ಪೂಜೆಗಾಗಿ ಹೂವು ಆರಿಸುವ ಬಗ್ಗೆ ಕೆಲವು ಮಹತ್ವಪೂರ್ಣ ಅಂಶಗಳು

ಹೂವಿನ ಮೂಲಕ ದೇವತಾತತ್ತ್ವಗಳ ಮತ್ತು ಪವಿತ್ರಕಗಳ ಪ್ರಕ್ಷೇಪಣೆಯು ಸೂಕ್ಷ್ಮ ಸ್ತರದಲ್ಲಿ ಅಂದರೆ ಆಧ್ಯಾತ್ಮಿಕ ಸ್ತರದಲ್ಲಾಗುವ ಒಂದು ಪ್ರಕ್ರಿಯೆಯಾಗಿದೆ. ಇದರ ಪರಿಣಾಮವು ವಿವಿಧ ಪ್ರಕಾರದಲ್ಲಿ ಆಗುತ್ತದೆ. ಇದರಲ್ಲಿ ಒಂದು, ವಾತಾವರಣದಲ್ಲಿರುವ ರಜ-ತಮ ಪ್ರಧಾನ ತತ್ತ್ವಗಳ ಪ್ರಭಾವ ಕಡಿಮೆಯಾಗುವುದು.

ಶ್ರೀ ಲಕ್ಷ್ಮೀ ಪೂಜಾವಿಧಿ (ಆಶ್ವಯುಜ ಅಮಾವಾಸ್ಯೆ)

ಶ್ರೀ ಮಹಾಲಕ್ಷ್ಮೀಯ ಪ್ರೀತ್ಯರ್ಥವಾಗಿ ನನ್ನ/ನಮ್ಮ ದಾರಿದ್ರ್ಯವು ಪರಿಹಾರವಾಗಬೇಕು ಹಾಗೂ ಯಥೇಚ್ಛ ಲಕ್ಷ್ಮೀ ಪ್ರಾಪ್ತಿ ಮಂಗಳ ಐಶ್ವರ್ಯ, ಕುಲದ ಅಭಿವೃದ್ಧಿ ಸುಖ-ಸಮೃದ್ಧಿ ಇತ್ಯಾದಿ ಫಲಪ್ರಾಪ್ತಿಯಾಗಬೇಕು ಎಂದು ಲಕ್ಷ್ಮೀಪೂಜೆ ಹಾಗೂ ಕುಬೇರ ಪೂಜೆಯನ್ನು ಮಾಡುತ್ತೇನೆ – ಎಂಬ ಸಂಕಲ್ಪ ಮಾಡಿ ಲಕ್ಷ್ಮೀ ದೇವಿಯ ಪೂಜೆಯನ್ನು ಮಾಡಿ.

ದೇವಿಯ ಉಡಿ ತುಂಬುವುದರ ಯೋಗ್ಯ ಪದ್ಧತಿ

ದೇವಿಯ ಪೂಜೆಯನ್ನು, ದೇವಿಗೆ ಉಡಿ ತುಂಬಿಸಿ (ಸೀರೆ ಮತ್ತು ಖಣವನ್ನು (ರವಕೆಯ ಬಟ್ಟೆ) ಅರ್ಪಿಸಿ) ಮುಕ್ತಾಯ ಮಾಡಬೇಕು, ಅಂದರೆ, ನಮ್ಮ ಆಧ್ಯಾತ್ಮಿಕ ಉನ್ನತಿಯಾಗಲು ಮತ್ತು ನಮ್ಮ ಕಲ್ಯಾಣವನ್ನು ಮಾಡಲು ದೇವಿಯ ನಿರ್ಗುಣ ತತ್ತ್ವವನ್ನು ಸಗುಣದಲ್ಲಿ ಬರಲು ಆವಾಹನೆ ಮಾಡುವುದು.

ದೇವಿಮಾತೆಯ ನಿತ್ಯ ಉಪಾಸನೆ ಹೇಗೆ ಮಾಡಬೇಕು?

ಕುಂಕುಮಾರ್ಚನೆಯನ್ನು ಮಾಡುವಾಗ ಪ್ರಥಮವಾಗಿ ದೇವಿಯ ಆವಾಹನೆಯನ್ನು ಮಾಡಿ ಪೂಜಿಸುತ್ತಾರೆ. ನಂತರ ದೇವಿಯ ಹೆಸರನ್ನು ಉಚ್ಚರಿಸುತ್ತಾ ದೇವಿಯ ಮೂರ್ತಿಯ ಮೇಲೆ ಕುಂಕುಮವನ್ನು ಅರ್ಪಿಸುತ್ತಾರೆ.