ಸಾತ್ತ್ವಿಕ, ತಾಮಸಿಕ ಆಭರಣಗಳಿಂದ ಪ್ರಕ್ಷೇಪಿಸುವ ಸ್ಪಂದನಗಳು ಮತ್ತು ಸ್ತ್ರೀಯರ ಮೇಲೆ ಅವುಗಳ ಆಧ್ಯಾತ್ಮಿಕ ದೃಷ್ಟಿಯಿಂದಾಗುವ ಪರಿಣಾಮ

ಮಹರ್ಷಿ ಅಧ್ಯಾತ್ಮ ವಿಶ್ಯವಿದ್ಯಾಲಯ’ವು ‘ಯು.ಟಿ.ಎಸ್. (ಯುನಿವರ್ಸಲ್ ಥರ್ಮೋ ಸ್ಕ್ಯಾನರ್)’ ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಯೂ.ಟಿ.ಎಸ್. ಉಪಕರಣದ ಮೂಲಕ ಪರಿಶೀಲನೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ

ಅನೇಕ ಯುಗಗಳಿಂದ ಆಭರಣಗಳು ಸ್ತ್ರೀಧರ್ಮ, ಪಾತಿವ್ರತ್ಯ, ಶಾಲೀನತೆ ಮತ್ತು ಶ್ರೇಷ್ಠ ಕುಲ ತೋರಿಸುತ್ತವೆ. ಆಭರಣಗಳಿಂದಾಗಿ ದೈವೀತತ್ತ್ವದ ಲಾಭವಾಗುತ್ತದೆ, ಹಾಗೆಯೇ ಕೆಟ್ಟ ಶಕ್ತಿಗಳ ತೊಂದರೆಗಳಿಂದ ರಕ್ಷಣೆಯಾಗಲು ಅವು ಒಂದು ಸುಲಭ ಸಾಧನವೂ ಆಗಿವೆ. ದುರ್ದೈವದಿಂದ ಸದ್ಯದ ಪೀಳಿಗೆಯ ಸ್ತ್ರೀಯರಿಗೆ ಆಭರಣಗಳ ಮಹತ್ವವು ತಿಳಿದಿಲ್ಲ ಅಥವಾ ಅವರು ಆಭರಣಗಳ ಕಡೆಗೆ ‘ಫ್ಯಾಶನ್’ ಎಂದು ನೋಡುತ್ತಾರೆ. ಗಾಜಿನ ಬಳೆಗಳನ್ನು ಹಾಕಿಕೊಳ್ಳದೇ ಪ್ಲಾಸ್ಟಿಕಿನ ಬಳೆಗಳನ್ನು ಹಾಕಿಕೊಳ್ಳುವುದು, ಒಂದು ಕೈಯಲ್ಲಿ ಗಡಿಯಾರ ಮತ್ತು ಇನ್ನೊಂದು ಕೈಯಲ್ಲಿ ಒಂದೇ ಬಳೆಯನ್ನು ಹಾಕಿಕೊಳ್ಳುವುದು, ಭುಜಬಂದ, ಕಾಲುಂಗುರಗಳಂತಹ ಆಭರಣಗಳನ್ನು ‘ಓಲ್ಡ್ ಫ್ಯಾಶನ್’ ಎಂದು ಉಪಯೋಗಿಸದಿರುವುದು, ಇಂತಹ ಅಯೋಗ್ಯ ವಿಷಯಗಳು ರೂಢಿಯಾಗುತ್ತಿವೆ.

ಸಾತ್ತ್ವಿಕ ಆಭರಣಗಳು ಲಾಭದಾಯಕವಾಗಿರುತ್ತವೆ ಮತ್ತು ತಾಮಸಿಕ (ಅಸುರಿ) ಆಭರಣಗಳು ತೊಂದರೆದಾಯಕವಾಗಿರುತ್ತವೆ. ಆಭರಣಗಳನ್ನು ಖರೀದಿಸಲು ಆಭರಣಗಳ ಮಳಿಗೆಗೆ ಹೋದಾಗ ಅಲ್ಲಿ ನಮಗೆ ಆಭರಣಗಳ ವಿವಿಧ ಮಾದರಿಗಳು ಕಾಣಿಸುತ್ತವೆ. ಕೆಲವೊಮ್ಮೆ ಆಭರಣಗಳ ವಿವಿಧ ನಮೂನೆಗಳ-ಪುಸ್ತಕಗಳನ್ನು (ಕ್ಯಾಟಲಾಗ್) ತೋರಿಸಲಾಗುತ್ತದೆ. ದುರ್ದೈವದಿಂದ ಆಭರಣಗಳ ನೂರಾರು ಮಾದರಿಗಳ ಪೈಕಿ ಕೇವಲ ೪-೫ ಆಭರಣಗಳೇ ಸಾತ್ತ್ವಿಕವಾಗಿವೆ ಮತ್ತು ಇತರ ಆಭರಣಗಳು ತಾಮಸಿಕ (ತೊಂದರೆದಾಯಕ)ವಾಗಿವೆ. ನಾವು ಬಹಳಷ್ಟು ಸಲ ಆಭರಣಗಳ ಬಾಹ್ಯ ಸೌಂದರ್ಯಕ್ಕೆ ಮರುಳಾಗಿ ತಾಮಸಿಕ ಆಭರಣಗಳನ್ನು ಖರೀದಿಸಿ ನಮ್ಮ ಹಾನಿಯನ್ನು ಮಾಡಿಕೊಳ್ಳುತ್ತೇವೆ. ‘ತಾಮಸಿಕ ಹಾರ, ಬಂಗಾರದ ಅಸಾತ್ತ್ವಿಕ ಹಾರ ಮತ್ತು ಬಂಗಾರದ ಸಾತ್ತ್ವಿಕ ಹಾರವನ್ನು ಹಾಕಿಕೊಂಡ ಮೇಲೆ ಸ್ತ್ರೀಯರ ಮೇಲೆ ಆಧ್ಯಾತ್ಮಿಕ ದೃಷ್ಟಿಯಿಂದ ಏನು ಪರಿಣಾಮವಾಗುತ್ತದೆ’ ಎಂಬುದನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ಸೆಪ್ಟೆಂಬರ್ ೨೦೧೮ ರಲ್ಲಿ ಗೋವಾದ, ರಾಮನಾಥಿಯಲ್ಲಿನ ಸನಾತನದ ಆಶ್ರಮದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಒಂದು ಪ್ರಯೋಗವನ್ನು ಮಾಡಲಾಯಿತು. ಈ ಪ್ರಯೋಗಕ್ಕಾಗಿ ‘ಯೂ.ಟಿ.ಎಸ್. (ಯುನಿವರ್ಸಲ್ ಥರ್ಮೋ ಸ್ಕ್ಯಾನರ್)’ ಎಂಬ ಉಪಕರಣನ್ನು ಉಪಯೋಗಿಸಲಾಯಿತು. ಈ ಪ್ರಯೋಗದ ಸ್ವರೂಪ, ಮಾಪನಗಳ ನೋಂದಣಿ ಮತ್ತು ಅವುಗಳ ವಿವರಣೆಯನ್ನು ಮುಂದೆ ಕೊಡಲಾಗಿದೆ.

ಪ್ರಯೋಗದ ಸ್ವರೂಪ

          ತಾಮಸಿಕ ಹಾರದ ಛಾಯಾಚಿತ್ರ
                                         ಅಸಾತ್ತ್ವಿಕ ಹಾರ
                                         ಸಾತ್ತ್ವಿಕ ಹಾರ

 

 

 

 

 

 

 

 

ಈ ಪ್ರಯೋಗದ ಅಂತರ್ಗತ ೩ ಪ್ರಯೋಗಗಳನ್ನು ಮಾಡಲಾಯಿತು. ಮೊದಲನೇ ಪ್ರಯೋಗದಲ್ಲಿ ತೀವ್ರ ಆಧ್ಯಾತ್ಮಿಕ ತೊಂದರೆ (ಟಿಪ್ಪಣಿ) ಇರುವ ಸಾಧಕಿ ಮತ್ತು ಆಧ್ಯಾತ್ಮಿಕ ತೊಂದರೆಯಿಲ್ಲದ ಸಾಧಕಿ ಇವರಿಗೆ ಪ್ರತಿಯೊಬ್ಬರು ೩೦ ನಿಮಿಷಗಳ ಕಾಲ ತಾಮಸಿಕ ಹಾರವನ್ನು ಕೊರಳಲ್ಲಿ ಹಾಕಿಕೊಳ್ಳಲು ಹೇಳಲಾಯಿತು. ಸಾಧಕಿಯರು ತಾಮಸಿಕ ಹಾರನ್ನು ಕೊರಳಲ್ಲಿ ಹಾಕಿಕೊಳ್ಳುವ ಮೊದಲು ಮತ್ತು ಹಾಕಿಕೊಂಡ ನಂತರ ಅವರ ‘ಯೂ.ಟಿ.ಎಸ್.’ ಉಪಕರಣದ ಮೂಲಕ ಮಾಡಿದ ಅಳತೆಗಳ ನೋಂದಣಿಯನ್ನು ಮಾಡಲಾಯಿತು.

ಎರಡನೇ ಪ್ರಯೋಗದಲ್ಲಿ ಇಬ್ಬರೂ ಸಾಧಕಿಯರಿಗೆ ಬಂಗಾರದ ಅಸಾತ್ತ್ವಿಕ ಹಾರ, ಮತ್ತು ಮೂರನೇ ಪ್ರಯೋಗದಲ್ಲಿ ಅವರಿಗೆ ಬಂಗಾರದ ಸಾತ್ತ್ವಿಕ ಹಾರನ್ನು ಪ್ರತಿಯೊಬ್ಬರಿಗೂ ೩೦ ನಿಮಿಷ ಕೊರಳಲ್ಲಿ ಹಾಕಿಕೊಳ್ಳಲು ಹೇಳಲಾಯಿತು. ಅವರು ಹಾರವನ್ನು ಕೊರಳಿನಲ್ಲಿ ಧರಿಸುವ ಮೊದಲು ಮತ್ತು ಧರಿಸಿದ ನಂತರ ಅವರ ಯುನಿವರ್ಸಲ್ ಥರ್ಮೋ ಸ್ಕ್ಯಾನರ್ ಅಂದರೆ ‘ಯೂ.ಟಿ.ಎಸ್.’ ಉಪಕರಣದ ಮೂಲಕ ಮಾಡಿದ ಅಳತೆಗಳ ನೋಂದಣಿಯನ್ನು ಮಾಡಲಾಯಿತು.

ಆಮೇಲೆ ಅಳತೆಗಳ ನೋಂದಣಿಗಳ ತುಲನಾತ್ಮಕ ಅಭ್ಯಾಸವನ್ನು ಮಾಡಲಾಯಿತು.

ಟಿಪ್ಪಣಿ – ಆಧ್ಯಾತ್ಮಿಕ ತೊಂದರೆ : ಆಧ್ಯಾತ್ಮಿಕ ತೊಂದರೆ ಇರುವುದೆಂದರೆ ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು. ವ್ಯಕ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳು ಶೇ. ೫೦ ಅಥವಾ ೫೦ ಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿರುವುದೆಂದರೆ ತೀವ್ರ ಆಧ್ಯಾತ್ಮಿಕ ತೊಂದರೆ ಇರುವುದು. ನಕಾರಾತ್ಮಕ ಸ್ಪಂದನಗಳು ಶೇ. ೩೦ ರಿಂದ ೪೯ ರಷ್ಟು ಇರುವುದೆಂದರೆ ಮಧ್ಯಮ ಆಧ್ಯಾತ್ಮಿಕ ತೊಂದರೆ ಇರುವುದು ಮತ್ತು ಶೇ. ೩೦ ಕ್ಕಿಂತ ಕಡಿಮೆಯಿರುವುದೆಂದರೆ ಮಂದ ಆಧ್ಯಾತ್ಮಿಕ ತೊಂದರೆ ಇರುವುದು. ಆಧ್ಯಾತ್ಮಿಕ ತೊಂದರೆಯು ಪ್ರಾರಬ್ಧ, ಪೂರ್ವಜರ ತೊಂದರೆ ಮುಂತಾದ ಆಧ್ಯಾತ್ಮಿಕ ಕಾರಣಗಳಿಂದಾಗಿ ಆಗುತ್ತದೆ. ಆಧ್ಯಾತ್ಮಿಕ ತೊಂದರೆಗೆ ಪರಿಹಾರವನ್ನು ಸಂತರು ಅಥವಾ ಸೂಕ್ಷ್ಮ ಸ್ಪಂದನಗಳನ್ನು ತಿಳಿದುಕೊಳ್ಳುವ ಸಾಧಕರು ಮಾಡಬಹುದು.

ಅಳತೆಗಳ ನೋಂದಣಿ ಮತ್ತು ಅವುಗಳ ವಿವರಣೆ

೧. ನಕಾರಾತ್ಮಕ ಊರ್ಜೆಯ ಸಂದರ್ಭದಲ್ಲಿ ಮಾಡಿದ ಅಳತೆಗಳ ನೋಂದಣಿಯ ವಿವರಣೆ

೧ ಅ ೧. ತಾಮಸಿಕ ಹಾರ ಮತ್ತು ಬಂಗಾರದ ಅಸಾತ್ತ್ವಿಕ ಹಾರವನ್ನು ಹಾಕಿಕೊಂಡ ನಂತರ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕಿಯಲ್ಲಿನ ‘ಇನ್ಫ್ರಾರೆಡ್’ ಎಂಬ ನಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು : ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕಿಯಲ್ಲಿ ‘ಇನ್ಫ್ರಾರೆಡ್’ ಮತ್ತು ‘ಅಲ್ಟ್ರಾವೈಲೆಟ್’ ನಕಾರಾತ್ಮಕ ಊರ್ಜೆಗಳ ಪೈಕಿ ‘ಇನ್ಫ್ರಾರೆಡ್’ ನಕಾರಾತ್ಮಕ ಊರ್ಜೆ ಅವಳಲ್ಲಿ ಮೊದಲೇ ಇತ್ತು. ಸಾಧಕಿಯು ತಾಮಸಿಕ ಹಾರ ಮತ್ತು ಬಂಗಾರದ ಅಸಾತ್ತ್ವಿಕ ಹಾರವನ್ನು ಹಾಕಿಕೊಂಡಾಗ ಅವಳಲ್ಲಿನ ‘ಇನ್ಫ್ರಾರೆಡ್’ ನಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು.


೧ ಅ ೨. ಬಂಗಾರದ ಸಾತ್ತ್ವಿಕ ಹಾರವನ್ನು ಹಾಕಿಕೊಂಡ ನಂತರ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕಿಯಲ್ಲಿನ ‘ಇನ್ಫ್ರಾರೆಡ್’ ನಕಾರಾತ್ಮಕ ಊರ್ಜೆ ಇಲ್ಲವಾಯಿತು : ಸಾಧಕಿಯಲ್ಲಿ ಮೊದಲೇ ‘ಇನ್ಫ್ರಾರೆಡ್’ ನಕಾರಾತ್ಮಕ ಊರ್ಜೆಯಿತ್ತು ಮತ್ತು ಅವಳ ಪ್ರಭಾವಳಿ ೧.೪೮ ಮೀಟರ್ ಆಗಿತ್ತು. ಸಾಧಕಿಯು ಬಂಗಾರದ ಸಾತ್ತ್ವಿಕ ಹಾರವನ್ನು ಧರಿಸಿದ ನಂತರ ಅವಳಲ್ಲಿನ ನಕಾರಾತ್ಮಕ ಊರ್ಜೆ ಇಲ್ಲವಾಯಿತು. ಆಗ ಅವಳ ಸಂದರ್ಭದಲ್ಲಿ ‘ಯು.ಟಿ. ಸ್ಕ್ಯಾನರ್’ನ ಭುಜಗಳು ೦ ಅಂಶದ ಕೋನ ಮಾಡಿದವು. (‘ಯು.ಟಿ. ಸ್ಕ್ಯಾನರ್’ನ ಭುಜಗಳು ೦ ಅಂಶದ ಕೋನ ಮಾಡುವುದೆಂದರೆ ‘ಸಾಧಕಿಯಲ್ಲಿ ನಕಾರಾತ್ಮಕ ಊರ್ಜೆ ಇಲ್ಲದಿರುವುದು’)

೧ ಅ ೩. ತಾಮಸಿಕ ಹಾರವನ್ನು ಹಾಕಿಕೊಂಡ ನಂತರ ಆಧ್ಯಾತ್ಮಿಕ ತೊಂದರೆಯಿಲ್ಲದ ಸಾಧಕಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ‘ಇನ್ಫ್ರಾರೆಡ್’ ನಕಾರಾತ್ಮಕ ಊರ್ಜೆ ನಿರ್ಮಾಣವಾಗುವುದು : ಆಧ್ಯಾತ್ಮಿಕ ತೊಂದರೆಯಿಲ್ಲದ ಸಾಧಕಿಯಲ್ಲಿ ಮೊದಲು ನಕಾರಾತ್ಮಕ ಊರ್ಜೆ ಇರಲಿಲ್ಲ. ಸಾಧಕಿಯು ತಾಮಸಿಕ ಹಾರವನ್ನು ಹಾಕಿಕೊಂಡ ನಂತರ ಅವಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ‘ಇನ್ಫ್ರಾರೆಡ್’ ನಕಾರಾತ್ಮಕ ಊರ್ಜೆ ಕಂಡು ಬಂದಿತು. ಆಗ ಅವಳ ಸಂದರ್ಭದಲ್ಲಿ ‘ಯು.ಟಿ. ಸ್ಕ್ಯಾನರ್’ನ ಭುಜಗಳು ೪೫ ಅಂಶದ ಕೋನವನ್ನು ಮಾಡಿದವು. ಆಧ್ಯಾತ್ಮಿಕ ತೊಂದರೆಯಿಲ್ಲದ ಸಾಧಕಿಯು ಬಂಗಾರದ ಅಸಾತ್ತ್ವಿಕ ಹಾರ ಮತ್ತು ಬಂಗಾರದ ಸಾತ್ತ್ವಿಕ ಹಾರವನ್ನು ಹಾಕಿಕೊಂಡಾಗ ಅವಳಲ್ಲಿ ನಕಾರಾತ್ಮಕ ಊರ್ಜೆ ಕಂಡು ಬರಲಿಲ್ಲ.

೨. ಸಕಾರಾತ್ಮಕ ಊರ್ಜೆಯ ಸಂದರ್ಭದಲ್ಲಿ ಮಾಡಿದ ಅಳತೆಗಳ ನೋಂದಣಿಗಳ ವಿವರ

೨ ಆ ೧. ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕಿಯಲ್ಲಿ ಸಕಾರಾತ್ಮಕ ಊರ್ಜೆ ಕಂಡು ಬರಲಿಲ್ಲ.

೨ ಆ ೨. ತಾಮಸಿಕ ಹಾರವನ್ನು ಹಾಕಿಕೊಂಡ ನಂತರ ಆಧ್ಯಾತ್ಮಿಕ ತೊಂದರೆಯಿಲ್ಲದ ಸಾಧಕಿಯಲ್ಲಿನ ಸಕಾರಾತ್ಮಕ ಊರ್ಜೆ ಇಲ್ಲವಾಗುವುದು : ಸಾಧಕಿಯಲ್ಲಿ ಮೊದಲು ಸಕಾರಾತ್ಮಕ ಊರ್ಜೆ ಇತ್ತು ಮತ್ತು ಅವಳ ಪ್ರಭಾವಳಿ ೧ ಮೀಟರನಷ್ಟಿತ್ತು. ಸಾಧಕಿಯು ತಾಮಸಿಕ ಹಾರ ಧರಿಸಿದ ನಂತರ ಅವಳಲ್ಲಿನ ಸಕಾರಾತ್ಮಕ ಊರ್ಜೆ ಇಲ್ಲವಾಯಿತು. ಆಗ ಅವಳ ಸಂದರ್ಭದಲ್ಲಿ ‘ಯು.ಟಿ. ಸ್ಕ್ಯಾನರ್ನ ಭುಜಗಳು ೦ ಅಂಶದ ಕೋನವನ್ನು ಮಾಡಿದವು (ಯು.ಟಿ. ಸ್ಕ್ಯಾನರ್ ನ ಭುಜಗಳು ೦ ಅಂಶದ ಕೋನವನ್ನು ಮಾಡುವುದೆಂದರೆ ಸಾಧಕಿಯಲ್ಲಿ ಸಕಾರಾತ್ಮಕ ಊರ್ಜೆ ಇಲ್ಲದಿರುವುದು)

೨ ಆ ೩. ಬಂಗಾರದ ಅಸಾತ್ತ್ವಿಕ ಹಾರವನ್ನು ಹಾಕಿಕೊಂಡ ನಂತರ ಆಧ್ಯಾತ್ಮಿಕ ತೊಂದರೆಯಿಲ್ಲದ ಸಾಧಕಿಯಲ್ಲಿನ ಸಕಾರಾತ್ಮಕ ಊರ್ಜೆ ಇಲ್ಲವಾಗುವುದು : ಸಾಧಕಿಯಲ್ಲಿ ಮೊದಲು ಸ್ವಲ್ಪ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆ ಇತ್ತು; ಆದರೆ ಅವಳ ಪ್ರಭಾವಳಿ ಇರಲಿಲ್ಲ. ಆಗ ಅವಳ ಸಂದರ್ಭದಲ್ಲಿ ‘ಯು.ಟಿ. ಸ್ಕ್ಯಾನರ್’ನ ಭುಜಗಳು ೯೦ ಅಂಶದ ಕೋನವನ್ನು ಮಾಡಿದವು. (‘ಯು.ಟಿ. ಸ್ಕ್ಯಾನರ್’ನ ಭುಜಗಳು ೧೮೦ ಅಂಶದ ಕೋನವನ್ನು ಮಾಡಿದರೆ ಮಾತ್ರ ಪ್ರಭಾವಳಿಯನ್ನು ಅಳೆಯಲು ಬರುತ್ತದೆ.) ಸಾಧಕಿಯು ಬಂಗಾರದ ಅಸಾತ್ತ್ವಿಕ ಹಾರವನ್ನು ಧರಿಸಿದ ನಂತರ ಅವಳಲ್ಲಿನ ಸಕಾರಾತ್ಮಕ ಊರ್ಜೆ ಇಲ್ಲವಾಯಿತು. ಆಗ ಅವಳ ಸಂದರ್ಭದಲ್ಲಿ ‘ಯು.ಟಿ. ಸ್ಕ್ಯಾನರ್’ನ ಭುಜಗಳು ೦ ಅಂಶದ ಕೋನ ಮಾಡಿದವು.

೨ ಆ ೪. ಬಂಗಾರದ ಸಾತ್ತ್ವಿಕ ಹಾರವನ್ನು ಹಾಕಿಕೊಂಡ ನಂತರ ಆಧ್ಯಾತ್ಮಿಕ ತೊಂದರೆಯಿಲ್ಲದ ಸಾಧಕಿಯಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಗುವುದು : ಸಾಧಕಿಯಲ್ಲಿ ಮೊದಲಿಗೆ ಸ್ವಲ್ಪ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆಯಿತ್ತು; ಆದರೆ ಅವಳ ಪ್ರಭಾವಳಿ ಇರಲಿಲ್ಲ. ಆಗ ಅವಳ ಸಂದರ್ಭದಲ್ಲಿ ‘ಯು.ಟಿ. ಸ್ಕ್ಯಾನರ್’ನ ಭುಜಗಳು ೯೦ ಅಂಶದ ಕೋನವನ್ನು ಮಾಡಿದವು. ಸಾಧಕಿಯು ಬಂಗಾರದ ಸಾತ್ತ್ವಿಕ ಹಾರವನ್ನು ಧರಿಸಿದ ನಂತರ ಅವಳ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು. ಅವಳ ಪ್ರಭಾವಳಿ ೧.೧೦ ಮೀಟರಿತ್ತು.

ಟಿಪ್ಪಣಿ – ಒಟ್ಟು ಪ್ರಭಾವಳಿ : ವ್ಯಕ್ತಿಯ ಸಂದರ್ಭದಲ್ಲಿ ಅವನ / ಅವಳ ಲಾಲಾರಸ, ಹಾಗೆಯೇ ವಸ್ತುಗಳ ಸಂದರ್ಭದಲ್ಲಿ ಅವುಗಳ ಮೇಲಿನ ಧೂಳಿನ ಕಣಗಳು ಅಥವಾ ಅವುಗಳ ಸ್ವಲ್ಪ ಭಾಗವನ್ನು ‘ಮಾದರಿ’ ಎಂದು ಉಪಯೋಗಿಸಿಕೊಂಡು ಆ ವ್ಯಕ್ತಿಯ ಅಥವಾ ವಸ್ತುವಿನ ‘ಒಟ್ಟು ಪ್ರಭಾವಳಿ’ಯನ್ನು ಅಳೆಯಲಾಗುತ್ತದೆ. ಸಾಮಾನ್ಯ ವ್ಯಕ್ತಿ ಅಥವಾ ವಸ್ತುಗಳ ಪ್ರಭಾವಳಿಯು ಸಾಮಾನ್ಯವಾಗಿ ೧ ಮೀಟರಿನಷ್ಟು ಇರುತ್ತದೆ.

೨ ಇ. ಪ್ರಭಾವಳಿಯ (ಟಿಪ್ಪಣಿ) ಸಂದರ್ಭದಲ್ಲಿ ಮಾಡಿದ ಅಳತೆಗಳ ನೋಂದಣಿಯ ವಿವರಣೆ

೨ ಇ ೧. ತಾಮಸಿಕ ಹಾರ ಮತ್ತು ಬಂಗಾರದ ಅಸಾತ್ತ್ವಿಕ ಹಾರವನ್ನು ಹಾಕಿಕೊಂಡಾಗ ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕಿ ಮತ್ತು ಆಧ್ಯಾತ್ಮಿಕ ತೊಂದರೆಯಿಲ್ಲದ ಸಾಧಕಿ ಇವರ ಒಟ್ಟು ಪ್ರಭಾವಳಿಯು ಕಡಿಮೆಯಾಯಿತು ಮತ್ತು ಅವರು ಬಂಗಾರದ ಸಾತ್ತ್ವಿಕ ಹಾರವನ್ನು ಹಾಕಿಕೊಂಡ ನಂತರ ಅವರಿಬ್ಬರ ಒಟ್ಟು ಪ್ರಭಾವಳಿಯಲ್ಲಿ ಹೆಚ್ಚಳವಾಗುವುದು


ಮೇಲಿನ ಎಲ್ಲ ಅಂಶಗಳ ಬಗೆಗಿನ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಮಾಡಲಾಗಿದೆ.

೩ ಅಳತೆಗಳ ನೋಂದಣಿಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೩ ಅ. ಆಭರಣಗಳನ್ನು ಧರಿಸುವುದರಿಂದ ಆಧ್ಯಾತ್ಮಿಕ ಲಾಭವಾಗಲು ಆಭರಣಗಳು ಸಾತ್ತ್ವಿಕವಾಗಿರುವುದು ಆವಶ್ಯಕ  : ಆಭರಣಗಳನ್ನು ಧರಿಸುವುದರಿಂದ ಅಪೇಕ್ಷಿತ ಆಧ್ಯಾತ್ಮಿಕ ಲಾಭವಾಗಲು ಆಭರಣಗಳು ಸಾತ್ತ್ವಿಕವಾಗಿರುವುದು ಆವಶ್ಯಕವಾಗಿದೆ. ಆಭರಣಗಳ ಸಾತ್ತ್ವಿಕತೆ ಅದರ ಧಾತು, ನಕ್ಷೆ, ಆಭರಣಗಳನ್ನು ಉಪಯೋಗಿಸುವ ವ್ಯಕ್ತಿ ಇವುಗಳಂತಹ ವಿವಿಧ ಘಟಕಗಳನ್ನು ಅವಲಂಬಿಸಿರುತ್ತದೆ.

(ಆಧಾರ : ಸನಾತನದ ಗ್ರಂಥ ‘ಸ್ತ್ರೀಯರ ಆಭರಣಗಳ ಹಿಂದಿನ ಶಾಸ್ತ್ರ – ಚೂಡಾಮಣಿಯಿಂದ ಕರ್ಣಾಭರಣಗಳ ವರೆಗಿನ ಆಭರಣಗಳು’)

ಆ. ಬಂಗಾರ ಮತ್ತು ಬೆಳ್ಳಿಯ ಆಭರಣಗಳಿಂದ ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗುತ್ತದೆ : ಸ್ತ್ರೀಯರು ಪುರುಷರಿಗಿಂತ ಹೆಚ್ಚು ಸಂವೇದನಾಶೀಲರಾಗಿರುವುದರಿಂದ ಅವರ ಮೇಲೆ ಒಳ್ಳೆಯ ಮತ್ತು ಕೆಟ್ಟ ಈ ಎರಡೂ ರೀತಿಯ ಶಕ್ತಿಗಳ ಪರಿಣಾಮವು ಬೇಗನೇ ಆಗುತ್ತದೆ ಮತ್ತು ಅದು ಹೆಚ್ಚು ಕಾಲವೂ ಉಳಿಯುತ್ತದೆ. ಆಭರಣಗಳನ್ನು ತಯಾರಿಸಲು ಉಪಯೋಗಿಸುವ ಬಂಗಾರ ಮತ್ತು ಬೆಳ್ಳಿ ಧಾತುಗಳಿಂದಾಗಿ ಆಯಾಯ ರೀತಿಯ ಕೆಟ್ಟ ಶಕ್ತಿಗಳ ಆಕ್ರಮಣಗಳನ್ನು ಹಿಮ್ಮೆಟ್ಟಿಸಲಾಗುತ್ತದೆ ಮತ್ತು ತೊಂದರೆದಾಯಕ ಲಹರಿಗಳಿಂದ ಸ್ತ್ರೀಯರ ರಕ್ಷಣೆಯಾಗುತ್ತದೆ. ಸ್ತ್ರೀಯರಲ್ಲಿನ ಸಾತ್ತ್ವಿಕತೆ ಹೆಚ್ಚಾಗಬೇಕು ಮತ್ತು ಕೆಟ್ಟ ಶಕ್ತಿಗಳಿಂದ ಅವರ ರಕ್ಷಣೆಯಾಗಬೇಕೆಂದು ಸ್ತ್ರೀಯರು ಆಭರಣಗಳನ್ನು ಧರಿಸಬೇಕು.

ಆ ೧. ಶಕ್ತಿಶಾಲಿ ಕೆಟ್ಟ ಶಕ್ತಿಗಳಿಂದ ರಕ್ಷಣೆ ಪಡೆಯಲು ಸೊಂಟದ ಮೇಲಿನ ಭಾಗದಲ್ಲಿ ಬಂಗಾರದ ಆಭರಣಗಳನ್ನು ಹಾಕಿಕೊಳ್ಳುತ್ತಾರೆ : ಸೊಂಟದಿಂದ ಮೇಲಿನ ಭಾಗದಲ್ಲಿ ಧರಿಸಲಾಗುವ ಸ್ತ್ರೀಯರ ಆಭರಣಗಳು ಬಂಗಾರದ್ದಾಗಿರುತ್ತವೆ. ತೇಜದ ಸಂವರ್ಧನೆಯನ್ನು ಮಾಡುವ ಬಂಗಾರದ ಬಳಕೆಯನ್ನು ಭೂಮಿಯಿಂದ ವರಿಷ್ಠ ಸ್ತರದಲ್ಲಿ (ಟಿಪ್ಪಣಿ ೧) ಕಾರ್ಯವನ್ನು ಮಾಡುವ ಶಕ್ತಿಶಾಲಿ ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗಲು ಮಾಡಲಾಗಿರುವುದರಿಂದ ದೇಹದ ಮಧ್ಯದ ಮತ್ತು ವರಿಷ್ಠ ಸ್ತರದಲ್ಲಿನ ಆಭರಣಗಳು ಬಂಗಾರದ್ದಾಗಿರುತ್ತವೆ. ಇದರಿಂದ ಆ ಭಾಗದಲ್ಲಿನ ಕ್ರಿಯಾಶಕ್ತಿರೂಪಿ ವರಿಷ್ಠ ಕೆಟ್ಟ ಶಕ್ತಿಗಳ ಸೂಕ್ಷ್ಮದಲ್ಲಿನ ಆಕ್ರಮಣಗಳನ್ನು ಹಿಮ್ಮೆಟ್ಟಿಸಲಾಗುತ್ತದೆ.

ಟಿಪ್ಪಣಿ ೧ – ಭೂಮಿಯಿಂದ ೮ ರಿಂದ ೧೦ ಫೂಟ್ (ಅಡಿ) ಮೇಲಿನ ದಿಕ್ಕಿನಲ್ಲಿ ಅಂದರೆ ವರಿಷ್ಠ ಸ್ತರ, ೫ ರಿಂದ ೬ ಫೂಟ್ ಮೇಲೆ ಅಂದರೆ ಮಧ್ಯಮ ಸ್ತರ ಮತ್ತು ೨ ರಿಂದ ೩ ಫೂಟ್ ಮೇಲೆ ಎಂದರೆ ಭೂಮಿಯ ಸಮೀಪದ ಭಾಗ.

೩ ಆ ೨. ಪಾತಾಳದಿಂದ ಪ್ರಕ್ಷೇಪಿಸುವ ತೊಂದರೆದಾಯಕ ಲಹರಿಗಳಿಂದ ರಕ್ಷಣೆಯಾಗಲು ಸೊಂಟ ಮತ್ತು ಕಾಲುಗಳ ಆಭರಣಗಳಲ್ಲಿ ಬೆಳ್ಳಿಯನ್ನು ಉಪಯೋಗಿಸಲಾಗುತ್ತದೆ : ಸಾಮಾನ್ಯವಾಗಿ ಸ್ತ್ರೀಯರ ಆಭರಣಗಳ ಪೈಕಿ ಸೊಂಟದಿಂದ ಕೆಳಗಿನ ಭಾಗದಲ್ಲಿ ಹಾಕಿಕೊಳ್ಳುವ ಆಭರಣಗಳನ್ನು ಬೆಳ್ಳಿಯಿಂದ ತಯಾರಿಸುತ್ತಾರೆ. ಬೆಳ್ಳಿಯಲ್ಲಿ ರಜೋಗುಣಿ ಚೈತನ್ಯಯುಕ್ತ ಇಚ್ಛಾಲಹರಿಗಳನ್ನು ಗ್ರಹಣ ಮಾಡುವ ಕ್ಷಮತೆ ಹೆಚ್ಚಿರುವುದರಿಂದ ಆಯಾ ಕಾರ್ಯಕ್ಕೆ ಪೂರಕವಾಗಿರುವ ಧಾತುವಿನ ಆಭರಣಗಳನ್ನು ಆಯಾ ಅವಯವಗಳಿಗಾಗಿ ಉಪಯೋಗಿಸಲಾಗುತ್ತದೆ. ಪಾತಾಳದಿಂದ ಪ್ರಕ್ಷೇಪಿತವಾಗುವ ಪೃಥ್ವಿ ಮತ್ತು ಆಪ ತತ್ತ್ವಯುಕ್ತ ತೊಂದರೆದಾಯಕ ಲಹರಿಗಳಿಂದ ರಕ್ಷಣೆಯಾಗಲು ಸೊಂಟ ಮತ್ತು ಪಾದಗಳಲ್ಲಿ ಧರಿಸುವ ಆಭರಣಗಳಲ್ಲಿ ಬೆಳ್ಳಿಯನ್ನು ವಿಶೇಷವಾಗಿ ಉಪಯೋಗಿಸಲಾಗುತ್ತದೆ.’
– ಸದ್ಗುರು (ಸೌ.) ಅಂಜಲಿ ಗಾಡಗೀಳ

ಮೇಲಿನ ಅಂಶಗಳಿಂದ ಬಂಗಾರದ ಸಾತ್ತ್ವಿಕ ಆಭರಣಗಳನ್ನು ಧರಿಸುವುದರ ಮಹತ್ವ ಮತ್ತು ಲಾಭವು ಗಮನಕ್ಕೆ ಬರುತ್ತದೆ.

೩ ಇ. ಪ್ರಯೋಗದಲ್ಲಿನ ಇಬ್ಬರು ಸಾಧಕಿಯರೂ ತಾಮಸಿಕ ಹಾರ ಮತ್ತು ಬಂಗಾರದ ಅಸಾತ್ತ್ವಿಕ ಹಾರವನ್ನು ಹಾಕಿಕೊಂಡಾಗ ಅವರ ಮೇಲೆ ಆಧ್ಯಾತ್ಮಿಕ ದೃಷ್ಟಿಯಿಂದ ನಕಾರಾತ್ಮಕ ಪರಿಣಾಮವಾಯಿತು ಮತ್ತು ಅವರು ಬಂಗಾರದ ಸಾತ್ತ್ವಿಕ ಹಾರವನ್ನು ಹಾಕಿಕೊಂಡಾಗ ಅವರ ಮೇಲೆ ಆಧ್ಯಾತ್ಮಿಕ ದೃಷ್ಟಿಯಿಂದ ಸಕಾರಾತ್ಮಕ ಪರಿಣಾಮವಾಯಿತು : ತಾಮಸಿಕ ಹಾರ ಮತ್ತು ಬಂಗಾರದ ಅಸಾತ್ತ್ವಿಕ ಹಾರದಿಂದ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತವೆ. ಆದುದರಿಂದ ಪ್ರಯೋಗದಲ್ಲಿನ ಇಬ್ಬರೂ ಸಾಧಕಿಯರು ತಾಮಸಿಕ ಹಾರ ಮತ್ತು ಬಂಗಾರದ ಅಸಾತ್ತ್ವಿಕ ಹಾರವನ್ನು ಕೇವಲ ೩೦ ನಿಮಿಷಗಳ ಕಾಲ ಹಾಕಿಕೊಂಡ ಮೇಲೆ ಅವರ ಮೇಲೆ ಆಧ್ಯಾತ್ಮಿಕ ದೃಷ್ಟಿಯಿಂದ ನಕಾರಾತ್ಮಕ ಪರಿಣಾಮವಾಯಿತು. ತದ್ವಿರುದ್ಧ ಬಂಗಾರದ ಸಾತ್ತ್ವಿಕ ಹಾರದಿಂದ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುತ್ತವೆ. ಆದುದರಿಂದ ಅವರು ಬಂಗಾರದ ಸಾತ್ತ್ವಿಕ ಹಾರವನ್ನು ಹಾಕಿಕೊಂಡಾಗ ಅವರ ಮೇಲೆ ಆಧ್ಯಾತ್ಮಿಕ ದೃಷ್ಟಿಯಿಂದ ಸಕಾರಾತ್ಮಕ ಪರಿಣಾಮವಾಯಿತು.

ತೀವ್ರ ಆಧ್ಯಾತ್ಮಿಕ ತೊಂದರೆಯಿರುವ ಸಾಧಕಿ : ಸಾಧಕಿಯು ತಾಮಸಿಕ ಹಾರ ಮತ್ತು ಬಂಗಾರದ ಅಸಾತ್ತ್ವಿಕ ಹಾರವನ್ನು ಹಾಕಿಕೊಂಡಾಗ ಅವಳಲ್ಲಿನ ನಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು ಮತ್ತು ಅವಳ ಒಟ್ಟು ಪ್ರಭಾವಳಿ ಕಡಿಮೆಯಾಯಿತು. ತದ್ವಿರುದ್ಧ ಅವಳು ಬಂಗಾರದ ಸಾತ್ತ್ವಿಕ ಹಾರವನ್ನು ಹಾಕಿಕೊಂಡಾಗ ಅವಳಲ್ಲಿನ ನಕಾರಾತ್ಮಕ ಊರ್ಜೆ ಕಡಿಮೆಯಾಯಿತು ಮತ್ತು ಅವಳ ಒಟ್ಟು ಪ್ರಭಾವಳಿಯಲ್ಲಿ ಹೆಚ್ಚಳವಾಯಿತು.

ಆಧ್ಯಾತ್ಮಿಕ ತೊಂದರೆಯಿಲ್ಲದ ಸಾಧಕಿ : ಸಾಧಕಿಯು ತಾಮಸಿಕ ಹಾರವನ್ನು ಹಾಕಿಕೊಂಡಾಗ ಅವಳಲ್ಲಿನ ಸಕಾರಾತ್ಮಕ ಊರ್ಜೆ ಇಲ್ಲವಾಯಿತು, ಅವಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ನಕಾರಾತ್ಮಕ ಊರ್ಜೆ ನಿರ್ಮಾಣವಾಯಿತು ಮತ್ತು ಅವಳ ಒಟ್ಟು ಪ್ರಭಾವಳಿ ಕಡಿಮೆಯಾಯಿತು. ಅವಳು ಬಂಗಾರದ ಅಸಾತ್ತ್ವಿಕ ಹಾರವನ್ನು ಧರಿಸಿದಾಗ ಅವಳಲ್ಲಿನ ಸಕಾರಾತ್ಮಕ ಊರ್ಜೆ ಇಲ್ಲವಾಯಿತು ಮತ್ತು ಅವಳ ಒಟ್ಟು ಪ್ರಭಾವಳಿ ಕಡಿಮೆಯಾಯಿತು. ತದ್ವಿರುದ್ಧ ಅವಳು ಬಂಗಾರದ ಸಾತ್ತ್ವಿಕ ಹಾರವನ್ನು ಹಾಕಿಕೊಂಡಾಗ ಅವಳಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಹೆಚ್ಚಳವಾಯಿತು ಮತ್ತು ಅವಳ ಒಟ್ಟು ಪ್ರಭಾವಳಿಯಲ್ಲಿಯೂ ಹೆಚ್ಚಳವಾಯಿತು. ಸ್ವಲ್ಪದರಲ್ಲಿ ‘ಫ್ಯಾಶನ್’ಎಂದು ತಾಮಸಿಕ ಆಭರಣಗಳನ್ನು ಧರಿಸುವುದು, ಹಾಗೆಯೇ ಬಂಗಾರದ ಅಸಾತ್ತ್ವಿಕ ನಕ್ಷೆಗಳಿರುವ ಆಭರಣಗಳನ್ನು ಹಾಕಿಕೊಳ್ಳುವುದು ಎಷ್ಟು ಹಾನಿಕರವಿದೆ ಮತ್ತು ತದ್ವಿರುದ್ಧ ಬಂಗಾರದ ಸಾತ್ತ್ವಿಕ ಆಭರಣಗಳನ್ನು ಹಾಕಿಕೊಳ್ಳುವುದು ಎಷ್ಟು ಲಾಭದಾಯಕವಾಗಿದೆ’, ಎಂಬುದು ಈ ವೈಜ್ಞಾನಿಕ ಪ್ರಯೋಗದಿಂದ ಗಮನಕ್ಕೆ ಬಂದಿತು. – ಶ್ರೀ. ಅರುಣ ಡೋಂಗರೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೧.೩.೨೦೧೯) ಈ-ಮೆಲ್ : [email protected]

ಆಭರಣಗಳನ್ನು ಆಧ್ಯಾತ್ಮಿಕ ದೃಷ್ಟಿಯಿಂದ ಶುದ್ಧ ಮಾಡುವ ಮಹತ್ವ

ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಧರಿಸುವುದರಿಂದ ಶರೀರದ ಆಯಾ ಸ್ಥಳಗಳಲ್ಲಿ ಕೆಟ್ಟ ಶಕ್ತಿಗಳಿಗೆ ಶರೀರದಲ್ಲಿ ಪ್ರವೇಶಿಸಲು ತಡೆಯುಂಟಾಗುತ್ತದೆ. ಇದರಿಂದಾಗಿ ಕೆಟ್ಟ ಶಕ್ತಿಗಳು ಆಭರಣಗಳ ಮೇಲೆ ತೊಂದರೆದಾಯಕ ಆವರಣವನ್ನು ತರುತ್ತವೆ. ಇದು ಸೂಕ್ಷ್ಮದಲ್ಲಿ ನಡೆಯುವುದರಿಂದ ಅದು ಜನಸಾಮಾನ್ಯರ ಕಣ್ಣುಗಳಿಗೆ ಕಾಣಿಸುವುದಿಲ್ಲ ಮತ್ತು ‘ಆಭರಣಗಳು ಸ್ವಚ್ಛವಾಗಿವೆ’, ಎಂದು ಅನಿಸುತ್ತದೆ; ಆದರೆ ಪ್ರತ್ಯಕ್ಷದಲ್ಲಿ ಹಾಗಿರುವುದಿಲ್ಲ. ಆದುದರಿಂದ ಆಭರಣಗಳನ್ನು ನಿಯಮಿತವಾಗಿ ಸ್ಥೂಲ ಮತ್ತು ಸೂಕ್ಷ್ಮ ದೃಷ್ಟಿಯಿಂದ ಸ್ವಚ್ಛ ಮಾಡುವುದು ಆವಶ್ಯಕವಾಗಿದೆ. ಆಭರಣಗಳನ್ನು ಅಂಟುವಾಳಕಾಯಿಯಿಂದ (ಸ್ಥೂಲದಿಂದ) ಸ್ವಚ್ಛ ಮಾಡುವಾಗ ಅವುಗಳ ಮೇಲಿನ ತೊಂದರೆದಾಯಕ ಆವರಣ ದೂರವಾಗಲು ಪ್ರಾರ್ಥನೆ ಮಾಡಬೇಕು ಮತ್ತು ಅವುಗಳಿಗೆ ವಿಭೂತಿಯನ್ನು ಹಚ್ಚಿ ತೊಳೆಯಬೇಕು. ಕೆಟ್ಟ ಶಕ್ತಿಗಳ ತೊಂದರೆ ಇರುವವರು ಆಭರಣಗಳನ್ನು ವಾರದಲ್ಲಿ ಒಮ್ಮೆಯಾದರೂ ಸ್ವಚ್ಛ ಮಾಡಬೇಕು ಮತ್ತು ಕೆಟ್ಟ ಶಕ್ತಿಗಳ ತೊಂದರೆ ಇಲ್ಲದವರು ಪ್ರತಿ ತಿಂಗಳು ಸ್ವಚ್ಛ ಮಾಡಬೇಕು.’
(ಆಧಾರ : ಸನಾತನದ ಗ್ರಂಥ ‘ಆಭರಣಶಾಸ್ತ್ರ’)

2 thoughts on “ಸಾತ್ತ್ವಿಕ, ತಾಮಸಿಕ ಆಭರಣಗಳಿಂದ ಪ್ರಕ್ಷೇಪಿಸುವ ಸ್ಪಂದನಗಳು ಮತ್ತು ಸ್ತ್ರೀಯರ ಮೇಲೆ ಅವುಗಳ ಆಧ್ಯಾತ್ಮಿಕ ದೃಷ್ಟಿಯಿಂದಾಗುವ ಪರಿಣಾಮ”

  1. ಮಂಗಳ ಸೂತ್ರದ ಅಂದರೆ [ mangalya chain)ಯಾವರೀತಿಯಲ್ಲಿ ಇರಬೇಕು ಎಂಬುದನ್ನು ತಿಳಿಸಿ.

    Reply
    • ನಮಸ್ಕಾರ

      ಕರಿಮಣಿ ಮತ್ತು ಚಿನ್ನದ ಬಟ್ಟಲುಗಳಿರುವ ಮಂಗಳಸೂತ್ರದ ರಚನೆಯ ಬಗ್ಗೆ ಲಭ್ಯವಿರುವ ಮಾಹಿತಿಯನ್ನು ಮುಂದಿನ ಲೇಖನದಲ್ಲಿ ನೀಡಲಾಗಿದೆ.
      https://www.sanatan.org/kannada/16843.html

      ನಮಸ್ಕಾರ
      ಸನಾತನ ಸಂಸ್ಥೆ

      Reply

Leave a Comment