ಎಲ್ಲ ವಾಚಕರಿಗೆ, ಹಿತಚಿಂತಕರಿಗೆ ಮತ್ತು ಧರ್ಮಪ್ರೇಮಿಗಳಿಗೆ ಸವಿನಯ ವಿನಂತಿ !

ಧನತ್ರಯೋದಶಿಯ ನಿಮಿತ್ತ ಧರ್ಮಪ್ರಸಾರದ ಕಾರ್ಯಗಳಲ್ಲಿ ‘ಸತ್ಪಾತ್ರೆ ದಾನ’ ಮಾಡಿ ಶ್ರೀ ಲಕ್ಷ್ಮೀಯ ಕೃಪೆಯನ್ನು ಸಂಪಾದಿಸಿ !

ದೀಪಜ್ಯೋತಿ ನಮೋಸ್ತುತೆ !

ಚಿಕ್ಕಂದಿನಲ್ಲಿ ನಾವೆಲ್ಲರೂ ಸಾಯಂಕಾಲ ದೇವರ ಮುಂದೆ ದೀಪವನ್ನು ಹಚ್ಚಿದಾಗ ‘ಶುಭಂಕರೋತಿ ಕಲ್ಯಾಣಮ್…..’ ಈ ಶ್ಲೋಕವನ್ನು ಹೇಳುತ್ತಿದ್ದೆವು. ಇಂದೂ ಸಾಯಂಕಾಲದ ಸಮಯದಲ್ಲಿ ಯಾವುದೇ ದೀಪವನ್ನು ಹಚ್ಚಿದರೂ ಬಹಳಷ್ಟು ಜನರು ಕೈಗಳನ್ನು ಜೋಡಿಸಿ ನಮಸ್ಕಾರ ಮಾಡುತ್ತಾರೆ.

ಶ್ರೀ ಲಕ್ಷ್ಮೀ ಪೂಜಾವಿಧಿ

ಶ್ರೀ ಮಹಾಲಕ್ಷ್ಮೀಯ ಪ್ರೀತ್ಯರ್ಥವಾಗಿ ನನ್ನ/ನಮ್ಮ ದಾರಿದ್ರ್ಯವು ಪರಿಹಾರವಾಗಬೇಕು ಹಾಗೂ ಯಥೇಚ್ಛ ಲಕ್ಷ್ಮೀ ಪ್ರಾಪ್ತಿ ಮಂಗಳ ಐಶ್ವರ್ಯ, ಕುಲದ ಅಭಿವೃದ್ಧಿ ಸುಖ-ಸಮೃದ್ಧಿ ಇತ್ಯಾದಿ ಫಲಪ್ರಾಪ್ತಿಯಾಗಬೇಕು ಎಂದು ಲಕ್ಷ್ಮೀಪೂಜೆ ಹಾಗೂ ಕುಬೇರ ಪೂಜೆಯನ್ನು ಮಾಡುತ್ತೇನೆ – ಎಂಬ ಸಂಕಲ್ಪ ಮಾಡಿ ಲಕ್ಷ್ಮೀ ದೇವಿಯ ಪೂಜೆಯನ್ನು ಮಾಡಿ.

ದೀಪಾವಳಿ

ದೀಪಾವಳಿ ಎಂಬ ಶಬ್ದವು ದೀಪ + ಆವಳಿ (ಸಾಲು) ಹೀಗೆ ರೂಪುಗೊಂಡಿದೆ. ಇದರ ಅರ್ಥವು ದೀಪಗಳ ಸಾಲು ಎಂದಾಗಿದೆ. ದೀಪಾವಳಿಯಂದು ಎಲ್ಲೆಡೆಗಳಲ್ಲಿ ದೀಪಗಳನ್ನು ಹಚ್ಚುತ್ತಾರೆ.

ಅಭ್ಯಂಗಸ್ನಾನ (ಮಂಗಲ ಸ್ನಾನ)

ಶರೀರಕ್ಕೆ ಎಣ್ಣೆಯನ್ನು ಹಚ್ಚಿ ಅದನ್ನು ತಿಕ್ಕಿ ತ್ವಚೆಯಲ್ಲಿ ಇಂಗಿಸಿ ನಂತರ ಬಿಸಿ ನೀರಿನಿಂದ ಸ್ನಾನ ಮಾಡುವುದೆಂದರೆ ಅಭ್ಯಂಗಸ್ನಾನ.

ಶ್ರೀ ಲಕ್ಷ್ಮೀದೇವಿಗೆ ಮಾಡುವ ಪ್ರಾರ್ಥನೆ

ಹೇ ಲಕ್ಷ್ಮೀ, ನಿನ್ನ ಆಶೀರ್ವಾದದಿಂದ ದೊರೆತ ಧನವನ್ನು ನಾವು ಸತ್ಕಾರ್ಯಕ್ಕಾಗಿ ಉಪಯೋಗಿಸಿ, ತಾಳೆ ಮಾಡಿ ನಿನ್ನ ಮುಂದಿಟ್ಟಿದ್ದೇವೆ. ಮುಂದಿನ ವರ್ಷವೂ ನಮ್ಮ ಕಾರ್ಯ ವ್ಯವಸ್ಥಿತವಾಗಿ ಪೂರ್ಣಗೊಳ್ಳಲಿ.

ಲಕ್ಷ್ಮೀಪೂಜೆ (ಆಶ್ವಯುಜ ಅಮಾವಾಸ್ಯೆ)

ಸಾಮಾನ್ಯವಾಗಿ ಅಮಾವಾಸ್ಯೆಯನ್ನು ಅಶುಭದಿನವೆಂದು ಪರಿಗಣಿಸಲಾಗುತ್ತದೆ; ಆದರೆ ಈ ಅಮಾವಾಸ್ಯೆಯು ಅದಕ್ಕೆ ಅಪವಾದವಾಗಿದೆ. ಆದರೆ ಅದು ಎಲ್ಲ ಕಾರ್ಯಗಳಿಗಲ್ಲ. ಆದುದರಿಂದ ಈ ದಿನವನ್ನು ಶುಭದಿನ ಎನ್ನುವುದಕ್ಕಿಂತ ಆನಂದದ ದಿನ ಎನ್ನುವುದೇ ಯೋಗ್ಯವಾಗಿದೆ.

ಬಲಿಪಾಡ್ಯ (ದೀಪಾವಳಿ ಪಾಡ್ಯ)

ಬಲಿಪಾಡ್ಯ (ದೀಪಾವಳಿ ಪಾಡ್ಯ), ಇದು ಮೂರೂವರೆ ಮುಹೂರ್ತಗಳಲ್ಲಿನ ಅರ್ಧ ಮುಹೂರ್ತವಾಗಿದೆ. ಇದನ್ನು ‘ವಿಕ್ರಮ ಸಂವತ್ಸರ’ ಕಾಲಗಣನೆಯ ವರ್ಷಾರಂಭದ ದಿನವೆಂದು ಆಚರಿಸಲಾಗುತ್ತದೆ.

ನಿಜವಾದ ದೀಪಾವಳಿಯನ್ನು ಹಿಂದೂ ರಾಷ್ಟ್ರದಲ್ಲಿಯೇ ಆಚರಿಸಬಹುದು ! – ಪ.ಪೂ.ಪಾಂಡೆ ಮಹಾರಾಜ

ಹಿಂದೂ ರಾಷ್ಟ್ರದಲ್ಲಿ ಸಮಸ್ತ ನಾಗರಿಕರು ನಿಜವಾದ ಅರ್ಥದಿಂದ ದೀಪಾವಳಿಯನ್ನು ಆಚರಿಸಲು ಯೋಗ್ಯರಾಗುವರು ! ಹಾಗಾಗಿ ಹಿಂದೂಗಳೇ, ಹಿಂದೂ ರಾಷ್ಟ್ರದ ನಿರ್ಮಿತಿಯ ಕಾರ್ಯದಲ್ಲಿ ತನು, ಮನ ಮತ್ತು ಧನಗಳನ್ನು ಅರ್ಪಿಸಿ ಪಾಲ್ಗೊಳ್ಳಿರಿ !