ಮಾಘಿ ಶ್ರೀ ಗಣೇಶ ಜಯಂತಿ (Maghi Shri Ganesh Jayanti 2023)

ಮಾಘಿ ಶ್ರೀ ಗಣೇಶ ಜಯಂತಿ ಏಕೆ ಆಚರಿಸುತ್ತೇವೆ ?

ಮಾಘಿ ಶ್ರೀ ಗಣೇಶ ಜಯಂತಿ ಎಂದರೆ ಯಾವ ದಿನ ಗಣೇಶ ಲಹರಿಗಳು ಪ್ರಥಮ ಬಾರಿ ಪೃಥ್ವಿಯ ಮೇಲೆ ಬಂದವೋ, ಅಂದರೆ ಯಾವ ದಿನ ಗಣೇಶನ ಜನ್ಮವಾಯಿತೋ, ಆ ದಿನ. ಅದು ಮಾಘ ಶುಕ್ಲ ಚತುರ್ಥಿಯಾಗಿತ್ತು. ಅಂದಿನಿಂದ ಶ್ರೀ ಗಣೇಶ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನದ ವೈಶಿಷ್ಟ್ಯವೇನೆಂದರೆ, ಈ ತಿಥಿಯಂದು ಶ್ರೀ ಗಣೇಶನ ತತ್ತ್ವವು ಇತರ ದಿನಗಳ ತುಲನೆಯಲ್ಲಿ ೧ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ.

ಗಣಪತಿಯ ಈ ಸಾತ್ತ್ವಿಕ ಚಿತ್ರವನ್ನು ತಮ್ಮ ಕಣ್ಮುಂದೆ ಇಟ್ಟುಕೊಂಡು ನಾಮ ಜಪಿಸಿ !

ಮಾಘಿ ಶ್ರೀ ಗಣೇಶ ಜಯಂತಿಯ ಮಹತ್ವವೇನು ?

ಗಣಪತಿಯ ಸ್ಪಂದನಗಳು ಮತ್ತು ಪೃಥ್ವಿಯ ಚತುರ್ಥಿ ತಿಥಿಯ ಸ್ಪಂದನಗಳು ಒಂದೇ ರೀತಿಯದ್ದಾಗಿರುತ್ತವೆ, ಆದುದರಿಂದ ಅವುಗಳು ಒಂದಕ್ಕೊಂದು ಅನುಕೂಲವಾಗಿರುತ್ತವೆ; ಅಂದರೆ ಆ ದಿನ ಗಣಪತಿಯ ಸ್ಪಂದನಗಳು ಹೆಚ್ಚಿನ ಪ್ರಮಾಣದಲ್ಲಿ ಪೃಥ್ವಿಯ ಮೇಲೆ ಬರಬಹುದು. ಪ್ರತಿ ತಿಂಗಳ ಚತುರ್ಥಿಯ ದಿನ ಗಣಪತಿಯ ತತ್ತ್ವವು ಇತರ ದಿನಗಳ ತುಲನೆಯಲ್ಲಿ ಪೃಥ್ವಿಯ ಮೇಲೆ ೧೦೦೦ ಪಟ್ಟು ಹೆಚ್ಚಿಗೆ ಕಾರ್ಯನಿರತವಾಗಿರುತ್ತದೆ. ಈ ತಿಥಿಯಂದು ಶ್ರೀ ಗಣೇಶನ ಉಪಾಸನೆಯನ್ನು ಮಾಡಿದರೆ ಗಣೇಶತತ್ತ್ವದ ಲಾಭವು ಹೆಚ್ಚಿಗೆ ಆಗುತ್ತದೆ.

ಮಾಘಿ ಶ್ರೀ ಗಣೇಶ ಜಯಂತಿಯಂದು ಇವನ್ನು ಮಾಡಿ !

👉🏻 ಸಾಧ್ಯವಾದರೆ ಹತ್ತಿರದ ಗಣಪತಿಯ ದೇವಸ್ಥಾನಕ್ಕೆ ಹೋಗಿ ಅಲ್ಲಿ ಕುಳಿತು ನಾಮ ಜಪಿಸಿ

👉🏻 ದೇವಸ್ಥಾನಕ್ಕೆ ಹೋಗಲು ಸಾಧ್ಯವಿಲ್ಲದಿದ್ದರೆ, ಮನೆಯಲ್ಲಿಯೇ ಆದಷ್ಟು ಹೆಚ್ಚು ಗಣಪತಿಯ ನಾಮ ಜಪಿಸಿ ಮತ್ತು ಪ್ರಾರ್ಥನೆ ಮಾಡಿ

👉🏻 ಮನೆಯಂಗಳದಲ್ಲಿ ಗಣಪತಿಯ ತತ್ತ್ವವನ್ನು ಆಕರ್ಷಿಸುವ ರಂಗೋಲಿಯನ್ನು ಬಿಡಿಸಿ (ಇದರ ಮಾದರಿಯನ್ನು ಕೆಳಗೆ ನೀಡಿದ್ದೇವೆ)

👉🏻 ಭಾವಪೂರ್ಣವಾಗಿ ಗಣಪತಿಯ ಪೂಜೆ ಅರ್ಚನೆಯನ್ನು ಮಾಡಿ

👉🏻 ಸಾಯಂಕಾಲ ಶ್ರೀ ಗಣಪತಿ ಅಥರ್ವಶೀರ್ಷ ಪಠಿಸಿ (ಆಡಿಯೋವನ್ನು ಕೆಳಗೆ ನೀಡಿದ್ದೇವೆ)

👉🏻  ಸದಾಕಾಲ ನಾಮ ಜಪಿಸಲು ನೆನಪಾಗುವಂತೆ ಶ್ರೀ ಗಣಪತಿಯ ನಾಮಪಟ್ಟಿಯನ್ನು ಅಂಟಿಸಿ

ಮಾಘಿ ಶ್ರೀ ಗಣೇಶ ಜಯಂತಿಯಂದು ಈ ನಾಮ ಜಪಿಸಿ !

ದೇವರ ಬಗ್ಗೆ ಭಕ್ತಿಭಾವ ನಿರ್ಮಾಣವಾದ ನಂತರ ದೇವರ ನಾಮಜಪವನ್ನು ಹೇಗೆ ಮಾಡಿದರೂ ನಡೆಯುತ್ತದೆ. ಆದರೆ ಭಕ್ತಿಭಾವವು ಬೇಗನೆ ನಿರ್ಮಾಣವಾಗಲು ಮತ್ತು ದೇವರ ತತ್ತ್ವದ ಹೆಚ್ಚೆಚ್ಚು ಲಾಭವಾಗಲು ನಾಮಜಪದ ಉಚ್ಚಾರ ಯೋಗ್ಯವಾಗಿರುವುದು ಆವಶ್ಯಕವಾಗಿದೆ. ಅದರೊಂದಿಗೆ ನಾಮಜಪದ ಅರ್ಥವನ್ನು ಮುಂದಿಟ್ಟುಕೊಂಡು ನಾಮ ಜಪಿಸಿದರೆ ಜಪವು ಇನ್ನಷ್ಟು ಭಾವಪೂರ್ಣವಾಗಲು ಸಹಾಯವಾಗುತ್ತದೆ. 

ಸನಾತನದ ಸಾಧಕರು, ಸಂತರ ಮಾರ್ಗದರ್ಶನದಲ್ಲಿ ತಯಾರಿಸಿದ || ಓಂ ಗಂ ಗಣಪತಯೇ ನಮಃ || ನಾಮಜಪ ಇಲ್ಲಿ ನಿಮಗಾಗಿ ನೀಡುತ್ತಿದ್ದೇವೆ.

ಈ ನಾಮವನ್ನು ಈ ರೀತಿ ಜಪಿಸುವುದರಿಂದ ತಮಗೇನಾದರೂ ಅನುಭೂತಿ ಬಂದಿದ್ದಲ್ಲಿ ಅಥವಾ ಏನಾದರೂ ಕೇಳಬೇಕಾದಲ್ಲಿ ಕೆಳಗೆ ತಮ್ಮ ಅಭಿಪ್ರಾಯ (ಕಾಮೆಂಟ) ತಿಳಿಸಿ, ಅಥವಾ ನಮಗೆ ಮಿಂಚಂಚೆ (ಈಮೇಲ್) ಕಳುಹಿಸಿ. 

ಸನಾತನ ನಿರ್ಮಿಸಿದ ಗಣಪತಿಯ ಸಾತ್ತ್ವಿಕ ನಾಮಪಟ್ಟಿ
ಗಣಪತಿಯ ಈ ಸಾತ್ತ್ವಿಕ ನಾಮಪಟ್ಟಿಯನ್ನು ತಮ್ಮ ಕಣ್ಮುಂದೆ ಇಟ್ಟುಕೊಂಡು ನಾಮ ಜಪಿಸಿ !

ಸನಾತನ ನಿರ್ಮಿಸಿದ ಶ್ರೀ ಗಣಪತಿಯ ಸಾತ್ತ್ವಿಕ ನಾಮಪಟ್ಟಿಯನ್ನು ಮನೆಯಲ್ಲಿ ಅಂಟಿಸುವುದರಿಂದ ಮನೆಯಲ್ಲಿ ಸಾತ್ತ್ವಿಕತೆಯೊಂದಿಗೆ ನಮಗೆ ನಾಮ ಜಪಿಸಲು ನೆನಪಾಗುತ್ತದೆ.

ಶ್ರೀ ಗಣಪತಿ ಅಥರ್ವಶೀರ್ಷ ಸ್ತೋತ್ರ

ಥರ್ವವೆಂದರೆ ಉಷ್ಣ (ಬಿಸಿ), ಅಥರ್ವವೆಂದರೆ ಶಾಂತಿ ಮತ್ತು ಶೀರ್ಷವೆಂದರೆ ಮಸ್ತಕ. ಯಾವುದರ ಪುರಶ್ಚರಣದಿಂದ (ಪಠಿಸುವುದರಿಂದ) ಮಸ್ತಕಕ್ಕೆ ಶಾಂತಿಯು ಲಭಿಸುತ್ತದೆಯೋ, ಅದುವೇ ಅಥರ್ವಶೀರ್ಷ !

ಶ್ರೀ ಗಣಪತಿ ಅಥರ್ವಶೀರ್ಷವನ್ನು ಪಠಿಸುವ ನಿಯಮಗಳನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ !

ಸನಾತನ ಸಂವಾದ ಆನ್‌ಲೈನ್ ಸತ್ಸಂಗ

ಶ್ರೀ ಗಣಪತಿಗೆ ಮಾಡಬಹುದಾದ ಪ್ರಾರ್ಥನೆ

ಮಾಘಿ ಶ್ರೀ ಗಣೇಶ ಜಯಂತಿಯಂದು ಗಣಪನ ಪೂಜೆಯನ್ನು ಹೀಗೆ ಮಾಡಿ !

ಯಾವ ಬೆರಳಿನಿಂದ ಗಣಪತಿಗೆ ಗಂಧವನ್ನು ಹಚ್ಚಬೇಕು? ಅನಾಮಿಕಾ 
ಯಾವ ಹೂವುಗಳನ್ನು ಅರ್ಪಿಸಬೇಕು? ಕೆಂಪು ದಾಸವಾಳ / ಕೆಂಪು ಬಣ್ಣದ ಇತರ ಹೂವುಗಳು
ಯಾವ ಸುಗಂಧದ ಊದುಬತ್ತಿ (ಅಗರ್ಬತ್ತಿ) ಹಚ್ಚಬೇಕು? ಗಂಧ (ಚಂದನ) / ಕೇದಗೆ / ಮಲ್ಲಿಗೆ
ಎಷ್ಟು ಊದುಬತ್ತಿಗಳನ್ನು ಹಚ್ಚಬೇಕು? ಎರಡು
ಯಾವ ಸುಗಂಧದ ಅತ್ತರು ಅರ್ಪಿಸಬೇಕು? ಹೀನಾ
ಎಷ್ಟು ಪ್ರದಕ್ಷಿಣೆಗಳನ್ನು ಹಾಕಬೇಕು? ಎಂಟು ಅಥವಾ ಎಂಟರ ಪಟ್ಟಿನಲ್ಲಿ
ಎಷ್ಟು ದೂರ್ವೆಗಳನ್ನು ಅರ್ಪಿಸಬೇಕು? ೩, ೫, ೭ ಹೀಗೆ ಬೆಸ ಸಂಖ್ಯೆಯ ಗರಿಗಳಿರುವ ಎಳೆಯ ದೂರ್ವೆ ಅರ್ಪಿಸಬಹುದು. ವಿಶೇಷವಾಗಿ ೨೧ ದೂರ್ವೆಗಳನ್ನು ಅರ್ಪಿಸಲಾಗುತ್ತದೆ.

ಗಣಪತಿಗೆ ಗಂಧ, ಅರಿಶಿನ – ಕುಂಕುಮ ಹೇಗೆ ಅರ್ಪಿಸುವುದು ?

ಗಣಪತಿಗೆ ಹೂವುಗಳನ್ನು ಹೇಗೆ ಅರ್ಪಿಸಬೇಕು ?

ಟಿಪ್ಪಣಿ : ಪವಿತ್ರಕಗಳು – ದೇವತೆಯ ಸೂಕ್ಷ್ಮಾತಿಸೂಕ್ಷ್ಮ ಕಣಗಳು

ಗಣೇಶನಿಗೆ ಸಂಬಂಧಿಸಿದ ಹಬ್ಬಗಳಂದು ಬಿಡಿಸಬೇಕಾದ ರಂಗೋಲಿಗಳು

ಗಣೇಶ ದೇವರ ಪೂಜೆಯಲ್ಲಿ ಬಿಡಿಸುವ ರಂಗೋಲಿ, ಗಣೇಶ ತತ್ತ್ವವನ್ನು ಆಕರ್ಶಿಸುವ ರಂಗೋಲಿ, ganapati rangolis

ಗಣೇಶನಿಗೆ ಸಂಬಂಧಿಸಿದ ಸನಾತನ ನಿರ್ಮಿಸಿದ ಉತ್ಪಾದನೆಗಳು

ಮಾಘಿ ಶ್ರೀ ಗಣೇಶ ಜಯಂತಿ, ಗಣಪತಿಗೆ ಸಂಬಂಧಿಸಿದ ಸನಾತನದ ಉತ್ಪಾದನೆಗಳು ಖರೀದಿಸಿ

ಗಣೇಶ ಭಕ್ತರ ಫೋನಿನಲ್ಲಿ ಇರಲೇಬೇಕಾದ ಆ್ಯಪ್ !

 Android ಅಥವಾ iOS ಮೇಲೆ ಕ್ಲಿಕ್ ಮಾಡಿ, ನಿಮ್ಮ ಫೋನಿನಲ್ಲಿ ಈ ಆ್ಯಪ್ ಇಂದೇ ಡೌನ್‌ಲೋಡ್ ಮಾಡಿಕೊಳ್ಳಿ! 

ಗಣೇಶ ಪೂಜೆಯನ್ನು ಹೇಗೆ ಮಾಡಬೇಕು, how to do ganesh puja, ಗಣೇಶ ಪೂಜೆ ಸನಾತಾನ ಅ್ಯಪ್
ಗಣೇಶ ಪೂಜೆ ಮತ್ತು ಆರತಿ (Ganesh Puja and Aarti)
Android | iOS
ಮಾಘಿ ಶ್ರೀ ಗಣೇಶ ಜಯಂತಿ ಗೆ ಗಣಪತಿಯ ನಾಮ ಜಪ ಮಾಡಿ! ಸನಾತನ ಚೈತನ್ಯವಾಣಿ ಆ್ಯಪ್ download ಮಾಡಿ!
ಸನಾತನ ಚೈತನ್ಯವಾಣಿ (Sanatan Chaitanyavani) (ಜಪ, ಮಂತ್ರ, ಶ್ಲೋಕಗಳಿಗೆ)
Android

Leave a Comment