ಮುಂಬರುವ ಭೀಕರ ಆಪತ್ಕಾಲದಲ್ಲಿ ಆರೋಗ್ಯರಕ್ಷಣೆಗಾಗಿ ಉಪಯುಕ್ತವಾದ ಔಷಧಿ ಗಿಡ ಮೂಲಿಕೆಗಳನ್ನು ಬೆಳೆಸಿರಿ !

ಮುಂಬರುವ ಕಾಲದಲ್ಲಿ ಮೂರನೇ ಮಹಾಯುದ್ಧವಾಗಿ ಅದರಲ್ಲಿ ಕೋಟ್ಯವಧಿ ಜನರು ಅಣುಸಂಹಾರದಿಂದಾಗಿ ಮೃತ್ಯುಪಡುವರು, ಹಾಗೆಯೇ ಭೀಕರ ನೈಸರ್ಗಿಕ ಆಪತ್ತು ಸಹ ಬರುವುದು, ಎಂದು ಸಂತರ ಭವಿಷ್ಯ ನುಡಿದಿದ್ದಾರೆ. ಆಪತ್ಕಾಲದಲ್ಲಿ ಸಾರಿಗೆ ಸಂಪರ್ಕದ ಸಾಧನಗಳು, ಡಾಕ್ಟರ್, ರೆಡಿಮೆಡ್(ತಯಾರಿಸಿರುವ) ಔಷಧಗಳು ಇತ್ಯಾದಿ ಸಿಗುತ್ತದೆಂಬುದು ಖಚಿತವಿಲ್ಲ. ಪ್ರಸ್ತುತ ಕೊರೋನಾದಿಂದಾಗಿ ಈ ಸ್ಥಿತಿಯು ಎಲ್ಲೆಡೆಗೆ ಅನುಭವಿಸುತ್ತಿದ್ದೇವೆ. ಆಪತ್ಕಾಲದಲ್ಲಿ ಆಯುರ್ವೇದದ ಔಷಧಿಯ ಗಿಡ ಮೂಲಿಕೆಗಳನ್ನು ಬಳಸಿ ಆರೋಗ್ಯರಕ್ಷಣೆಯನ್ನು ಮಾಡಿಕೊಳ್ಳಬೇಕಾಗಿದೆ. ಯೋಗ್ಯ ಸಮಯದಲ್ಲಿ ಯೋಗ್ಯವಾದ ಔಷಧಿ ವನಸ್ಪತಿಗಳು ಸಿಗಬೇಕೆಂದು ಅವು ನಮ್ಮ ಸುತ್ತಮುತ್ತಲೂ ಇರುವುದು ಆವಶ್ಯಕವಿದೆ. ಇದಕ್ಕಾಗಿ ಇಂತಹ ಔಷಧಿ ವನಸ್ಪತಿಗಳ ಕೃಷಿಯನ್ನು ಈಗಲೇ ಮಾಡಿಡುವುದು ಕಾಲದ ಆವಶ್ಯಕತೆ ಇದೆ ಎಂಬುದನ್ನು ಗಮನಿಸಬೇಕಿದೆ. ನೈಸರ್ಗಿಕ, ಹಾಗೆಯೇ ಮಾನವನಿರ್ಮಿತ ವಿವಿಧ ಕಾರಣಗಳಿಂದಾಗಿ ಅನೇಕ ಔಷಧಿ ವನಸ್ಪತಿಗಳು ದುರ್ಲಭವಾಗಿವೆ. ಅವುಗಳ ಕೃಷಿಯಿಂದ ಅವುಗಳ ಸಂವರ್ಧನೆಯೊಂದಿಗೆ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿಯೂ ಸಹಾಯವಾಗಲಿದೆ. ಮುಂಬರುವ ಹಿಂದೂ ರಾಷ್ಟ್ರದಲ್ಲಿ ಆಯುರ್ವೇದವೇ ಮುಖ್ಯ ಚಿಕಿತ್ಸಾ ಪದ್ಧತಿಯಾಗಿರಲಿದೆ. ಈ ದೃಷ್ಟಿಯಿಂದಲೂ ಆಯುರ್ವೇದದ ಸಂವರ್ಧನೆಗಾಗಿ ವನೌಷಧಿಗಳ ಕೃಷಿಯನ್ನು ಮಾಡುವುದು ಆವಶ್ಯಕವಾಗಿದೆ. ಆಯುರ್ವೇದವು ಭಾರತೀಯ ಶಾಸ್ತ್ರವಾಗಿದೆ. ಅದರ ಸಂವರ್ಧನೆಗಾಗಿ ಔಷಧಿ ವನಸ್ಪತಿಗಳ ಕೃಷಿಯನ್ನು ಮಾಡುವುದು ಪ್ರತಿಯೊಬ್ಬ ರಾಷ್ಟ್ರಪ್ರೇಮಿ ನಾಗರಿಕರ ಕರ್ತವ್ಯವಾಗಿದೆ.

ಮಧ್ಯಮ ಮತ್ತು ದೊಡ್ಡ ಭೂ ಮಾಲೀಕರು ಸಮಾಜ ಹಿತಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಔಷಧಿಗಳ ವನಸ್ಪತಿಗಳನ್ನು ನೆಡುವುದು ಅವರ ಸಮಷ್ಟಿ ಸಾಧನೆಯೇ ಆಗಿದೆ !
ಯಾವ ವ್ಯಕ್ತಿಗಳ ಬಳಿ ಮಧ್ಯಮ (೩-೪ ಎಕರೆ) ಅಥವಾ ದೊಡ್ಡ ಪ್ರಮಾಣದಲ್ಲಿ ಗಿಡ ನೆಡಲು ಯೋಗ್ಯವಾಗಿರುವ ಭೂಮಿ ಇದೆಯೋ, ಅಂತಹ ವ್ಯಕ್ತಿಗಳು ಕೇವಲ ತಮ್ಮ ಕುಟುಂಬದವರ ವಿಚಾರವನ್ನಷ್ಟೇ ಮಾಡದೇ, ಸಮಾಜ ಬಾಂಧವರ ವಿಚಾರವನ್ನು ಮಾಡಿ ದೊಡ್ಡ ಪ್ರಮಾಣದಲ್ಲಿ ಔಷಧಿ ವನಸ್ಪತಿಗಳನ್ನು ಬೆಳೆಸಬೇಕು. ಮುಂಬರುವ ಆಪತ್ಕಾಲದಲ್ಲಿ ಈ ವನಸ್ಪತಿಗಳಿಂದ ಅನೇಕ ಜನರಿಗೆ ಆಯುರ್ವೇದೀಯ ಔಷಧಿಗಳು ದೊರಕಿ, ಅವರ ಆರೋಗ್ಯ ರಕ್ಷಣೆಯಾಗುವುದು. ಈ ನಿಃಸ್ವಾರ್ಥಿ ಸಮಾಜಸೇವೆಯ ಮಾಧ್ಯಮದಿಂದ ಇಂತಹ ವ್ಯಕ್ತಿಗಳ ಸಮಷ್ಟಿ ಸಾಧನೆಯಾಗುವುದು.

ಈ ಲೇಖನದಲ್ಲಿ ನೀಡಿದ ಮಾಹಿತಿಯು ಸನಾತನದ ಗ್ರಂಥ ‘ಜಾಗದ ಲಭ್ಯತೆಗನುಸಾರ ಔಷಧಿ ಸಸ್ಯಗಳನ್ನು ಬೆಳೆಸಿ’ ಈ ಗ್ರಂಥದಿಂದ ಸಂಕಲನ ಮಾಡಲಾಗಿದೆ. ಸವಿಸ್ತಾರ ಮಾಹಿತಿಗಾಗಿ ವಾಚಕರು ಈ ಗ್ರಂಥವನ್ನು ಅವಶ್ಯವಾಗಿ ಓದಿ.

೧. ಔಷಧೀಯ ಸಸ್ಯಗಳನ್ನು ನೆಡುವ ಮೊದಲು ಗಮನಿಸಬೇಕಾದ ಅಂಶಗಳು

ಅ. ಔಷಧೀಯ ಸಸ್ಯಗಳ ಸಾಗುವಳಿಯನ್ನು ಮಳೆಗಾಲದ ಆರಂಭದಲ್ಲಿ, ಅಂದರೆ ೧೫ ಜೂನ್ನಿಂದ ೧೫ ಜುಲೈ ಈ ಕಾಲಾವಧಿಯಲ್ಲಿ ಮಾಡಿದರೆ ಅವುಗಳ ಬೆಳವಣಿಗೆಯು ಒಳ್ಳೆಯ ರೀತಿಯಲ್ಲಾಗುತ್ತದೆ.
ಆ. ಔಷಧೀಯ ಸಸ್ಯಗಳನ್ನು ನೆಡುವುದಕ್ಕಿಂತ ಮೊದಲು ಬೀಜ, ಸಸಿ, ಕುಂಡ ಇತ್ಯಾದಿ ವಸ್ತುಗಳನ್ನು ಸಂಗ್ರಹಿಸುವುದು, ಗುಂಡಿಗಳನ್ನು ತೋಡುವುದು ಇವೆಲ್ಲ ಪೂರ್ವಸಿದ್ಧತೆಯನ್ನು ಮಾಡಬೇಕಾಗುತ್ತದೆ.
ಇ. ಯಾವುದಾದರೊಂದು ಸಸ್ಯವನ್ನು ಎಷ್ಟು ಸಂಖ್ಯೆಯಲ್ಲಿ ನೆಡಬೇಕು, ಎಂಬುದನ್ನು ಪ್ರತಿಯೊಬ್ಬರೂ ತಮ್ಮ ಆವಶ್ಯಕತೆಗನುಸಾರ ತಾರತಮ್ಯದಿಂದ ನಿರ್ಧರಿಸಬೇಕು.
ಈ. ವಾಚಕರು ಆವಶ್ಯಕತೆಗನುಸಾರ ತಾರತಮ್ಯದಿಂದ ಸ್ಥಳೀಯ ತಜ್ಞರು ಅಥವಾ ವೈದ್ಯರೊಂದಿಗೆ ವಿಚಾರ ವಿನಿಮಯ ಮಾಡಿ ಗಿಡಗಳನ್ನು ನೆಡಬಹುದು.
ಉ. ಕುಟುಂಬದ ಇತರ ಸದಸ್ಯರಿಗೂ ಔಷಧೀಯ ಸಸ್ಯ ಗಳ ಪರಿಚಯ ಮಾಡಿಕೊಡಬೇಕು. ಔಷಧೀಯ ಸಸ್ಯಗಳ ಸ್ಥಳದಲ್ಲಿ ಅವುಗಳ ಹೆಸರಿನ ಫಲಕವನ್ನೂ ಹಾಕಬೇಕು. ಇದರಿಂದ ಎಲ್ಲರಿಗೂ ಆ ಸಸ್ಯದ ಪರಿಚಯವಾಗುವುದು.
ಊ. ಕಾಲವು ಯಾರಿಗಾಗಿಯೂ ನಿಲ್ಲುವುದಿಲ್ಲ, ಎಂಬುದನ್ನು ಅರಿತು ಸಮಯ ಕಳೆಯದೇ ಆದಷ್ಟು ಬೇಗ ತಮ್ಮ ಕ್ಷಮತೆಗನುಸಾರ ಔಷಧೀಯ ಸಸ್ಯಗಳನ್ನು ನೆಡುವ ಆಯೋಜನೆಯನ್ನು ಪೂರ್ಣಗೊಳಿಸಿರಿ.

೨. ಪ್ರಸ್ತುತ ಲೇಖನವನ್ನು ಓದುವಾಗ ಗಮನದಲ್ಲಿಡಬೇಕಾದ ಕೆಲವು ಅಂಶಗಳು

ಅ. ಈ ಲೇಖನದಲ್ಲಿ ಭಾರತದ ಬಹುತೇಕ ಭಾಗ ಗಳಲ್ಲಿ ಸಹಜವಾಗಿ ಬೆಳೆಯಬಲ್ಲ ಆಯ್ದ ಸಸ್ಯಗಳ ಮಾಹಿತಿಯನ್ನು ನೀಡಲಾಗಿದೆ.
ಆ. ಔಷಧಿ ಸಸ್ಯಗಳ ಹೆಸರುಗಳು ಪ್ರದೇಶಗಳಿಗನುಸಾರ ಬದಲಾಗಬಹುದು, ಇದನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು ಸಸ್ಯದ ಲ್ಯಾಟಿನ್ ಹೆಸರನ್ನೂ ನೀಡಲಾಗಿದೆ.
ಈ ಆಧಾರದಲ್ಲಿ ‘ಇಂಟರ್‌ನೆಟ್ನಿಂದ ಸಸ್ಯಗಳ ಛಾಯಾಚಿತ್ರಗಳು, ಹಾಗೆಯೇ ಇತರ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಇ. ಕೆಲವು ಔಷಧಿ ಸಸ್ಯಗಳನ್ನು ಗುರುತಿಸಲಾಗದಿದ್ದಲ್ಲಿ ಅವುಗಳ ಬಗ್ಗೆಯೂ ಸ್ಥಳೀಯ ತಜ್ಞರು ಅಥವಾ ವೈದ್ಯರಲ್ಲಿ ಕೇಳಿಕೊಳ್ಳಬೇಕು.
ಈ. ಈ ಲೇಖನದಲ್ಲಿ ನಮೂದಿಸಲಾದ ಔಷಧಿ ಸಸ್ಯಗಳ ಹೊರತು ಪಡಿಸಿ ಇತರ ಔಷಧಿ ಸಸ್ಯಗಳನ್ನೂ ಬೆಳೆಸಬಹುದು.

೩. ಪ್ರತಿಯೊಬ್ಬರಿಗೂ ಮನೆಯ ಮೊಗಸಾಲೆಯಲ್ಲಿಯೂ (ಬಾಲ್ಕನಿ) ನೆಡಲು ಸಾಧ್ಯವಾಗಬಲ್ಲ ಆಯ್ದ ಔಷಧಿ ಸಸ್ಯಗಳು 

ಮುಂದಿನ ಕೋಷ್ಟಕದಲ್ಲಿ ಎಲ್ಲೆಡೆ ಬೆಳೆಯ ಬಹುದಾದ ಹಾಗೂ ಅತಿ ಮಹತ್ವದ ೧೬ ಔಷಧೀಯ ವನಸ್ಪತಿಗಳ ಹೆಸರುಗಳನ್ನು ಕೊಡಲಾಗಿದೆ. ಪ್ರತಿ ಯೊಬ್ಬರು ಕಡಿಮೆಪಕ್ಷ ಇಷ್ಟಾದರೂ ವನಸ್ಪತಿಗಳನ್ನು ತಮ್ಮ ಮನೆಯ ಸುತ್ತಲೂ ನೆಡಬೇಕು. ಕೋಷ್ಟಕದಲ್ಲಿನ ವನಸ್ಪತಿಗಳ ಹೆಸರುಗಳನ್ನು ಪ್ರಾಧಾನ್ಯಕ್ರಮಕ್ಕನುಸಾರ ಕೊಡಲಾಗಿದೆ, ಅಂದರೆ ೧೬ ನೇ ಕ್ರಮಾಂಕದ ವನಸ್ಪತಿಗಿಂತ ೧೫ ನೇ ಕ್ರಮಾಂಕದ ವನಸ್ಪತಿಯು ಹೆಚ್ಚು ಮಹತ್ತ್ವದ್ದಾಗಿದೆ. ಈ ಕ್ರಮದಿಂದ ಮೊದಲನೇ ಕ್ರಮಾಂಕದ ವನಸ್ಪತಿಯು ಅತ್ಯಧಿಕ ಮಹತ್ತ್ವದ್ದಾಗಿದೆ. ಆದುದರಿಂದ ೧೬ ವನಸ್ಪತಿಗಳನ್ನು ಬೆಳೆಸುವುದು ಸಾಧ್ಯವಿಲ್ಲದಿದ್ದರೆ ಪ್ರಾಧಾನ್ಯ ಕ್ರಮಕ್ಕನುಸಾರ ಸಾಧ್ಯವಿದ್ದಷ್ಟು ವನಸ್ಪತಿಗಳನ್ನು ನೆಡಬೇಕು. ಈ ವನಸ್ಪತಿಗಳ ಸವಿಸ್ತಾರ ಔಷಧೀಯ ಉಪಯೋಗವನ್ನು ಸನಾತನದ ಗ್ರಂಥ ‘ಜಾಗದ ಲಭ್ಯತೆಗನುಸಾರ ಔಷಧಿ ಸಸ್ಯಗಳನ್ನು ಬೆಳೆಸಿ’ ಈ ಗ್ರಂಥದಲ್ಲಿ ಕೊಡಲಾಗಿದೆ. ಮನೆಯ ಸುತ್ತಲೂ ಸಾಕಷ್ಟು ಜಾಗವಿಲ್ಲದಿದ್ದರೆ ಮುಂದಿನ ಸಸ್ಯಗಳನ್ನು ಕುಂಡಗಳಲ್ಲಿ ಅಥವಾ ಪ್ಲಾಸ್ಟಿಕ್‌ನ ಚೀಲಗಳಲ್ಲಿ ನೆಟ್ಟು ಬಾಲ್ಕನಿಯಲ್ಲಿ ಅಥವಾ ಟೆರೇಸಿನಲ್ಲಿ ಇಡಬಹುದು. ಇವುಗಳ ಪೈಕಿ ಅಮೃತ ಬಳ್ಳಿ, ಜಾಜಿ, ವೀಳ್ಯದೆಲೆಯ ಬಳ್ಳಿ ಮತ್ತು ಸಂದುವಳ್ಳಿಯಂತಹ ಸಸ್ಯಗಳನ್ನು ಬೆಳೆಯಲು ಆಧಾರದ ಆವಶ್ಯಕತೆ ಇರುತ್ತದೆ. ನೆಕ್ಕಿ, ಆಡುಸೋಗೆ ಮತ್ತು ದಾಸವಾಳ ಈ ಸಸ್ಯಗಳನ್ನು ೩ ವರ್ಷಗಳ ವರೆಗೆ ಕುಂಡಗಳಲ್ಲಿ ಇಡಬಹುದು. ಈ ಸಸ್ಯಗಳ ಬೆಳವಣಿಗೆಯು ಹೆಚ್ಚಿರುವುದರಿಂದ ಅನಂತರ ಅವು ಗಳನ್ನು ಭೂಮಿಯಲ್ಲಿ ನೆಡಬೇಕಾಗುತ್ತದೆ; ಆದರೆ ನಿಯಮಿತವಾಗಿ ಕತ್ತರಿಸಿ ಅವುಗಳ ಬೆಳವಣಿಗೆಯನ್ನು ಮಿತಿಯಲ್ಲಿಟ್ಟರೆ ಅವುಗಳನ್ನು ಕುಂಡಗಳಲ್ಲಿಯೇ ಇಡಬಹುದು. ಈ ಸಸ್ಯಗಳು ಹೆಚ್ಚಿನ ರೋಗಗಳಲ್ಲಿ ಉಪಯುಕ್ತವಾಗಿರುವುದರಿಂದ ಪ್ರತಿಯೊಬ್ಬರೂ ಈ ಸಸ್ಯಗಳನ್ನು ತಮಗೆ ಸಾಧ್ಯವಿದ್ದಲ್ಲಿ ನೆಡಬೇಕು. ಜಾಗ ಉಳಿದರೆ ಇವುಗಳ ಹೊರತು ಇತರ ಸಸ್ಯಗಳನ್ನೂ ನೆಡಬಹುದು. ಜಾಗವು ಕಡಿಮೆಯಿದ್ದರೆ ಒಂದು ಮರದ ರ‍್ಯಾಕ್‌ನಲ್ಲಿ ಸಸ್ಯಗಳ ಕುಂಡಗಳನ್ನು ಒಂದರ ಮೇಲೆ ಒಂದರಂತೆ ಇಡಬಹುದು. ಈ ರ‍್ಯಾಕ್ನಲ್ಲಿನ ಎಲ್ಲ ಸಸ್ಯಗಳಿಗೆ ದಿನದಲ್ಲಿ ಕಡಿಮೆ ಅಂದರೆ ೩-೪ ಗಂಟೆ ಬಿಸಿಲು ತಾಗುವಂತೆ ಬಾಲ್ಕನಿ ಅಥವಾ ಟೆರೇಸಿನಲ್ಲಿ ಇಡಬೇಕು. ಯಾರ ಮನೆಯ ಸುತ್ತಲೂ ಜಾಗವಿದೆಯೋ ಅವರು ಇಂತಹ ಸಸ್ಯಗಳನ್ನು ಮನೆಯ ಸುತ್ತಲೂ ಬೆಳೆಸಬೇಕು. ಇವುಗಳಲ್ಲಿನ ಬಳ್ಳಿಗಳನ್ನು ದೊಡ್ಡ ಗಿಡಗಳ (ಸಾಧ್ಯವಿದ್ದರೆ ಬೇವಿನ) ಬಳಿ ಅಥವಾ ಬೇಲಿಯಲ್ಲಿ ನೆಡಬೇಕು.

ಕನ್ನಡ ಹೆಸರು ಲ್ಯಾಟಿನ್ ಹೆಸರು ರೋಗ ಔಷಧಿಗಾಗಿ ಉಪಯುಕ್ತ ಭಾಗ ನೆಡಲು ಬೇಕಾದ ಭಾಗ
1. ತುಳಸಿ Ocimum tenuiflorum ಹೆಚ್ಚಿನ ರೋಗಗಳು ಪಂಚಾಂಗ (ಟಿಪ್ಪಣಿ) ಬೀಜ
2. ಗರಿಕೆ Cynodon dactylon ಉಷ್ಣತೆ ಹಾಗೂ ಪಿತ್ತದ ಎಲ್ಲ ರೋಗಗಳು ಪಂಚಾಂಗ ಬೇರು
3. ಅಮೃತಬಳ್ಳಿ Tinospora cordifolia ಜ್ವರ, ರಕ್ತದೋಷ, ಸಂಧಿವಾತ, ಮಧುಮೇಹ ಹಾಗೂ ವೃದ್ಧಾಪ್ಯದ ಎಲ್ಲ ರೋಗಗಳು ಕಾಂಡ
(ಬಳ್ಳಿಯ ತುಂಡು)
ಬೀಜ ಅಥವಾ ಕತ್ತರಿಸಿದ ಕಾಂಡ
4. ನೆಲಬೇವು Andrographis paniculata ಜ್ವರ, ಜಂತು ಮತ್ತು ಪಿತ್ತದ ರೋಗ ಪಂಚಾಂಗ ಬೀಜ
5. ಲೋಳೆಸರ Aloe vera ಸುಟ್ಟಗಾಯ-ಬೆಂದಗಾಯ, ಮಾಸಿಕ ಸರದಿಗೆ ಸಂಬಂಧಿಸಿದ ರೋಗ, ಕೆಮ್ಮು, ಕಣ್ಣು ಹಾಗು ಯಕೃತ್ತಿನ ರೋಗ ಎಲೆಗಳಲ್ಲಿನ ತಿರುಳು ಬೇರಿನಲ್ಲಿ ಬರುವ ಹೊಸ ಸಸಿ
6. ಆಡುಸೋಗೆ Justicia adhatoda ಉಷ್ಣತೆ ಹಾಗೂ ಪಿತ್ತದ ಎಲ್ಲ ರೋಗಗಳು, ಶ್ವಸನಕ್ಕೆ ಸಂಬಂಧಿಸಿದ ರೋಗಗಳು ಪಂಚಾಂಗ ಕಾಂಡದ ತುಂಡು
7. ಜಾಜಿ Jasminum officinale ಬಾಯಿ ಹುಣ್ಣು, ಗಾಯ ಎಲೆ ಕಾಂಡದ ತುಂಡು
8. ಭೃಂಗರಾಜ Eclipta alba ಕಣ್ಣು, ಕೂದಲು ಮತ್ತು ಜೀರ್ಣಾಂಗ ವ್ಯವಸ್ಥೆಯ ರೋಗ ಪಂಚಾಂಗ ಬೀಜ ಅಥವಾ ಬೇರು
9. ವೀಳ್ಯದ ಎಲೆ Piper betle ಅಪಚನ, ವೀರ್ಯಾಣುಗಳ ಸಂಖ್ಯೆ ಅಲ್ಪವಿರುವುದು ಹಾಗೂ ಕಫದ ಎಲ್ಲ ರೋಗಗಳು ಎಲೆ ಕಾಂಡದ ತುಂಡು
10. ಮಜ್ಜಿಗೆ ಹುಲ್ಲು Cymbopogon citratus ನೆಗಡಿ, ಕೆಮ್ಮು, ಜ್ವರ ಮತ್ತು ಮೂತ್ರನಾಳ ಸೋಂಕು ಎಲೆ ಬೇರಿನಿಂದ ಬಂದ ಮೊಳಕೆ
11. ನೆಕ್ಕಿಗಿಡ (ಬಿಳಿ) Vitex negundo ಊತ, ಕೀಲುನೋವು, ವಾತ ಮತ್ತು ಕಿವಿಯ ರೋಗಗಳು ಬೀಜ ಮತ್ತು ಎಲೆ ಬೀಜ ಮತ್ತು ಕಾಂಡದ ತುಂಡು
12. ದಾಸವಾಳ Hibiscus rosa sinensis ಕೂದಲಿನ ರೋಗ ಹೂವು ಮತ್ತು ಎಲೆ ಕಾಂಡದ ತುಂಡು
13. ಉತ್ತರಣೆ ಗಿಡ Achyranthes aspera ಗುಲ್ಮದ ವಿಕಾರಗಳು, ಮೂತ್ರನಾಳದ ರೋಗಗಳು, ಮೂಲವ್ಯಾಧಿ ಪಂಚಾಂಗ ಬೀಜ ಮತ್ತು ಕಾಂಡದ ತುಂಡು
14. ಸಂದುವಳ್ಳಿ Cissus quadrangularis ಊತ, ಸಂಧಿವಾತ, ಮೂಳೆಮುರಿತ ಮತ್ತು ನೋವು ಕಾಂಡ ಕಾಂಡದ ತುಂಡು
15. ಚೆಂಡು ಹೂವು Tagetes erecta ಯಾವುದೇ ವಿಧದ ಹುಣ್ಣು, ಸುಟ್ಟಗಾಯ-ಬೆಂದಗಾಯ ಮತ್ತು ಕಣ್ಣಿನ ರೋಗ ಎಲೆ ಮತ್ತು ಹೂವು ಬೀಜ
16. ಕಾಡು ಬಸಳೆ Bryophyllum pinnatum ಮೂತ್ರನಾಳದ ರೋಗಗಳು ಎಲೆ ಎಲೆ

ಟಿಪ್ಪಣಿ – ‘ಪಂಚ’ ಅಂದರೆ ‘ಐದು’ ಮತ್ತು ‘ಅಂಗ’ ಅಂದರೆ ‘ಸಸ್ಯದ ಭಾಗಗಳು’. ಸಸ್ಯದ ಬೇರು, ಕಾಂಡ, ಎಲೆ, ಹೂವು ಮತ್ತು ಹಣ್ಣು ಈ ಐದೂ ಭಾಗಗಳನ್ನು ಒಟ್ಟಿಗೆ ‘ಪಂಚಾಂಗ’ ಎಂದು ಹೇಳುತ್ತಾರೆ. ಚಿಕ್ಕ ಔಷಧಿ ಸಸ್ಯಗಳ ಸಂದರ್ಭದಲ್ಲಿ ‘ಪಂಚಾಂಗ’ ಅಂದರೆ ”ಬೇರಿನೊಂದಿಗೆ ಸಂಪೂರ್ಣ ಸಸ್ಯ’.

೪. ಮೇಲಿನ ವನಸ್ಪತಿಗಳ ಕೃಷಿ ಮಾಡಿ ಉಳಿದ ಜಾಗದಲ್ಲಿ ನೆಡಬಹುದಾದ ಔಷಧಿ ವನಸ್ಪತಿಗಳ ಆಕಾರ ಮುಂತಾದ ಕ್ರಮಕ್ಕನುಸಾರ ಹೆಸರುಗಳು 

ಇದರಲ್ಲಿನ ಕೆಲವು ವನಸ್ಪತಿಗಳ ಸವಿಸ್ತಾರ ಔಷಧಿ ಉಪಯೋಗವನ್ನು ಸನಾತನದ ಮರಾಠಿ ಗ್ರಂಥ ‘೧೧೬ ವನಸ್ಪತಿಗಳ ಔಷಧಿ ಗುಣಧರ್ಮ’ ಮತ್ತು ‘೯೫ ವನಸ್ಪತಿಗಳ ಔಷಧಿ ಗುಣಧರ್ಮ’ ಇದರಲ್ಲಿ ನೀಡಲಾಗಿದೆ

೪ ಅ. ಚಿಕ್ಕ ಸಸ್ಯಗಳು (೧ ರಿಂದ ೨ ಅಡಿ ಬೆಳೆಯುವ ಗಿಡ)

ಕನ್ನಡ ಹೆಸರು ಲ್ಯಾಟಿನ್ ಹೆಸರು ರೋಗ ಔಷಧಿಗಾಗಿ ಉಪಯುಕ್ತ ಭಾಗ ನೆಡಲು ಬೇಕಾದ ಭಾಗ
1. ಮಾವು ಅರಿಶಿನ (ಮ್ಯಾಂಗೋ ಜಿಂಜರ್) Curcuma amada ಉಸಿರಾಟದ ವ್ಯವಸ್ಥೆಯ ಸಮಸ್ಯೆಗಳು, ಜ್ವರು ಮತ್ತು ಬಾವು ಗಡ್ಡೆ ಗಡ್ಡೆ
2. ಅಶ್ವಗಂಧ Withania somnifera ಕೂದಲು, ಕಣ್ಣು, ಉಸಿರಾಟದ ವ್ಯವಸ್ಥೆ ಮತ್ತು ವೀರ್ಯಾಣುಗಳಿಗೆ ಸಂಬಂಧಿಸಿದ ರೋಗಗಳು ಬೇರು ಬೀಜಗಳು
3. ಇಸಬ್‌ಗೋಲ್‌ Plantago ovata ಮಲಬದ್ಧತೆ ಬೀಜ ಬೀಜಗಳು
4. ಕೊಗ್ಗಿ Tephrosia purpurea ಕಾಮಾಲೆ, ಗುಲ್ಮ ಬೆಳೆಯುವುದು, ಯಕೃತ್ತಿನ ರೋಗಗಳು ಮತ್ತು ಮೂಲವ್ಯಾಧಿ ಪಂಚಾಂಗ ಬೀಜ, ಕಾಂಡದ ತುಂಡುಗಳು
5. ಅಣ್ಣೆಸೊಪ್ಪು Celosia argentea ಮೂತ್ರನಾಳದ ರೋಗಗಳು ಪಂಚಾಂಗ ಬೀಜ
6. ಕೊನ್ನಾರಿಗೆಡ್ಡೆ Cyperus rotundus ಜ್ವರ, ಪಿತ್ತದ ಮತ್ತು ಜೀರ್ಣಾಂಗ ವ್ಯವಸ್ಥೆಯ ರೋಗಗಳು ಗಡ್ಡೆ ಗಡ್ಡೆ
7. ಪರ್ಪಾಟ Fumaria officinalis ಉಷ್ಣತೆಯ ವಿಕಾರಗಳು ಮತ್ತು ಜ್ವರ ಪಂಚಾಂಗ ಬೀಜ
8. ಮೂರೆಲೆ ಹೊನ್ನಿ Uraria picta ಜ್ವರ, ಬಾವು ಮತ್ತು ಉಸಿರಾಟದ ವ್ಯವಸ್ಥೆಯ ಸಮಸ್ಯೆಗಳು ಪಂಚಾಂಗ ಬೀಜ, ಕಾಂಡದ ತುಂಡು
9. ಪುದೀನ Mentha spicata ಹಳೆಯ ಜ್ವರ, ಕೆಮ್ಮು, ಅಜೀರ್ಣ ಮತ್ತು ಜಂತುಗಳು ಪಂಚಾಂಗ ಬೀಜ
10. ಪುನರ್ನವ Boerhavia diffusa ಬಾವು ಹಾಗೆಯೆ ರಕ್ತ ಪರಿಚಲನೆ ಮತ್ತು ಮೂತ್ರನಾಳದ ಸಮಸ್ಯೆಗಳು ಪಂಚಾಂಗ ಬೀಜ ಅಥವಾ ಕಾಂಡದ ತುಂಡು
11. ಒಂದೆಲಗ Centella asiatica ಮೆದುಳಿನ, ಉಷ್ಣತೆಯ ಮತ್ತು ಪಿತ್ತದ ಸಮಸ್ಯೆ, ವೃದ್ಧಾಪ್ಯದ ಸಮಸ್ಯೆಗಳು ಪಂಚಾಂಗ ಕಾಂಡದ ತುಂಡು
12. ನೆಲನೆಲ್ಲಿ Phyllanthus urinaria ಯಕೃತ್ತಿನ ರೋಗಗಳು ಪಂಚಾಂಗ ಬೀಜ
13. ಲಾವಂಚ Vetiveria zizanioides ಉಷ್ಣತೆಯ, ಪಿತ್ತದ, ಮೂತ್ರನಾಳದ ಸಮಸ್ಯೆಗಳು ಬೇರು ಬೇರಿನಿಂದ ಬಂದ ಮೊಳಕೆ
14. ಬಜೆ Acorus calamus ತೊದಲುವಿಕೆ, ನೆನಪಿನ ಶಕ್ತಿ, ಉಸಿರಾಟದ ವ್ಯವಸ್ಥೆಯ ಸಮಸ್ಯೆಗಳು ಗಡ್ಡೆ ಬೇರಿನಿಂದ ಬಂದ ಮೊಳಕೆ, ಬೇರಿನ ತುಂಡು
15. ಸದಾಪುಷ್ಪ Catharanthus roseus ಮಧುಮೇಹ, ಅರ್ಬುದ ರೋಗ ಪಂಚಾಂಗ ಬೀಜ, ಕಾಂಡದ ತುಂಡು
16. ಸರ್ಪಗಂಧಿ Rauvolfia serpentina ರಕ್ತದೊತ್ತಡ, ನಿದ್ರಾಹೀನತೆ, ಹೊಟ್ಟೆಯ ಸಮಸ್ಯೆಗಳು ಬೇರು ಬೀಜ, ಕಾಂಡದ ತುಂಡು
17. ಒಂದೆಲೆ ಹೊನ್ನೆ Desmodium gangeticum ಜ್ವರ, ಹೃದ್ರೋಗಗಳು ಪಂಚಾಂಗ ಬೀಜ
18. ಅರಿಶಿನ Curcuma longa ನೆಗಡಿ, ಕೆಮ್ಮು, ಕಫ, ಮೇದಸ್ಸಿನ ರೋಗಗಳು, ಮಧುಮೇಹ, ಸ್ತನದ ರೋಗಗಳು ಗಡ್ಡೆ ಗಡ್ಡೆ

೪ ಆ. ಬಳ್ಳಿಗಳು

ಕನ್ನಡ ಹೆಸರು ಲ್ಯಾಟಿನ್ ಹೆಸರು ರೋಗ ಔಷಧಿಗಾಗಿ ಉಪಯುಕ್ತ ಭಾಗ ನೆಡಲು ಬೇಕಾದ ಭಾಗ
1. ಸೊಗದೆ ಬೇರು Hemidesmus indicus ರಕ್ತ ಮತ್ತು ಚರ್ಮದ ರೋಗಗಳು ಬೇರು ಬೀಜ, ಕಾಂಡದ ತುಂಡುಗಳು
2. ಕಾಡು ಪಡವಲ Trichosanthes dioica ಪಿತ್ತದ ಮತ್ತು ಚರ್ಮ ರೋಗಗಳು ಪಂಚಾಂಗ ಬೀಜ
3. ಬೂದು ಕುಂಬಳ ಕಾಯಿ Benincasa hispida ಪಿತ್ತ, ಮೆದುಳು ಮತ್ತು ಮೂತ್ರನಾಳದ ಸಮಸ್ಯೆಗಳು ಹಣ್ಣುಗಳು ಬೀಜ
4. ಪಾದಾವಲಿ Cyclea peltata ಕಣ್ಣಿನ ರೋಗ ಪಂಚಾಂಗ ಬೀಜ, ಸಸಿ
5. ಹಿಪ್ಪಲಿ Piper longum ಉಸಿರಾಟದ ಮತ್ತು ಜೀರ್ಣಾಂಗ ವ್ಯವಸ್ಥೆಯ ರೋಗಗಳು ಬೇರು, ಹಣ್ಣು ಕಾಂಡದ ತುಂಡು
6. ಕಾಲು ಮೆಣಸು Piper nigrum ಉಸಿರಾಟದ ಮತ್ತು ಜೀರ್ಣಾಂಗ ವ್ಯವಸ್ಥೆಯ ರೋಗಗಳು ಹಣ್ಣುಗಳು ಕಾಂಡದ ತುಂಡು
7. ದುಂಡು ಮಲ್ಲಿಗೆ Jasminum sambac ಪಿತ್ತಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೂವು, ಎಳೆಗಳು ಕಾಂಡದ ತುಂಡು
8. ಶತಾವರಿ Asparagus racemosus ಜ್ವರ, ನಿಶ್ಯಕ್ತಿ ಮತ್ತು ಜನನೇಂದ್ರಿಯಗಳ ಸಮಸ್ಯೆಗಳು ಬೇರು ಬೇರು, ಬೀಜ
9. ಈಶ್ವರಿ ಬಳ್ಳಿ Aristolochia indica ಸರ್ಪದ ವಿಷಬಾಧೆ, ಚಿಕ್ಕಮಕ್ಕಳಿಗೆ ಬರುವ ಹೊಟ್ಟೆ ನೋವು, ಭೇದಿ ಪಂಚಾಂಗ ಕಾಂಡದ ತುಂಡು

(ಆಧಾರ : ಸನಾತನ ಗ್ರಂಥ ಜಾಗದ ಲಭ್ಯತೆಗನುಸಾರ ಔಷಧಿ ಸಸ್ಯಗಳನ್ನು ಬೆಳೆಸಿ)

೪ ಇ. ಗಿಡ (೨ ಅಡಿಗಿಂತ ಹೆಚ್ಚು ಬೆಳೆಯುವ ಗಿಡಗಳು)

ಕನ್ನಡ ಹೆಸರು ಲ್ಯಾಟಿನ್ ಹೆಸರು ರೋಗ ಔಷಧಿಗಾಗಿ ಉಪಯುಕ್ತ ಭಾಗ ನೆಡಲು ಬೇಕಾದ ಭಾಗ
1. ಹರಳುಗಿಡ Ricinus communis ವಾತದ ಸಮಸ್ಯೆ, ಹೊಟ್ಟೆಯ ರೋಗಗಳು, ದಮ್ಮು ಎಲೆ, ಬೇರು, ಬೀಜ ಬೀಜ, ಕಾಂಡದ ತುಂಡು
2. ಕರಿಬೇವು Murraya koenigii ಹೃದಯ ಮತ್ತು ಯಕೃತ್ತಿನ ರೋಗಗಳು ಎಳೆಗಳು ಬೀಜ ಅಥವಾ ಸಸಿ
3. ಮದರಂಗಿ Lawsonia inermis ಕೂದಲಿನ, ವಾತದ ಸಮಸ್ಯೆಗಳು ಎಲೆ, ಬೀಜಗಳು ಬೀಜ, ಕಾಂಡದ ತುಂಡು
4. ಮರಗೆಣಸು Manihot esculenta ನಿಶ್ಯಕ್ತಿ ಗಡ್ಡೆ ಗಡ್ಡೆ

೪ ಈ. ಮರಗಳು

ಕನ್ನಡ ಹೆಸರು ಲ್ಯಾಟಿನ್ ಹೆಸರು ರೋಗ ಔಷಧಿಗಾಗಿ ಉಪಯುಕ್ತ ಭಾಗ ನೆಡಲು ಬೇಕಾದ ಭಾಗ
1. ನೆಲ್ಲಿಕಾಯಿ Emblica officinalis ಹೊಟ್ಟೆ, ಪಿತ್ತ, ಕೂದಲಿನ ಸಮಸ್ಯೆಗಳು, ವೃದ್ಧಾಪ್ಯದ ಸಮಸ್ಯೆಗಳು ಹಣ್ಣು ಬೀಜ, ಕಸಿ
2. ಕಹಿಬೇವು Azadirachta indica ಗಾಯ, ಮಧುಮೇಹ ಚರ್ಮರೋಗಗಳು ತೊಗಟೆ, ಎಲೆ, ಹಣ್ಣುಗಳು ಬೀಜ
3. ಕುಟಜ Holarrhena pubescens ಭೇದಿ, ಆಮಶಂಕೆ, ಮೂಲವ್ಯಾಧಿ ಬೀಜ, ಬೇರು, ತೊಗಟೆ ಬೀಜ
4. ಬಾಳೆ Musa sapientum ನಿಶ್ಯಕ್ತಿ, ಮೂತ್ರನಾಳದ ರೋಗಗಳು ಪಂಚಾಂಗ ಬಾಳೆ ಕಂದು
5. ಪಾರಿಜಾತ Nyctanthes arbor-tristis ಸಂಧಿವಾತ, ಪಿತ್ತದ ಸಮಸ್ಯೆಗಳು ತೊಗಟೆ, ಎಲೆ, ಹೂವು ಕಾಂಡದ ತುಂಡು
6. ಕೊಮ್ಮೆ Cassia fistula ಜ್ವರ, ಚರ್ಮರೋಗಗಳು, ಮಲಬದ್ಧತೆ ತೊಗಟೆ, ಎಲೆ, ಕಾಯಿ ಬೀಜ
7. ಬಿಲ್ವ Aegle marmelos ಮಧುಮೇಹ, ರಕ್ತಹೀನತೆ (ಅನೀಮಿಯಾ) ಬೇರು, ತೊಗಟೆ, ಎಲೆ, ಹಣ್ಣು ಬೀಜ
8. ನುಗ್ಗೆಕಾಯಿ Moringa oleifera ಕುರು, ಕಫದ ಸಮಸ್ಯೆಗಳು ತೊಗಟೆ, ಎಲೆ, ಹೂವು, ಕಾಯಿ ಬೀಜ, ಕಾಂಡದ ತುಂಡು
9. ಅಶೋಕ Saraca asoca ಸ್ತ್ರೀಯರ ಸಮಸ್ಯೆಗಳು ತೊಗಟೆ ಬೀಜ

೫. ಕೃಷಿಗಾಗಿ ಔಷಧಿ ಸಸ್ಯಗಳ ಬೀಜ, ಸಸಿ ಇತ್ಯಾದಿಗಳು ಎಲ್ಲಿ ದೊರೆಯುತ್ತವೆ ?

೫ ಅ. ಔಷಧಿ ಸಸ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಸಸಿಗಳು ದೊರೆಯುವ ಸ್ಥಳಗಳು

೫ ಅ ೧. ಸ್ಥಳೀಯ ಆರೋಗ್ಯ ಪರಂಪರೆಗಳ ಪುನರುತ್ಥಾನ ಪ್ರತಿಷ್ಠಾನ, ಬೆಂಗಳೂರು. ದೂ. (೦೮೦) ೨೮೫೬೮೦೦೦
ಅ ೨. ಕರ್ನಾಟಕ ರಾಜ್ಯ ಗಿಡಮೂಲಿಕೆ ಔಷಧಿ ಪ್ರಾಧಿಕಾರ, ಬೆಂಗಳೂರು. ದೂ. (೦೮೦) ೨೩೪೬೪೦೮೯
ವಿಳಾಸ : ನಂ. ೪೦೧, ೪ನೇ ಮಹಡಿ, ವನ ವಿಕಾಸ, ೧೮ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು – ೦೩
ಅ ೩. ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ. ದೂ. (೦೮೦) ೨೩೦೮೬೧೦೦

೫ ಆ. ಇತರ ರಾಜ್ಯಗಳಲ್ಲಿನ ಮಹತ್ವದ ಸರಕಾರಿ ಸಂಸ್ಥೆಗಳು
ಅ. ಸಿಎಸ್‌ಐಆರ್ – ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಸಿನಲ್ ಆಂಡ್ ಅರೋಮ್ಯಾಟಿಕ್ ಪ್ಲ್ಯಾಂಟ್ಸ್ (ಸೀಮ್ಯಾಪ್), ಲಖ್ನೌ, ಉತ್ತರಪ್ರದೇಶ (೦೫೨೨-೨೭೧೮೬೨೯)
ಆ. ಡೈರೆಕ್ಟೊರೇಟ್ ಆಫ್ ಮೆಡಿಸಿನಲ್ ಆಂಡ್ ಅರೋಮ್ಯಾಟಿಕ್ ಪ್ಲ್ಯಾಂಟ್ಸ್ ರಿಸರ್ಚ್, ಬೋರಿಯಾವಿ, ಗುಜರಾತ. (೦೨೬೯೨ – ೨೭೧೬೦೨)
ಇ. ಜವಾಹರಲಾಲ ನೆಹರು ಕೃಷಿ ವಿಶ್ವವಿದ್ಯಾಲಯ, ಜಬಲಪುರ, ಮಧ್ಯಪ್ರದೇಶ (೦೭೬೧-೨೬೮೧೭೦೬)

೫ ಇ. ಇತರ ಸ್ಥಳಗಳು
೧. ಹಳ್ಳಿಗಳಲ್ಲಿ, ಹಾಗೆಯೇ ಅವುಗಳ ಹತ್ತಿರದ ಅರಣ್ಯಗಳಲ್ಲಿ ಬಹಳಷ್ಟು ಔಷಧಿ ಸಸ್ಯಗಳು ದೊರೆಯುತ್ತವೆ. ಅಲ್ಲಿನ ವಯಸ್ಕರ ಜನರಿಗೆ ಈ ಸಸ್ಯಗಳ ಬಗ್ಗೆ ಗೊತ್ತಿರುತ್ತದೆ. ನಗರಗಳಲ್ಲಿರುವ ಹೆಚ್ಚಿನ ಜನರು ರಜೆಯ ನಿಮಿತ್ತ ತಮ್ಮ ಹಳ್ಳಿಗಳಿಗೆ (ಊರಿಗೆ) ಹೋಗುತ್ತಿರುತ್ತಾರೆ. ಇಂತಹ ಸಮಯದಲ್ಲಿ ತಮಗೆ ಬೇಕಾದ ಸಸ್ಯಗಳ ಬೀಜ ಅಥವಾ ಸಸಿಗಳನ್ನು ತಮ್ಮ ಊರಿನಿಂದ ತರಬಹುದು.
೨. ಪ್ರತಿಯೊಂದು ರಾಜ್ಯದ ತೋಟಗಾರಿಕೆ ಇಲಾಖೆ ಯಲ್ಲಿ, ಹಾಗೆಯೇ ಅರಣ್ಯ ಇಲಾಖೆಯಲ್ಲಿ ಔಷಧಿ ಸಸ್ಯಗಳು ಅಥವಾ ಆ ಸಸ್ಯಗಳು ಎಲ್ಲಿ ದೊರೆಯುತ್ತವೆ, ಎಂಬುದರ ಮಾಹಿತಿ ದೊರೆಯುತ್ತದೆ.
೩. ಬಹಳಷ್ಟು ಆಯುರ್ವೇದೀಯ ಮಹಾವಿದ್ಯಾಲಯಗಳಲ್ಲಿ ಸಸ್ಯಪಾಲನ ಕ್ಷೇತ್ರಗಳಿರುತ್ತವೆ. ಸ್ಥಳೀಯ ಆಯುರ್ವೇದೀಯ ಮಹಾವಿದ್ಯಾಲಯಗಳನ್ನು ಸಂಪರ್ಕಿಸಿ ಔಷಧಿ ಸಸ್ಯಗಳನ್ನು ಪಡೆಯಬಹುದು.

(ಆಧಾರ : ಸನಾತನ ಗ್ರಂಥ ‘ಜಾಗದ ಲಭ್ಯತೆಗನುಸಾರ ಔಷಧಿ ಸಸ್ಯಗಳನ್ನು ಬೆಳೆಸಿ)

ಆಪತ್ಕಾಲದ ದೃಷ್ಟಿಯಿಂದ ಮಣ್ಣಿನ ಕುಂಡಗಳಿಗಿಂತ ಇತರ ಪರ್ಯಾಯಗಳನ್ನು ಉಪಯೋಗಿಸುವುದು ಹೆಚ್ಚು ಒಳ್ಳೆಯದು
‘ಮಣ್ಣಿನ ಕುಂಡಗಳಲ್ಲಿ ಗಿಡಗಳನ್ನು ನೆಡುವುದು ಗಿಡಗಳ ಬೆಳವಣಿಗೆ ದೃಷ್ಟಿಯಿಂದ ಆದರ್ಶವಾಗಿದೆ; ಆದರೆ ಮಣ್ಣಿನ ಕುಂಡಗಳನ್ನು ಎತ್ತಿಡುವಾಗ ಒಡೆಯಬಹುದು. ಆಪತ್ಕಾಲದಲ್ಲಿ ಏನಾಗಬಹುದು ಎಂದು ಹೇಳಲಾಗುವುದಿಲ್ಲ. ಆದ್ದರಿಂದ ಕುಂಡಗಳು ಒಡೆದು ಆಗುವ ಹಾನಿಯನ್ನು ತಡೆಯಲು ಈ ಅವಧಿಯಲ್ಲಿ ಮಣ್ಣಿನ ಕುಂಡಗಳಿಗಿಂತ ತಗಡಿನ ಪಿಪಾಯಿ, ಎಣ್ಣೆಯ ತಗಡಿನ ಡಬ್ಬಿಗಳು, ಪ್ಲಾಸ್ಟಿಕ ಗೋಣಿಚೀಲಗಳು, ಚೀಲಗಳು, ಡಬ್ಬಿ ಅಥವಾ ಪಿಪಾಯಿ ಇತ್ಯಾದಿ ಪರ್ಯಾಯ ವಸ್ತುಗಳನ್ನು ಉಪಯೋಗಿಸುವುದು ಬಹಳ ಒಳ್ಳೆಯದು. ಈ ಪರ್ಯಾಯ ವಸ್ತುಗಳಿಂದ ಹೆಚ್ಚಿನ ನೀರು ಹರಿದು ಹೋಗಲು ಅದರ ಬುಡದಿಂದ ಅರ್ಧ ಇಂಚು ಎತ್ತರದ ಮೇಲೆ ೨-೩ ತೂತುಗಳನ್ನು ಮಾಡಬೇಕು. ಬುಡದಲ್ಲಿ ತೂತುಗಳನ್ನು ಮಾಡಿದರೆ ಗಿಡಗಳ ಬೇರುಗಳು ನೆಲದಲ್ಲಿ ಹೋಗುವ ಸಾಧ್ಯತೆ ಅಧಿಕವಿರುತ್ತದೆ, ಆದ್ದರಿಂದ ಬುಡದಲ್ಲಿ ತೂತುಗಳನ್ನು ಮಾಡಬಾರದು.
– ಶ್ರೀ. ಮಾಧವ ರಾಮಚಂದ್ರ ಪರಾಡಕರ, ಡಿಚೋಲಿ, ಗೋವಾ (೨೮.೫.೨೦೨೦)

Leave a Comment