ಮುತ್ತೈದೆ ಸ್ತ್ರೀಯರ ಶ್ರಾದ್ಧವನ್ನು ಪಿತೃಪಕ್ಷದಲ್ಲಿ ನವಮಿಯಂದು ಏಕೆ ಮಾಡಬೇಕು?

ಪತಿಯ ನಿಧನಕ್ಕಿಂತ ಮೊದಲೇ ನಿಧನ ಹೊಂದಿದ ಸ್ತ್ರೀಯರ ಶ್ರಾದ್ಧವನ್ನು ಪಿತೃಪಕ್ಷದಲ್ಲಿ ನವಮಿಯಂದು (ಅವಿಧವಾ ನವಮಿ ಅಥವಾ ಮುತ್ತೈದೆ ನವಮಿಯಂದೇ) ಏಕೆ ಮಾಡಬೇಕು?

‘ನವಮಿಯ ದಿನ ಬ್ರಹ್ಮಾಂಡದಲ್ಲಿ ಪೃಥ್ವಿ ಮತ್ತು ಆಪತತ್ತ್ವಗಳಿಗೆ ಸಂಬಂಧಿಸಿದ ರಜೋಗುಣೀ ಶಿವಲಹರಿಗಳು ಅಧಿಕವಾಗಿರುತ್ತವೆ. ಈ ಲಹರಿಗಳಿಂದಾಗಿ ಶ್ರಾದ್ಧದಿಂದ ಪ್ರಕ್ಷೇಪಿತವಾಗುವ ಮಂತ್ರೋಚ್ಚಾರಯುಕ್ತ ಲಹರಿಗಳನ್ನು ಶಿವರೂಪದಲ್ಲಿ ಗ್ರಹಿಸುವ ಸೂಕ್ಷ್ಮಬಲವು ಆಯಾಯ ಮುತ್ತೈದೆಯರ ಲಿಂಗದೇಹಗಳಿಗೆ ಪ್ರಾಪ್ತವಾಗುತ್ತದೆ. ಈ ದಿನ ಕಾರ್ಯನಿರತವಾಗಿರುವ ಶಿವಲಹರಿಗಳ ಪ್ರವಾಹವು ಆಯಾಯ ಲಿಂಗದೇಹಗಳಿಗೆ ಅವಶ್ಯಕವಿರುವ ಲಹರಿಗಳನ್ನು ಸೆಳೆದುಕೊಳ್ಳಲು ಪೋಷಕ ಮತ್ತು ಪೂರಕವಾಗಿರುತ್ತವೆ. ಈ ದಿನ ಮುತ್ತೈದೆಯರಲ್ಲಿರುವ ಶಕ್ತಿತತ್ತ್ವವು ಸೂಕ್ಷ್ಮಶಿವತತ್ತ್ವದೊಂದಿಗೆ ಬೇಗನೇ ಸಂಯೋಗವಾಗುವುದರಿಂದ ಮುತ್ತೈದೆಯರ (ಅವಿಧವೆಯ) ಲಿಂಗದೇಹವು ಕೂಡಲೇ ಮುಂದಿನ ಗತಿಗೆ ಹೋಗುತ್ತದೆ.

ಈ ದಿನ ಶಿವಲಹರಿಗಳು ಅಧಿಕ ಪ್ರಮಾಣದಲ್ಲಿರುವುದರಿಂದ ಮುತ್ತೈದೆಗೆ ಸೂಕ್ಷ್ಮ ಶಿವತತ್ತ್ವದ ಬಲವು ಪ್ರಾಪ್ತವಾಗಿ ಪೃಥ್ವಿಯ ಮೇಲಿನ ಅವಳ ಪತಿಗೆ ಸಂಬಂಧಿಸಿದ ಆಸಕ್ತಿಯುಕ್ತ ಬಂಧನಗಳು ಕಡಿಮೆಯಾಗಿ ಅವಳು ಪತಿಯ ಬಂಧನದಿಂದ ಮುಕ್ತಳಾಗುತ್ತಾಳೆ. ಆದುದರಿಂದ ಶಕ್ತಿರೂಪಕ್ಕೆ ಸಂಬಂಧಿಸಿದ ಮುತ್ತೈದೆಯ ಶ್ರಾದ್ಧವನ್ನು ಮಹಾಲಯದಲ್ಲಿನ ಶಿವಲಹರಿಗಳ ಬಾಹುಳ್ಯವಿರುವ ನವಮಿಯಂದು ಮಾಡುತ್ತಾರೆ.

– ಓರ್ವ ವಿದ್ವಾಂಸರು (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೧.೮.೨೦೦೬, ಮಧ್ಯಾಹ್ನ ೧೨.೪೦)

(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥಮಾಲಿಕೆ “ಶ್ರಾದ್ಧ”)

Leave a Comment