ವಾಸ್ತುಶುದ್ಧಿ ಮತ್ತು ವಾಸ್ತುಶುದ್ಧಿಯ ಕೆಲವು ಪದ್ಧತಿಗಳು

ಅರ್ಥ: ವಾಸ್ತುವಿನ ತೊಂದರೆದಾಯಕ ಸ್ಪಂದನಗಳನ್ನು ನಾಶ ಮಾಡಿ ಒಳ್ಳೆಯ ಸ್ಪಂದನಗಳನ್ನು ನಿರ್ಮಾಣ ಮಾಡುವುದೆಂದರೆ ವಾಸ್ತುಶುದ್ಧಿ.

ವಾಸ್ತುದೋಷ

 ವಾಸ್ತುವಿನ ಅಯೋಗ್ಯ ರಚನೆ, ವಾಸ್ತುವಿನ ಮೇಲೆ ಸತತವಾಗಿ ಆಗುವ ರಜ-ತಮ ಕಣಗಳ ಆಘಾತ, ವಾಸ್ತುವಿನಲ್ಲಿ ರಾಜಸಿಕ-ತಾಮಸಿಕ ಪ್ರವೃತ್ತಿಯ ವ್ಯಕ್ತಿಗಳಿರುವುದರಿಂದ ನಿರ್ಮಾಣವಾಗುವ ತೊಂದರೆದಾಯಕ ಸ್ಪಂದನಗಳು, ಕೆಟ್ಟ ಶಕ್ತಿಗಳ ತೊಂದರೆ ಇತ್ಯಾದಿಗಳಿಂದ ವಾಸ್ತುವಿನ ಮೇಲೆ ಅಯೋಗ್ಯ ಪರಿಣಾಮವಾಗುತ್ತದೆ. ಅದರಿಂದ ವಾಸ್ತುವಿನಲ್ಲಿ ತೊಂದರೆ ದಾಯಕ ಸ್ಪಂದನಗಳು ನಿರ್ಮಾಣವಾಗುತ್ತವೆ, ಅಂದರೆ ವಾಸ್ತುದೋಷವು ನಿರ್ಮಾಣವಾಗುತ್ತದೆ.

ವಾಸ್ತುಶುದ್ಧಿಯ ಅವಶ್ಯಕತೆ

ವಾಸ್ತುದೋಷದಿಂದಾಗಿ ವಾಸ್ತುವಿನಲ್ಲಿರುವವರ ಜೀವನದಲ್ಲಿ ಶಾರೀರಿಕ, ಮಾನಸಿಕ, ಆರ್ಥಿಕ, ಕೌಟುಂಬಿಕ ಹಾಗೂ ಆಧ್ಯಾತ್ಮಿಕ ಅಡಚಣೆಗಳುಂಟಾಗುತ್ತವೆ. ವಾಸ್ತುದೋಷದಿಂದ ಸಾಧಕರ ಸಾಧನೆಯಲ್ಲಿಯೂ ಅಡಚಣೆಗಳು ನಿರ್ಮಾಣವಾಗುತ್ತವೆ.

ವಾಸ್ತುಶುದ್ಧಿಯ ಕೆಲವು ಪದ್ಧತಿಗಳು

ಅ. ವಾಸ್ತುವಿನಲ್ಲಿ ಪ್ರತಿನಿತ್ಯ ಗೋಮೂತ್ರ ಅಥವಾ ವಿಭೂತಿಯ ನೀರನ್ನು (ವಿಭೂತಿಯನ್ನು ಸೇರಿಸಿದ ನೀರು) ಸಿಂಪಡಿಸಬೇಕು ಮತ್ತು ವಿಭೂತಿಯನ್ನು ಊದಬೇಕು.

ಆ. ವಾಸ್ತುವಿನಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ತುಪ್ಪದ ಅಥವಾ ಎಣ್ಣೆಯ ದೀಪ ಮತ್ತು ಊದುಬತ್ತಿಗಳನ್ನು ಹಚ್ಚಬೇಕು, ಹಾಗೆಯೇ ಧೂಪವನ್ನು ಹಾಕಬೇಕು.

ಇ. ದೇವರ ಕೋಣೆಯಲ್ಲಿ (ಮಂಟಪದಲ್ಲಿ) ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿ ಮುಖ ಮಾಡಿ ದೇವತೆಗಳ ಭಾವಚಿತ್ರಗಳನ್ನಿಡಬೇಕು.

ಈ. ಮನೆಯಲ್ಲಿರುವವರೆಲ್ಲರೂ ಒಟ್ಟಿಗೆ ಸೇರಿ ದೇವರಿಗೆ ಪ್ರಾರ್ಥನೆಯನ್ನು ಮಾಡಬೇಕು. ಸ್ವಲ್ಪ ಹೊತ್ತು ನಾಮಜಪ ಮಾಡಬೇಕು, ದೇವತೆಗಳ ಸ್ತೋತ್ರಗಳನ್ನು ಪಠಿಸಬೇಕು.

ಉ. ಗೋಡೆಯ ಮೇಲೆ ದೇವತೆಗಳ ನಾಮಪಟ್ಟಿಗಳ ಮಂಡಲವನ್ನು ಮಾಡಿ ಸೂಕ್ಷ್ಮಛಾವಣಿಯನ್ನು ನಿರ್ಮಿಸಬೇಕು. (ಈ ವಿಷಯದಲ್ಲಿನ ಸವಿಸ್ತಾರವಾದ ಮಾಹಿತಿಯನ್ನು ಈ ಕೊಂಡಿಯಲ್ಲಿ ಕೊಡಲಾಗಿದೆ.)

ಊ. ಮನೆಯಲ್ಲಿರುವವರೆಲ್ಲರೂ ಒಳ್ಳೆಯ ಆಚಾರ-ವಿಚಾರಗಳನ್ನಿಟ್ಟುಕೊಳ್ಳಬೇಕು.

ಎ. ತೀವ್ರ ವಾಸ್ತುದೋಷವಿದ್ದರೆ ವಾಸ್ತುಶಾಂತಿಯನ್ನು ಮಾಡಬೇಕು.

(ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಆಚಾರಧರ್ಮದ ಪ್ರಾಸ್ತಾವಿಕ’)

2 thoughts on “ವಾಸ್ತುಶುದ್ಧಿ ಮತ್ತು ವಾಸ್ತುಶುದ್ಧಿಯ ಕೆಲವು ಪದ್ಧತಿಗಳು”

Leave a Comment