‘ವಿಶ್ವಕಾರ್ಯ’ದತ್ತ ಪ್ರವಾಸವನ್ನು ಸಹಜವಾಗಿ ಮಾಡುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ !

ಸಪ್ತರ್ಷಿಗಳ ಕೃಪೆಯನ್ನು ಸಂಪಾದಿಸುವ ಮತ್ತು ‘ವಿಶ್ವಕಾರ್ಯ’ ಈ ಹಂತದ ಪ್ರವಾಸವನ್ನು ಸಹಜವಾಗಿ ಮಾಡುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಇದುವರೆಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಬಹುದೊಡ್ಡ ಕಾರ್ಯವನ್ನು ಮಾಡಿದ್ದು ಈ ಮುಂದೆಯೂ ಅವರಿಂದ ತುಂಬಾ ಮಹಾನ ಅದ್ವಿತೀಯ ಮತ್ತು ದೈವೀ ಕಾರ್ಯ ಆಗಲಿದೆ ! – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳಲ್ಲಿ ಶರಣಾಗತರಾಗಿ ವಂದಿಸುತ್ತಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ (೨೦೧೯)

೧. ಕೇವಲ ೨೦-೨೧ ವರ್ಷಗಳಲ್ಲಿ ಅಧ್ಯಾತ್ಮದಲ್ಲಿ ಮಹತ್ತರವಾದ ಹಂತವನ್ನು ದಾಟುವ ಏಕಮೇವಾದ್ವಿತೀಯ ‘ಗಾಡಗೀಳ ದಂಪತಿ’ !

ಸನಾತನಕ್ಕೆ ಲಭಿಸಿದ ಒಂದು ಅಮೂಲ್ಯ ಕೊಡುಗೆಯೆಂದರೆ ಗಾಡಗೀಳ ದಂಪತಿ ! ಈ ದಂಪತಿಗಳ ಸಾಧನಾಪ್ರವಾಸವನ್ನು ನೋಡಿದರೆ, ಉನ್ನತ ಶಿಕ್ಷಣವನ್ನು ಪಡೆದಿದ್ದರೂ ಇಬ್ಬರೂ ವಿರಕ್ತ ವೃತ್ತಿಯ, ಉಚ್ಚ ಕೋಟಿಯ ಭಾವ ಮತ್ತು ದೇವರ ಮೇಲಿನ ದೃಢ ಶ್ರದ್ಧೆಯಿಂದ ಸಮರ್ಪಿಸಿಕೊಂಡು ಅಹಂಕಾರವಿರಹಿತ ಸಾಧನೆಯನ್ನು ಮಾಡುತ್ತಿದ್ದಾರೆ. ಇಬ್ಬರ ಪ್ರಕೃತಿ ಮತ್ತು ಸಾಧನಾಮಾರ್ಗಗಳು ಬೇರೆ ಬೇರೆಯಾಗಿದ್ದರೂ, ಆ ಮಾರ್ಗವು ಪರಸ್ಪರರಿಗೆ ಪೂರಕವಾಗಿದ್ದು ಇಂದು ಸಾಧನೆಯಲ್ಲಿ ಇಬ್ಬರೂ ಉಚ್ಚ ಆಧ್ಯಾತ್ಮಿಕ ಪದವಿಯಲ್ಲಿ ಆರೂಢರಾಗಿದ್ದಾರೆ. ಸೌ. ಅಂಜಲಿ ಗಾಡಗೀಳ ಇವರು ‘ಶ್ರೀಚಿತ್‌ಶಕ್ತಿ’ ಮತ್ತು ಡಾ. ಮುಕುಲ ಗಾಡಗೀಳ ಇವರು ‘ಸದ್ಗುರು’ ಪದವಿಯನ್ನು ತಲುಪಿದ್ದಾರೆ. ಕೇವಲ ೨೦-೨೧ ವರ್ಷಗಳ ಅವಧಿಯಲ್ಲಿ ಅವರು ಅಧ್ಯಾತ್ಮದಲ್ಲಿ ಮಹತ್ತರವಾದ ಹಂತವನ್ನು ದಾಟಿದ್ದಾರೆ. ಇದು ಅತ್ಯಂತ ಪ್ರಶಂಸನೀಯವಾಗಿದೆ !

೨. ಸ್ಥೂಲ ಮತ್ತು ಸೂಕ್ಷ್ಮವೆಂಬ ಎರಡೂ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ಮಾಡುವ ಹಾಗೂ ಮನುಕುಲಕ್ಕೆ ದುರ್ಲಭ ಜ್ಞಾನವನ್ನು ದೊರಕಿಸಿಕೊಡುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ವೈಶಿಷ್ಟ್ಯವೆಂದರೆ ಅವರು ಸ್ಥೂಲ ಮತ್ತು ಸೂಕ್ಷ್ಮವಾಗಿರುವ ಯಾವುದೇ ರೀತಿಯ ಕಾರ್ಯವನ್ನು ಉತ್ತಮ ರೀತಿಯಲ್ಲಿ ಮಾಡುತ್ತಾರೆ. ಅವರು ಯಾವುದೇ ವಿಷಯದಲ್ಲಿಯೂ ಕಡಿಮೆ ಇಲ್ಲ. ಇದುವರೆಗೆ ಅವರು ಎಲ್ಲ ವಿಷಯಗಳಲ್ಲಿ ಜ್ಞಾನವನ್ನು ಗ್ರಹಿಸಿದ್ದಾರೆ. ಜ್ಞಾನದ ಬಗೆಗಿನ ಅವರ ಬರವಣಿಗೆ, ಆ ಬರವಣಿಗೆಯಲ್ಲಿರುವ ಅವರ ಸಹಜ (ಸರಳ) ಭಾಷೆ ಮತ್ತು ಜ್ಞಾನದ ಮಟ್ಟವನ್ನು ನೋಡಿದರೆ, ಅವರ ಜ್ಞಾನಶಕ್ತಿಯ  ಕಲ್ಪನೆ ಬರಬಹುದು. ಸದ್ಯದ ಸ್ಥಿತಿಯಲ್ಲಿ ಪೃಥ್ವಿಯ ಮೇಲೆ ಎಲ್ಲಿಯೂ ಲಭ್ಯವಿಲ್ಲದಿರುವ ಜ್ಞಾನವನ್ನು ಅವರು ಸಂಪೂರ್ಣ ಮನುಕುಲಕ್ಕೆ ದೊರಕಿಸಿಕೊಟ್ಟಿದ್ದಾರೆ. ವಿಶೇಷವೆಂದರೆ ಅವರಿಗೆ ಇದ್ಯಾವುದರ ಬಗ್ಗೆಯೂ ಅಹಂಕಾರವಿಲ್ಲ.

೩. ನಿರಂತರ ಪ್ರವಾಸವನ್ನು ಮಾಡಿ ಸಪ್ತರ್ಷಿಗಳ ಮನಸ್ಸನ್ನು ಗೆದ್ದಿರುವ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ !

ಸಪ್ತರ್ಷಿಗಳ ಆಜ್ಞೆಯಂತೆ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ದೈವೀ ಪ್ರವಾಸವು ನಿರಂತರವಾಗಿ ನಡೆಯುತ್ತಿದ್ದು ಇದುವರೆಗೆ ಅವರು ನೂರಾರು ಸ್ಥಳಗಳಿಗೆ ಭೇಟಿ ನೀಡಿದ್ದಾರೆ. ಕೆಲವೊಮ್ಮೆ ಅವರ ಪ್ರವಾಸವು ತುಂಬಾ ಕಠಿಣವಾಗಿರುತ್ತದೆ; ಆದರೂ ಸಪ್ತರ್ಷಿಗಳ ಆಜ್ಞಾಪಾಲನೆ ಮಾಡಬೇಕು ಎಂಬ ಒಂದೇ ಹಂಬಲದಿಂದ ಅವರು ನಿರಂತರ ಪ್ರವಾಸವನ್ನು ಮಾಡಿ ಸಮಷ್ಟಿಯ ಬಹುದೊಡ್ಡ ಕಾರ್ಯ ಮಾಡುತ್ತಿದ್ದಾರೆ. ಸಪ್ತರ್ಷಿಗಳಿಗೆ ಏನು ಅಪೇಕ್ಷಿತವಾಗಿದೆ ಎಂಬುದನ್ನು ಅರ್ಥೈಸಿ ಪ್ರತಿಯೊಂದು ಕೃತಿಯನ್ನು ಭಾವಪೂರ್ಣವಾಗಿ ಮತ್ತು ಪೂರ್ಣ ಶ್ರದ್ಧೆಯಿಂದ ಮಾಡುವ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ತಮ್ಮ ಭಕ್ತಿಭಾವದಿಂದ ಸಪ್ತರ್ಷಿಗಳ ಕೃಪೆಯನ್ನು ಸಂಪಾದಿಸಿದ್ದಾರೆ.

ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರು ಆಯಾ ಸಮಯಕ್ಕೆ ತಮ್ಮ ದೈವೀ ಪ್ರವಾಸದ ಬಗ್ಗೆ ಬರೆಯುತ್ತಾರೆ. ಈ ಬರವಣಿಗೆಯ ವೈಶಿಷ್ಟ್ಯವೆಂದರೆ, ಅದರಲ್ಲಿ ಸ್ಥೂಲ, ಅಂದರೆ ಪಂಚಜ್ಞಾನೇಂದ್ರಿಯ, ಮನಸ್ಸು ಮತ್ತು ಬುದ್ಧಿಯ ಮಟ್ಟದಲ್ಲಿನ ಬರವಣಿಗೆಯೊಂದಿಗೆ ಅಗತ್ಯವಿದ್ದಲ್ಲಿ ಅವುಗಳ ಆಚೆಗಿನ ಸೂಕ್ಷ್ಮದ ಅಂದರೆ ಆಧ್ಯಾತ್ಮಿಕ ಮಟ್ಟದ ಪರೀಕ್ಷಣೆಗಳಿರುತ್ತವೆ ಹಾಗೂ ಚೈತನ್ಯವೂ ಇರುತ್ತದೆ. ಆದ್ದರಿಂದ ಈ ಲೇಖನವನ್ನು ಓದುವಾಗ ವಾಚಕರಿಗೂ ಅನುಭೂತಿಗಳು ಬರುತ್ತವೆ.

೪. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರತ್ತ ಸಮಾಜದ ಜನರೂ ಆಕರ್ಷಿತರಾಗುವುದು

ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರಲ್ಲಿರುವ ಶಕ್ತಿತತ್ತ್ವ ಮತ್ತು ಚೈತನ್ಯ ಹೆಚ್ಚಾಗುತ್ತಿದ್ದು ಅವರ ದೈವತ್ವವೂ ಈಗ ಬೆಳಕಿಗೆ ಬಂದಿದೆ. ಸಮಾಜದ ಅಪರಿಚಿತ ಜನರಿಗೂ ಅವರಲ್ಲಿರುವ ಶಕ್ತಿರೂಪದ ಅರಿವಾಗಿ ಅವರು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಕಡೆಗೆ ಆಕರ್ಷಿತರಾಗುತ್ತಾರೆ. ಈಶ್ವರನು ಸನಾತನಕ್ಕೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಂತಹ ಅಮೂಲ್ಯ ರತ್ನವನ್ನು ನೀಡಿ ಮನುಕುಲದ ಮೇಲೆ ದೊಡ್ಡ ಕೃಪೆಯನ್ನು ಮಾಡಿದ್ದಾನೆ. ಇದುವರೆಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಬಹುದೊಡ್ಡ ಕಾರ್ಯವನ್ನು ಮಾಡಿದ್ದು ಇನ್ನು ಮುಂದೆಯೂ ಅವರಿಂದ ಮಹತ್ತರವಾದ ಅದ್ವಿತೀಯ ಮತ್ತು ದೈವೀ ಕಾರ್ಯವಾಗಲಿದೆ. ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಇವರ ಇಡೀ ಕುಟುಂಬವೇ ಸಾಧನೆ ಮಾಡುತ್ತಿದ್ದು ಅವರ ಆಧ್ಯಾತ್ಮಿಕ ಉನ್ನತಿಯೂ ವೇಗವಾಗಿ ಆಗುತ್ತಿದೆ.

ಸಪ್ತರ್ಷಿಗಳ ಆಜ್ಞೆಯಂತೆ ಮತ್ತು ಭಗವಾನ ಶ್ರಿಕೃಷ್ಣನ ಕೃಪಾಶೀರ್ವಾದದಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಿಂದ ಇದೇ ರೀತಿ ಶೀಘ್ರಗತಿಯಿಂದ ವಿಶ್ವಕಾರ್ಯವಾಗಲಿ, ಎಂದು ಸಪ್ತರ್ಷಿಗಳ ಚರಣಗಳಲ್ಲಿ ಪ್ರಾರ್ಥನೆ !

– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೬.೧೨.೨೦೨೨)

Leave a Comment