ಔಷಧಿ ವನಸ್ಪತಿ ಬೆಳೆಸುವುದರ ಆವಶ್ಯಕತೆ

೧ ಅ. ಔಷಧಿ ವನಸ್ಪತಿಗಳ ಸಂವರ್ಧನೆ ಸಾಧನೆಯೇ ಆಗಿದೆ : ಆಯುರ್ವೇದವು ‘ಐದನೇ ವೇದವಾಗಿದೆ; ಆದರೆ ಭಾರತದಲ್ಲಿಯೇ ಈ ಶಾಸ್ತ್ರದ ಉಪೇಕ್ಷೆಯಿಂದ ಇಂದು ಇದರಲ್ಲಿನ ಒಂದು ಮಹತ್ವದ ಘಟಕವಾದ ಔಷಧಿ ವನಸ್ಪತಿಗಳು ವಿರಳವಾಗುತ್ತಿವೆ. ಅವುಗಳ ಸಂವರ್ಧನೆಗಾಗಿ ಅವುಗಳ ಕೃಷಿ ಮಾಡುವುದು ಸಾಧನೆಯೇ ಆಗಿದೆ.

೧ ಆ. ಮುಂಬರುವ ಭೀಕರ ಆಪತ್ಕಾಲದಲ್ಲಿ ಔಷಧಿ ವನಸ್ಪತಿಗಳು ಸಹಜವಾಗಿ ಸಿಗಲು ಈಗಿನಿಂದಲೇ ಅವುಗಳ ಕೃಷಿ ಮಾಡುವುದು ಆವಶ್ಯಕವಾಗಿದೆ : ಮುಂಬರುವ ಭೀಕರ ಆಪತ್ಕಾಲದಲ್ಲಿ ಆರೋಗ್ಯ ರಕ್ಷಣೆಗಾಗಿ ನಮಗೆ ಆಲೋಪಥಿಯ ಔಷಧಿಗಳಲ್ಲ, ಆಯುರ್ವೇದೀಯ ಔಷಧಿ ವನಸ್ಪತಿಗಳು ಆಧಾರವಾಗಲಿವೆ. ‘ನೀರಡಿಕೆ ಯಾದಾಗ ಬಾವಿ ತೋಡುವುದಲ್ಲ !, ಎಂಬ ಗಾದೆ ಮಾತಿದೆ. ಮುಂಬರುವ ಭೀಕರ ಆಪತ್ಕಾಲದಲ್ಲಿ ಕಡಿಮೆ ಬೆಲೆಯ ಮತ್ತು ಬಹುಗುಣಿ ಯಾಗಿರುವ ವಿವಿಧ ಆಯುರ್ವೇದಿಕ ವನಸ್ಪತಿಗಳು ಸಹಜವಾಗಿ ದೊರೆಯಲು ಈಗಿನಿಂದಲೇ ಅವುಗಳನ್ನು ಮನೆಯ ಸುತ್ತಲೂ, ಮನೆಯ ಪರಿಸರದಲ್ಲಿ ಮತ್ತು ಗದ್ದೆಗಳಲ್ಲಿ ಬೆಳೆಯುವುದು ಆವಶ್ಯಕವಾಗಿದೆ.

೧ ಇ. ಔಷಧಿ ವನಸ್ಪತಿಗಳು ನಾಮಾವಶೇಷವಾಗದಂತೆ ತಡೆಯುವುದು ಅತಿ ಆವಶ್ಯಕವಾಗಿದೆ : ಜಗತ್ತಿನಾದ್ಯಂತ ಔಷಧಿ ವನಸ್ಪತಿಗಳ ಬೆಳೆಯುತ್ತಿರುವ ಬೇಡಿಕೆ, ಅವುಗಳ ಕಳ್ಳಸಾಗಾಣಿಕೆ ಹಾಗೆಯೇ ಆಧುನೀಕರಣದ ಹೆಸರಿನಲ್ಲಿ ನಡೆಯುತ್ತಿರುವ ಅನಿಯಂತ್ರಿತ ಮರಕಡಿತದಿಂದಾಗಿ ಅನೇಕ ಔಷಧಿ ವನಸ್ಪತಿಗಳು ನಾಮಾವಶೇಷವಾಗುವ ಮಾರ್ಗದಲ್ಲಿದೆ. ಇಂತಹ ವನಸ್ಪತಿಗಳ ಸಂವರ್ಧನೆಗಾಗಿ ಅವುಗಳ ಕೃಷಿ ಅತ್ಯಂತ ಆವಶ್ಯಕವಾಗಿದೆ.

೧ ಈ. ‘ಔಷಧಿ ವನಸ್ಪತಿಗಳನ್ನು ಬೆಳೆಸುವುದು, ಆಯುರ್ವೇದವನ್ನು ಮುಖ್ಯ ಚಿಕಿತ್ಸಾ ಪದ್ಧತಿಯನ್ನಾಗಿಸುವ ಒಂದು ಪ್ರಯತ್ನ : ಮುಂಬರುವ ಹಿಂದೂ ರಾಷ್ಟ್ರದಲ್ಲಿ ಆಯುರ್ವೇದವೇ ಮುಖ್ಯ ಚಿಕಿತ್ಸಾ ಪದ್ಧತಿಯಾಗಲಿದೆ. ಆಯುರ್ವೇದವನ್ನು ಮುಖ್ಯ ಚಿಕಿತ್ಸಾ ಪದ್ಧತಿಯನ್ನಾಗಿಸಲು ಪ್ರತಿಯೊಬ್ಬರೂ ಪ್ರಯತ್ನಿಸುವುದು ಆವಶ್ಯಕವಾಗಿದೆ. ಔಷಧಿ ವನಸ್ಪತಿಗಳ ಕೃಷಿ ಅದರ ಒಂದು ಹಂತವಾಗಿದೆ.

Leave a Comment