ಗುರುಚರಣಗಳಿಗೆ ಹೆಜ್ಜೆಹೆಜ್ಜೆಗೂ ಕೃತಜ್ಞತೆಯನ್ನು ಸಲ್ಲಿಸುವುದೇ ನಿಜವಾದ ಗುರುದಕ್ಷಿಣೆ !

ಪೂ. ಸಂದೀಪ ಆಳಶಿ

೧. ಒಮ್ಮೆ ಕೇರಳದಲ್ಲಿನ ಸನಾತನದ ಸಾಧಕಿ ಶ್ರೀಮತಿ ಕೈಮಲ್ ಇವರು ದಾರಿಯಲ್ಲಿ ನನಗೆ ಭೇಟಿಯಾದರು. ನಾವು ಪರಸ್ಪರ ನಮಸ್ಕಾರ ಮಾಡಿ ಹೊರಟುಹೋದೆವು. ಆ ಕೆಲವೇ ಕ್ಷಣದ ಭೇಟಿಯಲ್ಲಿಯೂ ಅವರ ಭಾವಜಾಗೃತವಾಯಿತು, ಎಂದು ನನಗೆ ಆಮೇಲೆ ತಿಳಿಯಿತು. ನಮ್ಮಿಬ್ಬರ ಹೆಚ್ಚಿನ ಪರಿಚಯವಿಲ್ಲದಿರುವಾಗ ಹಾಗೂ ನಾಮ್ಮ ಭೇಟಿ ಕೆಲವೇ ಕ್ಷಣದ್ದಾಗಿದ್ದರೂ , ಅವರಿಗೆ ಭಾವಜಾಗೃತಿ ಏಕೆ ಆಯಿತು ?; ಸಾಧಕರಿಗೆ ಪ.ಪೂ. ಡಾಕ್ಟರರ ಬಗ್ಗೆ ಅಪಾರವಾದ ಭಾವವಿದೆ ಹಾಗೂ ಗುರುತತ್ತ್ವವು ಸೂಕ್ಷ್ಮದಲ್ಲಿ ಪ್ರತಿಯೊಬ್ಬ ಸಾಧಕರಲ್ಲಿಯೂ ವಾಸವಾಗಿರುತ್ತದೆ. ನನ್ನಲ್ಲಿರುವ ಗುರುತತ್ತ್ವದಿಂದಲೇ ಶ್ರೀಮತಿ ಕೈಮಲ್ ಇವರ ಭಾವ ಜಾಗೃತವಾಯಿತು, ಎಂದು ನನಗೆ ಅನಿಸಿತು. ಗುರುಗಳೇ ನಮ್ಮ ಹೃದಯದಲ್ಲಿದ್ದು ನಮ್ಮನ್ನು ಸಲಹುತ್ತಿರುತ್ತಾರೆ, ‘ಚಾಲೋನಿಯಾ ಹಾತೀ ಧರೋನಿಯಾ, (ಕೈಹಿಡಿದು ನಡೆಸು) ಇದಕ್ಕನುಸಾರ ನಮ್ಮನ್ನು ಸಾಧನೆಯ ಪಥದಲ್ಲಿ ಮುಂದೆ ಮುಂದೆ ಒಯ್ಯುತ್ತಾರೆ ಹಾಗೂ ನಮ್ಮ ಕಲ್ಯಾಣಕ್ಕಾಗಿಯೇ ಎಲ್ಲವನ್ನೂ ಮಾಡುತ್ತಾರೆ. ಹೀಗಿರುವಾಗ ನಾವು ಎಂತಹ ಅಭಿಮಾನವನ್ನು ಇಟ್ಟುಕೊಳ್ಳಲು ಸಾಧ್ಯ ?

೨. ವೇದಧರ್ಮ ಎಂಬ ಹೆಸರಿನ ಓರ್ವ ಗುರುಗಳಿದ್ದರು. ಒಂದು ದಿನ ಅವರು ತಮ್ಮ ಎಲ್ಲ ಶಿಷ್ಯರನ್ನು ಕರೆದು ಹೇಳಿದರು, ನನ್ನ ಪೂರ್ವಜನ್ಮದಲ್ಲಿ ಮಾಡಿದ ಒಂದು ಪಾಪಕರ್ಮವಿದೆ. ಆ ಪಾಪದ ಕ್ಷಾಲನೆಗಾಗಿ ನಾನು ಕಾಶಿಗೆ ಹೋಗಲಿಕ್ಕಿದ್ದೇನೆ. ನೀವು ನನ್ನನ್ನು ಕಾಶಿಗೆ ಕರೆದುಕೊಂಡು ಹೋಗಿರಿ. ನಾನು ನನ್ನ ಆ ಪಾಪವನ್ನು ನನ್ನ ದೇಹದಿಂದ ಭೋಗಿಸುವೆನು, ಮತ್ತೆ ಆ ಸಮಯ ನೀವು ನನ್ನನ್ನು ನೋಡಿಕೊಳ್ಳಬೇಕು. ಆಗ ದೀಪಕ್ ಎಂಬ ಹೆಸರಿನ ಒಬ್ಬ ಶಿಷ್ಯನು ಗುರುಗಳಿಗೆ ಹೇಳಿದನು, ‘ಸ್ವಾಮಿ, ನನಗೆ ಆಜ್ಞೆ ಮಾಡಿರಿ. ನಾನು ಪೂರ್ಣಶಕ್ತಿಯಿಂದ ತಮ್ಮ ಸೇವೆ ಮಾಡುವೆನು. ದೀಪಕನ ವಚನವನ್ನು ಕೇಳಿ ಗುರುಗಳು ಹೇಳಿದರು, ಆ ಪಾಪದಿಂದ ನಾನು ಕುಷ್ಠರೋಗಿಯಾಗಿ ಮೈಯೆಲ್ಲ ಕೊಳೆತು, ಕುರುಡ-ಕುಂಟನಾಗುವೆನು. ೨೧ ವರ್ಷಗಳ ವರೆಗೆ ನನ್ನನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳಬೇಕಾಗುವುದು. ಆಗ ದೀಪಕನು ಆಗಬಹುದು ಎಂದು ಹೇಳಿದನು. ಮುಂದೆ ಕಾಶಿಯಲ್ಲಿ ಗುರುಗಳ ಸಂಪೂರ್ಣ ದೇಹವು ಕುಷ್ಠಮಯವಾಯಿತು. ಆ ಗಾಯಗಳಿಂದ ಕೀವು, ಕ್ರಿಮಿ ಹಾಗೂ ರಕ್ತ ಹರಿಯುತ್ತಿತ್ತು. ಅದರಲ್ಲಿಯೂ ಅವರಿಗೆ ಅಪಸ್ಮಾರದ ಕಾಯಿಲೆಯೂ ಆರಂಭವಾಯಿತು. ದೀಪಕನು ಒಮ್ಮೆ ಭಿಕ್ಷೆ ತಂದಿರುವಾಗ ಗುರುಗಳು ಸಿಟ್ಟಿನಿಂದ ಎಷ್ಟು ಕಡಿಮೆ ಭಿಕ್ಷೆ ತಂದಿದ್ದೀಯ ! ಎಂದು ಗದರಿಸುತ್ತಾ ಭಿಕ್ಷಾನ್ನವನ್ನು ನೆಲಕ್ಕೆ ಎಸೆದರು. ಮರುದಿನ ಶಿಷ್ಯನು ಬಹಳಷ್ಟು ಭಿಕ್ಷಾನ್ನ ತಂದನು. ಆದರೆ ಪಕ್ವಾನ್ನ ಏಕೆ ತರಲಿಲ್ಲ?, ಎಂದು ಹೇಳಿ ಗುರುಗಳು ಕಿಡಿಕಾರುತ್ತಾ ಶಿಷ್ಯನಿಗೆ ಹೊಡೆಯಲು ಮುಂದಾದರು. ಶಿಷ್ಯನು ಗುರುಗಳು ಹೇಳಿದ ಎಲ್ಲ ಪದಾರ್ಥಗಳನ್ನು ತಂದನು; ಆದರೆ ಗುರುಗಳು ಅದನ್ನೆಲ್ಲ ವ್ಯರ್ಥಗೊಳಿಸಿ ಶಿಷ್ಯನಿಗೆ ಬೈದರು. ಅವರು ದೀಪಕನಿಗೆ ಹೀಗೆ ಹೇಳುತ್ತಿದ್ದರು, ‘ಅರೆ ಪಾಪಿ ! ನನ್ನ ಕೀವು, ಮಲ-ಮೂತ್ರಗಳನ್ನು ನೀನು ಪದೇ ಪದೇ ತೊಳೆಯಬೇಕು. ನೀನು ಅದನ್ನೇಕೆ ತೊಳೆಯುವುದಿಲ್ಲ ?. ದೀಪಕನು ಗುರುಗಳನ್ನು ವಿಶ್ವನಾಥನ ರೂಪವೆಂದು ತಿಳಿದು ಗುರುಗಳಿಗಾಗಿ ನಿತ್ಯವೂ ಭಿಕ್ಷೆ ಬೇಡಿ ತಂದು ಭಕ್ತಿಯಿಂದ ಹಾಗೂ ಏಕನಿಷ್ಠೆಯಿಂದ ಅವರ ಸೇವೆ ಮಾಡುತ್ತಾ ಇದ್ದನು. ಅವನ ಈ ಸೇವೆಯಿಂದ ಸಾಕ್ಷಾತ್ ದೇವರೇ ಪ್ರಸನ್ನರಾಗಿ ಅವನಿಗೆ ವರ ಕೇಳಿದರು. ಆಗ ದೀಪಕನು ‘ನನ್ನ ಮನಸ್ಸಿನಲ್ಲಿ ಹೆಚ್ಚೆಚ್ಚು ಗುರುಭಕ್ತಿ ನಿರ್ಮಾಣವಾಗುವ ಹಾಗೆ ವರ ಕೊಡಬೇಕು’ ಎಂದು ದೇವರಿಗೆ ಪ್ರಾರ್ಥನೆ ಮಾಡಿದನು. ದೀಪಕನು ಇಂತಹ ವರ ಬೇಡಿದ್ದನ್ನು ಕೇಳಿ ಗುರುಗಳು ಸಂತೋಷಪಟ್ಟು ಅವರು ದೀಪಕನಿಗೆ ಮನಃಪೂರ್ವಕ ಆಶೀರ್ವಾದ ನೀಡಿದರು. ನಿಜವಾಗಿ , ಶಿಷ್ಯನನ್ನು ಪರೀಕ್ಷಿಸಲು ಗುರುಗಳು ತಮ್ಮ ಲೀಲೆಯಿಂದ ಕುಷ್ಠರೋಗಿಯಾಗಿ ಕಷ್ಟವನ್ನು ಅನುಭವಿಸುತ್ತಿರುವ ಹಾಗೆ ತೋರಿಸುತ್ತಿದ್ದರು. ಅವರು ಶ್ರೇಷ್ಠವಾದ ತಪಸ್ವಿಯಾಗಿದ್ದರು ಹಾಗೂ ಸಂಪೂರ್ಣ ಪಾಪಮುಕ್ತರಾಗಿದ್ದರು.

(ಆಧಾರ : ಸನಾತನದ ಗ್ರಂಥ ‘ಶಿಷ್ಯ)

ಶಿಷ್ಯೋತ್ತಮ ದೀಪಕನ ಹಾಗೆ ನಮ್ಮಲ್ಲಿ ಗುರು ಸೇವೆಯ ಬಗ್ಗೆ ಇಷ್ಟು ಅಪಾರ ಭಾವವಿದೆಯೇ ? ನಾವು ಗುರುಗಳಿಗಾಗಿ ಏನೂ ಮಾಡದೆ ತದ್ವಿರುದ್ದ ಗುರುಗಳೇ ನಮಗಾಗಿ ಎಲ್ಲವನ್ನೂ ಮಾಡುತ್ತಿದ್ದಾರೆ ! ಮಹರ್ಷಿಗಳು ಒಂದು ನಾಡಿವಾಚನದಲ್ಲಿ ಹೇಳಿದ ಹಾಗೆ ಸಾಧಕರ ಮೇಲಾಗುವ ಅನಿಷ್ಟ ಶಕ್ತಿಗಳ ಆಕ್ರಮಣಗಳನ್ನು ಪ.ಪೂ.ಡಾಕ್ಟರರು ಸ್ವತಃ ತಾವು ಅನುಭವಿಸುತ್ತಿದ್ದಾರೆ. ‘ಯೋಗಕ್ಷೇಮಂ ವಹಾಮ್ಯಹಮ್|, ಎಂಬ ವಚನಕ್ಕನುಸಾರ ಪ.ಪೂ.ಡಾಕ್ಟರರೇ ನಮ್ಮನ್ನು ಎಲ್ಲ ರೀತಿಯಿಂದ ಜೋಪಾನ ಮಾಡುತ್ತಿದ್ದಾರೆ. ಸನಾತನದ ಆಶ್ರಮಗಳಲ್ಲಿ ವಾಸಿಸುವ ಸಾಧಕರಿಗೆ ಪವಿತ್ರವಾದ ಆಹಾರದಿಂದ ಹಿಡಿದು ಸುಖದಾಯಕವಾದ ನಿವಾಸ ವ್ಯವಸ್ಥೆಯವರೆಗೆ ಎಲ್ಲ ಸೌಲಭ್ಯಗಳು ಅನಾಯಾಸವಾಗಿ ಪ.ಪೂ.ಡಾಕ್ಟರರ ಕೃಪೆಯಿಂದಲೇ ಲಭಿಸುತ್ತಿದೆ. ಸಾಧಕರ ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಪ.ಪೂ.ಡಾಕ್ಟರರು ವಿವಿಧ ಸಮಷ್ಟಿ ಸೇವೆಗಳನ್ನು ಒದಗಿಸಿ ಕೊಟ್ಟಿದ್ದಾರೆ. ಗ್ರಂಥ ಮತ್ತು ಸನಾತನ ಪ್ರಭಾತಗಳ ಮಾಧ್ಯಮದಿಂದ ಪ.ಪೂ.ಡಾಕ್ಟರರು ಪ್ರತಿದಿನ ಸಾಧನೆಯನ್ನು ಕಲಿಸುತ್ತಿದ್ದಾರೆ. ಪ್ರಸಾರದಲ್ಲಿನ ಹಾಗೂ ಆಶ್ರಮದಲ್ಲಿನ ಸಾಧಕರಿಗೆ ಜವಾಬ್ದಾರ ಸಾಧಕರ ಮೂಲಕ ಪ.ಪೂ.ಡಾಕ್ಟರರೇ ಅತೀ ಪ್ರೇಮದಿಂದ ತಪ್ಪುಗಳನ್ನು ಮತ್ತು ದೋಷಗಳನ್ನು ತೋರಿಸಿ ಅವರಲ್ಲಿನ ಸಾಧಕತ್ವವನ್ನು ಹೆಚ್ಚಿಸುತ್ತಿದ್ದಾರೆ. ಪ.ಪೂ.ಡಾಕ್ಟರರು ಎಲ್ಲ ದೃಷ್ಟಿಯಿಂದಲೂ ಆದರ್ಶವಾಗಿರುವ ಹಿಂದೂ ರಾಷ್ಟ್ರ ಸ್ಥಾಪನೆಯ ಮನೋಹರ ಧ್ಯೇಯವನ್ನು ಸಾಧಕರ ಮುಂದೆ ಇಟ್ಟಿದ್ದಾರೆ. ಗುರುಗಳು ನಮಗಾಗಿ ಇನ್ನು ಏನು ಮಾಡಬೇಕು ? ಈ ವಿಷಯದಲ್ಲಿ ನಮ್ಮಿಂದ ಕ್ಷಣ ಕ್ಷಣಕ್ಕೂ ಕೃತಜ್ಞತಾಭಾವವು ವ್ಯಕ್ತವಾಗುತ್ತಿದೆಯೇ ?

ಪ.ಪೂ.ಡಾಕ್ಟರ್, ನಾವು ಕೇಳದೆಯೇ ನಮ್ಮ ಕಲ್ಯಾಣಕ್ಕಾಗಿ ಏನೆಲ್ಲ ಆವಶ್ಯಕವಿದೆಯೋ, ಅದನ್ನೆಲ್ಲ ತಾವು ನಮಗೆ ನೀಡುತ್ತಿದ್ದೀರಿ. ಹೆಜ್ಜೆಹೆಜ್ಜೆಗೂ ತಮ್ಮ ಚರಣಗಳಲ್ಲಿ ಕೃತಜ್ಞರಾಗಿರಲು ಕೃತಜ್ಞತಾಭಾವ ನಮಗೆ ನೀಡಿರಿ, ಎಂದು ತಮ್ಮ ಚರಣಗಳಲ್ಲಿ ಪ್ರಾರ್ಥಿಸುತ್ತೇವೆ !

– (ಪೂ.) ಶ್ರೀ. ಸಂದೀಪ ಆಳಶಿ

Leave a Comment