ಗಣೇಶ ಮೂರ್ತಿಯನ್ನು ಸ್ಥಾಪಿಸಿದ ನಂತರ ಪ್ರತಿ ದಿನ ಮಾಡಬೇಕಾದ ಪಂಚೋಪಚಾರ ಪೂಜೆ

ಅ. ಸಂಜೆ ಏಳು ಏಳುವರೆಗೆ ದೇವರಿಗೆ ಅರ್ಪಿಸಿದ ಹೂವು ತೆಗೆದು ಗಂಧ, ಹೂವು, ದೂರ್ವೆ, ಧೂಪ, ದೀಪ ಮತ್ತು ನೈವೇದ್ಯವನ್ನು ಅರ್ಪಿಸಬೇಕು. ಆರತಿಯನ್ನು ಬೆಳಗಬೇಕು. ಇದನ್ನು ಪಂಚೋಪಚಾರ ಪೂಜೆ ಎನ್ನುತ್ತಾರೆ. (ಪಂಚೋಪಚಾರ ಪೂಜೆಯನ್ನು ಹೇಗೆ ಮಾಡಬೇಕು ಎಂದು ಸವಿಸ್ತಾರವಾಗಿ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ !)

ರಾತ್ರಿ ಮಲಗುವ ಮುಂಚೆ ಗಣಪತಿಗೆ ಪ್ರಾರ್ಥನೆಯನ್ನು ಮಾಡಿ ಅ ದಿನದ ಸೇವೆಯನ್ನು ಒಳ್ಳೆಯ ರೀತಿಯಲ್ಲಿ ಮಾಡಿಸಿಕೊಂಡಿರುವುದಕ್ಕೆ ಕೃತಜ್ಞತೆಯನ್ನು ಅರ್ಪಿಸಬೇಕು.

ಆ. ಪ್ರತಿ ದಿನವೂ ಷೋಡಶೋಪಚಾರ ಪೂಜೆಯನ್ನು ಮಾಡಲು ಸಾಧ್ಯವಿಲ್ಲದಿದ್ದರೆ ಮೇಲೆ ನೀಡಿರುವಂತೆ ಪಂಚೋಪಚಾರ ಪೂಜೆಯನ್ನು ಮಾಡಬೇಕು.

ಇ. ಪೂಜೆಯ ನಂತರ ಸಮಯವಿದ್ದಲ್ಲಿ ಗಣೇಶ ಸ್ತೋತ್ರ, ಅಥರ್ವಶೀರ್ಷ, ಗಣೇಶ ಸಹಸ್ರನಾಮಾವಳಿ ಇವುಗಳನ್ನು ಪಠಿಸಿ. ಮಕ್ಕಳಿಗೂ ಸ್ತೋತ್ರಗಳನ್ನು ಕಲಿಸಿ. ಇದರೊಂದಿಗೆ ದೂರ್ವೆ, ಹೂವುಗಳ ಬಗ್ಗೆ ಮಾಹಿತಿಯನ್ನು ನೀಡಿ. ಮಕ್ಕಳಿಗೆ ಮೋದಕವನ್ನು ತಯಾರಿಸಲು ಕಲಿಸಿ.

ಈ. ಗಣೇಶ ಮೂರ್ತಿಯ ಮುಂದೆ ಸ್ಥಳವನ್ನು ಸ್ವಚ್ಛವಾಗಿಡಬೇಕು. ನೈವೇದ್ಯ, ಹಣ್ಣುಗಳನ್ನು ಪೂಜೆ ಮುಗಿದ ಮೇಲೆ ಅಲ್ಲಿಂದ ತೆಗೆಯಬೇಕು. ಮಂಟಪದಲ್ಲಿಯೇ ಹಾಳಾಗದಂತೆ ಜಾಗರೂಕತೆ ವಹಿಸಿ.

ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪಂಚೋಪಚಾರ ಪೂಜೆ ಮಾಡಬೇಕು.

Leave a Comment