ಗುಣಸಂವರ್ಧನೆಯ ಪ್ರಕ್ರಿಯೆ

ಸ್ವಭಾವದೋಷ ನಿರ್ಮೂಲನೆಯಿಂದ ಸ್ವಭಾವದೋಷಗಳು ದೂರವಾಗುತ್ತವೆ ಮತ್ತು ಗುಣವೃದ್ಧಿಯಿಂದ ಯಾವುದಾದರೊಂದು ವಿಶಿಷ್ಟ ಗುಣದ ಅಭಾವವಿದ್ದರೆ ಆ ಸಂಸ್ಕಾರವು ಚಿತ್ತದಲ್ಲಿ ನಿರ್ಮಾಣವಾಗಿ ವೃದ್ಧಿಯಾಗಲು ಸಹಾಯವಾಗುತ್ತದೆ; ಆದುದರಿಂದ ಗುಣವೃದ್ಧಿಗಾಗಿ ಪ್ರಯತ್ನಿಸುವುದು ಆವಶ್ಯಕವಾಗಿದೆ. ಇದರ ಉದಾಹರಣೆಯು ಮುಂದಿನಂತಿದೆ – ಯಾರಾದರೊಬ್ಬ ವ್ಯಕ್ತಿಯಲ್ಲಿ ‘ದುಂದುವೆಚ್ಚ ಮಾಡುವುದು’ ಎಂಬ ಸ್ವಭಾವದೋಷವು ಇಲ್ಲದಿರಬಹುದು; ಆದರೆ ಅವನಿಗೆ ‘ಮಿತವ್ಯಯ’ ಎಂಬ ಗುಣವನ್ನು ತನ್ನಲ್ಲಿ ಅಳವಡಿಸಿಕೊಳ್ಳುವುದಿದ್ದರೆ ಗುಣವೃದ್ಧಿ ಪ್ರಕ್ರಿಯೆಯಿಂದ ಅದನ್ನು ತನ್ನಲ್ಲಿ ಅಳವಡಿಸಿಕೊಳ್ಳಬಹುದು.

ಅಯೋಗ್ಯ ಕೃತಿ ಮತ್ತು ಅಯೋಗ್ಯ ಪ್ರತಿಕ್ರಿಯೆಗಳ ಮಾಧ್ಯಮದಿಂದ ಸ್ವಭಾವದೋಷಗಳ ಮತ್ತು ಯೋಗ್ಯ ಅಥವಾ ಆದರ್ಶ ಕೃತಿ ಹಾಗೂ ಯೋಗ್ಯ ಅಥವಾ ಆದರ್ಶ ವಿಚಾರ, ಹಾಗೆಯೇ ಆದರ್ಶ ಪ್ರತಿಕ್ರಿಯೆ ಇವುಗಳ ಮಾಧ್ಯಮದಿಂದ ಗುಣಗಳ ಪ್ರಕಟೀಕರಣವಾಗುತ್ತದೆ. ವ್ಯಕ್ತಿಯಿಂದ ಎಲ್ಲ ಪ್ರಸಂಗಗಳಲ್ಲಿ ಯೋಗ್ಯ ಅಥವಾ ಆದರ್ಶ ಕೃತಿಗಳಾಗಬೇಕು ಮತ್ತು ಮನಸ್ಸಿನಲ್ಲಿ ಯೋಗ್ಯ ಅಥವಾ ಆದರ್ಶ ವಿಚಾರಗಳು ಬರಬೇಕು ಅಥವಾ ಯೋಗ್ಯ ಪ್ರತಿಕ್ರಿಯೆಗಳು ವ್ಯಕ್ತವಾಗಬೇಕು, ಎಂಬುದಕ್ಕಾಗಿ ಅವನಲ್ಲಿ ವಿವಿಧ ಗುಣಗಳನ್ನು ವೃದ್ಧಿಸಿ ‘ಆದರ್ಶ ವ್ಯಕ್ತಿತ್ವ’ವನ್ನು ವಿಕಸನ ಗೊಳಿಸುವುದು ಗುಣವೃದ್ಧಿಯ ಪ್ರಕ್ರಿಯೆಯ ಧ್ಯೇಯವಾಗಿದೆ.

ಯಾವುದಾದರೊಂದು ಗುಣವನ್ನು ತನ್ನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿದರೆ, ಆ ಗುಣಕ್ಕೆ ಮಾರಕವಾಗಿರುವ ಸ್ವಭಾವದೋಷವು ಶೀಘ್ರವಾಗಿ ನಿರ್ಮೂಲನೆಯಾಗಲು ಸಹಾಯವಾಗುತ್ತದೆ, ಉದಾ. ತತ್ಪರತೆ ಎಂಬ ಗುಣವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದರೆ ‘ಆಲಸ್ಯ’ ಮತ್ತು ‘ಕೆಲಸಗಳನ್ನು ಮುಂದೂಡುವುದು’ ಎಂಬ ಸ್ವಭಾವದೋಷಗಳು ದೂರವಾಗಲು ಸಹಾಯವಾಗುತ್ತದೆ.

ಗುಣವೃದ್ಧಿಯ ಪ್ರಕ್ರಿಯೆಯಿಂದಾಗುವ ಲಾಭಗಳು

ಅ. ಸ್ವಭಾವದೋಷ ನಿರ್ಮೂಲನೆಯ ವೇಗವು ಹೆಚ್ಚಾಗುವುದು

ಆ. ಒಂದು ಗುಣದೊಂದಿಗೆ ಇತರ ಗುಣಗಳ ಪೋಷಣೆಯು ತಾನಾಗಿಯೇ ಪ್ರಾರಂಭವಾಗುವುದು

ಇ. ವಿವೇಕವು ಜಾಗೃತವಾಗಿ ಆದರ್ಶ ವ್ಯಕ್ತಿತ್ವದ ವಿಕಸನವಾಗುವುದು

ಈ. ಮನೋಬಲವು ಹೆಚ್ಚಾಗುತ್ತದೆ ಮತ್ತು ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಮಾನಸಿಕ ದೃಷ್ಟಿಯಿಂದ ಸ್ಥಿರವಾಗಿದ್ದು ಸಮಸ್ಯೆಗಳನ್ನು ಎದುರಿಸಲು ಸಾಧ್ಯವಾಗುತ್ತದೆ

ಉ. ವ್ಯಕ್ತಿಯ ಕಾರ್ಯಕ್ಷಮತೆ ವೃದ್ಧಿಯಾಗಿ ಅವನಿಗೆ ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾಗಲು ಸಾಧ್ಯವಾಗುತ್ತದೆ

ಎ. ಈಶ್ವರನ ಸಗುಣ ರೂಪದೊಂದಿಗೆ ಏಕರೂವಾಗಲು ಸಹಾಯವಾಗುತ್ತದೆ

ಗುಣವೃದ್ಧಿ ಪ್ರಕ್ರಿಯೆಯಲ್ಲಿನ ಹಂತಗಳು

ಗುಣವೃದ್ಧಿಯ ಪ್ರಕ್ರಿಯೆಯಲ್ಲಿ ೪ ಹಂತಗಳಿವೆ.

ಹಂತ ೧

ಪ್ರಕ್ರಿಯೆಗಾಗಿ ಗುಣಗಳನ್ನು ಆರಿಸುವುದು (ಈ ಪ್ರಕ್ರಿಯೆಗಾಗಿ ೨ ಅಥವಾ ೩ ಗುಣಗಳನ್ನು ಆರಿಸಬೇಕು)

೧ಅ. ವ್ಯಕ್ತಿಯಲ್ಲಿರುವ ಗುಣ ಮತ್ತು ಸ್ವಭಾವದೋಷಗಳ ಪ್ರಮಾಣ : ವ್ಯಕ್ತಿಯು ತನ್ನಲ್ಲಿರುವ ಗುಣ-ದೋಷಗಳ ಪ್ರಮಾಣದ ವಿಚಾರ ಮಾಡಿ ಗುಣಗಳನ್ನು ಆರಿಸಿಕೊಳ್ಳಬೇಕು. ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಗಾಗಿ ಆರಿಸಿದ ಸ್ವಭಾವದೋಷಗಳ ಪೈಕಿ ತೀವ್ರವಾಗಿರುವ ಯಾವುದಾದರೊಂದು ಸ್ವಭಾವದೋಷದ ನಿರ್ಮೂಲನೆಗಾಗಿ ಪೂರಕವಾಗಿರುವ ಗುಣವನ್ನು ತೆಗೆದುಕೊಳ್ಳಬೇಕು, ಉದಾ. ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಗಾಗಿ ‘ಉದ್ಧಟತನ’ ಎಂಬ ಸ್ವಭಾವದೋಷವನ್ನು ಆರಿಸಿಕೊಂಡಿದ್ದಲ್ಲಿ ‘ನಮ್ರತೆ’ ಎಂಬ ಗುಣವನ್ನು ಗುಣವೃದ್ಧಿಗಾಗಿ ತೆಗೆದುಕೊಳ್ಳಬೇಕು.

೧ಆ. ವ್ಯಕ್ತಿಯ ಜೀವನದಲ್ಲಿನ ಸಮಸ್ಯೆಗಳ ಸ್ವರೂಪ : ವ್ಯಕ್ತಿಯ ಜೀವನದಲ್ಲಿನ ಶಾರೀರಿಕ, ಮಾನಸಿಕ, ಬೌದ್ಧಿಕ, ಕೌಟುಂಬಿಕ, ಶೈಕ್ಷಣಿಕ, ಕಾರ್ಯಾಲಯದಲ್ಲಿನ, ಆರ್ಥಿಕ ಮುಂತಾದ ಸಮಸ್ಯೆಗಳ ಪೈಕಿ ತುಲನೆಯಲ್ಲಿ ದೊಡ್ಡ, ಗಂಭೀರ ಅಥವಾ ಜಟಿಲ ಸಮಸ್ಯೆಗಳನ್ನು ದೂರಗೊಳಿಸಲು ಆವಶ್ಯಕವಾಗಿರುವ ಗುಣವನ್ನು ಪ್ರಾಧಾನ್ಯತೆಯಿಂದ ಆರಿಸಿಕೊಳ್ಳಬೇಕು, ಉದಾ. ಉತ್ತಮ ಅಂಕಗಳನ್ನು ಪಡೆಯುವ ಸಾಮರ್ಥ್ಯವುಳ್ಳ ಒಬ್ಬ ವಿದ್ಯಾರ್ಥಿಗೆ ಆತ್ಮವಿಶ್ವಾಸದ ಅಭಾವದಿಂದ ಪರೀಕ್ಷೆಯಲ್ಲಿ ಉತ್ತರಗಳನ್ನು ಸರಿಯಾಗಿ ಬರೆಯಲು ಆಗದಿರುವುದರಿಂದ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಸಿಗುತ್ತಿದ್ದರೆ, ಅವನು ಶೈಕ್ಷಣಿಕ ಸಮಸ್ಯೆಯನ್ನು ಬಿಡಿಸಲು ‘ಆತ್ಮವಿಶ್ವಾಸ’ ಎಂಬ ಗುಣವನ್ನು ಪ್ರಾಧಾನ್ಯತೆಯಿಂದ ತೆಗೆದುಕೊಳ್ಳಬೇಕು.

೧ಇ. ವ್ಯಕ್ತಿಯ ಕಾರ್ಯಕ್ಷೇತ್ರದ ಆವಶ್ಯಕತೆ : ವ್ಯಕ್ತಿಯ ಕಾರ್ಯಕ್ಷೇತ್ರಕ್ಕೆ ಆವಶ್ಯಕವಾಗಿರುವ ಮತ್ತು ಪೂರಕವಾಗಿರುವ ಗುಣಗಳನ್ನು ಪ್ರಕ್ರಿಯೆಗಾಗಿ ಪ್ರಾಧಾನ್ಯತೆಯಿಂದ ಆರಿಸಿಕೊಳ್ಳಬೇಕು, ಉದಾ.ಪೊಲೀಸ್ ಇಲಾಖೆಯಲ್ಲಿ ‘ಜಾಗರೂಕತೆ’, ವ್ಯವಸ್ಥಾಪನೆಯ ಕ್ಷೇತ್ರದಲ್ಲಿ ‘ಆಯೋಜನಾ ಕೌಶಲ್ಯ’, ವ್ಯಾಪಾರ ಕ್ಷೇತ್ರದಲ್ಲಿ ‘ಸಂವಾದ ಕೌಶಲ್ಯ’ ಎಂಬ ಆವಶ್ಯಕ ಗುಣಗಳನ್ನು ಆರಿಸಿಕೊಳ್ಳಬೇಕು.

೧ಈ. ವ್ಯಕ್ತಿಯ ವೈಚಾರಿಕ ಮತ್ತು ಆಧ್ಯಾತ್ಮಿಕ ಸ್ತರ : ವ್ಯಕ್ತಿಯ ವೈಚಾರಿಕ ಸ್ತರವನ್ನು ಪರಿಗಣಿಸುವಾಗ ಅವನ ಮಾನಸಿಕ ಮತ್ತು ಬೌದ್ಧಿಕ ಸ್ತರದ ವಿಚಾರವನ್ನು ಮಾಡಬೇಕು. ವ್ಯಕ್ತಿಯ ವೈಚಾರಿಕ ಸ್ತರವು ಎಷ್ಟು ಉತ್ತಮವಾಗಿರುತ್ತದೆಯೋ, ಅಷ್ಟೇ ಗುಣಗಳ ವಿವಿಧ ಅಂಗಗಳನ್ನು ತಿಳಿದುಕೊಂಡು ಅವುಗಳನ್ನು ತನ್ನಲ್ಲಿ ಅಳವಡಿಸಿಕೊಳ್ಳುವ ಪ್ರಕ್ರಿಯೆಯು ಪ್ರಭಾವಿಯಾಗುತ್ತದೆ. ಆದುದರಿಂದ ಗುಣವೃದ್ಧಿ ಪ್ರಕ್ರಿಯೆಯ ವೇಗ ಮತ್ತು ಪರಿಣಾಮಕಾರತೆಯು ಹೆಚ್ಚಾಗುತ್ತದೆ.

ಹಂತ ೨

ಪ್ರಕ್ರಿಯೆಗಾಗಿ ಆರಿಸಿದ ಗುಣಕ್ಕನುಸಾರ ದೈನಂದಿನ ಜೀವನದಲ್ಲಿನ ವಿವಿಧ ಅವಕಾಶಗಳನ್ನು ಹುಡುಕುವುದು ಮತ್ತು ಪ್ರಯತ್ನಗಳ ಸ್ತರವನ್ನು ನಿರ್ಧರಿಸುವುದು

ದೈನಂದಿನ ಜೀವನದಲ್ಲಿ ಮಾಡಬೇಕಾದ ವಿವಿಧ ಕೃತಿಗಳ ಪಟ್ಟಿಯನ್ನು ತಯಾರಿಸಬೇಕು. ಗುಣವೃದ್ಧಿಗಾಗಿ ಆರಿಸಿದ ವಿಶಿಷ್ಟ ಗುಣಕ್ಕನುಸಾರ ಮಾಡಬೇಕಾದ ಕೃತಿಯ ಅವಕಾಶಗಳನ್ನು ಹುಡುಕಬೇಕು. ನಂತರ ಮುಂದಿನಂತೆ ಪ್ರಯತ್ನಗಳ ಸ್ತರಗಳನ್ನು ನಿರ್ಧರಿಸಬೇಕು.

೧ಅ. ಪ್ರಕ್ರಿಯೆಯಲ್ಲಿನ ಪ್ರಯತ್ನಗಳ ಸ್ತರ : ಕೃತಿ ಮತ್ತು ವೈಚಾರಿಕ ಸ್ತರದಲ್ಲಿ ಪ್ರಯತ್ನಿಸಿ ಗುಣಗಳ ವಿಕಾಸವನ್ನು ಮಾಡಬೇಕು.

೧ಆ. ಆಧ್ಯಾತ್ಮಿಕ ಸ್ತರದಲ್ಲಿನ ಪ್ರಯತ್ನ : ಕೃತಿಯ, ಹಾಗೆಯೇ ವೈಚಾರಿಕ ಪ್ರಯತ್ನಗಳಿಗೆ ಆಧ್ಯಾತ್ಮಿಕ ಪ್ರಯತ್ನಗಳನ್ನು ಜೋಡಿಸಿದರೆ ಈ ಪ್ರಕ್ರಿಯೆಯ ವೇಗವು ಹೆಚ್ಚಾಗುತ್ತದೆ.

ಹಂತ ೩

ಇಡೀ ದಿನದಲ್ಲಿ ಪ್ರಕ್ರಿಯೆಗಾಗಿ ಆರಿಸಿದ ಗುಣಗಳಿಗೆ ಅಡಚಣೆಯಾಗುವ ತಪ್ಪುಗಳನ್ನು ಹುಡುಕಿ ಸರಿಪಡಿಸುವುದು : ಪ್ರಕ್ರಿಯೆಗಾಗಿ ಆರಿಸಿದ ಗುಣಕ್ಕನುಸಾರ ದಿನನಿತ್ಯದ ಜೀವನದಲ್ಲಿ ಮಾಡಬೇಕಾಗುವ ಕೃತಿಗಳಲ್ಲಿ ತನ್ನಿಂದಾಗುತ್ತಿರುವ ತಪ್ಪುಗಳನ್ನು ಹುಡುಕಬೇಕು. ಮುಖ್ಯವಾಗಿ ಎರಡು ವಿಧದ ತಪ್ಪುಗಳಿರುತ್ತವೆ. ಅವುಗಳ ಪೈಕಿ ಮೊದಲನೆಯ ವಿಧ ಕೃತಿಯ ಸ್ತರ, ಉದಾ. ಆಲಸ್ಯ, ಅವ್ಯವಸ್ಥಿತತೆ ಇಂತಹ ಸ್ವಭಾವದೋಷಗಳಿಂದಾಗುವ ಅಯೋಗ್ಯ ಕೃತಿಗಳು. ಎರಡನೆಯ ವಿಧವೆಂದರೆ ವೈಚಾರಿಕ ಸ್ತರದಲ್ಲಿನ ತಪ್ಪುಗಳು, ಉದಾ.ಕೋಪ, ಮತ್ಸರ ಅಥವಾ ಅಸೂಯೆ ಮುಂತಾದ ಸ್ವಭಾವದೋಷಗಳಿಂದ ಮನಸ್ಸಿನಲ್ಲಿ ಬರುವ ಅಯೋಗ್ಯ ವಿಚಾರ, ಭಾವನೆ ಮತ್ತು ಅಯೋಗ್ಯ ಪ್ರತಿಕ್ರಿಯೆಗಳು.

ಹಂತ ೪

ಚಿತ್ತದಲ್ಲಿ ಗುಣದ ಸಂಸ್ಕಾರವನ್ನು ನಿರ್ಮಿಸಲು ಸ್ವಯಂಸೂಚನೆಗಳನ್ನು ಕೊಡಬೇಕು: ಪ್ರಕ್ರಿಯೆಗಾಗಿ ಆರಿಸಿದ ಪ್ರತಿಯೊಂದು ಗುಣದ ಮೇಲೆ ಆಧರಿಸಿದ ಯಾವ ಪ್ರಸಂಗದಲ್ಲಿ ಗುಣಕ್ಕನುಸಾರ ಯೋಗ್ಯ ಕೃತಿಯಾಗುವುದು ಅಪೇಕ್ಷಿತವಾಗಿರುತ್ತದೆಯೋ; ಆದರೆ ಅಪೇಕ್ಷಿತ ಕೃತಿ ಯಾಗಲು ಮಾನಸಿಕ ಸ್ತರದಲ್ಲಿ ಅಡಚಣೆಗಳು ಬರುತ್ತವೆಯೋ, ಅಂತಹ ಪ್ರಸಂಗಗಳಲ್ಲಿ ಆದರ್ಶ ಕೃತಿಯನ್ನು ಮಾಡಲು ಬರುವ ಮಾನಸಿಕ ತೊಂದರೆಗಳನ್ನು ದೂರಗೊಳಿಸಲು ಮತ್ತು ಚಿತ್ತದ ಮೇಲೆ ಗುಣಗಳ ಸಂಸ್ಕಾರಗಳನ್ನು ನಿರ್ಮಿಸಲು ಪ್ರಸಂಗಗಳಿಗನುಸಾರ ಸ್ವಯಂಸೂಚನೆಗಳನ್ನು ತೆಗೆದುಕೊಳ್ಳ ಬೇಕು.

(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಸ್ವಭಾವದೋಷ (ಷಡ್ರಿಪು) ನಿರ್ಮೂಲನೆಯ ಮಹತ್ವ ಮತ್ತು ಗುಣವೃದ್ಧಿ ಪ್ರಕ್ರಿಯೆ’ ಗ್ರಂಥ)

Leave a Comment