‘ದೇಜಾ ವು’

‘ದೇಜಾ ವು’ (ಒಂದು ಅನುಭವದ ಭಾಸವಾಗುವುದು)

೧. ‘ದೇಜಾ ವು’ (déjà vu) ಅಂದರೇನು?

ನೀವು ಕೆಲವೊಮ್ಮೆ ಯಾವುದಾದರೂ ಸ್ಥಳಕ್ಕೆ ಜೀವನದಲ್ಲಿ ಮೊದಲನೇ ಬಾರಿ ಹೋಗಿರುತ್ತೀರಿ. ಆದರೂ ನಿಮಗೆ ‘ನಾನಿಲ್ಲಿಗೆ ಹಿಂದೊಮ್ಮೆ ಬಂದಿದ್ದೇನೆ’ ಎಂದೆನಿಸುತ್ತದೆ. ಈ ತರಹದ ಭಾವನೆಗೆ ‘ದೇಜಾ ವು’ ಎನ್ನುತ್ತಾರೆ (ಫ್ರೆಂಚ್ ಭಾಷೆಯಲ್ಲಿ ‘ಮೊದಲೇ ನೋಡಿದ’ ಎಂದರ್ಥ). ಅಂದರೆ ಒಬ್ಬ ವ್ಯಕ್ತಿಗೆ ಅತ್ಯಂತ ಹೊಸ ಪ್ರಸಂಗದಲ್ಲಿಯೂ ಈ ಪ್ರಸಂಗವನ್ನು ಮೊದಲೇ ವೀಕ್ಷಿಸಿದ್ದೇನೆ ಅಥವಾ ಅನುಭವಿಸಿದ್ದೇನೆ ಎಂದೆನಿಸುತ್ತದೆ.

೨. ‘ದೇಜಾ ವು’ನ ಹಿಂದಿನ ಆಧ್ಯಾತ್ಮಿಕ ಕಾರಣಗಳು

ಜನರು ಈ ರೀತಿಯ ಅನುಭವಗಳನ್ನು ಏಕೆ ಪಡೆಯುತ್ತಾರೆ ಮತ್ತು ಅವುಗಳ ಮೂಲ ಕಾರಣವೇನೆಂಬುದನ್ನು ತಿಳಿಯಲು ಆಧ್ಯಾತ್ಮಿಕ ಸಂಶೋಧನೆಯನ್ನು ಮಾಡಿದಾಗ ಮುಂದಿನ ಅಂಶಗಳು ಗಮನಕ್ಕೆ ಬಂದವು.

ಅ. ಶೇ. ೩೦ ರಷ್ಟು ಪ್ರಸಂಗಗಳು – ಮೊದಲು ಘಟಿಸಿದಂತಹ ತದ್ರೂಪ ಅನುಭವಗಳು ಅಥವಾ ಪೂರ್ವಜನ್ಮದ ಅನುಭವಗಳು: ಈಗ ಘಟಿಸುತ್ತಿರುವ ಪ್ರಸಂಗವು ಇದೇ ಜನ್ಮದ ಹಿಂದಿನ ಅನುಭವವೇ ಅಥವಾ ಹಿಂದಿನ ಜನ್ಮದ್ದೇ ಎಂಬುದನ್ನು ಗುರುತಿಸುವುದು.

ಆ. ಶೇ. ೫೦ ರಷ್ಟು ಪ್ರಸಂಗಗಳು – ಶ್ರುತಿಕವೆ ಸಿದ್ಧಾಂತ (Tuning Fork phenomenon): ಯಾವುದೇ ಸಜೀವ ಅಥವಾ ನಿರ್ಜೀವ ವಸ್ತುವಿನ ಮೂಲಕ ಸ್ಪಂದನಗಳು ಸತತವಾಗಿ ಪ್ರಕ್ಷೇಪಿತವಾಗುತ್ತಿರುತ್ತವೆ. ಈ ಸ್ಪಂದನಗಳಿಂದಲೇ ಆ ವಸ್ತುವಿನ ಸುತ್ತಲೂ ವಲಯ ನಿರ್ಮಾಣವಾಗಿರುತ್ತದೆ. ಮನುಷ್ಯನಿಂದ ಹೊರಹೊಮ್ಮುವ ಸ್ಪಂದನಗಳು ಅವನ ಎಲ್ಲ ದೇಹಗಳಿಂದ ಅಂದರೆ ಸ್ಥೂಲದೇಹ, ಮನಸ್ಸು, ಬುದ್ಧಿ ಹಾಗೂ ಅಹಂಗಳಿಂದ ಪ್ರಕ್ಷೇಪಿತವಾಗುತ್ತವೆ. ವ್ಯಕ್ತಿಯು ಧ್ಯಾನ ಮಾಡುತ್ತಿದ್ದರೆ ಅಥವಾ ವಿಚಾರಗಳು ಕೇಂದ್ರೀಕೃತವಾಗಿದ್ದರೆ ಆ ಸ್ಪಂದನಗಳನ್ನು ಗ್ರಹಿಸುವ ಹಾಗೂ ಪ್ರಕ್ಷೇಪಿಸುವ ಕಾರ್ಯವು ಇನ್ನೂ ತೀವ್ರವಾಗಿ ಆಗುತ್ತದೆ.

ವ್ಯಕ್ತಿಯ ಮನಸ್ಸಿನ ಸಂವೇದನೆಗಳು (ಆ ಸ್ಥಳದಲ್ಲಿ ಅಥವಾ ಆ ಪ್ರಸಂಗಕ್ಕೆ ಸಂಬಂಧಿಸಿದಂತೆ) ಜೀವಂತ ವ್ಯಕ್ತಿಗಳ ಮನಸ್ಸಿನ ಸಂವೇದನೆಗಳೊಂದಿಗೆ ಅಥವಾ ಇತರ ಮೃತವ್ಯಕ್ತಿಗಳ (ಸೂಕ್ಷ್ಮದೇಹ) ಸೂಕ್ಷ್ಮಮನಸ್ಸಿನ ಸಂವೇದನೆಗಳೊಂದಿಗೆ ತಾತ್ಕಾಲಿಕವಾಗಿ ಹೊಂದಾಣಿಕೆಯಾಗುತ್ತವೆ. ಇದಕ್ಕೆ ಶ್ರುತಿಕವೆ ಸಿದ್ಧಾಂತ (tuning fork phenomenon) ಎನ್ನುತ್ತಾರೆ. ನಮ್ಮ ಮನಸ್ಸಿನ ಸಂವೇದನೆಗಳು ಎಲ್ಲರ ಮನಸ್ಸಿನ ಸಂವೇದನೆಗಳೊಂದಿಗೆ ಹೊಂದುವುದಿಲ್ಲ. ಯಾವ ರೀತಿ ನಮ್ಮ ಹೆಬ್ಬೆರಳಿನ ಅಚ್ಚು ನೂರು ಮಿಲಿಯನ್ ಜನರ ಪೈಕಿ ಒಬ್ಬರೊಂದಿಗೆ ಹೊಂದಾಣಿಕೆಯಾಗಬಹುದೋ ಇದು ಸಹ ಅದೇರೀತಿಯದ್ದಾಗಿದೆ. ಅಂದರೆ ನಮ್ಮ ಮನಸ್ಸಿನ ಸಂವೇದನೆಗಳು ಜಗತ್ತಿನಲ್ಲಿರುವ ೬.೫ ಬಿಲಿಯನ್ ಜನರ ಪೈಕಿ ೬೫ ಜನರ ಜೊತೆ ಮಾತ್ರ ಹೊಂದಿಕೊಳ್ಳುತ್ತವೆ. ಸೂಕ್ಷ್ಮ ಜಗತ್ತಿನಲ್ಲಿರುವ ಸೂಕ್ಷ್ಮದೇಹಗಳ ಸಂಖ್ಯೆಯು ಹೆಚ್ಚಿರುವುದರಿಂದ ಈ ಸಂಖ್ಯೆಯು ಇನ್ನೂ ಹೆಚ್ಚಿರುತ್ತದೆ. ಈ ಸೂಕ್ಷ್ಮದೇಹಗಳು ಆತ್ಮ ಸಂಬಂಧಿಗಳಲ್ಲ. ಆದರೆ ಆ ಒಂದು ವಿಶಿಷ್ಟ ಪ್ರಸಂಗ ಅಥವಾ ಅನುಭವದಲ್ಲಿ ಅವರ ಮನಸ್ಸಿನ ಸಂವೇದನೆಗಳು ಆ ವ್ಯಕ್ತಿಯ ಮನಸ್ಸಿನ ಸಂವೇದನೆಗಳೊಂದಿಗೆ ಹೊಂದಾಣಿಕೆಯಾಗುತ್ತವೆ. ಆಗ ಆ ವ್ಯಕ್ತಿಗೆ ತಾವು ಆ ಹೊಸ ಪ್ರಸಂಗವನ್ನು ಕೂಡ ‘ಮೊದಲೇ ನೋಡಿದ್ದೇವೆ ಅಥವಾ ಅನುಭವಿಸಿದ್ದೇವೆ’ ಎಂದೆನಿಸುತ್ತದೆ. ಆದರೆ ವಾಸ್ತವದಲ್ಲಿ ಅದು ಬೇರೆ ಯಾರದ್ದೋ ಅನುಭವವಾಗಿರುತ್ತದೆ.

ಇ. ಶೇ. ೨೦ ಪ್ರಸಂಗಗಳು: ಇತರ ಕಾರಣಗಳು

೩. ‘ದೇಜಾ ವು’ನಲ್ಲಿ ಕೆಟ್ಟ ಶಕ್ತಿಗಳ ಹಸ್ತಕ್ಷೇಪ

ಕೆಲವೊಂದು ಸಂದರ್ಭಗಳಲ್ಲಿ ಕೆಲವು ವ್ಯಕ್ತಿಗಳಿಗೆ ಕೆಟ್ಟ ಶಕ್ತಿಗಳ ಮಧ್ಯಮ ಅಥವಾ ತೀವ್ರ ತೊಂದರೆಯಿರುತ್ತದೆ. ಆಗ ಮೇಲಿನ ಲೆಕ್ಕಾಚಾರದಲ್ಲಿ ಬದಲಾವಣೆಯಾಗಬಹುದು. ಜಗತ್ತಿನಲ್ಲಿ ಶೇ. ೧೦೦ ರಷ್ಟು ಜನರು ಪೂರ್ವಜರ ಲಿಂಗದೇಹಗಳ ತೊಂದರೆಗಳಿಗೆ ಒಳಗಾಗಿರುತ್ತಾರೆ. ಅದರಲ್ಲಿನ ಅಂದಾಜು ಮೂರರಲ್ಲಿನ ೨ ಭಾಗದಷ್ಟು ಜನರು ಮಧ್ಯಮ ಅಥವಾ ತೀವ್ರ ಸ್ವರೂಪದ ತೊಂದರೆಗೆ ಒಳಪಟ್ಟಿರುತ್ತಾರೆ.

ಪೂರ್ವಜರ ಲಿಂಗದೇಹಗಳ ತೊಂದರೆಗೆ ಒಳಪಟ್ಟಿರುವ ವ್ಯಕ್ತಿಗಳಿಗೆ ಮೇಲೆ ಉಲ್ಲೇಖಿಸಿದ ಮೂರು ಲಕ್ಷಣಗಳಿಗನುಸಾರ ಸಂಭವಿಸುವ ದೇಜಾವುಗಳಲ್ಲಿ ಶೇ. ೫೦ ರಷ್ಟು ತೊಂದರೆಯು ಕೆಟ್ಟ ಶಕ್ತಿಗಳ ಹಸ್ತಕ್ಷೇಪದಿಂದಲೇ ಆಗಿರುತ್ತದೆ. ಇದರಿಂದ ಪ್ರತಿ ಎರಡು ‘ದೇಜಾ ವು’ ಪ್ರಸಂಗಗಳಲ್ಲಿ ಒಂದು ಪ್ರಸಂಗವು ಕೆಟ್ಟ ಶಕ್ತಿಗಳಿಂದಲೇ ಆಗಿರುತ್ತದೆ. ಕೆಟ್ಟ ಶಕ್ತಿಗಳ ಹೆಚ್ಚಾಗಿ ಜನರನ್ನು ದಾರಿತಪ್ಪಿಸಲು ಈ ರೀತಿ ಮಾಡುತ್ತವೆ.

Leave a Comment