ಪೂಜಾಸ್ಥಳದ ಶುದ್ಧೀಕರಣ ಮತ್ತು ಉಪಕರಣಗಳಲ್ಲಿನ ದೇವತ್ವವನ್ನು ಜಾಗೃತಗೊಳಿಸುವುದು

ಪೂಜಾಸ್ಥಳದ ಶುದ್ಧೀಕರಣ

ಅ. ಪೂಜೆ ಮಾಡುವವನು ಆ ಕೋಣೆಯ ಕಸ ಗುಡಿಸಬೇಕು. ಆದಷ್ಟು ಪೂಜೆ ಮಾಡುವ ವ್ಯಕ್ತಿಯೇ ಕಸ ಗುಡಿಸಬೇಕು.

ಆ. ಕಸ ಗುಡಿಸಿದ ನಂತರ ಕೋಣೆಯಲ್ಲಿನ ನೆಲವು ಮಣ್ಣಿನದ್ದಾಗಿದ್ದರೆ, ನೆಲವನ್ನು ಸೆಗಣಿಯಿಂದ ಸಾರಿಸಬೇಕು. ಮಣ್ಣಿನ ನೆಲವಲ್ಲದಿದ್ದರೆ ಸ್ವಚ್ಛ ನೀರಿನಿಂದ ನೆಲ ಒರೆಸಬೇಕು.

ಇ. ಮಾವಿನ ಅಥವಾ ತುಳಸೀ ಎಲೆಯಿಂದ ಕೋಣೆಯಲ್ಲಿ ಗೋಮೂತ್ರವನ್ನು ಸಿಂಪಡಿಸಬೇಕು. ಗೋಮೂತ್ರವಿಲ್ಲದಿದ್ದರೆ ನೀರಿನಲ್ಲಿ ಊದುಬತ್ತಿಯ ವಿಭೂತಿ ಹಾಕಿ ಆ ನೀರನ್ನು ಕೋಣೆ ಯಲ್ಲಿ ಸಿಂಪಡಿಸಬೇಕು. ಅನಂತರ ಕೋಣೆಯಲ್ಲಿ ಧೂಪ ಹಾಕಬೇಕು.

ಉಪಕರಣಗಳಲ್ಲಿನ ದೇವತ್ವದ ಜಾಗೃತಿ

ದೇವರ ಪೂಜೆಯ ಉಪಕರಣಗಳನ್ನು ತಿಕ್ಕಿ ತೊಳೆದ್ಳುಒರೆಸಿ ಸ್ವಚ್ಛಗೊಳಿಸ ಬೇಕು. ಅನಂತರ ಅವುಗಳ ಮೇಲೆ ತುಳಸೀ ಎಲೆ ಅಥವಾ ದೂರ್ವೆ ಇವುಗಳಿಂದ ಜಲಪ್ರೋಕ್ಷಣ (ನೀರು ಸಿಂಪಡಿಸುವುದು) ಮಾಡಬೇಕು.

ರಂಗೋಲಿ ಬಿಡಿಸುವುದು

ಸಗುಣ ತತ್ತ್ವವನ್ನು ಆಕರ್ಷಿಸುವ ರಂಗೋಲಿ : ೧೩ ಚುಕ್ಕೆಗಳು ೧೩ ಸಾಲು

೧. ರಂಗೋಲಿಯನ್ನು ಸ್ತ್ರೀಯರೇ ಬಿಡಿಸಬೇಕು, ಪುರುಷರು ಬಿಡಿಸಬಾರದು.

೨. ಯಾವ ದೇವತೆಯ ಪೂಜೆ ಮಾಡುವುದಿರುತ್ತದೆಯೋ, ಅವಳ ತತ್ತ್ವಕ್ಕೆ ಸಂಬಂಧಿಸಿದ ರಂಗೋಲಿ ಬಿಡಿಸಬೇಕು.

೩. ದೇವತೆಗಳ ಹೆಸರಿನ ಅಥವಾ ರೂಪದ ರಂಗೋಲಿ ಯನ್ನು ಬಿಡಿಸದೇ, ಸ್ವಸ್ತಿಕ ಅಥವಾ ಬಿಂದುಗಳಿಂದ ರಂಗೋಲಿ ಯನ್ನು ಬಿಡಿಸಬೇಕು.

೪. ರಂಗೋಲಿ ಬಿಡಿಸಿದ ನಂತರ ಅದಕ್ಕೆ ಅರಿಶಿನ್ಳಕುಂಕುಮ ಅರ್ಪಿಸಬೇಕು.

ಶಂಖನಾದ ಮಾಡುವುದು (ಶಂಖವನ್ನು ಊದುವುದು)

೧. ಶಂಖನಾದ ಮಾಡುವಾಗ ನಿಂತುಕೊಂಡು ಕುತ್ತಿಗೆಯನ್ನು ಮೇಲೆ ಮಾಡಿ ಮತ್ತು ಸ್ವಲ್ಪ ಹಿಂದೆ ಬಗ್ಗಿ ಮನಸ್ಸನ್ನು ಏಕಾಗ್ರ ಗೊಳಿಸಲು ಪ್ರಯತ್ನಿಸಬೇಕು.

೨. ಶ್ವಾಸವನ್ನು ಎದೆಯಲ್ಲಿ ಪೂರ್ಣ ತುಂಬಿಕೊಳ್ಳಬೇಕು.

೩. ಅನಂತರ ಶಂಖನಾದವನ್ನು ಮಾಡಲು ಪ್ರಾರಂಭಿಸಿ ಧ್ವನಿಯ ತೀವ್ರತೆಯನ್ನು ಹೆಚ್ಚಿಸುತ್ತಾ ಹೋಗಬೇಕು ಮತ್ತು ಕೊನೆಯ ವರೆಗೆ ತೀವ್ರನಾದವನ್ನು ಮಾಡಬೇಕು. ಆದಷ್ಟು ಒಂದೇ ಶ್ವಾಸದಲ್ಲಿ ಶಂಖವನ್ನು ಊದಬೇಕು.

೪. ಶಂಖಿಣಿಯನ್ನು ಊದಬಾರದು.

ದೇವರಪೂಜೆಗೆ ಕುಳಿತುಕೊಳ್ಳಲು ಮಣೆ ತೆಗೆದು ಕೊಳ್ಳುವುದು

ದೇವರಪೂಜೆಗೆ ಕುಳಿತುಕೊಳ್ಳಲು ಆಸನವೆಂದು ಮರದ (ಕಟ್ಟಿಗೆಯ) ಮಣೆಯನ್ನು ತೆಗೆದುಕೊಳ್ಳಬೇಕು. ಮಣೆ ಯನ್ನು ಎರಡು ಹಲಗೆಗಳನ್ನು ಜೋಡಿಸಿ ತಯಾರಿಸಿರಬಾರದು, ಅದು ಅಖಂಡವಾಗಿರಬೇಕು. ಅದಕ್ಕೆ ಕಬ್ಬಿಣದ ಮೊಳೆಗಳನ್ನು ಹೊಡೆ?ರಬಾರದು ಮತ್ತು ಆದಷ್ಟು ಅದಕ್ಕೆ ಬಣ್ಣವನ್ನು ಹಚ್ಚಿರ ಬಾರದು. ಮಣೆಯ ಕೆಳಗೆ ರಂಗೋಲಿ ಬಿಡಿಸಿರಬೇಕು.

Leave a Comment