ಉಡುಪಿ: ಸನಾತನ ಸಂಸ್ಥೆಯ ವತಿಯಿಂದ ನವೆಂಬರ್ 29ರಂದು ಲೋಕಕಲ್ಯಾಣಾರ್ಥ ನಡೆಯಲಿರುವ ‘ಮಹಾಧನ್ವಂತರಿ ಯಾಗ’ದ ನಿಮಿತ್ತ, ನಗರದ ಎಂ.ಜಿ.ಎಂ (MGM) ಮೈದಾನದಲ್ಲಿ ನವೆಂಬರ್ 15ರಂದು ಶಾಸ್ತ್ರೋಕ್ತವಾಗಿ ಭೂಮಿ ಪೂಜೆ ನೆರವೇರಿತು. ಮೈದಾನದಲ್ಲಿ ಯಾಗದ ಸಿದ್ಧತೆಗಳನ್ನು ಪ್ರಾರಂಭಿಸಲು ಈ ಭೂಮಿ ಪೂಜೆಯ ವಿಧಿವಿಧಾನಗಳನ್ನು ನೆರವೇರಿಸಲಾಯಿತು.


ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಸಂತರಾದ ಪೂಜ್ಯ ರಮಾನಂದ ಗೌಡ, ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಚೇತನ ರಾಜಹಂಸ, ಯಾಗದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ. ಸುರೇಶ್ ಕೊಯ್ಲಾಡಿ, ಮಹಿಳಾ ಮುಖಂಡರಾದ ಸೌ. ತಾರಾ ಯು. ಆಚಾರ್ಯ, ಮಾಜಿ ನಗರ ಸೇವಕರಾದ ಶ್ರೀ. ಮಂಜುನಾಥ್, ನ್ಯಾಯವಾದಿ ಸಂತೋಷ್ ಮೂಡುಬೆಳ್ಳೆ, ಧರ್ಮಪ್ರೇಮಿಗಳಾದ ಶ್ರೀ. ಲಕ್ಷ್ಮೀ ನಾರಾಯಣ ಹೆಗ್ಡೆ ಹಾಗೂ ಸನಾತನ ಸಂಸ್ಥೆಯ ಸಾಧಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಅನೇಕ ಗಣ್ಯರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನವೆಂಬರ್ 29ರಂದು ನಡೆಯಲಿರುವ ಈ ಮಹಾಧನ್ವಂತರಿ ಯಾಗದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಯೋಜಕರು ಕೋರಿದ್ದಾರೆ.
ಕಣ್ಮರೆಯಾಗುತ್ತಿರುವ ವೈದಿಕ ಯಜ್ಞ ಪರಂಪರೆಯ ಪುನರುಜ್ಜೀವನ ಮತ್ತು ‘ಶ್ರೀ ಮಹಾಧನ್ವಂತರಿ ಯಾಗ’!
ರಾವಣನ ವೈಭವೀಕರಣ, ಮೂಲ ‘ರಾಮಾಯಣ’ವನ್ನು ತಿರುಚುವ ಯತ್ನ – ಸನಾತನ ಸಂಸ್ಥೆ
ಶ್ರೀರಾಮನವಮಿಯ ನಿಮಿತ್ತ ‘ರಾಮನಾಮ ಸಂಕೀರ್ತನ’ ಅಭಿಯಾನ ಆಯೋಜಿಸಿ!
ಆನಂದಮಯ ಜೀವನಕ್ಕಾಗಿ ಸನಾತನ ಸಂಸ್ಥೆಯಿಂದ ಕುದೂರಿನಲ್ಲಿ ಸಾರ್ವಜನಿಕ ಸಾಧನಾ ಪ್ರವಚನ !
ಶ್ರದ್ಧಾವಂತ ಸಮಾಜಕ್ಕೆ ಕರೆ
ಆಧ್ಯಾತ್ಮಿಕ ಮಟ್ಟದಲ್ಲಿ ನೇತೃತ್ವ ಕ್ಷಮತೆಯನ್ನು ಹೇಗೆ ವಿಕಸಿತಗೊಳಿಸಬೇಕು ?