ನಕಾರಾತ್ಮಕತೆಯನ್ನು ದೂರಗೊಳಿಸಿ, ಸಕಾರಾತ್ಮಕರಾಗಿದ್ದು ಜೀವನದಲ್ಲಿ ಆನಂದವನ್ನು ನಿಮ್ಮದಾಗಿಸಿ ! – ೨

ನಕಾರಾತ್ಮಕ ವಿಚಾರ ಮಾಡುವ ವ್ಯಕ್ತಿಗೆ ವ್ಯವಹಾರದಲ್ಲಿನ ಸುಖ ಸಿಗುವುದಿಲ್ಲ ಮತ್ತು ಅವನಿಗೆ ಸಾಧನೆಯಲ್ಲಿನ ಆನಂದವನ್ನು ಪ್ರಾಪ್ತಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಲೇಖನದಲ್ಲಿ ನಕಾರಾತ್ಮಕತೆಯ ಕಾರಣಗಳು, ನಕಾರಾತ್ಮಕತೆಯಿಂದಾಗುವ ದುಷ್ಪರಿಣಾಮಗಳು, ನಕಾರಾತ್ಮಕತೆಯನ್ನು ದೂರಗೊಳಿಸಲು ಮಾಡಬೇಕಾದ ಉಪಾಯ ಇತ್ಯಾದಿಗಳನ್ನು ಕೊಡಲಾಗಿದೆ. ಈ ಲೇಖನವನ್ನು ಓದಿ ನಕಾರಾತ್ಮಕ ವಿಚಾರ ಮಾಡುವ ವ್ಯಕ್ತಿಗಳಿಗೆ ಸಕಾರಾತ್ಮಕವಾಗಿ ಇರುವುದರ ಮಹತ್ವ ತಿಳಿಯುವುದು ಮತ್ತು ಅದಕ್ಕಾಗಿ ಪ್ರಯತ್ನವನ್ನು ಮಾಡಲು ಪ್ರೇರಣೆಯೂ ಸಿಗುವುದು.

ಭಾಗ ೧ | ಭಾಗ ೩

೪. ನಕಾರಾತ್ಮಕತೆಯ ದುಷ್ಪರಿಣಾಮಗಳು

ಅಂ. ‘ಕಪ್ಪು ಬಣ್ಣದ ಕನ್ನಡಕ ಧರಿಸಿ ಸುಂದರ ಜಗತ್ತಿನ ಕಡೆಗೆ ನೋಡಿದರೆ, ಆ ವ್ಯಕ್ತಿಗೆ ಜಗತ್ತು ಕಪ್ಪಾಗಿಯೇ ಕಾಣಿಸುತ್ತದೆ. ಸೃಷ್ಟಿಸೌಂದರ್ಯವೂ ಅವನಿಗೆ ಕಪ್ಪಾಗಿಯೇ ಕಾಣಿಸುತ್ತದೆ. ಆ ವ್ಯಕ್ತಿಗೆ ‘ದೇವರು ಜಗತ್ತಿನ ಪ್ರತಿಯೊಂದು ವಸ್ತುವನ್ನು ಪರೋಪಕಾರಕ್ಕಾಗಿ ನಿರ್ಮಿಸಿದ್ದಾನೆ’, ಎಂಬುದು ಗಮನಕ್ಕೆ ಬರುವುದಿಲ್ಲ. ಆದ್ದರಿಂದ ಸೃಷ್ಟಿಯಲ್ಲಿನ ವಸ್ತು ಮತ್ತು ವ್ಯಕ್ತಿಗಳಿಂದ ಸಿಗುವ ಸಹಾಯ ಮತ್ತು ಪ್ರೀತಿ ಅವನಿಗೆ ಸಿಗುವುದಿಲ್ಲ. ಅದನ್ನು ಆಸ್ವಾದಿಸಲು ಅವನ ಮನಸ್ಸಿನ ಸಿದ್ಧತೆಯಿರುವುದಿಲ್ಲ. ಆದ್ದರಿಂದ ಅವುಗಳಿಂದ ದೊರಕುವ ಪ್ರೀತಿ ಮತ್ತು ಆನಂದ ಇವುಗಳಿಂದ ಅವನು ದೂರ ಉಳಿಯುತ್ತಾನೆ.

ಅಃ. ನಕಾರಾತ್ಮಕ ವಿಚಾರಗಳನ್ನು ಮಾಡುವ ವ್ಯಕ್ತಿಗೆ ಕೆಟ್ಟ ಶಕ್ತಿಗಳು ತುಂಬಾ ತೊಂದರೆಗಳನ್ನು ಕೊಡುತ್ತವೆ. ಅವನಿಗೆ ಯಾವುದೇ ಒಳ್ಳೆಯ ವಿಷಯವನ್ನು ಮಾಡಲು ಬಿಡುವುದಿಲ್ಲ. ಇಂತಹ ವ್ಯಕ್ತಿಯ ಅಧೋಗತಿಯಾಗುತ್ತದೆ.

ಕ. ಅನೇಕ ವಿಷಯಗಳಲ್ಲಿ ಪರಾಜಯವಾಗುತ್ತಾ ಹೋದಂತೆ ಮನುಷ್ಯನು ನಿರಾಶನಾಗುತ್ತಾನೆ ಮತ್ತು, ‘ನನ್ನ ಪ್ರಾರಬ್ಧ ತುಂಬಾ ತೀವ್ರವಾಗಿದೆ’, ‘ನನಗೆ ಯಶಸ್ಸು ಸಿಗುವುದು ದೂರದ ಮಾತಾಗಿದೆ’, ಎಂದು ಹೇಳುತ್ತಾನೆ. ಈ ರೀತಿಯ ನಕಾರಾತ್ಮಕ ವಿಚಾರಗಳಿಂದ ಅವನು ಪ್ರಯತ್ನಗಳನ್ನೇ ಬಿಟ್ಟು ಬಿಡುತ್ತಾನೆ. ‘ಪ್ರಾರಬ್ಧವು ತೀವ್ರವಾಗಿರುವುದು’, ನಮ್ಮ ಪೂರ್ವಕರ್ಮಗಳ ಪರಿಣಾಮವಾಗಿದೆ. ಪ್ರಾರಬ್ಧದಲ್ಲಿರುವ ಭೋಗಗಳನ್ನು ಭೋಗಿಸಿ ತೀರಿಸಲು ನಮಗೆ ಪುನಃ ಪುನಃ ಜನ್ಮಗಳನ್ನು ತಾಳಬೇಕಾಗುತ್ತದೆ, ಎಂಬುದನ್ನು ಅವನು ಮರೆಯುತ್ತಾನೆ ಮತ್ತು ಪ್ರಯತ್ನಿಸುವುದನ್ನು ಬಿಟ್ಟು ಬಿಡುತ್ತಾನೆ. ಹೀಗೆ ಮಾಡಿ ಅವನು ಒಂದು ರೀತಿಯಲ್ಲಿ ಆತ್ಮಘಾತವನ್ನೇ ಮಾಡಿಕೊಳ್ಳುತ್ತಾನೆ.

೫. ನಕಾರಾತ್ಮಕತೆಯನ್ನು ದೂರಗೊಳಿಸಲು ಮಾಡಬೇಕಾದ ಉಪಾಯಗಳು

೫ ಅ. ಮಾನಸಿಕ ಸ್ತರದ ಉಪಾಯಗಳು

೧. ಮನಸ್ಸಿನಲ್ಲಿ ಬರುವ ನಕಾರಾತ್ಮಕ ವಿಚಾರಗಳನ್ನು ಒಂದು ಕಾಗದ ಮೇಲೆ ಬರೆದು ಆ ವಿಚಾರಗಳೆದುರು ‘ಯಾವ ಸಕಾರಾತ್ಮಕ ವಿಚಾರ ಅಥವಾ ಕೃತಿಗಳನ್ನು ಮಾಡಬಹುದು ?’, ಎಂಬುದನ್ನು ಬರೆಯುವುದು.

೨. ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಬಂದಾಗ ತಕ್ಷಣ ಆಧ್ಯಾತ್ಮಿಕ ಮಿತ್ರ ಅಥವಾ ಜವಾಬ್ದಾರ ಸಾಧಕರೊಂದಿಗೆ ಮಾತನಾಡಿ ಅವರು ನೀಡಿದ ದೃಷ್ಟಿಕೋನವನ್ನು ಕೃತಿಯಲ್ಲಿ ತರಬೇಕು.

೩. ಮನೋರಾಜ್ಯದಲ್ಲಿ ವಿಹರಿಸದೇ ವಾಸ್ತವ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಕಾರಾತ್ಮಕ ವಿಚಾರಗಳಿಂದ ಕೃತಿಗಳನ್ನು ಮಾಡಬೇಕು.

೪. ‘ಸಕಾರಾತ್ಮಕವಾಗಿದ್ದರೆ ನನ್ನ ಪ್ರಯತ್ನಗಳಿಗೆ ವೇಗ ದೊರಕಿ ನನ್ನ ಉತ್ಪತ್ತಿ (output) ಹೆಚ್ಚಲಿದೆ’, ಎಂದು ವಿಚಾರ ಮಾಡಬೇಕು.

೫. ಅನಾವಶ್ಯಕ ವಿಚಾರ ಮಾಡುವುದನ್ನು ಬಿಡಬೇಕು.

೬. ಅಪೇಕ್ಷೆಗಳನ್ನು ಕಡಿಮೆ ಮಾಡಿ ನಿರಪೇಕ್ಷಭಾವದಲ್ಲಿರಲು ಪ್ರಯತ್ನಿಸಬೇಕು.

೭. ‘ನಾನು ನಕಾರಾತ್ಮಕ ವಿಚಾರಗಳನ್ನು ಮಾಡುವುದಿಲ್ಲ, ನಕಾರಾತ್ಮಕ ವಿಚಾರಗಳಿಗೆ ಉತ್ತೇಜನ ನೀಡುವುದಿಲ್ಲ’, ಎಂದು ಬುದ್ಧಿಯ ನಿಶ್ಚಯ ಮಾಡಿ ಅದರಂತೆ ಕೃತಿಯನ್ನೂ ಮಾಡಬೇಕು.

೮. ದೇವರು, ಗುರು ಮತ್ತು ಸಹಸಾಧಕರ ಸಹಾಯವನ್ನು ಪಡೆದು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಮಾಡಲು ಹೆಚ್ಚೆಚ್ಚು ಪ್ರಯತ್ನ ಮಾಡಬೇಕು.

ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

೫ ಆ. ಆಧ್ಯಾತ್ಮಿಕ ಸ್ತರದ ಉಪಾಯಗಳು

೧. ‘ದೇವರು ಆನಂದಮಯ ಜೀವನವನ್ನು ಜೀವಿಸಲು ನನಗೆ ಜನ್ಮ ನೀಡಿದ್ದಾರೆ’, ಎಂದು ವಿಚಾರ ಮಾಡಬೇಕು.

೨. ಪ್ರತಿಯೊಂದು ಕೃತಿಯ ಕರ್ತೃತ್ವವನ್ನು ತನ್ನಲ್ಲಿ ಇಟ್ಟುಕೊಳ್ಳದೇ ‘ದೇವರೇ ಅವರಿಗೆ ಅಪೇಕ್ಷೆಯಿರುವ ಸರ್ವಸ್ವವನ್ನು ಮಾಡಿಸಿಕೊಳ್ಳುತ್ತಿದ್ದಾರೆ’, ಎಂದು ವಿಚಾರ ಮಾಡಿ ಕೃತಿಗಳನ್ನು ಮಾಡಬೇಕು.

೩. ‘ಪ್ರತಿಯೊಂದು ವಿಷಯವನ್ನು ದೇವರು ನನ್ನ ಒಳಿತಿಗಾಗಿಯೇ ಮಾಡುತ್ತಿದ್ದಾರೆ’, ಎಂಬ ಭಾವವನ್ನಿಡಬೇಕು.

೪. ಕೃತಿಯನ್ನು ಮಾಡುವ ಮೊದಲು ಮತ್ತು ಕೃತಿ ಮಾಡುತ್ತಿರುವಾಗ ಸಂತರು ಅಥವಾ ಉನ್ನತ ಸಾಧಕರ ಮಾರ್ಗದರ್ಶನ ಪಡೆಯಬೇಕು.

೫. ಕೃತಿಯನ್ನು ಮಾಡಿದ ನಂತರ ಈಶ್ವರನ ಚರಣಗಳಲ್ಲಿ ಶರಣಾಗತ ಭಾವದಿಂದ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.

೬. ‘ಸಕಾರಾತ್ಮಕವಾಗಿರುವುದರಿಂದ ನನಗೆ ದೇವರು ಮತ್ತು ಸಾಧಕರ ಸಹಾಯ ದೊರಕಿ ನನ್ನ ಜೀವನದ ಎಲ್ಲ ಅಡಚಣೆಗಳೂ ದೂರವಾಗಲಿವೆ’, ಎಂಬ ವಿಚಾರವನ್ನು ಸತತವಾಗಿ ಮಾಡಬೇಕು.

೭. ‘ಸಕಾರಾತ್ಮಕವಾಗಿರುವುದರಿಂದ ನನ್ನಿಂದ ದೇವರಿಗೆ ಅಪೇಕ್ಷಿತ ಕೃತಿಗಳಾಗಿ ನನಗೆ ಅದರ ಆನಂದ ದೊರಕಲಿದೆ’, ಎಂದು ವಿಚಾರ ಮಾಡಬೇಕು.

೮. ‘ಸಕಾರಾತ್ಮಕವಾಗಿರುವುದರಿಂದ ತನ್ನ ಸಾಮರ್ಥ್ಯದ ಉಪಯೋಗವಾಗುವುದು’ ಮತ್ತು ‘ದೇವರೇ ನನ್ನಿಂದ ಎಲ್ಲವನ್ನೂ ಮಾಡಿಸಿಕೊಳ್ಳುತ್ತಿದ್ದಾನೆ’, ಎಂಬ ಅರಿವಿನಿಂದ ‘ನನ್ನಲ್ಲಿನ ಕರ್ತೃತ್ವ ಮತ್ತು ಅಹಂ ಕಡಿಮೆಯಾಗುವುದು’, ಎಂಬ ವಿಚಾರ ಮಾಡಬೇಕು.

೯. ಪ್ರಯತ್ನಗಳನ್ನು ಹೆಚ್ಚಿಸಲು ದೇವರಲ್ಲಿ ಪ್ರಾರ್ಥನೆ ಮಾಡಬೇಕು ಮತ್ತು ಪ್ರಯತ್ನವಾದ ನಂತರ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.

೧೦. ಸತತವಾಗಿ ಮನೋಲಯ ಮತ್ತು ಬುದ್ಧಿಲಯವಾಗಲೆಂದು ದೇವರಲ್ಲಿ ಪ್ರಾರ್ಥನೆ ಮಾಡಬೇಕು.

೧೧. ಮನಸ್ಸಿನಲ್ಲಿ ನಾಮದ ಬೀಜವನ್ನು ಅಂಕುರಿಸಲು ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದ ಅಷ್ಟಾಂಗ ಸಾಧನೆಯನ್ನು ಮಾಡಬೇಕು.

ಅಷ್ಟಾಂಗ ಸಾಧನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

೧೨. ಸತತವಾಗಿ ದೇವರ ಅನುಸಂಧಾನದಲ್ಲಿರಲು ಪ್ರಯತ್ನಿಸಬೇಕು.

೧೩. ಗುರುದೇವರು ಹೇಳಿದ ಆಧ್ಯಾತ್ಮಿಕ ಉಪಾಯಗಳನ್ನು ನಿಯಮಿತವಾಗಿ ಮತ್ತು ಭಕ್ತಿಭಾವದಿಂದ ಮಾಡಬೇಕು.

೧೪. ‘ಪ.ಪೂ. ಗುರುದೇವರು ನಮ್ಮ ಸಾಧನೆಯಾಗಬೇಕೆಂದು ಇಲ್ಲಿಯವರೆಗೆ ನಮಗಾಗಿ ಏನೆಲ್ಲವನ್ನು ಮಾಡಿದ್ದಾರೆ ?’, ಎಂಬುದನ್ನು ನೆನಪಿಸಿಕೊಳ್ಳಬೇಕು ಮತ್ತು ‘ಈಗಲೂ ಅವರು ಏನೇನು ಮಾಡುತ್ತಿದ್ದಾರೆ’, ಎಂಬುದರ ಅರಿವನ್ನು ಇಟ್ಟುಕೊಳ್ಳಬೇಕು.

೧೫. ಬುದ್ಧಿಯ ಉಪಯೋಗ ಕಡಿಮೆ ಮಾಡಿ ಮನಸ್ಸನ್ನು ಗುರುಚರಣಗಳಲ್ಲಿ ಅರ್ಪಿಸಬೇಕು.

ಭಾಗ ೧ | ಭಾಗ ೩

– ಶ್ರೀ. ಅಶೋಕ ಲಿಮಕರ್, ಸನಾತನ ಆಶ್ರಮ, ದೇವದ, ಪನವೇಲ. (೩೦.೭.೨೦೧೭)

Leave a Comment