ಸನಾತನದ ಸಂತರತ್ನಗಳು (ಭಾಗ – 1)

ಸಾಮಾನ್ಯ ಜನರ ಮತ್ತು ಸಾಧನೆ ಮಾಡದಿರುವ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಶೇ. 20 ರಷ್ಟು ಇರುತ್ತದೆ ಮತ್ತು ದಿನನಿತ್ಯ ದೇವರಪೂಜೆ, ಗ್ರಂಥ ಅಧ್ಯಯನ, ಉಪವಾಸ ಇತ್ಯಾದಿ ಕರ್ಮಕಾಂಡದ ಸಾಧನೆ ಪ್ರತಿನಿತ್ಯ ಮಾಡುವ ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಶೇ.25 ರಿಂದ 30 ರಷ್ಟು ಇರುತ್ತದೆ. ಶೇ. 70 ರಷ್ಟು ಆಧ್ಯಾತ್ಮಿಕ ಮಟ್ಟಕ್ಕೆ ವ್ಯಕ್ತಿಯು ಸಂತಪದವಿಯಲ್ಲಿ ವಿರಾಜಮಾನರಾಗುತ್ತಾರೆ. ಈ ಸಂತರು ಸಮಷ್ಟಿ ಕಲ್ಯಾಣಕ್ಕಾಗಿ ನಾಮಜಪ ಮಾಡಬಹುದು. ಮೃತ್ಯುನಂತರ ಅವರಿಗೆ ಪುರ್ನಜನ್ಮ ಇರುವುದಿಲ್ಲ. ಅವರು ಮುಂದಿನ ಸಾಧನೆಗಾಗಿ ಮತ್ತು ಮನುಕುಲದ ಕಲ್ಯಾಣಕ್ಕಾಗಿ ಸ್ವೇಚ್ಛೆಯಿಂದ ಪೃಥ್ವಿಯ ಮೇಲೆ ಜನ್ಮ ತಾಳಿ ಬರಬಹುದು.
ಇಂದು ಸಮಾಜವು ಧರ್ಮಾಚರಣೆಯಿಂದ ದೂರವಾಗಿರುವುದರಿಂದ ಸಮಾಜದಲ್ಲಿ ರಜ-ತಮಗಳ ಪ್ರಮಾಣ ಹೆಚ್ಚಾಗಿದೆ. ಆದುದರಿಂದ ದುಶ್ಚಟಗಳು, ಅಪರಾಧ, ಭ್ರಷ್ಟಾಚಾರ, ಅನೈತಿಕತೆ ಮುಂತಾದ ಅಸುರಿ ಗುಣಗಳ ಪ್ರಾಬಲ್ಯವೂ ಹೆಚ್ಚಿದೆ. ವಾಯುಮಾಲಿನ್ಯ, ಜಲಮಾಲಿನ್ಯ ಮುಂತಾದವುಗಳಿಗಿಂತಲೂ ಈ ರಜ-ತಮಗಳ ಮಾಲಿನ್ಯ ಹೆಚ್ಚು ಅಪಾಯಕಾರಿಯಾಗಿದೆ. ಸತ್ವ-ಗುಣದ ಪ್ರಾಬಲ್ಯ ಹೆಚ್ಚಿಸುವುದು, ಇಂದೊಂದೇ ರಜ-ತಮಗಳ ಮಾಲಿನ್ಯವನ್ನು ತಡೆಯುವ ಪ್ರಭಾವಶಾಲಿ ಉಪಾಯವಾಗಿದೆ. ಇದೇ ಕಾರ್ಯ ಸಂತರಿಂದ ಪ್ರಕ್ಷೇಪಿತವಾಗುವ ಚೈತನ್ಯದಿಂದಾಗಿ ಸೂಕ್ಷ್ಮದಿಂದ ಆಗುತ್ತಿರುತ್ತದೆ. ‘ಸನಾತನ ಸಂಸ್ಥೆ’ ಹೇಳುತ್ತಿರುವ ಹಿಂದೂ ರಾಷ್ಟ್ರದ (ಈಶ್ವರಿ ರಾಜ್ಯದ) ಸ್ಥಾಪನೆಗಾಗಿ ರಜ-ತಮದ ಪ್ರಾಬಲ್ಯ ಕಡಿಮೆಯಾಗಿ ಸತ್ವಗುಣ ಹೆಚ್ಚುವ ಆವಶ್ಯಕತೆಯಿದೆ. ಸಮಾಜ, ರಾಷ್ಟ್ರ ಮತ್ತು ಧರ್ಮ ಇವುಗಳ ಪ್ರಗತಿಗಾಗಿ ಸದೈವ ಕಾರ್ಯನಿರತವಿದ್ದು ಶಾರೀರಿಕ ಮತ್ತು ಆಧ್ಯಾತ್ಮಿಕ ಈ ಎರಡೂ ಸ್ತರದಗಳಲ್ಲಿ ಸನಾತನದ ಸಂತರು ಈ ಕಾರ್ಯವನ್ನು ಮಾಡುತ್ತಿದ್ದಾರೆ.

ಸನಾತನದ ಸಂತರ ಆಧ್ಯಾತ್ಮಿಕ ವೈಶಿಷ್ಟ್ಯಗಳು

1. ಸಂತರ ಮನೋಲಯ ಆಗಿರುತ್ತದೆ, ಅಂದರೆ ಅವರ ಮನಸ್ಸಿನಲ್ಲಿ ಕೇವಲ ಗುರುಗಳು ಕೊಟ್ಟ ‘ನಾಮ’ದ ಸ್ಮರಣೆ ನಿರಂತರವಾಗಿ ನಡೆದಿರುತ್ತದೆ ಅಥವಾ ಅವರು ನಿರ್ವಿಚಾರ ಅವಸ್ಥೆಯಲ್ಲಿರುತ್ತಾರೆ.

2. ಸಂತರಲ್ಲಿ ಪ್ರೇಮಭಾವ ಮತ್ತು ಸಾಕ್ಷೀಭಾವ ನಿರ್ಮಾಣವಾಗಿರುತ್ತದೆ. ಅದರ ಬಗ್ಗೆ ಸಾಧಕರಿಗೆ ಅನುಭೂತಿ ಬರುತ್ತದೆ.

3. ಅವರ ಸಹವಾಸದಲ್ಲಿದ್ದಾಗ ಉಪಾಯವಾಗುವುದು, ನಾಮಜಪ ತನ್ನಷ್ಟಕ್ಕೆ ಆಗುವುದು, ಮನಸ್ಸು ನಿರ್ವಿಚಾರವಾಗುವುದು, ತುಂಬಾ ಆನಂದವೆನಿಸುವುದು ಮತ್ತು ಶಾಂತ ಅನಿಸುವುದು ಇತ್ಯಾದಿಗಳ ಅನುಭೂತಿ ಬರುತ್ತವೆ.

4. ಅವರ ದೇಹದಿಂದ ಪ್ರಕ್ಷೇಪಿತವಾಗುವ ಚೈತನ್ಯವು ವಾಯುಮಂಡಲವನ್ನು ನಿತ್ಯವೂ ಶುದ್ಧವಾಗಿಡುತ್ತದೆ.

5. ಸಂತರಿಗೆ ಅಹಂ ಅತ್ಯಲ್ಪವಿರುವುದರಿಂದ ‘ದೇವರು ಅಥವಾ ಗುರುಗಳು (ಪ.ಪೂ. ಡಾಕ್ಟರ) ನಮ್ಮ ಮಾಧ್ಯಮದಿಂದ ಎಲ್ಲವನ್ನು ಮಾಡುತ್ತಾರೆ’, ಎಂಬುದನ್ನು ಅವರಿಗೆ ಕ್ಷಣಕ್ಷಣಕ್ಕೆ ಅದರ ಅರಿವಾಗುತ್ತದೆ. ಆದುದರಿಂದ ಅವರಿಗೆ ಅತ್ಯಲ್ಪ ಪ್ರಮಾಣದಲ್ಲಿ ತಮ್ಮ ಅಸ್ತಿತ್ವದ ಅರಿವಿರುತ್ತದೆ.

6. ಸಂತರು ಸತತವಾಗಿ ಶರಣಾಗತ ಭಾವದಲ್ಲಿ ಇರುತ್ತಿರುವುದರಿಂದ ಅವರು ದೀರ್ಘಕಾಲ ಮತ್ತು ಹೆಚ್ಚು ಪರಿಣಾಮಕಾರಕ ಸಮಷ್ಟಿ ಸೇವೆ ಮಾಡಲು ಸಾಧ್ಯವಾಗುತ್ತದೆ.

ಈ ರೀತಿ ಸಂತರು ಸತತವಾಗಿ ಇತರರ ಕಲ್ಯಾಣಕ್ಕಾಗಿ ಶ್ರಮಪಡುತ್ತಿರುತ್ತಾರೆ.

ಸನಾತನದೊಂದಿಗೆ ಏಕರೂಪವಾಗಿರುವ ಸಂತರು !

ಪರಾತ್ಪರ ಗುರು ಪಾಂಡೆ ಮಹಾರಾಜರು

ಪರಾತ್ಪರ ಗುರು ಪಾಂಡೆ ಮಹಾರಾಜರ ಪೂರ್ಣ ಹೆಸರು ಶ್ರೀ. ಪರಶರಾಮ ಮಾಧವರಾವ ಪಾಂಡೆ. ಅವರು ಮಹಾರಾಷ್ಟ್ರದ ನಾಗಪುರ ಜಿಲ್ಲೆಯಲ್ಲಿನ ಲೊಹಾರಿ ಸಾವಂಗಾದವರು. ನಾಗಪುರದ ಪ.ಪೂ. ಬಾಪೂರಾವ್ ಮಹಾರಾಜ ಖಾತಖೇಡಕರ ಇವರು ಅವರಿಗೆ ಗುರುಗಳೆಂದು ಲಭಿಸಿದರು. ಅಕೋಲಾದಲ್ಲಿ ವಾಸಿಸುತ್ತಿದ್ದಾಗ ಅಭಿಯಂತರಾಗಿ (ಇಂಜಿನಿಯರ್) ಕಾರ್ಯನಿರತರಿರುವಾಗಲೇ ಅವರ ನಾಮಸಾಧನೆ ಆರಂಭವಾಯಿತು. ಪರಾತ್ಪರ ಗುರು ಪಾಂಡೆ ಮಹಾರಾಜರಿಗೆ ಓದುವ ಹವ್ಯಾಸ ಇರುವುದರಿಂದ ಅವರು ವೇದ, ಉಪನಿಷತ್ತುಗಳ ಅಧ್ಯಯನ ಮಾಡಿದ್ದಾರೆ. ಅವರ ಮಗನಿಗೆ ಗಣಿತವನ್ನು ಕಲಿಸುವಾಗ ಅವರಿಗೆ 1 ಈ ಅಂಕಿಯಲ್ಲಿ ಶ್ರೀ ಗಣೇಶನ ಶಕ್ತಿಯ ಅರಿವಾಯಿತು. ಆನಂತರ ಅವರು ‘ಶ್ರೀ ಗಣೇಶ ಅಧ್ಯಾತ್ಮ ದರ್ಶನ’ ಎಂಬ ಗ್ರಂಥವನ್ನು ಬರೆದರು. ಡಿಸೆಂಬರ 2004 ರಲ್ಲಿ ಪರಾತ್ಪರ ಗುರು ಪಾಂಡೆ ಮಹಾರಾಜರು ಸನಾತನದ ಸಂಪರ್ಕದಲ್ಲಿ ಬಂದರು. ಸನಾತನದಲ್ಲಿ ಬಂದ ನಂತರ ಅವರು ಅವರ ಜೀವನದಲ್ಲಿ ಗುರುಗಳಿದ್ದರೂ ಸನಾತನದ ಮಾರ್ಗದರ್ಶನಕ್ಕನುಸಾರ ಸಾಧನೆಗೆ ಪ್ರಾರಂಭ ಮಾಡಿದರು. 2005ರಲ್ಲಿ ಪ.ಪೂ. ಡಾಕ್ಟರರ (ಸನಾತನದ ಪರಾತ್ಪರ ಗುರು ಡಾ. ಜಯಂತ ಆಠವಲೆ) ಭೇಟಿ ಪರಾತ್ಪರ ಗುರು ಪಾಂಡೆ ಮಹಾರಾಜರೊಂದಿಗೆ ಆಯಿತು. ಆನಂತರ ಅವರು ಆಶ್ರಮದಲ್ಲಿ ವಾಸಿಸುವ ನಿರ್ಧಾರ ಮಾಡಿ ಸನಾತನದ ದೇವದ ಆಶ್ರಮದಲ್ಲಿ ಇರತೊಡಗಿದರು. ಅವರಲ್ಲಿರುವ ಸಮಷ್ಟಿ ತಳಮಳ ಮತ್ತು ಸಾಧಕರ ಮೇಲಿನ ಪ್ರೀತಿಯಿಂದಾಗಿ ಅವರು ಸನಾತನದ ದೇವದ ಆಶ್ರಮದ ಆಧಾರಸ್ಥಂಭವಾದರು. ಸನಾತನದ ಸಾಧಕರ ಅಧ್ಯಾತ್ಮಿಕ ತೊಂದರೆಗಳು ಕಡಿಮೆ ಆಗುವ ಸಲುವಾಗಿ ಸತತವಾಗಿ ಪ್ರಯತ್ನಿಸುವ ಕರುಣಾಮಯಿ ಸಂತಮೂರ್ತಿ ಎಂದರೆ ಅತಿಶಯೋಕ್ತಿ ಆಗಲಾರದು. ಪರಾತ್ಪರ ಗುರು ಪಾಂಡೆ ಮಹಾರಾಜರು ಮಾಘ ಕೃಷ್ಣ ಪಕ್ಷ ದ್ವಾದಶಿ, ಕಲಿಯುಗ ವರ್ಷ 5120 (3 ಮಾರ್ಚ್, 2019) ರಂದು ದೇಹವನ್ನು ತ್ಯಜಿಸಿದರು.
* ಪರಾತ್ಪರ ಗುರು ಪಾಂಡೆ ಮಹಾರಾಜರ ಜನ್ಮದಿನ : 24.11.1927
* ಪರಾತ್ಪರ ಗುರು ಮಹಾರಾಜರಿಗೆ 1960 ರಲ್ಲಿ ಗುರುಮಂತ್ರ ಸಿಕ್ಕಿತು. ಅಂದಿನಿಂದ ಸಾಧನೆ ಮಾಡತೊಡಗಿದರು.
* ‘1’ ಅಂಕಿಯ ಅನುಭೂತಿ 1976 ರಲ್ಲಿ ಬಂದಿತು.
* ಪರಾತ್ಪರ ಗುರು ಡಾಕ್ಟರರು ಪ್ರಯಾಣದಲ್ಲಿರುವಾಗ ಪ.ಪೂ. ಮಹಾರಾಜರೊಂದಿಗೆ 18.2.2005 ರಂದು ಅಕೋಲಾದಲ್ಲಿ ಭೇಟಿಯಾಯಿತು.
* ಪರಾತ್ಪರ ಗುರು ಡಾಕ್ಟರರ ಕೃಪೆಯಿಂದಾಗಿ ಶ್ರೀ ಗಣೇಶ ಅಧ್ಯಾತ್ಮ ದರ್ಶನ, ಎಂಬ ಗ್ರಂಥಕ್ಕೆ 16.10.2005 ರಂದು ಇಂದೂರದಲ್ಲಿ ಬ್ರಹ್ಮಲೀನ ಸ್ವಾಮಿ ವಿಷ್ಣುತೀರ್ಥ ರಾಷ್ಟ್ರೀಯ ಸ್ತರದ ಪುರಸ್ಕಾರ ಸಿಕ್ಕಿತು.
* 3.1.2007 ರಿಂದ ಅವರು ಸನಾತನ ಆಶ್ರಮ, ದೇವದದಲ್ಲಿರಲು ಬಂದರು.

ಪ.ಪೂ. ರಘುವೀರ (ದಾಸ) ಮಹಾರಾಜರು

ಸನಾತನದ ಕಾರ್ಯವು ಸಂತರ ಆಶಿರ್ವಾದದ ಬಲದಿಂದ ನಡೆಯುತ್ತಿದೆ. ಅನೇಕ ಸಂತರು ವಿವಿಧ ಮಾಧ್ಯಮದಿಂದ ಸನಾತನಕ್ಕೆ ಸಹಾಯ ಮಾಡುತ್ತಿದ್ದಾರೆ. ಅದರಲ್ಲಿನ ಒಬ್ಬ ಸಂತರೆಂದರೆ ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿನ ಪಾನವಳ-ಬಾಂದಾದ ಪ.ಪೂ. ರಘುವೀರ ಮಹಾರಾಜರು.
ಪ.ಪೂ. ರಘುವೀರ ಮಹಾರಾಜರ ಪೂರ್ಣ ಹೆಸರು ಶ್ರೀ. ರಘುವೀರ ಭಗವಾನದಾಸ ನಾಯಿಕ. ಅವರ ಜನ್ಮ ಮಾಘ ಕೃಷ್ಣ ಪಕ್ಷ ಸಪ್ತಮಿ, ಅಂದರೆ 8 ಫೆಬ್ರುವರಿ 1942 ರಂದು ಬೆಳಗಾವಿಯ ಭೀಮಾಪುರವಾಡಿ (ಗಳತಗೆವಾಡಿ) ಎಂಬ ಗ್ರಾಮದಲ್ಲಾಯಿತು. ಪ.ಪೂ. ರಘುವೀರ ಮಹಾರಾಜರು ರಾಮದಾಸಿ ಸಂಪ್ರದಾಯಸ್ಥರಾಗಿದ್ದಾರೆ. ಅವರ ತಂದೆ ಪ.ಪೂ. ಭಗವಾನದಾಸ ಮಹಾರಾಜರು ಮತ್ತು ತಾಯಿ ಇಬ್ಬರೂ ಅಧ್ಯಾತ್ಮಪ್ರವಣವಿದ್ದರು. 16 ನೇ ವರ್ಷದಲ್ಲಿ ಸಜ್ಜನಗಡದ ಮೇಲೆ ಶ್ರೀಧರಸ್ವಾಮಿ ಇವರು ಪ.ಪೂ. ರಘುವೀರ ಮಹಾರಾಜರಿಗೆ ಅನುಗ್ರಹ ನೀಡಿದರು. 1961 ರಲ್ಲಿ ಬಾಂದಾ ದಲ್ಲಿ ಅವರು ರಾಮ, ಲಕ್ಷ್ಮಣ, ಮಾರುತಿ ಮುಂತಾದ ದೇವತೆಗಳ ಮೂರ್ತಿಗಳನ್ನು ತಂದರು. 1962 ರಲ್ಲಿ ಮಹಾರಾಜರು ಬದ್ರಿನಾಥದಲ್ಲಿ 6 ತಿಂಗಳು ವಾಸಿಸಿ ಗಾಯತ್ರಿ ಮಂತ್ರದ ಜಪ ಮಾಡಿದರು. ಬನಾರಸದಲ್ಲಿ ಅವರು ‘ಹನುಮಾನ ಕವಚ ಯಜ್ಞ’ ಮಾಡುವುದಕ್ಕಾಗಿ 3 ತಿಂಗಳು ಜಪ ಮಾಡಿದರು. ಅಲ್ಲಿ ಅವರಿಗೆ ಶ್ರೀ ಹನುಮಂತನ ದರ್ಶನವಾಯಿತು. ಪ.ಪೂ. ರಘುವೀರ ಮಹಾರಾಜರು ವ್ಯಷ್ಟಿ ಸಾಧನೆ ಮಾಡಿ ವ್ಯಷ್ಟಿಯಲ್ಲಿನ ಸಂತರಾಗಿದ್ದರು. ಸನಾತನದ ಸಂಪರ್ಕದಲ್ಲಿ ಬಂದನಂತರ ಅವರು ಕ್ರಮೇಣ ಸಮಷ್ಟಿ ಸಾಧನೆ ಮಾಡತೊಡಗಿದರು. ಮುಂದೆ ಅವರು ತಮ್ಮ ಕ್ಷಮತೆಮೀರಿ ಸಮಷ್ಟಿ ಸಾಧನೆ ಮಾಡತೊಡಗಿದರು. 2007 ರ ಗುರುಪೌರ್ಣಿಮೆಗೆ, ಅಂದರೆ 29.8.2007 ರಂದು ಅವರು ಸಮಷ್ಟಿಯಲ್ಲಿನ ಸಂತರಾದರು.
ಸನಾತನಕ್ಕೆ ಆಗುವ ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆ ಆಗಬೇಕು ಎಂದು ಪ.ಪೂ. ರಘುವೀರ ಮಹಾರಾಜರು ಮತ್ತು ನಿಪ್ಪಾಣಿ-ಭಿಮಾಪುರವಾಡಿಯ ಪ.ಪೂ. ಪಾಗನೀಸ ಮಹಾರಾಜರು ಗೋವಾದಲ್ಲಿನ ಫೊಂಡಾದಲ್ಲಿನ ಸನಾತನದ ಆಶ್ರಮದಲ್ಲಿ ಪ್ರತಿ ಶನಿವಾರ ಒಂದರಂತೆ, ಹೀಗೆ 11 ಶನಿವಾರ ಪಂಚಮುಖಿ ಶ್ರೀ ವೀರ ಹನುಮತ್ಕವಚ ಯಜ್ಞ ಮಾಡಿದರು. ಈ ಯಜ್ಞಗಳಿಂದ ನಿರ್ಮಾಣವಾದ ಸಾತ್ವಿಕತೆಯಿಂದ ಮತ್ತು ಯಜ್ಞದಿಂದ ಸಿದ್ಧವಾದ ವಿಭೂತಿಯ ಉಪಯೋಗದಿಂದ ಸಾಧಕರ ತೊಂದರೆಯು ಸ್ವಲ್ಪಮಟ್ಟಿಗೆ ಕಡಿಮೆಯಾಯಿತು. ಆನಂತರ ಪ.ಪೂ. ರಘುವೀರ ಮಹಾರಾಜರು ಸಂಸ್ಥೆಯ ಸಲುವಾಗಿ ಇದುವರೆಗೆ ವಿವಿಧ ಸ್ಥಳಗಳಲ್ಲಿ 55 ಶ್ರೀ ವೀರ ಹನುಮತ್ಕವಚ ಯಜ್ಞಗಳನ್ನು ಮಾಡಿದ್ದಾರೆ. ಪ.ಪೂ. ರಘುವೀರ ಮಹಾರಾಜರ ಶ್ರದ್ಧೆ ಮತ್ತು ಅವರ ಮಾರ್ಗದರ್ಶನವು ಸನಾತನದ ಸಾಧಕರಿಗೆ ಸತತವಾಗಿ ಚೈತನ್ಯದ ಸ್ತರದಲ್ಲಿ ಪ್ರೇರಣೆ ಮತ್ತು ಸ್ಫೂರ್ತಿ ನೀಡುತ್ತಿದೆ.

ಸನಾತನದ ಸಂತರತ್ನಗಳು

15 ನೇ ಸಂತರಾದ ಪೂ. ರತ್ನಾಕರ ಮರಾಠೆ (ದೇಹತ್ಯಾಗ ಮಾಡಿದ್ದಾರೆ)

ಪಾರ್ಕಿನ್ಸನಂತಹ ಭಯಾನಕ ಕಾಯಿಲೆ ಹಾಗೂ ಮೊಣಕಾಲಿನ ಕಾಯಿಲೆ ಇರುವಾಗಲೂ ಅವರ ಸೇವೆಯ ತಳಮಳ ಯುವಕರಿಗೂ ಹಿಂದೆ ಹಾಕುವಂತಹದು ಇತ್ತು. ಈ ಸ್ಥಿತಿಯಲ್ಲಿಯೂ ಅವರು ವಿದರ್ಭದ (ಮಹಾರಾಷ್ಟ್ರ) 9 ಜಿಲ್ಲೆಗಳಲ್ಲಿ ಸಾಧಕರಿಗೆ ಮಾರ್ಗದರ್ಶನ ನೀಡಲು ಪ್ರಯಾಣ ಮಾಡುತ್ತಿದ್ದರು. ಎಲ್ಲ ಸಾಧಕರ ಶೀಘ್ರ ಪ್ರಗತಿಯಾಗಬೇಕು ಎಂಬುದರ ಕಡೆಗೆ ಅವರ ಗಮನವಿತ್ತು. ಎಲ್ಲ ಸಾಧಕರ ಕುರಿತು ಅವರಿಗೆ ಪ್ರೀತಿ ಅನಿಸುತ್ತಿತ್ತು. ಆದುದರಿಂದ ಸಾಧಕರು ಎಷ್ಟೇ ದೂರದಲ್ಲಿದ್ದರೂ, ಅವರೊಂದಿಗೆ ಸಂಪರ್ಕದಲ್ಲಿರುತ್ತಿದ್ದರು. ಅವರು ಕೃಷ್ಣ ಪಕ್ಷ 2, ಕಲಿಯುಗ ವರ್ಷ 5114 ಅಂದರೆ 8 ಏಪ್ರಿಲ್ 2012 ರಂದು ಸಂತ ಪದವಿಯನ್ನು ತಲುಪಿದರು ಹಾಗೂ ಚೈತ್ರ ಕೃಷ್ಣ ಪಕ್ಷ 3, ಕಲಿಯುಗ ವರ್ಷ 5114 ಅಂದರೆ 9 ಏಪ್ರಿಲ್ 2012 ರಂದು ಅವರು ದೇಹತ್ಯಾಗ ಮಾಡಿದರು.

17 ನೇ ಸಂತರಾದ ಪೂ. ಉಮೇಶ ಶೆಣೈ

ಗುರುಕೃಪಾಯೋಗಕ್ಕನುಸಾರ ಸಾಧನೆ ಮಾಡಿ ಸಂತರಾಗಲು ಸಾಧ್ಯವಿದೆ, ಎಂದು ಸಿದ್ಧಪಡಿಸುವ ಪೂ. ಉಮೇಶ ಶೆಣೈ ಇವರು ಕರ್ನಾಟಕ ರಾಜ್ಯದ ಮೊದಲ ಸಂತರರಾಗಿದ್ದಾರೆ. ಲಭಿಸಿದ ಸೇವೆಯು ಪರಿಪೂರ್ಣವಾಗುವ ತನಕ ನಿರಾಳವಾಗಿ ಕುಳಿತುಕೊಳ್ಳದಿರುವುದು, ಪ್ರತಿಯೊಂದು ಪ್ರಸಂಗದಲ್ಲಿ ಸಕಾರಾತ್ಮಕ ದೃಷ್ಟಿಕೋನ ಇಡುವುದು, ಪರಿಸ್ಥಿತಿಯನ್ನು ದೂರದೇ ಅದನ್ನು ಸ್ವೀಕರಿಸುವುದು, ಇವು ಅವರ ಗುಣಗಳ ವೈಶಿಷ್ಟ್ಯಗಳು. ಸಾಧಕರ ಸಾಧನೆಯ ಬಗ್ಗೆ ಅವರು ತುಂಬಾ ಜಾಗರೂಕರಾಗಿರುತ್ತಾರೆ. ಸಾಧಕರ ಸಾಧನೆಯಲ್ಲಿ ತಡೆಯುಂಟಾಗಬಾರದೆಂದು ಪ್ರಯತ್ನ ಮಾಡುತ್ತಾರೆ. ಸನಾತನವು ಹೇಳಿದ ಸಾಧನೆಯನ್ನು ಪ್ರಾಮಾಣಿಕವಾಗಿ ಮಾಡಿರಿ ಎಂದು ಅವರು ಸಾಧಕರಿಗೆ ಮಾರ್ಗದರ್ಶನದಲ್ಲಿ ಹೇಳುತ್ತಾರೆ. ಅವರಿಗೆ ವೈಶಾಖ ಶುಕ್ಲ ಪಕ್ಷ 6, ಕಲಿಯುಗ ವರ್ಷ 5114 ಅಂದರೆ 27 ಏಪ್ರಿಲ್ 2012 ರಂದು ಸಂತಪದವಿ ಪ್ರಾಪ್ತಿಯಾಯಿತು.

18 ನೇ ಸಂತರಾದ ಪೂ. ಚತ್ತರಸಿಂಗ ಇಂಗಳೆ

ಆಜ್ಞಾಪಾಲನೆ ಮತ್ತು ಪ್ರೇಮಭಾವ ಈ ಗುಣಗಳಿಂದ ಶ್ರೀಗುರುಗಳ ಮನಸ್ಸು ಗೆದ್ದು ದುರ್ಗ (ಛತ್ತೀಸಗಡ)ದ ಶ್ರೀ. ಇಂಗಳೆಕಾಕಾ ಇವರು ಸನಾತನದ 18 ನೇ ಸಂತರಾದರು. ಬೇರೆ ಬೇರೆ ಭಾಗದ ಸಾಧಕರಿಗೆ ಸನಾತನ ಪ್ರಭಾತ ದೈನಿಕದ ಮೂಲಕ ಪ್ರತಿದಿನ ಮತ್ತು ವಾರಕ್ಕೊಮ್ಮೆ ಸತ್ಸಂಗಗಳಿಂದ ಮಾರ್ಗದರ್ಶನ ದೊರಕುತ್ತದೆ. ಛತ್ತೀಸಗಡ ರಾಜ್ಯದಲ್ಲಿ ಇವುಗಳ ಪೈಕಿ ಯಾವುದೂ ದೊರಕದೇ ಒಂದೆರಡು ತಿಂಗಳಿಗೊಮ್ಮೆ ಸ್ವಲ್ಪ ಮಟ್ಟಿಗೆ ದೊರಕುವ ಮಾರ್ಗದರ್ಶನದ ಆಧಾರದಲ್ಲಿ ಅವರು ಸಂತಪದವಿಯನ್ನು ಸಾಧ್ಯಮಾಡಿದರು. ಧರ್ಮಪ್ರಸಾರ ಮತ್ತು ಅಧ್ಯಾತ್ಮಪ್ರಸಾರ ಇವುಗಳ ತಳಮಳ, ಹಾಗೂ ಶ್ರೀಗುರುಗಳ ಮೇಲಿನ ಅತೀವವಾದ ಶ್ರದ್ಧೆ ಇರುವ ಇಂಗಳೆ ಕಾಕಾ ಇವರು ವೈಶಾಖ ಶುಕ್ಲ ಪಕ್ಷ ನವಮಿ, ಕಲಿಯುಗ ವರ್ಷ 5114 ಅಂದರೆ 30 ಏಪ್ರಿಲ್ 2012 ರಂದು ಸಂತಪದವಿಯಲ್ಲಿ ವಿರಾಜಮಾನರಾದರು.

25 ನೇ ಸಂತರಾದ ಪೂ. ಪೃಥ್ವಿರಾಜ ಹಜಾರೆ

ಎಂಟು ವರ್ಷಗಳ ಕಾಲ ಅತ್ಯಂತ ಕಠಿಣ ಸಮಯದಲ್ಲಿ ‘ಸನಾತನ ಪ್ರಭಾತ’ ನಿಯತ್ಕಾಲಿಕೆಗಳ ಸಮೂಹ ಸಂಪಾದಕರೆಂದು ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿರುವ ಶ್ರೀ. ಪೃಥ್ವಿರಾಜ ಹಜಾರೆ ಇವರು ‘ಗುರುಪೂರ್ಣಿಮೆ ಮಹೋತ್ಸವ 2012’ ರಂದು ಸಂತಪದವಿಗೆ ತಲುಪಿದರು. ರಾಷ್ಟ್ರ ಮತ್ತು ಧರ್ಮ ಇವುಗಳ ಮೇಲಿನ ಪ್ರೀತಿಯಿಂದಾಗಿ ಅವರು ನಾಲ್ಕು ಬಾರಿ ಬಂಧನಕ್ಕೊಳಗಾದರು. ಸರಳ ಸ್ವಭಾವ ಮತ್ತು ಸಮಯದ ಪಾಲನೆ ಮಾಡುವುದು ಇವು ಅವರಲ್ಲಿನ ಜನ್ಮಜಾತ ಗುಣಗಳಾಗಿವೆ. ಸತತವಾಗಿ ಜಿಗಟುತನದಿಂದ ಹಗಲು ರಾತ್ರಿ ಸೇವೆ ಮಾಡುವುದು ಇವು ಅವರ ಸ್ಥಿರಭಾವಗಳಿವೆ. ಸನಾತನದ ಮೇಲೆ ಬಂದೆರಗಿರುವ ಸಂಭಾವ್ಯ ನಿರ್ಬಂಧದ ಕಾಲದಲ್ಲಿ ಮತ್ತು ಅವರಿಗಾದ ನಾಲ್ಕು ಬಾರಿ ಬಂಧನದ ಸಮಯದಲ್ಲಿಯೂ ಅವರು ಸ್ಥಿರವಾಗಿದ್ದರು.

27 ನೇ ಸಂತರಾದ ಪೂ. (ಡಾ.) ವಸಂತ ಆಠವಲೆ (ದೇಹತ್ಯಾಗ ಮಾಡಿದ್ದಾರೆ)

ಉಚ್ಚವಿದ್ಯಾವಿಭೂಷಿತರಾದ ಪ್ರಖ್ಯಾತ ಬಾಲರೋಗತಜ್ಞರಾದ ಡಾ. ವಸಂತ ಆಠವಲೆ (ವಯಸ್ಸು 80 ವರ್ಷ)ಯವರು ಅಪ್ಪಾಕಾಕಾ ಎಂದು ಎಲ್ಲರಿಗೂ ಪರಿಚಿತರು. ಇವರು ಸನಾತನ ಸಂಸ್ಥೆಯ ಪ್ರೇರಣೆಯ ಸ್ಥಾನರಾದ ಪ.ಪೂ. ಡಾ. ಜಯಂತ ಆಠವಲೆಯವರ ಹಿರಿಯ ಸಹೋದರ. ಅವರು ಗ್ರಂಥ ಲೇಖನದ ಸೇವೆ ಮಾಡುತ್ತಿದ್ದರು. ಅಧ್ಯಯನವೃತ್ತಿ ಮತ್ತು ಸೇವೆಯ ಜಿಗುಟುತನ ಇವು ಅವರಲ್ಲಿನ ವೈಶಿಷ್ಟ್ಯಗಳು. ಸೇವೆ ಮಾಡುವಾಗ ಕತೃತ್ವವನ್ನು ತಮ್ಮಕಡೆ ತೆಗೆದುಕೊಳ್ಳದಿರುವುದು, ನಮ್ರತೆ, ತತ್ಪರತೆ, ಸೇವೆಯನ್ನು ಪರಿಪೂರ್ಣ ಮಾಡುವುದು, ಮಧುರಭಾಷಿಗಳು ಹೀಗೆ ಅವರ ವ್ಯಕ್ತಿಮತ್ವದ ಅನೇಕ ಅಂಶಗಳು. ಮಾರ್ಗಶೀರ್ಷ ಶುಕ್ಲ ಪಕ್ಷ ಚತುರ್ಥಿ, ಕಲಿಯುಗ ವರ್ಷ 5114 (16.12.2012) ರಂದು ಅವರು ಸಂತಪದವಿಯಲ್ಲಿ ವಿರಾಜಮಾನರಾದರು. ಕಾರ್ತಿಕ ಶುಕ್ಲ ಸಪ್ತಮಿ, ಕಲಿಯುಗ 5115 ಅಂದರೆ 9 ನವೆಂಬರ 2013 ರಂದು ಅವರು ದೇಹತ್ಯಾಗ ಮಾಡಿದರು.

32 ನೇ ಸಂತರಾದ ಪೂ. (ಕು.) ಸೌರಭ ಜೋಶಿ

ಕು. ಸೌರಭ ಜೋಶಿ ವಿಕಲಾಂಗರಿದ್ದೂ ಶ್ರಾವಣ ಕೃಷ್ಣ ಪಕ್ಷ ದಶಮಿ (31.8.2013) ರಂದು ಸನಾತನದ 32 ನೇ ಸಂತರೆಂದು ವಿರಾಜಮಾನರಾದರು. ಸೌರಭ ಇವರಿಗೆ ಯಾವುದೇ ಸ್ವಂತ ಕಾರ್ಯವನ್ನು ಮಾಡಲು ಬರುವುದಿಲ್ಲ. ಅವರಿಗೆ ಮಗ್ಗಲು ಬದಲಿಸಲೂ ಬರುವುದಿಲ್ಲ. ಹುಟ್ಟಿದಾಗಿನಿಂದಲೂ ಒಂದೇ ಸ್ಥಿತಿಯಲ್ಲಿ ಮಲಗಿದ್ದರಿಂದ ಅವರಿಗೆ ಸಹಿಸಲಾರದ ವೇದನೆಗಳಾಗುತ್ತವೆ. ಹೀಗಿದ್ದರೂ ಅವರು ಸತತ ಆನಂದದಲ್ಲಿರುತ್ತಾರೆ. ಶಾರೀರಿಕ ಮತ್ತು ಮಾನಸಿಕ ದೃಷ್ಟಿಯಲ್ಲಿ ವಿಕಲಾಂಗ ಅವಸ್ಥೆಯಲ್ಲಿಯೂ ಅಂತರ್ಮನಸ್ಸಿನಿಂದ ಸಾಧನೆ ಮಾಡಿ ಆಧ್ಯಾತ್ಮಿಕ ಉನ್ನತಿ ಮಾಡಲು ಸಾಧ್ಯವಿದೆ, ಎಂದು ಪೂ. ಸೌರಭ ಇವರು ಎಲ್ಲರಿಗೂ ತೋರಿಸಿ ಕೊಟ್ಟಿದ್ದಾರೆ. ಮಗುವಿನಂತೆ ತೋರುವ ಪೂ. ಸೌರಭ ಇವರು ದೇಹಧಾರಿಯಾಗಿದ್ದು ಕೂಡ ‘ವಿದೇಹಿ’ ಅವಸ್ಥೆಯಲ್ಲಿದ್ದಾರೆ. ಅಧ್ಯಾತ್ಮದಲ್ಲಿ ‘ವಿದೇಹಿ’ ಅವಸ್ಥೆ ಪ್ರಾಪ್ತಿಯಾಗುವುದೆಂದರೆ, ಇದು ಉಚ್ಚ ಮಟ್ಟದ ಸ್ಥತಿಯಾಗಿದೆ.

33 ನೇ ಸಂತರಾದ ಪೂ. (ಸೌ.) ಅಂಜಲಿ ಗಾಡಗೀಳ

(ಈಗಿನ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆದ್ಯಾತ್ಮಿಕ ಉತ್ತರಾಧಿಕಾರಿ)
ಜಿಜ್ಞಾಸೆ, ಸತತ ಕಲಿಯುವ ವೃತ್ತಿ, ಇತರರಿಗೆ ಸಾಧನೆಯಲ್ಲಿ ಸಹಾಯ ಮಾಡುವ ತಳಮಳ, ಇತರರನ್ನಷ್ಟೇ ಅಲ್ಲ, ಹೊರಗಡೆಯ ಸಂತರೊಂದಿಗೂ ಆತ್ಮೀಯತೆ ಬೆಳೆಸುವುದು, ಗುರುಗಳಿಗೆ ಅಪೇಕ್ಷಿತವಿರುವಂತೆ ಪರಿಪೂರ್ಣ ಸೇವೆ ಮಾಡುವ ಒಲವು ಇತ್ಯಾದಿ ಅನೇಕ ದೈವೀ ಗುಣಗಳುಳ್ಳ ಸೌ. ಅಂಜಲಿ ಗಾಡಗೀಳ ಇವರು ಶ್ರಾವಣ ಕೃಷ್ಣ ಪಕ್ಷ ದಶಮಿ (31.8.2013) ರಂದು ಸನಾತನದ 33 ನೇ ಸಂತರಾದರು. ಪೂ. (ಸೌ.) ಅಂಜಲಿಯವರು ದೇವಸ್ಥಾನಗಳ ಚಿತ್ರೀಕರಣ, ಸಂತರನ್ನು ಮತ್ತು ಭಕ್ತರನ್ನು ಭೇಟಿ ಮಾಡುವುದು ಇತ್ಯಾದಿ ಸೇವೆಗಳ ನಿಮಿತ್ತದಿಂದ ವಿರಮಿಸದೆ ನಿರಂತರ ಪ್ರಯಾಣ ಮಾಡುತ್ತಿರುತ್ತಾರೆ. ಯಾವುದೇ ಗ್ರಂಥದಲ್ಲಿನ ಯಾವುದೇ ವಿಷಯದಲ್ಲಿನ ಸಂದೇಹವನ್ನು ಅವರಿಗೆ ಕೇಳಿದಾಗ ತಕ್ಷಣ ಅದರ ಉತ್ತರ ನೀಡುವಷ್ಟು ಅವರಿಗೆ ವಿಷಯದ ಆಳವಾದ ಅಧ್ಯಯನವಿದೆ.

34 ನೇ ಸಂತರಾದ ಪೂ. (ಕು.) ಸ್ವಾತಿ ಖಾಡ್ಯೆ

ಪ್ರತಿಯೊಂದು ಜಿಲ್ಲೆಯಲ್ಲಿ ಹೋಗಿ ಸಾಧಕರನ್ನು ನಿರ್ಮಿಸುವ, ಪ್ರಸಾರದ ಸಾಧಕರ ಆಧ್ಯಾತ್ಮಿಕ ತಾಯಿ ಅಂದರೆ ಪೂ. (ಕು.) ಸ್ವಾತಿ ಖಾಡ್ಯೆ ! ಪ್ರತಿಯೊಂದು ಹೊಸ ವಿಷಯವನ್ನು ಕೇಳಿ ಮಾಡುವುದು, ತತ್ವನಿಷ್ಠತೆ, ಸತತ ಉತ್ಸಾಹದಿಂದ ಮತ್ತು ಆನಂದದಿಂದ ಇರುವುದು, ಸಕಾರಾತ್ಮಕತೆ, ತತ್ಪರತೆ, ಪ್ರಾಮಾಣಿಕತೆ, ಪ.ಪೂ. ಡಾಕ್ಟರರ ಬಗ್ಗೆ ಧೃಡ ಶ್ರದ್ಧೆ ಮತ್ತು ಗುರುಗಳಿಗೆ ಅಪೇಕ್ಷಿತವಾದ ಕೃತಿ ಮಾಡುವ ಒಲವು, ಕ್ಷಾತ್ರವೃತ್ತಿ ಮತ್ತು ಪ್ರೇಮಭಾವ ಇವುಗಳ ಅಪೂರ್ವ ಸಂಗಮ, ಸಮಷ್ಟಿಯ ಏಳಿಗೆಯ ತಳಮಳ, ಮುಂದಾಳತ್ವ ಇತ್ಯಾದಿ ಅಸಂಖ್ಯ ದೈವೀ ಗುಣಗಳುಳ್ಳ ಪೂ. (ಕು.) ಸ್ವಾತಿ ಖಾಡ್ಯೆ ಇವರು ಅಶ್ವಯುಜ ಕೃಷ್ಣ ನವಮಿ, 28 ಅಕ್ಟೋಬರ 2013 ರಂದು ಸನಾತನದ 34 ನೇ (ಎಲ್ಲರಿಗಿಂತ ಕಿರಿಯ ವಯಸ್ಸಿನ ಸಮಷ್ಟಿ ಸಂತರು) ಸಂತರಾದರು.

ಸನಾತನದ 35 ನೇ ಸಂತರಾದ ಪೂ. (ವೈದ್ಯ) ವಿನಯ ಭಾವೆ

ವ್ಯಷ್ಟಿ ಸಾಧನೆಯಲ್ಲಿ ಪ್ರಗತಿ ಮಾಡಲು ತನು, ಮನ, ಧನ ಇವುಗಳ ತ್ಯಾಗ ಮತ್ತು ಸಾಧನೆಯ ತಳಮಳ ಇರಬೇಕಾಗುತ್ತದೆ. ಪೂ. ವಿನಯ ಭಾವೆ ಇವರಲ್ಲಿರುವ ಈ ಗುಣಗಳಿಂದಾಗಿಯೇ ಸಾಧನೆಯಲ್ಲಿ ಅವರ ಉನ್ನತಿಯಾಗಿ ಅವರು ಸನಾತನದ 35 ನೇ ಸಂತರು (ವ್ಯಷ್ಟಿ ಸಂತರು) ಎಂದು ಅಶ್ವಯುಜ ಕೃಷ್ಣ ನವಮಿ, 28 ಅಕ್ಟೋಬರ 2013 ರಂದು ಸಂತಪದವಿಯಲ್ಲಿ ವಿರಾಜಮಾನರಾದರು. ಇತರರಿಗೆ ಸಹಾಯ ಮಾಡುವುದು, ತ್ಯಾಗಮಯ ವೃತ್ತಿ, ಸಾಕ್ಷೀಭಾವ, ಅಂತರ್ಮುಖತೆ, ಹೊಂದಾಣಿಕೆ ಇತ್ಯಾದಿ ಗುಣಗಳೊಂದಿಗೆ ‘ನನ್ನಮೇಲೆ ಪ.ಪೂ. ಡಾಕ್ಟರರ ಒಡೆತನವಿದೆ ಮತ್ತು ನಾನು ಅವರ ಸೇವಕನಿದ್ದೇನೆ’ ಎಂಬ ಭಾವ ಪೂ. ಭಾವೆಯವರಲ್ಲಿರುತ್ತದೆ. ಉತ್ಕೃಷ್ಟ ವೈದ್ಯರಾದ ಪೂ. ಭಾವೆ ಇವರಿಗೆ 2013 ರಲ್ಲಿ ಮಹಾರಾಷ್ಟ್ರದ ರಾಯಗಡ ಜಿಲ್ಲಾ ಪರಿಷತ್ತಿನಿಂದ ‘ರಾಯಗಡ ಭೂಷಣ’ ಎಂಬ ಪ್ರಶಸ್ತಿ ದೊರಕಿತು.

Leave a Comment