ರೋಗಗಳನ್ನು ಗುಣಪಡಿಸಲು ಆವಶ್ಯಕವಾದ (ದೇವತೆಗಳ ತತ್ತ್ವಗಳಿಗನುಸಾರ) ಕೆಲವು ನಾಮಜಪಗಳು

Article also available in :

ಯಾವುದಾದರೂ ರೋಗವನ್ನು ಗುಣಪಡಿಸಲು ದುರ್ಗಾದೇವಿ, ರಾಮ, ಶ್ರೀಕೃಷ್ಣ, ದತ್ತ, ಗಣಪತಿ, ಮಾರುತಿ ಮತ್ತು ಶಿವ ಈ ೭ ದೇವತೆಗಳ ಪೈಕಿ ಯಾವ ದೇವತೆಯ ತತ್ತ್ವವು ಎಷ್ಟು ಪ್ರಮಾಣದಲ್ಲಿ ಆವಶ್ಯಕವಾಗಿದೆ ?, ಎಂಬುದನ್ನು ಧ್ಯಾನದಲ್ಲಿ ಶೋಧಿಸಿ ಅದಕ್ಕನುಸಾರ ನಾನು ಕೆಲವು ರೋಗಗಳಿಗೆ ಜಪವನ್ನು ತಯಾರಿಸಿದೆನು. ಕೊರೋನಾ ವಿಷಾಣುಗಳ ವಿರುದ್ಧ ಪ್ರತಿಕಾರಕ ಶಕ್ತಿಯನ್ನು ಹೆಚ್ಚಿಸಲು ನಾನು ಮೊದಲ ಬಾರಿಗೆ ಇಂತಹ ಜಪವನ್ನು ಶೋಧಿಸಿದ್ದೆನು. ಅದು ಪರಿಣಾಮಕಾರಿಯಾಗಿರುವುದು ಗಮನಕ್ಕೆ ಬಂದ ನಂತರ ನನಗೆ ಇತರ ರೋಗಗಳಿಗಾಗಿಯೂ ಜಪವನ್ನು ಶೋಧಿಸಲು ಸ್ಫೂರ್ತಿ ದೊರಕಿತು. ಕಳೆದ ಒಂದು ವರ್ಷದಿಂದ ಸಾಧಕರಿಗೆ ನಾನು ಶೋಧಿಸಿದ ಜಪಗಳನ್ನು ಅವರ ರೋಗಗಳಿಗಾಗಿ ನೀಡುತ್ತಿದ್ದೇನೆ. ‘ಆ ಜಪಗಳಿಂದ ಉತ್ತಮ ಲಾಭವಾಗುತ್ತಿದೆ’ ಎಂದು ಅವರು ಹೇಳಿದಾಗ ಇದು ನನ್ನ ಗಮನಕ್ಕೆ ಬಂದಿತು. ಆ ರೋಗಗಳು ಮತ್ತು ಅವುಗಳ ಶಮನಕ್ಕಾಗಿ ಜಪಗಳನ್ನು ಇಲ್ಲಿ ಕೊಡಲಾಗಿದೆ. ಈ ಜಪಗಳೆಂದರೆ ಅಗತ್ಯವಿರುವ ವಿವಿಧ ದೇವತೆಗಳ ಒಟ್ಟು ಜಪಗಳಾಗಿವೆ.

ಸೂಚನೆ : ಇಲ್ಲಿ ಪ್ರತಿಯೊಂದು ಸಮಸ್ಯೆಯ ಕೆಳಗೆ ನೀಡಿರುವ ಎಲ್ಲ ದೇವತೆಗಳ ಹೆಸರು ಸೇರಿ ‘ಒಂದು’ ಜಪ ಆಗುತ್ತದೆ.

೧. ಮಾಸಿಕ ಸರದಿಯ ತೊಂದರೆಗಳನ್ನು ದೂರ ಮಾಡಲು ನಾಮಜಪ

ಶ್ರೀ ಗಣೇಶಾಯ ನಮಃ – ಶ್ರೀ ಗಣೇಶಾಯ ನಮಃ – ಶ್ರೀ ಗುರುದೇವ ದತ್ತ |

ನ್ಯಾಸ : ಬಲಗೈಯ ಐದೂ ಬೆರಳುಗಳ ತುದಿಗಳನ್ನು ಒಟ್ಟು ಸೇರಿಸಿ ಶರೀರದಿಂದ ೧-೨ ಸೆಂ.ಮೀ. ಅಂತರದಲ್ಲಿ ಆಜ್ಞಾಚಕ್ರದ ಮೇಲೆ ನ್ಯಾಸ

ಕೆಲವು ಸಾಧಕಿಯರಿಗೆ ಮಾಸಿಕ ಸರದಿಯು ನಿಯಮಿತವಾಗಿ ಆಗುತ್ತಿರಲಿಲ್ಲ ಮತ್ತು ಕೆಲವು ಸಾಧಕಿಯರಿಗೆ ೫ ದಿನಗಳ ನಂತರವೂ ಸರದಿಯ ರಕ್ತಸ್ರಾವವು ನಿಲ್ಲುತ್ತಿರಲಿಲ್ಲ. ಮಾಸಿಕ ಸರದಿಯ ಇಂತಹ ತೊಂದರೆಗಳಿಗಾಗಿ ನಾನು ಮೇಲಿನ ಜಪವನ್ನು ಶೋಧಿಸಿದೆನು ಮತ್ತು ಆ ನಾಮಜಪವನ್ನು ಆ ಸಾಧಕಿಯರಿಗೆ ಸರದಿಯ ಸಂಭಾವ್ಯ ದಿನಾಂಕದ ೪ ದಿನಗಳ ಮೊದಲಿನಿಂದ ಸರದಿ ಮುಗಿಯುವವರೆಗೆ ಪ್ರತಿದಿನ ೧ ಗಂಟೆ ಮಾಡಲು ಹೇಳಿದೆನು. ಈ ಜಪವನ್ನು ಮಾಡುವಾಗ ನಾನು ಅವರಿಗೆ ಬಲಗೈಯ ಐದೂ ಬೆರಳುಗಳ ತುದಿಗಳನ್ನು ಒಟ್ಟು ಸೇರಿಸಿ ತಮ್ಮ ಆಜ್ಞಾಚಕ್ರದ ಮೇಲೆ ನ್ಯಾಸ ಮಾಡಲು ಹೇಳಿದೆನು. ನ್ಯಾಸ ಮಾಡುವಾಗ ಅದನ್ನು ಶರೀರದಿಂದ ೧-೨ ಸೆಂ.ಮೀ. ಅಂತರದಲ್ಲಿಟ್ಟು ಮಾಡಲು ಹೇಳಿದೆನು. ಈ ಜಪದಿಂದ ಆ ಸಾಧಕಿಯರಿಗೆ ಉತ್ತಮ ಫಲಿತಾಂಶ ದೊರೆಯಿತು.

ನ್ಯಾಸ ಎಂದರೇನು ಎಂದು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

೨. ಮಧುಮೇಹಕ್ಕಾಗಿ ನಾಮಜಪ

ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ಹನುಮತೆ ನಮಃ |

ಓರ್ವ ಸಾಧಕಿಯ ರಕ್ತದಲ್ಲಿ ಸಕ್ಕರೆಯ ಪ್ರಮಾಣವು ‘ಇನ್ಸುಲಿನ್’ನ (ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುವ ಔಷಧಿಯ) ಪ್ರಮಾಣವನ್ನು ಹೆಚ್ಚಿಸಿದರೂ (ಸಕ್ಕರೆಯ ಪ್ರಮಾಣ) ಹೆಚ್ಚೇ ಇರುತ್ತಿತ್ತು. ನಾನು ಅವರಿಗೆ ಮೇಲಿನ ಜಪವನ್ನು ಮಾಡಲು ಹೇಳಿದೆನು. ಅವರು ಆ ಜಪವನ್ನು ಮಾಡಲು ಆರಂಭಿಸಿದ ಒಂದು ವಾರದಲ್ಲಿಯೇ ಡಾಕ್ಟರರಿಗೆ ‘ಔಷಧಿಯಲ್ಲಿ ಬದಲಾವಣೆಯನ್ನು ಮಾಡಿ ನೋಡಬೇಕು’, ಎಂಬ ವಿಚಾರ ಬಂದಿತು. ಅದನ್ನು ಬದಲಾಯಿಸಿದಾಗ ಆ ಸಾಧಕಿಯ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಸ್ವಲ್ಪ ಹತೋಟಿಗೆ ಬಂದಿತು.

೩. ಕಾಲುಗಳಿಂದ ಹಿಡಿದು ಸಂಪೂರ್ಣ ಶರೀರದ ಮೇಲೆ ಇದ್ದಕ್ಕಿದ್ದಂತೆಯೇ ಬಂದ ಗುಳ್ಳೆಗಳಿಗಾಗಿ ನಾಮಜಪ

ಶ್ರೀ ಹನುಮತೆ ನಮಃ – ಶ್ರೀ ಗುರುದೇವ ದತ್ತ – ಶ್ರೀ ಗುರುದೇವ ದತ್ತ – ಶ್ರೀ ಗುರುದೇವ ದತ್ತ – ಶ್ರೀ ಹನುಮತೆ ನಮಃ – ಶ್ರೀ ಗುರುದೇವ ದತ್ತ – ಶ್ರೀ ಗುರುದೇವ ದತ್ತ – ಶ್ರೀ ಗುರುದೇವ ದತ್ತ – ಓಂ ನಮಃ ಶಿವಾಯ |

ಬನಾರಸ್‌ನ ಓರ್ವ ಸಾಧಕಿಯ ಸಂಪೂರ್ಣ ಶರೀರದ ಮೇಲೆ ಇದ್ದಕ್ಕಿದ್ದಂತೆ ಗುಳ್ಳೆಗಳು ಎದ್ದಿದ್ದವು. ೪.೧೧.೨೦೨೦ ರಂದು ಅವರಿಗೆ ಮೇಲಿನ ಜಪವನ್ನು ಪ್ರತಿದಿನ ೧ ಗಂಟೆ ಮಾಡಲು ಹೇಳಿದೆನು. ಎಂಟು ದಿನಗಳ ನಂತರ ಆ ಸಾಧಕಿಯು, ‘ಈ ಜಪದಿಂದಾಗಿ ಮೊದಲು ಒರಟಾಗಿದ್ದಂತಹ ಚರ್ಮವು ಜಪವನ್ನು ಆರಂಭಿಸಿದ ನಂತರ ೨ ದಿನಗಳಲ್ಲಿಯೇ ಮೃದುವಾಗತೊಡಗಿತು, ಹಾಗೆಯೇ ಗುಳ್ಳೆಗಳು ಒಣಗತೊಡಗಿದವು. ತುರಿಕೆಯಾಗುವ ಪ್ರಮಾಣವು ಕಡಿಮೆಯಾಯಿತು. ಎಂಟು ದಿನಗಳ ನಂತರ ಶರೀರದ ಮೇಲಿನ ಗುಳ್ಳೆಗಳ ಆಕಾರವು ಬಹಳ ಕಡಿಮೆಯಾಯಿತು ಮತ್ತು ಅವುಗಳ ಬಣ್ಣವು ಮಸುಕಾಯಿತು’, ಎಂದು ಹೇಳಿದಳು. ಇನ್ನೂ ೮ ದಿನಗಳ ನಂತರ ಅವಳ ಚರ್ಮವು ಇನ್ನೂ ಮೃದುವಾಯಿತು ಮತ್ತು ಗುಳ್ಳೆಗಳ ಪ್ರಮಾಣವು ಇನ್ನೂ ಕಡಿಮೆಯಾಯಿತು.

೪. ಚರ್ಮದ ಮೇಲಾದ ಶಿಲೀಂಧ್ರಗಳ ಸೋಂಕಿಗಾಗಿ (Fungal Infection) ನಾಮಜಪ

ಶ್ರೀ ಗಣೇಶಾಯ ನಮಃ – ಶ್ರೀ ಗಣೇಶಾಯ ನಮಃ – ಶ್ರೀ ಗಣೇಶಾಯ ನಮಃ – ಶ್ರೀ ಗಣೇಶಾಯ ನಮಃ – ಶ್ರೀ ಗುರುದೇವ ದತ್ತ – ಶ್ರೀ ಗಣೇಶಾಯ ನಮಃ – ಶ್ರೀ ಗಣೇಶಾಯ ನಮಃ – ಶ್ರೀ ಗಣೇಶಾಯ ನಮಃ- ಶ್ರೀ ಹನುಮತೆ ನಮಃ – ಶ್ರೀ ಹನುಮತೆ ನಮಃ |

ಓರ್ವ ಸಾಧಕಿಯ ಸೊಂಟದ ಮೇಲೆ ಮತ್ತು ತೊಡೆಯ ಸಂಧಿಯಲ್ಲಿ ಶಿಲೀಂಧ್ರ ಸೋಂಕು ಆಗಿತ್ತು. ಅವಳ ಚರ್ಮವು ದಪ್ಪ(ಒರಟು) ಮತ್ತು ಕಪ್ಪಾಗಿತ್ತು. ಅವಳು ಮೇಲಿನ ಜಪವನ್ನು ೧೫ ದಿನಗಳ ಕಾಲ ಪ್ರತಿದಿನ ೧ ಗಂಟೆ ಮಾಡಿದಾಗ ಅವಳ ಆ ಭಾಗಗಳಲ್ಲಿ ತುರಿಕೆಯು ಕಡಿಮೆಯಾಯಿತು, ಹಾಗೆಯೇ ಅಲ್ಲಿನ ಚರ್ಮದ ಕಪ್ಪುತನ ಮತ್ತು ಒರಟುತನ ತುಂಬಾ ಕಡಿಮೆಯಾಯಿತು.

೫. ರಕ್ತದಲ್ಲಿನ ‘ಕ್ರಿಯೆಟಿನಿನ್’ ಹೆಚ್ಚಾದುದರಿಂದ ಮೂತ್ರಪಿಂಡಗಳ ಕ್ಷಮತೆಯು ಕಡಿಮೆಯಾಗುವ ರೋಗಕ್ಕಾಗಿ ನಾಮಜಪ

ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ಗುರುದೇವ ದತ್ತ – ಶ್ರೀ ಹನುಮತೆ ನಮಃ |

೬. ಮೂಲವ್ಯಾಧಿಗಾಗಿ ನಾಮಜಪ

ಶ್ರೀ ಗಣೇಶಾಯ ನಮಃ – ಶ್ರೀ ಗಣೇಶಾಯ ನಮಃ – ಶ್ರೀ ಗಣೇಶಾಯ ನಮಃ – ಶ್ರೀ ಹನುಮತೆ ನಮಃ | – ಶ್ರೀ ಗಣೇಶಾಯ ನಮಃ – ಶ್ರೀ ಗಣೇಶಾಯ ನಮಃ – ಓಂ ನಮಃ ಶಿವಾಯ |

೭. ಮೂತ್ರಕಲ್ಲುಗಳಿಗಾಗಿ ನಾಮಜಪ

ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ಹನುಮತೆ ನಮಃ |

೮. ರಕ್ತದಲ್ಲಿ ಕಡಿಮೆಯಾದ ಲೋಹದ ಪ್ರಮಾಣವನ್ನು ಹೆಚ್ಚಿಸಲು ನಾಮಜಪ

ಶ್ರೀ ಗುರುದೇವ ದತ್ತ – ಶ್ರೀ ಗುರುದೇವ ದತ್ತ – ಶ್ರೀ ಗುರುದೇವ ದತ್ತ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ಗುರುದೇವ ದತ್ತ – ಶ್ರೀ ಗುರುದೇವ ದತ್ತ – ಶ್ರೀ ಗುರುದೇವ ದತ್ತ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ಗುರುದೇವ ದತ್ತ – ಶ್ರೀರಾಮ ಜಯರಾಮ ಜಯ ಜಯ ರಾಮ |

– (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೦.೧೨.೨೦೨೦)

ಸಾಧಕರಿಗೆ ಇಲ್ಲಿ ನೀಡಲಾದ ರೋಗಗಳ ಪೈಕಿ ಯಾವುದಾದರೊಂದು ರೋಗವಾಗಿದ್ದರೆ ಮತ್ತು ಅದನ್ನು ದೂರಗೊಳಿಸಲು ವೈದ್ಯಕೀಯ ಉಪಚಾರಗಳೊಂದಿಗೆ ‘ಅದರ ಬಗ್ಗೆ ನೀಡಲಾದ ನಾಮಜಪವನ್ನು ಮಾಡಿ ನೋಡಬೇಕು’ ಎಂದೆನಿಸಿದರೆ, ಅವರು ಆ ನಾಮಜಪವನ್ನು ೧ ತಿಂಗಳು ಪ್ರತಿದಿನ ೧ ಗಂಟೆಯಷ್ಟು ಪ್ರಯೋಗವೆಂದು ಮಾಡಿ ನೋಡಬೇಕು. ಈ ನಾಮಜಪಗಳ ಸಂದರ್ಭದಲ್ಲಿ ಬರುವ ಅನುಭೂತಿಗಳನ್ನು ಸಾಧಕರು [email protected] ಈ ವಿಳಾಸಕ್ಕೆ ಅಥವಾ ಕೆಳಗೆ ಕೊಡಲಾದ ಅಂಚೆಯ ವಿಳಾಸಕ್ಕೆ ಕಳುಹಿಸಬೇಕು. ಈ ಅನುಭೂತಿಗಳು ಗ್ರಂಥದಲ್ಲಿ ತೆಗೆದುಕೊಳ್ಳುವ ದೃಷ್ಟಿಯಿಂದ, ಹಾಗೆಯೇ ನಾಮಜಪದ ಕ್ಷಮತೆಯನ್ನು ತಿಳಿದುಕೊಳ್ಳುವ ದೃಷ್ಟಿಯಿಂದ ಮಹತ್ವದ್ದಾಗಿವೆ.
ಅಂಚೆ ವಿಳಾಸ : ಸನಾತನ ಆಶ್ರಮ, 24/B ರಾಮನಾಥಿ, ಬಾಂದೋಡಾ, ಫೋಂಡಾ, ಗೋವಾ. ಪಿನ್‌ಕೊಡ್ 403401.

Leave a Comment