ಕೂದಲನ್ನು ಹಾಗೇ ಬಿಟ್ಟುಕೊಂಡು ಏಕೆ ಹೊರಗೆ ಹೋಗಬಾರದು?

೧. ಕೂದಲನ್ನು ಹಾಗೇ ಬಿಟ್ಟುಕೊಂಡು ಹೊರಗೆ ಹೋದರೆ ಕೆಟ್ಟ ಶಕ್ತಿಗಳಿಗೆ ಜೀವದ ಮೇಲೆ ಕಪ್ಪು ಶಕ್ತಿಯನ್ನು ಬಿಡಲು ಸಾಧ್ಯವಾಗುತ್ತದೆ: ಕೂದಲನ್ನು ತೊಳೆದ ನಂತರ ಅವುಗಳನ್ನು ಒಣಗಿಸಲು ಹಾಗೇ ಬಿಡಬೇಕಾಗುತ್ತದೆ. ಇಂತಹ ಕೂದಲಿನ ಕಡೆಗೆ ಕೆಟ್ಟ ಶಕ್ತಿಗಳು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿತವಾಗುತ್ತವೆ. ಬಿಚ್ಚಿದ ಕೂದಲುಗಳ ಪರಸ್ಪರ ಘರ್ಷಣೆಯಿಂದ ಎರಡು ಕೂದಲುಗಳ ನಡುವೆ ರಜ-ತಮದ ಪ್ರವಾಹೀ ಶಕ್ತಿಯು ನಿರ್ಮಾಣವಾಗುತ್ತದೆ. ಈ ಪ್ರವಾಹೀ ಇಂಧನದ ಸಹಾಯದಿಂದ ಕೆಟ್ಟ ಶಕ್ತಿಗಳಿಗೆ ಜೀವದ ಮೇಲೆ ಕಪ್ಪು ಶಕ್ತಿಯನ್ನು ಬಿಡಲು ಮತ್ತು ಅದನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ. ಕ್ರಮೇಣ ಈ ಕಪ್ಪು ಶಕ್ತಿಯ ಪ್ರಭಾವೀ ಸಂಕ್ರಮಣದಿಂದ ಕೆಟ್ಟ ಶಕ್ತಿಗಳು ಜೀವದ ಶರೀರವನ್ನು ಪ್ರವೇಶಿಸುವ ಸಾಧ್ಯತೆ ಹೆಚ್ಚಿರುತ್ತದೆ.

೨. ಕೂದಲನ್ನು ಹಾಗೇ ಬಿಟ್ಟುಕೊಂಡು ಹೊರಗೆ ಹೋಗಬೇಕಾದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗರೂಕತೆ: ಕೂದಲನ್ನು ಹಾಗೇ ಬಿಟ್ಟುಕೊಂಡು ಹೊರಗೆ ಹೋಗಬೇಕಾದರೆ ಕೂದಲುಗಳಿಗೆ ಗಂಟುಹಾಕಿ ಅಥವಾ ಸಡಿಲವಾಗಿ ಜಡೆ ಹಾಕಿಯೇ ಹೊರಗೆ ಹೋಗಬೇಕು. ಜಡೆಯಿಂದ ಅಥವಾ ಕೂದಲಿಗೆ ಹಾಕಿದ ಗಂಟಿನಿಂದ ಕೆಟ್ಟ ಶಕ್ತಿಗಳು ಬಿಟ್ಟ ಕಪ್ಪು ಲಹರಿಗಳು ಶರೀರದ ಕಡೆಗೆ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸಂಚರಿಸುತ್ತವೆ. ಇದರಿಂದ ಕೆಟ್ಟ ಶಕ್ತಿಗಳಿಂದ ತೊಂದರೆಯಾಗುವ ಸಾಧ್ಯತೆಯೂ ಸಹಜವಾಗಿಯೇ ಕಡಿಮೆಯಾಗುತ್ತದೆ. ಕೂದಲನ್ನು ಹಾಗೇ ಬಿಡುವುದು ಸ್ವೇಚ್ಛಾಚಾರದ ಲಕ್ಷಣವೆಂದು ತಿಳಿಯಲಾಗುತ್ತದೆ.

Leave a Comment