ಸಂಖ್ಯೆ ೧೦ ಮತ್ತು ವಿಜಯದಶಮಿ

೧. ಹತ್ತು ಈ ಸಂಖ್ಯೆಯ ಸ್ಪಷ್ಟೀಕರಣದಿಂದ ಸಂತ ಏಕನಾಥ ಮಹಾರಾಜರು ನಿಜಾತ್ಮ ಪೂಜೆಯ ಕುರಿತು ಮಾಡಿರುವ ವಿವೇಚನೆ

      ಪರಾತ್ಪರ ಗುರು ಪಾಂಡೆ ಮಹಾರಾಜ

ನವರಾತ್ರಿಯ ಹಬ್ಬದ ಮೊದಲ ೯ ದಿನ ಮಹಾಕಾಳಿ, ಮಹಾಲಕ್ಷ್ಮೀ ಮತ್ತು ಮಹಾಸರಸ್ವತಿಯ ಪೂಜೆಯನ್ನು ಮಾಡಲಾಗುತ್ತದೆ. ಆ ಸಮಯದಲ್ಲಿ ನಮ್ಮಲ್ಲಿರುವ ತಮೋ ಗುಣಗಳ ಪ್ರಾಬಲ್ಯ ಅಂದರೆ ವಿಕಾರ ಗಳು ನಶಿಸಲು ಮಹಾಕಾಳಿ ಪೂಜೆ ಮಾಡಲಾಗುತ್ತದೆ. ರಜೋಗುಣ, ಅಂದರೆ ಶಕ್ತಿಯನ್ನು ಹೆಚ್ಚಿಸಲು ಮಹಾಲಕ್ಷ್ಮೀಯ ಪೂಜೆ ಮತ್ತು ಸತ್ತ್ವಗುಣವನ್ನು ಹೆಚ್ಚಿಸಲು ಮಹಾಸರಸ್ವತಿಯ ಪೂಜೆ ಮಾಡಲಾಗುತ್ತದೆ. ಜ್ಞಾನದ ಮೂಲಕ ಸತ್ಯ-ಅಸತ್ಯವನ್ನು ಅರಿತುಕೊಂಡು ಸತ್ಯದೊಂದಿಗೆ ಏಕರೂಪವಾಗಲು ಈ ದೇವಿಯ ಪೂಜೆಯನ್ನು ಮಾಡಲಿಕ್ಕಿರುತ್ತದೆ. ಈ ರೀತಿ ಆತ್ಮಬಲದೊಂದಿಗೆ ಸಮರ್ಥರಾಗಿ ವಿಜಯದಶಮಿ ಅಂದರೆ ದಸರಾವನ್ನು ಆಚರಿಸಲಾಗುತ್ತದೆ ಮತ್ತು ಮಾಯೆಯ ಸೀಮೆಯನ್ನು ದಾಟಿ (ಗುಣಾತೀತರಾಗಿ) ಸಮಷ್ಟಿಗಾಗಿ ಎಲ್ಲೆಡೆಯೂ ಚೈತನ್ಯರೂಪ ವಾತಾವರಣ ನಿರ್ಮಾಣ ಮಾಡಲು ವಿಜಯವನ್ನು ಪ್ರಾಪ್ತಿಗೊಳಿಸಲು) ಸೀಮೋಲ್ಲಂಘನ ಮಾಡಲಾಗುತ್ತದೆ. ಈ ರೀತಿ ಒಂದು ರೀತಿಯಲ್ಲಿ ಇದು ಸಾಧಕರ ಸಮಷ್ಟಿ ಸಾಧನೆಯೇ ಆಗುತ್ತದೆ. ವೇದಗಳಲ್ಲಿ ಕೂಡ || ಕೃಣ್ವಂತೋ ವಿಶ್ವಮಾರ್ಯಮ್ || (ಋಗ್ವೇದ, ಮಂಡಲ ೯, ಸೂಕ್ತ ೬೩, ಋಚಾ ೫) ಅಂದರೆ, ಸಂಪೂರ್ಣ ಜಗತ್ತನ್ನು ಆರ್ಯ (ಸುಸಂಸ್ಕೃತ) ಮಾಡೋಣ, ಎಂದು ಹೇಳಲಾಗಿದೆ.

೨. ಹತ್ತನೇ ಸಂಖ್ಯೆ ಬಗ್ಗೆ ಇರುವ ನಿಜಾತ್ಮಪೂಜೆ ಕುರಿತು ಏಕನಾಥಿ ಭಾಗವತದಲ್ಲಿರುವ ವರ್ಣನೆ

೧೦ ಈ ಸಂಖ್ಯೆಗೆ ಸಂಬಂಧಿಸಿದಂತೆ ಏಕನಾಥಿ ಭಾಗವತದಲ್ಲಿ ಏಕನಾಥ ಮಹಾರಾಜರು ೧೦ ನೇ ನಿಜಾತ್ಮ ಪೂಜೆಯ ಕುರಿತು ಏನು ವರ್ಣಿಸಿದ್ದಾರೆಯೋ, ಅದು ಸಾಧನೆಯ ದೃಷ್ಟಿಯಿಂದ ಸಾಧಕರಿಗೆ ಬಹಳ ಮಹತ್ವದ್ದಾಗಿದೆ. ಈ ಆತ್ಮಪೂಜೆ ಸಾಧ್ಯವಾದಾಗಲೇ ನಿಜವಾದ ವಿಜಯದಶಮಿಯಾಗುತ್ತದೆ.

೩. ಆತ್ಮಪೂಜೆಯ ಮಹತ್ವ ತಿಳಿಯುವುದೇ ನಿಜವಾದ ವಿಜಯದಶಮಿಯ ಮಹತ್ವವಾಗಿದೆ !

ಏಕನಾಥ ಮಹಾರಾಜರು ಕೇವಲ ೧೦ ನೇ ಸಂಖ್ಯೆಯಿಂದ ಮೂಲಸ್ವರೂಪವಾಗಿರುವ ಆತ್ಮಜ್ಞಾನವನ್ನೇ ನೀಡಿ ಸಾಧಕನಿಗೆ ನಿಜವಾದ ಆತ್ಮಪೂಜೆಯ ಮಹಾತ್ಮೆಯನ್ನು ಹೇಳಿದ್ದಾರೆ. ಈ ರೀತಿ ಸಾಧಕನು ನಡೆದುಕೊಂಡಲ್ಲಿ ಅವನಿಗೆ ಈಶ್ವರಪ್ರಾಪ್ತಿಯು ಸಹಜ ಮತ್ತು ಸುಲಭವಾಗಿ ಸಾಧ್ಯವಾಗಲಿದೆ. ಇದೇ ವಿಜಯದಶಮಿಯ (ದಶ ಇಂದ್ರಿಯಗಳ ಮೇಲೆ ಅಂದರೆ ಸ್ವಭಾವದೋಷ ಮತ್ತು ಅಹಂಗಳ ಮೇಲೆ ವಿಜಯ ಹೊಂದುವ ದಶಮಿಯ) ನಿಜವಾದ ಅರ್ಥದಲ್ಲಿ ಮಹಾತ್ಮೆಯಾಗಿದೆ.

೪. ದಸರಾ ಎಂದರೆ ಸಾಧನೆಯ ಮೂಲಕ ಇಂದ್ರಿಯಗಳನ್ನು ನಿಗ್ರಹಿಸಿ ತನ್ನನ್ನೇ ಗೆಲ್ಲುವುದು

ದಸರಾ ಕೂಡ ಅದನ್ನೇ ತೋರಿಸುತ್ತದೆ. ೧೦ ಸಂಖ್ಯೆಗೆ (ದಶ ಇಂದ್ರಿಯಗಳಿಗೆ) ನಿಜವಾದ ಅರ್ಥದಿಂದ ತಿಳಿದುಕೊಂಡು ಅದನ್ನು ದೂರ ಮಾಡುವುದೆಂದರೆ ದಸರಾ; ಒಟ್ಟಾರೆ ಸಾಧನೆಯ ಮೂಲಕ ಇಂದ್ರಿಯಗಳ ನಿಗ್ರಹವಾದ ಬಳಿಕ ಅಂದರೆ ಸ್ವತಃ ತನ್ನ ಮೇಲೆ ವಿಜಯ ಸಾಧಿಸಿದ ಬಳಿಕ ಅವನು ನಿಜವಾದ ಅರ್ಥದಿಂದ ಯಾವುದೇ ಪರಿಸ್ಥಿತಿಯನ್ನು ಎದುರಿಸಿ ವಿಜಯವನ್ನು ಗಳಿಸಬಹುದು. ನಾವು ಗೆದ್ದರೆ ಎಲ್ಲ ಜಗತ್ತನ್ನು ಗೆಲ್ಲಬಹುದು; ಅದ್ದರಿಂದ ಕೇವಲ ಇಂದ್ರಿಯಗಳ ನಿಗ್ರಹಕ್ಕಾಗಿ ಸಂತ ತುಕಾರಾಮ ಮಹಾರಾಜರು ಹೇಳುತ್ತಾರೆ. ಹಗಲುರಾತ್ರಿ ನಮಗೆ ಯುದ್ಧದ ಪ್ರಸಂಗ. ಅದರಂತೆ ನಿರಂತರವಾಗಿ ಸಾಧನೆಯನ್ನು ಮಾಡುತ್ತಿದ್ದರೆ ಇಂದ್ರಿಯ ನಿಗ್ರಹ ಸಹಜ ಸಾಧ್ಯವಾಗುತ್ತದೆ ಎಂದು ಅವರಿಗೆ ತಿಳಿಸಬೇಕಾಗಿದೆ. ಸ್ವತಃ ವ್ಯಷ್ಟಿ ಸಾಧನೆಯು ಪರಿಪೂರ್ಣವಾದ ಹೊರತು ಸಮಷ್ಟಿ ಸಾಧನೆಗೆ ಶಕ್ತಿ / ಬಲ ದೊರೆಯುವುದಿಲ್ಲ.

ಹೇ ಶ್ರೀಕೃಷ್ಣ, ನಮ್ಮಲ್ಲಿರುವ ಆತ್ಮಸ್ವರೂಪದ ಪರಿಚಯವಾಗಿ ಆ ಸ್ವರೂಪ ಸಂಧಾನದಿಂದ ಇಲ್ಲಿ ವರ್ಣಿಸಿದಂತೆ ನಮ್ಮ ಸಾಧನೆಯಾಗಲಿ ಎಂದು ನಿನ್ನ ಚರಣಗಳಿಗೆ ಪ್ರಾರ್ಥನೆ !

– (ಪರಾತ್ಪರ ಗುರು) ಪರಶುರಾಮ ಪಾಂಡೆ, ಸನಾತನ ಆಶ್ರಮ ದೇವದ, ಪನವೇಲ (೨೭.೧೦.೨೦೧೫)

Leave a Comment