ನಾಮಜಪದ ಹೆಚ್ಚೆಚ್ಚು ಲಾಭವಾಗಲೆಂದು ಭಾವಪೂರ್ಣ ಧ್ವನಿಮುದ್ರಣವನ್ನು ಮಾಡಿಸಿಕೊಳ್ಳುವ ಮತ್ತು ಅದನ್ನು ಎಲ್ಲರಿಗೂ ಒದಗಿಸುವ ಪರಾತ್ಪರ ಗುರು ಡಾ. ಆಠವಲೆ !

ಆರಂಭದಲ್ಲಿ ಬುದ್ಧಿಯಿಂದ ಜಪವನ್ನು ಮಾಡುವ ಪ್ರಯತ್ನವಾಗುವುದು

೨೧ ಮೇ ೨೦೨೧ – ಆರಂಭದಲ್ಲಿ ನಿರ್ವಿಚಾರ ನಾಮಜಪವನ್ನು ಮಾಡುವಾಗ ‘ವಿಚಾರಗಳು ಹೇಗೆ ಕಡಿಮೆಯಾಗುವವು ?’, ಎಂಬ ವಿಚಾರ ಮಾಡಿ ಬುದ್ಧಿಯಿಂದ ಜಪವನ್ನು ಮಾಡುವ ಪ್ರಯತ್ನವಾಗುವುದು : ಆರಂಭದಲ್ಲಿ ನಿರ್ವಿಚಾರ ನಾಮಜಪವನ್ನು ಹೇಗೆ ಹೇಳಬೇಕು ?, ಎಂದು ನನಗೆ ತಿಳಿಯುತ್ತಿರಲಿಲ್ಲ. ‘ನಿರ್ವಿಚಾರ’ ಇದು ನಿರ್ಗುಣ ನಾಮಜಪವಾಗಿರುವುದರಿಂದ ಅದು ಭಾವದ ಸ್ತರಕ್ಕಿಂತ ಮುಂದೆ ಇರಬಹುದು, ಅದರಲ್ಲಿ ಶಾಂತಿಯ ಸ್ಪಂದನಗಳು ಇರಬೇಕು, ಎಂದು ನನ್ನ ವಿಚಾರವಿತ್ತು. ಅದರಂತೆ ನಾನು ಆರಂಭದಲ್ಲಿ ನಿರ್ವಿಚಾರ ನಾಮಜಪವನ್ನು ಮಾಡುವಾಗ ‘ನನ್ನ ವಿಚಾರಗಳು ಹೇಗೆ ಕಡಿಮೆಯಾಗುವವು ಮತ್ತು ಅನಂತರ ಈ ನಾಮಜಪವು ಚೆನ್ನಾಗಿ ಆಗುವುದು’, ಎಂಬ ಪ್ರಯತ್ನವನ್ನು ಮಾಡುತ್ತಿದ್ದೆನು. ಆ ಸಮಯದಲ್ಲಿ ನನ್ನಿಂದ ಬುದ್ಧಿಯಿಂದ ಪ್ರಯತ್ನವಾಗುತ್ತಿತ್ತು.

ಪರಾತ್ಪರ ಗುರು ಡಾಕ್ಟರರ ಮಾರ್ಗದರ್ಶನ

೨೨ ಮೇ ೨೦೨೧ – ‘ನಿರ್ವಿಚಾರ’ ನಾಮಜಪವು ನಿರ್ಗುಣವಾಗಿರುವುದರಿಂದ ಅದನ್ನು ಒಂದೇ ಲಯದಲ್ಲಿ ಹೇಳಲು ಪರಾತ್ಪರ ಗುರು ಡಾಕ್ಟರರು ಹೇಳುವುದು : ಸಂಗೀತದ ದೃಷ್ಟಿಯಿಂದ ನಾನು ಈ ನಾಮಜಪವನ್ನು ಲಯದಲ್ಲಿ ಹೇಳಿ ನೋಡಿದೆನು. ಅದನ್ನು ಕೇಳಿ ಪರಾತ್ಪರ ಗುರು ಡಾ. ಆಠವಲೆಯವರು, “ಈ ನಾಮಜಪವು ನಿರ್ಗುಣವಾಗಿರುವುದರಿಂದ ಇದಕ್ಕೆ ಸಂಗೀತದಂತೆ ಲಯ ಬೇಡ. ಈ ನಾಮಜಪದ ಲಯದಲ್ಲಿ ಏರಿಳಿತ ಮಾಡದೇ ಅದನ್ನು ಒಂದೇ ಲಯದಲ್ಲಿ ಹೇಳಬೇಕು”, ಎಂಬ ಸಂದೇಶ ಕಳುಹಿಸಿದರು.

ನಾಮಜಪದಲ್ಲಿ ಭಾವದ ಅರಿವಾಗುವುದು

೨೫ ಮೇ ೨೦೨೧ – ಪರಾತ್ಪರ ಗುರು ಡಾಕ್ಟರರಿಗೆ ಶರಣಾಗಿ ನಾಮಜಪವನ್ನು ಮಾಡತೊಡಗಿದಾಗ ನಾಮಜಪದಲ್ಲಿ ಭಾವದ ಅರಿವಾಗುವುದು : ನಾನು ಪರಾತ್ಪರ ಗುರು ಡಾಕ್ಟರರಿಗೆ ಇನ್ನೊಮ್ಮೆ ಶರಣಾಗಿ ನಾಮಜಪವನ್ನು ಮಾಡತೊಡಗಿದೆ. ಒಂದು ದಿನ ನಾಮಜಪವನ್ನು ಕೇಳಿದ ನಂತರ ಅವರು, “ಈಗ ಇದರಲ್ಲಿ ಭಾವದ ಅರಿವಾಗತೊಡಗಿದೆ”, ಎಂದು ಹೇಳಿದರು. ಅನಂತರ ‘ಪರಾತ್ಪರ ಗುರು ಡಾಕ್ಟರರಿಗೆ ನಾಮಜಪವು ಭಾವಪೂರ್ಣವಾಗಿ ಹೇಳುವುದೇ ಅಪೇಕ್ಷಿತವಿದೆ’, ಎಂದು ಗಮನಕ್ಕೆ ಬಂತು.

೨೬ ಮೇ ೨೦೨೧ – ಪರಾತ್ಪರ ಗುರು ಡಾಕ್ಟರರ ಸರ್ವಜ್ಞತೆಯನ್ನು ಅನುಭವಿಸುವುದು

ಈ ನಾಮಜಪವು ಆದಷ್ಟು ಬೇಗನೆ ಆಗುವುದು ಅಪೇಕ್ಷಿತವಿತ್ತು, ಆದರೆ ‘ನನ್ನ ಪ್ರಯತ್ನವು ಕಡಿಮೆಯಾಗುತ್ತಿದೆ. ನನಗೆ ಸಾಧ್ಯವಿಲ್ಲ’, ಎಂಬ ವಿಚಾರವು ಮನಸ್ಸಿನಲ್ಲಿ ಬಂತು ಮತ್ತು ನಾನು ಅಳತೊಡಗಿದೆ. ಆ ದಿನ ‘ಜಪದ ಧ್ವನಿಮುದ್ರಣವು ನನ್ನಿಂದ ಸರಿಯಾಗಿ ಆಗಲಿಲ್ಲ’, ಎಂದು ನಾನು ನನ್ನ ವರದಿಯನ್ನು ಓರ್ವ ಸಾಧಕನಿಗೆ ಹೇಳಿದೆನು. ಅವನು ಅದೇ ರೀತಿ ಪರಾತ್ಪರ ಗುರು ಡಾಕ್ಟರರಿಗೆ ಹೇಳಿದಾಗ ಅವರು, ‘ತೇಜಲಳಿಗೆ ನಿರಾಶೆಯಾಗಲಿಲ್ಲವಲ್ಲ ?’, ಎಂದು ಕೇಳಿದರು ಮತ್ತು ‘ಇರಲಿ, ಸರಿ ಹೋಗುತ್ತದೆ’, ಎಂದು ಹೇಳಿ ನನಗೆ ಪ್ರೋತ್ಸಾಹವನ್ನೂ ನೀಡಿದರು. ‘ಈ ಪ್ರಸಂಗದಲ್ಲಿ ನಾನು ಅಳತೊಡಗಿದೆ’, ಇದು ಕೇವಲ ನನಗಷ್ಟೇ ಗೊತ್ತಿತು; ಆದರೆ ಅವರು ಆ ಸಾಧಕನಿಗೆ, ‘ಅವಳು ಅಳಲಿಲ್ಲವಲ್ಲ ?’, ಎಂದು ನನಗೆ ಕೇಳಲು ಹೇಳಿದರು. ಇದರಿಂದ ಅವರು ಸತತವಾಗಿ ನನ್ನೊಂದಿಗಿರುವ ಮತ್ತು ಅವರ ಸರ್ವಜ್ಞತೆಯ ಅನುಭೂತಿಯನ್ನು ಈ ಪ್ರಸಂಗದಲ್ಲಿ ನನಗೆ ನೀಡಿದರು.

ಸಾಧಕರಿಗೆ ತಿದ್ದುಪಡಿ ಮಾತ್ರ ಹೇಳದೆ, ಸಾಧಕರನ್ನು ಸಿದ್ಧಪಡಿಸುವ ಪರಾತ್ಪರ ಗುರುಗಳು

೨೭ ಮೇ ೨೦೨೧

ಅ. ಪರಾತ್ಪರ ಗುರುದೇವರು ದುರಸ್ತಿಯನ್ನು ಹೇಳಿ ಅಳಿಸುವುದಿಲ್ಲ, ಆದರೆ ಅವರು ನಮ್ಮನ್ನು ಸಿದ್ಧಪಡಿಸುತ್ತಾರೆ ! : ನಾನು ಮಾಡಿದ ನಾಮಜಪವನ್ನು ಧ್ವನಿಮುದ್ರಣ ಮಾಡಿ ಅವರಿಗೆ ಪ್ರತಿದಿನ ಕೇಳಿಸುತ್ತಿದ್ದೆವು. ಅದರಲ್ಲಿ ಮಾಡಬೇಕಾದ ಬದಲಾವಣೆಯನ್ನು ಅವರು ಹೇಳುತ್ತಿದ್ದರು. ಅವರು ಹೇಳಿದ ರೀತಿಯಲ್ಲಿ ಬದಲಾವಣೆ ಮಾಡಿ ಜಪವನ್ನು ಧ್ವನಿಮುದ್ರಣ ಮಾಡಿ ಪುನಃ ಅವರಿಗೆ ಕೇಳಿಸುತ್ತಿದ್ದೆವು. ಅವರು ಪ್ರತಿದಿನ ದುರಸ್ತಿ ಹೇಳುತ್ತಿದ್ದರು. ಆದುದರಿಂದ ಅವರು ಓರ್ವ ಸಾಧಕನಿಗೆ, “ಯಾವಾಗಲೂ ದುರಸ್ತಿಗಳನ್ನು ಹೇಳಿ ನಾನು ತೇಜಲಳನ್ನು ಅಳಿಸುತ್ತೇನಲ್ಲ ? ಎಂದು ಅವಳಿಗೆ ಕೇಳು”, ಎಂದು ಹೇಳಿದರು. ಆಗ ನನ್ನ ವತಿಯಿಂದ ಆ ಸಾಧಕನೇ ಪರಾತ್ಪರ ಗುರು ಡಾಕ್ಟರರಿಗೆ, ‘ನೀವು ಅಳಿಸುವುದಿಲ್ಲ, ಆದರೆ ದುರಸ್ತಿ ಹೇಳಿ ನಮ್ಮನ್ನು ಸಿದ್ಧಮಾಡುತ್ತೀರಿ’, ಎಂದು ಹೇಳಿದನು.

ಆ. ನಾಮಜಪವನ್ನು ಮಾಡುವಾಗ ಇಡಬೇಕಾದ ಭಾವ : ೨೭ ಮೇ ೨೦೨೧ ಈ ದಿನದಂದು ‘ನಾಮಜಪವನ್ನು ಮಾಡುವಾಗ ‘ಶರಣಾಗತಭಾವದಿಂದ ಅದರ ಶಬ್ದೋಚ್ಚಾರವನ್ನು ಮಾಡಿ ಜಪವನ್ನು ದೇವರ ಚರಣಗಳಲ್ಲಿ ಅರ್ಪಿಸುತ್ತಿದ್ದೇನೆ’, ಎಂಬ ಭಾವದಿಂದ ಜಪವನ್ನು ಮಾಡಿದರೆ ಅದರಲ್ಲಿ ಭಾವವು ಬರುತ್ತದೆ’, ಎಂಬ ರೀತಿಯಲ್ಲಿ ಭಾವವಿಟ್ಟು ಜಪವನ್ನು ಮಾಡಲು ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದರು.

ಇ. ಧ್ವನಿಮುದ್ರಣಕ್ಕಾಗಿ ‘ನಿರ್ವಿಚಾರ’ ಈ ಜಪವನ್ನು ಹೇಳುತ್ತಿರುವಾಗ ‘ನಿರ್ವಿಚಾರ ಧ್ಯಾನಾವಸ್ಥೆ’ಯನ್ನು ಅನುಭವಿಸುವುದು ಮತ್ತು ಕಾಲಕ್ಕನುಸಾರ ಈ ಜಪವು ಪರಿಣಾಮಕಾರಿಯಾಗಿರುವ ಬಗ್ಗೆ ಅನುಭೂತಿ ಬರುವುದು : ಈ ದಿನ ಧ್ವನಿಮುದ್ರಣಕ್ಕಾಗಿ ‘ನಿರ್ವಿಚಾರ’ ಈ ಜಪವನ್ನು ಮಾಡುತ್ತಿರುವಾಗ ಎಂತಹ ಸ್ಥಿತಿ ಬಂದಿತೆಂದರೆ, ನನಗೆ ಮುಂದೆ ಜಪವನ್ನು ಹೇಳಲು ಸಾಧ್ಯವಾಗದು ಮತ್ತು ಕೆಲವೊಮ್ಮೆ ಪ್ರಯತ್ನ ಮಾಡಿದರೂ ಕಣ್ಣುಗಳನ್ನು ತೆರೆಯಲು ಆಗುತ್ತಿರಲಿಲ್ಲ. ಆ ಸಮಯದಲ್ಲಿ ನಾನು ‘ನಿರ್ವಿಚಾರ ಧ್ಯಾನಾವಸ್ಥೆ’ಯನ್ನು ಅನುಭವಿಸಿದೆನು. ಈ ಅನುಭೂತಿಯಿಂದ ‘ಕಾಲಾನುಸಾರ ಇರುವ ಈ ಜಪವು ಎಷ್ಟು ಪರಿಣಾಮಕಾರಿಯಾಗಿದೆ ?’, ಎಂಬುದನ್ನು ಪರಾತ್ಪರ ಗುರು ಡಾಕ್ಟರರು ನನಗೆ ಕಲಿಸಿದರು.

‘ನಿರ್ವಿಚಾರ’ ಜಪದ ಉಚ್ಚಾರಣೆಯ ಬಗ್ಗೆ ಪರಾತ್ಪರ ಗುರುಗಳು ಮಾಡಿದ ಮಾರ್ಗದರ್ಶನ

೩೦ ಮೇ ೨೦೨೧ – ಪರಾತ್ಪರ ಗುರು ಡಾಕ್ಟರರು ‘ನಿರ್ವಿಚಾರ’ ಜಪದ ಉಚ್ಚಾರಣೆಯ ಬಗ್ಗೆ ಮಾರ್ಗದರ್ಶನ ಮಾಡಿ ಭಾವದ ಸ್ತರದಲ್ಲಿ ಪ್ರಯತ್ನಿಸಲು ಹೇಳುವುದು : ಆರಂಭದಲ್ಲಿ ಈ ನಾಮಜಪದಲ್ಲಿನ ಪ್ರತಿಯೊಂದು ಅಕ್ಷರವನ್ನು ಹೇಗೆ ಉಚ್ಚರಿಸಬೇಕು ? ಯಾವ ಧಾಟಿಯಲ್ಲಿ ಅದನ್ನು ಹೇಳಬೇಕು ? ಪ್ರತಿಯೊಂದು ಅಕ್ಷರದ ಮೇಲೆ ಎಷ್ಟು ಒತ್ತನ್ನು ನೀಡಬೇಕು ? ಇತ್ಯಾದಿ ದುರುಸ್ತಿಯನ್ನು ಹೇಳಿ ಪರಾತ್ಪರ ಗುರುಗಳು ನನ್ನಿಂದ ಪ್ರಾಥಮಿಕ ಭಾಗವನ್ನು ಗಟ್ಟಿ (ಪೂರ್ಣ) ಮಾಡಿಸಿಕೊಂಡರು. ಅನಂತರ ೩೦ ಮೇ ೨೦೨೧ ಈ ದಿನದಂದು ಅದರಲ್ಲಿ ಭಾವವನ್ನು ತರುವಂತಹ ಪ್ರಯತ್ನಗಳಿಗೆ ಒತ್ತು ನೀಡಬೇಕು, ಎಂದು ಹೇಳಿದರು. ಅವರು, “ಭಾವದಿಂದ ಕೇಳುಗರಿಗೂ ಸ್ವರದಲ್ಲಿನ ಮಾಧುರ್ಯದ ಅರಿವಾಗುತ್ತದೆ”, ಎಂದು ಹೇಳಿದರು.

ಭಾವಜಾಗೃತಿಯಾದಾಗ ‘ನಿರ್ವಿಚಾರ’ ಜಪದ ಧ್ವನಿಮುದ್ರಣವನ್ನು ಮಾಡುವುದು, ಅದರಲ್ಲಿ ಒಂದು ಅಂತಿಮವಾಗುವುದು

೧ ಜೂನ್ ೨೦೨೧

ಅ. ಭಾವಜಾಗೃತಿಗಾಗಿ ಭಜನೆಗಳನ್ನು ಕೇಳುವುದು ಮತ್ತು ಕೃತಜ್ಞತೆಯ ಭಾವಜಾಗೃತಿಯಾದಾಗ ‘ನಿರ್ವಿಚಾರ’ ಜಪದ ಧ್ವನಿಮುದ್ರಣವನ್ನು ಮಾಡುವುದು : ಪರಾತ್ಪರ ಗುರು ಡಾಕ್ಟರರು ಹೇಳಿದಂತೆ ‘ನನ್ನ ಭಾವಜಾಗೃತಿಯು ಯಾವುದರಿಂದ ಬೇಗನೆ ಆಗುತ್ತದೆ ?’, ಎಂದು ಅಭ್ಯಾಸ ಮಾಡಿದೆನು. ಆಗ ಆಕಸ್ಮಾತ್ ‘ಧನ್ಯ ಭಾಗ ಸೇವಾ ಕಾ ಅವಸರ ಪಾಯಾ’ (ಅರ್ಥ – ನನ್ನ ಅಹೋಭಾಗ್ಯ! ಈ ಸೇವೆಯು ನನಗೆ ದೊರಕಿದೆ) ಈ ಭಜನೆಯು ನನ್ನ ಮನಸ್ಸಿನಲ್ಲಿ ಮೂಡಿತು. ಅದನ್ನು ಕೇಳಿದಾಗ ಮನಸ್ಸಿನಲ್ಲಿ ಕೃತಜ್ಞತೆಯ ಭಾವವು ಜಾಗೃತವಾಗಿ ನನಗೆ ಅಳು ಬಂತು. ನಾನು ಭಜನೆಯನ್ನು ಕೇಳಿ ನಂತರ ‘ನಿರ್ವಿಚಾರ’ ಜಪದ ಧ್ವನಿಮುದ್ರಣವನ್ನು ಮಾಡುತ್ತಿದ್ದೆನು.

ಆ. ಪರಾತ್ಪರ ಗುರು ಡಾಕ್ಟರರಿಗೆ ಬಹಳ ಶರಣಾಗತಿಯಿಂದ ಪ್ರಾರ್ಥನೆಯನ್ನು ಮಾಡುವುದು, ಭಾವಜಾಗೃತಿಯಾಗುವುದು ಮತ್ತು ನಿಶ್ಚಯಿಸಿದ ಧ್ವನಿಮುದ್ರಣವನ್ನು ಮಾಡಿದ ನಾಮಜಪದಲ್ಲಿನ ಒಂದು ನಾಮಜಪವು ಅಂತಿಮವಾಗುವುದು : ಈ ದಿನ ದ್ವನಿಮುದ್ರಣದ ಮೊದಲು ಭಜನೆಯನ್ನು ಕೇಳಿದೆನು. ಅ ನಂತರ ಪರಾತ್ಪರ ಗುರು ಡಾಕ್ಟರರಲ್ಲಿ, ‘ನನಗೆ ಏನೂ ಬರುವುದಿಲ್ಲ, ಎಷ್ಟು ಉಚ್ಚ ಸ್ತರದ ಈ ನಾಮಜಪವಾಗಿದೆ ಮತ್ತು ನನ್ನಂತಹ ಪಾಮರಳಿಂದ (ಕ್ಷುದ್ರ ಜೀವದಿಂದ) ತಾವು ಇದನ್ನು ಮಾಡಿಸಿಕೊಳ್ಳುತ್ತಿರುವಿರಿ. ಇದು ನನ್ನ ಮೇಲೆ ತಾವು ಮಾಡಿದ ಕೃಪೆಯೇ ಆಗಿದೆ, ಈ ನಾಮಜಪವನ್ನು ಹೇಗೆ ಹೇಳಬೇಕು ? ಎಂಬುದನ್ನು ನೀವೇ ಹೇಳಿಸಿಕೊಳ್ಳಿ’, ಎಂದು ಬಹಳ ಶರಣಾಗತಿಯಿಂದ ಪ್ರಾರ್ಥನೆಯನ್ನು ಮಾಡುತ್ತಿದ್ದೆನು. ಆ ಸಮಯದಲ್ಲಿ, ‘ನಿಜವಾಗಿಯೂ ನನ್ನ ಮೇಲೆ ಶ್ರೀವಿಷ್ಣು ಅವತಾರಿ ಗುರುದೇವರ ಕೃಪೆ ಎಷ್ಟಿದೆ !’ ಎಂದು ಅನಿಸಿತು. ಈ ವಿಚಾರಗಳಿಂದ ನನ್ನ ಬಹಳ ಭಾವಜಾಗೃತಿಯಾಯಿತು. ಭಾವಜಾಗೃತಿಯಾದ ನಂತರ ನಾನು ಧ್ವನಿಮುದ್ರಣವನ್ನು ಆರಂಭಿಸಿದೆನು. ‘ಇಂದು ಎಷ್ಟೇ ತಡವಾದರೂ ‘ನಿರ್ವಿಚಾರ ಈ ನಾಮಜಪದ ಧ್ವನಿಮುದ್ರಣವನ್ನು ಮಾಡಲೇಬೇಕು’, ಎಂದು ಒಳಗಿನಿಂದ ಅನಿಸುತ್ತಿತ್ತು. ಈ ಸಮಯದಲ್ಲಿ ಧ್ವನಿಮುದ್ರಣ ಮಾಡಿದ ನಾಮಜಪಗಳಲ್ಲಿನ ಒಂದು ನಾಮಜಪವನ್ನು ಪರಾತ್ಪರ ಗುರು ಡಾಕ್ಟರರು ಅಂತಿಮ ಮಾಡಿದರು.

ನಾಮಜಪದ ಉಚ್ಚಾರ ಭಾಷಾಶಾಸ್ತ್ರಕ್ಕನುಸಾರ ಇಲ್ಲದಿರುವ ಕಾರಣ

೧೮ ಜೂನ್ ೨೦೨೧ – ಈ ನಾಮಜಪದಲ್ಲಿ ಭಾಷಾಶಾಸ್ತ್ರಕ್ಕನುಸಾರ ಶಬ್ದೋಚ್ಚಾರವನ್ನು ಮಾಡಿದರೆ ನಿರ್ಗುಣ ಸ್ಥಿತಿಯನ್ನು ಅನುಭವಿಸಲು ಸಾಧ್ಯವಾಗದಿರುವುದರಿಂದ ‘ನಿರ್ವಿಚಾರ’ದಲ್ಲಿನ ‘ನಿ’ಯನ್ನು ಸ್ವಲ್ಪ ದೀರ್ಘವಾಗಿ ಹೇಳಲಾಗಿರುವುದು : ‘ಸಂಸ್ಕೃತ ಶಾಸ್ತ್ರಕ್ಕನುಸಾರ ಶಬ್ದೋಚ್ಚಾರವನ್ನು ಮಾಡುವಾಗ ‘ನಿರ್ವಿಚಾರ’ದಲ್ಲಿನ ‘ನಿ’ಯ ಹ್ರಸ್ವ ಉಚ್ಚಾರವಾಗಬೇಕು. ಅದರಂತೆ ಹೇಳಿದಾಗ ಈ ಜಪವನ್ನು ಸ್ವಲ್ಪ ವೇಗವಾಗಿ ಹೇಳಲಾಗುತ್ತದೆ. ಈ ವೇಗದಿಂದಾಗಿ ನಿರ್ಗುಣ ಸ್ತರವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಆದುದರಿಂದ ನಿರ್ಗುಣ ಸ್ಥಿತಿಗೆ ಹೋಗಲು ‘ನಿ’ಯ ಸ್ವಲ್ಪ ದೀರ್ಘ ಉಚ್ಚಾರ ಮಾಡುವುದು ಈ ಜಪಕ್ಕಾಗಿ ಯೋಗ್ಯವಾಗಿದೆ, ಎಂದು ಸ್ಪಂದನಗಳ ಅಧ್ಯಯನ ಮಾಡಿ ಪರಾತ್ಪರ ಗುರು ಡಾ. ಡಾಕ್ಟರರು ಹೇಳಿದರು.

ಈ ರೀತಿ ಪರಾತ್ಪರ ಗುರು ಡಾ. ಆಠವಲೆಯವರು ದಿನಾಂಕ ೨೧ ಮೇ ೨೦೨೧ ರಿಂದ ೧೮ ಜೂನ್ ೨೦೨೧ ಹೀಗೆ ಸುಮಾರು ೪ ವಾರಗಳಲ್ಲಿ ‘ನಿರ್ವಿಚಾರ’, ‘ಓಂ ನಿರ್ವಿಚಾರ’ ಮತ್ತು ‘ಶ್ರೀ ನಿರ್ವಿಚಾರಾಯ ನಮಃ’ ಈ ಮೂರೂ ನಾಮಜಪಗಳನ್ನು ಪೂರ್ಣ(ಅಂತಿಮ) ಮಾಡಿಸಿಕೊಂಡರು.

‘ನಿರ್ವಿಚಾರ’ ಮತ್ತು ‘ಶ್ರೀ ನಿರ್ವಿಚಾರಾಯ ನಮಃ | ಈ ಎರಡೂ ನಾಮಜಪಗಳ ತುಲನೆ

‘ನಿರ್ವಿಚಾರ’ ಮತ್ತು ‘ಶ್ರೀ ನಿರ್ವಿಚಾರಾಯ ನಮಃ |’ ಈ ಎರಡೂ ನಾಮಜಪಗಳನ್ನು ನಾನು ತುಲನಾತ್ಮಕವಾಗಿ ಅಭ್ಯಾಸ ಮಾಡಿದಾಗ ‘ನಿರ್ವಿಚಾರ’ ಜಪವನ್ನು ಹೇಳಿದಾಗ ಮನಸ್ಸು ಬೇಗನೆ ನಿರ್ವಿಚಾರವಾಗಿ ಧ್ಯಾನಾವಸ್ಥೆಗೆ ಹೋಗುತ್ತದೆ, ಎಂದು ಅನುಭವಿಸಿದೆನು. ‘ಶ್ರೀ ನಿರ್ವಿಚಾರಾಯ ನಮಃ |’ ಎಂದು ಹೇಳುವಾಗ ಆರಂಭದಲ್ಲಿ ಸ್ವಲ್ಪ ಸಗುಣದಲ್ಲಿ ಬಂದಂತೆ ಅನಿಸುತ್ತದೆ. ಅನಂತರ ನಿರ್ವಿಚಾರ ಅವಸ್ಥೆಯ ಕಡೆಗೆ ಹೋಗುತ್ತದೆ, ಎಂದು ಅನುಭವಿಸಿದೆನು.

ಹೇ ಗುರುದೇವಾ, ನಿಮ್ಮ ಕೃಪೆಯಿಂದ ಇದೆಲ್ಲವೂ ನಮಗೆ ಕಲಿಯಲು ಮತ್ತು ಅನುಭವಿಸಲು ಸಾಧ್ಯವಾಗುತ್ತಿದೆ. ನಿಮ್ಮ ಕೃಪೆಯಿಂದಲೇ ಈ ಸೇವೆಯ ಅವಕಾಶವು ದೊರಕಿದೆ. ಇದಕ್ಕಾಗಿ ಎಷ್ಟೇ ಕೃತಜ್ಞತೆಯನ್ನು ವ್ಯಕ್ತಪಡಿಸಿದರೂ, ಅದು ಕಡಿಮೆಯೇ ಆಗಿದೆ.

– ಕು. ತೇಜಲ ಪಾತ್ರೀಕರ, ಗೋವಾ. (೪.೬.೨೦೨೧)

ಕೇವಲ ‘ನಾಮಸ್ಮರಣೆ ಮಾಡಿರಿ ಎಂದು ಹೇಳದೇ ‘ಭಾವಪೂರ್ಣವಾಗಿ ನಾಮಜಪವನ್ನು ಮಾಡಿದರೆ ಹೆಚ್ಚು ಲಾಭವಾಗುತ್ತದೆ, ಎಂದು ಕಲಿಸಿ ಅದರ ಧ್ವನಿಮುದ್ರಣವನ್ನೂ ಲಭ್ಯ ಮಾಡಿಕೊಡುವ ಪರಾತ್ಪರ ಗುರು ಡಾ. ಆಠವಲೆ !

ಪರಾತ್ಪರ ಗುರು ಡಾ. ಆಠವಲೆ
ಪರಾತ್ಪರ ಗುರು ಡಾ. ಆಠವಲೆ

‘ಅನೇಕ ಸಂಪ್ರದಾಯಗಳಲ್ಲಿನ ಗುರುಗಳು ಅಥವಾ ಸಂತರು ಸಮಾಜಕ್ಕೆ ‘ನಾಮಸ್ಮರಣೆಯನ್ನು ಮಾಡಿ’ ಎಂದು ಹೇಳುತ್ತಾರೆ; ಆದರೆ ‘ನಾಮಸ್ಮರಣೆಯನ್ನು ಹೇಗೆ ಮಾಡಿದರೆ ಆ ನಾಮಸ್ಮರಣೆಯಿಂದ ಹೆಚ್ಚೆಚ್ಚು ಲಾಭವಾಗುವುದು’, ಎಂದು ಯಾರೂ ಹೇಳುವುದು ಕಂಡು ಬರುವುದಿಲ್ಲ. ತದ್ವಿರುದ್ಧ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಕಾಲಾನುಸಾರ ನಾಮಸ್ಮರಣೆಯನ್ನು ಮಾಡಲು ಹೇಳುತ್ತಾರೆ ಮತ್ತು ‘ಆ ನಾಮಜಪವನ್ನು ಭಾವಪೂರ್ಣವಾಗಿ ಹೇಗೆ ಮಾಡಬಹುದು ?’, ಎಂದು ಕಲಿಸಿ ಸಾಧಕರಿಗೆ ಅಂತಹ ನಾಮಜಪವನ್ನು ವಿವಿಧ ಮಾಧ್ಯಮಗಳಿಂದ ಲಭ್ಯ ಮಾಡಿಯೂ ಕೊಡುತ್ತಾರೆ. ಆದುದರಿಂದ ಆ ಜಪದಿಂದ ಸಾಧಕರ ಭಾವಜಾಗೃತಿಯಾಗಿ ಅವರಿಗೆ ಆ ಜಪದಿಂದ ಹೆಚ್ಚು ಲಾಭ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. – ಕು. ತೇಜಲ ಪಾತ್ರೀಕರ

Leave a Comment