ಹುಟ್ಟುಹಬ್ಬವನ್ನು ಜನ್ಮತಿಥಿಗನುಸಾರ ಆಚರಣೆ ಮಾಡುವುದರ ಮಹತ್ವ

ಈ ದಿನ ನೀಡಿದ ಶುಭೇಚ್ಛೆಗಳು ಮತ್ತು ಶುಭಾಶೀರ್ವಾದಗಳು ಎಲ್ಲಕ್ಕಿಂತ ಹೆಚ್ಚು ಫಲದಾಯಕವಾಗಿವೆ

‘ಯಾವ ತಿಥಿಯಂದು ನಾವು ಜನ್ಮಕ್ಕೆ ಬಂದಿರುತ್ತೇವೆಯೋ, ಆ ತಿಥಿಯ ಸ್ಪಂದನಗಳು ನಮ್ಮ ಸ್ಪಂದನಗಳಿಗೆ ಎಲ್ಲಕ್ಕಿಂತ ಹೆಚ್ಚು ಹೊಂದಾಣಿಕೆಯಾಗುತ್ತವೆ. ಆದುದರಿಂದ ನಮ್ಮ ಆಪ್ತೇಷ್ಟರು ಮತ್ತು ಹಿತಚಿಂತಕರು ನಮಗೆ ಆ ತಿಥಿಗೆ ನೀಡಿದ ಶುಭೇಚ್ಛೆ ಮತ್ತು ಶುಭಾಶೀರ್ವಾದಗಳು ಎಲ್ಲಕ್ಕಿಂತ ಹೆಚ್ಚು ಫಲದಾಯಕವಾಗುತ್ತವೆ; ಆದುದರಿಂದ ಹುಟ್ಟುಹಬ್ಬವನ್ನು ತಿಥಿಗನುಸಾರವಾಗಿ ಆಚರಿಸಬೇಕು.

ಜೀವನದಲ್ಲಿ ಬರುವ ಅಡಚಣೆಗಳನ್ನು ಎದುರಿಸುವ ಕ್ಷಮತೆಯು ಪ್ರಾಪ್ತವಾಗುವುದು

ಹುಟ್ಟುಹಬ್ಬದ ದಿನ (ತಿಥಿಯಂದು) ಬ್ರಹ್ಮಾಂಡದಲ್ಲಿ ಕಾರ್ಯನಿರತವಾಗಿರುವ ಲಹರಿಗಳು ಆಯಾಯ ಜೀವಗಳ ಪ್ರಕೃತಿಗೆ, ಹಾಗೆಯೇ ಪ್ರವೃತ್ತಿಗೆ ಪೂರಕವಾಗಿರುವುದರಿಂದ ಆ ತಿಥಿಯಂದು ಮಾಡಿದ ಸಾತ್ತ್ವಿಕ ಮತ್ತು ಚೈತನ್ಯಾತ್ಮಕ ಕೃತಿಗಳಿಂದ ಜೀವದ ಅಂತರ್ಮನಸ್ಸಿನ ಮೇಲೆ ಆಳವಾದ ಸಂಸ್ಕಾರಗಳನ್ನು ಮೂಡಿಸಲು ಸಹಾಯವಾಗುತ್ತದೆ. ಇದರಿಂದ ಜೀವದ ಮುಂದಿನ ಜೀವನಕ್ಕೆ ಆಧ್ಯಾತ್ಮಿಕ ಬಲವು ಪ್ರಾಪ್ತವಾಗಿ ಅದಕ್ಕೆ ಜೀವನದಲ್ಲಿ ಬರುವ ಅಡಚಣೆಗಳ ವಿರುದ್ಧ ಹೋರಾಡುವ ಕ್ಷಮತೆಯು ಪ್ರಾಪ್ತವಾಗುತ್ತದೆ. – ಓರ್ವ ವಿದ್ವಾಂಸರು (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೧.೧.೨೦೦೫, ರಾತ್ರಿ ೯.೧೧ ಮತ್ತು ೨೮.೮.೨೦೦೫, ಬೆಳಗ್ಗೆ ೧೧.೪೦)

ತಿಥಿಗನುಸಾರ ಹುಟ್ಟುಹಬ್ಬವನ್ನು ಆಚರಿಸುವುದರಿಂದಾಗುವ ಲಾಭ

ಅ. ವ್ಯಕ್ತಿಯ ಜನ್ಮದ ಸಮಯದಲ್ಲಿನ ಸ್ಪಂದನಗಳು ಆ ಜೀವಕ್ಕೆ ಪೂರಕವಾಗಿರುತ್ತವೆ.

ಆ. ಜೀವಕ್ಕೆ ಜನ್ಮತಿಥಿಯು ಜನ್ಮದ ಸಮಯದಲ್ಲಿನ ಪೂರಕ ತತ್ತ್ವಗಳನ್ನು ಪ್ರಾಪ್ತ ಮಾಡಿಕೊಡುತ್ತದೆ, ಆ ತತ್ತ್ವಗಳು ಆರತಿ ಬೆಳಗಿದ ನಂತರ ಪ್ರಾಪ್ತವಾಗುತ್ತವೆ: ಜನ್ಮತಿಥಿಯ ದಿನ ನಕ್ಷತ್ರ, ರಾಶಿ ಇವುಗಳ ಸ್ಥಿತಿಯು ಜೀವದ ಜನ್ಮದ ಸಮಯದಂತೆಯೇ ಇರುತ್ತವೆ. ಆದುದರಿಂದ ಪ್ರತಿವರ್ಷ ಜೀವದ ಜನ್ಮತಿಥಿಯು ಆ ಜೀವದ ಜನ್ಮದ ಸಮಯದ ಪೂರಕ ತತ್ತ್ವಗಳನ್ನು ಪ್ರಾಪ್ತ ಮಾಡಿಕೊಡುತ್ತದೆ. ಹುಟ್ಟಿದ ದಿನ ಆರತಿಯನ್ನು ಬೆಳಗುವುದರಿಂದ ಆ ತತ್ತ್ವಗಳು ಜೀವಕ್ಕೆ ಪ್ರಾಪ್ತವಾಗುತ್ತವೆ.

ಇ. ತಿಥಿಯಿಂದ ಜೀವಕ್ಕೆ ಚೈತನ್ಯವು ಸಿಗುವುದು: ತಿಥಿಗಳ (ಮಾಸ ಮತ್ತು ನಕ್ಷತ್ರಗಳ) ನಿರ್ಮಿತಿ ಮತ್ತು ಮಂಡನೆಯು ಋಷಿಮುನಿಗಳು, ಹಾಗೆಯೇ ಪುರಾತನ ಜ್ಯೋತಿಷ್ಯಶಾಸ್ತ್ರಜ್ಞ, ಗಣಿತಶಾಸ್ತ್ರಜ್ಞರಿಂದ ಆಗಿರುವುದರಿಂದ ಅದು ಈಶ್ವರನ ಆಯೋಜನೆಯಂತೆಯೇ ಆಗಿದೆ. ಆದುದರಿಂದ ತಿಥಿಯಿಂದ ಜೀವಕ್ಕೆ ಚೈತನ್ಯವು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತದೆ. ತದ್ವಿರುದ್ಧ ಆಂಗ್ಲ ದಿನಾಂಕ, ಮಾಸಗಳ ನಿರ್ಮಿತಿಯು ಮಾನವನಿರ್ಮಿತವಾಗಿದ್ದು, ಅವುಗಳಿಂದ ಜೀವಕ್ಕೆ ಯಾವುದೇ ರೀತಿಯ ಆಧ್ಯಾತ್ಮಿಕ ಲಾಭವಾಗುವುದಿಲ್ಲ.

ಈ. ಜನ್ಮತಿಥಿಯಂದು ಮಾಡಿದ ಆರತಿಯಿಂದ ಜೀವವು ಅಂತರ್ಮುಖವಾಗುತ್ತದೆ ಮತ್ತು ಕಳೆದುಹೋದ ವರ್ಷಗಳಲ್ಲಿ ಅದು ಏನು ಸಾಧ್ಯ ಮಾಡಿತು ಮತ್ತು ಮುಂದೆ ಏನು ಸಾಧ್ಯ ಮಾಡಬೇಕಾಗಿದೆ ಎಂಬುದರ ಕುರಿತು ಅಂತರ್ಮುಖವಾಗಿ ವಿಚಾರ ಮಾಡುತ್ತದೆ.

ಉ. ಜನ್ಮತಿಥಿಯ ದಿನದಂದು ಜೀವಕ್ಕೆ ಈಶ್ವರನಿಂದ ಸತ್ತ್ವಪ್ರಧಾನ ತತ್ತ್ವಗಳು ಪ್ರಾಪ್ತವಾಗುವುದರಿಂದ ಅದರ ಮೇಲಿನ ಕಪ್ಪು ಶಕ್ತಿಯ ಆವರಣ ದೂರವಾಗುತ್ತದೆ ಮತ್ತು ದಿನವಿಡೀ ಆ ತತ್ತ್ವಗಳು ಅದಕ್ಕೆ ಸತತವಾಗಿ ಪ್ರಾಪ್ತವಾಗುತ್ತವೆ.’

– ಕು. ಪ್ರಿಯಾಂಕಾ ಲೋಟಲೀಕರ, ಸನಾತನ ಸಂಸ್ಥೆ (ಆಷಾಢ ಶು.೧೪, ಕಲಿಯುಗ ವರ್ಷ ೫೧೧೨ ೨೪.೭.೨೦೧೦)

(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಕೌಟುಂಬಿಕ ಮತ್ತು ಸಾಮಾಜಿಕ ಧಾರ್ಮಿಕ ಕೃತಿಗಳ ಹಿಂದಿನ ಶಾಸ್ತ್ರ’)

Leave a Comment