ಪ.ಪೂ. ಡಾ. ಆಠವಲೆಯವರು ಅಧ್ಯಾತ್ಮಪ್ರಸಾರದ ಬಗ್ಗೆ ಮಾಡಿದ ಮಾರ್ಗದರ್ಶನ ಮತ್ತು ಗಮನಕ್ಕೆ ಬಂದ ಅವರ ಅಲೌಕಿಕತೆ !

ಸೌ. ಡ್ರಗಾನಾ ಕಿಸ್ಲೋವ್ಹಸ್ಕಿ

ಅ. ನಾವು ಸೇವೆಯ ಕರ್ತೃತ್ವವನ್ನು ತೆಗೆದುಕೊಳ್ಳಬಾರದು !
‘ನಾವು ಏನನ್ನೂ ಮಾಡುವುದಿಲ್ಲ, ಎಲ್ಲವನ್ನೂ ಭಗವಂತನೇ ಮಾಡುತ್ತಿರುತ್ತಾನೆ. ಭಗವಂತನೇ ಅಧ್ಯಾತ್ಮಪ್ರಸಾರ ಮಾಡುತ್ತಿರುವುದರಿಂದ ಆ ಸೇವೆಯ ಕರ್ತೃತ್ವವನ್ನು ನಾವು ತೆಗೆದುಕೊಳ್ಳಬಾರದು !

ಆ. ಆಧ್ಯಾತ್ಮಿಕ ಸ್ತರದಲ್ಲಿ  ಮಾರ್ಗದರ್ಶನ ಮಾಡಬೇಕು !
ಯಾರಿಗೂ ಮಾನಸಿಕ ಸ್ತರದಲ್ಲಿ ಮಾರ್ಗದರ್ಶನ ಮಾಡದೇ, ಆಧ್ಯಾತ್ಮಿಕ ಸ್ತರದಲ್ಲಿ ಮಾರ್ಗದರ್ಶನ ಮಾಡಬೇಕು. ಹೀಗೆ ಮಾಡುವುದರಿಂದಲೆ ಆಧ್ಯಾತ್ಮಿಕ ಉನ್ನತಿಯಾಗುತ್ತದೆ.

ಇ. ಅಧ್ಯಾತ್ಮದ ಜ್ಞಾನವನ್ನು ಸಾಧಕರವರೆಗೆ ತಲುಪಿಸುವ ತಳಮಳ.
ಒಮ್ಮೆ ನಾನು ಪ.ಪೂ. ಡಾಕ್ಟರರಿಗೆ, ‘ನಾನು ಅಧ್ಯಾತ್ಮ ಪ್ರಸಾರಕ್ಕಾಗಿ ಇಟಲಿಗೆ ಹೋಗಲೇ ? ಎಂದು ಕೇಳಿದ್ದೆ. ಅದಕ್ಕೆ ಅವರು, ‘ನಾವು ಸಾಧಕರಿರುವ ಸ್ಥಳಕ್ಕೆ ಹೋಗಬೇಕು. ಕೇವಲ ಒಬ್ಬ ಸಾಧಕನಿದ್ದರೂ, ನಾವು ಅವನನ್ನು ಭೇಟಿಯಾಗಲು ಹೋಗಬೇಕು ಎಂದು ಹೇಳಿದರು. ಅವರು ‘ನಮ್ಮ ಪ್ರವಚನಗಳಲ್ಲಿ ಜಿಜ್ಞಾಸುಗಳ ಉಪಸ್ಥಿತಿ ಅಲ್ಪವೇ ಇರುತ್ತದೆ. ನಮಗೆ ತುಂಬಾ ಜನರ ಹಿಂದೆ ಹೋಗಲಿಕ್ಕಿರದೇ, ಕೇವಲ ಸಾಧನೆಮಾಡಿ ತಮ್ಮ ಆಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳುವವರಲ್ಲಿಗೆ ಹೋಗಬೇಕಾಗಿದೆ; ಏಕೆಂದರೆ ಕೇವಲ ಒಬ್ಬ ಸಾಧಕನಿಂದಲೂ ಸಂಪೂರ್ಣ ಸಮಾಜದ ಮೇಲೆ ಪರಿಣಾಮ ಬೀರಬಹುದು ಎಂದರು.

ಈ. ಸೂಕ್ಷ್ಮ-ಸ್ತರದಲ್ಲಿ ಅಧ್ಯಯನ ಮಾಡಿ ಉತ್ತರಗಳನ್ನು ಹೇಳುವುದು.
ಬಹಳಷ್ಟು ಸಲ ‘ಯಾವ ಭಾಗದಲ್ಲಿ ಎಷ್ಟು ಜನ ಸಾಧಕರಿದ್ದಾರೆ ಮತ್ತು ಎಷ್ಟು ಜನ ಸಾಧಕರು ಸ್ವತಃ ಪ್ರವಾಸ ಮಾಡಿ ನಮ್ಮನ್ನು ಭೇಟಿಯಾಗುವರು ಎಂಬುದರ ಬಗ್ಗೆ ಅವರು ಹೇಳುತ್ತಾರೆ. ನಾನು ವಿಮಾನದಲ್ಲಿ ಪ್ರವಾಸ ಮಾಡುವಾಗ ಯಾವ ದೇಶದಲ್ಲಿ ಶೇಕಡಾ ಎಷ್ಟು ಜನ ಸಾಧಕರಿದ್ದಾರೆ, ಎಂಬುದರ ಬಗ್ಗೆ ಸೂಕ್ಷ್ಮದಲ್ಲಿ ಅಧ್ಯಯನ ಮಾಡಲು ಅವರು ನನಗೆ ಹೇಳುತ್ತಿದ್ದರು.

ಉ. ಸಾಧಕರ ಪ್ರಗತಿಯ ಬಗ್ಗೆ ಜ್ಞಾನವಿರುವುದು.
ಕೆಲವೊಂದು ಸಲ ನಾವು ಯಾವುದಾದರೊಬ್ಬ ಸಾಧಕರ ಬಗ್ಗೆ ಅವರಿಗೆ ಹೇಳುವಾಗ ಅವರು ‘ಅವರ ಗುಣವೈಶಿಷ್ಟ್ಯಗಳು ಯಾವುವು ? ಅವರು ಸಾಧನೆ ಮಾಡಿದರೆ ಎಷ್ಟು ಸಮಯದಲ್ಲಿ ಎಷ್ಟು ಪ್ರಗತಿ ಯಾಗುವುದು ?, ಎಂಬುದರ ಬಗ್ಗೆ ಅವರಿಗೆ ಮೊದಲೇ ತಿಳಿದಿರುವುದು ನಮ್ಮ ಗಮನಕ್ಕೆ ಬಂದಿದೆ.

ಊ. ಪ.ಪೂ. ಡಾಕ್ಟರರ ಅಗಾಧ ಜ್ಞಾನದ ಬಗ್ಗೆ ಬಂದ ಅನುಭವ
ಯಾವ ಸಾಧಕರಲ್ಲಿ ಸಾಧನೆಯ ಕ್ಷಮತೆ ಎಷ್ಟಿದೆ ? ಸಾಧನೆಯಲ್ಲಿ ಯಾರ ಪ್ರಗತಿ ವೇಗವಾಗಿ ಆಗುವುದು ? ಇತ್ಯಾದಿ ವಿಷಯಗಳ ಬಗ್ಗೆ ಪ.ಪೂ. ಡಾಕ್ಟರರು ಮೊದಲೇ ಹೇಳುತ್ತಿದ್ದರು ಮತ್ತು ಯಾವಾಗಲೂ ಅದು ಸತ್ಯವೇ ಆಗಿರುತ್ತಿತ್ತು. ಈ ರೀತಿ ನಮಗೆ ಗುರುಗಳ ಅಗಾಧ ಜ್ಞಾನದ ಒಂದು ನೋಟ ನೋಡಲು ಸಿಕ್ಕಿತ್ತು. ಒಮ್ಮೆ ಅವರು ಮಾನವನ ೧೦, ೧೦೦, ೧೦೦೦ ಹಾಗೂ ೫೦೦೦ ವರ್ಷಗಳ ನಂತರದ ಆಧ್ಯಾತ್ಮಿಕ ಪ್ರಗತಿಯ ಬಗ್ಗೆ ನಮಗೆ ಹೇಳಿದ್ದರು. ಅವರು ನಿಧನವಾಗಿರುವ ನಮ್ಮ ಕೆಲವು ಸಾಧಕರು ಹಾಗೂ ದೇಹತ್ಯಾಗ ಮಾಡಿರುವ ನಮ್ಮ ಸಂತರ ಮರಣದ ನಂತರವೂ ಮುಂದಿನ ಲೋಕಗಳಲ್ಲಿ ಆಧ್ಯಾತ್ಮಿಕ ಪ್ರಗತಿಯಾಗುತ್ತಿದೆ ಎಂಬುದನ್ನೂ ಹೇಳಿದ್ದರು. ಇಷ್ಟು ಉಚ್ಛ ಸ್ತರದ ಗುರುಗಳು ಸ್ಥಳ-ಕಾಲದ ಬಂಧನದ ಆಚೆಗಿರುತ್ತಾರೆ.

ಸಾಧಕರ ಮೇಲೆ ಪ.ಪೂ. ಡಾಕ್ಟರ್ ಆಠವಲೆಯವರು ಅಗಾಧವಾದ ಪ್ರೀತಿಯ ಮಳೆಗರೆಯುತ್ತಿರುವುದರ ಕೆಲವು ಉದಾಹರಣೆಗಳು

ಅ. ನಾನು ಪ್ರಸಾರಕ್ಕೆಂದು ಹೋಗಬೇಕಾಗಿದ್ದ ದೇಶಗಳಲ್ಲಿರುವ ಸಾಧಕರಿಗಾಗಿ ಪ.ಪೂ. ಡಾಕ್ಟರರು ತಿನಿಸನ್ನು ಕಳುಹಿಸುತ್ತಿದ್ದರು. ಆ ದೇಶದಲ್ಲಿರುವ ಸಾಧಕರ ಹೆಸರುಗಳನ್ನು ಕೇಳಿಕೊಂಡು ಪ್ರತಿಯೊಬ್ಬರ ಹೆಸರಿನಲ್ಲಿ ತಿನಿಸನ್ನು ಕಳುಹಿಸುತ್ತಿದ್ದರು ಅವರು ಕಳುಹಿಸಿದ ತಿನಿಸು ಮಹಾಪ್ರಸಾದವೇ ಆಗಿರುತ್ತಿತ್ತು.

ಆ. ‘ಅವರು ಕಳುಹಿಸಿಕೊಟ್ಟಿರುವ ತಿನಿಸನ್ನೇ ಸಾಧಕರು ಇಷ್ಟಪಟ್ಟು ಸ್ವೀಕರಿಸಬೇಕು ಎಂದು ಅವರಿಗೆ ಅಪೇಕ್ಷೆ ಇಲ್ಲದಿರುವುದರಿಂದ ಅವರು ಸಾಧಕರ ಇಷ್ಟಾನಿಷ್ಟಗಳನ್ನು ವಿಚಾರಿಸಿಕೊಂಡು ಅದರಂತೆ ತಿನಿಸನ್ನು ಕಳುಹಿಸಿಕೊಡುತ್ತಿದ್ದರು.

ಇ. ಯಾವುದಾದರೂ ಸಾಧಕನಿಗೆ ಏನಾದರೂ ಸಮಸ್ಯೆಯಿದ್ದರೆ ಅಥವಾ ಅವನ ಜೀವನದಲ್ಲಿ ಅಥವಾ ಸಾಧನೆಯಲ್ಲೇನಾದರೂ ಅಡಚಣೆಗಳಿದ್ದರೆ, ಅವರು ಅದರ ಬಗ್ಗೆ ಕೇಳುತ್ತಿದ್ದರು. ಬಹಳಷ್ಟು ಸಲ ಪ.ಪೂ. ಡಾಕ್ಟರರು ಕೇವಲ ಆ ಸಾಧಕರ ಹೆಸರನ್ನು ಹೇಳಿದುದರಿಂದ ಅವರ ಸಮಸ್ಯೆಗಳು ಪರಿಹಾರವಾಗಿರುವುದು ಗಮನಕ್ಕೆ ಬಂದಿದೆ.
– ಸೌ. ಡ್ರಗಾನಾ ಕಿಸ್ಲೋವ್ಹಸ್ಕಿ, ಯುರೋಪ್

Leave a Comment