ಸೌ. ಸುಪ್ರಿಯಾ ಮಾಥುರ ಇವರು ತೆಗೆದುಕೊಂಡ ಸಾಧಕರ ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಪ್ರಕ್ರಿಯೆಯ ಸತ್ಸಂಗದ ಅಂಶಗಳು !

೧. ಸ್ವಭಾವದೋಷ ಮತ್ತು ಅಹಂ ನಿರ್ಮೂಲನಾ ಪ್ರಕ್ರಿಯೆ

೧ ಅ. ಅರ್ಥ : ‘ಪ್ರಕ್ರಿಯೆ, ಅಂದರೆ ತನ್ನಲ್ಲಿರುವ ಮೇಲ್ನೋಟಕ್ಕೆ ಕಂಡುಬರುವ ಸ್ವಭಾವದೋಷ ಮತ್ತು ಅಹಂನ ಲಕ್ಷಣಗಳನ್ನು ಆಯ್ದುಕೊಂಡು ನಿವಾರಿಸಲು ಪ್ರಯತ್ನಿಸುವುದಾಗಿರದೆ, ವಿಚಾರಗಳ ಮೂಲಕ್ಕೆ ಹೋಗಿ ಮೂಲ ಸ್ವಭಾವದೋಷ ಮತ್ತು ಅಹಂ ಲಕ್ಷಣಗಳನ್ನು ಕಂಡುಹಿಡಿದು ಅವುಗಳ ನಿರ್ಮೂಲನಕ್ಕಾಗಿ ಪ್ರಯತ್ನಿಸುವುದಾಗಿರುತ್ತದೆ.

೧ ಆ. ಮಹತ್ವ : ನಮಗೆ ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಮಹತ್ವ ಗಮನಕ್ಕೆ ಬರದಿದ್ದರೆ, ನಮ್ಮಿಂದ ವ್ಯಷ್ಟಿ ಸಾಧನೆಯ ಪ್ರಯತ್ನವು ಮನಃಪೂರ್ವಕ ಆಗುವುದಿಲ್ಲ ಹಾಗೂ ಅದರಿಂದ ನಮಗೆ ನಮ್ಮ ತಪ್ಪುಗಳ ಮೂಲಕ್ಕೆ ಹೋಗಲು ಆಗುವುದಿಲ್ಲ.

೧ ಇ. ಪ್ರಕ್ರಿಯೆಯ ಅವಶ್ಯಕತೆ : ಮೋಕ್ಷಪ್ರಾಪ್ತಿಗಾಗಿ ಸ್ವಭಾವದೋಷ ಅಥವಾ ಅಹಂ ಕಿಂಚಿತ್ತೂ ಇರಬಾರದು. ಈ ಕಾರಣದಿಂದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಪ್ರಕ್ರಿಯೆಯ ಅವಶ್ಯಕತೆಯಿದೆ.

೧ ಈ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಪ್ರಕ್ರಿಯೆಯ ವಿಷಯದಲ್ಲಿ ಇಟ್ಟುಕೊಳ್ಳಬೇಕಾದ ದೃಷ್ಟಿಕೋನ

೧ ಈ ೧. ಕಲಿಯುವ ಸ್ಥಿತಿಯಲ್ಲಿರುವುದು : ಸಾಧಕರು ‘ನಾನು ದೇವರ ಸಹಾಯವನ್ನು ಪಡೆದುಕೊಂಡು ನನ್ನ ಮನಸ್ಸು ಮತ್ತು ಬುದ್ಧಿಯ ಅಡಚಣೆಗಳನ್ನು ದೂರಗೊಳಿಸಬೇಕಾಗಿದೆ’, ಎನ್ನುವ ಕಲಿಯುವ ಸ್ಥಿತಿಯಲ್ಲಿದ್ದು ಪ್ರಕ್ರಿಯೆ ಮಾಡಬೇಕು.

೧ ಈ ೨. ಸಕಾರಾತ್ಮಕವಾಗಿರುವುದು : ‘ಭಗವಂತನು ನನಗೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ನೀಡಿದ್ದಾನೆ. ಆದ್ದರಿಂದ ನಾನು ಇದರಲ್ಲಿ ಮನಃಪೂರ್ವಕವಾಗಿ ಭಾಗವಹಿಸಬೇಕು’, ಎನ್ನುವ ದೃಷ್ಟಿಕೋನವನ್ನು ಇಟ್ಟುಕೊಳ್ಳಬೇಕು.

೧ ಈ ೩. ಬಾಹ್ಯ ಪ್ರಕ್ರಿಯೆಯನ್ನು ಕೈಗೊಳ್ಳುವುದಕ್ಕಿಂತ ಆಂತರಿಕ ಪ್ರಕ್ರಿಯೆಯನ್ನು ಕೈಗೊಳ್ಳುವುದು ಮಹತ್ವದ್ದಾಗಿರುವುದು : ಬಾಹ್ಯ ಪ್ರಕ್ರಿಯೆಯನ್ನು ಕೈಗೊಳ್ಳುವುದಕ್ಕಿಂತ ಆಂತರಿಕ ಪ್ರಕ್ರಿಯೆಯನ್ನು ಕೈಗೊಳ್ಳುವುದರ ಕಡೆಗೆ ನಮ್ಮ ಗಮನವಿರಬೇಕು. ಬಾಹ್ಯ ಪ್ರಕ್ರಿಯೆಯು ಕೆಲವು ನಿಮಿಷಗಳು ಅಥವಾ ಕೆಲವು ಗಂಟೆಗಳ ಕಾಲ ನಡೆಯುತ್ತದೆ, ಆದರೆ ಆಂತರಿಕ ಪ್ರಕ್ರಿಯೆಯು ದಿನದ ೨೪ ಗಂಟೆಗಳ ಕಾಲವೂ ನಡೆಯುತ್ತಿರುತ್ತದೆ.

೧ ಉ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಪ್ರಕ್ರಿಯೆಯನ್ನು ಹೇಗೆ ಕೈಗೊಳ್ಳಬೇಕು ?

೧. ಸಾಧಕರು ತಮ್ಮ ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಗಾಗಿ ತಮ್ಮಿಂದಾಗುವ ಗಂಭೀರ ಹಾಗೂ ಪದೇ ಪದೇ ಆಗುವ ತಪ್ಪುಗಳ ಹಿಂದಿನ ಸ್ವಭಾವದೋಷಗಳ ಲಕ್ಷಣಗಳನ್ನು ಆಯ್ದುಕೊಳ್ಳಬೇಕು.

೨. ಸಾಧಕರು ತಮ್ಮಲ್ಲಿರುವ ತೀವ್ರ ಸ್ವಭಾವದೋಷ ಮತ್ತು ಅಹಂ ಲಕ್ಷಣಗಳ ಪಟ್ಟಿ ಮಾಡಿ ಅದಕ್ಕಾಗಿ ಪ್ರಯತ್ನಿಸಬೇಕು

೩. ಸಾಧಕರು ಪ್ರಕ್ರಿಯೆಗಾಗಿ ಆಯ್ದುಕೊಂಡಿರುವ ಸ್ವಭಾವದೋಷ ಮತ್ತು ಅಹಂನ ಲಕ್ಷಣಗಳನ್ನು ಜವಾಬ್ದಾರ ಸಾಧಕರಿಂದ ಆಗಾಗ ಪರಿಶೀಲಿಸಿಕೊಳ್ಳುತ್ತಿರಬೇಕು.

೪. ಸಾಧಕರು ತಮ್ಮಲ್ಲಿರುವ ಸ್ವಭಾವದೋಷ ಮತ್ತು ಅಹಂನ ಲಕ್ಷಣಗಳ ವ್ಯಾಪ್ತಿ ತೆಗೆದು ಅದನ್ನು ಅರ್ಥಮಾಡಿಕೊಳ್ಳಬೇಕು ಹಾಗೂ ಮುಂದೆ ಕೇಳಿಕೊಳ್ಳಬೇಕು.

೫. ಪ್ರಕ್ರಿಯೆಯನ್ನು ಕೈಗೊಳ್ಳುವಾಗ ತಪ್ಪುಗಳ ಹಿಂದಿನ ಸ್ವಭಾವದೋಷ ಅಥವಾ ಅಹಂನ ಲಕ್ಷಣಗಳನ್ನು ಕಂಡುಹಿಡಿಯದೇ, ಕೇವಲ ತಪ್ಪುಗಳನ್ನು ಬರೆದರೆ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ.

೬. ನಮ್ಮ ಮನಸ್ಸಿನಲ್ಲಿ ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ವಿಷಯದಲ್ಲಿ ಸಕಾರಾತ್ಮಕ ವಿಚಾರಗಳು ಅಧಿಕ ಪ್ರಮಾಣದಲ್ಲಿದ್ದರೆ, ‘ನಮ್ಮ ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯು ಯೋಗ್ಯ ದಿಕ್ಕಿನಲ್ಲಿ ನಡೆಯುತ್ತಿದೆ’ ಎಂದು ತಿಳಿಯಬೇಕು.

೭. ನಾವು ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯನ್ನು ಮನಃಪೂರ್ವಕವಾಗಿ ಮಾಡಿದರೆ, ‘ಪ್ರಕ್ರಿಯೆ ಆನಂದದಾಯಕವಾಗಿದೆ’, ಎಂಬುದನ್ನು ನಾವು ಅನುಭವಿಸಬಹುದು.

೧ ಊ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಪ್ರಕ್ರಿಯೆಯನ್ನು ಕೈಗೊಳ್ಳುವುದರಿಂದಾಗುವ ಲಾಭಗಳು

೧. ಪ್ರಕ್ರಿಯೆಯನ್ನು ಕೈಗೊಳ್ಳುವುದರಿಂದ, ‘ನಾನು ಇದುವರೆಗೆ ಕೇವಲ ಕಾರ್ಯ ಮಾಡುತ್ತಿದ್ದೆ. ನಾನು ನನ್ನ ಸ್ವಭಾವದೋಷ ಮತ್ತು ಅಹಂನ ಲಕ್ಷಣಗಳ ಕಡೆಗೆ ಗಮನ ಹರಿಸಲಿಲ್ಲ’, ಎನ್ನುವುದು ತನಗೆ ಅರಿವಾಗುತ್ತದೆ.

೨. ಪ್ರಕ್ರಿಯೆಯನ್ನು ಕೈಗೊಳ್ಳುವುದರಿಂದ ತಾನು ಎಲ್ಲಿ ಹಿಂದೆ ಉಳಿದಿದ್ದೇನೆ, ಎನ್ನುವುದನ್ನು ಕಂಡು ಹಿಡಿಯುವ ಪ್ರಕ್ರಿಯೆ ಆರಂಭವಾಗುತ್ತದೆ.

೩. ಪ್ರಕ್ರಿಯೆಯನ್ನು ಕೈಗೊಳ್ಳುವುದರಿಂದ ನಮ್ಮ ತಪ್ಪುಗಳ ವಿಷಯದಲ್ಲಿ ಸಹಸಾಧಕರನ್ನು ಕೇಳುವ ಅಭ್ಯಾಸವಾಗುತ್ತದೆ.

೪. ಪ್ರಕ್ರಿಯೆಯನ್ನು ಕೈಗೊಳ್ಳುವುದರಿಂದ ನಮ್ಮಿಂದ ಇತರರಿಗೆ ಅನಾವಶ್ಯಕ ಪ್ರಶ್ನೆಗಳನ್ನು ಕೇಳುವ ಪ್ರಮಾಣ ಕಡಿಮೆಯಾಗುತ್ತದೆ.

೫. ನಿರಂತರ ಪ್ರಕ್ರಿಯೆ ಕೈಗೊಂಡರೆ, ಸ್ವಯಂಸೂಚನೆ, ದೋಷ – ಅಹಂ ನಿರ್ಮೂಲನೆಯ ಬರವಣಿಗೆ ಮತ್ತು ಚಿಂತನೆಗಳು ಸುಲಭವೆನಿಸುತ್ತವೆ ಹಾಗೂ ನಮ್ಮಲ್ಲಿ ಸಕಾರಾತ್ಮಕ ಬದಲಾವಣೆಯಾಗಿ ನಮಗೆ ಆನಂದ ದೊರಕುತ್ತದೆ.

೬. ನಾವು ಪ್ರಕ್ರಿಯೆಯಲ್ಲಿರುವಾಗ ‘ನಮ್ಮ ತಪ್ಪುಗಳನ್ನು ಮನಃಮುಕ್ತವಾಗಿ ಮಂಡಿಸುವುದು ಹಾಗೂ ತಮ್ಮ ತಪ್ಪುಗಳ ಕುರಿತು ಇತರರಿಗೆ ಕೇಳುವ ಪ್ರಯತ್ನಗಳು ನಮ್ಮಿಂದಾಗುವುದರಿಂದ’ ನಮಗೆ ತಪ್ಪುಗಳ ವಿಷಯದಲ್ಲಿ ಅನಿಸುವ ಒತ್ತಡ ಮತ್ತು ನಕಾರಾತ್ಮಕತೆ ಕಡಿಮೆಯಾಗಿ ನಮ್ಮ ಪ್ರಯತ್ನಗಳಿಗೆ ಯೋಗ್ಯ ದಿಕ್ಕು ದೊರಕುತ್ತದೆ.

೭. ಪ್ರಕ್ರಿಯೆಯನ್ನು ಕೈಗೊಳ್ಳುವುದರಿಂದ ನನಗೆ ‘ನನ್ನಲ್ಲಿ ಬದಲಾವಣೆಯಾಗಬೇಕು’, ಎಂಬ ಅರಿವು ಹೆಚ್ಚಾಗುತ್ತದೆ.

೮. ಪ್ರಕ್ರಿಯೆಯನ್ನು ಕೈಗೊಳ್ಳುವುದರಿಂದ ನಮಗೆ ಎಂದಿಗೂ ಅರಿವಾಗದಿರುವ ನಮ್ಮಲ್ಲಿರುವ ಸ್ವಭಾವದೋಷ ಮತ್ತು ಅಹಂನ ಲಕ್ಷಣಗಳ ಅರಿವಾಗುತ್ತವೆ.

೯. ಪ್ರಕ್ರಿಯೆ ಕೈಗೊಳ್ಳುವುದರಿಂದ ನಮ್ಮಲ್ಲಿ ಕೇಳುವ ಸ್ಥಿತಿ ನಿರ್ಮಾಣವಾಗುತ್ತದೆ.

೧೦. ಪ್ರಕ್ರಿಯೆಯನ್ನು ಕೈಗೊಳ್ಳುವುದರಿಂದ ಯಾವುದೇ ಪ್ರಸಂಗ ಅಥವಾ ಕೃತಿ ಆದಾಗ ನಮ್ಮ ಮನಸ್ಸಿನಲ್ಲಿ ತಕ್ಷಣ ಪ್ರತಿಕ್ರಿಯೆ ವ್ಯಕ್ತವಾಗದೇ ಮನಸ್ಸಿನಲ್ಲಿ ಆ ಕುರಿತು ಚಿಂತನೆ ಮಾಡುವ ಅಭ್ಯಾಸ ನಿರ್ಮಾಣವಾಗುತ್ತದೆ.

೧೧. ಪ್ರಕ್ರಿಯೆಯನ್ನು ಪ್ರಾಮಾಣಿಕತೆಯಿಂದ ಹಮ್ಮಿಕೊಳ್ಳುವುದರಿಂದ ನಮ್ಮ ವ್ಯಷ್ಟಿ ಸಾಧನೆ ಒಳ್ಳೆಯ ರೀತಿಯಲ್ಲಿ ಆಗುತ್ತದೆ.

೧ ಎ. ಪ್ರಕ್ರಿಯೆಯು ಪರಿಣಾಮಕಾರಿಯಾಗಲು ಆವಶ್ಯಕವಿರುವ ಗುಣಗಳು
೧. ಉತ್ಸಾಹದಿಂದ ಪ್ರಕ್ರಿಯೆಯನ್ನು ಮಾಡುವುದು
೨. ನಿರ್ಧಿಷ್ಟವಾಗಿ ಪ್ರಯತ್ನಿಸುವುದು
೩. ನಿರಂತರವಾಗಿ ಪ್ರಯತ್ನಿಸುವುದು.
೪. ಪಟ್ಟುಹಿಡಿದು ಪ್ರಯತ್ನಿಸುವುದು.
೫. ಮನಸ್ಸಿನಲ್ಲಿ ಮೂಡುವ ಸಂಘರ್ಷಗಳನ್ನು ಯೋಗ್ಯ ಪ್ರಯತ್ನ ಮಾಡಿ ಜಯಿಸುವುದು

೨. ಸ್ವಯಂಸೂಚನೆಯ ಸತ್ರಗಳು

೨ ಅ. ಮಹತ್ವ

೧. ಸ್ವಯಂಸೂಚನೆಯನ್ನು ನೀಡದೆ ನಮ್ಮ ಸ್ವಭಾವದಲ್ಲಿ ಬದಲಾವಣೆಯಾಗುವುದಿಲ್ಲ.

೨. ‘ನಾನು ನನ್ನ ಮನಸ್ಸಿನಲ್ಲಿರುವ ನಕಾರಾತ್ಮಕತೆ ಅಥವಾ ಪ್ರತಿಕ್ರಿಯೆಗಳಿಗೆ ಸ್ವಯಂಸೂಚನೆ ನೀಡದೆ ಕೇವಲ ಭಾವಜಾಗೃತಿಯ ಪ್ರಯತ್ನ ಮಾಡಿ ಸಾಧನೆಯಲ್ಲಿ ಮುಂದೆ ಹೋಗುವೆನು’, ಎಂದು ನಮಗೆ ಅನಿಸುತ್ತಿದ್ದರೆ ಅದು ತಪ್ಪಾಗುತ್ತದೆ. ‘ಸ್ವಯಂಸೂಚನೆ ಮತ್ತು ಕೃತಿಯ ಸ್ತರದಲ್ಲಿ ಪ್ರಯತ್ನ ಮಾಡಿ ಸ್ವಭಾವದೋಷ ಹಾಗೂ ಅಹಂ ನಿರ್ಮೂಲನ ಪ್ರಕ್ರಿಯೆಯನ್ನು ಒಳ್ಳೆಯ ರೀತಿಯಲ್ಲಿ ಮಾಡುವೆನು’, ಎಂದು ನಮಗೆ ಅನಿಸಬೇಕು.

೩. ಮನಸ್ಸಿಗೆ ತಪ್ಪುಗಳ ಅರಿವಾಗಲು ಸ್ವಯಂಸೂಚನೆಯನ್ನು ನಿಯಮಿತವಾಗಿ ಮಾಡಬೇಕು.

೨ ಆ. ಲಾಭ

೧. ಸ್ವಯಂಸೂಚನೆಯ ಕೊಡುವುದರಿಂದ ನಮ್ಮಲ್ಲಿ ಅಂತರ್ಮುಖತೆ ಹೆಚ್ಚಾಗುತ್ತದೆ ಹಾಗೂ ಮನಸ್ಸಿನ ಸ್ತರದಲ್ಲಿ ಬದಲಾವಣೆಯಾಗಲು ಆರಂಭವಾಗುತ್ತದೆ.

೨. ಸ್ವಯಂಸೂಚನೆ ಮತ್ತು ಪ್ರಾರ್ಥನೆ ನಿಯಮಿತವಾಗಿ ಮಾಡುವುದರಿಂದ ‘ಅಯೋಗ್ಯ ಕೃತಿಗಳ ನಿಯಂತ್ರಣ ಮತ್ತು ಅಯೋಗ್ಯ ವಿಚಾರಗಳ ಪ್ರಮಾಣ ಕಡಿಮೆಯಾಗುವುದು, ಈ ಪರಿಣಾಮದ ಬಗ್ಗೆ ನಮಗೆ ಅನುಭವವಾಗುತ್ತದೆ.

೩. ನಾವು ಸ್ವಯಂಸೂಚನೆಯನ್ನು ನಿಯಮಿತವಾಗಿ ಕೊಡುವುದರಿಂದ ನಾವು ಮನಸ್ಸಿನಿಂದ ಸ್ವಭಾವದೋಷಗಳ ವಿರುದ್ಧ ಹೋರಾಡಲು ಸಿದ್ಧರಾಗುತ್ತೇವೆ.

೨ ಇ. ಸ್ವಯಂಸೂಚನೆಗೆ ಸಂಬಂಧಿಸಿದ ಕೆಲವು ಸೂಚನೆಗಳು

೧. ‘ನಮ್ಮಿಂದಾದ ತಪ್ಪುಗಳನ್ನು ಸ್ವೀಕರಿಸದಿರುವುದು’, ‘ನನಗೆ ತಿಳಿಯುತ್ತದೆ’ ಎಂದು ಅನಿಸುವುದು, ಯಾವುದೇ ವಿಷಯದ ಕುರಿತು ನಿಷ್ಕರ್ಷಕ್ಕೆ ಬರುವುದು, ನಕಾರಾತ್ಮಕ ವಿಚಾರಗಳಲ್ಲಿ ವಿಹರಿಸುತ್ತಾ ನಿರಾಶರಾಗುವುದು, ಇಂತಹ ಸ್ವಭಾವದೋಷಗಳಿಗೆ ನಾವು ಸ್ವಯಂಸೂಚನೆ ತೆಗೆದುಕೊಳ್ಳಬೇಕು.

೨. ಸ್ವಯಂಸೂಚನೆಗಾಗಿ (ಪ್ರಯತ್ನಕ್ಕಾಗಿ) ಆರಿಸಿದ ಸ್ವಭಾವದೋಷ ಮತ್ತು ಅಹಂನ ಲಕ್ಷಣಗಳ ತೀವ್ರತೆಯ ವ್ಯಾಪ್ತಿ ಮತ್ತು ಉಪಲಕ್ಷಣಗಳನ್ನು ಉದಾಹರಣೆಗಳೊಂದಿಗೆ ತೆಗೆದುಕೊಳ್ಳಬೇಕು.

೩. ವಿಶಿಷ್ಟ ಸೇವೆಯ ವಿಷಯದಲ್ಲಿ ನಮ್ಮ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರ ಬರುತ್ತಿದ್ದರೆ, ಆ ಸೇವೆಯಿಂದಾಗುವ ಲಾಭವನ್ನು ಬರೆದುಕೊಂಡು ಅದರ ಮೇಲೆ ಸ್ವಯಂಸೂಚನೆ ನೀಡಬೇಕು.

೪. ಸ್ವಯಂಸೂಚನೆಯನ್ನು ಪ್ರತಿ ವಾರವೂ ಬದಲಾಯಿಸಬೇಕು.

೫. ಸ್ವಯಂಸೂಚನೆಯಲ್ಲಿನ ಪ್ರಸಂಗ ಅಥವಾ ಸ್ವಯಂಸೂಚನೆಯಲ್ಲಿ ಬದಲಾವಣೆ ಮಾಡಲು ಮೊಬೈಲನಲ್ಲಿ ರಿಮಾಯಿಂಡರ್ (ಅಲಾರಾಂ) ಹಾಕಿ ಇಡಬಹುದು.

೬. ನಮಗೆ ಸೂಚನೆ ಕೊಡಲು ತೋಚದಿದ್ದರೆ ಅಥವಾ ಪ್ರಾರ್ಥನೆ ನೆನಪಾಗದಿದ್ದರೆ, ಅದನ್ನು ಓದಿಕೊಳ್ಳಬಹುದು.

೭. ಕೆಟ್ಟಶಕ್ತಿಗಳ ತೊಂದರೆಯಿದ್ದರೆ ಆಧ್ಯಾತ್ಮಿಕ ಉಪಾಯವನ್ನು ಪೂರ್ಣಗೊಳಿಸಿದನಂತರ ಸೂಚನೆಯನ್ನು ಕೊಡಬಹುದು.

೮. ಸ್ವಯಂಸೂಚನೆಗೆ ಪ್ರಾರ್ಥನೆ ಮತ್ತು ಭಾವಜಾಗೃತಿಯ ಪ್ರಯತ್ನವನ್ನು ಜೋಡಿಸಬಹುದು.

೯. ಸ್ವಯಂಸೂಚನೆಗಳಿಗೆ ಕೃತಿಯನ್ನು ಜೋಡಿಸಿದರೆ ಮಾತ್ರ ಪ್ರಯತ್ನದ ಪರಿಣಾಮವು ಹೆಚ್ಚಾಗುತ್ತದೆ.

೧೦. ನಾವು ಸ್ವಯಂಸೂಚನೆಯಲ್ಲಿ ಬದಲಾವಣೆ ಮಾಡಬೇಕಾಗಿದ್ದರೆ, ಆ ಬಗ್ಗೆ ಜವಾಬ್ದಾರ ಸಾಧಕರಿಗೆ ಕೇಳಬೇಕು ಹಾಗೂ ಯೋಗ್ಯ ಸೂಚನೆಯನ್ನು ಆಯ್ದುಕೊಳ್ಳಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು.

೨ ಈ. ಸ್ವಯಂಸೂಚನೆಗಳ ಸತ್ರಗಳ ಸಂಖ್ಯೆಗಳು

೧. ಪ್ರಕ್ರಿಯೆಯನ್ನು ಹಮ್ಮಿಕೊಳ್ಳುವ ಸಾಧಕರು ದಿನವಿಡೀ ಸ್ವಯಂಸೂಚನೆಗಳ ೧೫ ಸತ್ರಗಳನ್ನು ಮಾಡಬೇಕು. ನಮ್ಮಿಂದ ೧೨ ಕ್ಕಿಂತ ಕಡಿಮೆ ಸತ್ರಗಳಾದರೆ ಅದಕ್ಕಾಗಿ ಪ್ರಾಯಶ್ಚಿತ್ತ ತೆಗೆದುಕೊಳ್ಳಬೇಕು.

೨. ನಮ್ಮ ಮನಸ್ಸಿನಲ್ಲಿ ಆಧ್ಯಾತ್ಮಿಕ ತೊಂದರೆಯಿಂದ ನಕಾರಾತ್ಮಕ ವಿಚಾರಗಳ ಪ್ರಮಾಣ ಹೆಚ್ಚಾದರೆ, ಪ್ರತಿದಿನ ನಾವು ೨೦ ಸತ್ರಗಳನ್ನು ಮಾಡಬೇಕು.

೨ ಉ. ಪ್ರಕ್ರಿಯೆಯ ವಿಷಯದಲ್ಲಿ ಸ್ವಯಂಸೂಚನೆ ನೀಡುವುದು

‘ನಾವು ಕೇವಲ ೧೫ ದಿನ ಪ್ರಕ್ರಿಯೆ ಮಾಡುವುದರಿಂದ ನಮ್ಮಲ್ಲಿ ಕೆಲವು ಬದಲಾವಣೆಯಾಗುತ್ತದೆ, ಹೀಗಿರುವಾಗ ಹಲವಾರು ತಿಂಗಳು ಅಥವಾ ಹಲವಾರು ವರ್ಷಗಳ ವರೆಗೆ ನಿರಂತರವಾಗಿ ಪ್ರಕ್ರಿಯೆಯನ್ನು ಕೈಗೊಂಡರೆ ನಮ್ಮಲ್ಲಿ ಅಮೂಲಾಗ್ರವಾದ ಬದಲಾವಣೆ ಖಂಡಿತವಾಗಿಯೂ ಆಗಲಿದೆ’, ಎನ್ನುವ ಆಶಯದ ಪ್ರಗತಿಯ ಸೂಚನೆಯನ್ನು ನೀಡಬಹುದು.

೨ ಊ. ಪ್ರಗತಿಯ ಸ್ವಯಂಸೂಚನೆ ನೀಡುವುದು

ನಮ್ಮಲ್ಲಿ ಸಕಾರಾತ್ಮಕ ಬದಲಾವಣೆಯಾಗಿದ್ದರೆ, ಸ್ವಯಂಸೂಚನೆಯ ಒಂದು ಸತ್ರದ ಸಮಯದಲ್ಲಿ ನಾವು ಪ್ರಗತಿಯ ಸೂಚನೆ ನೀಡಬಹುದು.

(ಸ್ವಯಂಸೂಚನೆಗಳ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ)

೨ ಎ. ಕಾಲಕ್ಕನುಸಾರ ಸ್ವಯಂಸೂಚನೆ ಮತ್ತು ಶಿಕ್ಷೆಯ ಪದ್ಧತಿಯ ಮಹತ್ವ

ಸಂಪತ್ಕಾಲದಲ್ಲಿ ಸ್ವಯಂಸೂಚನೆ ನೀಡಿ ಮನಸ್ಸಿಗೆ ಅರಿವು ಮೂಡಿಸಿ ಬದಲಾವಣೆ ಮಾಡಿಕೊಳ್ಳಬಹುದು. ಆದರೆ ಆಪತ್ಕಾಲದಲ್ಲಿ ಮನಸ್ಸಿಗೆ ಸ್ವಯಂಸೂಚನೆ ನೀಡಿ ಅರಿವು ಮೂಡಿಸಲು ಸಮಯದ ಅಭಾವವಿರುತ್ತದೆ. ಆಗ ಶಿಕ್ಷಾಪದ್ಧತಿಯನ್ನು ಅವಲಂಬಿಸಿ ಮನಸ್ಸಿನಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಮಾಡಬೇಕಾಗುತ್ತದೆ. ಆಪತ್ಕಾಲಕ್ಕಾಗಿ ಶಿಕ್ಷಾಪದ್ಧತಿಯನ್ನು ಅವಲಂಬಿಸುವುದು ಪರಿಣಾಮಕಾರಿ ಉಪಾಯವಾಗಿದೆ ಹಾಗೂ ಅದರಿಂದ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗುತ್ತದೆ.

– ಕು. ಮಧುರಾ ಭೋಸಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೪.೮.೨೦೧೭)

Leave a Comment