ವಿಜ್ಞಾನದಲ್ಲಿನ ಪ್ರಯೋಗವು ತಪ್ಪಾಗಬಹುದು; ಆದರೆ ಅಧ್ಯಾತ್ಮದಲ್ಲಿನ ಯಾವುದೇ ಪ್ರಯೋಗ ತಪ್ಪಾಗುವುದಿಲ್ಲ ಅಥವಾ ನಿಷ್ಫಲವಾಗುವುದಿಲ್ಲ

ಅಧ್ಯಾತ್ಮದ ಶ್ರೇಷ್ಠತೆ ಮತ್ತು ವಿಜ್ಞಾನದ ಮಿತಿ

                        ಸದ್ಗುರು (ಸೌ.) ಅಂಜಲಿ ಗಾಡಗೀಳ

ಕಲಿಯುಗದಲ್ಲಿ ಅನೇಕ ಜನರು ವಿವಿಧ ವೈಜ್ಞಾನಿಕ ಪ್ರಯೋಗಗಳನ್ನು ಮಾಡುತ್ತಾರೆ. ಆ ಎಲ್ಲ ಪ್ರಯೋಗಗಳು ಯಶಸ್ವಿಯಾಗುತ್ತವೆ ಎಂದೆನಿಲ್ಲ. ವಿಜ್ಞಾನದಲ್ಲಿನ ಪ್ರಯೋಗವು ತಪ್ಪಾದರೆ ಅದಕ್ಕಾಗಿ ಉಪಯೋಗಿಸಿರುವ ಮನುಷ್ಯಬಲ, ಅರ್ಥಿಕ ವೆಚ್ಚ ಮತ್ತು ಸಮಯ ಈ ಎಲ್ಲ ರೀತಿಯ ಶಕ್ತಿ ವ್ಯರ್ಥವಾಗುತ್ತದೆ ಎಂಬ ಸಂದೇಹವೇ ಇಲ್ಲ. ಅಧ್ಯಾತ್ಮದಲ್ಲಿ ಮಾತ್ರ ಹಾಗೆ ಆಗುವುದಿಲ್ಲ. ಸಾಧಕನು ಈಶ್ವರನಲ್ಲಿ ಸಂಪೂರ್ಣ ಶರಣಾಗತರಾಗಿ ಶ್ರದ್ಧೆ ಮತ್ತು ಭಕ್ತಿಭಾವದಿಂದ ಮಾಡಿರುವ ಕೃತಿ ಅವನ ಅಧ್ಯಾತ್ಮಿಕ ಉನ್ನತಿಗಾಗಿ ಪೂರಕವಾಗಿರುತ್ತದೆ.  ಒಬ್ಬ ರೋಗಿಯ ಆರೋಗ್ಯ ಗಂಭೀರವಾಗಿರುವಾಗ ಅವನು ಗುಣಮುಖನಾಗಲು ಔಷಧೊಪಚಾರಕ್ಕಾಗಿ ತುಂಬಾ ಖರ್ಚು ಮಾಡಲಾಗುತ್ತದೆ. ಡಾಕ್ಟರರೂ ತುಂಬಾ ಪ್ರಯತ್ನಪಡುತ್ತಾರೆ. ಇಷ್ಟೆಲ್ಲ ಮಾಡಿದರೂ ಒಂದು ವೇಳೆ ಅವನು ಮೃತಪಟ್ಟರೆ, ವಿಜ್ಞಾನದ ಆಧಾರದಿಂದ ಮಾಡಿದ ಎಲ್ಲ ಪ್ರಯೋಗವು ವ್ಯರ್ಥವಾಗುವುದು. ಇದರ ವಿರುದ್ಧ ರೋಗಿಯು ಗುಣವಾಗಬೇಕೆಂದು; ಅವನ ಸಹಾಯಕರು, ಬಂಧು-ಬಳಗದವರು ದೇವರ ನಾಮಸ್ಮರಣೆ, ಪೂಜೆ ಪುನಸ್ಕಾರ ಮಾಡಿ; ಆ ವ್ಯಕ್ತಿಯು ಅವನ ಕರ್ಮಕ್ಕನುಸಾರ ಮರಣ ಹೊಂದಿದರೂ, ಅವನಿಗೆ ಅಧ್ಯಾತ್ಮಿಕ ಉಪಾಯದಿಂದ ಲಾಭವಾಗುತ್ತದೆ. ಆ ವ್ಯಕ್ತಿಯ ಅಪ್ತರು, ಸಹಾಯಕರು ಮಾಡಿರುವ ನಾಮಸ್ಮರಣೆ ಮತ್ತು ಪೂಜೆಪುನಸ್ಕಾರ ಇದರಿಂದ ಸಿಗುತ್ತಿರುವ ಅಧ್ಯಾತ್ಮಿಕ ಶಕ್ತಿಯ ಉಪಯೋಗವು ಅವನ ಮೃತ್ಯುವಿನ ನಂತರದ ಪ್ರವಾಸಕ್ಕಾಗಿ ಉಪಯುಕ್ತವಾಗುತ್ತದೆ. ಈ ಶಕ್ತಿಯು ಮೃತ ವ್ಯಕ್ತಿಗೆ ಮುಂದೆ ಒಳ್ಳೆಯ ಗತಿ ದೊರಕಿಸಿಕೊಡುತ್ತದೆ. ಆದುದರಿಂದ ಅಧ್ಯಾತ್ಮದಲ್ಲಿ ಮಾಡಿರುವ ಯಾವದೇ ಪ್ರಯೋಗ ಅಥವಾ ಕೃತಿ ಯಾವತ್ತೂ ವ್ಯರ್ಥವಾಗುವುದಿಲ್ಲ. ಮನುಷ್ಯನಿಗೆ ಅದರ ಲಾಭವೇ ಆಗುವುದು. ಇದರಿಂದ ಅಧ್ಯಾತ್ಮದ ಶ್ರೇಷ್ಠತ್ವ ಮತ್ತು ವಿಜ್ಞಾನದ ಮಿತಿ ಕಂಡುಬರುತ್ತವೆ.

ಸದ್ಗುರು (ಸೌ.) ಅಂಜಲಿ ಗಾಡಗೀಳ, ಅಹಮದನಗರ (೩೦.೮.೨೦೧೭, ಬೆಳಿಗ್ಗೆ ೧೦.೪೫)

Leave a Comment