ಯಷ್ಟಿಮಧು (ಜ್ಯೇಷ್ಠಮಧ, ಅತಿಮಧುರ) ಚೂರ್ಣ

Article also available in :

ಯಷ್ಟಿಮಧು (ಜ್ಯೇಷ್ಠಮಧ, ಅತಿಮಧುರ) ಚೂರ್ಣ

ಅ. ಗುಣಧರ್ಮ ಮತ್ತು ಆಗಬಹದಾದ ಉಪಯೋಗ

ಈ ಔಷಧಿ ತಂಪು ಗುಣಧರ್ಮವನ್ನು ಹೊಂದಿದ್ದು, ಕಣ್ಣು, ಚರ್ಮ, ಕೂದಲು ಮತ್ತು ಗಂಟಲಿಗೆ ಹಿತಕರವಾಗಿದೆ. ರೋಗಗಳಲ್ಲಿನ ಇದರ ಉಪಯೋಗವನ್ನು ಮುಂದೆ ಕೊಡಲಾಗಿದೆ; ಆದರೆ ಪ್ರಕೃತಿ, ಪ್ರದೇಶ, ಋತು ಮತ್ತು ವ್ಯಕ್ತಿಗಿರುವ ಇತರ ರೋಗಗಳಿಗನುಸಾರ ಉಪಚಾರದಲ್ಲಿ ಬದಲಾವಣೆ ಆಗಬಹುದು. ಆದ್ದರಿಂದ ಔಷಧಿಯನ್ನು ವೈದ್ಯರ ಸಲಹೆಗನುಸಾರವೇ ತೆಗೆದುಕೊಳ್ಳಬೇಕು.

ಉಪಯೋಗ ಔಷಧಿಯನ್ನು ಸೇವಿಸುವ ಪದ್ಧತಿ ಅವಧಿ
1. ಫಿಟ್ಸ್ ಬರುವುದು ಬೆಳಗ್ಗೆ ಮತ್ತು ಸಾಯಂಕಾಲ 3 ಗ್ರಾಮ್ (1 ಚಮಚ) ಜ್ಯೇಷ್ಠಮಧ ಚೂರ್ಣವನ್ನು ಅರ್ಧ ಲೋಟ ಬೂದುಗುಂಬಳಕಾಯಿ ರಸದಲ್ಲಿ ತೆಗೆದುಕೊಳ್ಳಬೇಕು. 6 ತಿಂಗಳು
2. ಕೆಮ್ಮು, ಗಂಟಲು ನೋವು, ಗಂಟಲು ಕೆರೆತ, ಧ್ವನಿ ಬೀಳುವುದು, ಗಂಟಲಿನಿಂದ ಕಫ ಹೊರಗೆ ಬೀಳದಿರುವುದು ಮತ್ತು ಬಾಯಿ ಹುಣ್ಣು ಪ್ರತಿದಿನ 4 ಸಲ ಕಾಲು ಚಮಚ ಜ್ಯೇಷ್ಠಮಧ ಚೂರ್ಣ ಅಗಿದು ತಿನ್ನುವುದು. 5 ದಿ
3. ಒಸಡುಗಳಿಂದ ರಕ್ತ ಬರುವುದು ಎರಡು ಸಲದ ಊಟದ ಬಳಿಕ ಕಾಲು ಚಮಚ ಜ್ಯೇಷ್ಠಮಧ ಚೂರ್ಣ ಮತ್ತು 1 ಚಮಚ ಕಪ್ಪು ಎಳ್ಳು ಅಗಿದು ತಿನ್ನಬೇಕು ಮತ್ತು 5 ನಿಮಿಷಗಳ ಬಳಿಕ ಬಾಯಿ ಮುಕ್ಕಳಿಸಬೇಕು. 7 ದಿನ
4. ಪಿತ್ತದಿಂದ ಹೊಟ್ಟೆ ತೊಳೆಸುವುದು, ಅಸ್ವಸ್ಥ ಎನಿಸುವುದು, ತಲೆ ನೋವು ಮತ್ತು ಆಮ್ಲಪಿಪಿತ್ತ ಇವುಗಳು ವಾಂತಿಯ ಮೂಲಕ ಶುದ್ಧಿಯಾಗಲು 4 ಚಮಚ ಜ್ಯೇಷ್ಠಮಧ ಚೂರ್ಣ 2 ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಕುಡಿಯಬೇಕು ಮತ್ತು ಸ್ನಾನಗೃಹದಲ್ಲಿ ಕುಕ್ಕುರುಗಾಲಿನಲ್ಲಿ ಅಥವಾ ಸ್ಟೂಲಿನ ಮೇಲೆ ಕುಳಿತುಕೊಂಡು ವಾಂತಿಯಾಗುವವರೆಗೆ ನಾಲಿಗೆಯ ಮೇಲೆ ಬೆರಳು ತಿಕ್ಕಬೇಕು. ಈ ಉಪಚಾರ ಅತ್ಯಾವಶ್ಯಕವಿದ್ದರೆ 6 ತಿಂಗಳಿಗೊಮ್ಮೆ ಮಾತ್ರ ಮಾಡಬೇಕು. ಬಳಿಕ 2 ದಿನ ಹಗುರವಾದ ಆಹಾರ (ರವೆ ಉಪ್ಪಿಟ್ಟು, ಶಿರಾ, ಮೆತ್ತಗಿನ ಅನ್ನ, ಅನ್ನ ತೊವ್ವೆ, ಹೆಸರು ಬೇಳೆಯ ಕಿಚ್ಚಡಿ) ಸೇವಿಸಬೇಕು. ತಾತ್ಕಾಲಿಕ
5. ಮಲಬದ್ಧತೆ ಎರಡು ಸಲದ ಊಟದ ಮೊದಲು 1 ಚಮಚ ಜ್ಯೇಷ್ಠಮಧ ಚೂರ್ಣ ಮತ್ತು 1 ಚಿಟಿಕೆ ಉಪ್ಪನ್ನು ಉಗುರುಬೆಚ್ಚಗಿನ ನೀರಿನೊಂದಿಗೆ ಸೇವಿಸಬೇಕು. 15 ದಿನ
6. ಮುಖದ ಮೇಲೆ ಮೊಡವೆ ಆಗುವುದು ಜ್ಯೇಷ್ಠಮಧ ಚೂರ್ಣವನ್ನು ಹಾಲಿನಲ್ಲಿ ಕಲಸಿ ಅದರ ಲೇಪವನ್ನು ಹಚ್ಚಿ ಅದು ಒಣಗಿದ ಬಳಿಕ ತೊಳೆಯಬೇಕು. 15 ದಿನ
7. ಉಷ್ಣತೆಯ ರೋಗ (ಉಷ್ಣ ಪದಾರ್ಥಗಳು ಸೇರದಿರುವುದು ಬಾಯಿಯಲ್ಲಿ ಹುಣ್ಣಾಗುವುದು, ಮೈಯಲ್ಲಿ ಉರಿಯಾಗುವುದು, ಮೂತ್ರನಾಳದಲ್ಲಿ ಉರಿ, ಮೈಮೇಲೆ ಗುಳ್ಳೆಗಳಾಗುವುದು, ತಲೆ ಸುತ್ತುವುದು ಇತ್ಯಾದಿ) 2 ಸಲ 1 ಚಮಚ ಜ್ಯೇಷ್ಠಮಧ ಚೂರ್ಣವನ್ನು 1 ಚಮಚ ತುಪ್ಪದಲ್ಲಿ ಸೇವಿಸಬೇಕು. 15 ದಿನ
8. ತೂಕ ಕಡಿಮೆಯಿರುವುದು ಮತ್ತು ಆಯಾಸ ಬೆಳಗ್ಗೆ ಬರಿಹೊಟ್ಟೆಯಲ್ಲಿ ವ್ಯಾಯಾಮ ಮಾಡಿ 30 ನಿಮಿಷಗಳ ಬಳಿಕ 1 ಚಮಚ ಜ್ಯೇಷ್ಠಮಧ ಚೂರ್ಣವನ್ನು 1 ಕಪ್ ಹಾಲು ಮತ್ತು 2 ಚಮಚ ತುಪ್ಪದೊಂದಿಗೆ ಸೇವಿಸಬೇಕು. ನಂತರ 1 ಗಂಟೆ ಏನೂ ತಿನ್ನುವುದು-ಕುಡಿಯುವುದು ಮಾಡಬಾರದು. 3 ತಿಂಗಳು
9. ಜ್ವರ ದಿನದಲ್ಲಿ 2 ಸಲ ಅರ್ಧ ಚಮಚ ಜ್ಯೇಷ್ಠಮಧ ಚೂರ್ಣ, ಅರ್ಧ ಚಮಚ ತುಳಸಿಯ ರಸ, ಅರ್ಧ ಚಮಚ ಹಸಿಶುಂಠಿಯ ರಸ ಮತ್ತು ೧ ಚಮಚ ಜೇನುತುಪ್ಪ ಇವುಗಳ ಮಿಶ್ರಣ ತೆಗೆದುಕೊಳ್ಳಬೇಕು. 3 ರಿಂದ ೫ ದಿನ
10. ಬಾವು ಸಾಕಷ್ಟು ಪ್ರಮಾಣದಲ್ಲಿ ಜ್ಯೇಷ್ಠಮಧ ಚೂರ್ಣ ತೆಗೆದುಕೊಂಡು ಅದರಲ್ಲಿ ಆವಶ್ಯಕತೆಗನುಸಾರ ಉಗುರುಬೆಚ್ಚಗಿನ ನೀರನ್ನು ಸೇರಿಸಿ ದಪ್ಪನೆಯ ಲೇಪ ಮಾಡಬೇಕು. ಒಂದು ಗಂಟೆಯ ಬಳಿಕ ಲೇಪವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. 7 ದಿನ

ಆ. ಸೂಚನೆ

ವೈದ್ಯ ಮೇಘರಾಜ ಮಾಧವ ಪರಾಡಕರ

1. 8 ರಿಂದ 14 ವಯಸ್ಸಿನ ಮಕ್ಕಳು ಹಿರಿಯರ ಅರ್ಧ ಪ್ರಮಾಣದಲ್ಲಿ ಮತ್ತು 3 ರಿಂದ 7 ವಯಸ್ಸಿನ ಮಕ್ಕಳು ಹಿರಿಯರ ಕಾಲು ಪ್ರಮಾಣದಲ್ಲಿ ಔಷಧಿಯ ಚೂರ್ಣವನ್ನು ತೆಗೆದುಕೊಳ್ಳಬೇಕು.

2. ‘ಯಷ್ಟಿಮಧ’ದ ಅತಿಯಾದ ಸೇವನೆಯಿಂದ ವಾಂತಿಯಾಗುತ್ತದೆ, ಆದುದರಿಂದ ಅದನ್ನು ಮಿತವಾಗಿ ನೀಡಿರುವ ಪ್ರಮಾಣದಲ್ಲಿಯೇ ಸೇವಿಸಬೇಕು.

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (11.6.2021)

 

Leave a Comment