ಕೊರೊನಾ ಸೋಂಕು ತಗುಲಿದ ಸಂದರ್ಭದಲ್ಲಿ ಉಪಯುಕ್ತವಾಗಿರುವ ಆಯುರ್ವೇದಿಕ ಔಷಧಿಗಳು

Article also available in :

ಪೂ. ವೈದ್ಯ ವಿನಯ ನೀಲಕಂಠ ಭಾವೆ

ಕೊರೊನಾದ ಮೊದಲ ಅಲೆಗಿಂತ ಎರಡನೇ ಅಲೆ ಅತ್ಯಂತ ಗಂಭೀರ ಸ್ವರೂಪದ್ದಾಗಿತ್ತು. ಈಗ ಮೂರನೆಯ ಅಲೆ ಬರಬಹುದು ಎಂದು ಪ್ರಸಾರ ಮಾಧ್ಯಮಗಳಿಂದ ತಿಳಿದು ಬರುತ್ತಿದೆ. ಕೊರೊನಾದ ಸೋಂಕಿನ ಸಂದರ್ಭದಲ್ಲಿ ಸರಕಾರವು ಅಧಿಕೃತಗೊಳಿಸಿರುವ ವೈದ್ಯಕೀಯ ಚಿಕಿತ್ಸಾ ಪದ್ಧತಿಯೊಂದಿಗೆ ಆಯುರ್ವೇದದ ಉಪಚಾರವನ್ನು ಪಡೆದುಕೊಳ್ಳುವುದು ಪರಿಣಾಮಕಾರಿಯಾಗಿರುತ್ತದೆಯೆಂದು ಅನೇಕ ಜನರು ಅನುಭವಿಸಿದ್ದಾರೆ. ಪ್ರಸ್ತುತ ಲೇಖನದಲ್ಲಿ ಕೊರೊನಾ ಸಂದರ್ಭದಲ್ಲಿ ಉಪಯುಕ್ತವಾಗಿರುವ ಆಯುರ್ವೇದದ ಔಷಧಗಳ ಮಾಹಿತಿಯನ್ನು ಪ್ರಾಮುಖ್ಯತೆಗೆ ಅನುಗುಣವಾಗಿ ವಿವರಿಸಲಾಗಿದೆ.

ಇಲ್ಲಿ ನೀಡಿರುವ ಔಷಧಗಳೊಂದಿಗೆ ಸರಕಾರ ಅಧಿಕೃತಗೊಳಿಸಿರುವ ವೈದ್ಯಕೀಯ ಚಿಕಿತ್ಸೆ ಮತ್ತು ಔಷಧಿಗಳನ್ನು ತಪ್ಪದೇ ತೆಗೆದುಕೊಳ್ಳಬೇಕು. ಇನ್ನಿತರ ಎಲ್ಲ ನಿಯಮಗಳನ್ನು ಪಾಲಿಸಬೇಕು, ಅಲ್ಲದೇ ಸ್ಥಳ, ಕಾಲ ಮತ್ತು ಪ್ರಕೃತಿಗೆ ಅನುಗುಣವಾಗಿ ಚಿಕಿತ್ಸೆಯಲ್ಲಿ ಬದಲಾವಣೆಯಾಗಬಹುದು. ಆದುದರಿಂದ ಸೂಕ್ತ ವೈದ್ಯರ ಸಲಹೆಯನ್ನು ಪಡೆದುಕೊಳ್ಳಬೇಕು.

 

ಪೂ. ವೈದ್ಯ ವಿನಯ ನೀಲಕಂಠ ಭಾವೆಯವರ ಪರಿಚಯ

ಪೂ. ವೈದ್ಯ ವಿನಯ ನೀಲಕಂಠ ಭಾವೆಯವರು ‘ವರಸಯಿಕರ ವೈದ್ಯ ಭಾವೆ’ ಎಂದು ಮಹಾರಾಷ್ಟ್ರ ಮತ್ತು ಗೋವಾದ ವೈದ್ಯರಲ್ಲಿ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ಮಾಲೀಕತ್ವದ ‘ಶ್ರೀ ಅನಂತಾನಂದ ಔಷಧಾಲಯ’ ಎಂಬ ಆಯುರ್ವೇದದ ಔಷಧ ತಯಾರಿಕೆಯ ಕಂಪನಿಯ ಮಾಧ್ಯಮದಿಂದ ಅತ್ಯುತ್ತಮ ಔಷಧಿಗಳನ್ನು ತಯಾರಿಸಿ ಅನೇಕ ವರ್ಷಗಳವರೆಗೆ ಆಯುರ್ವೇದದ ಸೇವೆಯನ್ನು ಮಾಡಿದ್ದಾರೆ. ಪೂ. ವೈದ್ಯ ವಿನಯ ಭಾವೆಯವರು ಸನಾತನದ ಸಂತರಾಗಿದ್ದಾರೆ.

ಲೇಖನದ ಉದ್ದೇಶ

೧. ಈ ಎಲ್ಲ ಲೇಖನವನ್ನು ಲೋಕಕಲ್ಯಾಣದ ಉದ್ದೇಶದಿಂದ ನೀಡಲಾಗಿದೆ. ಕೊರೊನಾ ಮಹಾಮಾರಿಯ ಕಾಲದಲ್ಲಿ ಡಾಕ್ಟರ, ವೈದ್ಯರು ಮುಂತಾದವರು ಸಿಗದೇ ಇರುವಾಗ ಜನರ ಪ್ರಾಣ ರಕ್ಷಣೆಯಾಗಬೇಕು ಎನ್ನುವುದೇ ಇದರ ಹಿಂದಿನ ಉದ್ದೇಶವಾಗಿದೆ. ಜನರಿಗೆ ಡಾಕ್ಟರ ಅಥವಾ ವೈದ್ಯರ ಬಳಿಗೆ ಹೋಗದೇ ತಮ್ಮ ಮನಸ್ಸಿನಂತೆ ಔಷಧಿಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸುವುದು ಈ ಲೇಖನದ ಉದ್ದೇಶವಲ್ಲ.

೨. ಇಲ್ಲಿ ಔಷಧಿಗಳ ಬೆಲೆಗಳನ್ನು ನೀಡಿರುವ ಕಾರಣವೇನೆಂದರೆ, ಓದುಗರಿಗೆ ತಮ್ಮ ಆರ್ಥಿಕ ನಿಯೋಜನೆ ಮಾಡಿಕೊಳ್ಳಲು ಸುಲಭವಾಗಬೇಕೆನ್ನುವ ಒಂದೇ ಉದ್ದೇಶವಿದೆ. ಇದರ ಹಿಂದೆ ಯಾವುದೇ ಕಂಪನಿಯ ಜಾಹೀರಾತು ಮಾಡುವ ಅಥವಾ ಯಾವುದೇ ದೃಷ್ಟಿಯಿಂದ ಆರ್ಥಿಕ ಲಾಭ ಪಡೆಯುವ ಉದ್ದೇಶವಿಲ್ಲ. – (ಪೂ.) ವೈದ್ಯ ವಿನಯ ನೀಲಕಂಠ ಭಾವೆ, ಮೊರ್ಡೆ, ಸಂಗಮೇಶ್ವರ ತಾಲೂಕು, ರತ್ನಾಗಿರಿ (೪.೫.೨೦೨೧)

೧. ಕೊರೊನಾ ಸೋಂಕಿನಲ್ಲಿ ಉಪಯುಕ್ತವಾಗಿರುವ ಪ್ರಮುಖ ಔಷಧಿಗಳು

ಸೂಚನೆ : ಸ್ಪಷ್ಟವಾಗಿ ಕಾಣಿಸಲು ಕೋಷ್ಟಕದ ಮೇಲೆ ಕ್ಲಿಕ್ ಮಾಡಿ.

೨. ಸಹಾಯಕ ಔಷಧಿಗಳು

ಟಿಪ್ಪಣಿ : ಕೊರೊನಾದಲ್ಲಿ ತನ್ನಿಂತಾನೇ ವಾಂತಿ ಅಥವಾ ಭೇದಿಯಾದರೆ ಜ್ವರ ಕಡಿಮೆಯಾಗುತ್ತದೆ ಎಂದು ಬಹಳಷ್ಟು ವೈದ್ಯರ ನಿರೀಕ್ಷಣೆಯಾಗಿದೆ. ಜ್ವರಕ್ಕೆ ಕಾರಣವಾಗಿರುವ ವಾತ, ಪಿತ್ತ ಮತ್ತು ಕಫ ಈ ದೋಷಗಳು ವಾಂತಿ ಅಥವಾ ಭೇದಿಯ ಮೂಲಕ ಶರೀರದಿಂದ ಹೊರಗೆ ಹೋದರೆ ಜ್ವರ ಕಡಿಮೆಯಾಗುತ್ತದೆ. ಆದುದರಿಂದ ಕೊರೊನಾದಲ್ಲಿ ಜ್ವರ ಇಳಿಯದೇ ಇದ್ದರೆ, ರೋಗಿಗೆ ಶಕ್ತಿಯಿದ್ದರೆ ಮತ್ತು ಸಾಧ್ಯವಿದ್ದರೆ, ಕೇವಲ ೨-೩ ಸಲ ತೆಳ್ಳಗೆ ಭೇದಿಯಾಗುತ್ತದೆ. ಇಷ್ಟೇ ಪ್ರಮಾಣದಲ್ಲಿ ಹರಳೆಣ್ಣೆ ಅಥವಾ ಗಂಧರ್ವ ಹರೀತಕಿಯಂತಹ ಔಷಧಿಗಳನ್ನು ಕೊಡಬೇಕು ಎಂದು ಕೆಲವು ವೈದ್ಯರು ಹೇಳುತ್ತಾರೆ. ೧-೨ ಚಮಚೆ ಹರಳೆಣ್ಣೆ ಒಂದು ಬಟ್ಟಲು ಬಿಸಿ ನೀರಿನೊಂದಿಗೆ ಅಥವಾ ೨-೩ ಗಂಧರ್ವ ಹರೀತಕಿ ವಟಿ (ಮಾತ್ರೆ) / ೧ ಚಮಚ ಗಂಧರ್ವ ಹರೀತಕಿ ಚೂರ್ಣವನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿರುವ ಕಲ್ಮಶ ದೂರವಾಗುತ್ತದೆ. ತದನಂತರ ಜಯಮಂಗಲ ರಸ ಈ ಔಷಧಿ ಯನ್ನು ತೆಗೆದುಕೊಂಡರೆ ಒಳ್ಳೆಯ ಪರಿಣಾಮ ಕಂಡು ಬರುತ್ತದೆ.

೩. ಮಾರುಕಟ್ಟೆಯಲ್ಲಿ ದೊರೆಯುವ ಔಷಧಿಗಳ ಸದ್ಯದ ಸಾಮಾನ್ಯ ಬೆಲೆ

ಮೇಲಿನ ಔಷಧಿಗಳ ಮಾರುಕಟ್ಟೆಯ ಸದ್ಯದ ದರವನ್ನು ನೀಡಲಾಗಿದೆ. ಈ ದರಗಳನ್ನು ಕೇವಲ ಬೆಲೆಯ ಅಂದಾಜು ತಿಳಿಯಬೇಕು (ಖರ್ಚಿನ ಅಂದಾಜು ತಿಳಿಯಬೇಕೆಂದು) ಎಂದು ನೀಡಲಾಗಿದೆ. ಕಂಪನಿಗಳಿಗೆ ಅನುಗುಣವಾಗಿ ಬೆಲೆಯಲ್ಲಿ ವ್ಯತ್ಯಾಸಗಳಿರುತ್ತವೆ.

೩ ಅ. ಪ್ರಮುಖ ಔಷಧಿಗಳು (ಅ)

೩ ಆ. ಸಹಾಯಕ ಔಷಧಿಗಳು (ಆ)

೪. ಔಷಧಿಗಳನ್ನು ಉಪಯೋಗಿಸುವ ವಿಷಯದಲ್ಲಿ ಅಧಿಕ ಮಾಹಿತಿ

ಅ. ಮೇಲಿನ ಎಲ್ಲ ಔಷಧಿಗಳು ೬ ರಿಂದ ೭ ವರ್ಷದ ಮಕ್ಕಳಿಗೆ ಕಾಲುಭಾಗದ ಪ್ರಮಾಣದಲ್ಲಿ, ೮ ರಿಂದ ೧೪ ವರ್ಷಗಳ ವಯಸ್ಸಿನ ಮಕ್ಕಳಿಗೆ ಅರ್ಧ ಭಾಗದ ಪ್ರಮಾಣದಲ್ಲಿ ನೀಡಬೇಕು.

ಆ. ಜೇನುತುಪ್ಪದಲ್ಲಿ ತೆಗೆದುಕೊಳ್ಳ್ಳುವ ಮಾತ್ರೆಗಳನ್ನು ಬೆರಳುಗಳ ಸಹಾಯದಿಂದ ಹುಡಿ ಮಾಡಿ, ಆ ಚೂರ್ಣವನ್ನು ಜೇನುತುಪ್ಪ ದಲ್ಲಿ ಸರಿಯಾಗಿ ಕಲಸಬೇಕು. ಸಾಧ್ಯವಿದ್ದಲ್ಲಿ ಎಲ್ಲ ಔಷಧಿಗಳನ್ನು ಆದಷ್ಟು ಜಗಿದು ತಿನ್ನಬೇಕು. ಇದರಿಂದ ಔಷಧಿಗಳ ಪರಿಣಾಮ ಹೆಚ್ಚಾಗುತ್ತದೆ.

ಇ. ಮಧುಮೇಹವಿರುವ ವ್ಯಕ್ತಿಗಳು ಔಷಧಿಗಳನ್ನು ಜೇನುತುಪ್ಪದೊಂದಿಗೆ ಸೇವಿಸದೇ ನೀರಿನೊಂದಿಗೆ ತೆಗೆದುಕೊಳ್ಳಬೇಕು ಅಥವಾ ಹಾಗೆಯೇ ಜಗಿದು ತಿನ್ನಬೇಕು.

ಈ. ಇಲ್ಲಿ ನೀಡಿರುವ ಔಷಧಿಗಳನ್ನು ಅಲೋಪಥಿ ಅಥವಾ ಹೋಮಿಯೋಪಥಿ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವಾಗ ಸೇವಿಸಲು ಯಾವುದೇ ತೊಂದರೆಯಿಲ್ಲ. ಕೇವಲ ಇತರ ಪಥಿಯ ಔಷಧಿಗಳು ಮತ್ತು ಆಯುರ್ವೇದದ ಔಷಧಿಗಳ ಸೇವನೆಯ ನಡುವೆ ಕನಿಷ್ಠಪಕ್ಷ ೧೫ ನಿಮಿಷಗಳ ಅಂತರವಿರಬೇಕು. ಔಷಧಿಗಳನ್ನು ಸಾಧ್ಯವಾದಷ್ಟು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಬೇಕು. ಆದರೆ ಹಾಗೆ ಸಾಧ್ಯವಿಲ್ಲದಿದ್ದರೆ ಆಹಾರ ಸೇವಿಸಿ ತೆಗೆದುಕೊಳ್ಳಬಹುದು.

ಉ. ಯಾವುದಾದರೂ ವೈದ್ಯರಿಂದ ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಆಯುರ್ವೇದದ ಉಪಚಾರ ನಡೆಯುತ್ತಿದ್ದರೆ, ಅಥವಾ ನಾವು ನಿಯಮಿತವಾಗಿ ಯಾವುದಾದರೂ ವೈದ್ಯರ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಇಲ್ಲಿ ನೀಡಿರುವ ಔಷಧಿಗಳನ್ನು ತೆಗೆದುಕೊಳ್ಳುವ ಮೊದಲು ಅವರಲ್ಲಿ ಕೇಳಬೇಕು.

ಊ. ಔಷಧಿಗಳನ್ನು ಬಹಳ ಕಾಲಾವಧಿಗಾಗಿ ತೆಗೆದುಕೊಳ್ಳುವುದಿದ್ದರೆ, ಹಾಗೆಯೇ ಈ ಲೇಖನದ ಸಂದರ್ಭದಲ್ಲಿ ಏನಾದರೂ ಸಂಶಯವಿದ್ದರೆ, ಆಯುರ್ವೇದ ಉಪಚಾರ ಮಾಡುವ ಸ್ಥಳೀಯ ವೈದ್ಯರ ಮಾರ್ಗದರ್ಶನವನ್ನು ಅವಶ್ಯ ಪಡೆದುಕೊಳ್ಳಬೇಕು.

೫. ಔಷಧಿಗಳ ವಿಷಯದಲ್ಲಿ ಇನ್ನಿತರ ಮಾಹಿತಿ

ಅ. ಇಲ್ಲಿ ನೀಡಿರುವ ಚೂರ್ಣ ಔಷಧಿಗಳ ಬಾಳಿಕೆಯ ಮುಕ್ತಾಯ ಅವಧಿ ಉತ್ಪಾದನೆಯ ದಿನಾಂಕದಿಂದ ೨ ವರ್ಷಗಳ ವರೆಗೆ ಇರುತ್ತದೆ. ಇನ್ನಿತರೆ ಎಲ್ಲ ಮಾತ್ರೆಗಳು ೫ ವರ್ಷಕ್ಕಿಂತ ಅಧಿಕ ಕಾಲ ಬಾಳಿಕೆ ಬರುತ್ತವೆ. ಔಷಧಿಗಳು ದೀರ್ಘ ಬಾಳಿಕೆಗಾಗಿ ಡಬ್ಬಿಯ ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಿಡಬೇಕು. ಮತ್ತು ಡಬ್ಬಿಯನ್ನು ಒಣ ಸ್ಥಳದಲ್ಲಿಡಬೇಕು.

ಆ. ಈ ಔಷಧಿಗಳನ್ನು ಕೇವಲ ಕೊರೊನಾ ಸೋಂಕಿನ ಲಕ್ಷಣಗಳಲ್ಲಿ ಅಷ್ಟೇ ಅಲ್ಲ, ಇತರ ಸಮಯದಲ್ಲಿಯೂ ಇಂತಹ ಲಕ್ಷಣಗಳಿದ್ದರೆ ಉಪಯೋಗಿಸಬಹುದು.

ಇ. ಇಲ್ಲಿ ನೀಡಿರುವ ಔಷಧಿಗಳು ಅತ್ಯಂತ ಸುರಕ್ಷಿತವಾಗಿದ್ದು, ಯಾವುದೇ ದುಷ್ಪರಿಣಾಮಗಳಿಲ್ಲ. ಇತ್ತೀಚೆಗೆ ಕೆಲವು ಜನರು ‘ಧಾತುಗಳ ಭಸ್ಮಗಳಿರುವ ಆಯುರ್ವೇದಗಳ ಔಷಧಗಳಿಂದ ಮೂತ್ರಪಿಂಡ ಅಥವಾ ಯಕೃತ್ತು ಹಾಳಾಗುತ್ತದೆ’ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದರಿಂದ ಬಹಳಷ್ಟು ಆಧುನಿಕ ವೈದ್ಯರು ತಮ್ಮ ರೋಗಿಗಳಿಗೆ ಆಯುರ್ವೇದದ ಔಷಧಿಗಳನ್ನು ತೆಗೆದುಕೊಳ್ಳಬಾರದೆಂದು ಹೇಳುತ್ತಾರೆ. ‘ಶಾಸ್ತ್ರೀಯ ಪದ್ಧತಿಯಿಂದ ತಯಾರಿಸಿರುವ ಯಾವುದೇ ಧಾತುಗಳ ಭಸ್ಮಗಳಿಂದ ಮೂತ್ರಪಿಂಡ ಅಥವಾ ಯಕೃತ್ತು ಹಾಳಾಗುತ್ತದೆಯೆಂದು ಹೇಳುವುದು’ ಅಪಪ್ರಚಾರವಾಗಿದೆ. ಇದಕ್ಕೆ ಶಾಸ್ತ್ರೀಯ ಆಧಾರವಿಲ್ಲ.

ಈ. ಇಲ್ಲಿ ನೀಡಿರುವ ಎಲ್ಲ ಔಷಧಿಗಳು ಮಾರುಕಟ್ಟೆಯಲ್ಲಿ ಬೈದ್ಯನಾಥ ಕಂಪನಿಯಿಂದ ದೊರೆಯುತ್ತವೆ. ಇತರ ಕಂಪನಿಗಳ ಔಷಧಿಗಳನ್ನು ಸಹ ತೆಗೆದುಕೊಳ್ಳಬಹುದು.

೬. ಮಾರುಕಟ್ಟೆಯಿಂದ ಔಷಧಿಗಳನ್ನು ಖರೀದಿಸಲು ಮಾರ್ಗದರ್ಶಕ ಅಂಶಗಳು

ಅ. ಯಾರು ಆರ್ಥಿಕ ದೃಷ್ಟಿಯಿಂದ ಸುದೃಢವಾಗಿದ್ದಾರೆಯೋ, ಅವರು ಅವರ ಆವಶ್ಯಕತೆಯನುಸಾರ ಔಷಧಿಗಳನ್ನು ತೆಗೆದುಕೊಂಡು ಇಟ್ಟುಕೊಳ್ಳಬಹುದು.

ಆ. ಯಾರಿಗೆ ಆರ್ಥಿಕ ದೃಷ್ಟಿಯಿಂದ ತೊಂದರೆಯಿದೆಯೋ, ಅವರು ಔಷಧಿಗಳನ್ನು ತೆಗೆದುಕೊಳ್ಳುವಾಗ ಮುಂದಿನ ಅಂಶಗಳ ವಿಚಾರ ಮಾಡಿ, ತಾವು ಎಷ್ಟು ಔಷಧಿಗಳನ್ನು ಖರೀದಿಸಬೇಕು ಎಂದು ತಾರತಮ್ಯದಿಂದ ನಿರ್ಧರಿಸಬೇಕು.

೧. ಮೇಲಿನ ಔಷಧಿಗಳ ಬಗ್ಗೆ ನೀಡಿರುವ ಪ್ರಮಾಣವು ಒಬ್ಬ ವ್ಯಕ್ತಿಗಾಗಿ ಬೇಕಾಗುವ ಸಾಧಾರಣ ಪ್ರಮಾಣವಾಗಿದೆ.

೨. ಇಲ್ಲಿ ನೀಡಿರುವ ‘ಪ್ರಮುಖವಾದ ಔಷಧಿಗಳನ್ನು ಖರೀದಿಸಲು ಪ್ರಾಧಾನ್ಯತೆಯನ್ನು ನೀಡಬಹುದು.

೩. ಇಲ್ಲಿ ನೀಡಿರುವ ಪ್ರಮುಖ ೬ ಔಷಧಿಗಳನ್ನು ಕೂಡ ಪ್ರಾಧಾನ್ಯತೆಯ ಕ್ರಮದಲ್ಲಿ ನೀಡಲಾಗಿದೆ. ಅಂದರೆ ಮೊದಲ ಕ್ರಮಾಂಕದಲ್ಲಿ ನೀಡಿರುವ ಔಷಧಿಗೆ ಅತ್ಯಧಿಕ ಪ್ರಾಧಾನ್ಯತೆ ಮತ್ತು ಜೀವನ ರಕ್ಷಕ (ಲೈಫ್ ಸೇವಿಂಗ್) ಎಂದು ಉಪಯೋಗಿಸಬಹುದಾಗಿದೆ.

೪. ಆವಶ್ಯಕತೆಯ ಸಂದರ್ಭದಲ್ಲಿ ಗಡಿಬಿಡಿಯಾಗಬಾರದು ಎಂದು ಸಾಧ್ಯವಿದ್ದರೆ ಒಂದು ಮನೆಯಲ್ಲಿ ಕಡಿಮೆಪಕ್ಷ ಪ್ರಾಧಾನ್ಯತೆಯ ಔಷಧಿಗಳ ಪ್ರತಿಯೊಂದರ ಡಬ್ಬಿ ಇಟ್ಟುಕೊಳ್ಳಬೇಕು.

– (ಪೂ.) ವೈದ್ಯ ವಿನಯ ನೀಲಕಂಠ ಭಾವೆ, ಮೊರ್ಡೆ, ಸಂಗಮೇಶ್ವರ ತಾಲೂಕು, ರತ್ನಾಗಿರಿ (೪.೫.೨೦೨೧)

Leave a Comment