ಪೂಜಾಸಾಹಿತ್ಯದ ಪಟ್ಟಿ

ಪೂಜೆಯ ಸಿದ್ಧತೆ ಮಾಡುವಾಗ ಸ್ತೋತ್ರಪಠಣ ಅಥವಾ ನಾಮಜಪ ಮಾಡಬೇಕು. ನಾಮಜಪದ ತುಲನೆಯಲ್ಲಿ ಸ್ತೋತ್ರದಲ್ಲಿ ಸಗುಣ ತತ್ತ್ವವು ಹೆಚ್ಚಿರು ತ್ತದೆ. ಆದುದರಿಂದ ಸ್ತೋತ್ರವನ್ನು ದೊಡ್ಡಸ್ವರದಲ್ಲಿ ಹೇಳಬೇಕು ಮತ್ತು ನಾಮಜಪವನ್ನು ಮನಸ್ಸಿನಲ್ಲಿಯೇ ಮಾಡಬೇಕು. ನಾಮ ಜಪವು ಮನಸ್ಸಿನಲ್ಲಿ ಆಗ?ದ್ದರೆ ದೊಡ್ಡಸ್ವರದಲ್ಲಿ ಮಾಡಬಹುದು.

ಪೂಜಾಸಾಹಿತ್ಯದ ಪಟ್ಟಿ

೧.ಕುಂಕುಮ ೧೦೦ ಗ್ರಾಮ್
೨.ಅರಿಶಿನ ೧೦೦ ಗ್ರಾಮ್
೩.ಸಿಂಧೂರ ೨೫ ಗ್ರಾಮ್
೪.ಅಷ್ಟಗಂಧ ೫೦ ಗ್ರಾಮ್
೫.ರಂಗೋಲಿ ಪುಡಿ ಕಾಲು ಕಿಲೋ
೬.ಸುಗಂಧದ್ರವ್ಯ ೧ ಸೀಸೆ
೭.ಯಜ್ಞೋಪವೀತ (ಜನಿವಾರ) ೨
೮.ಊದುಬತ್ತಿ ೨೫ ಕಡ್ಡಿಗಳು
೯.ಕರ್ಪೂರ ೨೫ ಗ್ರಾಮ್
೧೦.ಬತ್ತಿ ೫೦
೧೧.ಗೆಜ್ಜೆವಸ್ತ್ರಗಳು ೬ (೭ ಮಣಿಗಳ)
೧೨. ಅಕ್ಷತೆ (ಅಖಂಡ ಅಕ್ಕಿ) ೧೦೦ ಗ್ರಾಮ್
೧೩.ಅಡಿಕೆ ೧೫
೧೪.ತೆಂಗಿನಕಾಯಿ ೫
೧೫.ವೀಳ್ಯೆದೆಲೆ ೨೫
೧೬.ಅಕ್ಕಿ ೧ ಕಿಲೋ
೧೭.ಒಂದು ರೂಪಾಯಿಯ ೧೦ ನಾಣ್ಯಗಳು
೧೮.ಎಳ್ಳೆಣ್ಣೆ ೧ ಲೀಟರ್
೧೯.ಶುದ್ಧ ತುಪ್ಪ ೧೦೦ ಗ್ರಾಮ್
೨೦.ಹೂವು ೧ ಕಿಲೋ
೨೧.ಹೂವುಗಳ ಹಾರ ೩
೨೨.ತುಳಸಿ (೨ ಎಲೆಗಳಿರುವ) ೨೫
೨೩.ಇನ್ನೂರು ದೂರ್ವೆ
೨೪.ಬಿಲ್ವದ ೧೫ ಎಲೆಗಳು (ತ್ರಿದಳ)
೨೫.ಹಣ್ಣು ೧೦ (ಐದು ರೀತಿಯ)
೨೬.ಪತ್ರೆ
೨೭.ದೇವರ ಮೂರ್ತಿ (ಶ್ರೀ ಗಣಪತಿ) ೧
೨೮.ಚೌರಂಗ ೧
೨೯.ಮಣೆ ೪
೩೦.ಕಲಶ ೧
೩೧.ತಾಮ್ರದ ತಟ್ಟೆ ೩
೩೨.ಘಂಟೆ ೧
೩೩.ಕಾಲುದೀಪ ೨
೩೪.ನೀಲಾಂಜನ ೪
೩೫.ಪಂಚಪಾತ್ರೆ ೧
೩೬ ಉದ್ಧರಣೆ ೧
೩೭.ತಟ್ಟೆ ೫
೩೮.ಬಟ್ಟಲು ೧೫
೩೯.ಪಾತ್ರೆ  ೧
೪೦.ಮಾವಿನ ಎಲೆ ೫ ಟೊಂಗೆಗಳು
೪೧.ಏಕಾರತಿ ೧
೪೨.ಪಂಚಾರತಿ ೧
೪೩.ಒಂದು ಬೆಂಕಿಪೊಟ್ಟಣ
೪೪.ಹರಿವಾಣ ೧
೪೫.ಮೋದಕ ೩೫
೪೬.ಕರ್ಜಿಕಾಯಿ ೧೫
೪೭.ಧೂಪ ೧೦೦ ಗ್ರಾಮ್
೪೮.ರವಿಕೆ ಖಣ ೧
೪೯.ತೋರಣದ  ಸಾಹಿತ್ಯ
೫೦.ದೇವರನ್ನು ಒರೆಸಲು ವಸ್ತ್ರ
೫೧.ಪಂಚಾಮೃತ (ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆ ಪ್ರತಿಯೊಂದು ೧ ಸಣ್ಣ ಬಟ್ಟಲು)

Leave a Comment

Click here to read more…