ಮುಖದ ಮೇಲೆ ತೊಂದರೆದಾಯಕ ಶಕ್ತಿಯ ಆವರಣವು ಅರಿವಾದರೆ ಅದಕ್ಕೆ ಮಾಡಬೇಕಾದ ಆಧ್ಯಾತ್ಮಿಕ ಸ್ತರದ ಉಪಾಯಗಳು

ಕೆಟ್ಟ ಶಕ್ತಿಗಳು ಸಾಧಕರ ಪಂಚಜ್ಞಾನೇಂದ್ರಿಗಳನ್ನು ತಮ್ಮ ವಶದಲ್ಲಿ ತೆಗೆದುಕೊಳ್ಳಲು ಸಾಧಕರ ಮುಖದ ಮೇಲೆ ತೊಂದರೆದಾಯಕ (ಕಪ್ಪು) ಆವರಣವನ್ನು ನಿರ್ಮಿಸುತ್ತವೆ. ಅದರಿಂದ ಸಾಧಕರ ಮುಖವು ಕಪ್ಪಾಗಿ ಕಾಣುವುದು, ಮುಖದ ಅಂಚು ಅಸ್ಪಷ್ಟವಾಗಿ ಕಾಣುವುದು, ಕಣ್ಣುಗಳು ಉರಿಯುವುದು, ಮುಖದ ಮೇಲೆ ಗುಳ್ಳೆಗಳು ಬರುವುದು, ಮುಖದ ಮೇಲೆ ಕಪ್ಪು ಕಲೆ ಬೀಳುವುದು ಅಥವಾ ಮುಖವು ನಿಸ್ತೇಜ ಅಥವಾ ದಣಿದ ಹಾಗೆ ಕಾಣುವುದು ಇಂತಹ ತೊಂದರೆಗಳು ಅರಿವಾಗುತ್ತವೆ. ಸಾಧಕರ ಮುಖದ ಮೇಲೆ ಪಾತಾಳದ ಕೆಟ್ಟ ಶಕ್ತಿಗಳು ಸೂಕ್ಷ್ಮದಿಂದ ಆಕ್ರಮಣವನ್ನು ಮಾಡಿದುದರಿಂದ ಮುಖಮುದ್ರೆಯ ಮೇಲೆ ತೊಂದರೆದಾಯಕ ಆವರಣವು ಬಂದಿದೆ’, ಎಂಬುವುದನ್ನು ತಿಳಿಯಬೇಕು. ಇದಕ್ಕಾಗಿ ಸಾಧಕರು ಮುಂದೆ ಹೇಳಿದ ಪ್ರಕ್ರಿಯೆಯನ್ನು ಸ್ಥೂಲದಿಂದ ಮಾಡಿ ತಮ್ಮ ಮುಖದ ಮೇಲೆ ಆಧ್ಯಾತ್ಮಿಕ ಸ್ತರದ ಉಪಾಯವನ್ನು ಮಾಡಬಹುದು.

೧. ೧ ಅಥವಾ ಮುಕ್ಕಾಲು ಚಹಾ ಚಮಚದಷ್ಟು ಸನಾತನ-ನಿರ್ಮಿತ ಉಟಣೆಯನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಬೇಕು.

೨. ಅದರಲ್ಲಿ ಅರ್ಧ ಚಹಾ ಚಮಚದಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಬೇಕು.

೩. ಈ ಮಿಶ್ರಣದಲ್ಲಿ ಅರ್ಧ ಚಮಚದಷ್ಟು ಗೋಮೂತ್ರ ಹಾಕಬೇಕು.

೪. ಈ ಮಿಶ್ರಣದಲ್ಲಿ ಒಂದು ಸಣ್ಣ ಕರ್ಪೂರದ ತುಂಡನ್ನು ಬೆರಳುಗಳಿಂದ ಒತ್ತಿ ನುಣ್ಣಗೆ ಪುಡಿಯನ್ನು ಹಾಕಬೇಕು.

೫. ಈ ಎಲ್ಲ ಘಟಕಗಳನ್ನು ಬೆರಳಿನಿಂದ ಕಲುಕಿಸಿ ಅದರ ಮಿಶ್ರಣವನ್ನು ಮಾಡಬೇಕು.

೬. ಮುಖಕ್ಕೆ ನೀರು ಚಿಮುಕಿಸಿ ನಂತರ ಮೇಲಿನ ರೀತಿಯಲ್ಲಿ ಸಿದ್ಧಪಡಿಸಿದ ಉಟಣೆಯ ಮಿಶ್ರಣವನ್ನು ಸಂಪೂರ್ಣ ಮುಖಕ್ಕೆ ಹಚ್ಚಬೇಕು.

೭. ಮಿಶ್ರಣವನ್ನು ಹಚ್ಚಿದ ನಂತರ ಶ್ರೀಕೃಷ್ಣನಲ್ಲಿ ಅಥವಾ ಉಪಾಸ್ಯದೇವತೆಯಲ್ಲಿ ‘ನನ್ನ ಮುಖದ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವು ಸಂಪೂರ್ಣವಾಗಿ ನಾಶವಾಗಲಿ’, ಎಂದು ಪ್ರಾರ್ಥನೆಯನ್ನು ಮಾಡಬೇಕು.

೮. ತದನಂತರ ೩ ರಿಂದ ೫ ನಿಮಿಷಗಳ ನಂತರ ಮುಖವನ್ನು ಶುದ್ಧವಾದ ನೀರಿನಿಂದ ತೊಳೆಯಬೇಕು.

ಈ ರೀತಿಯಾಗಿ ನಮಗೆ ಒಳ್ಳೆಯದೆನಿಸುವವರೆಗೂ, ಅಂದರೆ ೨-೩ ವಾರಗಳ ಕಾಲ ಮುಖಮುದ್ರೆಯ ಮೇಲೆ ಉಟಣೆಯಿಂದ ಆಧ್ಯಾತ್ಮಿಕ ಸ್ತರದ ಉಪಾಯವನ್ನು ಮಾಡಿದರೆ ಸಂಪೂರ್ಣ ತೊಂದರೆದಾಯಕ ಆವರಣವು ನಾಶವಾಗಿ ಮನಸ್ಸಿಗೆ ಹಗುರತೆ, ಉತ್ಸಾಹ ಮತ್ತು ಆನಂದದ ಅರಿವಾಗುವುದು. ಮೇಲೆ ಹೇಳಿದಂತೆ ಮುಖಮುದ್ರೆಗಾಗಿ ಮಾಡಿದ ಉಪಾಯವನ್ನು ದೇಹದಲ್ಲಿನ ಸಪ್ತಕುಂಡಲಿನಿಚಕ್ರದ ಮೇಲಿನ ತೊಂದರೆದಾಯಕ ಆವರಣವನ್ನು ದೂರ ಮಾಡಲು ಸಹ ಮಾಡಬಹುದು.

ಕೃತಜ್ಞತೆ

ದೇವರ ಕೃಪೆಯಿಂದ ತೋಚಿದ ಈ ಉಪಾಯವನ್ನು ನಾನು ಕಳೆದ ೩-೪ ತಿಂಗಳಿನಿಂದ ಮಾಡುತ್ತಿದ್ದೇನೆ. ಅದರಿಂದ ನನಗೆ ಬಹಳಷ್ಟು ಪ್ರಮಾಣದಲ್ಲಿ ಲಾಭವಾಗಿದೆ. ಈ ಉಪಾಯವು ಸೂಚಿಸಿದ್ದಕ್ಕೆ ಶ್ರೀ ಗುರುಚರಣಗಳಲ್ಲಿ ಕೃತಜ್ಞಳಾಗಿದ್ದೇನೆ.

– ಕು. ಮಧುರಾ ಭೋಸಲೆ (ಆಧ್ಯಾತ್ಮಿಕ ಮಟ್ಟ ಶೇ. ೬೩) (ಸೂಕ್ಷ್ಮದಿಂದ ದೊರಕಿದ ಜ್ಞಾನ), ಸನಾತನ ಆಶ್ರಮ, ರಾಮನಾಥಿ, ಗೋವಾ. (೩೧. ೩.೨೦೨೨)

Leave a Comment