ಸನಾತನದ ಸಂತರತ್ನಗಳು (ಭಾಗ – 2)

ಸಾಮಾನ್ಯ ವ್ಯಕ್ತಿ ಹಾಗೂ ಸಾಧನೆಯನ್ನು ಮಾಡದ ವ್ಯಕ್ತಿಗಳ ಅಧ್ಯಾತ್ಮಿಕ ಮಟ್ಟ ಶೇ ೨೦ ರಷ್ಟು ಇರುತ್ತದೆ ಹಾಗೂ ಪ್ರತೀದಿನ ದೇವರ ಪೂಜೆ, ಪಾರಾಯಣ, ಉಪವಾಸ ಇತ್ಯಾದಿ ಕರ್ಮಕಾಂಡವನ್ನು ನಿಯಮಿತವಾಗಿ ಮಾಡುವವರ ಅಧ್ಯಾತ್ಮಿಕ ಮಟ್ಟ ಶೇ ೨೫ ರಿಂದ ೩೦ ರಷ್ಟು ಇರುತ್ತದೆ. ಶೇ ೭೦ ರಷ್ಟು ಅಧ್ಯಾತ್ಮಿಕ ಮಟ್ಟದ ವ್ಯಕ್ತಿಗಳು ಸಂತ ಪದವಿಯನ್ನು ತಲುಪುತ್ತಾರೆ. ಈ ಸಂತರು ಸಮಷ್ಟಿಯ ಕಲ್ಯಾಣಕ್ಕಾಗಿ ನಾಮಜಪವನ್ನು ಮಾಡಬಹುದು. ಮೃತ್ಯುವಿನ ನಂತರ ಅವರಿಗೆ ಪುನರ್ಜನ್ಮ ಇರುವುದಿಲ್ಲ. ಅವರು ಮುಂದಿನ ಸಾಧನೆಗಾಗಿ ಹಾಗೂ ಮನುಕುಲದ ಕಲ್ಯಾಣಕ್ಕಾಗಿ ಸ್ವೇಚ್ಛೆಯಿಂದ ಮರುಜನ್ಮವನ್ನು ಪಡೆದುಕೊಳ್ಳಬಹುದು.

೩೬ ನೇ ಸಂತರಾದ ಪೂ. ಶ್ರೀಮತಿ ಶಾಲಿನಿ ನೆನೆ

ಸಾಧನೆಗಾಗಿ ವಯಸ್ಸಿನ, ಸ್ಥಳದ ಯಾವುದೇ ಬಂಧನವಿಲ್ಲದೇ ಭಾವವಿದ್ದರೆ ಸಾಧನೆಯಲ್ಲಿ ಅತ್ಯುಚ್ಚ ಪದವಿಯನ್ನೂ ಪ್ರಾಪ್ತಮಾಡಿಕೊಳ್ಳಬಹುದು, ಎಂಬ ಆದರ್ಶವನ್ನು ಎಲ್ಲರೆದುರಿಡುವ ಪೂ. (ಶ್ರೀಮತಿ) ಶಾಲಿನಿ ನೆನೆಯವರು ದತ್ತಜಯಂತಿಯ ಶುಭದಿನದಂದು ಸನಾತನದ ಸಂತರತ್ನಗಳಲ್ಲಿ ೩೬ನೇ ವ್ಯಷ್ಟಿ ಸಂತರ ಸ್ಥಾನವನ್ನು ಪ್ರಾಪ್ತಮಾಡಿಕೊಂಡರು ! ಅಜ್ಜಿಯವರಿಗೆ ೯೦ ವರ್ಷಗಳಾಗಿದ್ದು ವೃದ್ಧಾಶ್ರಮದಲ್ಲಿದ್ದರೂ ನಿಯಮಿತವಾಗಿ ಸಾಧನೆಯನ್ನು ಮಾಡುತ್ತಾರೆ. ಅಜ್ಜಿಯವರಲ್ಲಿ ಪರಾಕಾಷ್ಟೆಯ ನಮ್ರತೆಯಿದ್ದು ಅಹಂ ಇಲ್ಲದಿರುವುದು, ಪ್ರೇಮಭಾವ, ಇತರರನ್ನು ಅರಿತುಕೊಳ್ಳುವುದು, ಪರಿಸ್ಥಿತಿ ಸ್ವೀಕರಿಸುವುದು ಮುಂತಾದ ಆಧ್ಯಾತ್ಮಿಕ ಗುಣಗಳು ಮೊದಲಿನಿಂದಲೇ ಇವೆ. ‘ಪ.ಪೂ. ಡಾಕ್ಟರ್ ಎಲ್ಲ ಕಡೆ ಇರುತ್ತಾರೆ ಮತ್ತು ಎಲ್ಲವನ್ನೂ ಮಾಡಿಸಿಕೊಳ್ಳುತ್ತಾರೆ’, ಎಂಬ ಅವರ ಭಾವವಾಗಿದೆ.

೩೭ ನೇ ಸಂತರಾದ ಪೂ. (ಸೌ.) ಪದ್ಮಾವತಿ ಬಾಳಾಸಾಹೇಬ ಕೇಂಗೆ

ಧಾರ್ಮಿಕ ವೃತ್ತಿ, ಪ್ರೇಮಮಯಿ ಮತ್ತು ಸತತ ನಾಮಸ್ಮರಣೆಯ ಮಾಧ್ಯಮದಿಂದ ಈಶ್ವರನೊಂದಿಗೆ ಅನುಸಂಧಾನವನ್ನು ಸಾಧಿಸುವ ಪೂ. (ಸೌ.) ಪದ್ಮಾವತಿ ಬಾಳಾಸಾಹೇಬ ಕೇಂಗೆ ಅಜ್ಜಿಯವರು (ವಯಸ್ಸು ೮೦ ವರ್ಷಗಳು) ಮಾರ್ಗಶೀರ್ಷ ಹುಣ್ಣಿಮೆಯಂದು ಸನಾತನದ ೩೭ನೇ ಸಂತರಾದರು. ಪೂ. ಅಜ್ಜಿಯವರ ಮನಸ್ಸಿನಲ್ಲಿ ಪ.ಪೂ. ಡಾಕ್ಟರ್ ಮತ್ತು ಎಲ್ಲ ಸಂತರ ಬಗ್ಗೆ ತುಂಬಾ ಆದರವಿದೆ. ಅಜ್ಜಿಯವರಿಗೆ ಸಾಧಕರ ಬಗ್ಗೆ ತುಂಬಾ ಒಲವು ಇದೆ. ಈ ವಯಸ್ಸಿನಲ್ಲಿಯೂ ಅವರು ಸಾಧಕರಿಗೆ ಚಹಾ ಅಥವಾ ಊಟವನ್ನು ತಯಾರಿಸಿ ಕೊಡುವ ಸೇವೆಯನ್ನು ಮಾಡುತ್ತಾರೆ. ಮನೆಯಲ್ಲಿ ಕೆಲಸವಿದ್ದರೂ, ಅವರು ಇಬ್ಬರೂ ಸೊಸೆಯಂದಿರಿಗೆ ಮೊದಲು ಸೇವೆಗೆ ಪ್ರಾಧಾನ್ಯ ನೀಡಲು ಹೇಳುತ್ತಾರೆ. ಪೂ. ಅಜ್ಜಿಯವರು ನಿಯಮಿತವಾಗಿ ದೈನಿಕ ಸನಾತನ ಪ್ರಭಾತವನ್ನು ಓದುತ್ತಾರೆ ಮತ್ತು ಸನಾತನ ಸಂಸ್ಥೆಯ ಕಾರ್ಯದ ಪ್ರಶಂಸೆ ಮಾಡುತ್ತಾರೆ.

೩೮ ನೇ ಸಂತರಾದ ಪೂ. (ಶ್ರೀಮತಿ) ಹೇಮಲತಾ ದಾಸ

ಸತತವಾಗಿ ಈಶ್ವರನ ಅನುಸಂಧಾನದಲ್ಲಿರುವ ಮತ್ತು ಈಶ್ವರನ ಬಗ್ಗೆ ಹೆಚ್ಚೆಚ್ಚು ಮಾತನಾಡುವ ಕೊಲಕಾತಾದ ಪೂ. (ಶ್ರೀಮತಿ) ಹೇಮಲತಾ ದಾಸ (ವಯಸ್ಸು ೭೬ ವರ್ಷಗಳು) ಇವರು ಮಾರ್ಗಶೀರ್ಷ ಕೃಷ್ಣ. ೧೩, ದಿನಾಂಕ ೩೦ ಡಿಸೆಂಬರ್ ೨೦೧೩ ಈ ದಿನದಂದು ಸನಾತನದ ಸಂತರ ಸಾಲಿನಲ್ಲಿ ೩೮ನೇ ಸ್ಥಾನವನ್ನು ಪ್ರಾಪ್ತ ಮಾಡಿಕೊಂಡರು. ೧೮ನೇ ವರ್ಷದಲ್ಲಿ ಅವರಿಗೆ ಗುರುಮಂತ್ರದ ದೀಕ್ಷೆ ಸಿಕ್ಕಿತು. ನಿಶ್ಚಿತ ಸಂಖ್ಯೆಯಲ್ಲಿ ಮಾಡಬೇಕಾದ ಆ ಗುರುಮಂತ್ರದ ಜಪವನ್ನು ಅವರು ಇಷ್ಟು ವರ್ಷ ನಿಯಮಿತವಾಗಿ ಮಾಡುತ್ತಿದ್ದಾರೆ. ಮತಾಂಧರ ಉಪಟಳದ ಬಗ್ಗೆ ಕ್ರೋಧ, ಹಿಂದೂಗಳ ದುಃಸ್ಥಿತಿಯ ಬಗ್ಗೆ ಸಂವೇದನಶೀಲತೆ, ಉತ್ತಮ ಸ್ಮರಣಶಕ್ತಿ, ಜಿಜ್ಞಾಸೆ, ಎಲ್ಲರೊಂದಿಗೆ ಹೊಂದಿಕೊಂಡು ಇರುವುದು, ನಿರ್ಭಯತೆ ಮುಂತಾದ ಅನೇಕ ಗುಣಗಳು ಅವರಲ್ಲಿವೆ.

೪೦ ನೇ ಸಂತರಾದ ಪೂ. ಗುರುನಾಥ ದಾಭೋಲಕರ

ಸನಾತನದ ದೇವದ, ಪನವೇಲನ ಆಶ್ರಮದಲ್ಲಿ ವಾಸಿಸುವ ಶ್ರೀ. ಗುರುನಾಥ ದಾಭೋಲಕರ (ವಯಸ್ಸು ೭೫ ವರ್ಷಗಳು) ಇವರು ೫ ಮೇ ೨೦೧೪ ಈ ದಿನದಂದು ಶೇ. ೭೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡು ಸಂತರಾದರು. ಎಲ್ಲರನ್ನು ನಿರಪೇಕ್ಷವಾಗಿ ಪ್ರೀತಿಸುವ ಸನಾತನದ ೪೦ ನೇ ಸಂತರತ್ನ ಪೂ. ಗುರುನಾಥ ದಾಭೋಲಕರ ಇವರು ಕಟ್ಟಡ ಕಾಮಗಾರಿ ವಿಭಾಗದಲ್ಲಿ ಸೇವೆ ಮಾಡುವುದು, ಸಾಧಕರ ಮೇಲೆ ಆಧ್ಯಾತ್ಮಿಕ ಉಪಾಯ ಮಾಡುವುದು ಇವುಗಳಂತಹ ವಿವಿಧ ಸೇವೆಗಳನ್ನು ಮಾಡಿದ್ದಾರೆ. ಅವರಲ್ಲಿ ಮನಮುಕ್ತತೆ, ಪಾರದರ್ಶಕತೆ, ಏಕಾಗ್ರತೆ, ಜಿಗುಟುತನ, ಮಿತವ್ಯಯ, ತತ್ಪರತೆ, ನೀಡಿದ ಯಾವುದೇ ಸೇವೆಯನ್ನು ಪರಿಪೂರ್ಣ ಮಾಡುವುದು, ಆಜ್ಞಾಪಾಲನೆ, ಇವುಗಳಂತಹ ಅನೇಕ ಆಧ್ಯಾತ್ಮಿಕ ಗುಣವೈಶಿಷ್ಟ್ಯಗಳಿವೆ. ಇವರು ಎಲ್ಲ ಸಾಧಕರೊಂದಿಗೆ ಆತ್ಮೀಯತೆಯಿಂದ ವ್ಯವಹರಿಸುವುದರಿಂದ ಎಲ್ಲರಿಗೂ ಪೂ. ದಾಭೋಲಕರ ಇವರ ಆಧಾರವೆನಿಸುತ್ತದೆ.

೪೧ ನೇ ಸಂತರಾದ ಪೂ. (ಶ್ರೀಮತಿ) ಪ್ರಮಿಲಾ ಪ್ರಭುದೇಸಾಯಿ

ಮುಗ್ಧತೆ, ನಿರ್ಮಲತೆ, ಸಹಜತೆ, ವ್ಯಾಪಕತೆ, ಪ.ಪೂ. ಡಾಕ್ಟರರ ಬಗ್ಗೆ ಉತ್ಕಟ ಭಾವ, ಕ್ಷಾತ್ರವೃತ್ತಿ ಮುಂತಾದ ಆಧ್ಯಾತ್ಮಿಕ ಗುಣಗಳಿರುವ ಶ್ರೀಮತಿ ಪ್ರಮಿಲಾ ರಂಗನಾಥ ಪ್ರಭುದೇಸಾಯಿ ಇವರು ೧೦ ಮೇ ೨೦೧೪ ಈ ದಿನದಂದು ಸನಾತನದ ೪೧ನೇ ಸಂತರಾದರು. ‘ಭಾವವಿದ್ದಲ್ಲಿ ದೇವರು’ ಎಂಬ ಒಂದು ಗಾದೆ ಮಾತಿದೆ. ಅದರ ಮೂರ್ತಿಮಂತ ಉದಾಹರಣೆ ಎಂದರೆ ಪೂ. ಪ್ರಭುದೇಸಾಯಿ ಅಜ್ಜಿ ! ಅವರನ್ನು ನೋಡಿದರೆ ನಮ್ಮ ಭಾವ ಜಾಗೃತವಾಗುತ್ತದೆ. ಪೂ. ಅಜ್ಜಿಯವರು ಪ್ರತಿದಿನ ಬೆಳಗ್ಗೆ ೪ ಗಂಟೆಗೆ ಏಳುತ್ತಾರೆ. ನಾಮಜಪಾದಿ ಸಾಧನೆ ಮಾಡಿ ದೈನಿಕ ಸನಾತನ ಪ್ರಭಾತವನ್ನು ಓದುತ್ತಾರೆ. ಪೂ. ಅಜ್ಜಿಯವರು ದೇವರ ಬಳಿ ‘ನಮ್ಮ (ಹಿಂದೂ) ರಾಷ್ಟ್ರ ಬರಲಿ. ಪ.ಪೂ. ಡಾಕ್ಟರರಿಗೆ ಮತ್ತು ಎಲ್ಲ ಸಾಧಕರಿಗೆ ಅದನ್ನು ನೋಡುವಂತಾಗಲಿ. ಪ.ಪೂ. ಡಾಕ್ಟರರ ಪ್ರಾಣಶಕ್ತಿ ಹೆಚ್ಚಾಗಲಿ’, ಎಂದು ಪ್ರತಿದಿನ ಪ್ರಾರ್ಥನೆ ಮಾಡುತ್ತಾರೆ.

೪೨ ನೇ ಸಂತರಾದ ಪೂ. ಅಶೋಕ ಪಾತ್ರೀಕರ

೧೦ ಮೇ ೨೦೧೪ ಈ ದಿನದಂದು ಶ್ರೀ. ಅಶೋಕ ಪಾತ್ರೀಕರ ಇವರು ಶೇ. ೭೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪಡೆದು ಸನಾತನದ ಸಂತರ ಸಾಲಿನಲ್ಲಿ ೪೨ನೇ ಸ್ಥಾನ ಪ್ರಾಪ್ತಮಾಡಿಕೊಂಡರು. ಪೂ. ಪಾತ್ರೀಕರ ಇವರು ದೈನಿಕ ಸನಾತನ ಪ್ರಭಾತ, ಅಧ್ಯಾತ್ಮಪ್ರಸಾರ, ಗ್ರಂಥ-ವಿಭಾಗದಲ್ಲಿ ಸಂಕಲನದ ಸೇವೆ ಇತ್ಯಾದಿ ವಿವಿಧ ಸೇವೆಗಳನ್ನು ಮಾಡಿದ್ದಾರೆ. ಪೂ. ಪಾತ್ರೀಕರ ಇವರಲ್ಲಿ ಅನೇಕ ಗುಣಗಳ ಸಮೂಹವಿದೆ. ಶಿಸ್ತು, ನಮ್ರತೆ, ಸ್ಥಿರತೆ, ಸಾತತ್ಯತೆ, ವ್ಯಾಪಕತೆ, ಸೇವೆಯಲ್ಲಿನ ಬದಲಾವಣೆಯನ್ನು ತಕ್ಷಣ ಸ್ವೀಕರಿಸುವುದು, ನೇತೃತ್ವ ವಹಿಸಿ ಕೃತಿ ಮಾಡುವುದು, ಪ್ರೇಮಭಾವ, ಗುರುಗಳ ಬಗ್ಗೆ ಅವ್ಯಕ್ತ ಭಾವ, ಅಲ್ಪ ಅಹಂ ಮುಂತಾದ ಅನೇಕ ಗುಣಗಳು ಅವರಲ್ಲಿವೆ. ಕುಟುಂಬದ ಎಲ್ಲರನ್ನು ಕೇವಲ ಸಾಧನೆಯ ಕಡೆಗೆ ಹೊರಳಿಸಿವುದು ಮಾತ್ರವಲ್ಲ ಅವರಿಂದ ಜೀವ ಒತ್ತೆಯಿಟ್ಟು ಸಾಧನೆ ಮಾಡಿಸಿಕೊಳ್ಳಬಹುದು, ಎಂದು ಪೂ. ಪಾತ್ರೀಕರ ಇವರು ಸಿದ್ಧಪಡಿಸಿದ್ದಾರೆ.

೪೩ ನೇ ಸಂತರಾದ ಪೂ. ಮಹೇಂದ್ರ ಕ್ಷತ್ರೀಯ

ಅನಾರೋಗ್ಯದಿಂದ ಬಳಲುತಿದ್ದರೂ ಅಂತರ್ಮನದಿಂದ ಸಾಧನೆ ಮಾಡುವ ಶ್ರೀ. ಮಹೇಂದ್ರ ಕ್ಷತ್ರೀಯ ಇವರು ೧೦ ಸೆಪ್ಟೆಂಬರ್ ೨೦೧೪ ಈ ದಿನದಂದು ಶೇ. ೭೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪಡೆದು ಸಂತರ ಸಾಲಿನಲ್ಲಿ ೪೩ನೇ ಸ್ಥಾನವನ್ನು ಪ್ರಾಪ್ತಮಾಡಿಕೊಂಡರು. ಪ.ಪೂ. ಡಾ. ಜಯಂತ ಆಠವಲೆ ಇವರು ೧೯೯೬-೯೭ರಲ್ಲಿ ನಾಶಿಕನಲ್ಲಿ ಸತ್ಸಂಗ ನಡೆಸುವಾಗ, ಪೂ. ಕ್ಷತ್ರೀಯ ಇವರು ಆ ಸತ್ಸಂಗಕ್ಕೆ ಹೋಗುವ ಮೊದಲನೇ ಸಾಧಕರಾಗಿದ್ದರು. ಅದೇ ರೀತಿ ಅವರು ಈಗಲೂ ಅವರು ನಾಶಿಕ ಜಿಲ್ಲೆಯ ಮೊದಲನೇ ಸಂತರಾಗಿದ್ದಾರೆ. ಪೂ. ಕ್ಷತ್ರೀಯ ೧೭ ವರ್ಷಗಳಿಂದ ಸನಾತನ ಸಂಸ್ಥೆಯ ಮಾರ್ಗದರ್ಶನಕ್ಕನುಸಾರ ಸಾಧನೆ ಮಾಡುತ್ತಿದ್ದಾರೆ. ಅವರಿಗೆ ಪಾರ್ಶ್ವವಾಯುವಿನ ಆಘಾತವಾಗಿತ್ತು. ಅಸ್ವಸ್ಥರಾಗಿದ್ದರೂ ಅಂತರ್ಮನದಿಂದ ಸಾಧನೆಯ ಬಲದ ಮೇಲೆ ಅವರು ಸಂತಪದವಿಯನ್ನು ಪಡೆದಿದ್ದಾರೆ.

೪೫ ನೇ ಸಂತರಾದ ಸೌ. ಸೂರಜಕಾಂತಾ ಮೆನರಾಯ

ಪೂ. (ಸೌ.) ಮೆನರಾಯ ಇವರಿಗೆ ತೀವ್ರ ಶಾರೀರಿಕ ತೊಂದರೆಯಿದೆ. ದಿನದಲ್ಲಿ ೪ ಬಾರಿ ಅವರಿಗೆ ಇನ್ಸುಲಿನ್ನಿನ ಇಂಜೆಕ್ಷನ್ ತೆಗೆದುಕೊಳ್ಳಬೇಕಾಗುತ್ತದೆ, ಹಾಗೂ ರಾತ್ರಿ ಮಲಗಿದಾಗ ಅವರು ಕೋಮಾದಲ್ಲಿ ಹೋಗಬಾರದೆಂದು, ಅವರಿಗೆ ಔಷಧಿ ತೆಗೆದುಕೊಳ್ಳಬೇಕಾಗುತ್ತದೆ. ಇಂತಹ ಸ್ಥಿತಿಯಲ್ಲಿ ಸತತ ಆನಂದದಿಂದಿದ್ದು ಅವರು ತಳಮಳದಿಂದ ಸಾಧನೆಯನ್ನು ಮಾಡುತ್ತಿದ್ದಾರೆ. ಶಾರೀರಿಕ ಕ್ಷಮತೆ ಇಲ್ಲದಿರುವಾಗಲೂ ಸೇವೆಯನ್ನು ಹೆಚ್ಚೆಚ್ಚು ಮಾಡಬೇಕೆಂದು, ಅವರ ಸತತ ಹಂಬಲವಿರುತ್ತದೆ. ‘ನನ್ನಿಂದ ಏನೂ ಸೇವೆಯಾಗುವುದಿಲ್ಲ’ ಎಂದೆನಿಸಿ ಅವರಿಗೆ ದುಃಖವೆನಿಸುತ್ತದೆ. ಪ.ಪೂ. ಡಾಕ್ಟರರ ಬಗ್ಗೆ ಅವರಲ್ಲಿ ತೀವ್ರ ಭಾವವಿದೆ. ಅವರ ಒಂದು ಅಲೌಕಿಕ ವೈಶಿಷ್ಟ್ಯವೆಂದರೆ, ಯಾವುದೇ ಪರಿಸ್ಥಿತಿಯಲ್ಲಿ ಅವರಿಗೆ ಸಿಟ್ಟು ಅಥವಾ ಪ್ರತಿಕ್ರಿಯೆ ಬರುವುದಿಲ್ಲ. ೧೦.೩.೨೦೧೫ ಈ ದಿನದಂದು ಅವರು ಸಂತ ಪದವಿಯಲ್ಲಿ ವಿರಾಜಮಾನರಾದರು.

೪೬ನೇ ಸಂತರಾದ ಪೂ. ಭಗವಂತಕುಮಾರ ಮೆನರಾಯ

ಪೂ. ಡಾ. ಭಗವಂತಕುಮಾರ ಮೆನರಾಯ ಇವರಿಗೆ ಯಾರಾದರೂ ತಪ್ಪು ಮಾಡಿದರೆ ಇಷ್ಟವಾಗುವುದಿಲ್ಲ. ಯಾರ ಮೇಲಾದರೂ ಅನ್ಯಾಯವಾದರೆ ಅವರಿಗೆ ಸಹನೆಯಾಗುವುದಿಲ್ಲ. ಅವರ ನಾಮಜಪ ಅಖಂಡವಾಗಿ ನಡೆದಿರುತ್ತದೆ. ‘ಪೂ. ಡಾ. ಭಗವಂತಕುಮಾರ ಮೆನರಾಯ ಇವರು ಉಪಯೋಗಿಸುವ ಕೋಲನ್ನು ನೋಡಿ ಏನೆನಿಸುತ್ತದೆ ?’ ಈ ಬಗ್ಗೆ ಪ್ರಯೋಗ ಮಾಡಿ ನೋಡಿದಾಗ ಅವರು ಉಪಯೋಗಿಸುತ್ತಿರುವ ‘ಕೋಲಿನಲ್ಲಿ ಚೈತನ್ಯ ನಿರ್ಮಾಣವಾಗಿದೆ’, ‘ಕೋಲಿನ ಕಡೆಗೆ ನೋಡಿದಾಗ ಮನಸ್ಸು ನಿರ್ವಿಚಾರವಾಗುತ್ತದೆ’, ಎಂದು ಉಪಸ್ಥಿತ ಸಾಧಕರು ಹೇಳಿದರು. ‘ಈ ಕೋಲು ಪ.ಪೂ. ಭಕ್ತರಾಜ ಮಹಾರಾಜ ಇವರ ಕೋಲಿನ ರೀತಿಯಲ್ಲಿಯೇ ಕಾಣಿಸುತ್ತದೆ’, ಎಂದೂ ಓರ್ವ ಸಾಧಕನು ಈ ಸಮಯದಲ್ಲಿ ಹೇಳಿದನು. ೧೦.೩.೨೦೧೫ ರಂದು ಅವರು ಸಂತಪದವಿಯಲ್ಲಿ ವಿರಾಜಮಾನರಾದರೆಂದು ಘೋಷಿಸಲಾಯಿತು.

೪೭ನೇ ಸಂತರಾದ ಪೂ. ರಘುನಾಥ ವಾಮನ ರಾಣೆ

ಇಳಿ ವಯಸ್ಸಿನ ಕಾರಣ ಪೂ. ರಘುನಾಥ ವಾಮನ ರಾಣೆ (೭೬ ವರ್ಷ) ಇವರಿಗೆ ಅನೇಕ ಶಾರೀರಿಕ ತೊಂದರೆಗಳಿವೆ. ತಪೋಧಾಮ ಆಶ್ರಮದ ಸೇವೆಗಳು ಕಠಿಣವಾಗಿವೆ. ಆದರೆ ಅವರಿಗೆ ಆ ಕುರಿತು ಯಾವುದೇ ತಕರಾರು ಇರುವುದಿಲ್ಲ. ಅವರು ಎಲ್ಲ ಸೇವೆಗಳನ್ನು ಆನಂದದಿಂದ ಮಾಡುತ್ತಾರೆ. ಅವರ ಕಾಲುಗಳು ಬಾತುಕೊಂಡಿವೆ. ಪ್ರಕೃತಿ ಸರಿ ಇಲ್ಲದಿರುವುದರಿಂದ ಅವರಿಗೆ ಮಾತನಾಡಲೂ ಬರುವುದಿಲ್ಲ, ಆದರೂ ಸಹ ಪ.ಪೂ. ಗುರುದೇವರಿಗೆ ಅಪೇಕ್ಷಿತದಂತೆ ಸೇವೆ ಮಾಡಿ ಪೂ. ರಾಣೆಅಜ್ಜ ಗುರುದೇವರ ಶಿಷ್ಯರಾದರು. ಗುರುದೇವರು ನೀಡಿದ ಸೇವೆ ಸಾಧ್ಯವಾದಷ್ಟು ಉತ್ತಮವಾಗಿ ಮಾಡುವ ಹಂಬಲ ಅವರಿಗಿರುತ್ತದೆ. ‘ಗುರುದೇವರು ಸೇವೆಗಾಗಿ ಕಳುಹಿಸಿದ್ದಾರೆ, ಸತತವಾಗಿ ಸೇವೆ ಮಾಡಬೇಕಾಗಿದೆ’, ಎಂಬ ಭಾವ ಅವರಲ್ಲಿದೆ. ಪೂ. ರಾಣೆಅಜ್ಜ ಸತತವಾಗಿ ಭಾವಾವಸ್ಥೆಯಲ್ಲಿರುತ್ತಾರೆ. ಅವರಿಗೆ ನೋಡಿದ ಮೇಲೆ ನಮ್ಮ ಭಾವವೂ ಜಾಗೃತವಾಗುತ್ತದೆ. ೧೫.೩.೨೦೧೫ ರಂದು ಅವರು ಸಂತಪದವಿಯಲ್ಲಿ ವಿರಾಜಮಾನರಾದರು ಎಂದು ಘೋಸಿಸಲಾಯಿತು.

೪೯ ನೇ ಸಂತರಾದ ಪೂ. ಕಲಾ ಪ್ರಭುದೇಸಾಯಿ ಅಜ್ಜಿ

ಧಾರ್ಮಿಕ ವೃತ್ತಿ ಇರುವ ಶ್ರೀಮತಿ ಕಲಾ ಪ್ರಭುದೇಸಾಯಿ ಅಜ್ಜಿಯವರು ಅವರ ಪೂರ್ವಾಯುಷ್ಯದಲ್ಲಿ (ಜೀವನದಲ್ಲಿ) ಕರ್ಮಕಾಂಡದನುಸಾರ ಸಾಧನೆ ಮಾಡಿದ್ದಾರೆ. ಕೌಟುಂಬಿಕ ಜೀವನದಲ್ಲಿ ಪರೇಚ್ಛೆಯಿಂದ ನಡೆದುಕೊಂಡು, ಹಾಗೆಯೇ ತಮ್ಮ ಮಕ್ಕಳಲ್ಲಿ ಉತ್ತಮ ಸಂಸ್ಕಾರಗಳನ್ನು ಬೆಳೆಸಿ ಅಧ್ಯಾತ್ಮದಲ್ಲಿನ ಒಂದು ಮಹತ್ವದ ಹಂತವನ್ನು ತಲುಪಿದರು. ಮುಂದೆ ಪ್ರಾಯದ ೬೫ ನೇ ವರ್ಷದಲ್ಲಿ ಅಜ್ಜಿಯವರು ಸನಾತನದ ಮಾರ್ಗದರ್ಶದನುಸಾರ ಸಾಧನೆಗೆ ಆರಂಭ ಮಾಡಿದರು. ಮನೆಮನೆಗೆ ಹೋಗಿ ಸನಾತನ ಪ್ರಭಾತದ ಚಂದಾದಾರನ್ನು ಮಾಡುವುದು, ಧರ್ಮಕಾರ್ಯಕ್ಕಾಗಿ ಸಮಾಜದಲ್ಲಿ ಅರ್ಪಣೆ ಪಡೆದುಕೊಳ್ಳುವುದು, ಸನಾತನ-ನಿರ್ಮಿತ ಗ್ರಂಥಗಳ ಅಧ್ಯಯನ ಮಾಡಿ ಅದನ್ನು ಮಾರಾಟ ಮಾಡುವುದು ಮುಂತಾದ ಸೇವೆ ಅವರು ತಳಮಳದಿಂದ ಮಾಡಿದರು. ಅವರು ವಾಸಿಸುತ್ತಿರುವ (ಸೊಸೈಟಿಯ) ಪ್ರವೇಶದ್ವಾರದ ಮೇಲೆ ದೈನಿಕ ಸನಾತನ ಪ್ರಭಾತದ ಲೇಖನ ಬರೆದು ಫಲಕ ಪ್ರಸಿದ್ಧಿಯ ಸೇವೆ ಅವರು ೩ ವರ್ಷ ಸತತವಾಗಿ ಮಾಡಿದರು. ಇದರಿಂದ ಅವರಲ್ಲಿನ ಈಶ್ವರಪ್ರಾಪ್ತಿಯ ತಳಮಳ ಮತ್ತು ಶ್ರದ್ಧೆ ಕಂಡುಬರುತ್ತದೆ. ಪೂ. ಕಲಾ ಪ್ರಭುದೇಸಾಯಿ ಅಜ್ಜಿಯವರು ೩೧ ಜುಲೈ ೨೦೧೫ ರಂದು ಶೇ. ೭೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿ ಸಂತರಾದರು.

೫೦ ನೇ ಸಂತರಾದ ಪೂ. (ಸೌ.) ಲಕ್ಷ್ಮಿ ನಾಯಿಕ

ಎಲ್ಲರಿಗೂ ನಿರಪೇಕ್ಷೆ ಪ್ರೀತಿ ಕೊಡುವ, ಎಲ್ಲರಿಗೂ ನಮ್ಮವರೆಂದು ಅನಿಸಿಕೊಳ್ಳುವ ಮತ್ತು ಎಲ್ಲ ಸಾಧಕರ ಮೇಲೆ ಪ್ರೀತಿಯ ಮಳೆ ಸುರಿಸುವ ಸೌ. ಲಕ್ಷ್ಮಿ ನಾಯಿಕ (ಮಾಯಿ) ಇವರು ೩೧ ಜುಲೈ ೨೦೧೫ ರಂದು ಸಂತಪದವಿಯನ್ನು ತಲುಪಿದರು. ಪೂ. ಮಾಯಿಯವರು ನಿಜವಾದ ಅರ್ಥದಿಂದ (ಪ.ಪೂ. ದಾಸ ಮಹಾರಾಜರ) ಧರ್ಮಪತ್ನಿ! ಸಪ್ತಲೋಕವನ್ನು ದಾಟಿ ಮೋಕ್ಷದವರೆಗೆ ಒಟ್ಟಿಗೆ ಹೋಗುವುದು, ಇದು ವಿವಾಹದಲ್ಲಿ ಬರುವ ಸಪ್ತಪದಿಯ ಅರ್ಥ. ಈ ಅರ್ಥಕ್ಕನುಸಾರ ಅವರ ಮಾರ್ಗಕ್ರಮಣ ನಡೆದಿದೆ. ಸಂತರ ಪತ್ನಿ ಸಂತಪದಕ್ಕೆ ತಲುಪಿದರು, ಎಂಬ ಉದಾಹರಣೆ ಅಪರೂಪವೇ ಕಂಡುಬರುತ್ತವೆ. ಎಲ್ಲ ಸಾಧಕರ ಮುಂದೆ ಪೂ. ಮಾಯಿ ಆ ಆದರ್ಶವನ್ನು ಇಟ್ಟಿದ್ದಾರೆ. ಸಂತರ ಪತ್ನಿಯ ಜವಾಬ್ದಾರಿಯನ್ನು ನಿಭಾಯಿಸುವುದು ತುಂಬಾ ಕಠಿಣವಿರುತ್ತದೆ. ಅದು ಅವರು ಸಹಜವಾಗಿ ನಿಭಾಯಿಸಿದರು. ಅವರು ತವರುಮನೆಯ ಕಾಳಜಿಯನ್ನು ಯೋಗ್ಯರೀತಿಯಿಂದ ವಹಿಸುತ್ತಾರೆ. ವ್ಯವಹಾರದ ಬಗ್ಗೆ ಅವರ ಸಹಜವಾದ ಮಾತುಗಳೂ ಸಹ ಆಧ್ಯಾತ್ಮಿಕ ಭಾಷೆಯಲ್ಲಿರುತ್ತದೆ.

೫೭ ನೇ ಸಂತರಾದ ಪೂ. (ಶ್ರೀಮತಿ) ಆನಂದಿ ಪಾಟೀಲ

ಪ.ಪೂ. ಡಾಕ್ಟರ ಬಗ್ಗೆ ನಿರಂತರ ಶರಣಾಗತ ಭಾವವಿರುವ ವರಳಿ (ಮುಂಬಯಿ)ಯ ಶ್ರೀಮತಿ ಆನಂದಿ ಪಾಟೀಲಅಜ್ಜಿ ಇವರು ಸನಾತನದ ಮಾರ್ಗದರ್ಶದಲ್ಲಿ ಸಾಧನೆ ಮಾಡಿ ೧೪ ಫೆಬ್ರುವರಿ ೨೦೧೬ ರಂದು ಸಂತಪದವಿಯಲ್ಲಿ ವಿರಾಜಮಾನರಾದರು. ಪ.ಪೂ. ಡಾಕ್ಟರರು ಅವರ ಬಗ್ಗೆ ಮುಂದಿನ ಉದ್ಗಾರ ತೆಗೆದುರು, ‘ಪೂ. ಆನಂದಿ ಪಾಟೀಲಅಜ್ಜಿಯವರು ಸನಾತನದ ೫೭ ನೇ ಸಂತರಾಗಿದ್ದಾರೆ. ಅವರು ಸನಾತನದ ೫೭ ನೇ ಸಂತರಾಗಿದ್ದರೂ, ಅನೇಕ ವಿಷಯಗಳ ಕುರಿತು ಮೊದಲನೇ ಸ್ಥಾನ ತಲುಪಿದ್ದಾರೆ, ಉದಾ. ಅವರು ಹೆಸರಿನಂತೆ ಸತತವಾಗಿ ಆನಂದದಿಂದಿರುತ್ತಾರೆ. ಸ್ವತಃ ಆನಂದದಲ್ಲಿದ್ದು ಇತರರಿಗೂ ಸತತವಾಗಿ ಆನಂದ ನೀಡುವ ಅವರು ಏಕೈಕ ಸಂತರಿದ್ದಾರೆ. ಮುಪ್ಪಿನಲ್ಲಿಯೂ ಸಾಧನೆ ಮಾಡುವುದು ಕಠಿಣವಾಗಿರುತ್ತದೆ.  ಆದರೆ ಅವರು ಇಳಿ ವಯಸ್ಸಿನಲ್ಲಿ ಸಾಧನೆ ಆರಂಭಿಸಿ ಸಂತಪದವಿಯನ್ನು ತಲುಪಿದರು. ಇದು ಅವರ ಎರಡನೇ ವೈಶಿಷ್ಟ್ಯ. ಅವರು ಮೊಮ್ಮಗ, ಮರಿಮೊಮ್ಮಗ ಈ ಮುಂದಿನ ಪೀಳಿಗೆವರೆಗೂ ಸಾಧನೆಯ ಸಂಸ್ಕಾರಗಳನ್ನು ಮಾಡಿದ್ದಾರೆ. ಇದು ಅವರ ಮೂರನೇ ವೈಶಿಷ್ಟ್ಯ!” ಎಂದು ಹೇಳಿದರು.

೫೯ ನೇ ಸಂತರಾದ ಪೂ. (ಶ್ರೀಮತಿ) ದೇವಕಿ ವಾಸು ಪರಬ (ದೇಹತ್ಯಾಗ ಮಾಡಿದ್ದಾರೆ)

ಕೈ. ದೇವಕಿ ವಾಸು ಪರಬಅಜ್ಜಿ (ಪೆಡಣೆ, ಗೋವಾ) ಸತತವಾಗಿ ಪ.ಪೂ. ಡಾಕ್ಟರರ ಅನುಸಂಧಾನದಲ್ಲಿದ್ದು ಎಲ್ಲರ ಮೇಲೆ ನಿರಪೇಕ್ಷ ಪ್ರೀತಿ ಮಾಡುವರು. ೨೨.೩.೨೦೧೬ ರಂದು ಮದ್ಯಾಹ್ನ ೩ ಗಂಟೆಗೆ ಅವರ ನಿಧನವಾಯಿತು. ದೇಹತ್ಯಜಿಸುವ ಮುನ್ನ ಕೆಲವು ದಿನಗಳಿಂದ ಅಜ್ಜಿಯವರು ಸತತವಾಗಿ ಪ.ಪೂ. ಡಾಕ್ಟರರಿಗೆ ಕರೆಯುತ್ತಿದ್ದರು. ತಡೆಯಲಾರದ ಯಾತನೆಯಿಂದಾಗಿ ಅವರು ಸತತವಾಗಿ ನರಳುತ್ತಿದ್ದರು. ಆದರೂ ಅವರ ಮುಖದ ಮೇಲೆ ಅದರ ಪರಿಣಾಮ ಕಂಡುಬರುತ್ತಿರಲಿಲ್ಲ, ಅಥವಾ ಕಣ್ಣಲ್ಲಿ ನೀರು ಬರುತ್ತಿರಲಿಲ್ಲ. ಅರ್ಬುದ ರೋಗದಂತಹ ಭಯಂಕರ ಕಾಯಿಲೆ ಇದ್ದರೂ ಸಹ ವ್ಯಷ್ಟಿ ಸಾಧನೆ ಮಾಡಿ ಪೂ. ಅಜ್ಜಿ ಸಂತಪದವಿಯಲ್ಲಿ ಆರೂಢರಾದರು ! ‘ಕಾಯಿಲೆಯಿಂದಾಗಿ ಸಾಧನೆ ಮಾಡಲು ಸಾಧ್ಯವಿಲ್ಲ’ ಎಂದು ಹೇಳುವ ಎಲ್ಲರ ಮುಂದೆ ಪೂ. ಅಜ್ಜಿಯವರು ಒಂದು ಆದರ್ಶವನ್ನಿಟ್ಟರು.

೬೦ ನೇ ಸಂತರಾದ ಪೂ. (ಕು.) ರೇಖಾ ಕಾಣಕೋಣಕರ

ರಾಮನಾಥಿ ಆಶ್ರಮದಲ್ಲಿನ ಸಂಪೂರ್ಣ ಅನ್ನಪೂರ್ಣಾ ವಿಭಾಗ (ಅಡುಗೆಮನೆ) ನಿರ್ವಹಿಸುತ್ತಿರುವಾಗಲೇ ಸಾಧಕರಿಗೆ ಸಾಧನೆಯಲ್ಲಿ ಮುಂದೆ ಹೋಗಲು ಸಹಾಯ ಮಾಡುವ ಮತ್ತು ಸತತವಾಗಿ ದೇವರ ಅನುಸಂಧಾನದಲ್ಲಿದ್ದು ಸಾಧಕರ ಮುಂದೆ ಆದರ್ಶವಿಡುವ ಕು. ರೇಖಾ ಕಾಣಕೋಣಕರ ಇವರು ೧೫ ಏಪ್ರಿಲ್ ೨೦೧೬ ರಂದು ಸನಾತನದ ೬೦ ನೇ ಸಂತರಾದರು. ಕು. ರೇಖಾ ಕಾಣಕೋಣಕರ ಇವರು ಬಿ. ಕಾಮ್. ತನಕ ಶಿಕ್ಷಣ ಮುಗಿಸಿ ೨೩ರ ಹರೆಯದಲ್ಲೇ ಪೂರ್ಣವೇಳೆ ಸಾಧನೆಗೆ ಪ್ರಾರಂಭಿಸಿದರು. ವ್ಯಷ್ಟಿ ಪ್ರಕೃತಿ ಇದ್ದರೂ ನಿರಂತರ ಕಲಿಯುವ ಸ್ಥಿತಿ, ಸೇವೆಯ ತೀವ್ರ ತಳಮಳ ಮತ್ತು ಅಲ್ಪ ಅಹಂ ಇವುಗಳಿಂದ ಅವರು ಅಲ್ಪ ಅವಧಿಯಲ್ಲಿ ರಾಮನಾಥಿ ಆಶ್ರಮದ ಅನ್ನಪೂರ್ಣಾ ಕಕ್ಷೆಯ ಜವಾಬ್ದಾರಿಯನ್ನು ದೃಢಶ್ರದ್ಧೆಯಿಂದ ನಿರ್ವಹಿಸುತ್ತಿದ್ದಾರೆ.

Leave a Comment