ಧರ್ಮಶಾಸ್ತ್ರದಲ್ಲಿ ಹೇಳಿದ ಉಡುಪುಗಳ ಮಹತ್ವ

ಹಿಂದೂ ಧರ್ಮದಲ್ಲಿ ಹೇಳಿದ ಉಡುಪುಗಳ ಮಹತ್ವ

ಹಿಂದೂ ಧರ್ಮದಲ್ಲಿ ಹೇಳಿದ ಮತ್ತು ಹಿಂದೂ ಸ್ತ್ರೀ-ಪುರುಷರು ಧರಿಸುತ್ತಿರುವ ಉಡುಪುಗಳ ರಚನೆಯನ್ನು ದೇವತೆಗಳು ಮಾಡಿದ್ದಾರೆ. ಅವು ಶಿವ ಮತ್ತು ಶಕ್ತಿ ತತ್ತ್ವಗಳನ್ನು ಪ್ರಕಟಗೊಳಿಸುತ್ತವೆ. ಸ್ತ್ರೀಯರ ಉಡುಪುಗಳಿಂದ, ಅಂದರೆ ಸೀರೆಯಿಂದ ಶಕ್ತಿತತ್ತ್ವವು ಜಾಗೃತವಾಗುತ್ತದೆ ಮತ್ತು ಪುರುಷರ ಉಡುಪುಗಳಿಂದ ಶಿವತತ್ತ್ವವು ಜಾಗೃತವಾಗುತ್ತದೆ. ಶಾಸ್ತ್ರಕ್ಕನುಸಾರ ಉಡುಪುಗಳನ್ನು ಧರಿಸಿದರೆ ನಮಗೆ ನಮ್ಮ ನಿಜಸ್ವರೂಪದ ಅರಿವಾಗುತ್ತದೆ ಮತ್ತು ನಮ್ಮ ಆಧ್ಯಾತ್ಮಿಕ ಶಕ್ತಿಯೂ ಖರ್ಚಾಗುವುದಿಲ್ಲ. ದೇವತೆಗಳು ನಿರ್ಮಿಸಿದ ಉಡುಪುಗಳನ್ನು ಧರಿಸುವುದರಿಂದ ಸ್ಥೂಲದೇಹ ಮತ್ತು ಮನೋದೇಹಗಳಿಗೆ ತಗಲುವ ಶಕ್ತಿಯು ತಾನಾಗಿಯೇ ಸಿಗುತ್ತದೆ.

ಉಡುಪು ಏಕೆ ಸತ್ವಪ್ರಧಾನವಾಗಿರಬೇಕು

ಪ್ರತಿಯೊಂದು ವಸ್ತುವಿಗೆ ಅದರ ಗುಣಧರ್ಮಕ್ಕನುಸಾರ ಒಳ್ಳೆಯ ಮತ್ತು ಕೆಟ್ಟ ಸ್ಪಂದನಗಳಿರುತ್ತವೆ. ನಮ್ಮ ಸುತ್ತಮುತ್ತಲಿನ ಮತ್ತು ನಾವು ಉಪಯೋಗಿಸುವ ಅನೇಕ ವಸ್ತುಗಳ ಸ್ಪಂದನಗಳು ನಮ್ಮ ಮೇಲೆ ಸತತವಾಗಿ ಪರಿಣಾಮವನ್ನು ಮಾಡುತ್ತಿರುತ್ತವೆ. ಆದುದರಿಂದ ಆ ವಸ್ತುಗಳು ಸತ್ತ್ವಪ್ರಧಾನವಾಗಿರುವುದು ಅವಶ್ಯಕವಾಗಿದೆ. ಇತರ ಯಾವುದೇ ವಸ್ತುಗಳಿಗಿಂತ, ನಮ್ಮ ಶರೀರದ ಮೇಲಿನ ಉಡುಪುಗಳಿಗೆ ಮತ್ತು ನಮಗೆ ಅತ್ಯಂತ ನಿಕಟ ಸಂಬಂಧವಿರುತ್ತದೆ. ಸಾತ್ತ್ವಕತೆಯ ದೃಷ್ಟಿಯಿಂದ ಬಟ್ಟೆಗಳನ್ನು ಆರಿಸುವಾಗ ನಮ್ಮ ಇಷ್ಟಾನಿಷ್ಟಗಳಿಗಿಂತ ಸ್ಪಂದನಶಾಸ್ತ್ರದ ಅಧ್ಯಯನವನ್ನು ಮಾಡಿದರೆ ನಮಗೆ ಆಧ್ಯಾತ್ಮಿಕ ಲಾಭವು ಹೆಚ್ಚು ಸಿಗುತ್ತದೆ. ಅದಕ್ಕಾಗಿ ಉಡುಪುಗಳ ಸ್ಪಂದನಗಳು ಸತ್ತ್ವಪ್ರಧಾನವಿರಬೇಕು.

ಹಿಂದೂ ಧರ್ಮದಲ್ಲಿ ಕಪ್ಪು ಬಣ್ಣವನ್ನು ನಿಷೇಧಿಸಲಾಗಿದೆ

ಹಿಂದೂ ಸ್ತ್ರೀ-ಪುರುಷರಿಗೆ ಕೃಷ್ಣವರ್ಣದ (ಕಪ್ಪು) ಉಡುಪುಗಳು ನಿಷಿದ್ಧವಾಗಿವೆ. ಕಪ್ಪು ಅಂಚಿನ ಬಟ್ಟೆಗಳನ್ನು ಧರಿಸುವುದು ಸದಾಚಾರವಾಗಿರದೇ ಅನಾಚಾರವಾಗಿದೆ. ಕೃಷ್ಣವರ್ಣದ ನೂಲಿರುವ ವಸ್ತ್ರಗಳನ್ನು ಧರಿಸುವುದು ಪಾತಕವಾಗಿದೆ. ಕಪ್ಪು ಬಣ್ಣದ ಮುಂಡಾಸು, ಟೊಪ್ಪಿ, ರುಮಾಲು, ಅಂಗಿ ಮತ್ತು ಸೀರೆಯನ್ನು ಧರಿಸುವ ಶಾಸ್ತ್ರನಿಷ್ಠ ಮತ್ತು ಶ್ರದ್ಧಾವಂತ ಹಿಂದೂಗಳಿಗೆ ಅವು ದುಃಖವನ್ನು ತರುವಂತಹವುಗಳಾಗಿವೆ. ಮಡಿವಸ್ತ್ರಗಳಲ್ಲಿ ಒಗೆದ ಬಟ್ಟೆಯು ನಡೆಯುತ್ತದೆ; ಆದರೆ ಕಪ್ಪು ಬಣ್ಣದ ಬಟ್ಟೆಯು ಒಗೆದಿದ್ದರೂ ಮತ್ತು ಅದು ಯಾವುದಾದರೊಂದು ಪವಿತ್ರ ವಸ್ತುವನ್ನು ಸ್ಪರ್ಶಿಸಿದ್ದರೂ ನಿಷಿದ್ಧವಾಗಿದೆ. ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಿ ಅಡುಗೆ ಮಾಡುವುದು ಅಥವಾ ಆಹಾರ ಬಡಿಸುವುದು ನಿಷಿದ್ಧ ಕರ್ಮವಾಗಿದೆ. – ಗುರುದೇವ ಡಾ. ಕಾಟೇಸ್ವಾಮೀಜಿ

ಉಡುಪುಗಳು ಮೈಮೇಲಿರುವಾಗ ಏಕೆ ಹೊಲಿಯಬಾರದು ?

ಅಖಂಡ ಬಟ್ಟೆಗಳು ಸಾತ್ತ್ವಿಕವಾಗಿರುತ್ತವೆ ಮತ್ತು ಅನೇಕ ಕಡೆಗಳಲ್ಲಿ ಹರಿದಿರುವ ಬಟ್ಟೆಗಳು ತೊಂದರೆದಾಯಕ ಸ್ಪಂದನಗಳಿಂದ ತುಂಬಿರುತ್ತವೆ. ಹರಿದಿರುವ ಬಟ್ಟೆಗಳನ್ನು ಹೊಲಿಯುವುದು ಬಟ್ಟೆಗೆ ಅಖಂಡತ್ವವನ್ನು ಪ್ರದಾನಿಸುವ ದೃಷ್ಟಿಯಿಂದ ಮಹತ್ವದ್ದಾಗಿದ್ದರೂ ಹರಿದ ಬಟ್ಟೆಗಳನ್ನು ಹೊಲಿಯುವಾಗ ದೊಡ್ಡ ಪ್ರಮಾಣದಲ್ಲಿ ರಜ-ತಮಾತ್ಮಕ ಲಹರಿಗಳು ವಾಯುಮಂಡಲದಲ್ಲಿ ಕಾರಂಜಿಗಳಂತೆ ಪ್ರಕ್ಷೇಪಿಸುತ್ತಿರುತ್ತವೆ. ಆದುದರಿಂದ ಬಟ್ಟೆಗಳನ್ನು ಹೊಲಿಯುವಾಗ ಅವು ದೇಹದಿಂದ ಆದಷ್ಟು ದೂರವಿರಬೇಕು. ಇಲ್ಲವಾದರೆ ಈ ರಜ-ತಮಾತ್ಮಕ ಲಹರಿಗಳಿಂದ ದೇಹಕ್ಕೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಆದುದರಿಂದ ಬಟ್ಟೆಗಳು ದೇಹದ ಮೇಲಿರುವಾಗ ಹೊಲಿಯಬಾರದು; ಅಂದರೆ ಬಟ್ಟೆಗಳನ್ನು ದೇಹದ ಸಮೀಪ ಹೊಲಿಯಬಾರದು.

ಹೊಲಿಯದಿರುವ (ಅಖಂಡ) ಬಟ್ಟೆಗಳನ್ನು ಧರಿಸುವುದರಿಂದ
ಚೈತನ್ಯವು ದೊರಕಿ ಆಧ್ಯಾತ್ಮಿಕ ಉಪಚಾರವಾಗುತ್ತದೆ

ಅಖಂಡ ಬಟ್ಟೆಯಲ್ಲಿರುವ ಪ್ರತಿಯೊಂದು ದಾರವು ಅಖಂಡವಾಗಿರುವುದರಿಂದ ಅದರಿಂದ ಪ್ರವಹಿಸುವ ಚೈತನ್ಯ ಲಹರಿಗಳನ್ನು ಅದು ಸಂಪೂರ್ಣ ಬಟ್ಟೆಯಲ್ಲಿ ಹರಡಬಹುದು. ಆದುದರಿಂದ ಅಖಂಡ ಬಟ್ಟೆಗಳನ್ನು (ಉಡುಪುಗಳನ್ನು) ಧರಿಸುವುದರಿಂದ ದೇಹದಲ್ಲಿ ಚೈತನ್ಯವು ಹರಡಿ ಆಧ್ಯಾತ್ಮಿಕ ಉಪಚಾರವಾಗುತ್ತದೆ, ಉದಾ. ಸೀರೆಯನ್ನು ಉಟ್ಟುಕೊಳ್ಳುವುದರಿಂದ ಹೆಚ್ಚು ಪ್ರಮಾಣದಲ್ಲಿ ಆಧ್ಯಾತ್ಮಿಕ ಉಪಚಾರ ವಾಗುತ್ತದೆ. ಹೊಲಿದಿರುವ ಉಡುಪುಗಳನ್ನು ಧರಿಸುವುದರಿಂದ ಚೈತನ್ಯದ ಲಾಭವು ಕಡಿಮೆ ಪ್ರಮಾಣದಲ್ಲಾಗುತ್ತದೆ ಮತ್ತು ಆಧ್ಯಾತ್ಮಿಕ ಉಪಚಾರವೂ ಕಡಿಮೆ ಪ್ರಮಾಣದಲ್ಲಾಗುತ್ತದೆ, ಉದಾ. ಚೂಡೀದಾರ.

ಒಗೆದು ಸ್ವಚ್ಛಗೊಳಿಸಿದ ಬಟ್ಟೆಗಳನ್ನೇ ಏಕೆ ಧರಿಸಬೇಕು ?

ಒಗೆದ ಬಟ್ಟೆಗಳನ್ನು ಧರಿಸಿದ ಮೇಲೆ, ಒಗೆದ ಬಟ್ಟೆಗಳಲ್ಲಿರುವ ನೂಲಿನಲ್ಲಿ ವ್ಯಕ್ತಿಯ ಶರೀರದಲ್ಲಿನ ರಜ-ತಮ ಲಹರಿಗಳು ಆಕರ್ಷಿತ ವಾಗುತ್ತವೆ. ಬಟ್ಟೆಗಳನ್ನು ಒಗೆಯದೇ ಹಾಕಿಕೊಂಡರೆ ಬಟ್ಟೆಯಲ್ಲಿ ಆಕರ್ಷಿತವಾಗಿರುವ ರಜ-ತಮ ಲಹರಿಗಳಿಂದಾಗಿ ವ್ಯಕ್ತಿಯಲ್ಲಿನ ರಜ- ತಮವು ಹೆಚ್ಚಾಗುತ್ತದೆ ಮತ್ತು ವ್ಯಕ್ತಿಯ ಸುತ್ತಲಿನ ವಾಯು ಮಂಡಲವು ಪ್ರದೂಷಿತವಾಗುತ್ತದೆ. ಇದರಿಂದ ವ್ಯಕ್ತಿ ಮತ್ತು ವ್ಯಕ್ತಿಯ ಬಟ್ಟೆಗಳ ಮೇಲೆ ಕೆಟ್ಟ ಶಕ್ತಿಗಳ ಹಲ್ಲೆಗಳಾಗುವ ಸಾಧ್ಯತೆಯೂ ಹೆಚ್ಚಾಗುತ್ತದೆ. ಉಪಯೋಗಿಸಿದ ಬಟ್ಟೆಗಳನ್ನು ಒಗೆಯುವುದರಿಂದ ನೀರಿನಲ್ಲಿನ ಆಪತತ್ತ್ವಯುಕ್ತ ಈಶ್ವರೀ ಚೈತನ್ಯದಿಂದ ಬಟ್ಟೆಗಳ ಮೇಲೆ ಆಧ್ಯಾತ್ಮಿಕ ಉಪಚಾರವಾಗಿ ಅವುಗಳಲ್ಲಿನ ರಜ-ತಮವು ನಾಶವಾಗಿ ಸಾತ್ತ್ವಿಕತೆ ಹೆಚ್ಚಾಗುತ್ತದೆ.

ಇತರರು ಉಪಯೋಗಿಸಿದ ಉಡುಪುಗಳಿಂದ ಕೆಟ್ಟ ಶಕ್ತಿಗಳ ತೊಂದರೆಯಾಗುವ ಸಾಧ್ಯತೆಯಿರುತ್ತದೆ

ಇತರರು ಉಪಯೋಗಿಸಿದ ಉಡುಪುಗಳಲ್ಲಿ ಅವರ ದೇಹದಲ್ಲಿನ ಸೂಕ್ಷ್ಮ ರಜ-ತಮಾತ್ಮಕ ಸ್ಪಂದನಗಳು ಮತ್ತು ವಾಸನೆಯ ತೊಂದರೆದಾಯಕ ಸ್ಪಂದನಗಳಿರುತ್ತವೆ. ಈ ಸ್ಪಂದನಗಳು ಉಡುಪುಗಳ ಮಾಧ್ಯಮದಿಂದ ಇತರ ಜೀವಗಳಲ್ಲಿ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ. ಮೊದಲನೆಯ ಜೀವಕ್ಕೆ ಕೆಟ್ಟಶಕ್ತಿಗಳ ತೀವ್ರ ತೊಂದರೆಯಿದ್ದರೆ ಅವರ ಉಡುಪುಗಳನ್ನು ಉಪಯೋಗಿಸುವ ವ್ಯಕ್ತಿಗೂ ಈ ತೊಂದರೆಯಾಗುವ ಸಾಧ್ಯತೆಯಿರುತ್ತದೆ ಮತ್ತು ಇದರಿಂದ ಸಂಪೂರ್ಣ ಜೀವನ ಕೆಟ್ಟಶಕ್ತಿಗಳ ತೊಂದರೆಯಿಂದ ಪೀಡಿತವಾಗಿ ಹಾಳಾಗುವ ಸಾಧ್ಯತೆಯಿರುತ್ತದೆ. ಕಲಿಯುಗದಲ್ಲಿ ಶೇ. ೧೦೦ ರಷ್ಟು ಜೀವಗಳಿಗೆ ಹೆಚ್ಚು ಕಡಿಮೆ ಪ್ರಮಾಣದಲ್ಲಿ ತೊಂದರೆಯಿದೆ. ಆದುದರಿಂದ ಇತರರ ಉಡುಪುಗಳನ್ನು ಉಪಯೋಗಿಸಿ ಅವುಗಳಿಂದ ಅವರ ಹೆಚ್ಚುವರಿ ತೊಂದರೆಗಳನ್ನು ತೆಗೆದುಕೊಳ್ಳುವುದು ಅಪಾಯಕಾರಿಯಾಗಿದೆ.

(ಸಾತ್ತ್ವಿಕ ಬಟ್ಟೆಗಳ ಬಗ್ಗೆ ತಿಳಿದುಕೊಳ್ಳಲು ಓದಿ, ಸನಾತನ ಸಂಸ್ಥೆಯ ನಿರ್ಮಿಸಿದ ಗ್ರಂಥ ‘ಬಟ್ಟೆಗಳು ಆಧ್ಯಾತ್ಮಿಕ ದೃಷ್ಟಿಯಿಂದ ಹೇಗಿರಬೇಕು ?’)

Leave a Comment