ಸ್ವಭಾವದೋಷಗಳ ಬಗ್ಗೆ ಸಂದೇಹ ನಿವಾರಣೆ

ಪ್ರಶ್ನೆ ೧. ಸ್ವಭಾವದೋಷಗಳು ಆನುವಂಶಿಕವಾಗಿರುತ್ತವೆಯೇ ?

ಉತ್ತರ : ಹೌದು, ಸಾಧ್ಯವಿದೆ. ನಮ್ಮ ಶರೀರದ, ವಿಶೇಷವಾಗಿ ಮೆದುಳಿನ ವಿವಿಧ ರಾಸಾಯನಿಕ ಘಟಕಗಳ, ಹಾರ್ಮೋನುಗಳ ಸಮತೋಲನ ತಪ್ಪಿದರೆ ಅದರ ಪರಿಣಾಮವು ನಮ್ಮ ಮನಸ್ಸಿನ ಸ್ಥಿತಿಯ ಮೇಲಾಗುತ್ತದೆ. ಈ ಸಮತೋಲನ ತಪ್ಪುವ ಕಾರಣವು ಅನುವಂಶಿಕವಾಗಿದ್ದರೆ ಅಂತಹ ಮಾನಸಿಕ ಅನಾರೋಗ್ಯವೂ ಅನುವಂಶಿಕವಾಗಿರಬಹುದು. ಕೆಲವು ಸಲ ವೈದ್ಯಕೀಯ ಔಷಧೋಪಚಾರಗಳಿಂದ ಈ ತಪ್ಪಿದ ಸಮತೋಲನವನ್ನು ಸರಿಪಡಿಸಲು ಆಗುತ್ತದೆ. ಇದರ ಇನ್ನೊಂದು ಕಾರಣವೆಂದರೆ ಸುತ್ತಮುತ್ತಲಿನ ಪರಿಸ್ಥಿತಿಯ ಪರಿಣಾಮವು ಮಕ್ಕಳ ಮನಸ್ಸಿನ ಮೇಲೆ ಆಗುತ್ತದೆ. ಈ ತತ್ತ್ವಕ್ಕನುಸಾರ ಸಂಪರ್ಕದಿಂದ, ತಂದೆ-ತಾಯಿಯರ ಗುಣ-ಅವಗುಣಗಳ ಸಂಸ್ಕಾರಗಳೂ ಮಕ್ಕಳ ಮನಸ್ಸಿನ ಮೇಲೆ ಆಗುತ್ತವೆ. ಮಕ್ಕಳು ಅನುಕರಣಪ್ರಿಯರಾಗಿರುವುದರಿಂದ ತಂದೆ-ತಾಯಿಯರ ಅನುಕರಣೆಯನ್ನು ಮಾಡುವಾಗ ಅವರ ಗುಣ-ಅವಗುಣಗಳನ್ನು ತಿಳಿದು ಅಥವಾ ತಿಳಿಯದೇ ಮೈಗೂಡಿಸಿಕೊಳ್ಳುತ್ತಾರೆ. ಈ ಎಲ್ಲ ಕಾರಣಗಳ ವಿಚಾರ ಮಾಡಿದರೆ ಕುಟುಂಬದವರ ಸ್ವಭಾವದೋಷಗಳು ಮಕ್ಕಳಲ್ಲಿ ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಏಕೆ ಇರುತ್ತವೆ ಎಂಬುದು ಗಮನಕ್ಕೆ ಬರುತ್ತದೆ.

ಪ್ರಶ್ನೆ ೨. ಸ್ವಭಾವದೋಷಗಳು ಸಂಪೂರ್ಣ ನಾಶವಾಗುತ್ತವೆಯೇ ?

ಉತ್ತರ : ಹೌದು. ಸ್ವಭಾವದೋಷಗಳು ಮನಸ್ಸಿಗೆ ಸಂಬಂಧಿಸಿವೆ. ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯನ್ನು ತಳಮಳದಿಂದ, ಪ್ರಾಮಾಣಿಕವಾಗಿ ಮತ್ತು ನಿಯಮಿತವಾಗಿ ಮಾಡಿದರೆ ಸ್ವಭಾವದೋಷಗಳು ದೂರವಾಗಲು ಸಹಾಯವಾಗುತ್ತದೆ. ಅದಕ್ಕೆ ಆಧ್ಯಾತ್ಮಿಕ ಕೃತಿಗಳ (ಸಾಧನೆಯ) ಜೊತೆಯನ್ನು ನೀಡಿದರೆ ಈ ಪ್ರಕ್ರಿಯೆಯು ಕಡಿಮೆ ಸಮಯದಲ್ಲಿ ಮತ್ತು ಪ್ರಭಾವಿಯಾಗಿ ಆಗುತ್ತದೆ.

ಪ್ರಶ್ನೆ ೩. ಮೃತ್ಯುನಂತರ ಹೊಸ ಜನ್ಮದಲ್ಲಿ ಹೊಸ ದೇಹವನ್ನು ಧರಿಸಿದ ನಂತರ ಜೀವವು ಕಡಿಮೆಯಾದ ಸ್ವಭಾವದೋಷಗಳೊಂದಿಗೆ ಇರುತ್ತದೆಯೋ ಅಥವಾ ಪುನಃ ಹೊಸ ಸ್ವಭಾವದೋಷಗಳು ನಿರ್ಮಾಣವಾಗುತ್ತವೆಯೋ ?

ಉತ್ತರ : ‘ಅಂತೆ ಮತಿಃ ಸಾ ಗತಿಃ |’ ಈ ಹೇಳಿಕೆಯಂತೆ ಮೃತ್ಯುವಿನ ಮೊದಲು ಯಾವ ವಿಚಾರವು ಜೀವದ ಮನಸ್ಸಿನಲ್ಲಿ ಬರುತ್ತದೆಯೋ, ಅದಕ್ಕನುಸಾರ ಅದಕ್ಕೆ ಗತಿ ಸಿಗುತ್ತದೆ. ಹಾಗೆಯೇ ದೇಹವನ್ನು ತ್ಯಜಿಸಿದ ನಂತರ ಜೀವಕ್ಕೆ ಮಟ್ಟಕ್ಕನುಸಾರ ಮತ್ತು ಪ್ರಾರಬ್ಧಕ್ಕನುಸಾರ ಆಯಾ ಲೋಕಗಳಲ್ಲಿ ಸ್ಥಾನ ಸಿಗುತ್ತದೆ. ಮೃತ್ಯುವಿನ ನಂತರ ಸ್ಥೂಲದೇಹ ನಾಶವಾದರೂ, ಮನೋದೇಹವು ಕಾರ್ಯನಿರತವಾಗಿರುತ್ತದೆ. ಹೊಸ ದೇಹವನ್ನು ಧರಿಸುವ ತನಕ ಹಿಂದಿನ ಜನ್ಮದಲ್ಲಿ ಮಾಡಿದ ಪಾಪ-ಪುಣ್ಯಗಳಂತೆ ಆ ಜೀವವು ವಿಶಿಷ್ಟ ಯೋನಿಯಲ್ಲಿ ಸಿಲುಕಿದ್ದರೆ, ಆ ಕಾಲದಲ್ಲಿಯೂ ಅದರ ಮನೋದೇಹದ ಮೇಲೆ ಸಂಸ್ಕಾರಗಳು ಆಗುತ್ತಿರುತ್ತವೆ. ಇದರಿಂದ ಮೊದಲಿನ ಸ್ವಭಾವದೋಷಗಳು ಇನ್ನೂ ಹೆಚ್ಚು ದೃಢವಾಗುತ್ತವೆ. ಹಾಗೆಯೇ ಹೊಸ ದೇಹವನ್ನು ಧರಿಸಿದ ನಂತರ ಮಗುವು ಸ್ವಲ್ಪ ದೊಡ್ಡದಾಗುವ ತನಕ ತನ್ನ ಸುತ್ತಮುತ್ತಲಿನ ವಿಷಯನ್ನು ನೋಡಿ ಕಲಿಯುವುದರಿಂದ ತನ್ನ ಸುತ್ತಮುತ್ತಲಿನ ಪರಿಸ್ಥಿತಿಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಸಂಸ್ಕಾರಗಳೂ ಅದರ ಚಿತ್ತದ ಮೇಲಾಗುತ್ತವೆ.

Leave a Comment