ಶ್ರೀ ಗಣಪತಿ ಅಥರ್ವಶೀರ್ಷ

ಅಥರ್ವಶೀರ್ಷ ಶಬ್ದದ ಅರ್ಥ

ಥರ್ವವೆಂದರೆ ಉಷ್ಣ (ಬಿಸಿ), ಅಥರ್ವವೆಂದರೆ ಶಾಂತಿ ಮತ್ತು ಶೀರ್ಷವೆಂದರೆ ಮಸ್ತಕ. ಯಾವುದರ ಪುರಶ್ಚರಣದಿಂದ (ಪಠಿಸುವುದರಿಂದ) ಮಸ್ತಕಕ್ಕೆ ಶಾಂತಿಯು ಲಭಿಸುತ್ತದೆಯೋ, ಅದುವೇ ಅಥರ್ವಶೀರ್ಷ. ಭಗವಾನ ಜೈಮಿನಿಋಷಿಗಳ ಸಾಮವೇದೀಯ ಶಾಖೆಯ ಶಿಷ್ಯರಾದ ಮುದ್ಗಲಋಷಿಗಳು ‘ಸಾಮಮುದ್ಗಲ ಗಣೇಶಸೂಕ್ತವನ್ನು’ ಬರೆದರು. ನಂತರ ಅವರ ಶಿಷ್ಯರಾದ ಗಣಕಋಷಿಗಳು ‘ಗಣಪತಿ ಅಥರ್ವಶೀರ್ಷ’ವನ್ನು ಬರೆದರು. ಬಹುತೇಕ ಸ್ತೋತ್ರಗಳಲ್ಲಿ ಮೊದಲಿಗೆ ದೇವತೆಯ ಧ್ಯಾನ, ಅಂದರೆ ಮೂರ್ತಿಯ ವರ್ಣನೆಯಿರುತ್ತದೆ ಮತ್ತು ನಂತರ ಸ್ತುತಿಯಿರುತ್ತದೆ. ಇದಕ್ಕೆ ವಿರುದ್ಧವಾಗಿ ಅಥರ್ವಶೀರ್ಷದಲ್ಲಿ ಮೊದಲು ಸ್ತುತಿ ಇದ್ದು ನಂತರ ಧ್ಯಾನವಿದೆ.

ಅಥರ್ವಶೀರ್ಷದ ಮುಂದಿನ ಮೂರು ಪ್ರಮುಖ ಭಾಗಗಳಿವೆ –

೧. ಶಾಂತಿಮಂತ್ರ : ಪ್ರಾರಂಭದಲ್ಲಿ ‘ಓಂ ಭದ್ರಂ ಕರ್ಣೇಭಿಃ…’ ಮತ್ತು ‘ಸ್ವಸ್ತಿನ ಇಂದ್ರೋ…|’ ಈ ಮಂತ್ರ ಹಾಗೂ ಕೊನೆಗೆ ‘ಸಹನಾವವತು…|’ ಈ ಮಂತ್ರಗಳಿವೆ.

೨. ಧ್ಯಾನವಿಧಿ : ‘ಓಂ ನಮಸ್ತೇ ಗಣಪತಯೇ’ದಿಂದ ‘ವರದಮೂರ್ತಯೇ ನಮಃ’ ವರೆಗಿನ ಹತ್ತು ಮಂತ್ರಗಳು.

೩. ಫಲಶ್ರುತೀ : ‘ಏತದಥರ್ವಶೀರ್ಷ ಯೋಧೀತೆ’ ಇತ್ಯಾದಿ ನಾಲ್ಕು ಮಂತ್ರಗಳು

ಶ್ರೀ ಗಣಪತಿ ಅಥರ್ವಶೀರ್ಷ ಪಠಿಸುವಾಗ ಪಾಲಿಸಬೇಕಾದ ನಿಯಮಗಳು

ಅಥರ್ವಶೀರ್ಷವನ್ನು ತುಂಬಾ ನಿಧಾನವಾಗಿ, ಒಂದೇ ಲಯದಲ್ಲಿ ಹೇಳಬೇಕು.

ಸ್ತೋತ್ರ ಪಠಣದ ಮೊದಲು ಸ್ನಾನ ಮಾಡಬೇಕು.

ಕುಳಿತುಕೊಳ್ಳಲು ಒಗೆದು ಮಡಚಿದ ವಸ್ತ್ರ, ಮೃಗಾಜಿನ, ಉಣ್ಣೆಯ ಪಂಚೆ ಅಥವಾ ದರ್ಭೆಯ ಚಾಪೆ ಇವುಗಳನ್ನು ಉಪಯೋಗಿಸಬೇಕು.

ಪಠಣ ಪೂರ್ಣವಾಗುವ ವರೆಗೆ ಕಾಲುಗಳನ್ನು ಬದಲಾಯಿಸುವ ಆವಶ್ಯಕತೆ ಬರದಂತಹ ಸುಲಭ ಸುಖಾಸನದಲ್ಲಿ (ಕಾಲುಮಡಚಿ) ಕುಳಿತುಕೊಳ್ಳಬೇಕು.

ದಕ್ಷಿಣ ದಿಕ್ಕನ್ನು ಬಿಟ್ಟು ಇತರ ಯಾವುದೇ ದಿಕ್ಕಿನ ಕಡೆಗೆ ಮುಖ ಮಾಡಿ ಕುಳಿತುಕೊಳ್ಳಬಹುದು.

ಪಠಣವನ್ನು ಆರಂಭಿಸುವ ಮೊದಲು ಗಣಪತಿಯ ಪೂಜೆಯನ್ನು ಮಾಡಿ ಅವನಿಗೆ ಅಕ್ಷತೆ, ಗರಿಕೆ, ಶಮಿ ಮತ್ತು ಕೆಂಪು ಹೂವುಗಳನ್ನು ಅರ್ಪಿಸಬೇಕು.

ಪೂಜೆಯನ್ನು ಮಾಡುವುದು ಸಾಧ್ಯವಿಲ್ಲದಿದ್ದಲ್ಲಿ ಕೆಲವು ಕ್ಷಣ (ಅಂದಾಜು ಒಂದು ನಿಮಿಷ) ಗಣಪತಿಯ ಧ್ಯಾನವನ್ನು ಮಾಡಬೇಕು, ಆಮೇಲೆ ನಮಸ್ಕಾರ ಮಾಡಿ ಪಠಣವನ್ನು ಆರಂಭಿಸಬೇಕು.

ಸ್ತೋತ್ರವನ್ನು ಗಣಪತಿಯ ಮೂರ್ತಿಯ ಕಡೆಗೆ ಅಥವಾ ಓಂಕಾರದ ಕಡೆಗೆ ನೋಡಿ ಹೇಳಬೇಕು ಅಥವಾ ಕಣ್ಣುಗಳ ಮುಂದೆ ಗಣಪತಿಯ ಮೂರ್ತಿಯನ್ನು ತರಬೇಕು.

ಇವೆಲ್ಲವುಗಳಿಂದ ಏಕಾಗ್ರತೆಯನ್ನು ಬೇಗನೇ ಸಾಧಿಸಲು ಸಹಾಯವಾಗುತ್ತದೆ. ಹಾಗೆಯೇ ಶುಚಿರ್ಭೂತರಾಗಿ ಪಠಿಸುವುದರಿಂದ ಆಧ್ಯಾತ್ಮಿಕ ಶಕ್ತಿಯನ್ನು ಗ್ರಹಿಸುವ ಕ್ಷಮತೆ ಹೆಚ್ಚುತ್ತದೆ.

ಶ್ರೀ ಗಣಪತಿ ಅಥರ್ವಶೀರ್ಷ

ಶ್ರೀಗಣಪತಿ-ಅಥರ್ವಶೀರ್ಷಮ್|
ಶ್ರೀ ಗಣೇಶಾಯ ನಮಃ|

(ಶಾಂತಿಮಂತ್ರ)
ಓಂ ಭದ್ರಂ ಕರ್ಣೇಭಿಃ ಶೃಣುಯಾಮ ದೇವಾಃ |
ಭದ್ರಮ್ ಪಶ್ಯೇಮಾಕ್ಷಭಿರ್ಯಜಾತ್ರಾಃ | ಸ್ಥಿರೈರಂಗೈಸ್ತುಷ್ಟುವಾಂಸಸ್ತನೂಭಿಃ
ವ್ಯಶೇಮ ದೇವಹಿತಂ ಯದಾಯುಃ ||
ಓಂ ಸ್ವಸ್ತಿ ನ ಇಂದ್ರೋ ವೃದ್ಧಶ್ರವಾಃ |
ಸ್ವಸ್ತಿ ನಃ ಪೂಷಾ ವಿಶ್ವವೇದಾಃ |
ಸ್ವಸ್ತಿ ನಸ್ತಾರ್ಕ್ಷ್ಯೋ ಅರಿಷ್ಟನೇಮಿಃ
ಸ್ವಸ್ತಿ ನೋ ಬೃಹಸ್ಪತಿರ್ದಧಾತು ||
ಓಂ ಶಾಂತಿಃ ಶಾಂತಿಃ ಶಾಂತಿಃ ||

(ಅಥ ಅಥರ್ವಶೀರ್ಷಾರಂಭಃ |)
ಓಂ ನಮಸ್ತೇ ಗಣಪತಯೇ |
ತ್ವಮೇವ ಪ್ರತ್ಯಕ್ಷನ್ ತತ್ತ್ವಮಸಿ |
ತ್ವಮೇವ ಕೇವಲಂ ಕರ್ತಾಸಿ |
ತ್ವಮೇವ ಕೇವಲಮ್ ಧರ್ತಾಸಿ |
ತ್ವಮೇವ ಕೇವಲಮ್ ಹರ್ತಾಸಿ |
ತ್ವಮೇವ ಸರ್ವಂ ಖಲ್ವಿದಮ್ ಬ್ರಹ್ಮಾಸಿ |
ತ್ವಂ ಸಾಕ್ಷಾದಾತ್ಮಾಸಿ ನಿತ್ಯಮ್ ||೧||

ಋತಂ ವಚ್ಮಿ | ಸತ್ಯಂ ವಚ್ಮಿ ||೨||

ಅವ ತ್ವಮ್ ಮಾಮ್ | ಅವ ವಕ್ತಾರಮ್ |
ಅವ ಶ್ರೋತಾರಮ್ | ಅವ ದಾತಾರಮ್ |
ಅವ ಧಾತಾರಮ್ | ಅವಾನೂಚಾನಮವ ಶಿಷ್ಯಮ್ |
ಅವ ಪಶ್ಚಾತ್ತಾತ್ | ಅವ ಪುರಸ್ತಾತ್ |
ಅವೋತ್ತರಾತ್ತಾತ್ | ಅವ ದಕ್ಷಿಣಾತ್ತಾತ್ |
ಅವ ಚೋರ್ಧ್ವಾತ್ತಾತ್ | ಅವಾಧರಾತ್ತಾತ್ |
ಸರ್ವತೋ ಮಾಮ್ ಪಾಹಿ ಪಾಹಿ ಸಮಂತಾತ್ ||೩||

ತ್ವಂ ವಾಙ್ಮಯಸ್ತ್ವಂ ಚಿನ್ಮಯಃ |
ತ್ವಮ್ ಆನಂದಮಯಸ್ತ್ವಮ್ ಬ್ರಹ್ಮಮಯಃ |
ತ್ವಂ ಸಚ್ಚಿದಾನಂದಾದ್ವಿತೀಯೋಸಿ |
ತ್ವಮ್ ಪ್ರತ್ಯಕ್ಷಮ್ ಬ್ರಹ್ಮಾಸಿ |
ತ್ವಮ್ ಜ್ಞಾನಮಯೋ ವಿಜ್ಞಾನಮಯೋಸಿ ||೪||

ಸರ್ವಂ ಜಗದಿದನ್ ತ್ವತ್ತೋ ಜಾಯತೇ |
ಸರ್ವಂ ಜಗದಿದನ್ ತ್ವತ್ತಸ್ತಿಷ್ಠತಿ |
ಸರ್ವಂ ಜಗದಿದನ್ ತ್ವಯಿ ಲಯಮೇಷ್ಯತಿ |
ಸರ್ವಂ ಜಗದಿದನ್ ತ್ವಯಿ ಪ್ರತ್ಯೇತಿ |
ತ್ವಮ್ ಭೂಮಿರಾಪೋನಲೋನಿಲೋ ನಭಃ |
ತ್ವಂ ಚತ್ವಾರಿ ವಾಕ್‌ಪದಾನಿ ||೫||

ತ್ವಂ ಗುಣತ್ರಯಾತೀತಃ | (ತ್ವಮ್ ಅವಸ್ಥಾತ್ರಯಾತೀತಃ)
ತ್ವನ್ ದೇಹತ್ರಯಾತೀತಃ | ತ್ವಂ ಕಾಲತ್ರಯಾತೀತಃ |
ತ್ವಮ್ ಮೂಲಾಧಾರಸ್ಥಿತೋಸಿ ನಿತ್ಯಮ್ |
ತ್ವಂ ಶಕ್ತಿತ್ರಯಾತ್ಮಕಃ |
ತ್ವಾಂ ಯೋಗಿನೋ ಧ್ಯಾಯಂತಿ ನಿತ್ಯಮ್ |
ತ್ವಮ್ ಬ್ರಹ್ಮಾ ತ್ವಂ ವಿಷ್ಣುಸ್ತ್ವಮ್ ರುದ್ರಸ್ತ್ವಮ್
ಇಂದ್ರಸ್ತ್ವಮ್ ಅಗ್ನಿಸ್ತ್ವಂ ವಾಯುಸ್ತ್ವಂ ಸೂರ್ಯಸ್ತ್ವಂ
ಚಂದ್ರಮಾಸ್ತ್ವಮ್ ಬ್ರಹ್ಮಭೂರ್ಭುವಃ ಸ್ವರೋಮ್ ||೬||

ಗಣಾದಿಮ್ ಪೂರ್ವಮುಚ್ಚಾರ್ಯ ವರ್ಣಾದಿನ್ ತದನಂತರಮ್ |
ಅನುಸ್ವಾರಃ ಪರತರಃ | ಅರ್ಧೇಂದುಲಸಿತಮ್ |
ತಾರೇಣ ಋದ್ಧಮ್ | ಏತತ್ತವ ಮನುಸ್ವರೂಪಮ್ |
ಗಕಾರಃ ಪೂರ್ವರೂಪಮ್ | ಅಕಾರೋ ಮಧ್ಯಮರೂಪಮ್ |
ಅನುಸ್ವಾರಶ್ಚಾಂತ್ಯರೂಪಮ್ | ಬಿಂದುರುತ್ತರರೂಪಮ್ |
ನಾದಃ ಸಂಧಾನಮ್ | ಸಂಹಿತಾ ಸಂಧಿಃ |
ಸೈಷಾ ಗಣೇಶವಿದ್ಯಾ | ಗಣಕ ಋಷಿಃ |
ನಿಚೃದ್‌ಗಾಯತ್ರೀ ಛಂದಃ | ಗಣಪತಿರ್ದೇವತಾ |
ಓಂ ಗಂ ಗಣಪತಯೇ ನಮಃ ||೭||

ಏಕದಂತಾಯ ವಿದ್ಮಹೇ | ವಕ್ರತುಂಡಾಯ ಧೀಮಹಿ |
ತನ್ನೋ ದಂತಿಃ ಪ್ರಚೋದಯಾತ್ ||೮||

ಏಕದಂತಂ ಚತುರ್ಹಸ್ತಮ್, ಪಾಶಮಂಕುಶಧಾರಿಣಮ್ |
ರದಂ ಚ ವರದಮ್ ಹಸ್ತೈರ್ಬಿಭ್ರಾಣಮ್, ಮೂಷಕಧ್ವಜಮ್ |
ರಕ್ತಂ ಲಂಬೋದರಂ, ಶೂರ್ಪಕರ್ಣಕಮ್ ರಕ್ತವಾಸಸಮ್ |
ರಕ್ತಗಂಧಾನುಲಿಪ್ತಾಂಗಮ್, ರಕ್ತಪುಷ್ಪೈಃಸುಪೂಜಿತಮ್ |
ಭಕ್ತಾನುಕಂಪಿನನ್ ದೇವಂ, ಜಗತ್ಕಾರಣಮಚ್ಯುತಮ್ |
ಆವಿರ್ಭೂತಂ ಚ ಸೃಷ್ಟ್ಯಾದೌ, ಪ್ರಕೃತೇಃ ಪುರುಷಾತ್ಪರಮ್ |
ಏವನ್ ಧ್ಯಾಯತಿ ಯೋ ನಿತ್ಯಂ
ಸ ಯೋಗೀ ಯೋಗಿನಾಂ ವರಃ ||೯||

ನಮೋ ವ್ರಾತಪತಯೇ, ನಮೋ ಗಣಪತಯೇ, ನಮಃ ಪ್ರಮಥಪತಯೇ,
ನಮಸ್ತೇ ಅಸ್ತು ಲಂಬೋದರಾಯ ಏಕದಂತಾಯ, ವಿಘ್ನನಾಶಿನೇ ಶಿವಸುತಾಯ,
ವರದಮೂರ್ತಯೇ ನಮಃ ||೧೦||

ಏತದಥರ್ವಶೀರ್ಷಂ ಯೋಧೀತೇ |
ಸ ಬ್ರಹ್ಮಭೂಯಾಯ ಕಲ್ಪತೇ |
ಸ ಸರ್ವವಿಘ್ನೈರ್ನ ಬಾಧ್ಯತೇ | ಸ ಸರ್ವತಃ ಸುಖಮೇಧತೇ |
ಸ ಪಂಚಮಹಾಪಾಪಾತ್ ಪ್ರಮುಚ್ಯತೆ |
ಸಾಯಮಧೀಯಾನೋ ದಿವಸಕೃತಮ್ ಪಾಪನ್ ನಾಶಯತಿ |
ಪ್ರಾತರಧೀಯಾನೋ ರಾತ್ರಿಕೃತಮ್ ಪಾಪನ್ ನಾಶಯತಿ |
ಸಾಯಮ್ ಪ್ರಾತಃ ಪ್ರಯುಂಜಾನೋಅಪಾಪೋ ಭವತಿ |
ಸರ್ವತ್ರಾಧೀಯಾನೋಪವಿಘ್ನೋ ಭವತಿ |
ಧರ್ಮಾರ್ಥಕಾಮಮೋಕ್ಷಂ ಚ ವಿಂದತಿ |
ಇದಮ್ ಅಥರ್ವಶೀರ್ಷಮ್ ಅಶಿಷ್ಯಾಯ ನ ದೇಯಮ್ |
ಯೋ ಯದಿ ಮೋಹಾದ್ದಾಸ್ಯತಿ ಸ ಪಾಪೀಯಾನ್ ಭವತಿ |
ಸಹಸ್ರಾವರ್ತನಾತ್ | ಯಂ ಯಂ ಕಾಮಮಧೀತೇ
ತನ್ ತಮನೇನ ಸಾಧಯೇತ್ ||೧೧||

ಅನೇನ ಗಣಪತಿಮಭಿಷಿಂಚತಿ |
ಸ ವಾಗ್ಮೀ ಭವತಿ |
ಚತುರ್ಥ್ಯಾಮನಶ್ನನ್ ಜಪತಿ ಸ ವಿದ್ಯಾವಾನ್ ಭವತಿ |
ಇತ್ಯಥರ್ವಣವಾಕ್ಯಮ್ | ಬ್ರಹ್ಮಾದ್ಯಾವರಣಮ್ ವಿದ್ಯಾತ್ |
ನ ಬಿಭೇತಿ ಕದಾಚನೇತಿ ||೧೨||

ಯೋ ದೂರ್ವಾಂಕುರೈರ್ಯಜತಿ | ಸ ವೈಶ್ರವಣೋಪಮೋ ಭವತಿ |
ಯೋ ಲಾಜೈರ್ಯಜತಿ, ಸ ಯಶೋವಾನ್ ಭವತಿ |
ಸ ಮೇಧಾವಾನ್ ಭವತಿ |
ಯೋ ಮೋದಕಸಹಸ್ರೇಣ ಯಜತಿ |
ಸ ವಾಂಛಿತಫಲಮವಾಪ್ನೋತಿ |
ಯಃ ಸಾಜ್ಯಸಮಿದ್‌ಭಿರ್ಯಜತಿ
ಸ ಸರ್ವಂ ಲಭತೇ, ಸ ಸರ್ವಂ ಲಭತೇ ||೧೩||

ಅಷ್ಟೌ ಬ್ರಾಹ್ಮಣಾನ್ ಸಮ್ಯಗ್ಗ್ರಾಹಯಿತ್ವಾ,
ಸೂರ್ಯವರ್ಚಸ್ವೀ ಭವತಿ |
ಸೂರ್ಯಗ್ರಹೇ ಮಹಾನದ್ಯಾಮ್ ಪ್ರತಿಮಾಸನ್ನಿಧೌ ವಾ ಜಪ್ತ್ವಾ, ಸಿದ್ಧಮಂತ್ರೋ ಭವತಿ |
ಮಹಾವಿಘ್ನಾತ್ ಪ್ರಮುಚ್ಯತೇ | ಮಹಾದೋಷಾತ್ ಪ್ರಮುಚ್ಯತೇ |
ಮಹಾಪಾಪಾತ್ ಪ್ರಮುಚ್ಯತೇ |
ಸ ಸರ್ವವಿದ್ ಭವತಿ, ಸ ಸರ್ವವಿದ್ ಭವತಿ |
ಯ ಏವಮ್ ವೇದ ||೧೪||

ಇತ್ಯುಪನಿಷತ್ |

(ಶಾಂತಿಮಂತ್ರ)
ಓಂ ಭದ್ರಂ ಕರ್ಣೇಭಿ ಶೃಣುಯಾಮ ದೇವಾಃ |
ಭದ್ರಮ್ ಪಶ್ಯೇಮಾಕ್ಷಭಿರ್ಯಜತ್ರಾಃ | ಸ್ಥಿರೈರಂಗೈಸ್ತುಷ್ಟುವಾಂಸಸ್ತನೂಭಿಃ
ವ್ಯಶೇಮ ದೇವಹಿತಂ ಯದಾಯುಃ ||
ಓಂ ಸ್ವಸ್ತಿ ನ ಇಂದ್ರೋ ವೃದ್ಧಶ್ರವಾಃ |
ಸ್ವಸ್ತಿ ನಃ ಪೂಷಾ ವಿಶ್ವವೇದಾಃ |
ಸ್ವಸ್ತಿ ನಸ್ತಾರ್ಕ್ಷ್ಯೋಅರಿಷ್ಟನೇಮಿಃ |
ಸ್ವಸ್ತಿ ನೋ ಬೃಹಸ್ಪತಿರ್ದಧಾತು ||
ಓಂ ಸಹನಾವವತು | ಸಹನೌ ಭುನಕ್ತು |
ಸಹವೀರ್ಯಂ ಕರವಾವಹೈ |
ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ ||

ಓಂ ಶಾಂತಿಃ ಶಾಂತಿಃ ಶಾಂತಿಃ ||

(ಈ ಸ್ತೋತ್ರದ ಅರ್ಥವನ್ನು ತಿಳಿದುಕೊಂಡು ಇನ್ನಷ್ಟು ಭಾವಪೂರ್ಣವಾಗಿ ಈ ಸ್ತೋತ್ರವನ್ನು ಪಠಿಸುವಂತಾಗಲು, ಓದಿ ಸನಾತನ ನಿರ್ಮಿಸಿದ ಕಿರುಗ್ರಂಥ ಶ್ರೀ ಗಣಪತಿ ಅಥರ್ವಶೀರ್ಷ ಹಾಗೂ ಸಂಕಷ್ಟನಾಶನಸ್ತೋತ್ರ)

Leave a Comment