ವನಸ್ಪತಿಗಳು ಮಾನವನಿಗೆ ಸ್ಪಂದಿಸುತ್ತವೆ, ಎಂಬುದನ್ನು ಗಮನದಲ್ಲಿಡಿ !

ಪೂ. ಡಾ. ದೀಪಕ ಜೋಶಿ
                ಪೂ. ಡಾ. ದೀಪಕ ಜೋಶಿ

೧. ವನಸ್ಪತಿಗಳಿಗೂ ಮನಸ್ಸಿರುತ್ತದೆ ಮತ್ತು ಅವುಗಳು ಮಾರ್ಗದರ್ಶನವನ್ನೂ ಮಾಡಬಹುದು

ವನಸ್ಪತಿಗಳಿಗೂ ಮನಸ್ಸಿರುತ್ತದೆ. ಅವುಗಳಿಗೆ ಭಾವನೆಗಳಿರುತ್ತವೆ, ಎಂದು ಪ್ರಾಚೀನ ಋಷಿಮುನಿಗಳು ಸಾವಿರಾರು ವರ್ಷಗಳ ಹಿಂದೆ ಬರೆದಿಟ್ಟಿದ್ದಾರೆ. ಭಾರತದ ಸುಪುತ್ರ ಡಾ.ಜಗದೀಶ ಚಂದ್ರ ಬೋಸರು ಆಧುನಿಕ ಪ್ರಯೋಗಗಳ ಮೂಲಕ ಇದನ್ನು ಸಿದ್ಧಪಡಿಸಿದ್ದಾರೆ. ವನಸ್ಪತಿಗಳನ್ನು ನಾವೆಷ್ಟು ಪ್ರೀತಿಸುತ್ತೇವೆಯೋ ಅವುಗಳೂ ನಮ್ಮನ್ನು ಅಷ್ಟೇ ಪ್ರೀತಿಸುತ್ತವೆ. ನಾವು ಅವರಿಗಾಗಿ ಜೀವವಿಟ್ಟಷ್ಟು ಅವು ನಮ್ಮನ್ನು ಕಾಪಾಡುತ್ತವೆ. ವ್ಯಕ್ತಿಯಲ್ಲಿ ಭಾವವಿದ್ದರೆ ಮತ್ತು ವನಸ್ಪತಿಗಳ ಮಾತು ಅರಿತುಕೊಳ್ಳುವ ಕ್ಷಮತೆ ಇದ್ದರೆ ಆ ವನಸ್ಪತಿಗಳು ಆ ವ್ಯಕ್ತಿಗೆ ಮಾರ್ಗದರ್ಶನವನ್ನೂ ಮಾಡುತ್ತವೆ. ಮಹಾರಾಷ್ಟ್ರದ ಸಾಂಗ್ಲಿಯ ಖ್ಯಾತ ವೈದ್ಯ ಹಾಗೂ ಆಯುರ್ವೇದದಲ್ಲಿನ ಪಾಂಚ ಭೌತಿಕ ಚಿಕಿತ್ಸೆಯ ಅಧ್ವರ್ಯುದಿ.ಆತ್ಮಾರಾಮ ವಾಮನ ಶಾಸ್ತ್ರೀ ದಾತಾರ ಇವರಿಗೆ ವೃಕ್ಷ ದೇವತೆಗಳು ತಮ್ಮಲ್ಲಿರುವ ಔಷಧಿ ಗುಣಧರ್ಮದ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದವು.

೨ ಆ. ಸಂಕಟಗಳ ಬಗ್ಗೆ ಮುನ್ಸೂಚನೆ ನೀಡುವ ಗಿಡಗಳು

ಅ. ಜಾಜಿ : ಜಾಜಿ ಸಂಕಟದ ಮುನ್ಸೂಚನೆಯನ್ನು ಬಹಳ ಒಳ್ಳೆಯ ರೀತಿಯಲ್ಲಿ ನೀಡುತ್ತದೆ. ಜಾಜಿಯ ಎಲೆಗಳು ಯಾವಾಗಲೂ ಮೇಲಿನ ದಿಕ್ಕಿನಲ್ಲಿ ಮುಖ ಮಾಡಿರುತ್ತವೆ; ಆದರೆ ಸಂಕಟದ ಸಮಯದಲ್ಲಿ ಅವು ವಿರುದ್ಧ (ಭೂಮಿಯ) ದಿಕ್ಕಿನಲ್ಲಿ ಆಗುತ್ತವೆ.

ಆ. ಬಕುಳ : ಸಂಕಟದ ಸಮಯದಲ್ಲಿ ಇದರ ಹೂವುಗಳ ಸುಗಂಧವು ಮಂದವಾಗುತ್ತದೆ.

– ಪೂ. ಡಾ. ದೀಪಕ ಜೋಶಿ ಮತ್ತು ಗಣೇಶನಾಥನಜಿ

Leave a Comment