ಆರೋಗ್ಯಕ್ಕಾಗಿ ಪ್ರತಿದಿನ ಬಿಸಿಲಿನ ಉಪಾಯ ಮಾಡಿ ! (ಶರೀರಕ್ಕೆ ಬಿಸಿಲಿನ ಸ್ಪರ್ಶ ಮಾಡಿಸಿ)

ಆಧುನಿಕ ವೈದ್ಯಕೀಯ ಶಾಸ್ತ್ರದಲ್ಲಿ ಇರುವುದೆಲ್ಲವನ್ನು ಆಯುರ್ವೇದದ ಪ್ರಕಾರ ಪರೀಕ್ಷಣೆ ಮಾಡಿ ನಂತರವೇ ಆಚರಣೆಯಲ್ಲಿ ತರುವುದು ಆವಶ್ಯಕ !

‘ಆಯುರ್ವೇದವು ಈಶ್ವರ ನಿರ್ಮಿತ ಪರಿಪೂರ್ಣ ಮತ್ತು ಉನ್ನತ ಶಾಸ್ತ್ರವಾಗಿದೆ. ಈ ಶಾಸ್ತ್ರಕ್ಕೆ ತ್ರಿಕಾಲ ಬಾಧಿತ ಶಾಶ್ವತ ಸಿದ್ಧಾಂತಗಳ ಭದ್ರಬುನಾದಿ ಇದೆ. ಡಾಕ್ಟರರು ವೈದ್ಯಶಾಸ್ತ್ರ (ಅಲೊಪೆಥಿ) ಇದು ಮಾನವನಿರ್ಮಿತ ಮತ್ತು ವಿಕಸನಶೀಲ ಶಾಸ್ರ್ರವಿದೆ. ಈ ಶಾಸ್ತ್ರದಲ್ಲಿ ಪ್ರತಿದಿನ ಹೊಸಹೊಸ ಸಂಶೋಧನೆಗಳು ಆಗುತ್ತಿರುತ್ತವೆ. ಈ ಸಂಶೋಧನೆಯಿಂದಾಗಿ ಶರೀರ ಶಾಸ್ತ್ರದಲ್ಲಿನ ಸಣ್ಣ ಸಣ್ಣ ಅಂಶಗಳನ್ನು ತಿಳಿಯಲು ಸಹಾಯವಾಗುತ್ತದೆ; ಆದರೆ ಅನೇಕಸಲ ಇಂತಹ ಸಂಶೋಧನೆಗಳು ಏಕಮುಖಿ ಇರುತ್ತವೆ. ಸಂಶೋಧನೆಯ ಕೊನೆಯಲ್ಲಿ ‘ಹೀಗೆ ಮಾಡಿದರೆ ಲಾಭವಾಗುತ್ತದೆ, ಎಂಬ ನಿಷ್ಕರ್ಷಕ್ಕೆ ಬಂದನಂತರ ಹಾಗೆ ಮಾಡುವುದರಿಂದ ಏನಾದರೂ ಹಾನಿಯುಂಟಾಗಬಹುದೇ, ಎಂದು ಪರೀಕ್ಷಣೆ ಮಾಡಲಾಗುತ್ತದೆ ಎಂದೇನೂ ಇಲ್ಲ. ಆದ್ದರಿಂದ ಅಲೊಪೆಥಿ ಹೇಳುವುದನ್ನು, ಆಯುರ್ವೇದದ ಸಿದ್ಧಾಂತಕ್ಕನುಸಾರ ಪರೀಕ್ಷಣೆ ಮಾಡಿದ ನಂತರವೇಅದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು.
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೧.೧೦.೨೦೧೮)

ಪ್ರಸ್ತುತ ಬದಲಾದ ಜೀವನಶೈಲಿಯಿಂದಾಗಿ, ವಿಶೇಷವಾಗಿ ಮನೆ ಅಥವಾ ಕಾರ್ಯಾಲಯದಲ್ಲಿ ಕುಳಿತು ಕೆಲಸ ಮಾಡುವ ವ್ಯಕ್ತಿಗಳ ಶರೀರಕ್ಕೆ ಬಿಸಿಲಿನ ಸ್ಪರ್ಶವಾಗುವ ಸಾಧ್ಯತೆ ತುಂಬಾ ಕಡಿಮೆಯಾಗಿದೆ. ಹಾಗಾಗಿ ಯಾರ ಶರೀರಕ್ಕೆ ಬಿಸಿಲಿನ ಸ್ಪರ್ಷವಾಗುವುದಿಲ್ಲ ಅಥವಾ ಅದರ ಪ್ರಮಾಣ ಕಡಿಮೆ ಇದೆ, ಅಂತಹವರು ಬಿಸಿಲಿನ ಉಪಾಯವನ್ನು ಮಾಡಲೇಬೇಕು. (ಶರೀರಕ್ಕೆ ಬಿಸಿಲಿನ ಸ್ಪರ್ಷವಾಗಬೇಕು.)

೧. ಆಯುರ್ವೇದಕ್ಕನುಸಾರ ಶರೀರಕ್ಕೆಬಿಸಿಲಿನ ಸ್ಪರ್ಶವಾಗುವುದರಿಂದಾಗುವ ಲಾಭಗಳು

ಅ. ಸೂರ್ಯದೇವನು ಆರೋಗ್ಯವನ್ನು ನೀಡುತ್ತಾನೆ. ಆದುದರಿಂದಲೇ ‘ಆರೋಗ್ಯಂ ಭಾಸ್ಕರಾತ್ ಇಚ್ಛೇತ್ |’ ಅಂದರೆ ‘ಸೂರ್ಯದೇವನಲ್ಲಿ ಆರೋಗ್ಯ ಕೇಳಬೇಕು,’ ಎಂದು ಹೇಳಲಾಗಿದೆ.

ಆ. ಆಯುರ್ವೇದಕ್ಕನುಸಾರ ಸದ್ಯದ ಕಾಲದಲ್ಲಿ ಕಂಡುಬರುವ ಮಧುಮೇಹ, ಅಧಿಕ ರಕ್ತದೊತ್ತಡ, ಜೀವನಸತ್ತ್ವಗಳ ಕೊರತೆ, ಸ್ಥೂಲಕಾಯ, ಹರಡುವ ಚರ್ಮರೋಗ, ನೆಗಡಿ, ವಿವಿಧ ರೀತಿಯ ಅಲರ್ಜಿ, ಸಂಧಿವಾತ, ದೇಹದಲ್ಲಿ ಬಾವು ಬರುವುದು, ಶರೀರದಲ್ಲಿನ ಹಾರ್ಮೋನ್ಸಗಳ ವಿಕೃತಿಯಿಂದಾಗಿ ಆಗುವ ರೋಗಗಳು, ಉದಾ. ಥೈರಾಯಿಡ್ಸ್‌ಗೆ ಸಂಬಂಧಪಟ್ಟ ರೋಗಗಳು, ಅನ್ನಜೀರ್ಣವಾಗದಿರುವುದು, ಮಲಬದ್ಧತೆ, ಮೂಲವ್ಯಾಧಿ ಮುಂತಾದ ರೋಗಗಳು ದೇಹದೊಳಗಿನ ದೇಹದ ಜಠರಾಗ್ನಿಯ ಮೇಲೆ ಆವರಣ ಬಂದಿರುವುದರಿಂದ ಅಥವಾ ಅದು ಮಂದವಾಗುವುದರಿಂದ ಆಗುತ್ತದೆ. ಶರೀರದ ಮೇಲೆ ಬಿಸಿಲು ತೆಗೆದುಕೊಳ್ಳುವುದರಿಂದ ದೇಹದ ಜಠರಾಗ್ನಿಯ ಮೇಲಿನ ಆವರಣ ದೂರವಾಗಿ ಅಗ್ನಿ ಪ್ರಜ್ವಲಿತಗೊಳ್ಳಲು, ಹಾಗೆಯೇ ಮೇಲಿನ ರೋಗಗಳು ದೂರವಾಗಲು ಸಹಾಯವಾಗುತ್ತದೆ.

ಇ. ಪ್ರತಿದಿನ ಯೋಗ್ಯ ಪ್ರಮಾಣದಲ್ಲಿ ಶರೀರಕ್ಕೆ ಬಿಸಿಲಿನ ಮೇಲೆ ರ್ಸ್ಪವಾಗುವುದರಿಂದ ಶರೀರದಲ್ಲಿ ವೃದ್ಧಿಯಾದ ದೋಷ (ರೋಗಕಾರಕ ದ್ರವ್ಯಗಳು) ದೂರವಾಗಲು ಸಹಾಯವಾಗುತ್ತದೆ.

೨. ಸೂರ್ಯಕಿರಣಗಳ ಗುಣಧರ್ಮ

ಅ. ಸೂರ್ಯಕಿರಣಗಳು ಉಷ್ಣ (ಬಿಸಿ), ತೀಕ್ಷ್ಣ (ತಕ್ಷಣ ಕಾರ್ಯ ಮಾಡುವಂತಹ, ತೀಕ್ಷ್ಣ ಸೂಜಿಯಂತೆ ಒಳ ನುಗ್ಗುವ), ರುಕ್ಷ (ಒಣ, ಶುಷ್ಕವಾದ) ಮತ್ತು ಕಿರು (ಹಗುರ) ಗುಣಧರ್ಮಗಳುಳ್ಳವು ಆಗಿರುತ್ತವೆ.

ಆ. ಎಳೆ ಬಿಸಿಲಿನಲ್ಲಿ ಇದೇ ಗುಣಧರ್ಮಗಳು ಅತ್ಯಂತ ಸೌಮ್ಯವಾಗಿದ್ದರೆ, ಉರಿ ಬಿಸಿಲಿನಲ್ಲಿ ಅಧಿಕ ತೀವ್ರವಾಗಿರುತ್ತವೆ.

ಇ. ಬೇಸಿಗೆಯಲ್ಲಿ ಸೂರ್ಯನು ಪೃಥ್ವಿಯ ಸಮೀಪ ಇರುವುದರಿಂದ ಮಧ್ಯಾಹ್ನದ ಸಮಯದಲ್ಲಿ ಬಿಸಿಲು ತುಂಬಾ ಬಿಸಿ ಇರುತ್ತದೆ. ಚಳಿಗಾಲದಲ್ಲಿ ಸೂರ್ಯನು ಪೃಥ್ವಿಯಿಂದ ದೂರ ಇರುವುದರಿಂದ ಆ ತುಲನೆಯಲ್ಲಿ ಮಧ್ಯಾಹ್ನದ ಸಮಯದಲ್ಲಿ ಬಿಸಿಲು ಕಡಿಮೆ ಬಿಸಿ ಇರುತ್ತದೆ.

ಈ. ಪೃಥ್ವಿಯ ಮಧ್ಯರೇಖೆಯ ಸಮೀಪದ, ಅಂದರೆ ವಿಷುವವೃತ್ತದ ಸಮೀಪದ ಪ್ರದೇಶದಲ್ಲಿ ಬಿಸಿಲು ತುಂಬಾ ಉಷ್ಣವಾಗಿರುತ್ತದೆ. ವಿಷುವವೃತ್ತದಿಂದ ದೂರಕ್ಕೆ ಹೋದಂತೆ, ಬಿಸಿಲಿನ ತೀವ್ರತೆ ಕಡಿಮೆಯಾಗುತ್ತಾ ಹೋಗುತ್ತದೆ.

ಉ. ಆರ್ದ್ರ ಹವಾಮಾನವಿರುವ ಪ್ರದೇಶಗಳಲ್ಲಿ (ಉದಾ. ತೀರ ಪ್ರದೇಶದಲ್ಲಿ) ಗಾಳಿಯಲ್ಲಿನ ಆರ್ದ್ರತೆಯಿಂದಾಗಿ ಬಿಸಿಲಿನ ಕಾವು ಶರೀರಕ್ಕೆ ತಾಗುವುದಿಲ್ಲ, ಅಂದರೆ ಅದು ತುಲನಾತ್ಮಕವಾಗಿ ಕಡಿಮೆ ತೀಕ್ಷ್ಣ ಇರುತ್ತದೆ. ಒಣ ಹವಾಮಾನದಲ್ಲಿ (ಉದಾ. ಗುಲ್ಬರ್ಗಾ, ಬಳ್ಳಾರಿ, ರಾಯಚೂರು) ಆರ್ದ್ರತೆ ಕಡಿಮೆ ಇರುವುದರಿಂದ ಬಿಸಿಲಿನ ತೀಕ್ಷ್ಣತೆ ಹೆಚ್ಚಾಗುತ್ತದೆ ಮತ್ತು ಅದು ಶರೀರಕ್ಕೆ ಚುಚ್ಚುತ್ತದೆ.

೩. ಋತುಗಳಿಗನುಸಾರ ಮೈಗೆ ಬಿಸಿಲುತಗಲಿಸುವುದಕ್ಕೆ ಸಂಬಂಧಿಸಿದ ನಿಯಮಗಳು

ಅ. ದೀಪಾವಳಿಯ ನಂತರ ಚಳಿ ಬೀಳುತ್ತದೆ. ಈ ಅವಧಿಯಲ್ಲಿ ಮಧ್ಯಾಹ್ನದ ವರೆಗೆ ವಾತಾವರಣ ತಂಪಾಗಿರುತ್ತದೆ. ಏನಾದರೂ ಬಿಸಿ ಸೇವಿಸಬೇಕು, ಎಂಬ ಇಚ್ಛೆಯೂ ನಿರ್ಮಾಣವಾಗುತ್ತಿರುತ್ತದೆ. ಇಂತಹ ಸಮಯದಲ್ಲಿ ಮಧ್ಯಾಹ್ನದ ಉರಿ ಬಿಸಿಲನ್ನೂ ಚಳಿ ಹೋಗುವ ತನಕ ಮನಸ್ಸಿಗೆ ಸಮಾಧಾನ ನೀಡುತ್ತಿದ್ದರೆ ಆ ಬಿಸಿಲು ಶರೀರದ ಮೇಲೆ ತೆಗೆದುಕೊಳ್ಳಬೇಕು.

ಆ. ಚಳಿಗಾಲದ ಚಳಿ ಕಡಿಮೆಯಾದ ನಂತರ ತಕ್ಷಣ ವಸಂತಋತುವು ಆರಂಭವಾಗುತ್ತದೆ. ಈ ಕಾಲದಲ್ಲಿ ಶರೀರದಲ್ಲಿ ಕ್ಲೇದ (ತೇವಾಂಶ) ಹೆಚ್ಚಾಗುತ್ತದೆ. ಅದನ್ನು ದೂರಗೊಳಿಸಲು ಸಹಿಸ ಬಹುದಾದಷ್ಟು ಪ್ರಮಾಣದಲ್ಲಿ ಶರೀರದಲ್ಲಿ ತೆಗೆದುಕೊಳ್ಳಬೇಕು.

ಇ. ತೀವ್ರ ಬೇಸಿಗೆಯಲ್ಲಿ, ಅಂದರೆ ಗ್ರೀಷ್ಮ ಋತುವಿನಲ್ಲಿ ಬಿಸಿಲು ಬೇಡವೆನಿಸುತ್ತದೆ. ಇಂತಹ ಸಮಯದಲ್ಲಿ ಬೆಳಗಿನ ಎಳೆ ಬಿಸಿಲನ್ನೇ ಕಾಯಿಸಬೇಕು. ಮಧ್ಯಾಹ್ನದ ಉರಿ ಬಿಸಿಲು ಕಾಯಿಸಬಾರದು. ಇದರಿಂದ ಪಿತ್ತದ ರೋಗವುಂಟಾಗುತ್ತದೆ ಮತ್ತು ಶಕ್ತಿ ಕ್ಷೀಣಿಸುತ್ತದೆ.

ಈ. ಮಳೆಗಾಲದಲ್ಲಿ ಮೋಡ ಕವಿದ ವಾತಾವರಣ ಇರುತ್ತದೆ. ಹೆಚ್ಚು ಮಳೆಯಿಂದಾಗಿ ವಾತಾವರಣದಲ್ಲಿ ತಂಪು ನಿರ್ಮಾಣವಾಗಿರುತ್ತದೆ. ಇಂತಹ ಸಮಯದಲ್ಲಿ ಕೆಲವೊಮ್ಮೆ ನೀಲಿ ಆಕಾಶವಿದ್ದು ಬಿಸಿಲು ಬಿದ್ದರೆ, ಆದನ್ನು ಕೇವಲ ಚಳಿ ಹೋಗಲಾಡಿಸಲೆಂದು ಉಪಯೋಗ ಮಾಡಿಕೊಳ್ಳಬೇಕು. ಈ ದಿನಗಳಲ್ಲಿ ಸೂರ್ಯನು ಪೃಥ್ವಿಯ ಸಮೀಪಕ್ಕೆ ಬರುವುದರಿಂದ ಅದರ ತೀವ್ರತೆ ಅಧಿಕವಿರುತ್ತದೆ. ಆದ್ದರಿಂದ ಹೆಚ್ಚು ಸಮಯ ಬಿಸಿಲಿನಲ್ಲಿ ನಿಲ್ಲಬಾರದು.

ಉ. ಮಳೆಗಾಲ ಮುಗಿದ ನಂತರ ದೀಪಾವಳಿಯ ತನಕದ ಕಾಲ ಶರದ ಋತು ಇರುತ್ತದೆ. ಈ ಅವಧಿಯಲ್ಲಿ ಉಷ್ಣತೆಯು ಆಕಸ್ಮಿಕವಾಗಿ ಹೆಚ್ಚಾಗುತ್ತದೆ; ಆದ್ದರಿಂದ ಇದನ್ನು ‘ಅಕ್ಟೋಬರ್ ಹೀಟ್’ ಎಂದೂ ಕರೆಯುತ್ತಾರೆ. ಈ ಅವಧಿಯಲ್ಲೂ ಉರಿ ಬಿಸಿಲಿನಿಂದ ದೂರ ಇರಬೇಕು.

ಊ. ಯಾವುದೇ ಋತುವಿನಲ್ಲಿ ಬೆಳಗ್ಗೆಯ ಎಳೆ ಬಿಸಿಲು ಅಥವಾ ಸೂರ್ಯಾಸ್ತದ ಸಮಯದ ಸೌಮ್ಯ ಬಿಸಿಲು ಉತ್ತಮವಾಗಿರುತ್ತದೆ.

೪. ಸೂರ್ಯಕಿರಣಗಳಿಗೆ ಸಂಬಂಧಿಸಿದ ಆಧುನಿಕ ವಿಜ್ಞಾನದ ಶಾಸ್ತ್ರದಲ್ಲಿ ಕಂಡುಹಿಡಿದ ಸಂಶೋಧನೆ

ಅ. ಶರೀರದಲ್ಲಿ ‘ಡಿ’ ಜೀವನಸತ್ವ (ವಿಟ್ಯಾಮಿನ್ ಡಿ)ದ ನಿರ್ಮಿತಿಗಾಗಿ ಶರೀರಕ್ಕೆ ಬಿಸಿಲು ತಗಲಿಸುವುದು ಅಗತ್ಯವಿದೆ. ಔಷಧಿಗಳಿಂದ ‘ಡಿ’ ಜೀವನಸತ್ವವನ್ನು ಹೊಟ್ಟೆಗೆ ತೆಗೆದುಕೊಂಡರೂ, ಶರೀರದ ಮೇಲೆ ಬಿಸಿಲು ಬಿದ್ದರೆ ಮಾತ್ರ ಅದರಿಂದ ಲಾಭವಾಗುತ್ತದೆ, ಇಲ್ಲವಾದರೆ ಇಲ್ಲ.

ಆ. ಸೂರ್ಯಕಿರಣಗಳಲ್ಲಿ ಅತಿನೀಲ (ಅಲ್ಟ್ರಾವೈಲೆಟ್) ಕಿರಣಗಳೂ ಇರುತ್ತವೆ. ಅವುಗಳಲ್ಲಿ UVA, UVB ಮತ್ತು UVC ಎಂಬ ವಿಧಗಳಿವೆ.

೧. ಅತಿನೀಲ ಕಿರಣಗಳ ವಿಧಗಳಲ್ಲಿ ಕೇವಲ UVB ಎಂಬ ಲಹರಿಗಳು ಮಾತ್ರ ಶರೀರದಲ್ಲಿ ‘ಡಿ’ ಜೀವನಸತ್ವ (ವಿಟ್ಯಾಮಿನ್ ಡಿ) ಸಿದ್ಧಗೊಳಿಸಲು ಉಪಯುಕ್ತವಾಗಿರುತ್ತವೆ. ಈ ಕಿರಣಗಳ ತರಂಗಗಳ ಉದ್ದ (ವೇವಲೆಂತ್) ೨೮೦ ರಿಂದ ೩೧೫ ನ್ಯಾನೊಮೀಟರ ಇರುತ್ತದೆ. ‘ನ್ಯಾನೊಮೀಟರ’ ಇದು ಸೂಕ್ಷ್ಮಾತಿಸೂಕ್ಷ್ಮ ಉದ್ದ ಅಳೆಯುವ ಒಂದು ಪರಿಮಾಣವಿದೆ.

೨. ಭಾರತದಲ್ಲಿ UVB ಲಹರಿಗಳು ಬೆಳಗ್ಗೆ ೧೧ ರಿಂದ ಮಧ್ಯಾಹ್ನ ೧ ಈ ಸಮಯದ ಬಿಸಿಲಿನಲ್ಲಿ ಇರುತ್ತವೆ.

೩. ಬಿಸಿಲು ನೇರ ತ್ವಚೆಯ ಮೇಲೆ ಬಿದ್ದರೆನೇ, ‘ಡಿ’ ಜೀವನಸತ್ವ ನಿರ್ಮಾಣವಾಗಲು ಸಾಧ್ಯ. ಮೋಡಕವಿದ ವಾತಾವರಣದಲ್ಲಿ ಬಿಸಿಲು ತ್ವಚೆಯೊಂದಿಗೆ ನೇರ ಸಂಪರ್ಕವಾಗುವುದಿಲ್ಲ. ಆದ್ದರಿಂದ ಇಂತಹ ಬಿಸಿಲಿನ ಅಥವಾ ಬಿಸಿಲು ಗಾಜಿನಿಂದ ಬಿದ್ದರೂ ಅದರಿಂದ ‘ಡಿ’ ಜೀವನಸತ್ವಕ್ಕಾಗಿ ಲಾಭವಾಗುವುದಿಲ್ಲ.

೪. UVA, UVB ಮತ್ತು UVC ಈ ಮೂರು ಪ್ರಕಾರದ ಅತಿನೀಲಿ ಕಿರಣಗಳಿಂದಾಗಿ ತ್ವಚೆಯ ಅರ್ಬುದ ರೋಗ ಆಗುವ ಸಾಧ್ಯತೆ ಇರುತ್ತದೆ.

ಇ. ಶರೀರದ ಯಾವ ಭಾಗದ ಮೇಲೆ ನಿತ್ಯ ಜೀವನದಲ್ಲಿ ಸೂರ್ಯಪ್ರಕಾಶ ಬೀಳುತ್ತದೆಯೊ, ಉದಾ. ಕೈ, ಕಾಲು, ಅಂಗಾಲು, ಮುಖ, ಅಲ್ಲಿಯೇ ಪುನಃ ಪುನಃ ಉರಿ ಬಿಸಿಲು ಬಿದ್ದರೆ, ತ್ವಚೆಯ ಅರ್ಬುದ ರೋಗವಾಗುವ ಸಾಧ್ಯತೆ ಅಧಿಕ ಇರುತ್ತದೆ. ಇದಕ್ಕಾಗಿ ಯಾವ ಭಾಗದ ಮೇಲೆ ನಿತ್ಯ ಜೀವನದಲ್ಲಿ ಸೂರ್ಯಪ್ರಕಾಶ ಬೀಳುವುದಿಲ್ಲ (ಉದಾ. ಬೆನ್ನು, ಹೊಟ್ಟೆ ಮತ್ತು ಬಾಹು) ಆ ಭಾಗಗಳ ಮೇಲೆ ಬಿಸಿಲು ತೆಗೆದುಕೊಳ್ಳಬೇಕು.

೫. ಮೈಮೇಲೆ ಬಿಸಿಲು ತೆಗೆದುಕೊಳ್ಳುವ ಕುರಿತು ಗಮನದಲ್ಲಿಡಬೇಕಾದ ಅಂಶಗಳು

ಅ. ಶರೀರ ಆರೋಗ್ಯವಂತವಾಗಿರಲು ಪ್ರತಿದಿನ ಮೈಮೇಲೆ ಬಿಸಿಲು ಬೀಳುವ ಆವಶ್ಯಕತೆ ಇರುವುದರಿಂದ ಯಾರ ಶರೀರದ ಮೇಲೆ ನೇರ ಬಿಸಿಲು ಬೀಳುವುದಿಲ್ಲ, ಅಂತಹವರು ಪ್ರತಿದಿನ ಕನಿಷ್ಟಪಕ್ಷ ೧೫ ರಿಂದ ೨೦ ನಿಮಿಷ ಬಿಸಿಲಿನಲ್ಲಿದ್ದು ಮೈಮೇಲೆ ಬಿಸಿಲು ತೆಗೆದುಕೊಳ್ಳಬೇಕು.

ಆ. ಬಿಸಿಲು ಮೈಮೇಲೆ ತೆಗೆದುಕೊಳ್ಳುವಾಗ ಅದು ಋತುಗನುಸಾರ ಮೈಮೇಲೆ ತೆಗೆದುಕೊಳ್ಳುವ ಸಂಬಂಧಿತ ನಿಯಮಗಳನ್ನು ಪಾಲಿಸಬೇಕು.

ಇ. ತಮಗೆ ಎಷ್ಟು ಸಹಿಸಲು ಸಾಧ್ಯವಿದೆ ಎಂಬುದರ ವಿಚಾರ ಮಾಡಿಯೇ ಬಿಸಿಲು ತೆಗೆದುಕೊಳ್ಳಬೇಕು. ವೈದ್ಯಕೀಯ ಶಾಸ್ತ್ರದ ಸಂಶೋಧನೆ ಇದೆ ಎಂದು ‘ಡಿ’ ಜೀವನಸತ್ವ ಪಡೆಯಲಿಕ್ಕೆ ಋತುಗಳ ನಿಯಮವನ್ನು ತೊರೆದು ಸಹಸಲಾಗದ ಮಧ್ಯಾಹ್ನದ ಉರಿ ಬಿಸಿಲು ತೆಗೆದುಕೊಳ್ಳಬಾರದು. (ಬಿಸಿಲಿನ ಉಪಾಯ ಆರೋಗ್ಯಪ್ರಾಪ್ತಿಗಾಗಿ ಇರುತ್ತವೆ. ‘ಡಿ’ ಜೀವನಸತ್ವ ದೊರಕಿತು; ಆದರೆ ಉರಿ ಬಿಸಿಲಿನಿಂದ ಬೇರೆ ರೋಗ ಆಯಿತು ಎಂಬುದು ಆಗಬಾರದು.)

ಈ. ‘ಡಿ’ ಅಥವಾ ಬೇರೆ ಜೀವನಸತ್ತ್ವಗಳು ಶರೀರದಲ್ಲಿ ಯೋಗ್ಯ ಪ್ರಮಾಣದಲ್ಲಿ ಇಡುವುದಕ್ಕೆ ಶರೀರದಲ್ಲಿನ ಅಗ್ನಿ ಉತ್ತಮವಾಗಿಡುವ ಅವಶ್ಯಕತೆ ಇದೆ. ಅಗ್ನಿ ಉತ್ತಮವಾಗಿದ್ದರೆ, ಯಾವತ್ತೂ ಜೀವನಸತ್ವಗಳ ಕೊರತೆ ಬೀಳುವುದಿಲ್ಲ. ಇದಕ್ಕಾಗಿ ಯಾವತ್ತೂ ಮುಂದಿನ ೩ ನಿಯಮಗಳನ್ನು ಪಾಲಿಸಬೇಕು. ೧. ರಾತ್ರಿ ಬೇಗನೆ ಮಲಗಿ ಬೆಳಗ್ಗೆ ಬೇಗನೆ ಏಳಬೇಕು. ಹಾಗೆಯೇ ಮಧ್ಯಾಹ್ನ ಮಲಗಬಾರದು.

೨. ಹಸಿವಾದ ನಂತರವೇ ಆಹಾರ ತೆಗೆದುಕೊಳ್ಳಬೇಕು. ಹಸಿವು ಇಲ್ಲದಿರುವಾಗ ಸ್ವಲ್ಪವೂ ತಿನ್ನಬಾರದು.

೩. ಬಾಯಾರಿಕೆ ಆದಾಗಲೇ ನೀರು ಕುಡಿಯಬೇಕು. ಬಾಯಾರಿಕೆ ಆಗದಿರುವಾಗ ನೀರು ಕುಡಿಯುವುದನ್ನು ತಪ್ಪಿಸಬೇಕು.

ಉ. ಬಿಸಿಲಿನ ಉಪಾಯ ಮಾಡುವಾಗ ಆಧುನಿಕ ಸಂಶೋಧನೆಯಲ್ಲಿ ಹೇಳಲಾಗಿದೆ ಎಂದು ‘ಬಿಸಿಲಿನಿಂದ ಅರ್ಬುದ ರೋಗವಾಗುತ್ತದೆ, ಎಂಬ ಭಯ ಮನಸ್ಸಿನಲ್ಲಿ ಇಡಬಾರದು. ಶರೀರದಲ್ಲಿನ ಅಗ್ನಿ ಉತ್ತಮವಾಗಿದ್ದರೆ, ಅರ್ಬುದ ರೋಗವಾಗುವುದಿಲ್ಲ. ಅದನ್ನು ಉತ್ತಮವಾಗಿಡಲು ಮೇಲಿನ ಅಂಶಗಳಲ್ಲಿ ಹೇಳಿದಂತೆ ೩ ಪಥ್ಯಗಳನ್ನು ಪಾಲಿಸಬೇಕು.

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೧.೧೦.೨೦೧೮)

Leave a Comment