ದೇಸಿ ಹಸುವಿನ ಸೆಗಣಿಯಿಂದ ಅಗ್ಗದ ವೈದಿಕ ಪ್ಲಾಸ್ಟರ !

ಹಸು ಮತ್ತು ಅದರ ವಿವಿಧ ಪದಾರ್ಥಗಳಿಂದ ಮನುಷ್ಯನಿಗೆ ಆಗುವ ಲಾಭ ಕಳೆದ ಸಾವಿರಾರು ವರ್ಷಗಳಿಂದ ನಮ್ಮ ಪೂರ್ವಜರು ಅನುಭವಿಸುತ್ತಿದ್ದಾರೆ

ಹರಿಯಾಣದ ಡಾ. ಶಿವದರ್ಶನ ಮಲಿಕ ಇವರು ಕಡಿಮೆ ಖರ್ಚಿನಲ್ಲಿ ಒಂದು ತಂಪಾದ ಮನೆ ಕಟ್ಟಿದ್ದಾರೆ, ಅವರು ದೇಸಿ ಹಸುವಿನ ಸೆಗಣಿಯಿಂದ ವೈದಿಕ ಪ್ಲಾಸ್ಟರ ಸಿದ್ಧಪಡಿಸಿದ್ದಾರೆ. ಈ ವೈದಿಕ ಪ್ಲಾಸ್ಟರ ಬಳಸಿ ಸಿದ್ಧಪಡಿಸಿದ ಮನೆ ಊರಲ್ಲಿನ ಕಚ್ಚಾ ಮನೆಗಳಂತೆ ತಂಪು ಕೊಡುತ್ತದೆ. ದೆಹಲಿಯ ದ್ವಾರಕಾ ಹತ್ತಿರದ ಛಾವಲಾ ದಲ್ಲಿ ಇರುವ ಡೇರಿ ಸಂಚಾಲಕರು ದಯಾ ಕಿಶನ ಶೊಕೀನ ಇವರು ಒಂದುವರೆ ವರ್ಷದ ಹಿಂದೆ ವೈದಿಕ ಪ್ಲಾಸ್ಟರ ಉಪಯೋಗಿಸಿ ತಮ್ಮ ಮನೆ ಕಟ್ಟಿಕೊಂಡಿದ್ದರು. ಈ ಮನೆಯಲ್ಲಿ ಕೂಲರ ಅಳವಡಿಸುವ ಅವಶ್ಯಕತೆಯಿಲ್ಲ. ಹೊರಗಿನ ತಾಪಮಾನ ೪೦ ಡಿಗ್ರಿ ಇರುತ್ತದೆ, ಆದರೆ ಈ ಮನೆಯಲ್ಲಿನ ತಾಪಮಾನ ೨೮ ರಿಂದ ೩೧ ಡಿಗ್ರಿ ಅಷ್ಟು ಇರುತ್ತದೆ. ಈ ಮನೆ ಕಟ್ಟಲು ೧೦ ರೂಪಾಯಿಯಂತೆ ಪ್ರತಿ ಚದರ ಅಡಿ ಖರ್ಚು ಬರುತ್ತದೆ. ಈ ಖರ್ಚು ಸಿಮೆಂಟಗಿಂತ ೭ ಪಟ್ಟು ಕಡಿಮೆ ಇದೆ. ಈ ಮನೆಯಲ್ಲಿ ಉಷ್ಣತೆಯ ದಿನದಲ್ಲಿ ಬರಿಗಾಲಿನಿಂದ ಓಡಾಡಿದರೆ ತಂಪು ಅನಿಸುತ್ತದೆ. ನಮ್ಮ ಶರೀರಕ್ಕೆ ಅವಶ್ಯಕತೆಗನುಸಾರ ತಾಪಮಾನ ಸಿಗುತ್ತದೆ. ಹಿಂದೆ ಮಣ್ಣಿನಿಂದ ಕಟ್ಟಿದ ಕಚ್ಚಾ ಮನೆಗಳಲ್ಲಿ ಉಷ್ಣತೆಯನ್ನು ನಿಯಂತ್ರಿಸುವ ಕ್ಷಮತೆ ಇತ್ತು. ಕಾಲ ಬದಲಾಗಿರುವುದರಿಂದ ಈ ಮನೆಗಳ ಈಗ ವಿರಳವಾಗಿವೆ.

ಡಾ. ಶಿವದರ್ಶನ ಮಲಿಕ ಇವರು ಹಲವು ವರ್ಷಗಳ ಸಂಶೋಧನೆಯ ನಂತರ ವೈದಿಕ ಪ್ಲಾಸ್ಟರ ಅನ್ನು ಕಂಡು ಹಿಡಿದರು. ಈ ವೈದಿಕ ಪ್ಲಾಸ್ಟರ ಶೀತ ಪ್ರದೇಶದಲ್ಲಿ ಮನೆಯನ್ನು ಬೆಚ್ಚನೆ ಮತ್ತು ಉಷ್ಣತೆ ಪ್ರದೇಶದಲ್ಲಿ ಮನೆಯನ್ನು ತ್ಮಪಾಗಿರಿಸುತ್ತದೆ. ಡಾ. ಮಲ್ಲಿಕ ಇವರು ರಸಾಯನ ಶಾಸ್ತ್ರದಲ್ಲಿ ಪಿಎಚ್.ಡಿ ಪಡೆದ ನಂತರ ಆಯ್‌ಆಯ್‌ಟಿ ದೆಹಲಿ ಮತ್ತು ವರ್ಲ್ಡ್ ಬ್ಯಾಂಕ ನಂತಹ ಸಂಸ್ಥೆಗಳಲ್ಲಿ ಅನೇಕ ವರ್ಷ ಕೆಲಸ ಮಾಡಿದವರು. ಕೆಲಸದ ನಿಮಿತ್ತ ಅವರು ಊರೂರು ಸುತ್ತುವಾಗ ಅವರಿಗೆ ಪಕ್ಕಾ ಮತ್ತು ಕಚ್ಚಾ ಮನೆಗಳಲ್ಲಿನ ವ್ಯತ್ಯಾಸ ಗಮನಕ್ಕೆ ಬಂದು ಅವರು ಈ ವಿಷಯಗಳ ಮೇಲೆ ಅಧ್ಯಯನ ಮಾಡಲು ಪಾರಂಭಿಸಿದರು.

ಡಾ. ಮಲ್ಲಿಕರವರು ‘ನಾವು ನಿಸರ್ಗದಲ್ಲಿದ್ದು ನಿಸರ್ಗವನ್ನು ರಕ್ಷಿಸಬೇಕು. ಸೆಗಣಿಯಿಂದ ಭೂಮಿ ಸಾರಿಸುವುದನ್ನು ನಿಲ್ಲಿಸಿದಾಗಿನಿಂದ ಕಾಯಿಲೆಗಳು ಪ್ರಾರಂಭವಾದವು. ದೇಸಿ ಹಸುವಿನ ಸೆಗಣಿಯಲ್ಲಿ ಎಲ್ಲಕ್ಕಿಂತ ಹೆಚ್ಚು ಪ್ರೊಟೀನ ಇರುತ್ತದೆ. ಅದು ಮನೆಯಲ್ಲಿನ ಗಾಳಿ ಶುದ್ಧ ಮಾಡುವ ಕೆಲಸ ಮಾಡುತ್ತದೆ. ಆದುದರಿಂದಲೇ ವೈದಿಕ ಪ್ಲಾಸ್ಟರ ನ್ನು ತಯಾರಿಸಲಾಗಿದೆ’ ಎಂದು ಹೇಳಿದರು.

ಡಾ. ಮಲ್ಲಿಕ ಇವರು ‘ನಮ್ಮ ದೇಶದಲ್ಲಿ ದಿನನಿತ್ಯ ೩೦ ಲಕ್ಷ ಟನ್ ಸೆಗಣಿ ಸಿಗುತ್ತದೆ. ಅದರ ಸರಿಯಾದ ಉಪಯೋಗ ಮಾಡದಿರುವುದರಿಂದ ಅದರಲ್ಲಿನ ಹೆಚ್ಚಿನ ಸೆಗಣಿಯು ವ್ಯರ್ಥವಾಗುತ್ತದೆ. ದೇಸಿ ಹಸುವಿನ ಸೆಗಣಿಯಲ್ಲಿ ಜಿಪ್ಸಮ್, ಗ್ವಾರಗಮ್, ಜೇಡಿಮಣ್ಣು, ಲಿಂಬೆಹಣ್ಣಿನ ಪುಡಿ ಮುಂತಾದವುಗಳನ್ನು ಸೇರಿಸಿ ವೈದಿಕ ಪ್ಲಾಸ್ಟರ ಸಿದ್ಧಪಡಿಸಲಾಗಿದೆ. ದೇಶಾದ್ಯಂತ ಇದುವರೆಗೆ ವೈದಿಕ ಪ್ಲಾಸ್ಟರ ಬಳಸಿ ೩೦೦ ಮನೆಗಳನ್ನು ಕಟ್ಟಲಾಗಿದೆ. ಈ ಮನೆಗಳು ನಮ್ಮ ಆರೋಗ್ಯದ ಸಲುವಾಗಿ ಲಾಭದಾಯಕವಿದೆ. ಹಾನಿಕಾರಕ ಕೀಟಾಣು ಮತ್ತು ಜೀವಾಣುಗಳ ಈ ಮನೆಯೊಳಗೇ ಬರುವುದಿಲ್ಲ. ಈ ಮನೆಯಲ್ಲಿ ಆರೋಗ್ಯದೊಂದಿಗೆ ಸಕಾರಾತ್ಮಕತೆ ಶಕ್ತಿಯೂ ಸಿಗುತ್ತದೆ’, ಎಂದು ಹೇಳಿದರು.