧತಿಯ ತಿರುಳು

ಮಾನವನ ಸ್ಥೂಲದೇಹದಲ್ಲಿ ರಕ್ತಪರಿಚಲನ, ಶ್ವಸನ, ಪಚನ, ಮಜ್ಜೆ ಇತ್ಯಾದಿ ವಿವಿಧ ವ್ಯೂಹಗಳು ಕಾರ್ಯನಿರತವಾಗಿರುತ್ತವೆ. ಅವುಗಳಿಗೆ ಕಾರ್ಯವನ್ನು ಮಾಡಲು ಬೇಕಾಗುವ ಶಕ್ತಿಯನ್ನು ಪ್ರಾಣ ಶಕ್ತಿವಹನ ವ್ಯೂಹವು ಪೂರೈಸುತ್ತದೆ. ಅದರಲ್ಲಿ ಯಾವುದಾದರೊಂದು ಸ್ಥಳದಲ್ಲಿ ಅಡಚಣೆ (ಅಡೆತಡೆ) ಬಂದಲ್ಲಿ ಸಂಬಂಧಿತ ಇಂದ್ರಿಯದ ಕಾರ್ಯಕ್ಷಮತೆ ಕಡಿಮೆಯಾಗುವುದರಿಂದ ರೋಗಗಳು (ತೊಂದರೆ ಗಳು) ನಿರ್ಮಾಣವಾಗುತ್ತವೆ. ಇಂತಹ ಸಂದರ್ಭದಲ್ಲಿ ಇಂದ್ರಿಯಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ಆಯುರ್ವೇದಿಕ, ‘ಆಲೋಪೆಥಿಕ್ ಇತ್ಯಾದಿ ಔಷಧಿಗಳನ್ನು ಎಷ್ಟೇ ತೆಗೆದುಕೊಂಡರೂ ಅದರಿಂದ ಉಪಯೋಗವಾಗುವುದಿಲ್ಲ. ಅದಕ್ಕಾಗಿ ಪ್ರಾಣ ಶಕ್ತಿವಹನ ವ್ಯೂಹದಲ್ಲಿ ನಿರ್ಮಾಣವಾದ ಅಡಚಣೆಯನ್ನು ದೂರಗೊಳಿಸುವುದೇ ಏಕೈಕ ಮಾರ್ಗವಾಗಿರುತ್ತದೆ. ನಮ್ಮ ಕೈಬೆರಳುಗಳಿಂದ ಯಾವಾಗಲೂ ಪ್ರಾಣಶಕ್ತಿಯು ಹೊರಬೀಳುತ್ತಿರುತ್ತದೆ. ಅದನ್ನು ಬಳಸಿ ರೋಗಗಳನ್ನು ದೂರಗೊಳಿಸುವುದೇ ಈ ಪ್ರಾಣಶಕ್ತಿವಹನ ಉಪಾಯಪದ್ಧತಿಯ ತಿರುಳಾಗಿದೆ.

೨. ಅಧಿಕ ಪರಿಪೂರ್ಣ ಉಪಾಯಪದ್ಧತಿ !

ವ್ಯಕ್ತಿಗೆ ತೊಂದರೆ ಕೊಡುವ ಕೆಟ್ಟ ಶಕ್ತಿಗಳು ವ್ಯಕ್ತಿಯಲ್ಲಿನ ರೋಗದ ಮೂಲ ಸ್ಥಾನವನ್ನು ಆಗಾಗ ಬದಲಾಯಿಸುತ್ತಿರುತ್ತವೆ. ಇಂತಹ ಸಮಯದಲ್ಲಿ ಬಿಂದುಒತ್ತಡ ಇತ್ಯಾದಿ ಉಪಾಯಪದ್ಧತಿಗಳಲ್ಲಿ ಹೇಳಲಾದ ರೋಗಕ್ಕೆ ಸಂಬಂಧಿಸಿದ ಬಿಂದುಗಳನ್ನು ಒತ್ತಿ ಯೋಗ್ಯ ಉಪಾಯ ಮಾಡಲು ಸಾಧ್ಯವಾಗುವುದಿಲ್ಲ. ಪ್ರಾಣಶಕ್ತಿವಹನ ವ್ಯೂಹದ ಉಪಾಯ ಪದ್ಧತಿಯಲ್ಲಿ ಪ್ರತಿಯೊಂದು ಸಲ ಅಡಚಣೆಗಳ ಸ್ಥಾನವನ್ನು ಹುಡುಕುವುದರಿಂದ ಯೋಗ್ಯ ಉಪಾಯ ಮಾಡಲು ಸಾಧ್ಯವಾಗುತ್ತದೆ.

೩. ಅಧಿಕ ಸ್ವಾವಲಂಬಿ ಉಪಾಯಪದ್ಧತಿ !

ಬರುವ ಭೀಕರ ಆಪತ್ಕಾಲದ ವಿಚಾರ ಮಾಡಿದರೆ ರೋಗನಿವಾರಣೆಗಾಗಿ ಸ್ವಾವಲಂಬಿಗಳಾಗಲು ಬಿಂದುಒತ್ತಡದ ಉಪಾಯ, ರಿಫ್ಲೆಕ್ಸಾಲಜಿ, ಪಿರಮಿಡ್ ಉಪಾಯ, ಆಯಸ್ಕಾಂತೀಯ ಉಪಾಯದಂತಹ ಉಪಾಯಪದ್ಧತಿಗಳು ಮಹತ್ವದ್ದಾಗಿವೆ. ಬಿಂದು ಒತ್ತಡ, ರಿಫ್ಲೆಕ್ಸಾಲಜಿ ಇತ್ಯಾದಿ ಉಪಾಯ ಪದ್ಧತಿಗಳಲ್ಲಿ ಪುಸ್ತಕ ಅಥವಾ ಅರಿತವರ ಸಹಾಯವು ಆವಶ್ಯಕವಾಗಿರುತ್ತದೆ. ಪಿರಮಿಡ್, ಆಯಸ್ಕಾಂತ ಇತ್ಯಾದಿ ಉಪಾಯಪದ್ಧತಿಗಳಲ್ಲಿ ಆಯಾ ಸಾಧನಗಳು ಆವಶ್ಯಕವಾಗಿರುತ್ತವೆ. ಈ ಹಿನ್ನೆಲೆಯಲ್ಲಿ ಯಾವುದೇ ಸಹಾಯವಿಲ್ಲದೇ ಮತ್ತು ಯಾವುದೇ ಸಾಧನಗಳ ಆವಶ್ಯಕತೆಯಿಲ್ಲದೇ ಪ್ರಾಣಶಕ್ತಿವಹನ ವ್ಯೂಹದ ಉಪಾಯ ಪದ್ಧತಿಯು ಅತ್ಯಂತ ಸ್ವಾವಲಂಬಿಯಾಗಿದೆ. – ಡಾ. ಆಠವಲೆ (೨೮.೧೦.೨೦೧೫)

ಆಧ್ಯಾತ್ಮಿಕ ಉಪಾಯಗಳ ಹೊಸ ಹೊಸ ಪದ್ಧತಿಗಳ ವಿವೇಚನೆಯನ್ನು ಮಾಡುವ ಜಗತ್ತಿನ ಏಕೈಕ ಪರಾತ್ಪರ ಗುರು ಡಾ. ಆಠವಲೆ !

(ಪರಾತ್ಪರ ಗುರು) ಡಾ. ಆಠವಲೆ

ವ್ಯಕ್ತಿಗಾಗುವ ಶಾರೀರಿಕ ಮತ್ತು ಮಾನಸಿಕ ತೊಂದರೆಗಳ ಕಾರಣವು ಹೆಚ್ಚಿನಾಂಶ ಆಧ್ಯಾತ್ಮಿಕವಾಗಿರುತ್ತದೆ. ಅದರಲ್ಲಿನ ಪ್ರಮುಖ ಕಾರಣವೆಂದರೆ ಕೆಟ್ಟ ಶಕ್ತಿಗಳ ತೊಂದರೆಗಳು. ಈ ತೊಂದರೆಗಳ ನಿವಾರಣೆಗಾಗಿ ಇಂದಿನವರೆಗೆ ಪರಾತ್ಪರ ಗುರು ಡಾ. ಆಠವಲೆಯವರು ಆಧ್ಯಾತ್ಮಿಕ ಉಪಾಯಗಳ ಅನೇಕ ಹೊಸ ಹೊಸ ಪದ್ಧತಿಗಳ ವಿವೇಚನೆಯನ್ನು ಮಾಡಿದ್ದಾರೆ, ಉದಾ. ದೇವತೆಗಳ ಒಂದರ ನಂತರ ಒಂದು ನಾಮಜಪ, ಖಾಲಿ ಪೆಟ್ಟಿಗೆಗಳ ಉಪಾಯ. ಈ ಉಪಾಯಪದ್ಧತಿಗಳಿಂದ ಸನಾತನದ ಸಾವಿರಾರು ಸಾಧಕರಿಗೆ ಲಾಭವಾಗುತ್ತಿರುವುದರಿಂದ ಈ ಪದ್ಧತಿಗಳು ಪ್ರಮಾಣೀಕರಿಸಿದ ಶಾಸ್ತ್ರಗಳೇ ಆಗಿವೆ. ಇವುಗಳಲ್ಲಿನ ಒಂದು ಪದ್ಧತಿ ಎಂದರೆ, ‘ಪ್ರಾಣಶಕ್ತಿವಹನ ವ್ಯೂಹದಲ್ಲಿನ ಅಡಚಣೆಗಳಿಂದಾಗುವ ರೋಗಗಳ ಮೇಲಿನ ಉಪಾಯ. ೨೦೧೦ ರಿಂದ ಸಾವಿರಾರು ಸಾಧಕರು ಈ ಉಪಾಯಗಳ ಪ್ರಯೋಗ ಮಾಡಿ ಅವರಿಗೆ ಲಾಭವಾಗಿರುವುದು ದೃಢವಾದ ಮೇಲೆಯೇ ಈ ಉಪಾಯಪದ್ಧತಿಯ ಬಗ್ಗೆ ಈ ಗ್ರಂಥದ ಸಂಕಲನ ಮಾಡಲಾಗಿದೆ.

ಪ್ರಾಣಶಕ್ತಿ (ಚೇತನಾ) ವಹನ ಉಪಾಯಪದ್ಧತಿಯು ಹಿಂದೂ ಧರ್ಮದಲ್ಲಿನ ಜ್ಞಾನದ ಮೇಲಾಧರಿಸಿದ ಉಪಾಯಪದ್ಧತಿಯಾಗಿದೆ !

‘ಪ್ರಾಣಶಕ್ತಿ (ಚೇತನಾ)ಯು ಮನುಷ್ಯನಿಗೆ ಜೀವನದಾಯಿನಿ ಶಕ್ತಿಯಾಗಿದೆ. ಮನುಷ್ಯನ ರೋಗಗಳನ್ನು ಗುಣಪಡಿಸಲು ‘ಪಿರಮಿಡ್ ಉಪಾಯ, ‘ರೇಕಿ ಉಪಾಯ ಇಂತಹ ಪ್ರಚಲಿತ ಉಪಾಯ ಪದ್ಧತಿಗಳಲ್ಲಿಯೂ ಪ್ರಾಣಶಕ್ತಿಯನ್ನೇ ಉಪಯೋಗಿಸಲಾಗುತ್ತದೆ. ಈ ಗ್ರಂಥದಲ್ಲಿಯೂ ಪ್ರಾಣಶಕ್ತಿಯನ್ನು ವಿಶಿಷ್ಟ ರೀತಿಯಲ್ಲಿ ಉಪಯೋಗಿಸಿ ರೋಗಗಳನ್ನು ಗುಣಪಡಿಸುವುದರ ಹಿಂದಿನ ಶಾಸ್ತ್ರವನ್ನು ಹೇಳಲಾಗಿದೆ. ಈ ಉಪಾಯ ಪದ್ಧತಿಯಲ್ಲಿ ಕೈಬೆರಳುಗಳ ಮುದ್ರೆ ಮತ್ತು ನಾಮಜಪವನ್ನು ಮಾಡುವುದು ಮಹತ್ವ್ವದ ಘಟಕಗಳಾಗಿವೆ.
ಮಾನವನ ಐದು ಕೈಬೆರಳುಗಳು ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಈ ಪಂಚ ಮಹಾಭೂತಗಳನ್ನು ಪ್ರತಿನಿಧಿಸುತ್ತವೆ. ‘ಪ್ರತಿಯೊಂದು ಬೆರಳು ಮತ್ತು ಅದಕ್ಕೆ ಸಂಬಂಧಿಸಿದ ‘ಮಹಾಭೂತವನ್ನು ಈ ಗ್ರಂಥದಲ್ಲಿ ನೀಡಲಾಗಿದೆ. ಅದು ‘ಶಾರದಾತಿಲಕ (ಅಧ್ಯಾಯ ೨೩, ಶ್ಲೋಕ ೧೦೬ ರ ಸಂದರ್ಭದ ಟೀಕೆ) ಮತ್ತು ‘ಸ್ವರವಿಜ್ಞಾನ ಎಂಬ ಗ್ರಂಥದಲ್ಲಿ ನೀಡಲಾದ ಮಾಹಿತಿಯಂತಿದೆ.

ಮುದ್ರೆಯನ್ನು ಮಾಡಿ ಅದನ್ನು ಶರೀರದ ಕುಂಡಲಿನಿಚಕ್ರಗಳ ಸ್ಥಳದಲ್ಲಿ ಅಥವಾ ವಿವಿಧ ಅವಯವಗಳ ಸ್ಥಳದಲ್ಲಿ ‘ನ್ಯಾಸ ಮಾಡುವುದು ಪ್ರಾಣಶಕ್ತಿ (ಚೇತನಾ) ವಹನ ಪದ್ಧತಿಯ ಒಂದು ಭಾಗವಾಗಿದೆ. ‘ಪ್ರಾಚೀನ ಕಾಲದಿಂದಲೂ ಮಂತ್ರ ಯೋಗದಲ್ಲಿ ಮಾತೃಕಾನ್ಯಾಸವನ್ನು ಮಾಡಲು ಹೇಳಲಾಗಿದೆ. ಅದರಲ್ಲಿಯೂ ಐದು ಬೆರಳುಗಳು ಹಾಗೂ ಅಂಗೈಯಿಂದ ಶರೀರದ ವಿವಿಧ ಅವಯವಗಳ ಸ್ಥಳದಲ್ಲಿ ನ್ಯಾಸವನ್ನು ಮಾಡಲು ಹೇಳಲಾಗಿದೆ. (ಆಧಾರ ಗ್ರಂಥ : ಭಾರತೀಯ ಸಂಸ್ಕೃತಿಕೋಶ, ಖಂಡ ೪ ಮತ್ತು ೭)

ಅಧ್ಯಾತ್ಮವು ಕೃತಿಯ ಶಾಸ್ತ್ರವಾಗಿದೆ. ಅದರಲ್ಲಿ ಪ್ರಯೋಗಶೀಲತೆ ಮತ್ತು ಸೃಜನಶೀಲತೆಯಿದೆ. ಹಿಂದೂ ಧರ್ಮದಲ್ಲಿನ ಜ್ಞಾನವನ್ನು ಉಪಯೋಗಿ ಸುವಾಗ ನಾವು ಜಿಜ್ಞಾಸು ವೃತ್ತಿಯಿಂದ ಅಧ್ಯಯನ ಮಾಡಿದೆವು. ಪ್ರಾಣಶಕ್ತಿ (ಚೇತನಾ) ವಹನವ್ಯೂಹದಲ್ಲಿನ ಅಡಚಣೆಗಳನ್ನು ಹುಡುಕುವ ಪದ್ಧತಿ, ಹಾಗೆಯೇ ವಿವಿಧ ಮುದ್ರೆಗಳು, ನ್ಯಾಸ ಮತ್ತು ನಾಮಜಪದ ಸಂದರ್ಭದಲ್ಲಿ ಸ್ವತಃ ಪ್ರಯೋಗಗಳನ್ನು ಮಾಡಿ ಅನುಭವವನ್ನು ಪಡೆದುಕೊಂಡೆವು. ಅನೇಕ ಸಾಧಕರೂ ಈ ಉಪಾಯಪದ್ಧತಿಯ ಪ್ರಯೋಗವನ್ನು ಮಾಡಿದರು. ಈ ಉಪಾಯ ಪದ್ಧತಿಯ ಲಾಭವು ಗಮನಕ್ಕೆ ಬಂದ ಮೇಲೆ ಈಗ ಗ್ರಂಥದ ಮಾಧ್ಯಮದಿಂದ ಈ ಉಪಾಯ ಪದ್ಧತಿಯನ್ನು ಎಲ್ಲರೆದುರು ಪ್ರಸ್ತುತ ಪಡಿಸುತ್ತಿದ್ದೇವೆ. ವಾಚಕರೂ ಈ ಉಪಾಯಪದ್ಧತಿಯ ಸಂದರ್ಭದಲ್ಲಿ ಏನಾದರೂ ವೈಶಿಷ್ಟ್ಯಪೂರ್ಣ ಅನುಭವಗಳು ಬಂದಲ್ಲಿ ನಮಗೆ ತಿಳಿಸಬೇಕು. ‘ಈಶ್ವರನೇ ಈ ಕಾರ್ಯವನ್ನು ಮಾಡಿಸಿಕೊಂಡನು ಅದಕ್ಕಾಗಿ ಈಶ್ವರನ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸು ತ್ತೇನೆ. – ಡಾ. ಆಠವಲೆ (೨೮.೧೦.೨೦೧೫)

೧. ಪ್ರಾಣಶಕ್ತಿ ಪ್ರವಾಹದಲ್ಲಿನ ಅಡೆತಡೆಗಳನ್ನು ಹುಡುಕುವುದು (ನ್ಯಾಸ ಮಾಡಲು ಸ್ಥಾನವನ್ನು ಹುಡುಕುವುದು)

೧ ಅ. ಕೆಟ್ಟ ಶಕ್ತಿಗಳ ತೊಂದರೆಯಿರುವವರು ನಾಮಜಪ ಮಾಡುತ್ತಾ ಸ್ಥಾನವನ್ನು ಹುಡುಕಬೇಕು ! :

ಬೆರಳುಗಳಿಂದ ಸ್ಥಾನವನ್ನು ಹುಡುಕುವಾಗ ‘ಶ್ವಾಸ ಎಲ್ಲಿ ನಿಲ್ಲುತ್ತದೆ ಎಂಬುದರ ಕಡೆ ಗಮನ ಕೊಡುವುದು ಮಹತ್ವದ್ದಾಗಿರುತ್ತದೆ. ಕೆಟ್ಟ ಶಕ್ತಿಗಳ ತೀವ್ರ ತೊಂದರೆಯಿರುವವರು ನಾಮಜಪ ಮಾಡುತ್ತಾ ಪ್ರಯೋಗ ಮಾಡಬೇಕು; ಏಕೆಂದರೆ ಸ್ಥಾನವನ್ನು ಹುಡುಕುವಾಗ ಅವರ ಕೈಯ ಬೆರಳುಗಳಿಂದ ತ್ರಾಸದಾಯಕ ಶಕ್ತಿಯು ಅವರ ಶರೀರದಲ್ಲಿ ಹೋಗುವ ಸಾಧ್ಯತೆಯಿರುತ್ತದೆ.

೧ ಆ. ಕುಂಡಲಿನಿಚಕ್ರಗಳ ಸ್ಥಾನದಲ್ಲಿ ಬೆರಳುಗಳನ್ನು ಮೇಲಿನಿಂದ ಕೆಳಗೆ ಮತ್ತು ಕೆಳಗಿನಿಂದ ಮೇಲೆ ಒಯ್ದು ನ್ಯಾಸ ಮಾಡಲು ಸ್ಥಾನವನ್ನು ಹುಡುಕುವುದು :

ಶ್ವಾಸದ ಕಡೆಗೆ ಗಮನವಿಟ್ಟು ತೊಂದರೆಗೆ ಸಂಬಂಧಿಸಿದ ಇಂದ್ರಿಯವು ಯಾವ ಕುಂಡಲಿನಿ ಚಕ್ರಕ್ಕೆ ಸಂಬಂಧಿಸಿದೆಯೋ ಅದರ ಸಮೀಪದ ಭಾಗದಲ್ಲಿ ಬೆರಳುಗಳನ್ನು ಮೇಲೆ ಅಥವಾ ಕೆಳಗೆ ಒಯ್ಯುವಾಗ ಶ್ವಾಸ ಸಿಲುಕಿ ಕೊಂಡಂತಾಗುತ್ತದೆ. ಇದಕ್ಕಾಗಿ ಹೆಬ್ಬೆರಳನ್ನು ಬಿಟ್ಟು ಸಡಿಲವಾಗಿಟ್ಟ ಕೈಯ ಇತರ ಬೆರಳುಗಳನ್ನು ಶರೀರದಿಂದ ೧-೨ ಸೆಂ.ಮೀ. ಅಂತರದಲ್ಲಿ ಕೆಳಗಿನಿಂದ ಮೇಲೆ ಮತ್ತು ಮೇಲಿನಿಂದ ಕೆಳಗೆ ಒಯ್ಯಬೇಕು. ಆದರೆ ಏನೂ ಅರಿವಾಗದಿದ್ದರೆ ಸ್ವಾಧಿಷ್ಠಾನದಿಂದ ಸಹಸ್ರಾರದವರೆಗೆ ಪ್ರತಿಯೊಂದು ಚಕ್ರದ ಸಮೀಪದ ಭಾಗದಲ್ಲಿ ಬೆರಳುಗಳನ್ನು ಮೇಲೆ ಮತ್ತು ಕೆಳಗೆ ಹೀಗೆ ಒಯ್ಯಬೇಕು. ಹೀಗೆ ಮಾಡುವಾಗ ಯಾವ ಚಕ್ರದ ಸ್ಥಾನದಲ್ಲಿ ಅಥವಾ ಅದರ ಸಮೀಪ ಶ್ವಾಸ ಸಿಲುಕಿದಂತಾಗುವುದೋ, ಅದು ನ್ಯಾಸ ಮಾಡುವ ಸ್ಥಾನವಾಗಿರುತ್ತದೆ.


೧ ಇ. ಶರೀರದ ಎಲ್ಲ ಭಾಗಗಳ ಮೇಲೆ ಬೆರಳುಗಳನ್ನು ಮೇಲಿನಿಂದ ಕೆಳಗೆ ಮತ್ತು ಕೆಳಗಿನಿಂದ ಮೇಲೆ ಒಯ್ದು ನ್ಯಾಸವನ್ನು ಮಾಡಲು ಸ್ಥಾನವನ್ನು ಹುಡುಕುವುದು :

ಕೆಲವೊಮ್ಮೆ ಕುಂಡಲಿನಿ ಚಕ್ರದ ಸ್ಥಾನದಲ್ಲಿ ಅಡೆತಡೆ ಇದ್ದರೂ ಅಥವಾ ಇಲ್ಲದಿದ್ದರೂ, ಶರೀರದಲ್ಲಿರುವ ವಿವಿಧ ನಾಡಿಗಳಲ್ಲೂ ಅಡಚಣೆಗಳು ಇರುತ್ತವೆ. ಆದ್ದರಿಂದ ಅವುಗಳಿಗೆ ಸಂಬಂಧಪಟ್ಟ ಇಂದ್ರಿಯಗಳಲ್ಲಿ ತೊಂದರೆಯ ಅರಿವಾಗುತ್ತದೆ, ಉದಾ. ಏದುಸಿರು ಬರುವುದು. ಇಂತಹ ಸಮಯದಲ್ಲಿ ನಾಡಿಗಳಲ್ಲಿನ ಅಡಚಣೆಗಳನ್ನು ಹುಡುಕಲು ಚಕ್ರದ ಸ್ಥಾನಗಳನ್ನು ಬಿಟ್ಟು ಶರೀರದ ಇತರ ಕಡೆಗಳಲ್ಲಿ, ಅಂದರೆ ತಲೆ, ಕುತ್ತಿಗೆ, ಎದೆ, ಹೊಟ್ಟೆ, ಕೈ, ಕಾಲು ಇತ್ಯಾದಿ ಎಲ್ಲ ಭಾಗಗಳ ಮೇಲೆ ಎಲ್ಲ ಕಡೆಗಳಲ್ಲಿ ಬೆರಳುಗಳನ್ನು ಮೇಲಿನಿಂದ ಕೆಳಗೆ ಮತ್ತು ಕೆಳಗಿನಿಂದ ಮೇಲೆ ಒಯ್ದು ‘ಎಲ್ಲಿಯಾದರೂ ಅಡಚಣೆಗಳಿವೆಯೇ ? ಎಂದು ಹುಡುಕಬೇಕು.

೧ ಈ. ಸ್ಥಾನವನ್ನು ಹುಡುಕುವಾಗ ಯಾವ ಸ್ಥಳದಲ್ಲಿ ತೊಂದರೆಯ ಪ್ರಕಟೀಕರಣದ ಲಕ್ಷಣಗಳು ಕಂಡುಬರುತ್ತವೆಯೋ, ಆ ಸ್ಥಳವೂ ನ್ಯಾಸ ಮಾಡಲು ಯೋಗ್ಯವಾಗಿರುತ್ತದೆ :

ಸ್ಥಾನವನ್ನು ಹುಡುಕುವಾಗ ಕೆಲವೊಮ್ಮೆ ಆಧ್ಯಾತ್ಮಿಕ ಉಪಾಯಗಳೂ ಆಗುತ್ತವೆ. ಆಧ್ಯಾತ್ಮಿಕ ಉಪಾಯ ವಾದುದರಿಂದ ತೊಂದರೆಯ ಪ್ರಕಟೀಕರಣದ ಲಕ್ಷಣಗಳೂ (ಉದಾ. ಆಕಳಿಕೆ, ತೇಗು, ಚರ್ಮದ ಮೇಲೆ ತ್ರಾಸದಾಯಕ ಸಂವೇದನೆಗಳ ಅರಿವಾಗುವುದು) ಅರಿವಾಗಬಹುದು. ಹೀಗಾದಲ್ಲಿ, ಆ ಸ್ಥಾನವೂ ನ್ಯಾಸ ಮಾಡಲು ಯೋಗ್ಯವಾಗಿದೆ ಎಂದು ತಿಳಿದುಕೊಳ್ಳಬೇಕು.

೧ ಉ. ಬಲಗೈಯ ಬೆರಳುಗಳಿಂದ ಸ್ಥಾನ ಸಿಗದಿದ್ದಲ್ಲಿ ಎಡಗೈಯ ಬೆರಳುಗಳಿಂದ ಸ್ಥಾನವನ್ನು ಹುಡುಕಬೇಕು.

೧ ಊ. ಎರಡು ಕೈಗಳ ಬೆರಳುಗಳಿಂದ ಸ್ಥಾನವನ್ನು ಹುಡುಕುವುದು :

ಒಂದು ಕೈಯ ಬೆರಳುಗಳಿಂದ ಕುಂಡಲಿನಿ ಚಕ್ರಗಳಲ್ಲಿನ ಅಥವಾ ಶರೀರದ ಇತರ ಸ್ಥಾನಗಳಲ್ಲಿರುವ ಪ್ರಾಣಶಕ್ತಿ ವಹನದ ಪ್ರವಾಹದಲ್ಲಿನ ಅಡಚಣೆ ಕಂಡು ಬರದಿದ್ದಲ್ಲಿ, ಒಂದು ಕೈಯ ಹಿಂಭಾಗದ ಮೇಲೆ ಇನ್ನೊಂದು ಕೈಯ ಅಂಗೈಯನ್ನು ಇಟ್ಟು, ಎರಡು ಕೈಗಳ ಬೆರಳುಗಳಿಂದ ಸ್ಥಾನವನ್ನು ಹುಡುಕಬೇಕು ಎರಡು ಕೈಗಳ ಬೆರಳುಗಳಿಂದ ಪ್ರಾಣಶಕ್ತಿಯು ಹೆಚ್ಚು ಪ್ರಮಾಣದಲ್ಲಿ ಪ್ರಕ್ಷೇಪಿತವಾಗುವುದರಿಂದ ಅಡಚಣೆಯ ಪ್ರಮಾಣ ಕಡಿಮೆಯಿದ್ದರೂ, ಅಡಚಣೆಯ ಸ್ಥಾನ ಗಮನಕ್ಕೆ ಬರುತ್ತದೆ ಮತ್ತು ಆ ಸ್ಥಾನದ ಮೇಲೆ ಉಪಾಯವನ್ನು ಮಾಡಬಹುದು.

೧ ಎ. ಸ್ಥಾನವನ್ನು ಹುಡುಕಲು ಕೈಗಳ ಬೆರಳುಗಳನ್ನು ಮೇಲಿನಿಂದ ಕೆಳಗೆ ಮತ್ತು ಕೆಳಗಿನಿಂದ ಮೇಲೆ ಒಯ್ಯುವಾಗ ಕೆಲವೊಮ್ಮೆ ಅಸಹನೀಯ ತೊಂದರೆಯಾಗುವುದು :

ಸ್ಥಾನವನ್ನು ಹುಡುಕಲು ಕೈಗಳ ಬೆರಳುಗಳನ್ನು ಮೇಲಿನಿಂದ ಕೆಳಗೆ ಮತ್ತು ಕೆಳಗಿನಿಂದ ಮೇಲೆ ಒಯ್ಯುವಾಗ ಕೆಲವೊಮ್ಮೆ ವಾಂತಿ ಬಂದಂತಾಗುವುದು, ಉಸಿರು ಕಟ್ಟುವುದು, ಇಂತಹ ಅಸಹನೀಯ ತೊಂದರೆಗಳಾಗುತ್ತವೆ. ಈ ತೊಂದರೆಗಳು ಅಲ್ಲಿನ ಇಂದ್ರಿಯದ ಚಲನ ವಲನದ ನೈಸರ್ಗಿಕ ದಿಕ್ಕಿನ ಬದಲು ವಿರುದ್ಧ ದಿಕ್ಕಿನಲ್ಲಿ ಬೆರಳುಗಳನ್ನು ತಿರುಗಿಸಿದುದರಿಂದ ಆಗುತ್ತದೆ. ಅದರ ಒಂದು ಉದಾಹರಣೆ ಹೀಗಿದೆ – ದೊಡ್ಡ ಕರುಳಿನ ಚಲನವಲನದ ದಿಕ್ಕು ಹೊಟ್ಟೆಯ ಬಲಬದಿಯ ಕೆಳಗಿನ ಜಾಗದಿಂದ ನೇರವಾಗಿ ಮೇಲೆ ಪಕ್ಕೆಲುಬಿನ ವರೆಗೆ, ಅಲ್ಲಿಂದ ಎಡಬದಿಯ ಪಕ್ಕೆಲುಬಿನವರೆಗೆ ಮತ್ತು ಅಲ್ಲಿಂದ ಕೆಳಗೆ ಹೊಟ್ಟೆಯ ಎಡಬದಿಯ ಕೆಳಗಿನ ದಿಕ್ಕಿನೆಡೆಗೆ ಇರುತ್ತದೆ. ಇದರ ವಿರುದ್ಧವಾಗಿ ಬೆರಳುಗಳನ್ನು ಮೇಲಿನಿಂದ ಕೆಳಗೆ ಮತ್ತು ಕೆಳಗಿನಿಂದ ಮೇಲೆ ಒಯ್ದರೆ ಅಸಹನೀಯ ತೊಂದರೆಯಾಗುತ್ತದೆ. ಇಂತಹ ತೊಂದರೆಯಾದರೆ ಆ ದಿಕ್ಕು ತಪ್ಪಾಗಿದೆ ಎಂದು ತಿಳಿದುಕೊಳ್ಳಬೇಕು.

ಟಿಪ್ಪಣಿ : ಇಲ್ಲಿಯವರೆಗೆ ನೋಡಿದ ನ್ಯಾಸ ಸ್ಥಾನ, ಮುದ್ರೆ ಮತ್ತು ನಾಮಜಪ ಸ್ವತಃ ಹುಡುಕಲು ಸಾಧ್ಯವಾಗದಿದ್ದರೆ ಯಾವ ಉಪಾಯ ಮಾಡಬೇಕೆಂಬುದನ್ನೂ ಗ್ರಂಥದಲ್ಲಿ ನೀಡಿದ್ದಾರೆ.

ಪ್ರಾಣಶಕ್ತಿ ವಹನ ವ್ಯೂಹದಲ್ಲಿನ ಅಡಚಣೆಗಳನ್ನು ಸ್ವತಃ ಹುಡುಕಿ ದೂರಗೊಳಿಸಿ ! – ಭಾಗ ೨

ಪ್ರಾಣಶಕ್ತಿ ವಹನ ವ್ಯೂಹದಲ್ಲಿನ ಅಡಚಣೆಗಳನ್ನು ಸ್ವತಃ ಹುಡುಕಿ ದೂರಗೊಳಿಸಿ ! – ಭಾಗ ೩

(ಆಧಾರ : ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿಸಿದ ಗ್ರಂಥ ‘ಪ್ರಾಣಶಕ್ತಿ (ಚೇತನಾ) ವಹನ ವ್ಯೂಹದಲ್ಲಿನ ಅಡಚಣೆಗಳಿಂದಾಗುವ ರೋಗಗಳಿಗೆ ಉಪಾಯ)

ಸಂತ ಮಹಾತ್ಮರು, ಜ್ಯೋತಿಷ್ಯರು ಮುಂತಾದವರು ಹೇಳಿದಂತೆ ಮುಂಬರುವ ಕಾಲವು ಭೀಕರ ಆಪತ್ಕಾಲವಾಗಿದ್ದು ಈ ಕಾಲದಲ್ಲಿ ಸಮಾಜವು ಅನೇಕ ಆಪತ್ತುಗಳನ್ನು ಎದುರಿಸಬೇಕಾಗುತ್ತದೆ. ಆಪತ್ಕಾಲದಲ್ಲಿ ತನ್ನೊಂದಿಗೆ ಕುಟುಂಬದವರ ರಕ್ಷಣೆಯನ್ನೂ ಮಾಡುವುದು ದೊಡ್ಡ ಸವಾಲೇ ಆಗಿರುತ್ತದೆ ಆಪತ್ಕಾಲದ ಸುಳಿಯಲ್ಲಿ ಸಂಪರ್ಕ ಕಡಿದುಕೊಳ್ಳುವುದರಿಂದ ರೋಗಿಯನ್ನು ಆಸ್ಪತ್ರೆಗೆ ಒಯ್ಯುವುದು, ವೈದ್ಯರೊಂದಿಗೆ ಸಂಪರ್ಕ ಸಾಧಿಸುವುದು ಮತ್ತು ಪೇಟೆಯಲ್ಲಿ ಔಷಧಿ ದೊರೆಯುವುದು ಸಹ ಕಠಿಣವಾಗುತ್ತದೆ ಆಪತ್ಕಾಲದಲ್ಲಿ ಬಲಿಯಾಗುವ ರೋಗಗಳನ್ನು ಎದುರಿಸುವ ಪೂರ್ವ ಸಿದ್ಧತೆಯ ಒಂದು ಭಾಗವೆಂದು ಸನಾತನ ಸಂಸ್ಥೆಯು ‘ಭಾವಿ ಆಪತ್ಕಾಲದ ಸಂಜೀವಿನಿ’ ಈ ಗ್ರಂಥಮಾಲಿಕೆಯನ್ನು ತಯಾರಿಸುತ್ತಿದೆ. ಈ ಮಾಲಿಕೆಯಲ್ಲಿನ ೫ ಗ್ರಂಥಗಳು ಇಲ್ಲಿಯವರೆಗೆ ಪ್ರಕಾಶನಗೊಂಡಿವೆ. ಈ ಮಾಲಿಕೆಯಲ್ಲಿನ ಪ್ರಾಣಶಕ್ತಿ (ಚೇತನಾ) ವಹನ ವ್ಯೂಹದಲ್ಲಿನ ಅಡಚಣೆಗಳಿಂದಾಗುವ ರೋಗಗಳಿಗೆ ಉಪಾಯ’ ಎಂಬ ಹೊಸ ಗ್ರಂಥದ ಪರಿಚಯವನ್ನು ಮಾಡಿಕೊಡುತ್ತಿದ್ದೇವೆ.

ಈ ಉಪಾಯಪದ್ಧತಿಯು ಕೇವಲ ಆಪತ್ಕಾಲದ ದೃಷ್ಟಿಯಿಂದ ಮಾತ್ರವಲ್ಲದೇ, ಎಂದಿಗೂ ಉಪಯುಕ್ತವಾಗಿದೆ. ವಾಚಕರು ಈಗಿನಿಂದಲೇ ಈ ಉಪಾಯ ಮಾಡಿ ನೋಡಬೇಕು. ಈ ರೀತಿ ಮಾಡುವುದರಿಂದ ಉಪಾಯಪದ್ಧತಿಯನ್ನು ಹೇಗೆ ಮಾಡಬೇಕು ಎಂಬುದರ ಅಭ್ಯಾಸವಾಗುವುದು ಮತ್ತು ಅದರಲ್ಲಿನ ಸೂಕ್ಷ್ಮ ವಿಷಯಗಳು ಸಹ ಗಮನಕ್ಕೆ ಬರುವವು. ಇದರಿಂದ ಆಪತ್ಕಾಲದಲ್ಲಿ ಬರುವ ರೋಗಗಳನ್ನು ಪ್ರತ್ಯಕ್ಷ ಎದುರಿಸಲು ಆತ್ಮವಿಶ್ವಾಸ ನಿರ್ಮಾಣವಾಗಲು ಸಹಾಯವಾಗುವುದು. ಈ ವಿಷಯದಿಂದ ವಾಚಕರಿಗೆ ಉಪಾಯಪದ್ಧತಿಯ ಪರಿಚಯವಾಗುತ್ತದೆ. ಸವಿಸ್ತಾರ ಮಾಹಿತಿಯನ್ನು ಗ್ರಂಥದಲ್ಲಿ ನೀಡಲಾಗಿದೆ. ಆ ಗ್ರಂಥವನ್ನು ವಾಚಕರು ಅವಶ್ಯವಾಗಿ ಸಂಗ್ರಹಿಸಿಡಬೇಕು.

Leave a Comment