ತುಲಾ ಸಂಕ್ರಮಣದ ಪರಿಣಾಮ ಮತ್ತು ಆ ಸಮಯದಲ್ಲಿ ಮಾಡಬೇಕಾದ ಸೂರ್ಯೋಪಾಸನೆ !

1. 17.10.2020 ರಂದು ಸೂರ್ಯನು ತುಲಾ ರಾಶಿಯಲ್ಲಿ ಪ್ರವೇಶ ಮಾಡುತಿದ್ದು ಅದು ಪ್ರತಿಕೂಲವಾಗಿರುವುದರಿಂದ ಈ ಸಮಯದಲ್ಲಿ ಶ್ರೀ ಸೂರ್ಯನಾರಾಯಣನ ಉಪಾಸನೆ ಮಾಡಬೇಕು !

17.10.2020 ರಂದು ಬೆಳಿಗ್ಗೆ 7 ಗಂಟೆ 5 ನಿಮಿಷದಿಂದ ಸೂರ್ಯನು ತುಲಾ ರಾಶಿಯಲ್ಲಿ ಪ್ರವೇಶ ಮಾಡುತ್ತಿರುವುದರಿಂದ ಸೂರ್ಯೋದಯದಿಂದ ಬೆಳಿಗ್ಗೆ 11 ಗಂಟೆ 5 ನಿಮಿಷದ ವರೆಗೆ ಪುಣ್ಯಕಾಲವಿರುತ್ತದೆ. ಇದು ಸೂರ್ಯನ ಸಂಧಿಕಾಲವಾಗಿದೆ. 17.10.2020 ರಿಂದ 16.11.2020 ರ ವರೆಗೆ ಸೂರ್ಯನು ತುಲಾ ರಾಶಿಯಲ್ಲಿರುತ್ತಾನೆ. ಯಾವುದೇ ಗ್ರಹವು ಶಾಶ್ವತವಾಗಿ ಶುಭ ಅಥವಾ ಅಶುಭ ಫಲವನ್ನು ಕೊಡುವುದಿಲ್ಲ. ಸೂರ್ಯನು ಒಂದು ತಿಂಗಳು ಒಂದು ರಾಶಿಯಲ್ಲಿರುತ್ತಾನೆ. ಇದರಲ್ಲಿ ಮೊದಲ 5 ದಿನಗಳು ಶುಭ ಅಥವಾ ಅಶುಭ ಫಲವನ್ನು ಕೊಡುತ್ತವೆ. ತುಲಾ ರಾಶಿಯಲ್ಲಿ ಸೂರ್ಯ ಇರುವುದು ಅಶುಭವೆಂದು ನಂಬಲಾಗುವುದರಿಂದ ಮೊದಲ 5 ದಿನಗಳು ಪ್ರತಿಕೂಲವಾಗಿರುತ್ತವೆ. ಈ ಸಮಯದಲ್ಲಿ ರೋಗನಿರೋಧಕ ಶಕ್ತಿ ಮತ್ತು ಪ್ರಾಣಶಕ್ತಿ ಕಡಿಮೆಯಾಗುತ್ತದೆ. ಅದಕ್ಕಾಗಿ ತುಲಾ ಸಂಕ್ರಮಣದ ಪುಣ್ಯ ಕಾಲದಲ್ಲಿ ಸೂರ್ಯದೇವತೆಯ ‘ಓಂ ಸೂರ್ಯಾಯ ನಮಃ |‘ ಈ ಜಪವನ್ನು ಮಾಡಬೇಕು.

2. ಸೂರ್ಯೋಪಾಸನೆಯ ಮಹತ್ವ

ಸೂರ್ಯೋಪಾಸನೆ ಮಾಡುವುದೆಂದರೆ, ತೇಜತತ್ತ್ವದ ಉಪಾಸನೆ ಮಾಡುವುದು. ಸೂರ್ಯನ ಉಪಾಸನೆಯಿಂದ ಸಾತ್ತ್ವಿಕತೆ ಮತ್ತು ಚೈತನ್ಯ ಗ್ರಹಣ ಮಾಡುವ ಕ್ಷಮತೆ ಹೆಚ್ಚಾಗುತ್ತದೆ. ಉದಯಿಸುತ್ತಿರುವ ಸೂರ್ಯನನ್ನು ನೋಡುತ್ತಾ ತ್ರಾಟಕ (ಕಣ್ಣುಗಳನ್ನು ಮುಚ್ಚದೆ ಸೂರ್ಯನನ್ನೇ ನೋಡುತ್ತಾ ಇರುವುದು) ಮಾಡುವುದರಿಂದ ಕಣ್ಣುಗಳ ಕ್ಷಮತೆ ಹೆಚ್ಚಾಗುತ್ತದೆ. ಸೂರ್ಯೋಪಾಸನೆಯಿಂದ ಸೂರ್ಯನಾಡಿ ಜಾಗೃತವಾಗುತ್ತದೆ; ನೆನಪಿನ ಶಕ್ತಿ, ತೇಜ, ಜ್ಞಾನ ಮತ್ತು ಒಳ್ಳೆಯ ಆರೋಗ್ಯ ಲಭಿಸುತ್ತದೆ. ಅದೇ ರೀತಿ ಅನಿಷ್ಟ ಶಕ್ತಿಗಳ ತೊಂದರೆ ಮತ್ತು ಭಯ ನಾಶವಾಗುತ್ತದೆ. ಅದಕ್ಕಾಗಿ ಹಿಂದೂ ಧರ್ಮದಲ್ಲಿ ಸೂರ್ಯನ ಉಪಾಸನೆಗೆ ಬಹಳ ಮಹತ್ವವಿದೆ. ಎಲ್ಲರೂ ಪ್ರತಿದಿನ ಸಾಧ್ಯವಾದಷ್ಟು (ವಿಷಯ 3 ರಲ್ಲಿ ಹೇಳಿರುವ ಹಾಗೆ) ಸೂರ್ಯೋಪಾಸನೆ ಮಾಡಬೇಕು.

ಸೂರ್ಯನು ತುಲಾ ರಾಶಿಯಲ್ಲಿರುವಾಗ ಮಾಡಬೇಕಾದ ಉಪಾಸನೆ

ಅ. ಸೂರ್ಯದೇವತೆಯ ‘ಓಂ ಸೂರ್ಯಾಯ ನಮಃ |‘ ಈ ಜಪವನ್ನು ಮಾಡಬೇಕು.

ಆ. ಗಾಯತ್ರಿ ಮಂತ್ರವನ್ನು ಜಪಿಸಬೇಕು.

ಗಾಯತ್ರಿ ಮಂತ್ರ :
ಓಂ ಭೂರ್ಭುವಃ ಸ್ವಃ ತತ್ಸುವಿತುರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹೀ |
ಧಿಯೋ ಯೋ ನಃ ಪ್ರಚೋದಯಾತ್|

ಅರ್ಥ : ದೈದೀಪ್ಯಮಾನ ಭಗವಾನ ಸವಿತೃ (ಸೂರ್ಯ) ದೇವರ ಆ ತೇಜದ ಧ್ಯಾನವನ್ನು ನಾವು ಮಾಡುತ್ತೇವೆ. ಆ ತೇಜವು ನಮ್ಮ ಬುದ್ಧಿಗೆ ಪ್ರೇರಣೆಯನ್ನು ನೀಡಲಿ.

ಇ. ನವಗ್ರಹ ಸ್ತೋತ್ರದಲ್ಲಿ ಇರುವ ಸೂರ್ಯನ ಜಪವನ್ನು ಮಾಡಬೇಕು. ಜಪಗಳ ಸಂಖ್ಯೆ 7 ಸಾವಿರದಷ್ಟಿರಬೇಕು.

ಜಪಾಕುಸುಮಸಂಕಾಶಂ ಕಾಶ್ಯಪೇಯಂ ಮಹದ್ಯುತಿಮ್ ।

ತಮೋಽರಿಂ ಸರ್ವಪಾಪಘ್ನಂ ಪ್ರಣತೋಽಸ್ಮಿ ದಿವಾಕರಮ್ ॥

– ನವಗ್ರಹಸ್ತೋತ್ರ, ಶ್ಲೋಕ 1

ಅರ್ಥ : ಕೆಂಪು ದಾಸವಾಳ ಹೂವಿನ ಬಣ್ಣವಿರುವ, ಕಶ್ಯಪ ಋಷಿಗಳ ಪುತ್ರ, ಅತ್ಯಂತ ತೇಜಸ್ವಿ, ಅಂಧಕಾರದ ಶತ್ರು ಹಾಗೂ ಎಲ್ಲ ಪಾಪಗಳನ್ನು ನಾಶ ಮಾಡುವ ಸೂರ್ಯನಿಗೆ ನಾನು ನಮಸ್ಕಾರಗಳನ್ನು ಸಲ್ಲಿಸುತ್ತೇನೆ.

ಈ. ಸೂರ್ಯೋದಯದ ಸಮಯದಲ್ಲಿ ಸೂರ್ಯನಿಗೆ ಅರ್ಘ್ಯವನ್ನು ಕೊಟ್ಟು ನಮಸ್ಕಾರ ಮಾಡಬೇಕು. ಅರ್ಘ್ಯವನ್ನು ಕೊಡುವಾಗ ಹೇಳಬೇಕಾದ ಶ್ಲೋಕವನ್ನು ಮುಂದೆ ನೀಡಲಾಗಿದೆ.

ಎಹಿ ಸೂರ್ಯ ಸಹಸ್ರಾಂಶೋ ತೇಜೋರಾಶೇ ಜಗತ್ಪತೆ |
ಅನುಕಂಪಯ ಮಾಂ ಭಕ್ತ್ಯಾ ಗೃಹಣಾರ್ಘ್ಯ ದಿವಾಕರ ||

ಅರ್ಥ : ಹೇ ಸಾವಿರ ಕಿರಣಗಳಿರುವ, ತೇಜಪುಂಜನಾಗಿರುವ, ಜಗತ್ತಿನ ಸ್ವಾಮಿ ಆಗಿರುವ ದಿವಾಕರಾ. ನನ್ನ ಮೇಲೆ ಅನುಕಂಪ (ದಯೆ) ತೋರು. ನಾನು ಶ್ರದ್ಧೆಯಿಂದ ನೀಡಿರುವ ಈ ಅರ್ಘ್ಯವನ್ನು ಸ್ವೀಕರಿಸು.

ಉ. ಸೂರ್ಯನಮಸ್ಕಾರವನ್ನು ಮಾಡಬೇಕು.

ಊ. ಶ್ರೀರಾಮರಕ್ಷಾ ಸ್ತೋತ್ರವನ್ನು ಪಠಿಸಬೇಕು.

ಎ. ಶ್ರೀ ಸೂರ್ಯ ಸಹಸ್ರನಾಮಾವಳಿಯನ್ನು ಕೇಳಬೇಕು.

ಏ. ಶ್ರೀ ಸೂರ್ಯ ಸ್ತುತಿಯನ್ನು ಓದಬೇಕು.

– ಸೌ. ಪ್ರಾಜಕ್ತಾ ಜೋಶಿ, ಜ್ಯೋತಿಷ್ಯ ಫಲಶಾಸ್ತ್ರ ವಿಶಾರದೆ, ವಾಸ್ತು ವಿಶಾರದೆ, ಸಂಖ್ಯಾಜ್ಯೋತಿಷ್ಯ ವಿಶಾರದೆ, ರತ್ನಶಾಸ್ತ್ರ ವಿಶಾರದೆ, ಅಷ್ಟಕವರ್ಗ ವಿಶಾರದೆ, ಸರ್ಟಿಫಾಯಿಡ್ ಡೌಸರ್, ರಮಲ ಪಂಡಿತೆ, ಹಸ್ತಾಕ್ಷರ ಮನೋವಿಶ್ಲೇಷಣಶಾಸ್ತ್ ವಿಶಾರದೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ರಾಮನಾಥಿ ಗೋವಾ. (2.10.2020)

Leave a Comment