ಕೈಕಾಲುಗಳಿಗೆ ಎಣ್ಣೆಯನ್ನು ಯಾವ ದಿಕ್ಕಿನಲ್ಲಿ ಹಚ್ಚಬೇಕು ?

       ವೈದ್ಯ (ಪೂ.) ವಿನಯ ಭಾವೆ
     ವೈದ್ಯ ಮೇಘರಾಜ ಪರಾಡಕರ

ಆಯುರ್ವೇದಕ್ಕನುಸಾರ ಎಣ್ಣೆಯನ್ನು ಮೇಲಿನಿಂದ ಕೆಳಗಿನ ದಿಕ್ಕಿನಲ್ಲಿ ಹಚ್ಚುವುದು ಮತ್ತು ಮಾಲೀಶನ್ನು ಕೆಳಗಿನಿಂದ ಮೇಲಿನ ದಿಕ್ಕಿನಲ್ಲಿ ಮಾಡುವುದು ಯೋಗ್ಯವಾಗಿದೆ. ವಾತ, ಪಿತ್ತ ಮತ್ತು ಕಫ ಈ ಪ್ರಕೃತಿಗಳಿಗನುಸಾರ ಮಾಲೀಶು ಮಾಡುವ ದಿಕ್ಕು ಬದಲಾಗುವುದಿಲ್ಲ. ಕೈಕಾಲುಗಳಿಗೆ ಎಣ್ಣೆಯನ್ನು ಹಚ್ಚುವಾಗ ಅದನ್ನು ಯಾವಾಗಲೂ ಮೇಲಿನಿಂದ ಕೆಳಗಿನ ದಿಕ್ಕಿನಲ್ಲಿ ಹಚ್ಚಬೇಕು ಮತ್ತು ಮಾಲೀಶು ಮಾಡುವಾಗ ಕೆಳಗಿನಿಂದ ಮೇಲಿನ ದಿಕ್ಕಿನಲ್ಲಿ, ಅಂದರೆ ಹೃದಯದ ದಿಕ್ಕಿನಲ್ಲಿ ಮಾಡಬೇಕು. ಹೃದಯದ ದಿಕ್ಕಿನಲ್ಲಿ ಮಾಲೀಶು ಮಾಡುವುದರಿಂದ ಅಭಿಧಮನಿಗಳಲ್ಲಿನ ರಕ್ತವು ಹೃದಯದ ಕಡೆ ತಳ್ಳಲ್ಪಟ್ಟು ಅದರ ಪ್ರವಾಹವು ಸರಿಯಾಗಿ ಆಗಲು ಸಹಾಯವಾಗುತ್ತದೆ. – ವೈದ್ಯ (ಪೂ.) ವಿನಯ ಭಾವೆ

ಆಯುರ್ವೇದಕ್ಕನುಸಾರ

ಆಯುರ್ವೇದದ ಮೂಲ ಸಂಸ್ಕೃತ ಗ್ರಂಥಗಳಲ್ಲಿ ಕೈಕಾಲುಗಳಿಗೆ ಎಣ್ಣೆಯನ್ನು ಹಚ್ಚಿಕೊಳ್ಳುವಾಗ ಅದನ್ನು ಮೇಲಿನಿಂದ ಕೆಳಗೆ (ಭುಜಗಳಿಂದ ಅಥವಾ ತೊಡೆಗಳಿಂದ ಬೆರಳುಗಳವರೆಗೆ) ಹಚ್ಚಬೇಕೋ ಅಥವಾ ಕೆಳಗಿನಿಂದ ಮೇಲೆ (ಬೆರಳುಗಳಿಂದ ಭುಜಗಳವರೆಗೆ ಅಥವಾ ಬೆರಳುಗಳಿಂದ ತೊಡೆಗಳವರೆಗೆ) ಹಚ್ಚ ಬೇಕೋ ಎಂಬುದರ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಆಯುರ್ವೇದದಲ್ಲಿ ‘ಅನುಸುಖಂ ಮರ್ದಯೇತ್’, ಅಂದರೆ ‘ಯಾವ ಪದ್ಧತಿಯಿಂದ ರೋಗಿಗೆ ಒಳ್ಳೆಯದೆನಿಸುತ್ತದೆಯೋ, ಆ ಪದ್ಧತಿಯಿಂದ ಮಾಲೀಶು ಮಾಡಬೇಕು’, ಎಂದು ಹೇಳಲಾಗಿದೆ.

ವ್ಯವಹಾರದಲ್ಲಿ ವಾಡಿಕೆಯಲ್ಲಿರುವ ಪದ್ಧತಿ

ವ್ಯವಹಾರದಲ್ಲಿ ಕೈಕಾಲುಗಳಿಗೆ ಮೇಲಿನಿಂದ ಕೆಳಗೆ ಮತ್ತು ಕೆಳಗಿನಿಂದ ಮೇಲೆ ಹೀಗೆ ಎರಡೂ ಪದ್ಧತಿಗಳಿಂದ ಎಣ್ಣೆಯನ್ನು ಹಚ್ಚುವ ವಾಡಿಕೆಯಿದೆ. ಎರಡೂ ಪದ್ಧತಿಗಳಲ್ಲಿ ವಿಶೇಷವಾಗಿ ರಕ್ತ ಪರಿಚಲನೆಯ ಮೇಲೆ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಕೆಳಗಿನಿಂದ ಮೇಲಕ್ಕೆ ಎಣ್ಣೆಯನ್ನು ಹಚ್ಚುವುದರಿಂದ ಅಭಿಧಮನಿಗಳಲ್ಲಿರುವ ರಕ್ತವನ್ನು ಹೃದಯದ ಕಡೆಗೆ ತಳ್ಳಲಾಗುತ್ತದೆ. ಮೇಲಿನಿಂದ ಕೆಳಗಿನ ದಿಕ್ಕಿನಲ್ಲಿ ಎಣ್ಣೆಯನ್ನು ಹಚ್ಚುವುದರಿಂದ ಅಪಧಮನಿಗಳಲ್ಲಿನ ರಕ್ತಕ್ಕೆ ವೇಗ ಸಿಗುತ್ತದೆ ಮತ್ತು ಮುಂದೆ ರಕ್ತವನ್ನು ಅಭಿಧಮನಿಗಳಿಂದ ಹೃದಯದ ಕಡೆಗೆ ತಳ್ಳಲು ಸಹಾಯವಾಗುತ್ತದೆ.

ಶರೀರ ಶಾಸ್ತ್ರಕ್ಕನುಸಾರ ಎರಡೂ ರೀತಿಯಲ್ಲಿ ಎಣ್ಣೆಯನ್ನು ಹಚ್ಚುವುದರ ಬಗೆಗಿನ ವಿವೇಚನೆ

ಅ. ಎಣ್ಣೆಯನ್ನು ಕೆಳಗಿನಿಂದ ಮೇಲಕ್ಕೆ ಹಚ್ಚುವುದು

೧. ಇದರಲ್ಲಿ ಮೈಮೇಲಿನ ಕೂದಲುಗಳ ವಿರುದ್ಧ ದಿಕ್ಕಿನಲ್ಲಿ ಎಣ್ಣೆಯನ್ನು ಹಚ್ಚುತ್ತಾರೆ. ಇದರಿಂದ ಕಡಿಮೆ ಎಣ್ಣೆಯನ್ನು ಹಚ್ಚುವಾಗ ಘರ್ಷಣೆಯಿಂದಾಗಿ ಯಾವುದಾದರೂಂದು ಕೂದಲಿನ ಬೇರಿಗೆ ಪೆಟ್ಟಾಗಿ ಗುಳ್ಳೆ ಆಗುವ ಸಾಧ್ಯತೆ ಇರತ್ತದೆ; ಆದರೆ ಹೆಚ್ಚು ಎಣ್ಣೆಯನ್ನು ಹಚ್ಚುವಾಗ ಘರ್ಷಣೆಯಾಗುವುದಿಲ್ಲ ಮತ್ತು ಇದರ ಸಾಧ್ಯತೆಯು ಕಡಿಮೆಯಾಗುತ್ತದೆ.

೨. ಒಂದು ವೇಳೆ ಅಭಿಧಮನಿಗಳು ಊದಿ ಕೊಂಡಿದ್ದರೆ (ವೆರಿಕೋಜ ವೇನ್ಸ್ ಎಂಬ ರೋಗವಿದ್ದರೆ) ಕಡಿಮೆ ಶಕ್ತಿಯಿಂದ ಕೆಳಗಿನಿಂದ ಮೇಲಿನ ದಿಕ್ಕಿನಲ್ಲಿ ಎಣ್ಣೆಯನ್ನು ಹಚ್ಚುವುದರಿಂದ ಅಭಿಧಮನಿಗಳಲ್ಲಿ ಒಟ್ಟಾಗಿರುವ ರಕ್ತಕ್ಕೆ ಮುಂದೆ ಹೋಗಲು ಸಹಾಯವಾಗುತ್ತದೆ. ಈ ರೋಗದಲ್ಲಿ ಅಭಿಧಮನಿಗಳ ಮೇಲೆ ಹೆಚ್ಚು ಒತ್ತಡ ಹಾಕಬಾರದು.

೩. ಕೈಕಾಲುಗಳಲ್ಲಿನ ಸ್ನಾಯುಗಳಲ್ಲಿನ ನರಗಳ ರಚನೆಯು ಮೇಲಿನಿಂದ ಕೆಳಗಿನ ದಿಕ್ಕಿನಲ್ಲಿರುತ್ತದೆ. ಇದರ ವಿರುದ್ಧ ದಿಕ್ಕಿನಲ್ಲಿ ಎಣ್ಣೆಯನ್ನು ಹಚ್ಚುವುದರಿಂದ ಸ್ನಾಯುಗಳಲ್ಲಿನ ನರಗಳು ಜಗ್ಗಿದಂತಾಗಿ ಅವುಗಳಿಗೆ ದೃಢತ್ವ ಪ್ರಾಪ್ತವಾಗಲು ಸಹಾಯವಾಗುತ್ತದೆ.

೪. ಒಂದು ಅಭಿಪ್ರಾಯದಂತೆ ಕೆಳಗಿನಿಂದ ಮೇಲಿನ ದಿಕ್ಕಿನಲ್ಲಿ ಎಣ್ಣೆಯನ್ನು ಹಚ್ಚಿದರೆ ರೋಮ ರಂಧ್ರಗಳ ಮೂಲಕ (ಮೈಮೇಲಿನ ಕೂದಲುಗಳ ಬೇರುಗಳಿಂದ) ಶರೀರವು ಹೆಚ್ಚು ಪ್ರಮಾಣದಲ್ಲಿ ಎಣ್ಣೆಯನ್ನು ಹೀರಿಕೊಳ್ಳುತ್ತದೆ.

ಆ. ಎಣ್ಣೆಯನ್ನು ಮೇಲಿನಿಂದ ಕೆಳಗಿನ ದಿಕ್ಕಿನಲ್ಲಿ ಹಚ್ಚುವುದು

೧. ಇದರಲ್ಲಿ ಮೈಮೇಲಿನ ಕೂದಲುಗಳ ದಿಕ್ಕಿನಲ್ಲಿ ಎಣ್ಣೆಯನ್ನು ಹಚ್ಚುವುದರಿಂದ ಕೂದಲುಗಳ ಬೇರುಗಳ ಮೇಲೆ ಒತ್ತಡ ಬೀಳುವುದಿಲ್ಲ.

೨. ಅಭಿಧಮನಿಗಳು ಊದಿಕೊಂಡಿದ್ದರೆ ಎಣ್ಣೆಯನ್ನು ಮೇಲಿನಿಂದ ಕೆಳಗಿನ ದಿಕ್ಕಿನಲ್ಲಿ ಹಚ್ಚಬಾರದು; ಏಕೆಂದರೆ ಇದರಿಂದ ಅಭಿಧಮನಿಗಳ ಮೇಲೆ ಒತ್ತಡ ಹೆಚ್ಚಾಗಿ ಅಪಾಯವಾಗುವ ಸಾಧ್ಯತೆಯಿರುತ್ತದೆ. ಊದಿಕೊಂಡಿರುವ ಅಭಿಧಮನಿಗಳ ಮೇಲೆ ಸ್ವಲ್ಪವೂ ಒತ್ತಡವನ್ನು ಹಾಕದೇ ಸಾವಕಾಶವಾಗಿ ಈ ದಿಕ್ಕಿನಲ್ಲಿ ಎಣ್ಣೆಯನ್ನು ಹಚ್ಚಿದರೆ ಅಪಾಯವಾಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ.

೩. ಶರೀರದ ಮೇಲಿರುವ ಕೂದಲುಗಳ ಬೇರುಗಳಲ್ಲಿ ಮೆದುಳಿನ ಚಿಕ್ಕ ಚಿಕ್ಕ ನರತಂತುಗಳಿರುತ್ತವೆ. ಮೇಲಿನಿಂದ ಕೆಳಗಿನ ದಿಕ್ಕಿನಲ್ಲಿ ಎಣ್ಣೆಯನ್ನು ಹಚ್ಚುವುದರಿಂದ ಮೆದುಳಿನ ನರತಂತುಗಳ ಮಾಧ್ಯಮದಿಂದ ಸ್ನಾಯುಗಳ ಜೀವಕೋಶಗಳಿಗೆ ಸಡಿಲಗೊಳ್ಳುವ ಸಂವೇದನೆಗಳು ಪ್ರಾಪ್ತವಾಗುತ್ತವೆ. ಆದ್ದರಿಂದ ಈ ದಿಕ್ಕಿನಲ್ಲಿ ಎಣ್ಣೆಯನ್ನು ಹಚ್ಚುವುದರಿಂದ ಸ್ನಾಯುಗಳ ಕೋಶಗಳು ತಾತ್ಕಾಲಿಕವಾಗಿ ಸಡಿಲಾಗುವುದರಿಂದ ಆರಾಮವೆನಿಸುತ್ತದೆ.

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ

ತಜ್ಞ ವೈದ್ಯರಲ್ಲಿ ವಿನಂತಿ !
‘ಕೈಕಾಲುಗಳಿಗೆ ಯಾವ ದಿಕ್ಕಿನಲ್ಲಿ ಎಣ್ಣೆಯನ್ನು ಹಚ್ಚುವುದರಿಂದ ಯಾವ ಲಾಭಗಳಾಗುತ್ತವೆ ಮತ್ತು ಅದರ ಹಿಂದಿನ ಶಾಸ್ತ್ರವೇನು ?’, ಇದರ ಬಗೆಗಿನ ಮೇಲಿನ ಮಾಹಿತಿಯನ್ನು ಬಿಟ್ಟು ಇತರ ಮಾಹಿತಿಗಳಿದ್ದಲ್ಲಿ ಅವುಗಳನ್ನು ದಯವಿಟ್ಟು ಮುಂದೆ ನೀಡಿರುವ ವಿಳಾಸಕ್ಕೆ ಕಳುಹಿಸಿರಿ. ಈ ಮಾಹಿತಿಯು ಆಯುರ್ವೇದದ ಪ್ರಚಾರಕ್ಕೆ ಉಪಯೋಗವಾಗುವುದು. ಸಂಪರ್ಕ : ವೈದ್ಯ ಮೇಘರಾಜ ಮಾಧವ ಪರಾಡಕರ, ೨೪/ಬಿ, ಸನಾತನ ಆಶ್ರಮ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ ಪಿನ್- ೪೦೩೪೦೧

Leave a Comment