೫ ಸಾವಿರ ವರ್ಷಕ್ಕಿಂತಲೂ ಹಳೆಯ ಪರಂಪರೆಯುಳ್ಳ ಆಯುರ್ವಸ್ತ್ರ / ಆಯುರ್ವೇದಿಕ್ ವಸ್ತ್ರ !

ವ್ಯಾಧಿ-ನಿರ್ಮೂಲನೆಗಾಗಿ ಉಪಯೋಗಿಸುವ ಹಾಗೂ ೫ ಸಾವಿರ ವರ್ಷಕ್ಕಿಂತಲೂ ಹಳೆಯ ಪರಂಪರೆಯುಳ್ಳ ಆಯುರ್ವಸ್ತ್ರ ಅಂದರೆ ಆಯುರ್ವೇದಿಕ್ ವಸ್ತ್ರ !

೧. ಆಯುರ್ವಸ್ತ್ರವೆಂದರೇನು ?

ಆಯುರ್ವಸ್ತ್ರ ಈ ಶಬ್ದ ಆಯುರ್ ಮತ್ತು ವಸ್ತ್ರ ಈ ಎರಡು ಶಬ್ದಗಳ ಸಂಧಿಯಿಂದ ನಿರ್ಮಾಣವಾಗಿದೆ. ಆಯುರ್ವೇದದಲ್ಲಿ ಔಷಧಿಯೆಂದು ಉಪಯೋಗಿಸುವ ಅನೇಕ ವನಸ್ಪತಿಗಳ ಅರ್ಕಗಳಿಂದ ಪ್ರಕ್ರಿಯೆ ಮಾಡಿದ ಬಟ್ಟೆಗೆ ‘ಆಯುರ್ವಸ್ತ್ರ’ವೆಂದು ಹೇಳುತ್ತಾರೆ. ಈ ಬಟ್ಟೆಯಿಂದ ವಿವಿಧ ವಿಧದ ಬಟ್ಟೆಗಳು, ಹಾಸಿಗೆಯ ಹೊದಿಕೆ(ಬೆಡ್‌ಶೀಟ್), ದಿಂಬಿನ ಹೊದಿಕೆ ಇತ್ಯಾದಿ ವಸ್ತುಗಳನ್ನು ತಯಾರಿಸುತ್ತಾರೆ.

೨. ಆಯುರ್ವಸ್ತ್ರದ ಇತಿಹಾಸ

ಶ್ರೀ. ರಾಜನ್

ಆಯುರ್ವಸ್ತ್ರವನ್ನು ತಯಾರಿಸುವ ಪರಂಪರೆಯು ೫ ಸಾವಿರ ವರ್ಷಗಳಿಗಿಂತಲೂ ಹೆಚ್ಚು ಹಳೆಯದಾಗಿದೆ. ಕೇರಳದ ತಿರುವನಂತಪುರಮ್ ಜಿಲ್ಲೆಯ ಬಲರಾಮಪುರಮ್‌ನ ‘ಆಯುರ್ವಸ್ತ್ರ’ಗಳ ನಿರ್ಮಾಪಕ ಶ್ರೀ. ರಾಜನ್ ಇವರು ನೀಡಿದ ಮಾಹಿತಿಗನುಸಾರ, ಹಿಂದಿನ ಕಾಲದಲ್ಲಿ ಯುದ್ಧದಲ್ಲಿ ಅನೇಕ ಸೈನಿಕರು ಗಾಯಗೊಂಡಾಗ ಅವರ ಗಾಯಕ್ಕೆ ಔಷಧದ ಲೇಪದ ಪಟ್ಟಿಗಳನ್ನು ಕಟ್ಟುವ ಬದಲು ಒಂದು ವಿಶಾಲವಾದ ಸ್ಥಳದಲ್ಲಿ ಔಷಧಿ ವನಸ್ಪತಿಯ ಅರ್ಕಗಳಲ್ಲಿ ಮುಳುಗಿಸಿದ ದೊಡ್ಡ ವಸ್ತ್ರವನ್ನು ಹೊದ್ದು ಅವರನ್ನು ಮಲಗಿಸುತ್ತಿದ್ದರು. ಈ ವಸ್ತ್ರಕ್ಕೆ ‘ಆಯುರ್ವಸ್ತ್ರ’ ಎಂದು ಹೇಳುತ್ತಿದ್ದರು. ರೋಗಿಯ ವ್ಯಾಧಿಗನುಸಾರ ಅವರಿಗೆ ವಿಶಿಷ್ಟ ವನಸ್ಪತಿಗಳ ಅರ್ಕಗಳಲ್ಲಿ ಪ್ರಕ್ರಿಯೆ ಮಾಡಿದ ವಸ್ತ್ರಗಳನ್ನು ಉಪಯೋಗಿಸಲು ಕೊಡುತ್ತಿದ್ದರು. ಆಯುರ್ವಸ್ತ್ರವು ಶರೀರದ ಸಂಪರ್ಕಕ್ಕೆ ಬಂದಾಗ ಚರ್ಮದ ಮೇಲಿನ ಛಿದ್ರಗಳ ಮೂಲಕ ಅದರಲ್ಲಿನ ಸೂಕ್ಷ್ಮ ಔಷಧಿಯ ಘಟಕಗಳು ಶರೀರದೊಳಗೆ ಶೋಷಿಸಲ್ಪಡುತ್ತಿತ್ತು ಹಾಗೂ ಗಂಧದ ಮೂಲಕವೂ ಔಷಧಿ ವನಸ್ಪತಿಗಳ ಸೂಕ್ಷ್ಮ ಅಂಶಗಳು ಶರೀರದೊಳಗೆ ಪ್ರವೇಶಿಸುತ್ತವೆ ಮತ್ತು ವ್ಯಾಧಿ ನಿವಾರಣೆಯಾಗಲು ಸಹಾಯವಾಗುತ್ತದೆ. ಹಿಂದಿನ ಕಾಲದಲ್ಲಿ ಧರ್ಮಗುರುಗಳ (ವಿಶೇಷವಾಗಿ ಸಂನ್ಯಾಸಿಗಳ) ವಸ್ತ್ರಗಳು ರಕ್ತಚಂದನ ಇತ್ಯಾದಿ ವನಸ್ಪತಿಗಳ ಅರ್ಕಗಳಲ್ಲಿ ಪ್ರಕ್ರಿಯೆ ಮಾಡಿದ ಆಯುರ್ವಸ್ತ್ರ ಆಗಿರುತ್ತಿದ್ದವು.

೩. ಆಯುರ್ವಸ್ತ್ರವನ್ನು ತಯಾರಿಸುವ ಶ್ರೀ. ರಾಜನ್ ಮತ್ತು ಅವರ ಕುಟುಂಬದವರು

ಯಾವ ವ್ಯಾಧಿಗೆ ಯಾವ ವನಸ್ಪತಿಯ ಅರ್ಕದಲ್ಲಿ ಪ್ರಕ್ರಿಯೆ ಮಾಡಿದ ವಸ್ತ್ರವನ್ನು ಉಪಯೋಗಿಸಬೇಕೆನ್ನುವುದರ ಒಂದು ಶಾಸ್ತ್ರವಿದೆ. ಅನೇಕ ಪೀಳಿಗೆಗಳಿಂದ ಅನುಭವ ಪಡೆದಿರುವ ಜ್ಞಾನದ ಆಧಾರದಲ್ಲಿ ಶ್ರೀ. ರಾಜನ್ ಮತ್ತು ಅವರ ಕುಟುಂಬದವರು ವಿವಿಧ ವ್ಯಾಧಿಗಳಿಗನುಸಾರ ಕಳೆದ ಅನೇಕ ವರ್ಷಗಳಿಂದ ಆಯುರ್ವಸ್ತ್ರಗಳನ್ನು ನಿರ್ಮಿಸುತ್ತಿದ್ದಾರೆ. ಈ ವಸ್ತ್ರಗಳ ಉತ್ಪಾದನೆಗೆ ಒಂದು ಮಿತಿಯಿದೆ; ಆದರೆ ವಿದೇಶದಲ್ಲಿ ಈ ವಸ್ತ್ರಗಳಿಗೆ ಹೆಚ್ಚು ಬೇಡಿಕೆ ಇರುವುದರಿಂದ ಅನೇಕ ವ್ಯಾಪಾರಿಗಳು ಈ ವಸ್ತ್ರಗಳನ್ನು ವಿದೇಶಗಳಲ್ಲಿ ಮಾರಾಟ ಮಾಡುತ್ತಾರೆ. ಆದ್ದರಿಂದ ಭಾರತದಲ್ಲಿ ಈ ವಸ್ತ್ರಗಳಿಗೆ ಹೆಚ್ಚಿನ ಪ್ರಸಿದ್ಧಿ ಸಿಗಲಿಲ್ಲವೆಂದು ಕಾಣಿಸುತ್ತದೆ.

೪. ಆಯುರ್ವಸ್ತ್ರವನ್ನು ತಯಾರಿಸುವ ಪ್ರಕ್ರಿಯೆ

ಆಯುರ್ವಸ್ತ್ರವನ್ನು ತಯಾರಿಸುವುದು ಒಂದು ಪಾರಂಪರಿಕ ಕಲೆಯಾಗಿದೆ. ಈ ವಸ್ತ್ರಗಳಿಗೆ ಪ್ರಕ್ರಿಯೆ ಮಾಡಲು ೫೦ ಕ್ಕಿಂತಲೂ ಹೆಚ್ಚು ವನಸ್ಪತಿಗಳ ಅರ್ಕಗಳನ್ನು ಉಪಯೋಗಿಸಲಾಗುತ್ತದೆ. ‘ಈ ಪ್ರಕ್ರಿಯೆಯಲ್ಲಿ ವನಸ್ಪತಿಗಳನ್ನು ಸಂಗ್ರಹಿಸುವುದು, ಅವುಗಳನ್ನು ಶೇಖರಣೆ ಮಾಡುವುದು, ಅವುಗಳ ಕಷಾಯ ಮಾಡುವುದು, ವಸ್ತ್ರಗಳಿಗೆ ಬಣ್ಣ ಹಾಕುವುದು, ಅವುಗಳನ್ನು ಒಣಗಿಸುವುದು’ ಇತ್ಯಾದಿ ವಿವಿಧ ಹಂತಗಳು, ಅವುಗಳ ಕ್ರಮ ಇತ್ಯಾದಿ ವಿಷಯಗಳ ಪರಂಪಾರಗತ ಆಚಾರಗಳ ಪಾಲನೆ ಮಾಡಲಾಗುತ್ತದೆ. ಆಯುರ್ವಸ್ತ್ರಗಳನ್ನು ತಯಾರಿಸುವ ಹಂತಗಳು ಈ ಮುಂದಿನಂತಿವೆ.

೪ ಅ. ಲೋಳೆಸರ ಮತ್ತು ಗೋಅರ್ಕದಿಂದ ಬಟ್ಟೆಗಳನ್ನು ‘ಬ್ಲೀಚಿಂಗ್’ ಮಾಡುವುದು : ಪ್ರಕ್ರಿಯೆಗಾಗಿ ತಂದಿರುವ ಬಟ್ಟೆಗಳಲ್ಲಿನ ದೋಷಗಳು ದೂರವಾಗಬೇಕೆಂದು ಲೋಳೆಸರ ಮತ್ತು ಗೋಅರ್ಕದ ಮಿಶ್ರಣವನ್ನು ಉಪಯೋಗಿಸಿ ಬಟ್ಟೆಗಳನ್ನು ‘ಬ್ಲೀಚಿಂಗ್’ ಮಾಡಲಾಗುತ್ತದೆ.

೪ ಆ. ವನಸ್ಪತಿಗಳ ಕಷಾಯ ಮಾಡುವುದು : ತುಳಸಿ, ಲಾವಂಚ, ಕಸ್ತೂರಿ, ಅರಶಿನ ಇತ್ಯಾದಿ ಸುಮಾರು ೫೦ ವಿಧದ ವನಸ್ಪತಿಗಳನ್ನು ನೀರಿನಲ್ಲಿ ಕುದಿಸಿ ಅವುಗಳಿಂದ ಕಷಾಯ ತಯಾರಿಸಲಾಗುತ್ತದೆ.

೪ ಇ. ಬಟ್ಟೆಗಳಿಗೆ ಬಣ್ಣ ಬಳಿಯುವುದು : ಈ ಕಷಾಯದಲ್ಲಿ ‘ಬ್ಲೀಚ’ ಮಾಡಿದ ಬಟ್ಟೆಯನ್ನು ನೆನೆಸಿಡಲಾಗುತ್ತದೆ. ಬಟ್ಟೆಗೆ ಬಳಿಯುವ ಬಣ್ಣ ಮತ್ತು ಬಟ್ಟೆ ಯಾವ ವ್ಯಾಧಿಗೆ ಚಿಕಿತ್ಸೆಯೆಂದು ಉಪಯೋಗಿಸಲಾಗುವುದೋ, ಅದಕ್ಕನುಸಾರ ವಿವಿಧ ಪ್ರಕಾರದ ಕಷಾಯಗಳನ್ನು ಉಪಯೋಗಿಸಲಾಗುತ್ತದೆ.

೪ ಈ. ಬಟ್ಟೆಗಳನ್ನು ಒಣಗಿಸುವುದು : ಕಷಾಯದಲ್ಲಿ ಪ್ರಕ್ರಿಯೆ ಮಾಡಿದ ಬಟ್ಟೆಗಳನ್ನು ನೆರಳಿನಲ್ಲಿ ಒಣಗಿಸಲಾಗುತ್ತದೆ.

೪ ಉ. ವಸ್ತ್ರಗಳನ್ನು ತಯಾರಿಸುವುದು : ಒಣಗಿಸಿದ ಬಟ್ಟೆಗಳಿಂದ ಶರ್ಟ್, ಜುಬ್ಬಾ, ಸೀರೆ ಮುಂತಾದ ವಸ್ತ್ರಗಳು ಮತ್ತು ಹಾಸಿಗೆಯ ಹೊದಿಕೆ, ದಿಂಬಿನ ಹೊದಿಕೆ ಇತ್ಯಾದಿ ತಯಾರಿಸುತ್ತಾರೆ.

೫. ಆಯುರ್ವಸ್ತ್ರಗಳ ಮತ್ತು ಅವುಗಳನ್ನು ತಯಾರಿಸುವ ಪ್ರಕ್ರಿಯೆಯಲ್ಲಿನ ಕೆಲವು ವೈಶಿಷ್ಟ್ಯಗಳು

೫ ಅ. ಆಯುರ್ವಸ್ತ್ರಕ್ಕಾಗಿ ಉಪಯೋಗಿಸುವ ವನಸ್ಪತಿಗಳು : ಆಯುರ್ವಸ್ತ್ರದಲ್ಲಿ ಪ್ರಕ್ರಿಯೆಗಾಗಿ ಸರಿಸುಮಾರು ೫೦ ವನಸ್ಪತಿಗಳಿಂದ ತಯಾರಿಸಿದ ಕಷಾಯಗಳನ್ನು ಉಪಯೋಗಿಸಲಾಗುತ್ತದೆ. ಶ್ರೀ. ರಾಜನ್ ಮತ್ತು ಅವರ ಕುಟುಂಬದವರು ಆಯುರ್ವಸ್ತ್ರಗಳಿಗೆ ಉಪಯೋಗಿಸುವ ವನಸ್ಪತಿಗಳನ್ನು ಸ್ವತಃ ಬೆಳೆಸುತ್ತಾರೆ. ಕಾಲಾನುಸಾರ ಕೆಲವು ವನಸ್ಪತಿಗಳು ದುರ್ಲಭವಾಗಿವೆ. ಆದ್ದರಿಂದ ಅವುಗಳು ದುಬಾರಿಯಾಗಿವೆ, ಉದಾ. ಚಂದನ ಮತ್ತು ರಕ್ತಚಂದನ. ವನಸ್ಪತಿಗಳನ್ನು ಸಂಗ್ರಹಿಸುವಾಗ ಪರಂಪರಾಗತ ನಿಯಮಗಳ ಪಾಲನೆಯಾಗಿ ನಿಸರ್ಗದ ಹಾನಿಯಾಗದಂತೆ ಎಚ್ಚರ ವಹಿಸಲಾಗುತ್ತದೆ.

೫ ಆ. ಆಯುರ್ವಸ್ತ್ರದ ಬಣ್ಣ ಮತ್ತು ಅದರಲ್ಲಿ ಉಪಯೋಗಿಸುವ ವನಸ್ಪತಿಗಳು : ಆಯುರ್ವಸ್ತ್ರಕ್ಕಾಗಿ ವನಸ್ಪತಿಗಳಿಂದ ತಯಾರಿಸಿದ ನೈಸರ್ಗಿಕ ಬಣ್ಣವನ್ನು ಉಪಯೋಗಿಸಲಾಗುತ್ತದೆ. ಕೆಂಪು, ಹಳದಿ, ಹಸಿರು, ನೀಲಿ, ಕಪ್ಪು ಮತ್ತು ಬಿಳಿ ಇತ್ಯಾದಿ ಪ್ರಮುಖವಾಗಿರುತ್ತವೆ. ವಿವಿಧ ವನಸ್ಪತಿಗಳ ಮಿಶ್ರಣದಿಂದ ಬಣ್ಣಗಳ ವಿವಿಧ ಮಾದರಿಗಳನ್ನು ತಯಾರಿಸಲಾಗುತ್ತದೆ. ಯಾವ ಬಣ್ಣಕ್ಕೆ ಯಾವ ವನಸ್ಪತಿಯನ್ನು ಉಪಯೋಗಿಸಲಾಗುತ್ತದೆ, ಎಂಬುದರ ಬಗ್ಗೆ ಶ್ರೀ. ರಾಜನ್ ಇವರು ನೀಡಿದ ಮಾಹಿತಿಯು ಈ ಮುಂದಿನಂತಿವೆ.

೬. ಆಯುರ್ವಸ್ತ್ರವನ್ನು ‘ಯು.ಎ.ಎಸ್.’ ವೈಜ್ಞಾನಿಕ ಉಪಕರಣದ ಮೂಲಕ ಪರೀಕ್ಷಿಸುವುದು

ಆಯುರ್ವಸ್ತ್ರದ ನಿರ್ಮಾಣದ ಪ್ರಕ್ರಿಯೆಯಲ್ಲಿನ ವಿವಿಧ ಘಟಕಗಳಲ್ಲಿರುವ ಊರ್ಜೆಯನ್ನು ಅಧ್ಯಯನ ಮಾಡಲು ೭.೯.೨೦೧೯ ರಂದು ಸನಾತನದ ರಾಮನಾಥಿ ಆಶ್ರಮದಲ್ಲಿ ‘ಯು.ಎ.ಎಸ್.’ (ಯುನಿವರ್ಸಲ್ ಔರಾ ಸ್ಕ್ಯಾನರ್) ಈ ವೈಜ್ಞಾನಿಕ ಉಪಕರಣದಿಂದ ಪರೀಕ್ಷಿಸಲಾಯಿತು..

೬ ಅ. ಯು.ಎ.ಎಸ್. ಉಪಕರಣದ ಪರಿಚಯ : ಈ ಉಪಕರಣದ ಮೂಲಕ ಯಾವುದೇ ಸಜೀವ ಅಥವಾ ನಿರ್ಜೀವ ವಸ್ತುವಿನಲ್ಲಿನ ಸಕಾರಾತ್ಮಕ ಹಾಗೂ ನಕಾರಾತ್ಮಕ ಊರ್ಜೆಯನ್ನು ಮತ್ತು ಆ ವಸ್ತುವಿನ ಸುತ್ತಲಿರುವ ಒಟ್ಟು ಪ್ರಭಾವಲಯವನ್ನು ಅಳೆಯಲು ಸಾಧ್ಯವಿದೆ. ಈ ಉಪಕರಣವನ್ನು ತೆಲಂಗಾಣದ ಭಾಗ್ಯನಗರದ ಮಾಜಿ ಪರಮಾಣು ವಿಜ್ಞಾನಿ ಡಾ. ಮನ್ನಮ್ ಮೂರ್ತಿಯವರು ೨೦೦೫ ರಲ್ಲಿ ವಿಕಸಿತಗೊಳಿಸಿದರು.

(ಯು.ಎ.ಎಸ್. ಉಪಕರಣದ ಬಗ್ಗೆ ಹೆಚ್ಚಿನ ಮಾಹಿತಿ ಮುಂದಿನ ಲಿಂಕ್‌ನಲ್ಲಿ ನೋಡಬಹುದು : https://www.sanatan.org/kannada/universal-scanner)

೬ ಆ. ಯು.ಎ.ಎಸ್. ಉಪಕರಣದ ಮೂಲಕ ಮಾಡಿದ ಅಳತೆಯ ನೋಂದಣಿ

ಟಿಪ್ಪಣಿ – ಆಯುರ್ವಸ್ತ್ರದ ನಿರ್ಮಿತಿಯ ಪ್ರಕ್ರಿಯೆಗಾಗಿ ೫೦ ಕ್ಕಿಂತಲೂ ಹೆಚ್ಚು ವನಸ್ಪತಿಗಳನ್ನು ಉಪಯೋಗಿಸಲಾಗುತ್ತದೆ. ವಿಷಯವನ್ನು ತಿಳಿದುಕೊಳ್ಳಲು ಅವುಗಳಲ್ಲಿ ಎರಡು ವನಸ್ಪತಿಗಳನ್ನು ಉಪಕರಣದ ಮೂಲಕ ಮಾಡಿದ ಅಳತೆಯ ನೋಂದಣಿಯನ್ನು ಇಲ್ಲಿ ಕೊಡಲಾಗಿದೆ.

ಟಿಪ್ಪಣಿ ೧ – ಇಲ್ಲಿ ಲೋಳೆಸರ ಮತ್ತು ಗೋಅರ್ಕದ ಮಿಶ್ರಣದಲ್ಲಿ ‘ಬ್ಲೀಚಿಂಗ್’ ಮಾಡಿದ ಹತ್ತಿಯ ದಾರದಲ್ಲಿನ ಊರ್ಜೆ ಮತ್ತು ಒಟ್ಟು ಪ್ರಭಾವಲಯದ ಅಳತೆ ಮಾಡಲಾಯಿತು.

ಟಿಪ್ಪಣಿ ೨ – ರಕ್ತಚಂದನದ ಕಷಾಯದಲ್ಲಿ ಪ್ರಕ್ರಿಯೆ ಮಾಡಿದ ಹತ್ತಿಯ ದಾರದಲ್ಲಿನ ಊರ್ಜೆ ಮತ್ತು ಒಟ್ಟು ಪ್ರಭಾವಲಯವನ್ನು ಅಳತೆ ಮಾಡಲಾಯಿತು.

ಟಿಪ್ಪಣಿ ೩ – ಈ ಮೇಲಿನ ಕೋಷ್ಟಕದಲ್ಲಿನ ಊರ್ಜೆ ಮತ್ತು ಪ್ರಭಾವಲಯದ ನೋಂದಣಿಯು ಮೀಟರ್‌ನಲ್ಲಿದೆ.

ಟಿಪ್ಪಣಿ ೪ – ಅಳತೆಯ ನೋಂದಣಿ ಮಾಡುವಾಗ ಯಾವುದೇ ವಸ್ತುವಿನಲ್ಲಿ ನಕಾರಾತ್ಮಕ ಊರ್ಜೆ ಇರಲಿಲ್ಲ.

೬ ಇ. ವಿವೇಚನೆ

೬ ಇ ೧. ನಕಾರಾತ್ಮಕ ಊರ್ಜೆ ಇಲ್ಲದಿರುವುದು : ಆಯುರ್ವಸ್ತ್ರ ತಯಾರಿಸಲು ಉಪಯೋಗಿಸಿದ ಎಲ್ಲ ಘಟಕಗಳು, ಆಯುರ್ವಸ್ತ್ರ ಮತ್ತು ಅದರಿಂದ ತಯಾರಿಸಿದ ವಸ್ತುವಿನಲ್ಲಿ, ಅಂದರೆ ಆಯುರ್ವಸ್ತ್ರಕ್ಕೆ ಸಂಬಂಧಿಸಿದ ಎಲ್ಲ ಘಟಕಗಳಲ್ಲಿ ‘ಇನ್ಫ್ರಾರೆಡ್’ ಮತ್ತು ‘ಅಲ್ಟ್ರಾವೈಲೆಟ್’ ಎಂಬ ನಕಾರಾತ್ಮಕ ಊರ್ಜೆಗಳ ಪೈಕಿ ಯಾವುದೇ ನಕಾರಾತ್ಮಕ ಊರ್ಜೆ ಇರಲಿಲ್ಲ.

೬ ಇ ೨. ಸಕಾರಾತ್ಮಕ ಊರ್ಜೆ ಇರುವುದು : ಎಲ್ಲ ವ್ಯಕ್ತಿ, ವಾಸ್ತು ಅಥವಾ ವಸ್ತುಗಳಲ್ಲಿ ಸಕಾರಾತ್ಮಕ ಊರ್ಜೆ ಇದ್ದೇ ಇರುವುದೆಂದು ಹೇಳಲು ಸಾಧ್ಯವಿಲ್ಲ. ಆಯುರ್ವಸ್ತ್ರಕ್ಕೆ ಸಂಬಂಧಿಸಿದ ಎಲ್ಲ ಘಟಕಗಳಲ್ಲಿ ಸಕಾರಾತ್ಮಕ ಊರ್ಜೆ ಇತ್ತು.

೬ ಇ ೩. ಒಟ್ಟು ಪ್ರಭಾವಲಯ ತುಂಬಾ ಹೆಚ್ಚಿರುವುದು : ಸಾಮಾನ್ಯ ವ್ಯಕ್ತಿ ಅಥವಾ ವಸ್ತುವಿನಲ್ಲಿ ಒಟ್ಟು ಪ್ರಭಾವಲಯವು ಸುಮಾರು ೧ ಮೀಟರ್‌ನಷ್ಟು ಇರುತ್ತದೆ. ಆದರೆ ಆಯುರ್ವಸ್ತ್ರಕ್ಕೆ ಸಂಬಂಧಿಸಿದ ಎಲ್ಲ ಘಟಕಗಳ ಒಟ್ಟು ಪ್ರಭಾವಲಯವು ಅದಕ್ಕಿಂತ ತುಂಬಾ ಹೆಚ್ಚಿತ್ತು. ಸಂಕ್ಷಿಪ್ತವಾಗಿ ಹೇಳುವುದಾದರೆ, ಆಯುರ್ವಸ್ತ್ರಕ್ಕೆ ಸಂಬಂಧಿಸಿದ ಎಲ್ಲ ಘಟಕಗಳಿಂದ ತುಂಬಾ ಸಕಾರಾತ್ಮಕ ಊರ್ಜೆವು ಪ್ರಕ್ಷೇಪಣೆಯಾಗುತ್ತಿದ್ದು ಅವುಗಳ ಪ್ರಭಾವಲಯವು ತುಂಬಾ ಹೆಚ್ಚಿರುವುದನ್ನು ಯು.ಎ.ಎಸ್. ಉಪಕರಣದ ಮೂಲಕ ಮಾಡಿದ ಪರೀಕ್ಷಣೆಯಿಂದ ಸ್ಪಷ್ಟವಾಯಿತು. ಇದರ ಅರ್ಥ ಆಯುರ್ವಸ್ತ್ರವು ಆಧ್ಯಾತ್ಮಿಕ ದೃಷ್ಟಿಯಲ್ಲಿ ಲಾಭದಾಯಕವಾಗಿದೆ.

೭. ಆಯುರ್ವಸ್ತ್ರದಲ್ಲಿ ಸಾತ್ತ್ವಿಕತೆ ಇರುವುದರ ಹಿಂದಿನ ಅಧ್ಯಾತ್ಮಶಾಸ್ತ್ರ

ಶ್ರೀ. ರಾಜನ್ ಮತ್ತು ಅವರ ಕುಟುಂಬದವರು ಆಯುರ್ವಸ್ತ್ರಗಳನ್ನು ತಯಾರಿಸುವ ವ್ಯವಸಾಯ ಮಾಡುತ್ತಿರುವಾಗ ಕೂಡ ಪಾರಂಪರಿಕ ನಿಯಮಗಳನ್ನು ಮತ್ತು ಆಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದರಿಂದ ಅವರ ಸಾಧನೆಯಾಗುತ್ತದೆ. ಸಾಧನೆಯೆಂದು ಮಾಡಿದ ಕೃತಿಯಲ್ಲಿ ಈಶ್ವರನ ಅಧಿಷ್ಠಾನ ಇರುತ್ತದೆ. ಆದ್ದರಿಂದ ಇಂತಹ ಕೃತಿಗಳಿಂದ ನಿರ್ಮಾಣವಾಗುವ ಘಟಕಗಳಲ್ಲಿ ಚೈತನ್ಯ ನಿರ್ಮಾಣವಾಗುತ್ತದೆ. ಅದರಿಂದ ಆ ಘಟಕವನ್ನು ತಯಾರಿಸುವವರಿಗೆ ಮಾತ್ರವಲ್ಲದೇ, ಅದನ್ನು ಉಪಯೋಗಿಸುವವರಿಗೆ ಕೂಡ ಲಾಭವಾಗುತ್ತದೆ.

ಆಯುರ್ವಸ್ತ್ರವನ್ನು ತಯಾರಿಸುವುದು, ಇದು ಸಾತ್ತ್ವಿಕ ಕೃತಿಯಾಗಿದೆ ಎಂಬುದು ಈ ಮುಂದಿನ ವಿಷಯಗಳಿಂದ ಅರಿವಾಗುವುದು.

೭ ಅ. ಆಯುರ್ವಸ್ತ್ರವನ್ನು ತಯಾರಿಸುವ ಉದ್ದೇಶವೇ ಸಾತ್ತ್ವಿಕವಾಗಿರುವುದು : ಯಾವುದೇ ಒಂದು ಘಟಕವನ್ನು ಉಪಯೋಗಿಸುವ ಉದ್ದೇಶಕ್ಕನುಸಾರ ಅದರಲ್ಲಿ ಸಾತ್ತ್ವಿಕ, ರಾಜಸಿಕ ಅಥವಾ ತಾಮಸಿಕ ಸ್ಪಂದನವು ಬರುತ್ತದೆ. ಆಯುರ್ವಸ್ತ್ರವನ್ನು ತಯಾರಿಸುವ ಉದ್ದೇಶ ‘ವ್ಯಾಧಿ ನಿವಾರಣೆಯಾಗಿದ್ದು’ ಇದು ಸಾತ್ತ್ವಿಕವಾಗಿದೆ. ಜನಕಲ್ಯಾಣಕ್ಕಾಗಿ ತಯಾರಿಸಿರುವುದರಿಂದ ಆಯುರ್ವಸ್ತ್ರದಲ್ಲಿ ಸಾತ್ತ್ವಿಕತೆ ಬಂದಿದೆ.

೭ ಆ. ಆಯುರ್ವಸ್ತ್ರವನ್ನು ನಿರ್ಮಾಣ ಮಾಡುವ ಘಟಕಗಳು ಸಾತ್ತ್ವಿಕವಾಗಿರುವುದು : ಆಯುರ್ವಸ್ತ್ರದ ನಿರ್ಮಾಣದಲ್ಲಿನ ಘಟಕಗಳು, ಉದಾ. ವಸ್ತ್ರ, ಬಣ್ಣ ಇತ್ಯಾದಿ ನೈಸರ್ಗಿಕವಾಗಿವೆ. ಆದ್ದರಿಂದಲೂ ಆಯುರ್ವಸ್ತ್ರದಲ್ಲಿ ಸಕಾರಾತ್ಮಕ ಸ್ಪಂದನಗಳು ಬಂದಿವೆ.

೭ ಇ. ಆಯುರ್ವಸ್ತ್ರಗಳನ್ನು ತಯಾರಿಸುವವರು ಧಾರ್ಮಿಕ ಆಚಾರಗಳ ಮತ್ತು ಪಾರಂಪರಿಕ ಪದ್ಧತಿಗಳನ್ನು ಪಾಲಿಸುವುದು : ಆಯುರ್ವಸ್ತ್ರಗಳನ್ನು ತಯಾರಿಸುವವರು ಧಾರ್ಮಿಕ ಆಚಾರಗಳ ಮತ್ತು ಪಾರಂಪರಿಕ ಪದ್ಧತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಶ್ರೀ. ರಾಜನ ಮತ್ತು ಅವರ ಕುಟುಂಬದವರು ಆವಶ್ಯಕವಿರುವ ಆಯುರ್ವೇದೀಯ ವನಸ್ಪತಿಗಳಲ್ಲಿ ಸಾಧ್ಯವಿದ್ದಷ್ಟು ವನಸ್ಪತಿಗಳನ್ನು ಅವರೇ ಬೆಳೆಸುತ್ತಾರೆ. ವನಸ್ಪತಿಗಳನ್ನು ಆರಿಸುವುದು, ಅವುಗಳ ಮೇಲೆ ಪ್ರಕ್ರಿಯೆ ಮಾಡುವುದು ಇತ್ಯಾದಿ ಮಾಡುವಾಗ ಅದರಲ್ಲಿ ಹಿಂದಿನಿಂದ ನಡೆದುಕೊಂಡು ಬಂದಿರುವ ನಿಯಮಗಳನ್ನು ಪಾಲಸುತ್ತಾರೆ ಹಾಗೂ ನಿಸರ್ಗದ ಹಾನಿಯಾಗದಂತೆ ಎಚ್ಚರ ವಹಿಸುತ್ತಾರೆ. ಆದ್ದರಿಂದ ಅವರಿಗೆ ನಿಸರ್ಗದೇವತೆಯ ಆಶೀರ್ವಾದ ಕೂಡ ಲಭಿಸುತ್ತದೆ.

೮. ಭಾರತದ ಪ್ರಾಚೀನ ವಿದ್ಯೆ ಹಾಗೂ ಕಲೆಗಳಿಗೆ ಆಧ್ಯಾತ್ಮದ ಅಡಿಪಾಯವಿರುವುದರಿಂದ ಅವುಗಳು ಚೈತನ್ಯಮಯವಾಗಿರುವುದು ಮತ್ತು ಕಾಲದ ಪ್ರವಾಹದಲ್ಲಿ ಶಾಶ್ವತವಾಗಿರಲು ಸಾಧ್ಯವಾಗಿದೆ !

ಭಾರತದಲ್ಲಿನ ವಾಸ್ತುಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ಗಣಿತ ಇತ್ಯಾದಿ ವಿದ್ಯೆ ಅಥವಾ ಸಂಗೀತ, ನೃತ್ಯ, ಚಿತ್ರಕಲೆ ಇತ್ಯಾದಿ ಕಲೆಗಳಿಗೆ ಅಧ್ಯಾತ್ಮದ ಅಡಿಪಾಯವಿರುವುದರಿಂದ ಆ ವಿದ್ಯೆ ಅಥವಾ ಕಲೆಯನ್ನು ಪಡೆದವರಿಗೆ ಈಶ್ವರನ, ಅಂದರೆ ಸರ್ವೋಚ್ಚ ಆನಂದದ ಅನುಭೂತಿ ಬರಲು ಸಾಧ್ಯವಿದೆ. ಅಧ್ಯಾತ್ಮದ ಅಡಿಪಾಯವಿರುವುದರಿಂದಲೇ ಸಂಗೀತ, ನೃತ್ಯ ಇತ್ಯಾದಿ ಕಲೆಗಳು ಇದುವರೆಗೆ ಉಳಿದುಕೊಂಡಿವೆ; ಆದರೆ ಈಗಿನ ಕಲೆಯಲ್ಲಿನ ಆಧ್ಯಾತ್ಮಿಕ ಅಂಗದ ವಿಚಾರ ಮಾಡದಿರುವುದರಿಂದ ಕಲೆಯು ಕೇವಲ ಅಭಿವ್ಯಕ್ತಿಯ, ಮನೋರಂಜನೆಯ ಮತ್ತು ಆರ್ಥಿಕ ಲಾಭದ ಸಾಧನವಾಗಿ ಉಳಿದಿದೆ. ಆದ್ದರಿಂದ ಇಂತಹ ಕಲಾಕೃತಿಗಳಿಂದ ಕಲಾವಿದನಿಗೆ ಹಾಗೂ ವೀಕ್ಷಕರಿಗೂ ಚೈತನ್ಯದ ಅನುಭೂತಿ ಬರಲು ಸಾಧ್ಯವಿಲ್ಲ.

– ಕು. ಪ್ರಿಯಾಂಕಾ ವಿಜಯ ಲೋಟಲೀಕರ್ ಮತ್ತು ಶ್ರೀ. ರೂಪೇಶ ಲಕ್ಷ್ಮಣ ರೇಡ್‌ಕರ್, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨.೯.೨೦೧೯)

ವಿ-ಅಂಚೆ : [email protected]

2 thoughts on “೫ ಸಾವಿರ ವರ್ಷಕ್ಕಿಂತಲೂ ಹಳೆಯ ಪರಂಪರೆಯುಳ್ಳ ಆಯುರ್ವಸ್ತ್ರ / ಆಯುರ್ವೇದಿಕ್ ವಸ್ತ್ರ !”

Leave a Comment