ಶ್ರಾದ್ಧದಿಂದ ‘೧೦೧ ಕುಲಗಳಿಗೆ ಗತಿ ಸಿಗುತ್ತದೆ’ ಎಂದು ಹೇಳುತ್ತಾರೆ ಇದರ ಅರ್ಥವೇನು ?

‘ಶ್ರಾದ್ಧದಿಂದ ‘೧೦೧ ಕುಲಗಳಿಗೆ ಗತಿ ಸಿಗುವುದು’ ಎಂದರೆ ಮರಣ ಹೊಂದಿರುವ ಜೀವದೊಂದಿಗೆ ಕೊಡುಕೊಳ್ಳುವಿಕೆಯ ಸಂಬಂಧವಿರುವ ಇತರ ಸಜೀವಿಗಳಿಗೂ ಗತಿ ಸಿಗುವುದು !

‘ಕುಲ’ ಈ ಶಬ್ದವನ್ನು ‘ಆಯಾ ಜೀವಗಳ ಜೀವನದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ಕೊಡುಕೊಳ್ಳುವಿಕೆಯ ರೂಪದಲ್ಲಿ ಸಂಪರ್ಕಕ್ಕೆ ಬಂದಿರುವ ಇತರ ಜೀವಿಗಳು’ ಎಂಬ ಅರ್ಥದಲ್ಲಿ ಉಪಯೋಗಿಸಲಾಗಿದೆಯೇ ಹೊರತು ‘ಪೀಳಿಗೆ’ ಎಂಬರ್ಥದಲ್ಲಿ ಉಪಯೋಗಿಸಲಾಗಿಲ್ಲ. ಶ್ರಾದ್ಧಾದಿ ಕರ್ಮಗಳನ್ನು ಮಾಡುವುದರಿಂದ ಆಯಾ ಲಿಂಗದೇಹಗಳ ಮೇಲೆ ಪರಿಣಾಮವಾಗಿ ಅವುಗಳ ಕೋಶಗಳಲ್ಲಿನ ಆಸಕ್ತಿಯುಕ್ತ ರಜತಮ ದಾರಗಳ ವಿಘಟನೆಯಾಗುತ್ತದೆ. ಇದರಿಂದ ಆ ಜೀವಕ್ಕೆ ಗತಿ ಸಿಗುತ್ತದೆ; ಅಲ್ಲದೆ ಅದರೊಂದಿಗೆ ಅನೇಕ ಕಾರಣಗಳಿಂದ ಸಂಪರ್ಕಕ್ಕೆ ಬಂದಿರುವ ಇತರ ಸುಮಾರು ೧೦೧ ಜೀವಗಳೂ ಸಹ ಆಯಾ ಕೊಡುಕೊಳ್ಳುವಿಕೆಯ ಸಂಪರ್ಕದಿಂದ ಮುಕ್ತವಾಗಿ ಸ್ವಲ್ಪಮಟ್ಟಿಗಾದರೂ ಗತಿಯನ್ನು ಪಡೆಯುತ್ತವೆ. ‘ಶ್ರಾದ್ಧವನ್ನು ಮಾಡುವುದರಿಂದ ೧೦೧ ಕುಲಗಳಿಗೆ ಗತಿ ಸಿಗುತ್ತದೆ’, ಅಂದರೆ ಮೃತಪಟ್ಟ ಜೀವ ದೊಂದಿಗೆ ಕೊಡುಕೊಳ್ಳುವಿಕೆಯ ಸಂಬಂಧವಿರುವ ಇತರ ಸಜೀವಿಗಳಿಗೂ ಗತಿಯು ಸಿಗುತ್ತದೆ ಎಂಬುದು ಇದರ ಅರ್ಥವಾಗಿದೆ’. – ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೩.೮.೨೦೦೬, ಮಧ್ಯಾಹ್ನ ೨.೧೩)

(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಮುದ್ರಿಸಿದ ಗ್ರಂಥ ‘ಶ್ರಾದ್ಧ – ೨ ಭಾಗಗಳು’)

 

Leave a Comment