ಮುಂಬರಲಿರುವ ಭೀಕರವಾದ ಆಪತ್ಕಾಲವನ್ನು ಎದುರಿಸಲು ಇಂದಿನಿಂದಲೇ ವಿವಿಧ ಸ್ತರಗಳಲ್ಲಿ ಸಿದ್ಧತೆಯನ್ನು ಮಾಡಿಕೊಳ್ಳಿರಿ !

೨೦೦೦ ನೇ ಇಸವಿಯಿಂದಲೇ ‘ಕಾಲಮಹಿಮೆಗನುಸಾರ ಶೀಘ್ರವಾಗಿ ಆಪತ್ಕಾಲವು ಬರುವುದು’, ಎಂದು ಸಾಧಕರಿಗೆ ತಿಳಿದಿದೆ; ಆದರೆ ಪ್ರಸ್ತುತ ಆಪತ್ಕಾಲವು ತುಂಬಾ ಹತ್ತಿರ ಎಂದರೆ ಬಾಗಿಲಿಗೆ ಬಂದು ನಿಂತಿದೆ. ಘೋರ ಆಪತ್ಕಾಲವು ಪ್ರಾರಂಭವಾಗಲು ಇನ್ನು ಕೇವಲ ಕೆಲವು ತಿಂಗಳುಗಳು ಬಾಕಿ ಇವೆ. ೨೦೧೯ ರ ನಂತರ ನಿಧಾನವಾಗಿ ಮೂರನೇ ಮಹಾಯುದ್ಧವು ಪ್ರಾರಂಭವಾಗುವುದೆಂದು ಅನೇಕ ನಾಡಿಭವಿಷ್ಯವನ್ನು ಹೇಳುವವರು ಮತ್ತು ದಾರ್ಶನಿಕ ಸಾಧು-ಸಂತರು ಹೇಳಿದ್ದಾರೆ. ಮೊದಲು ಮಹಾಯುದ್ಧವು ಮಾನಸಿಕ ಸ್ತರದಲ್ಲಿ ಇರುವುದು; ಏಕೆಂದರೆ ಯಾವುದೇ ಎರಡು ರಾಷ್ಟ್ರಗಳಲ್ಲಿನ ಮಹಾಯುದ್ಧಗಳು ಮೊದಲಿಗೆ ಮಾನಸಿಕ ಸ್ತರದಲ್ಲಿರುತ್ತವೆ, ಉದಾ. ಕೋರಿಯಾ-ಅಮೇರಿಕಾ ಸಂಘರ್ಷ, ಚೀನಾ-ಅಮೇರಿಕಾ ಸಂಘರ್ಷ. ಮುಂದೆ ೨-೩ ವರ್ಷಗಳಲ್ಲಿ ಮಹಾಯುದ್ಧವು ಭೌತಿಕ ಸ್ತರದಲ್ಲಿ ಆಗುವುದು. ಆಗ ‘ಒಣ ಕಟ್ಟಿಗೆಯೊಂದಿಗೆ ಹಸಿ ಕಟ್ಟಿಗೆಯೂ ಸುಡುತ್ತದೆ’, ಎಂಬ ಸಿದ್ಧಾಂತಕ್ಕನುಸಾರ ಸಮಾಜದಲ್ಲಿನ ಸಜ್ಜನರು, ಸಾಧಕರು ಮುಂತಾದವರಿಗೂ ಆಪತ್ಕಾಲದ ಬಿಸಿ ತಟ್ಟಲಿದೆ.

ಆಪತ್ಕಾಲದಲ್ಲಿ ನೆರೆ, ಬಿರುಗಾಳಿ, ಭೂಕಂಪ ಮುಂತಾದವುಗಳಿಂದಾಗಿ ವಿದ್ಯುತ್‌ ಪೂರೈಕೆ ಕಡಿತವಾಗುತ್ತದೆ. ಪೆಟ್ರೋಲ್, ಡೀಸೆಲ್ ಮುಂತಾದವುಗಳ ಕೊರತೆ ಯಾಗುವುದರಿಂದ ಸಾರಿಗೆ-ವ್ಯವಸ್ಥೆಯೂ ಕುಸಿಯುವುದು. ಆದುದರಿಂದ ಅಡುಗೆ ಅನಿಲ, ತಿನ್ನುವ-ಕುಡಿಯುವ ವಸ್ತು ಮುಂತಾದವುಗಳು ಅನೇಕ ತಿಂಗಳುಗಳ ಕಾಲ ಸಿಗುವುದಿಲ್ಲ ಅಥವಾ ಸಿಕ್ಕಿದರೂ ಅವುಗಳ ‘ರೆಶನಿಂಗ್’ ಆಗುತ್ತದೆ. ಆಪತ್ಕಾಲದಲ್ಲಿ ಡಾಕ್ಟರರು, ವೈದ್ಯರು, ಔಷಧಿಗಳು, ಆಸ್ಪತ್ರೆಗಳು ಮುಂತಾದವುಗಳು ಸಿಗುವುದು ಬಹುತೇಕ ಅಸಾಧ್ಯವೇ ಆಗಿರುತ್ತದೆ. ಇವೆಲ್ಲವುಗಳನ್ನು ಗಮನದಲ್ಲಿಟ್ಟು ಆಪತ್ಕಾಲವನ್ನು ಎದುರಿಸಲು ಎಲ್ಲರೂ ಶಾರೀರಿಕ, ಮಾನಸಿಕ, ಕೌಟುಂಬಿಕ, ಆರ್ಥಿಕ, ಆಧ್ಯಾತ್ಮಿಕ ಮುಂತಾದ ಸ್ತರಗಳಲ್ಲಿ ಪೂರ್ವಸಿದ್ಧತೆ ಮಾಡುವುದು ಆವಶ್ಯಕವಿದೆ. ಇವುಗಳ ಬಗೆಗಿನ ಸಾಮಾನ್ಯ ವಿವರಣೆಯನ್ನು ಮುಂದೆ ಕೊಡಲಾಗಿದೆ. ಈ ವಿವರಣೆಗನುಸಾರ ಎಷ್ಟು ಸಾಧ್ಯವೋ ಅಷ್ಟನ್ನು ಕಾರ್ಯರೂಪಕ್ಕೆ ತರಲು ಈ ಕ್ಷಣದಿಂದಲೇ ಪ್ರಾರಂಭಿಸಬೇಕು.

೧. ಆಪತ್ಕಾಲದ ದೃಷ್ಟಿಯಿಂದ ಶಾರೀರಿಕ ಸ್ತರದಲ್ಲಿ ಮಾಡಬೇಕಾದ ಸಿದ್ಧತೆ

೧ ಅ. ಮಾನವನಿರ್ಮಿತ ಅಥವಾ ನೈಸರ್ಗಿಕ ಆಪತ್ತುಗಳಿಂದ ರಕ್ಷಣೆಯಾಗಲು ಇದನ್ನು ಮಾಡಬೇಕು !

೧ ಅ ೧. ಮುಂಬರುವ ಮೂರನೇ ಮಹಾಯುದ್ಧದಲ್ಲಿ ಅಣ್ವಸ್ತ್ರ ಬಳಕೆಯಿಂದ ಹೊರಬರುವ ವಿಕಿರಣಗಳಿಂದ ಆಗುವ ಜೀವಘಾತಕ ಪ್ರಭಾವವನ್ನು ನಾಶಗೊಳಿಸಲು ಪ್ರತಿದಿನ ಅಗ್ನಿಹೋತ್ರ ಮಾಡಬೇಕು ! : ಅಗ್ನಿಹೋತ್ರ ಹೇಗೆ ಮಾಡಬೇಕು ಎಂದು ಸಂಕ್ಷಿಪ್ತವಾಗಿ ಇಲ್ಲಿ ನೀಡಲಾಗಿದೆ. ಈ ವಿಷಯದ ಬಗ್ಗೆ ಸನಾತನವು ಪ್ರಕಾಶಿಸಿದ ಗ್ರಂಥವನ್ನು ಓದಬೇಕು.

೧ ಅ ೨. ಕುಟುಂಬದಲ್ಲಿ ಒಬ್ಬರಾದರೂ ‘ಪ್ರಥಮ ಚಿಕಿತ್ಸೆ ತರಬೇತಿ’ಯನ್ನು ಪಡೆಯಬೇಕು ! : ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಅಲ್ಲಲ್ಲಿ ಉಚಿತ ‘ಪ್ರಥಮ ಚಿಕಿತ್ಸಾ ತರಬೇತಿವರ್ಗ’ಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ತರಬೇತಿ ವರ್ಗಗಳ ಲಾಭ ಪಡೆಯಬೇಕು. (ಸನಾತನದ ಗ್ರಂಥ ಮಾಲಿಕೆ ‘ಪ್ರಥಮ ಚಿಕಿತ್ಸೆ ತರಬೇತಿ (೩ ಖಂಡ)’ ಇದು ಕೂಡ ಲಭ್ಯವಿದೆ.)

೧ ಅ ೨ ಅ. ಕುಟುಂಬದವರು ಉಪಯೋಗಿಸಲು ‘ಪ್ರಥಮ ಚಿಕಿತ್ಸಾ ಪೆಟ್ಟಿಗೆ’ಯನ್ನು ತಯಾರಿಸಿಡಬೇಕು ! : ನೋವು ನಿವಾರಕ ಮಾತ್ರೆಗಳು, ಮಲಾಮ್, ಗಾಜ್ (ಗಾಯದ ಮೇಲೆ ಹಚ್ಚಲಾಗುವ ಜಾಲಿಯಂತಹ ಪಟ್ಟಿ), ಗಾಯದ ಮೇಲೆ ಹಚ್ಚುವ ಬಿಳಿ ಅಂಟುಪಟ್ಟಿ ಮುಂತಾದವುಗಳು; ಅದೇ ರೀತಿ ಜ್ವರ, ವಾಂತಿ ಮುಂತಾದ ರೋಗಗಳಿಗೆ ಔಷಧಿಗಳನ್ನು ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿಡಬೇಕು. ಆ ಪೆಟ್ಟಿಗೆಯನ್ನು ಮನೆಯಲ್ಲಿ ಸಹಜವಾಗಿ ಸಿಗುವಂತಹ ಸ್ಥಳದಲ್ಲಿಡಬೇಕು. ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಆದಷ್ಟು ಮಾತ್ರೆಗಳ ಪಟ್ಟಿಯನ್ನು (ಸ್ಟ್ರೀಪ್) ಇಡಬಾರದು; ಏಕೆಂದರೆ ಅದರಿಂದ ಮಾತ್ರೆ ತೆಗೆಯುವಾಗ ಔಷಧಿಯ ಅವಧಿ ಮುಗಿದ ದಿನಾಂಕದ (‘ಎಕ್ಸ್‌ಪೈಯರಿ ಡೇಟ್’ನ) ಭಾಗ ಹರಿಯಬಹುದು. ಹೀಗೆ ಆದರೆ ಕೆಲವು ತಿಂಗಳಲ್ಲಿ ನಮಗೆ ‘ಅ ಮಾತ್ರೆಯ ‘ಎಕ್ಸ್‌ಪೈಯರಿ ಡೇಟ್’ ಎಲ್ಲಿಯವರೆಗೆ ಇದೆ’, ಎಂದು ತಿಳಿಯುವುದಿಲ್ಲ. ಅದರಿಂದ ಪ್ಯಾಕೆಟ್‌ನಿಂದ ಮಾತ್ರೆಯನ್ನು ತೆಗೆದು ಅದನ್ನು ಒಂದು ಗಾಳಿಯಾಡದ ಡಬ್ಬಿಯಲ್ಲಿ ಹಾಕಿಡಬೇಕು ಮತ್ತು ಅ ಡಬ್ಬಿಯ ಮೇಲೆ ಮಾತ್ರೆಯ ಹೆಸರು, ಯಾವ ರೋಗಕ್ಕೆ ಉಪಯೋಗ, ಉತ್ಪಾದನೆಯ ದಿನಾಂಕ (ಮ್ಯಾನುಫ್ಯಾಕ್ಚರಿಂಗ್ ಡೇಟ್), ಅವಧಿ ಮುಗಿಯುವ ದಿನಾಂಕ (‘ಎಕ್ಸ್‌ಪೈಯರಿ ಡೇಟ್’), ಮುಂತಾದ ಅವಶ್ಯಕ ವಿಷಯವನ್ನು ಆ ಚೀಟಿಯಲ್ಲಿ (ಲೇಬಲ್) ಬರೆದು ಅಂಟಿಸಿರಿ. (ಪ್ರಥಮ ಚಿಕಿತ್ಸೆ ಪೆಟ್ಟಿಗೆಯ ಬಗ್ಗೆ ಸವಿಸ್ತಾರ ಮಾಹಿತಿಯನ್ನು ಸನಾತನದ ಗ್ರಂಥ ‘ರೋಗಿಯ ಜೀವರಕ್ಷಣೆ ಮತ್ತು ಮರ್ಮಾಘಾತ ಮುಂತಾದ ರೋಗಗಳಿಗೆ ಪ್ರಥಮ ಚಿಕಿತ್ಸೆ ಈ ಗ್ರಂಥದಲ್ಲಿ ನೀಡಲಾಗಿದೆ)

೧ ಅ ೩. ಕುಟುಂಬದಲ್ಲಿನ ಒಬ್ಬರಾದರೂ ‘ಅಗ್ನಿಶಮನ ತರಬೇತಿ’ ಪಡೆಯಬೇಕು ! : ಸನಾತನವು ಈ ವಿಷಯದ ಬಗ್ಗೆ ಗ್ರಂಥವನ್ನೂ ಪ್ರಕಾಶಿಸಿದೆ.

೧ ಅ ೪. ಕುಟುಂಬದಲ್ಲಿನ ಒಬ್ಬರಾದರೂ ‘ಆಪತ್ಕಾಲೀನ ಸಹಾಯ ತರಬೇತಿ’ ಪಡೆಯಬೇಕು !

೧ ಆ. ಆಹಾರ – ನೀರಿಲ್ಲದೆ ಬಳಲದಿರಲು ಇದನ್ನು ಮಾಡಿರಿ !

೧ ಆ ೧. ದವಸಧಾನ್ಯಗಳು, ಗೋಧಿ ಮುಂತಾದ ವಸ್ತುಗಳನ್ನು (ದಿನಸಿ) ಒಣಗಿಸಿ ಮತ್ತು ಗಾಳಿಯಾಡದಂತೆ ಇಟ್ಟು ಅದು ಬೇಕಾದಷ್ಟು ಸಂಗ್ರಹ ಮಾಡಿಡಬೇಕು ಹಾಗೂ ಸಾಧಾರಣ ೫ ವರ್ಷಕ್ಕೆ ಬೇಕಾಗುವಷ್ಟು ಸಾಮಗ್ರಿಗಳನ್ನು ಹಾಗೂ ಅದರೊಂದಿಗೆ ಇತರ ಸಾಮಗ್ರಿಗಳು ಉದಾ. ಬೆಂಕಿಪೊಟ್ಟಣಗಳನ್ನು ಮನೆಯಲ್ಲಿ ಸಂಗ್ರಹಿಸಿಡಬೇಕು !

೧ ಆ ೨. ಊರಿನಲ್ಲಿ ಅಥವಾ ಬೇರೆಡೆ ಸ್ವಂತ ಭೂಮಿಯಿದ್ದರೆ ಆ ಭೂಮಿಯಲ್ಲಿ ಸೊಪ್ಪುತರಕಾರಿಯ ತೋಟಗಾರಿಕೆ ಮಾಡಲು ಹಾಗೂ ಅಕ್ಕಿ, ದವಸಧಾನ್ಯ ಮುಂತಾದವುಗಳನ್ನು ಬೆಳೆಯಲು ಮತ್ತು ಅಲ್ಲಿ ಗೋಪಾಲನೆ ಮಾಡಲು ಆರಂಭಿಸಿರಿ !

೧ ಆ ೩. ಮನೆಯಲ್ಲಿ ಒಲೆಯ ವ್ಯವಸ್ಥೆಯನ್ನು ಮಾಡಿರಿ, ಒಲೆಯಲ್ಲಿ ಅಡಿಗೆ ಮಾಡಲು ಕಲಿತುಕೊಳ್ಳಬೇಕು ಹಾಗೂ ಸದ್ಯ ಅಡುಗೆ ಮಾಡುವಾಗ ಯಂತ್ರಗಳ (ಉದಾ. ‘ಮಿಕ್ಸರ್’ನ) ಬಳಸುವುದನ್ನು ನಿಲ್ಲಿಸಿ ಪಾರಂಪಾರಿಕ ವಸ್ತುಗಳ, ಉದಾ. ಒರಳುಕಲ್ಲನ್ನು ಉಪಯೋಗಿಸುವ ಅಭ್ಯಾಸ ಮಾಡಿ ! : ಇತರ ಹಳೆಯ ವಸ್ತುಗಳನ್ನೂ, ಉದಾ. ಪುಡಿ ಮಾಡಲು ಬೀಸುಗಲ್ಲು, ಕುಟ್ಟಲು ಕುಟ್ಟುವಕಲ್ಲು ಮತ್ತು ಹಿಟ್ಟು ಮಾಡಲು ಒನಕೆ ಮತ್ತು ಒರಳು ಲಭ್ಯವಿದ್ದರೆ ಆ ವಸ್ತುವನ್ನು ಉಪಯೋಗಿಸಲು ಅಭ್ಯಾಸ ಮಾಡಬೇಕು. ಅದರಿಂದ ಮುಂದೆ ದಿನನಿತ್ಯ ಜೀವನ ನಡೆಸಲು ಕಷ್ಟವಾಗುವುಲ್ಲ.

೧ ಆ ೪. ಸೌರಶಕ್ತಿಯಲ್ಲಿ ನಡೆಯುವ ಉಪಕರಣಗಳನ್ನು ತೆಗೆದುಕೊಳ್ಳಬೇಕು ! : ಅಡುಗೆಗಾಗಿ ಸೌರಶಕ್ತಿಯ ಉಪಯೋಗ ಮಾಡಬಹುದು. ಅದಕ್ಕಾಗಿ ಆವಶ್ಯಕವಿರುವ ‘ಯುನಿಟ್ ಮತ್ತು ಉಪಕರಣಗಳನ್ನು (ಉದಾ. ‘ಸೋಲಾರ್ ಕುಕ್ಕರ್) ಖರೀದಿಸಿಡಬೇಕು. ಇದರೊಂದಿಗೆ ಮನೆಯಲ್ಲಿ ದೀಪಗಳನ್ನು ಹಚ್ಚಲು, ಸ್ನಾನದ ನೀರನ್ನು ಬಿಸಿ ಮಾಡಲು ಮುಂತಾದವುಗಳಿಗಾಗಿಯೂ ಸೌರಶಕ್ತಿಯ ಉಪಯೋಗವನ್ನು ಮಾಡಬಹುದು.

೧ ಆ ೫. ಮನೆಯ ಹತ್ತಿರ ಬಾವಿ ಇಲ್ಲದಿದ್ದರೆ ಅದನ್ನು ತೋಡಬೇಕು ! : ಆಪತ್ಕಾಲದಲ್ಲಿ ಸರಕಾರದಿಂದ ನೀರಿನ ಸೌಲಭ್ಯ ಸಿಗದಿದ್ದರೆ ಮನೆಯ ಅಂಗಳದಲ್ಲಿರುವ ಬಾವಿಯ ನೀರು ಉಪಯೋಗವಾಗುತ್ತದೆ. ಅಕ್ಕಪಕ್ಕದವರು ಒಟ್ಟಾಗಿ ಒಂದು ಬಾವಿಯನ್ನು ತೋಡಬೇಕು.

೧ ಇ. ಮುಂಬರುವ ಆಪತ್ಕಾಲದಲ್ಲಿ ಡಾಕ್ಟರ, ವೈದ್ಯರು, ಔಷಧಿಗಳು, ಆಸ್ಪತ್ರೆಗಳು ಮುಂತಾದವುಗಳು ಸಿಗದಿರುವುದನ್ನು ಗಮನದಲ್ಲಿಟ್ಟು ರೋಗ-ನಿವಾರಣೆಯ ದೃಷ್ಟಿಯಿಂದ ಇದನ್ನು ಮಾಡಬೇಕು !

೧ ಇ ೧. ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಮಾಡಬೇಕು ಮತ್ತು ಆವಶ್ಯಕತೆಗನುಸಾರ ಅವುಗಳನ್ನು ಉಪಯೋಗಿಸಲೂ ಪ್ರಾರಂಭಿಸಬೇಕು ! : ಇಂತಹ ಔಷಧಿ ವನಸ್ಪತಿಗಳನ್ನು ಮನೆಯ ಮೊಗಸಾಲೆ (ಟ್ಯಾರೆಸ್) ಮತ್ತು ಉಪ್ಪರಿಗೆಯಲ್ಲಿ ಹಾಗೂ ಹಳ್ಳಿಗಳಲ್ಲಿನ ಮನೆಯಲ್ಲಿಯೂ ನೆಡಬೇಕು. (ಔಷಧಿ ವನಸ್ಪತಿಗಳ ತೋಟದ ಬಗೆಗಿನ ಮಾಹಿತಿ ಮತ್ತು ವಿವಿಧ ರೋಗಗಳಿಗೆ ಅವುಗಳನ್ನು ಹೇಗೆ ಉಪಯೋಗ ಮಾಡುವುದು ಇದರ ಬಗ್ಗೆ ಸನಾತನದ ಗ್ರಂಥ ‘ಸ್ಥಳದ ಲಭ್ಯತೆಗನುಸಾರ ಔಷಧಿ ವನಸ್ಪತಿಗಳ ತೋಟಗಾರಿಕೆ ಮತ್ತು ‘ಔಷಧಿ ವನಸ್ಪತಿಗಳ ತೋಟ ಹೇಗೆ ಮಾಡಬೇಕು ? (ಮರಾಠಿ ಗ್ರಂಥ) ಇವುಗಳಲ್ಲಿ ಕೊಡಲಾಗಿದೆ. ಸನಾತನದ ‘ಸುಲಭ ಮನೆಮದ್ದು ಆಯುರ್ವೇದದ ಉಪಚಾರ ಈ ಗ್ರಂಥವೂ ಶೀಘ್ರದಲ್ಲಿ ಪ್ರಕಾಶಿತಗೊಳ್ಳಲಿದೆ.) ಆವಶ್ಯಕತೆಗನುಸಾರ ಔಷಧಿ ವನಸ್ಪತಿಗಳ ಉಪಯೋಗವನ್ನು ಮಾಡಲು ಪ್ರಾರಂಭಿಸಬೇಕು.

೧. ಇ. ೨. ರೋಗ-ನಿರ್ಮೂಲನೆಗಾಗಿ ‘ಬಿಂದು ಒತ್ತಡ ಉಪಚಾರ, ‘ಪ್ರಾಣಶಕ್ತಿ ವಹನ ಉಪಾಯ, ‘ಖಾಲಿಪೆಟ್ಟಿಗೆಗಳ ಉಪಾಯ ಮತ್ತು ‘ನಾಮಜಪ-ಉಪಾಯ ಈ ಉಪಾಯ ಪದ್ಧತಿಗಳನ್ನು ಕಲಿತುಕೊಳ್ಳಬೇಕು ಮತ್ತು ಆವಶ್ಯಕತೆಗನುಸಾರ ಅವುಗಳ ಉಪಯೋಗವನ್ನು ಮಾಡಲು ಪ್ರಾರಂಭಿಸಬೇಕು ! : ಈ ಉಪಾಯಪದ್ಧತಿಗಳ ಬಗೆಗಿನ ಗ್ರಂಥಗಳನ್ನು ಸನಾತನವು ಪ್ರಕಾಶಿಸಿದೆ.

೧ ಇ ೩. ತಮ್ಮ ಪರಿಸರದಲ್ಲಿರುವ ಪರಿಚಯದ ವೈದ್ಯರಲ್ಲಿ ‘ಕುಟುಂಬಕ್ಕೆ ಅಗತ್ಯವಿರುವ ಮುಂದಿನ ಕೆಲವು ವರ್ಷಗಳು ಉಳಿಯುವಂತಹ ಆಯುರ್ವೇದದ ಔಷಧಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿ ಮನೆಯಲ್ಲಿಟ್ಟುಕೊಳ್ಳಬೇಕು !

೧ ಈ. ಇತರ ಅಂಶಗಳು

೧ ಈ ೧. ಆಧುನಿಕ ವೈದ್ಯಕೀಯ ಯಂತ್ರಗಳು ಅಥವಾ ಉಪಕರಣಗಳ ಮೂಲಕ ಮಾಡಲಾಗುವ ಆವಶ್ಯಕವಿರುವ ಚಿಕಿತ್ಸೆ, ಉದಾ. ಕಣ್ಣುಗಳ ಶಸ್ತ್ರಚಿಕಿತ್ಸೆ, ಹಲ್ಲುಗಳ ಚಿಕಿತ್ಸೆ ಮುಂತಾದವುಗಳನ್ನು ಈಗಲೇ ಮಾಡಿಸಿಕೊಳ್ಳಿರಿ !

೧ ಈ ೨. ಒಟ್ಟು ಅವಶ್ಯಕತೆಗಳನ್ನು (ಉದಾ. ಕೆಲವು ವಿಶಿಷ್ಟ ಪದಾರ್ಥಗಳೇ ಇಷ್ಟವಾಗುವುದು, ಸ್ನಾನಕ್ಕೆ ಬಿಸಿ ನೀರೇ ಬೇಕಾಗುವುದು, ಯಾವಾಗಲೂ ಫ್ಯಾನ್‌ನ ಗಾಳಿ ಬೇಕಾಗಿರುವುದು, ‘ಎಸಿ ಇರದಿದ್ದರೆ ನಿದ್ದೆ ಬರದಿರುವುದು, ನಡೆಯುವಷ್ಟು ದೂರ ಹೋಗಲೂ ದ್ವಿಚಕ್ರ-ಚತುಷ್ಚಕ್ರ ವಾಹನ ಬೇಕೆನಿಸುವುದು ಇವುಗಳನ್ನು) ಕಡಿಮೆ ಮಾಡಲು ನಿಧಾನವಾಗಿ ಅಭ್ಯಾಸ ಮಾಡಿಕೊಳ್ಳಬೇಕು !

೧ ಈ. ೩. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಶರೀರವು ಸಕ್ಷಮವಾಗಲು ಪ್ರತಿದಿನ ವ್ಯಾಯಾಮ (ಉದಾ. ಸೂರ್ಯನಮಸ್ಕಾರ ಮಾಡುವುದು, ನಡೆಯುವುದು), ಪ್ರಾಣಾಯಾಮ, ಯೋಗಾಸನಗಳು ಮುಂತಾದವುಗಳನ್ನು ಮಾಡಬೇಕು !

೨. ಆಪತ್ಕಾಲದ ದೃಷ್ಟಿಯಿಂದ ಮಾನಸಿಕ ಸ್ತರದಲ್ಲಿ ಮಾಡಬೇಕಾದ ಸಿದ್ಧತೆ

೨ ಅ. ಸಂಬಂಧಿಕರೊಂದಿಗೆ ಭಾವನೆಯಲ್ಲಿ ಸಿಲುಕಿಕೊಳ್ಳದಿರಲು ಸ್ವಯಂ ಸೂಚನೆ ನೀಡಿರಿ ! : ಮುಂಬರುವ ಕಾಲದಲ್ಲಿ ಕುಟುಂಬದವರು, ಸಂಬಂಧಿಕರು, ಮಿತ್ರರು ಮುಂತಾದವರ ವಿಷಯದಲ್ಲಿ ಅವರವರ ಪ್ರಾರಬ್ಧಕ್ಕನುಸಾರ ಘಟನೆಗಳು ಘಟಿಸುವುದರಿಂದ ಅವರಲ್ಲಿ ಭಾವನೆಯಲ್ಲಿ ಸಿಲುಕಿಕೊಳ್ಳದಿರಿ. ಅದಕ್ಕಾಗಿ ಅಗತ್ಯವಿದ್ದರೆ ಸ್ವಯಂಸೂಚನೆಯನ್ನು ನೀಡಿರಿ.

೨ ಆ. ಕಡಿಮೆ ಅಥವಾ ಹೆಚ್ಚು ಸಮಯ ಕುಟುಂಬದವರ ಅಗಲಿಕೆಯನ್ನು ಸಹಿಸುವ ಸಿದ್ಧತೆಯನ್ನಿಟ್ಟುಕೊಳ್ಳಿ !

೩. ಆಪತ್ಕಾಲದ ದೃಷ್ಟಿಯಿಂದ ಕುಟುಂಬ ಸ್ತರದಲ್ಲಿ ಮಾಡಬೇಕಾದ ತಯಾರಿ

೩ ಅ. ಆಪತ್ಕಾಲವು ನಮ್ಮೆದುರು ಬಂದಿದ್ದರಿಂದ ಆದಷ್ಟು ಹೊಸ ಮನೆ, ಫ್ಲಾಟ್‌ಗಳನ್ನು ಖರೀದಿಸದೇ ಬಾಡಿಗೆಯ ಮನೆಯಲ್ಲಿರುವ ಪರ್ಯಾಯನ್ನು ಆರಿಸಿ !

೧. ಆಪತ್ಕಾಲದಲ್ಲಿ ಭೂಕಂಪ, ಭೂಕುಸಿತ ಇತ್ಯಾದಿಗಳಿಂದಾಗಿ ಕಟ್ಟಡಗಳಿಗೆ ಹಾನಿಯಾಗುತ್ತದೆ, ಇದನ್ನು ಗಮನದಲ್ಲಿಟ್ಟುಕೊಂಡು ಇನ್ನುಮುಂದೆ ಸಾಧ್ಯವಿದ್ದಲ್ಲಿ ಹೊಸ ಮನೆ ಅಥವಾ ಫ್ಲಾಟ್ ಖರೀದಿ ಮಾಡದಿರಿ. ಬಾಡಿಗೆಯ ಮನೆ ಅಥವಾ ಫ್ಲಾಟ್‌ನ ಖರೀದಿಯ ಪರ್ಯಾಯವನ್ನು ಆರಿಸಿ.

೨. ಯಾವುದೇ ಅನಿವಾರ್ಯ ಕಾರಣದಿಂದ ಮನೆ/ಫ್ಲಾಟ್ ಖರೀದಿಸುವ ಆಯ್ಕೆ ಮಾಡಬೇಕಾದಲ್ಲಿ ‘ಯಾವ ಪ್ರದೇಶವು ಆ ನಿಟ್ಟಿನಲ್ಲಿ ಸುರಕ್ಷಿತವಿದೆ, ಎಂಬುದರ ಬಗ್ಗೆ ವಿಚಾರ ಮಾಡಿರಿ.

೩. ಫ್ಲಾಟ್‌ನ್ನು ಖರೀದಿ ಮಾಡುವುದಿದ್ದರೆ ಆದಷ್ಟು ಮೂರನೇ ಮಹಡಿಗಿಂತ ಮೇಲಿನ ಮಹಡಿಯನ್ನು ತೆಗೆದುಕೊಳ್ಳದಿರಿ. ಏಕೆಂದರೆ ಭೂಕಂಪದಂತಹ ಅಪಾಯ ಸಂಭವಿಸಿದ್ದಲ್ಲಿ ಮೂರನೇ ಮಹಡಿಯ ಕಟ್ಟಡದಿಂದ ಆದಷ್ಟು ಬೇಗನೆ ಹೊರಬರಲು ಸುಲಭವಾಗುತ್ತದೆ.

೪. ಸದ್ಯ ಯಾರದ್ದಾದರೂ ಫ್ಲಾಟ್ ಮೂರನೇ ಮಹಡಿಗಿಂತ ಮೇಲಿದ್ದರೆ ಬೇರೆಡೆ ಎಲ್ಲಿಯಾದರೂ ಯೋಗ್ಯ ಕಟ್ಟಡ ಸಿಗುವುದರ ಬಗ್ಗೆ ವಿಚಾರ ಮಾಡಬೇಕು.

೩ ಆ. ಗ್ರಾಮದಲ್ಲಿ ಸ್ವಂತ ಮನೆಯಿದ್ದರೆ ಅದನ್ನು ವಾಸಿಸಲು ಯೋಗ್ಯವಾಗುವ ಸ್ಥಿತಿಯಲ್ಲಿಡಿ ! : ಮುಂಬರುವ ಕಾಲದಲ್ಲಿ ನೈಸರ್ಗಿಕ ಆಪತ್ತು, ಹೆಚ್ಚುತ್ತಿರುವ ಭಯೋತ್ಪಾದನೆ ಇತ್ಯಾದಿಗಳಿಂದಾಗಿ ಅನೇಕ ನಗರಗಳು ನಾಶವಾಗಲಿವೆ. ಆಗ ಗ್ರಾಮಕ್ಕೆ ಹೋಗಿ ವಾಸಿಸಬೇಕಾಗಬಹುದು. ಆದ್ದರಿಂದ ಯಾರದ್ದಾದರೂ ಮನೆ ಗ್ರಾಮದಲ್ಲಿದ್ದರೆ, ಅವರು ಈಗಲೇ ಅದನ್ನು ವಾಸಿಸಲು ಯೋಗ್ಯವಾಗುವ ಸ್ಥಿತಿಯಲ್ಲಿಡಿ.

೩ ಇ. ಕೆಲಸ-ಉದ್ಯೋಗದ ನಿಮಿತ್ತ ವಿದೇಶಕ್ಕೆ ಹೋಗಿರುವ ಕುಟುಂಬದವರನ್ನು ಸಾಧ್ಯವಿದ್ದಲ್ಲಿ ಭಾರತಕ್ಕೆ ಕರೆಯಿರಿ ! : ಭಾರತವು ಮೂಲತಃ ಪುಣ್ಯಭೂಮಿಯಾಗಿದೆ. ಮುಂಬರುವ ಆಪತ್ಕಾಲದಲ್ಲಿ ಭಾರತಕ್ಕಿಂತ ಇತರ ದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗುವ ಸಾಧ್ಯತೆ ಇದೆ; ಏಕೆಂದರೆ ವಿದೇಶದಲ್ಲಿ ರಜ-ತಮದ ಪ್ರಮಾಣವು ಹೆಚ್ಚಿದೆ. ಅದೇ ರೀತಿ ಮಹಾಯುದ್ಧ ಆರಂಭವಾದನಂತರ ವಿದೇಶದಿಂದ ಭಾರತಕ್ಕೆ ಸುಖವಾಗಿ ಬರಲು ಕಷ್ಟ ಆಗುವುದು.

೪. ಆಪತ್ಕಾಲದ ದೃಷ್ಟಿಯಿಂದಹಣಕಾಸಿನ ಬಗ್ಗೆ ಮಾಡಬೇಕಾದ ತಯಾರಿ

ಪ್ರಸ್ತುತ ಅನೇಕ ಬ್ಯಾಂಕುಗಳ ಹಣಕಾಸಿನ ಹಗರಣಗಳು ಬೆಳಕಿಗೆ ಬರುತ್ತಿವೆ. ಆದ್ದರಿಂದ ತಮ್ಮ ಹಣ ಸುರಕ್ಷಿತವಾಗಿರಬೇಕೆಂದು ಈ ಮುಂದಿನ ಪರ್ಯಾಯಗಳ ವಿಚಾರ ಮಾಡಬೇಕು. ಹೂಡಿಕೆಯನ್ನು ಮಾಡುವಾಗ You should not put all eggs in one basket (ಅರ್ಥ : ಒಂದು ಸ್ಥಳದಲ್ಲಿ ಹೂಡಿಕೆ ಮಾಡಿ ಅದು ಎಲ್ಲವೂ ಒಂದೇ ಕಡೆಯಲ್ಲಿ ಮುಳುಗುವ ಬದಲು ಸುರಕ್ಷತೆಯ ದೃಷ್ಟಿಯಿಂದ ವಿವಿಧ ಸ್ಥಳಗಳಲ್ಲಿ ಹೂಡಿಕೆಯನ್ನು ಮಾಡಿರಿ) ಈ ಅರ್ಥಶಾಸ್ತ್ರದ ತತ್ತ್ವಕ್ಕನುಸಾರ ಮಾಡಿರಿ.

೪ ಅ. ಬಂಡವಾಳವನ್ನು ಹೂಡುವಾಗ ಈ ಮುಂದಿನ ಅಂಶಗಳ ಬಗ್ಗೆ ವಿಚಾರ ಮಾಡಿರಿ !

೪ ಅ ೧. ಠೇವಣಿಯನ್ನು ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇಡಿರಿ : ‘ಯಾವುದಾದರೊಂದು ಬ್ಯಾಂಕ್ ಮುಳುಗುವ ಸಮಯ ಬಂದರೆ, ನಮ್ಮ ಎಲ್ಲ ಹಣವೂ ಮುಳುಗುತ್ತದೆ, ಹೀಗಾಗಬಾರದೆಂದು ನಮ್ಮ ಪರಿಸರದಲ್ಲಿ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಠೇವಣಿಯನ್ನು ಇಡಬೇಕು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಪ್ರತಿಯೊಬ್ಬ ಠೇವಣಿದಾರನ ಠೇವಣಿಗೆ ೧ ಲಕ್ಷ ರೂಪಾಯಿಯಷ್ಟು ವಿಮೆ ಸಂರಕ್ಷಣೆ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬ ಠೇವಣಿದಾರನು ಒಂದು ಬ್ಯಾಂಕಿನಲ್ಲಿ ಹೆಚ್ಚೆಂದರೆ ೧ ಲಕ್ಷ ರೂಪಾಯಿ ತನಕ ಠೇವಣಿಯನ್ನು ಇಡಬೇಕು.

೪ ಅ ೨. ಬ್ಯಾಂಕಿನ ವ್ಯವಹಾರವನ್ನು ಪತ್ನಿ, ಪ್ರಜ್ಞಾವಂತ ಮಕ್ಕಳಿಗೂ ಕಲಿಸಿರಿ : ಬ್ಯಾಂಕಿನಲ್ಲಿ ಹಣ ತುಂಬುವುದು, ಬ್ಯಾಂಕಿನಿಂದ ಹಣವನ್ನು ತೆಗೆಯುವುದು ಮುಂತಾದ ಸಾಮಾನ್ಯ ವ್ಯವಹಾರಗಳನ್ನು ತಮ್ಮ ಕುಟುಂಬದವರಿಗೂ ಮಾಡಲು ಸಾಧ್ಯವಾಗಬೇಕು.

೪ ಅ ೩. ಚಿನ್ನ-ಬೆಳ್ಳಿ ಇತ್ಯಾದಿ ಅಮೂಲ್ಯವಾದ ವಸ್ತುಗಳ ಮೇಲೆ ಹೂಡಿಕೆಮಾಡಿರಿ : ಯಾವುದಾದರೊಂದು ಹೂಡಿಕೆ ಎಂದು ಚಿನ್ನವನ್ನು ಖರೀದಿಸಲಿಕ್ಕಿದ್ದರೆ ಅವರು ಉಂಗುರದಂತಹ ಆಭರಣಗಳನ್ನು ಖರೀದಿಸದೇ ಶುದ್ಧ ಚಿನ್ನದ ಗಟ್ಟಿಯನ್ನು ಖರೀದಿಸಿ. ಇದರಿಂದ ಆಭರಣದ ಮಜೂರಿ ಕೊಡುವ ಆವಶ್ಯಕತೆ ಇರುವುದಿಲ್ಲ. ಮುಂದೆ ಪರಿಸ್ಥಿತಿ ಹೇಗಿದ್ದರೂ, ಈ ರೀತಿಯ ವಸ್ತುಗಳನ್ನು ನಾವು ಉಪಯೋಗಿಸಬಹುದು.

೪ ಅ ೪. ಭೂಮಿಯ ಮೇಲೆ ಹೂಡಿಕೆಯನ್ನು ಮಾಡಿ : ಸಾಧ್ಯವಿರುವವರು ತೋಟಗಾರಿಕೆ ಮಾಡಲು ಯೋಗ್ಯವಾದಂತಹ ಭೂಮಿಯನ್ನು ಖರೀದಿಸಬೇಕು. ಒಬ್ಬ ವ್ಯಕ್ತಿಗೆ ಭೂಮಿಯನ್ನು ಖರೀದಿಸಲು ಆಗದಿದ್ದರೆ, ಅವರು ಕೆಲವರು ಒಟ್ಟಾಗಿ ಜಮೀನನ್ನು ಖರೀದಿಸಬೇಕು. ಭೂಮಿಗಾಗಿ ಮಾಡಿದ ಹೂಡಿಕೆಯಿಂದ ಇಂದಲ್ಲ ನಾಳೆ ಪ್ರತಿಫಲ ಸಿಗುತ್ತದೆ.

೪ ಆ. ಯಾರಾದರೂ ಶೇರ‍್ಸ್‌ನಲ್ಲಿ ತಮ್ಮ ಹಣವನ್ನು ಹೂಡಿದ್ದಲ್ಲಿ, ಅವರು ಈಗಿನಿಂದಲೇ ಉಪಾಯಯೋಜನೆಯನ್ನು ಮಾಡಿರಿ !

ಮನೆಗಾಗಿ ಬಾವಿಯನ್ನು ತೋಡುವುದು, ಸೌರಶಕ್ತಿಯ ವ್ಯವಸ್ಥೆ ಮಾಡುವುದು ಇತ್ಯಾದಿ ಎಲ್ಲ ಖರ್ಚುಗಳು ಮಾಡುವುದೆಂದರೆ ಒಂದು ರೀತಿಯಲ್ಲಿ ಹೂಡಿಕೆಯೇ ಆಗಿದೆ !

೫. ಇತರ ಅಂಶಗಳು

೫ ಅ. ಮನೆಯಲ್ಲಿ ಅನಾವಶ್ಯಕ ವಸ್ತುಗಳು ಇದ್ದಲ್ಲಿ ಅದನ್ನು ಕಡಿಮೆ ಮಾಡಲು ಆರಂಭಿಸಿ ! : ಇದರಿಂದಾಗಿ ಆಪತ್ಕಾಲದಲ್ಲಿ ತುಂಬಾ ಕಡಿಮೆ ಹಾನಿಯಾಗುತ್ತದೆ, ಅದೇ ರೀತಿ ಸಾಧಕರಿಗೆ ವಸ್ತುವಿನ ಬಗ್ಗೆ ಇರುವ ಆಸಕ್ತಿಯೂ ಕಡಿಮೆಯಾಗಲು ಸಹಾಯವಾಗುವುದು. ಆಪತ್ಕಾಲದಲ್ಲಿ ತಮ್ಮ ಜೀವವನ್ನು ಉಳಿಸುವುದು ಮಹತ್ವದ್ದಾಗಿದ್ದರಿಂದ ಇಂತಹ ಸಮಯದಲ್ಲಿ ಕೇವಲ ಚೀಲ/ಪೆಟ್ಟಿಗೆಯನ್ನು ತೆಗೆದುಕೊಂಡು ಹೊರಗೆ ಬರಲು ಸಾಧ್ಯವಾಗಬೇಕು.

೫ ಆ. ಪೊಲೀಸ್ ಠಾಣೆ, ಅಗ್ನಿಶಾಮಕ ದಳ ಇತ್ಯಾದಿ ಅವಶ್ಯಕವಿರುವ ಸ್ಥಳದ ದೂರವಾಣಿ ಸಂಖ್ಯೆ, ವಿಳಾಸ ಇತ್ಯಾದಿಗಳು ಬೇರೆಯೇ ಪುಸ್ತಕದಲ್ಲಿ ನೋಂದಣಿ ಮಾಡಿಡಬೇಕು ! : ಆಪತ್ಕಾಲದಲ್ಲಿ ನಮ್ಮ ಸಂಚಾರವಾಣಿಯಲ್ಲಿ ‘ಚಾರ್ಜ್ ಇಲ್ಲದಿದ್ದಲ್ಲಿ ಅದರ ಉಪಯೋಗ ಮಾಡಲು ಆಗುವುದಿಲ್ಲ. ಅದಕ್ಕಾಗಿ ಪೊಲೀಸ್ ಠಾಣೆ, ಅಗ್ನಿಶಮನ ದಳ, ನಮ್ಮ ಹತ್ತಿರದಲ್ಲಿರುವ ಆಸ್ಪತ್ರೆ ಇತ್ಯಾದಿ ಅವಶ್ಯಕವಿರುವಂತಹ ಸ್ಥಳಗಳ ದೂರವಾಣಿ ಸಂಖ್ಯೆಗಳನ್ನು ಮತ್ತು ವಿಳಾಸವನ್ನು ಒಂದು ಪುಸ್ತಕದಲ್ಲಿ ನೋಂದಣಿ ಮಾಡಿಡಬೇಕು. ಇದರಿಂದಾಗಿ ಇತರ ಮಾರ್ಗದಿಂದ ಉದಾ. ಬೇರೆಯವರ ಸಂಚಾರವಾಣಿಯಿಂದ / ದೂರವಾಣಿಯಿಂದ ಅವರನ್ನು ಸಂಪರ್ಕಿಸಬಹುದು.

೫ ಇ. ಆಪತ್ಕಾಲದಲ್ಲಿ ಮನೆಯಿಂದ ತಕ್ಷಣ ಹೊರಬರಬೇಕಾದಲ್ಲಿ ಪೂರ್ವ ತಯಾರಿ ಇರಬೇಕು, ಆದ್ದರಿಂದ ಒಂದು ಸಣ್ಣ ಪೆಟ್ಟಿಗೆಯಲ್ಲಿ ಮಹತ್ವದ ಕಾಗದಪತ್ರಗಳನ್ನು (ಉದಾ. ರೇಶನ್ ಕಾರ್ಡ್, ಆಧಾರಕಾರ್ಡ, ಬ್ಯಾಂಕ್ ಪಾಸ್‌ಬುಕ್) ಒಟ್ಟು ಮಾಡಿಡಬೇಕು !

೫ ಈ. ಮನೆಯ ರಕ್ಷಣೆಗಾಗಿ ನಾಯಿ, ಹಾಲಿಗಾಗಿ ಆಕಳು, ಎತ್ತಿನಗಾಡಿಗಾಗಿ ಎತ್ತು, ಪ್ರಯಾಣಕ್ಕಾಗಿ ಕುದುರೆ ಇತ್ಯಾದಿಗಳನ್ನು ಸಾಕಬೇಕು ! : ಈ ಪ್ರಾಣಿಗಳನ್ನು ಹೇಗೆ ಸಾಕಬೇಕು ಎಂಬುದನ್ನೂ ಕಲಿತುಕೊಳ್ಳಬೇಕು. ನಮ್ಮಲ್ಲಿ ಸೈಕಲ್, ಸೈಕಲ್-ರಿಕ್ಷಾ, ಎತ್ತಿನಗಾಡಿ, ಕುದುರೆ ಗಾಡಿ ಇತ್ಯಾದಿಗಳಲ್ಲಿ ಯಾವುದಾದರೊಂದು ಅಥವಾ ಅದಕ್ಕಿಂತ ಜಾಸ್ತಿ ವಾಹನಗಳು ಇರಬೇಕು. ನಾಯಿಯಿಂದಾಗಿ ಗಲಭೆಕೋರರಿಂದ ರಕ್ಷಣೆಯಾಗಲು ಸಹಾಯವಾಗುತ್ತದೆ. ಆಕಳಿನಿಂದಾಗಿ ಹಾಲು ಸಿಗುತ್ತದೆ ಮತ್ತು ಎತ್ತು ಹಾಗೂ ಕುದುರೆಯಿಂದಾಗಿ ಪ್ರಯಾಣ ಮಾಡಲು ಆಗುತ್ತದೆ ಅಥವಾ ಅನಾರೋಗ್ಯ ವ್ಯಕ್ತಿಯನ್ನು ವೈದ್ಯರ ಬಳಿ ಕರೆದುಕೊಂಡು ಹೋಗಬಹುದು.

೬. ಆಪತ್ಕಾಲದ ದೃಷ್ಟಿಯಿಂದ ಆಧ್ಯಾತ್ಮಿಕ ಸ್ತರದಲ್ಲಿ ಮಾಡಬೇಕಾದ ಸಿದ್ಧತೆ

೬ ಅ. ಮುಂಬರುವ ಕಾಲದಲ್ಲಿ ಭೀಕರ ಆಪತ್ತಿನಿಂದ ಬದುಕುಳಿಯಲು ಸಾಧನೆ ಮಾಡುವುದು ಹಾಗೂ ಭಗವಂತನ ಭಕ್ತನಾಗುವುದು ಅನಿವಾರ್ಯವಾಗಿದೆ ! : ಭಾವೀ ಆಪತ್ಕಾಲವನ್ನು ಎದುರಿಸಲು ಈ ಲೇಖನದಲ್ಲಿ ನೀಡಿದಂತೆ ಕೃತಿ ಮಾಡಿರಿ. ಅಂದರೆ ನಾವು ಬಿಂದು ಒತ್ತಡದ ಉಪಚಾರ ಪದ್ಧತಿಯನ್ನು ಎಷ್ಟೇ ಕಲಿತುಕೊಂಡರೂ, ಕುಟುಂಬದವರು ಉಪವಾಸವಿರಬಾರದೆಂದು ಜೀವನಕ್ಕೆ ಅವಶ್ಯಕವಿರುವ ವಸ್ತುಗಳನ್ನು ಶೇಖರಿಸಿದರೂ ಸುನಾಮಿ, ಭೂಕಂಪ ಇವುಗಳು ಕೆಲವೇ ಕ್ಷಣಗಳಲ್ಲಿ ಸಾವಿರಾರು ನಾಗರಿಕರ ಬಲಿ ತೆಗೆದುಕೊಳ್ಳುವ ಮಹಾಭಯಂಕರ ಸಂಕಟದಲ್ಲಿ ಜೀವಂತವಾಗಿ ಉಳಿದರೇ ಮಾತ್ರ ಈ ಸಿದ್ಧತೆಗಳನ್ನು ನಾವು ಉಪಯೋಗಿಸಿಕೊಳ್ಳಲು ಸಾಧ್ಯ ! ಇಂತಹ ಜೀವ ಕಳೆದುಕೊಳ್ಳುವ ಆಪತ್ತಿನಲ್ಲಿ ಕೇವಲ ದೇವರೊಬ್ಬರೆ ಕಾಪಾಡಬಲ್ಲರು !

‘ಭಗವಂತನು ನಮ್ಮನ್ನು ಕಾಪಾಡಬೇಕು, ಎಂದು ಅನಿಸುತ್ತಿದ್ದರೆ ನಾವು ಸಾಧನೆ ಹಾಗೂ ಭಕ್ತಿಯನ್ನು ಮಾಡಬೇಕು. ಎಷ್ಟು ದೊಡ್ಡ ಆಪತ್ತು ಬಂದರೂ ಭಗವಂತನು ಅವನ ಭಕ್ತರ ರಕ್ಷಣೆ ಮಾಡಿದ್ದಾನೆ ಎಂದು ಹೇಳುವ ಭಕ್ತ ಪ್ರಹ್ಲಾದನಂತಹ ಉದಾಹರಣೆ ನಮ್ಮಲ್ಲಿದೆ. ಶ್ರೀಕೃಷ್ಣನು ಗೀತೆಯಲ್ಲಿ ‘ನ ಮೇ ಭಕ್ತಃ ಪ್ರಣಶ್ಯತಿ | (ಅಂದರೆ : ನನ್ನ ಭಕ್ತರ ನಾಶವಾಗುವುದಿಲ್ಲ), ಎಂದು ವಚನ ನೀಡಿದ್ದಾನೆ. ಇದರ ಅರ್ಥವೆಂದರೆ, ಯಾವುದೇ ಆಪತ್ತಿನಲ್ಲಿಯೂ ಬದುಕುಳಿಯಲು ನಾವು ಸಾಧನೆ ಮಾಡುವುದು ಅನಿವಾರ್ಯವಾಗಿದೆ.

೬ ಅ ೧. ಸಾಧಕರು ಆಶ್ರಮದಲ್ಲಿದ್ದುಕೊಂಡು ಪೂರ್ಣವೇಳೆ ಸಾಧನೆ ಮಾಡಲು ತಮ್ಮ ಮನಸ್ಸಿನ ಸಿದ್ಧತೆ ಮಾಡಿಕೊಳ್ಳಬೇಕು ! : ಕೆಲವು ಸಾಧಕರಿಗೆ ಸಾಧನೆ ಮಾಡಲು ವಿರೋಧಿಸುವ ಸಂಬಂಧಿಕರಿಗೆ ಇಷ್ಟರವರೆಗೆ ಅನೇಕ ಬಾರಿ ಸಾಧನೆಯ ಮಹತ್ವವನ್ನು ತಿಳಿಸಿ ಹೇಳಲು ಪ್ರಯತ್ನಿಸಿದರೂ, ಸಂಬಂಧಿಕರು ಅವರ ಮನಸ್ಸಿನಂತೆ ನಡೆದುಕೊಳ್ಳುತ್ತಿದ್ದಾರೆ. ಈಗ ಆಪತ್ಕಾಲವು ಆರಂಭವಾಗಲಿರುವುದರಿಂದ ಅಂತಹ ಸಾಧಕರು ಅದನ್ನು ಲೆಕ್ಕಿಸದೆ ಆಶ್ರಮದಲ್ಲಿದ್ದು ಪೂರ್ಣವೇಳೆ ಸಾಧನೆ ಮಾಡಲು ತಮ್ಮ ಮನಸ್ಸನ್ನು ಸಿದ್ಧ ಪಡಿಸಿಕೊಳ್ಳಬೇಕು; ಏಕೆಂದರೆ ಸಾಧನೆಯಲ್ಲಿ ಕೇವಲ ‘ನಾವು ಹಾಗೂ ಭಗವಂತ ಎಂದಷ್ಟೇ ಇರುತ್ತದೆ. ಆಪತ್ಕಾಲದಲ್ಲಿ ಸಂಬಂಧಿಕರು, ಹಣ ಇತ್ಯಾದಿ ಯಾವುದೂ ನಮ್ಮನ್ನು ಕಾಪಾಡುವುದಿಲ್ಲ ಕೇವಲ ಸಾಧಕರು ಮಾಡಿದ ಸಾಧನೆಯಷ್ಟೇ ಅವರನ್ನು ಕಾಪಾಡುವುದು. ಆದ್ದರಿಂದ ಮನಸ್ಸಿನ ಸಿದ್ಧತೆಯಾಗಲು ಸಾಧಕರು ಜವಾಬ್ದಾರಿ ಸಾಧಕರು ಹಾಗೂ ಸಂತರ ಮಾರ್ಗದರ್ಶನವನ್ನು ಪಡೆದುಕೊಳ್ಳಿರಿ. ಪೂರ್ಣವೇಳೆ ಸಾಧಕರಾಗುವ ಮಾನಸಿಕ ಸಿದ್ಧತೆಯಾಗಲು ‘ಅ ೩ ಈ ಸ್ವಯಂಸೂಚನೆ ಪದ್ಧತಿಯಂತೆ ಪ್ರಸಂಗವನ್ನು ಅಭ್ಯಾಸ ಮಾಡಿರಿ, ಅದೇ ರೀತಿ ಆಗಾಗ ಆಶ್ರಮದಲ್ಲಿ ಸೇವೆಗಾಗಿ ಉಳಿಯಲು ಹೋದರೆ ಮನಸ್ಸಿನ ಸಿದ್ಧತೆಯಾಗಲು ಸಹಾಯವಾಗುವುದು.

೬ ಅ ೨. ಗಾಂಭೀರ್ಯತೆಯಿಂದ ಸಾಧನೆ ಮಾಡಿರಿ ! : ‘ಸನಾತನ ಪ್ರಭಾತ ಪತ್ರಿಕೆಯಲ್ಲಿ ಆಯಾಯ ಸಮಯಕ್ಕೆ ಪ್ರಕಟಿಸಲಾಗುವ ಸಾಧನೆಯ ವಿಷಯದ ಮಾರ್ಗದರ್ಶನವನ್ನು ಸಂಪೂರ್ಣ ಪಾಲಿಸಲು ಪ್ರಯತ್ನಿಸಿ.

೬ ಅ ೩. ವ್ಯಷ್ಟಿ ಸಾಧನೆಯಲ್ಲಿ ಉತ್ತಮ ಸುಸೂತ್ರತೆಯನ್ನು ತನ್ನಿ ! : ಸಾಧಕರು ತಮ್ಮ ವ್ಯಷ್ಟಿ ಸಾಧನೆಯಲ್ಲಿ ಸುಸೂತ್ರತೆ ಬರಲು ವ್ಯಷ್ಟಿ ಸಾಧನೆಯನ್ನು ನಿಯಮಿತವಾಗಿ ಮಾಡಲು ಪ್ರಯತ್ನಿಸಿರಿ.

೬ ಅ ೪. ಕೆಟ್ಟ ಶಕ್ತಿಗಳ ತೊಂದರೆಯಿಂದ ನಮ್ಮ ರಕ್ಷಣೆಯಾಗಲು ‘ಆಧ್ಯಾತ್ಮಿಕ ಉಪಾಯಗಳನ್ನು ಪ್ರತಿನಿತ್ಯವು ಗಾಂಭೀರ್ಯದಿಂದ ಮಾಡಿರಿ !

೭. ‘ಆಪತ್ಕಾಲವನ್ನು ಎದುರಿಸುವ ದೃಷ್ಟಿಯಿಂದ ಜನಜಾಗೃತಿ ಮಾಡುವುದು ಕೂಡ ಸಾಧನೆಯೇ ಆಗಿದೆ !
ಮುಂಬರುವ ಆಪತ್ಕಾಲದ ಬಗ್ಗೆ ತಮ್ಮ ಬಂಧು ಬಳಗದವರಿಗೆ ಹಾಗೂ ಮಿತ್ರರಿಗೆ ಹೇಳುವುದು, ಪ್ರಸ್ತುತ ಲೇಖನವನ್ನು ಕಛೇರಿಯಲ್ಲಿರುವ ತಮ್ಮ ಸಹೋದ್ಯೋಗಿಗಳಿಗೆ ಓದಲು ನೀಡುವುದು ಇತ್ಯಾದಿ ಹಂತದಲ್ಲಿ ಜನಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಈ ರೀತಿ ಮಾಡುವುದೆಂದರೆ ಸಮಾಜದ ಋಣವನ್ನು ತೀರಿಸುವುದಾಗಿದೆ. ಈ ರೀತಿ ಮಾಡುವುದರಿಂದ ಸಾಧನೆಯಾಗಲಿದೆ. – (ಪರಾತ್ಪರ ಗುರು) ಡಾ. ಆಠವಲೆ

ಸೂಚನೆ ಹಾಗೂ ಆಹ್ವಾನ

೧. ‘ಮುಂಬರುವ ಭೀಕರ ಆಪತ್ಕಾಲವನ್ನು ಎದುರಿಸಲು ಹೇಗೆ ತಯಾರಿ ಮಾಡಿಕೊಳ್ಳಬೇಕೆಂಬುದು, ಸ್ವಲ್ಪ ಪ್ರಮಾಣದಲ್ಲಿ ತಿಳಿಯಲಿ, ಎಂಬುದಕ್ಕಾಗಿ ಕೆಲವು ಕ್ಷೇತ್ರದಲ್ಲಿನ ಅಂಶಗಳನ್ನು ಮೇಲಿನ ಲೇಖನದಲ್ಲಿ ಸ್ವಲ್ಪದರಲ್ಲಿ ಉಲ್ಲೇಖಿಸಲಾಗಿದೆ. ಈ ವಿಷಯದಲ್ಲಿ ವಿವರವಾಗಿ ಹೇಳುವ ಕಿರುಗ್ರಂಥ ಅಥವಾ ಗ್ರಂಥವು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು.

೨. ಮೇಲಿನ ವಿಷಯಗಳಿಗೆ ಸಂಬಂಧಪಟ್ಟಂತೆ ಇತರ ಕ್ಷೇತ್ರಗಳ ತಜ್ಞರಿಗೆ ಅಥವಾ ಸಾಧಕರಿಗೆ ಏನಾದರೂ ಇತರ ಅಂಶಗಳು ಗಮನಕ್ಕೆ ಬಂದಲ್ಲಿ ಅದನ್ನು [email protected] ಈ ವಿ-ಅಂಚೆಗೆ ಕಳುಹಿಸಿರಿ. ಇದರಿಂದ ಕಿರುಗ್ರಂಥದ ಮೂಲಕ / ಗ್ರಂಥಗಳ ಮೂಲಕ ಈ ವಿಷಯವನ್ನು ಸಮಾಜದ ಮುಂದೆ ಸವಿಸ್ತಾರವಾಗಿ ಮಂಡಿಸಲು ಸಹಾಯವಾಗುವುದು.

Leave a Comment