ಆಧ್ಯಾತ್ಮಿಕ ದೃಷ್ಟಿಯಿಂದ ಮದ್ಯ ಹಾನಿಕರ, ಹಣ್ಣಿನ ರಸ ಲಾಭದಾಯಕ

ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಇಲೆಕ್ಟ್ರೋಸೊಮ್ಯಾಟೋಗ್ರಾಫಿಕ್ ಸ್ಕ್ಯಾನಿಂಗ್ ಎಂಬ ತಂತ್ರಜ್ಞಾನದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ.


ಮದ್ಯಪಾನದಿಂದ ಶಾರೀರಿಕ, ಮಾನಸಿಕ, ಆರ್ಥಿಕ, ಕೌಟುಂಬಿಕ, ಸಾಮಾಜಿಕ ಇತ್ಯಾದಿ ಅನೇಕ ಸ್ತರಗಳಲ್ಲಿನ ತಾತ್ಕಾಲಿಕ ಮತ್ತು ದೂರಗಾಮಿ ದುಷ್ಪರಿಣಾಮಗಳು ಎಲ್ಲರಿಗೂ ತಿಳಿದಿವೆ. ಆರೋಗ್ಯದ ದೃಷ್ಟಿಯಿಂದ ಹಣ್ಣಿನ ರಸದ ಒಳ್ಳೆಯ ಪರಿಣಾಮಗಳೂ ಎಲ್ಲರಿಗೂ ತಿಳಿದಿವೆ. ಮದ್ಯ ಮತ್ತು ಹಣ್ಣಿನ ರಸದಿಂದ ವ್ಯಕ್ತಿಗಳ ಮೇಲೆ ಆಧ್ಯಾತ್ಮಿಕ ಸ್ತರದಲ್ಲಿ ಯಾವ ಪರಿಣಾಮಗಳಾಗುತ್ತವೆ ? ಎಂಬುದನ್ನು ವೈಜ್ಞಾನಿಕ ದೃಷ್ಟಿಯಿಂದ ತಿಳಿದುಕೊಳ್ಳಲು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ’ ವತಿಯಿಂದ ಒಂದು ಪರೀಕ್ಷಣೆಯನ್ನು ಮಾಡಲಾಯಿತು. ಇದರಲ್ಲಿ ಮದ್ಯ ಮತ್ತು ಹಣ್ಣಿನ ರಸವನ್ನು ಸೇವಿಸುವುದರಿಂದ ಕೆಟ್ಟ ಶಕ್ತಿಗಳ ತೊಂದರೆ ಇಲ್ಲದಿರುವ ೫ ಸಾಧಕರು ಮತ್ತು ಕೆಟ್ಟ ಶಕ್ತಿಗಳ ತೊಂದರೆಯಿರುವ ೫ ಸಾಧಕರ ಕುಂಡಲಿನಿ ಚಕ್ರಗಳ ಕಾರ್ಯಶೀಲತೆಯ ಮೇಲಾಗುವ ಪರಿಣಾಮಗಳನ್ನು ವೈಜ್ಞಾನಿಕ ಉಪಕರಣದ ಸಹಾಯದಿಂದ ಅಧ್ಯಯನ ಮಾಡಲಾಯಿತು. ಇದಕ್ಕಾಗಿ ‘ಇಲೆಕ್ಟ್ರೋಸೊಮ್ಯಾಟೋಗ್ರಾಫಿಕ್ ಸ್ಕ್ಯಾನಿಂಗ್’ ಎಂಬ ತಂತ್ರಜ್ಞಾನವನ್ನು ಉಪಯೋಗಿಸಲಾಯಿತು. ಈ ಪ್ರಯೋಗದ ಸ್ವರೂಪ, ಅಳೆಯಲಾದ ನೋಂದಣಿಗಳ ವಿವೇಚನೆ ಮತ್ತು ಅವುಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ಮುಂದೆ ಕೊಡಲಾಗಿದೆ.

೧. ಪರೀಕ್ಷಣೆಯ ಸ್ವರೂಪ

ಮೊದಲು ಪ್ರಯೋಗದಲ್ಲಿ ಭಾಗವಹಿಸುವ ಎಲ್ಲ ಸಾಧಕರ ಸ್ಕ್ಯಾನಿಂಗ್ ಮಾಡಿ ಅವರ ಕುಂಡಲಿನಿಚಕ್ರಗಳ ಸ್ಥಿತಿಯನ್ನು ಅಳೆದು ಬರೆದಿಡಲಾಯಿತು. ಇದು ಅವರ ಮೂಲ ನೋಂದಣಿ, ಅಂದರೆ ಅವರ ಮೂಲ ಸ್ಥಿತಿ. ಅದರ ನಂತರ ಪರೀಕ್ಷಣೆಯಲ್ಲಿ ಭಾಗವಹಿಸಿದ ಎಲ್ಲ ಸಾಧಕರು ಒಂದೇ ರೀತಿಯ ಮದ್ಯವನ್ನು ಒಂದೇ ಪ್ರಮಾಣದಲ್ಲಿ ಸೇವಿಸಿದರು. ಒಂದು ಗಂಟೆಯ ನಂತರ ಪ್ರತಿಯೊಬ್ಬ ಸಾಧಕನ ಕುಂಡಲಿನಿಚಕ್ರಗಳ ಸ್ಥಿತಿಯನ್ನು ಮೊದಲು ಬರೆದಿಡಲಾಯಿತು. ಅದರ ನಂತರ ನಿಶ್ಚಿತ ಕಾಲಾವಧಿಯಲ್ಲಿ ಸಾಧಕರ ಸ್ಕ್ಯಾನಿಂಗ್ ಮಾಡಿ ಅವರ ಕುಂಡಲಿನಿಚಕ್ರಗಳ ಸ್ಥಿತಿಯ ಬಗ್ಗೆ ಅಳತೆ ಮಾಡಿ ನೋಂದಣಿಯನ್ನು ಮಾಡಲಾಯಿತು. ಸಾಧಕರ ಕುಂಡಲಿನಿ ಚಕ್ರಗಳ ಸ್ಥಿತಿಯು ಅವರ ‘ಮೂಲ ನೋಂದಣಿಗೆ (ಮೂಲ ಸ್ಥಿತಿಯವರೆಗೆ) ಬರುವ ತನಕ ಅಂದರೆ ಮದ್ಯದ ಪರಿಣಾಮವು ದೂರವಾದ ಮೇಲೆ ಕುಂಡಲಿನಿ ಚಕ್ರಗಳ ಸ್ಥಿತಿಯ ನೋಂದಣಿ ಮಾಡುವುದನ್ನು ನಿಲ್ಲಿಸಲಾಯಿತು. ಇದರ ನಂತರ ಅದೇ ಸಾಧಕರು ಒಂದೇ ರೀತಿಯ ಹಣ್ಣಿನ ರಸವನ್ನು ಒಂದೇ ಪ್ರಮಾಣದಲ್ಲಿ ಸೇವಿಸಿದನು. ಮೇಲಿನಂತೆ ಅವರ ಕುಂಡಲಿನಿ ಚಕ್ರಗಳ ಸ್ಥಿತಿಯನ್ನು ನಿಶ್ಚಿತ ಕಾಲಾವಧಿಯ ನಂತರ ಮಾಡಿದ ಅಳತೆಗಳ ನೋಂದಣಿಗಳನ್ನು ಬರೆದಿಡಲಾಯಿತು ಮತ್ತು ಅವರ ಕುಂಡಲಿನಿ ಚಕ್ರಗಳ ಸ್ಥಿತಿಯು ಮೂಲ ನೋಂದಣಿಗೆ ಬಂದ ಮೇಲೆ ಪರೀಕ್ಷಣೆಯನ್ನು ನಿಲ್ಲಿಸಲಾಯಿತು. ಆಮೇಲೆ ಅಳತೆಗಳ ನೋಂದಣಿಗಳ ತುಲನಾತ್ಮಕ ಅಧ್ಯಯನವನ್ನು ಮಾಡಲಾಯಿತು.

೨. ಮಾಡಲಾದ ಅಳತೆಗಳ ನೋಂದಣಿಗಳ ವಿವರಣೆ

೨ ಅ. ಮದ್ಯ ಮತ್ತು ಹಣ್ಣಿನ ರಸವನ್ನು ಸೇವಿಸಿದ ನಂತರ ಕುಂಡಲಿನಿ ಚಕ್ರಗಳ ಕ್ರಿಯಾಶೀಲತೆಯಲ್ಲಿ ಹೆಚ್ಚಳವಾದ ಸಾಧಕರ ಪ್ರಮಾಣ (ಶೇ.)

ಟಿಪ್ಪಣಿ ೧ – ವ್ಯಕ್ತಿಯ ಕುಂಡಲಿನಿಚಕ್ರಗಳ ಕಾರ್ಯಕ್ಕನುಸಾರ ಆಗುವ ೨ ಗುಂಪುಗಳು : ವ್ಯಕ್ತಿಯ ಕುಂಡಲಿನಿಯ ಸಪ್ತಚಕ್ರಗಳು ಅವನ ಶಾರೀರಿಕ, ಮಾನಸಿಕ ಮತ್ತು ಬೌದ್ಧಿಕ ಕಾರ್ಯಗಳಿಗೆ ಬೇಕಾಗುವ ಸೂಕ್ಷ್ಮ ಊರ್ಜೆಯ (ಇಂಧನದ) ನಿಯಂತ್ರಣವನ್ನು ಮಾಡುತ್ತವೆ. ಈ ಸಪ್ತಚಕ್ರಗಳಲ್ಲಿ ಸಹಸ್ರಾರ, ಆಜ್ಞಾ, ವಿಶುದ್ಧ ಮತ್ತು ಅನಾಹತ ಈ ಮೇಲಿನ ನಾಲ್ಕು ಚಕ್ರಗಳು ಮಾನಸಿಕ, ಬೌದ್ಧಿಕ ಹಾಗೆಯೇ ಆಧ್ಯಾತ್ಮಿಕ ಕಾರ್ಯಕ್ಕಾಗಿ ಊರ್ಜೆಯನ್ನು ನೀಡುತ್ತವೆ ಮತ್ತು ಮಣಿಪುರ, ಸ್ವಾಧಿಷ್ಠಾನ ಮತ್ತು ಮೂಲಾಧಾರ ಈ ಕೆಳಗಿನ ೩ ಚಕ್ರಗಳು ಶಾರೀರಿಕ ಕಾರ್ಯಕ್ಕಾಗಿ ಊರ್ಜೆಯನ್ನು ನೀಡುತ್ತವೆ.

ಟಿಪ್ಪಣಿ ೨ – ಕುಂಡಲಿನಿಚಕ್ರಗಳ ಕ್ರಿಯಾಶೀಲತೆಯು ಹೆಚ್ಚಾಗುವುದು ಮತ್ತು ಕಡಿಮೆಯಾಗುವುದು : ‘ಇಲೆಕ್ಟ್ರೋಸೊಮ್ಯಾಟೋಗ್ರಾಫಿಕ್ ಸ್ಕ್ಯಾನಿಂಗ್’ ಮಾಡಲು ನಾವು ಉಪಯೋಗಿಸಿದ ‘ಡಿ.ಡಿ.ಎಫ್.ಎ.ಓ.’ ಎಂಬ ಉಪಕರಣದ ಮೂಲಕ ದೊರಕಿದ ವ್ಯಕ್ತಿಯ ಕುಂಡಲಿಚಕ್ರಗಳ ನೋಂದಣಿಗಳು ‘-೨೦ ರಿಂದ +೨೦’ ಈ ಸಂಖ್ಯೆಗಳಲ್ಲಿದ್ದರೆ, ಆ ನೋಂದಣಿಗಳು ಆ ಚಕ್ರಗಳ ಸರ್ವಸಾಮಾನ್ಯ (ನಾರ್ಮಲ್), ಅಂದರೆ ಒಳ್ಳೆಯ ಕ್ರಿಯಾ ಶೀಲತೆಯನ್ನು ತೋರಿಸುತ್ತವೆ. ಪರೀಕ್ಷಣೆಯಲ್ಲಿನ ಘಟಕದ ಸ್ಪಂದನಗಳಿಂದ ಚಕ್ರಗಳ ಕ್ರಿಯಾಶೀಲತೆಯು -೨೦ಕ್ಕಿಂತ ಕಡಿಮೆಯಾದರೆ ಆ ಚಕ್ರಗಳ ಕ್ರಿಯಾಶೀಲತೆಯು ಕಡಿಮೆಯಾಯಿತು ಎಂದು ಹೇಳಲಾಗುತ್ತದೆ. ಇದರ ಬದಲಾಗಿ -೨೦ ಕ್ಕಿಂತ ಕಡಿಮೆಯಿರುವ ಚಕ್ರಗಳ ಕಾರ್ಯನಿರತತೆಯು ಹೆಚ್ಚಾಗಿ ಅದು -೨೦ ರಿಂದ +೨೦ ಈ ದಿಶೆಯಲ್ಲಾದರೆ, ಅದಕ್ಕೆ ಆ ಚಕ್ರಗಳ ಕ್ರಿಯಾಶೀಲತೆಯು ಹೆಚ್ಚಾಯಿತು ಎಂದು ಹೇಳುತ್ತಾರೆ.


೩. ಅಳತೆಗಳ ನೋಂದಣಿಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೩ ಅ. ಮದ್ಯ ಸೇವಿಸಿದ ಸಾಧಕರ ಕುಂಡಲಿನಿ ಚಕ್ರಗಳ ಕ್ರಿಯಾಶೀಲತೆಯ ಮೇಲಾದ ಪರಿಣಾಮದ ಹಿಂದಿನ ಅಧ್ಯಾತ್ಮಶಾಸ್ತ್ರ

೩ ಅ ೧. ಕೆಟ್ಟ ಶಕ್ತಿಗಳ ತೊಂದರೆ ಇಲ್ಲದಿರುವ ಸಾಧಕರು

೩ ಅ ೧ ಅ. ಮದ್ಯವನ್ನು ಸೇವಿಸಿದ ನಂತರ ಅದರಲ್ಲಿನ ತಮೋಗುಣದಿಂದಾಗಿ ದೇಹದ ಕೃತಿಶೀಲತೆಯು ಕಡಿಮೆಯಾಗಿದ್ದರಿಂದ ಕೆಟ್ಟ ಶಕ್ತಿಗಳ ತೊಂದರೆ ಇಲ್ಲದ ಶೇ. ೮೦ (೫ ರಲ್ಲಿ ೪) ರಷ್ಟು ಸಾಧಕರ ಎಲ್ಲ ಚಕ್ರಗಳ ಕ್ರಿಯಾಶೀಲತೆಯು ಕಡಿಮೆಯಾಗುವುದು : ಮದ್ಯವು ತಮೋಗುಣಿಯಾಗಿದೆ. ತಮೋಗುಣವು ದೇಹವನ್ನು ಚೈತನ್ಯ ಗ್ರಹಣ ಮಾಡುವ ದೃಷ್ಟಿಯಿಂದ ನಿಷ್ಕ್ರಿಯವಾಗಿಸುತ್ತದೆ. ಕೆಟ್ಟ ಶಕ್ತಿಗಳ ತೊಂದರೆ ಇಲ್ಲದಿರುವ ೪ ಸಾಧಕರು ಮದ್ಯ ಸೇವಿಸಿದ ನಂತರ ಅದರಲ್ಲಿನ ತಮೋ ಗುಣವು ಅವರ ದೇಹದಲ್ಲಿ ಹರಡಿತು. ಇದರಿಂದಾಗಿ ಅವರ ದೇಹವು ಅಸಾತ್ತ್ವಿಕವಾಗಿ ಅವರ ದೇಹದ ಕೃತಿಶೀಲತೆಯು ಕಡಿಮೆಯಾಯಿತು. ಇದರ ಪರಿಣಾಮದಿಂದ ಸಾಧಕರ ಎಲ್ಲ ಚಕ್ರಗಳ ಕ್ರಿಯಾಶೀಲತೆಯು ಕಡಿಮೆಯಾಯಿತು. ಇದರಿಂದ ಸತತವಾಗಿ ತಮೋಗುಣದ ಸಂಪರ್ಕದಲ್ಲಿ ಬರುವ ಮನುಷ್ಯನು ವಾಮಮಾರ್ಗಿಯಾಗುತ್ತಾನೆ ಎಂಬುದು ಗಮನಕ್ಕೆ ಬರುತ್ತದೆ. ಓರ್ವ ಸಾಧಕನು ಮದ್ಯ ಸೇವಿಸಿದ ನಂತರವೂ, ಅವನ ಮೇಲಿನ ಚಕ್ರಗಳ ಕ್ರಿಯಾಶೀಲತೆಯು ಮದ್ಯ ಸೇವಿಸುವ ಮೊದಲು ಇದ್ದಂತೆಯೇ ಇತ್ತು.

೩ ಅ ೧ ಆ. ಮದ್ಯದಲ್ಲಿನ ತಮೋಗುಣದ ಕೆಟ್ಟ ಶಕ್ತಿಗಳ ತೊಂದರೆ ಇಲ್ಲದ ಶೇ. ೨೦ (೫ ರಲ್ಲಿ ಒಬ್ಬರು) ರಷ್ಟು ಸಾಧಕರ ಕೆಳಗಿನ ಚಕ್ರಗಳು ಪ್ರತೀಕಾರ ಮಾಡಿದ್ದರಿಂದ ಅವುಗಳ ಕ್ರಿಯಾಶೀಲತೆಯು ಹೆಚ್ಚಾಗುವುದು : ಕೆಟ್ಟ ಶಕ್ತಿಗಳ ತೊಂದರೆ ಇಲ್ಲದಿರುವ ಓರ್ವ ಸಾಧಕನು ಮದ್ಯ ಸೇವಿಸಿದ ನಂತರ ಮದ್ಯದಲ್ಲಿನ ತಮೋಗುಣದ ವಿರುದ್ಧ ಪ್ರತೀಕಾರ ಮಾಡಲು ಅವನ ಕೆಳಗಿನ ೩ ಚಕ್ರಗಳು ಜಾಗೃತವಾದವು. ಇದರಿಂದಾಗಿ ಮದ್ಯ ಸೇವಿಸಿದ ನಂತರ ಮಾಡಲಾದ ಅಳತೆಗಳ ನೋಂದಣಿಯಲ್ಲಿ ಅವನ ಕೆಳಗಿನ ಚಕ್ರಗಳ ಕ್ರಿಯಾಶೀಲತೆಯು ಹೆಚ್ಚಾಗಿರುವುದು ಕಂಡುಬಂದಿತು.

೩ ಅ ೨. ಕೆಟ್ಟ ಶಕ್ತಿಗಳ ತೊಂದರೆಯಿರುವ ವ್ಯಕ್ತಿ

೩ ಅ ೨ ಅ. ಕೆಟ್ಟ ಶಕ್ತಿಗಳ ತೊಂದರೆಯಿಂದಾಗಿ ರಜ-ತಮಾತ್ಮಕ ಘಟಕಕ್ಕೆ ಕಾರ್ಯವನ್ನು ಮಾಡಲು ಪೂರಕವಾಗಿರುವ ದೇಹಕ್ಕೆ ಮದ್ಯದಲ್ಲಿನ ತಮೋಗುಣವು ದೊರಕಿದ್ದರಿಂದ ಕೆಟ್ಟ ಶಕ್ತಿಗಳ ತೊಂದರೆಯಿರುವ ಶೇ. ೬೦ (೫ ರಲ್ಲಿ ಮೂವರು) ರಷ್ಟು ಸಾಧಕರ ಎಲ್ಲ ಚಕ್ರಗಳ ಕ್ರಿಯಾಶೀಲತೆ ಕಡಿಮೆಯಾಗುವುದು : ಕೆಟ್ಟ ಶಕ್ತಿಗಳ ತೊಂದರೆಯಿರುವ ಸಾಧಕರ ದೇಹವು ರಜ-ತಮಾತ್ಮಕ ಘಟಕಕ್ಕೆ ಕಾರ್ಯವನ್ನು ಮಾಡಲು ಹೆಚ್ಚು ಪೂರಕವಾಗಿರುತ್ತದೆ. ಆದುದರಿಂದ ಕೆಟ್ಟ ಶಕ್ತಿಗಳ ತೊಂದರೆಯಿರುವ ೩ ಸಾಧಕರು ಮದ್ಯ ಸೇವಿಸಿದ ನಂತರ ಅದರಲ್ಲಿನ ತಮೋಗುಣವು ಆ ಸಾಧಕರ ಎಲ್ಲ ಚಕ್ರಗಳಿಗೆ ದೊರಕಿತು. ಇದರಿಂದ ಅವರ ಎಲ್ಲ ಚಕ್ರಗಳ ಕ್ರಿಯಾಶೀಲತೆಯು ಕಡಿಮೆಯಾಯಿತು. ಇದರಿಂದ ‘ತಾಮಸಿಕ ಪೇಯವನ್ನು ಸೇವಿಸುವುದರಿಂದ ಕೆಟ್ಟ ಶಕ್ತಿಗಳ ತೊಂದರೆಯಿರುವ ಸಾಧಕರ ತೊಂದರೆ ಇನ್ನೂ ಹೆಚ್ಚಾಗುತ್ತದೆ ಎಂಬುದು ಗಮನಕ್ಕೆ ಬರುತ್ತದೆ.

೩ ಅ ೨ ಆ. ಮದ್ಯದಲ್ಲಿನ ತಮೋಗುಣವನ್ನು ಗ್ರಹಿಸಲು ಚಕ್ರಗಳಲ್ಲಿನ ಕೆಟ್ಟ ಶಕ್ತಿಗಳ ಸ್ಥಾನಗಳು ಜಾಗೃತವಾಗಿದ್ದರಿಂದ, ಕೆಟ್ಟ ಶಕ್ತಿಗಳ ತೊಂದರೆಯಿರುವ ಶೇ. ೪೦ (೫ ರಲ್ಲಿನ ಇಬ್ಬರು) ಸಾಧಕರ ಎಲ್ಲ ಚಕ್ರಗಳ ಕ್ರಿಯಾಶೀಲತೆಯು ಹೆಚ್ಚಾಗುವುದು : ಕೆಟ್ಟ ಶಕ್ತಿಗಳ ತೊಂದರೆಯಿರುವ ಸಾಧಕರ ದೇಹದಲ್ಲಿ ತ್ರಾಸದಾಯಕ ಸ್ಪಂದನಗಳಿಗೆ ಬೇಗ ಮತ್ತು ಅತ್ಯಧಿಕ ಪ್ರಮಾಣದಲ್ಲಿ ಸ್ಪಂದಿಸುವ ತ್ರಾಸದಾಯಕ ಶಕ್ತಿಗಳ ಸ್ಥಾನಗಳಿರುತ್ತವೆ. ಆದ್ದರಿಂದ ಮದ್ಯ ಸೇವಿಸಿದ ನಂತರ ಕೆಟ್ಟ ಶಕ್ತಿಗಳ ತೊಂದರೆಯಿರುವ ಇಬ್ಬರು ಸಾಧಕರ ಎಲ್ಲ ಚಕ್ರಗಳಲ್ಲಿನ ಕೆಟ್ಟ ಶಕ್ತಿಗಳ ಸ್ಥಾನಗಳು ಮದ್ಯದಲ್ಲಿನ ತಮೋಗುಣವನ್ನು ಗ್ರಹಿಸಲು ಜಾಗೃತವಾದವು. ಇದರಿಂದಾಗಿ ಅವರ ಎಲ್ಲ ಚಕ್ರಗಳ ಕ್ರಿಯಾಶೀಲತೆಯು ಹೆಚ್ಚಾಯಿತು. ಅಂದರೆ ಇಲ್ಲಿ ಕಂಡುಬಂದ ಚಕ್ರಗಳ ಕ್ರಿಯಾಶೀಲತೆಯಲ್ಲಿನ ವೃದ್ಧಿಯು ಆ ಸಾಧಕರ ಶಾರೀರಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳಲ್ಲಿ ವೃದ್ಧಿಯನ್ನು ಮಾಡುವಂತಹದ್ದಾಗಿರಲಿಲ್ಲ. ಏಕೆಂದರೆ ಈ ಚಕ್ರಗಳು ತಮೋಗುಣವನ್ನು ಗ್ರಹಿಸಲು ಕಾರ್ಯನಿರತವಾಗಿದ್ದವು.

೩ ಆ. ಹಣ್ಣಿನ ರಸ ಸೇವಿಸಿದ ಸಾಧಕರ ಕುಂಡಲಿನಿ ಚಕ್ರಗಳ ಕ್ರಿಯಾಶೀಲತೆಯಲ್ಲಿ ಆಗಿರುವ ಪರಿಣಾಮದ ಹಿಂದಿನ ಅಧ್ಯಾತ್ಮಶಾಸ್ತ್ರ

೩ ಆ ೧. ಕೆಟ್ಟ ಶಕ್ತಿಗಳ ತೊಂದರೆ ಇಲ್ಲದಿರುವ ಸಾಧಕರು

ಅ. ಹಣ್ಣಿನ ರಸವನ್ನು ಸೇವಿಸಿದ ನಂತರ ಕೆಟ್ಟ ಶಕ್ತಿಗಳ ತೊಂದರೆ ಇಲ್ಲದಿರುವ ಶೇ. ೪೦ (೫ ರಲ್ಲಿನ ಇಬ್ಬರು) ಸಾಧಕರ ಮೇಲಿನ ಚಕ್ರಗಳ ಕ್ರಿಯಾಶೀಲತೆಯಲ್ಲಿ ಹೆಚ್ಚಳವಾಯಿತು : ಹಣ್ಣಿನ ರಸವು ಸಾತ್ತ್ವಿಕವಾಗಿರುತ್ತದೆ. ಅದನ್ನು ಸೇವಿಸಿದ ನಂತರ ಅದರಲ್ಲಿನ ಸಾತ್ತ್ವಿಕ ಸ್ಪಂದನಗಳಿಂದ ಸಾಧಕರ ಪಂಚಪ್ರಾಣಗಳಿಗೆ ಜಾಗೃತಿ ಬಂದಿತು. ಇದರಿಂದಾಗಿ ಅವರ ದೇಹದಲ್ಲಿನ ಚೇತನದ ಕಾರ್ಯವು ಹೆಚ್ಚು ಒಳ್ಳೆಯ ರೀತಿಯಲ್ಲಿ ಆಗತೊಡಗಿತು. ಇದರಿಂದಾಗಿ ದೇಹದಲ್ಲಿ ಸತ್ತ್ವಗುಣವು ಅಲ್ಪ ಕಾಲಾವಧಿಯಲ್ಲಿಯೇ ಎಲ್ಲ ಕಡೆಗೆ ಹರಡಿತು. ಸತ್ತ್ವಗುಣಕ್ಕೆ ಸ್ಪಂದಿಸುವುದರಲ್ಲಿ ಮನುಷ್ಯನ ದೇಹದಲ್ಲಿನ ಕೆಳಗಿನ ಚಕ್ರಗಳ ತುಲನೆಯಲ್ಲಿ ಮೇಲಿನ ಚಕ್ರಗಳು ಹೆಚ್ಚು ಸಂವೇದನಾಶೀಲವಾಗಿರುತ್ತವೆ. ಆದುದರಿಂದ ಈ ಚಕ್ರಗಳು ಕಡಿಮೆ ಕಾಲಾವಧಿಯಲ್ಲಿಯೇ ಸತ್ತ್ವಗುಣವನ್ನು ಗ್ರಹಿಸಿ ಅವನ ದೇಹದಲ್ಲಿ ಸಂವರ್ಧಿಸಲು ಆರಂಭಿಸುತ್ತವೆ. ಈ ಸಂವರ್ಧನೆಯ ಪ್ರಕ್ರಿಯೆಗೆ ಕೆಟ್ಟ ಶಕ್ತಿಗಳ ತೊಂದರೆ ಇಲ್ಲದಿರುವ ಸಾಧಕರ ದೇಹದಿಂದ ಯಾವುದೇ ರೀತಿಯ ವಿರೋಧವಾಗುವುದಿಲ್ಲ. ಹಣ್ಣಿನ ರಸವನ್ನು ಸೇವಿಸಿದ ನಂತರ ಸತ್ತ್ವಗುಣದ ಸಂಗ್ರಹದಿಂದಾಗಿ ಈ ಸಾಧಕರ ಮೇಲಿನ ಚಕ್ರಗಳ ಕಾರ್ಯಕ್ಕೆ ಚಾಲನೆಯು ಸಿಕ್ಕಿತು. ಆದುದರಿಂದ ಆ ಚಕ್ರಗಳ ಕ್ರಿಯಾಶೀಲತೆಯು ಹೆಚ್ಚಾಯಿತು.

೩ ಆ ೧ ಆ. ಹಣ್ಣಿನ ರಸವನ್ನು ಸೇವಿಸಿದ ನಂತರ ರಸದಲ್ಲಿನ ಸಾತ್ತ್ವಿಕತೆಯಿಂದಾಗಿ ಮೇಲಿನ ಚಕ್ರಗಳು ಗುಣಾತೀತವಾಗತೊಡಗಿದವು, ಇದರಿಂದ ಕೆಟ್ಟ ಶಕ್ತಿಗಳ ತೊಂದರೆ ಇಲ್ಲದ ಶೇ. ೬೦ (೫ ರಲ್ಲಿನ ಮೂವರು) ಸಾಧಕರ ಈ ಚಕ್ರಗಳ ಕ್ರಿಯಾಶೀಲತೆಯು ಕಡಿಮೆಯಾಗುವುದು : ಇಲ್ಲಿ ಉಲ್ಲೇಖಿಸಲಾದ ಮೂವರು ಸಾಧಕರು ಕೆಟ್ಟ ಶಕ್ತಿಗಳ ತೊಂದರೆ ಇಲ್ಲದಿರುವ ಮತ್ತು ಶೇ. ೬೦ ಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ಮಟ್ಟದ, ಅಂದರೆ ಸತ್ತ್ವಗುಣದಿಂದ ಕೂಡಿದ್ದಾರೆ. ಆದುದರಿಂದ ಹಣ್ಣಿನ ರಸದ ಸಂಪರ್ಕಕ್ಕೆ ಬಂದ ನಂತರ ಅದರಲ್ಲಿನ ಸತ್ತ್ವಗುಣದಿಂದಾಗಿ ಈ ಸಾಧಕರ ಮೇಲಿನ ಚಕ್ರಗಳು ಗುಣಾತೀತವಾಗತೊಡಗಿದವು, ಅಂದರೆ ಅವರು ನಿರ್ಗುಣದ ಕಡೆಗೆ ಹೋಗಲಾರಂಭಿಸಿದರು. ಆದುದರಿಂದ ಈ ಚಕ್ರಗಳು ನಿಷ್ಕ್ರಿಯವಾದವು, ಅಂದರೆ ಅವುಗಳ ಕ್ರಿಯಾಶೀಲತೆಯು ಕಡಿಮೆಯಾಯಿತು.


೩ ಆ ೨. ಕೆಟ್ಟ ಶಕ್ತಿಗಳ ತೊಂದರೆಯಿರುವ ಸಾಧಕರು

೩ ಆ ೨ ಅ. ಹಣ್ಣಿನ ರಸವನ್ನು ಸೇವಿಸಿದ ನಂತರ ಕೆಟ್ಟ ಶಕ್ತಿಗಳ ತೊಂದರೆಯಿರುವ ಬುದ್ಧಿಜೀವಿ ಸಾಧಕರ ಮೇಲಿನ ಚಕ್ರಗಳ ಕ್ರಿಯಾಶೀಲತೆಯು ಹೆಚ್ಚಾಗುವುದು ಮತ್ತು ಅವರ ಕೆಳಗಿನ ಚಕ್ರಗಳ ಕ್ರಿಯಾಶೀಲತೆಯು ಕಡಿಮೆಯಾಗುವುದು : ಪ್ರಯೋಗದಲ್ಲಿ ಕೆಟ್ಟ ಶಕ್ತಿಗಳ ತೊಂದರೆಯಿರುವ ೫ ಸಾಧಕರಲ್ಲಿ ಇಬ್ಬರು ಸಾಧಕರು ಬುದ್ಧಿಜೀವಿಗಳಾಗಿದ್ದಾರೆ. ಬುದ್ಧಿಯಿಂದ ಕೃತಿ ಮಾಡುವ ಜೀವಗಳಲ್ಲಿ ಸಾಧಾರಣ ಮೇಲಿನ ಚಕ್ರಗಳ ಸಂವೇದನಾಶೀಲತೆಯು ಕೆಳಗಿನ ಚಕ್ರಗಳ ಸಂವೇದನಾಶೀಲತೆಗಿಂತ ಹೆಚ್ಚಿರುತ್ತದೆ. ಈ ಸಾಧಕರಲ್ಲಿ ಮೇಲಿನ ಚಕ್ರಗಳ ಸಹಾಯದಿಂದ ಕೃತಿ ಮಾಡುವ ಪ್ರಮಾಣವು ಹೆಚ್ಚಿರುತ್ತದೆ. ಆದುದರಿಂದ ಕೆಟ್ಟ ಶಕ್ತಿಗಳು ನೇರವಾಗಿ ಈ ಚಕ್ರಗಳ ಮೇಲೆ ಆಕ್ರಮಣ ಮಾಡಿ ಅಲ್ಲಿ ತಮ್ಮ ಸ್ಥಾನಗಳನ್ನು ನಿರ್ಮಾಣ ಮಾಡುತ್ತವೆ. ಇದರ ಪರಿಣಾಮದಿಂದ ಸಾಧಕರ ಬುದ್ಧಿಯ ಮೇಲೆ ಆವರಣ ಬಂದು ಸೇವೆಯನ್ನು ಮಾಡುವಾಗ ಏನೂ ಹೊಳೆಯದಿರುವುದು ಮತ್ತು ನಿರ್ಣಯ ತೆಗೆದುಕೊಳ್ಳಲು ಆಗದಿರುವುದು ಇವುಗಳ ಪ್ರಮಾಣ ಹೆಚ್ಚಾಗುತ್ತದೆ. ಈ ಇಬ್ಬರು ಬುದ್ಧಿಜೀವಿ ಸಾಧಕರು ಹಣ್ಣಿನ ರಸವನ್ನು ಸೇವಿಸಿದ ನಂತರ ಅವರ ಮೇಲಿನ ಚಕ್ರಗಳು ಹಣ್ಣಿನ ರಸದಿಂದ ಪ್ರಕ್ಷೇಪಿತವಾಗುವ ಸಾತ್ತ್ವಿಕತೆಗೆ ಕೂಡಲೇ ಸ್ಪಂದಿಸಿದವು. ಅದರೊಂದಿಗೆ ಅವರಲ್ಲಿನ ಕೆಟ್ಟ ಶಕ್ತಿಗಳೂ ಅಷ್ಟೇ ವೇಗವಾಗಿ ಮೇಲಿನ ಚಕ್ರಗಳಲ್ಲಿನ ಅವುಗಳ ಸ್ಥಾನಗಳನ್ನು ಕೆಳಗಿನ ಚಕ್ರಗಳಲ್ಲಿ ತಂದವು. ಇದರಿಂದಾಗಿ ಮೇಲಿನ ಚಕ್ರಗಳಲ್ಲಿನ ತ್ರಾಸದಾಯಕ ಶಕ್ತಿಯು ಕಡಿಮೆಯಾದುದರಿಂದ, ಅವುಗಳ ಕ್ರಿಯಾಶೀಲತೆಯು ಹೆಚ್ಚಾಯಿತು. ಆದರೆ ಅದೇ ಸಮಯದಲ್ಲಿ ಅವರ ಕೆಳಗಿನ ಚಕ್ರಗಳ ಕ್ರಿಯಾಶೀಲತೆಯು ಕಡಿಮೆಯಾಯಿತು.

೩ ಆ ೨ ಆ. ಹಣ್ಣಿನ ರಸವನ್ನು ಸೇವಿಸಿದ ನಂತರ ಕೆಟ್ಟ ಶಕ್ತಿಗಳ ತೊಂದರೆಯಿರುವ ಭಾವನೆಯ ಸ್ತರದಲ್ಲಿ ಹೆಚ್ಚು ಸಂವೇದನಾಶೀಲವಾಗಿರುವ ಸಾಧಕರ ಮೇಲಿನ ಚಕ್ರಗಳ ಕ್ರಿಯಾಶೀಲತೆಯು ಕಡಿಮೆಯಾಗುವುದು ಮತ್ತು ಕೆಳಗಿನ ಚಕ್ರಗಳ ಕ್ರಿಯಾಶೀಲತೆಯು ಹೆಚ್ಚಾಗುವುದು : ಪ್ರಯೋಗದಲ್ಲಿನ ಕೆಟ್ಟ ಶಕ್ತಿಗಳ ತೊಂದರೆಯಿರುವ ೫ ಸಾಧಕರಲ್ಲಿನ ಇಬ್ಬರು ಸಾಧಕರ ಮನಸ್ಸು ಭಾವನೆಯ ಸ್ತರದಲ್ಲಿ ಹೆಚ್ಚು ಸಂವೇದನಾಶೀಲವಾಗಿದೆ. ಇಂತಹ ಜೀವಗಳಲ್ಲಿ ಕೆಳಗಿನ ಚಕ್ರಗಳ ಮಾಧ್ಯಮದಿಂದ ಯಾವುದೇ ಕ್ರಿಯೆಗೆ ಸ್ಪಂದಿಸುವ ಕ್ಷಮತೆಯು ಹೆಚ್ಚಿರುವುದರಿಂದ ಕೆಟ್ಟ ಶಕ್ತಿಗಳು ಹೆಚ್ಚಿನ ಪ್ರಮಾಣದಲ್ಲಿ ಅವರ ಕೆಳಗಿನ ಚಕ್ರಗಳಲ್ಲಿ ತಮ್ಮ ಸ್ಥಾನಗಳನ್ನು ನಿರ್ಮಿಸುತ್ತವೆ. ಈ ಇಬ್ಬರು ಸಾಧಕರು ಹಣ್ಣಿನ ರಸವನ್ನು ಸೇವಿಸಿದ ನಂತರ ರಸದಲ್ಲಿನ ಸಾತ್ತ್ವಿಕತೆಯಿಂದ ಅವರ ಕೆಳಗಿನ ಚಕ್ರಗಳ ಮೇಲೆ ಸಕಾರಾತ್ಮಕ ಪರಿಣಾಮವಾಗತೊಡಗಿತು. ಇದರಿಂದಾಗಿ ಕೆಟ್ಟ ಶಕ್ತಿಗಳು ಈ ಚಕ್ರಗಳಲ್ಲಿನ ತಮ್ಮ ಸ್ಥಾನಗಳನ್ನು ಬಿಟ್ಟು ಅವು ಮೇಲಿನ ಚಕ್ರಗಳ ಕಡೆ ಹೋದವು. ಇದರಿಂದಾಗಿ ಮೇಲಿನ ಚಕ್ರಗಳ ಕ್ರಿಯಾಶೀಲತೆಯು ಕಡಿಮೆಯಾಯಿತು ಮತ್ತು ಅವರ ಕೆಳಗಿನ ಚಕ್ರಗಳ ಕ್ರಿಯಾಶೀಲತೆಯು ಹೆಚ್ಚಾಯಿತು.

೩ ಇ. ಮದ್ಯ ಮತ್ತು ಹಣ್ಣಿನ ರಸವನ್ನು ಸೇವಿಸುವುದರಿಂದ ಸಾಧಕರ ಕುಂಡಲಿನಿ ಚಕ್ರಗಳ ಮೇಲಾದ ಪರಿಣಾಮ ಉಳಿಯುವ ಕಾಲಾವಧಿಯ ಹಿಂದಿನ ಅಧ್ಯಾತ್ಮಶಾಸ್ತ್ರ

೩ ಇ ೧. ಕೆಟ್ಟ ಶಕ್ತಿಗಳ ತೊಂದರೆ ಇಲ್ಲದಿರುವ ಸಾಧಕರ ಮೇಲೆ ಹಣ್ಣಿನ ರಸದ ಪರಿಣಾಮ ಉಳಿಯುವ ಕಾಲಾವಧಿಗಿಂತ ಮದ್ಯದ ಪರಿಣಾಮ ಉಳಿಯುವ ಕಾಲಾವಧಿಯು ಹೆಚ್ಚಿರುವುದು ಮತ್ತು ಅದರ ಶಾಸ್ತ್ರ

ಕೆಟ್ಟ ಶಕ್ತಿಗಳ ತೊಂದರೆ ಇಲ್ಲದಿರುವ ಸಾಧಕರ ಗುಂಪಿನಲ್ಲಿ ೫ ಸಾಧಕರ ಮೇಲೆ ಮದ್ಯದ ಪರಿಣಾಮ ಉಳಿಯುವ ಗರಿಷ್ಠ ಕಾಲಾವಧಿಯು ೧೭೦ ಗಂಟೆ ೨೧ ನಿ. ಇತ್ತು ಮತ್ತು ಹಣ್ಣಿನ ರಸದ ಪರಿಣಾಮ ಉಳಿಯುವ ಗರಿಷ್ಠ ಕಾಲಾವಧಿಯು ೭೬ ಗಂಟೆ ೮ ನಿ. ಇತ್ತು. ಹಣ್ಣಿನ ರಸದ ಪರಿಣಾಮ ಉಳಿಯುವ ಕಾಲಾವಧಿ ಕಡಿಮೆ ಇರುವುದರ ಹಿಂದಿನ ಶಾಸ್ತ್ರವನ್ನು ಮುಂದೆ ಕೊಡಲಾಗಿದೆ.

೩ ಇ ೧ ಅ. ಕಲಿಯುಗದಿಂದಾಗಿ ಸಾಧಕರ ಮೇಲೆ ತ್ರಾಸದಾಯಕ ಸ್ಪಂದನಗಳ ಪ್ರಭಾವವು ಸ್ವಲ್ಪವಾದರೂ ಇದ್ದೇ ಇರುತ್ತದೆ ಮತ್ತು ಮದ್ಯವು ಆ ತ್ರಾಸದಾಯಕ ಆವರಣದ ಕ್ರಿಯಾಶೀಲತೆಯನ್ನು ಉಳಿಸಲು ಪೂರಕವಾಗಿರುತ್ತದೆ : ಸದ್ಯ ಕಲಿಯುಗ ಇರುವುದರಿಂದ ಕೆಟ್ಟ ಶಕ್ತಿಗಳ ತೊಂದರೆ ಇಲ್ಲದಿರುವ ಸಾಧಕರ ಮೇಲೆಯೂ ವಾತಾವರಣದಲ್ಲಿನ ತ್ರಾಸದಾಯಕ ಸ್ಪಂದನಗಳ ಪ್ರಭಾವವು ಸ್ವಲ್ಪ ಮಟ್ಟಿಗೆ ಇದ್ದೇ ಇರುತ್ತದೆ. ಮದ್ಯವು ಆ ತ್ರಾಸದಾಯಕ ಆವರಣದ ಕ್ರಿಯಾಶೀಲತೆಯನ್ನು ಉಳಿಸಲು ಪೂರಕವಾಗಿರುವುದರಿಂದ ಅದರ ಪರಿಣಾಮವು ಸಾಧಕರ ಮೇಲೆ ಹೆಚ್ಚು ಸಮಯ ಉಳಿಯಿತು.

೩ ಇ ೧ ಆ. ಪ್ರಸಕ್ತ ಸ್ಥಿತಿಯಲ್ಲಿನ ವಾಯುಮಂಡಲದ ಪರಿಣಾಮ : ಯಾವ ಸಮಯದಲ್ಲಿ ಪ್ರಸಕ್ತ ಸ್ಥಿತಿಯಲ್ಲಿನ ವಾಯುಮಂಡಲದಲ್ಲಿನ ರಜ-ತಮದ ಪ್ರಮಾಣವು ಹೆಚ್ಚಾಗಿರುತ್ತದೆಯೋ, ಆ ಸಮಯದಲ್ಲಿ ದೇಹದ ಸ್ಥಿತಿಯೂ ಆಯಾ ತ್ರಾಸದಾಯಕ ಸ್ಪಂದನಗಳ ಸಂಪರ್ಕದಲ್ಲಿದ್ದು ದೂಷಿತ ವಾಯುಮಂಡಲದೊಂದಿಗೆ ಒಂದಾಗುತ್ತದೆ. ಇಂತಹ ಸ್ಥಿತಿಯಲ್ಲಿ ರಜ-ತಮಾತ್ಮಕ ಸ್ಪಂದನಗಳನ್ನು ಪ್ರಕ್ಷೇಪಿಸುವ ಮತ್ತು ಗ್ರಹಿಸುವ ಪೇಯವನ್ನು ಸೇವಿಸಿದರೆ, ದೇಹವು ಆ ತಮೋಗುಣಿ ಪೇಯದ ಪರಿಣಾಮ ಉಳಿಯುವ ಕಾಲಾವಧಿಯನ್ನು ಗರಿಷ್ಠ ಸ್ತರದಲ್ಲಿ ತೋರಿಸುತ್ತದೆ. ಆದ್ದರಿಂದ ಮದ್ಯದ ಪರಿಣಾಮ ಉಳಿಯುವ ಗರಿಷ್ಠ ಕಾಲಾವಧಿ ಹೆಚ್ಚಿಗಿತ್ತು.

೩ ಇ ೨. ಕೆಟ್ಟ ಶಕ್ತಿಗಳ ತೊಂದರೆಯಿರುವ ಸಾಧಕರ ಮೇಲೆ ಮದ್ಯ ಮತ್ತು ಹಣ್ಣಿನ ರಸದ ಪರಿಣಾಮ ಉಳಿಯುವ ಕಾಲಾವಧಿ ಮತ್ತು ಅದರ ಕಾರಣಗಳು

ಕೆಟ್ಟ ಶಕ್ತಿಗಳ ತೊಂದರೆಯಿರುವ ೫ ಸಾಧಕರಲ್ಲಿ ಮದ್ಯ ಸೇವಿಸಿದ ನಂತರ ಅದರ ಪರಿಣಾಮ ಉಳಿಯುವ ಗರಿಷ್ಠ ಕಾಲಾವಧಿಯು ೧೩೮ ಗಂಟೆ ೫ ನಿ. ಆಗಿತ್ತು ಮತ್ತು ಹಣ್ಣಿನ ರಸದ ಪರಿಣಾಮ ಉಳಿಯುವ ಅತ್ಯಧಿಕ ಕಾಲಾವಧಿಯು ೨೬ ಗಂಟೆ ೧೨ ನಿ. ದಷ್ಟು ಕಡಿಮೆಯಿತ್ತು. ಇವುಗಳ ಕಾರಣಗಳನ್ನು ಮುಂದೆ ಕೊಡಲಾಗಿದೆ.

೩ ಇ ೨ ಅ. ಕೆಟ್ಟ ಶಕ್ತಿಗಳ ತೊಂದರೆಯಿರುವ ಸಾಧಕರ ದೇಹದಲ್ಲಿ ತ್ರಾಸದಾಯಕ ಸ್ಪಂದನಗಳಿಗೆ ಬೇಗ ಮತ್ತು ಗರಿಷ್ಠ ಪ್ರಮಾಣದಲ್ಲಿ ಸ್ಪಂದಿಸುವ ತ್ರಾಸದಾಯಕ ಶಕ್ತಿಗಳ ಸ್ಥಾನಗಳಿರುವುದರಿಂದ ಹಣ್ಣಿನ ರಸದ ತುಲನೆಯಲ್ಲಿ ತಾಮಸಿಕ ಮದ್ಯದ ಪರಿಣಾಮವು ಚಕ್ರಗಳ ಮೇಲೆ ಉಳಿಯುವ ಕಾಲಾವಧಿಯು ಹೆಚ್ಚಿರುವುದು : ಕೆಟ್ಟ ಶಕ್ತಿಗಳ ತೊಂದರೆಯಿರುವ ಸಾಧಕರ ದೇಹದಲ್ಲಿ ತ್ರಾಸದಾಯಕ ಸ್ಪಂದನಗಳಿಗೆ ಬೇಗ ಮತ್ತು ಗರಿಷ್ಠ ಪ್ರಮಾಣದಲ್ಲಿ ಸ್ಪಂದಿಸುವ ತ್ರಾಸದಾಯಕ ಶಕ್ತಿಗಳ ಸ್ಥಾನಗಳಿರುತ್ತವೆ. ಅವರ ದೇಹವು ಬಾಹ್ಯ ವಾಯುಮಂಡಲದಲ್ಲಿನ ರಜ-ತಮಾತ್ಮಕ ಘಟಕಗಳೊಂದಿಗೆ ಕಾರ್ಯವನ್ನು ಮಾಡಲು ಹೆಚ್ಚು ಪೂರಕವಾಗಿರುತ್ತದೆ. ಆದುದರಿಂದ ಅವರ ದೇಹದಲ್ಲಿನ ಚಕ್ರಗಳ ಮೇಲೆ ರಜ-ತಮಾತ್ಮಕ ಘಟಕದ ಪರಿಣಾಮ ಉಳಿಯುವ ಕಾಲಾವಧಿಯು ಯಾವುದಾದರೊಂದು ಸಾತ್ತ್ವಿಕ ಘಟಕದ ಪರಿಣಾಮ ಉಳಿಯುವ ಕಾಲಾವಧಿಗಿಂತ ಹೆಚ್ಚಿರುತ್ತದೆ.

೩ ಇ ೨ ಆ. ಹಣ್ಣಿನ ರಸದಲ್ಲಿನ ಒಳ್ಳೆಯ ಶಕ್ತಿಯು ದೇಹದಲ್ಲಿನ ತ್ರಾಸದಾಯಕ ಸ್ಥಾನಗಳನ್ನು ನಾಶ ಮಾಡಲು ಉಪಯೋಗವಾಗುವುದರಿಂದ ಅದರ ಪರಿಣಾಮವು ಮದ್ಯದ ಪರಿಣಾಮಕ್ಕಿಂತ ಕಡಿಮೆ ಸಮಯ ಉಳಿಯುವುದು : ಕೆಟ್ಟ ಶಕ್ತಿಗಳ ತೊಂದರೆಯಿರುವ ಸಾಧಕರ ದೇಹದ ಮೇಲೆ ಸಾತ್ತ್ವಿಕ ಘಟಕದ ಪರಿಣಾಮವು ಯುದ್ಧದಂತಿರುತ್ತದೆ. ಇದರಿಂದಾಗಿ ಆ ಘಟಕದಲ್ಲಿನ ಒಳ್ಳೆಯ ಶಕ್ತಿಗೆ ಸಂಬಂಧಿಸಿದ ಸ್ಪಂದನಗಳನ್ನು ದೇಹವು ಗ್ರಹಿಸಿದರೂ ಅದು ದೇಹದಲ್ಲಿನ ತ್ರಾಸದಾಯಕ ಸ್ಪಂದನಗಳನ್ನು ನಾಶಗೊಳಿಸಲು ಬಳಕೆಯಾಗುವುದರಿಂದ ಸಾತ್ತ್ವಿಕ ಘಟಕದ ಪರಿಣಾಮವು ಅಸಾತ್ತ್ವಿಕ ಘಟಕದ ಪರಿಣಾಮಕ್ಕಿಂತ ಕಡಿಮೆ ಸಮಯ ಉಳಿಯುತ್ತದೆ. ಇದರಿಂದಾಗಿ ಮದ್ಯದ ಅಸಾತ್ತ್ವಿಕ ಪೇಯದ ಪರಿಣಾಮವು ಎಷ್ಟು ಸಮಯ ಉಳಿಯಿತೋ, ಅಷ್ಟು ಸಮಯ ಹಣ್ಣಿನ ಸಾತ್ತ್ವಿಕ ಪೇಯದ ಪರಿಣಾಮ ಉಳಿಯಲಿಲ್ಲ.

೪.ನಿಷ್ಕರ್ಷ

ಅ. ಮದ್ಯದಲ್ಲಿನ ತಮೋಗುಣದ ಸಂಪರ್ಕದಿಂದ ಮನುಷ್ಯನು ವಾಮಮಾರ್ಗಿಯಾಗುತ್ತಾನೆ ಮತ್ತು ಕೆಟ್ಟ ಶಕ್ತಿಗಳ ತೊಂದರೆಯಿರುವ ವ್ಯಕ್ತಿಗಳ ತೊಂದರೆಯು ಇನ್ನೂ ಹೆಚ್ಚಾಗುತ್ತದೆ.

ಆ. ಹಣ್ಣಿನ ರಸದಂತಹ ಸಾತ್ತ್ವಿಕ ಪೇಯವನ್ನು ಸೇವಿಸಿದರೆ ಕೆಟ್ಟ ಶಕ್ತಿಗಳ ತೊಂದರೆಯಿರುವ ವ್ಯಕ್ತಿಗಳ ತೊಂದರೆಯು ಕಡಿಮೆಯಾಗುತ್ತದೆ ಮತ್ತು ಕೆಟ್ಟ ಶಕ್ತಿಗಳ ತೊಂದರೆಯಿಲ್ಲದಿರುವ ವ್ಯಕ್ತಿಗಳ ಸಾತ್ತ್ವಿಕತೆಯು ಇನ್ನೂ ಹೆಚ್ಚಾಗುತ್ತದೆ.

– ಡಾ. (ಸೌ.) ನಂದಿನಿ ದುರ್ಗೇಶ ಸಾಮಂತ್, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೭.೬.೨೦೧೯)

Leave a Comment