ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಶ್ರೀರಾಮನ ನಾಮಜಪ ಮಾಡುವಾಗ ಶಾಂತ ಅನಿಸುವುದು ಮತ್ತು ಶ್ರೀಕೃಷ್ಣನ ನಾಮಜಪ ಮಾಡುವಾಗ ಆನಂದದ ಅರಿವಾಗುವುದರ ಹಿಂದಿನ ಕಾರಣಮೀಮಾಂಸೆ

೧. ಅನುಭೂತಿ

ಸಚ್ಚಿದಾನಂದ ಪರಭ್ರಹ್ಮ ಡಾ. ಆಠವಲೆ

ನನಗೆ ಶ್ರೀರಾಮನ ನಾಮಜಪ ಮಾಡುವಾಗ ಶಾಂತವೆನಿಸುತ್ತದೆ ಮತ್ತು ಶ್ರೀಕೃಷ್ಣನ ನಾಮಜಪ ಮಾಡುವಾಗ ಆನಂದದ ಅರಿವಾಗುತ್ತದೆ. ಮುಂದುಮುಂದಿನ ಹಂತಗಳ ಅನುಭೂತಿಗಳಾದ ಶಕ್ತಿ, ಭಾವ, ಚೈತನ್ಯ, ಆನಂದ ಮತ್ತು ಶಾಂತಿ ಈ ಕ್ರಮಕ್ಕನುಸಾರ ಬರುತ್ತವೆ, ಅಂದರೆ ಮೊದಲು ಆನಂದದ ಮತ್ತು ನಂತರ ಶಾಂತಿಯ ಅನುಭೂತಿ ಇರುತ್ತದೆ. ಯುಗಗಳಿಗನುಸಾರವೂ ಈ ಕ್ರಮವು ಗಮನಕ್ಕೆ ಬರುತ್ತದೆ. ಮೊದಲು ತ್ರೇತಾಯುಗವಾಯಿತು ಮತ್ತು ನಂತರ ದ್ವಾಪರಯುಗವಾಯಿತು. ತ್ರೇತಾಯುಗದಲ್ಲಿ ಶ್ರೀರಾಮನ ಅವತಾರವಾಯಿತು. ಅವನ ನಾಮಜಪ ಮಾಡುವಾಗ ನನಗೆ ಶಾಂತವೆನಿಸಿತು. ನಂತರದ ದ್ವಾಪರಯುಗದಲ್ಲಿ ಶ್ರೀಕೃಷ್ಣನ ಅವತಾರವಾಯಿತು. ಅವನ ನಾಮಜಪ ಮಾಡುವಾಗ ಆನಂದವೆನಿಸಿತು.

೨. ಅನುಭೂತಿಗಳ ಹಿಂದಿನ ಕಾರಣಮೀಮಾಂಸೆ

೨ ಅ. ಮೊದಲು ಸತ್ಯಯುಗ, ನಂತರ ತ್ರೇತಾ, ನಂತರ ದ್ವಾಪರ ಮತ್ತು ಎಲ್ಲಕ್ಕಿಂತ ಕೊನೆಗೆ ಕಲಿಯುಗ, ಹೀಗೆ ನಾಲ್ಕು ಯುಗಗಳ ಕ್ರಮವಾಗಿದೆ. ಸತ್ಯಯುಗದಲ್ಲಿ ಮನುಷ್ಯನ ಸಾತ್ತ್ವಿಕತೆಯ ಪ್ರಮಾಣ ಎಲ್ಲಕ್ಕಿಂತ ಹೆಚ್ಚಿತ್ತು. ಮುಂದೆ ನಾಲ್ಕನೇ ಯುಗದವರೆಗೆ ಪ್ರತಿಯೊಂದು ಯುಗದಲ್ಲಿ ಸಾತ್ತ್ವಿಕತೆಯ ಹ್ರಾಸವಾಯಿತು. ಅನುಭೂತಿಗಳ ಕ್ರಮದ ವಿಚಾರ ಮಾಡಿದರೆ, ಅದ್ವೈತದ (‘ನಾನು ಮತ್ತು ಈಶ್ವರ ಒಂದೇ ಆಗಿದ್ದೇವೆ’) ಅನುಭೂತಿಯನ್ನು ಸರ್ವಶ್ರೇಷ್ಠ ಅನುಭೂತಿ ಎಂದು ತಿಳಿಯಲಾಗುತ್ತದೆ. ಅದರ ನಂತರ ಎರಡನೇ ಕ್ರಮದಲ್ಲಿ ಶಾಂತಿಯ ಅನುಭೂತಿ ಶ್ರೇಷ್ಠವಾಗಿದೆ. ಅದಕ್ಕೂ ಮುಂದೆ ಇಳಿಕೆಯ ಕ್ರಮದಲ್ಲಿ ಆನಂದ,ಚೈತನ್ಯ, ಭಾವ ಮತ್ತು ಎಲ್ಲಕ್ಕಿಂತ ಕನಿಷ್ಠ ಸ್ತರದಲ್ಲಿ ಶಕ್ತಿಯ ಅನುಭೂತಿ ಎಂದು ತಿಳಿಯಲಾಗುತ್ತದೆ. ಸತ್ಯಯುಗದಲ್ಲಿ ಮನುಷ್ಯನ ಸಾತ್ತ್ವಿಕತೆ ಎಲ್ಲಕ್ಕಿಂತ ಹೆಚ್ಚಿದ್ದುದರಿಂದ ಎಲ್ಲ ಜನರು ಅದ್ವೈತದ, ಅಂದರೆ ಸರ್ವೋಚ್ಚ ಅನುಭೂತಿಯ ಸ್ಥಿತಿಯಲ್ಲಿದ್ದರು. ಮುಂದೆ ಮನುಷ್ಯನ ಸಾತ್ತ್ವಿಕತೆ ಸ್ವಲ್ಪ ಕಡಿಮೆಯಾಯಿತು ಮತ್ತು ಸಾತ್ತ್ವಿಕತೆಯ ಕ್ರಮಕ್ಕನುಸಾರ ಎರಡನೇ ಕ್ರಮಾಂಕದಲ್ಲಿರುವ ತ್ರೇತಾಯುಗದಲ್ಲಿ ಶ್ರೀರಾಮನ ಅವತಾರವಾಯಿತು. ಆದುದರಿಂದ ಅವನ ನಾಮಜಪವನ್ನು ಮಾಡುವಾಗ ಅನುಭೂತಿಗಳಲ್ಲಿ ಶ್ರೇಷ್ಠತೆಯಲ್ಲಿ ಎರಡನೆಯ ಕ್ರಮಾಂಕದಲ್ಲಿರುವ ಶಾಂತಿಯ ಅನುಭೂತಿ ಬಂದಿತು. ತ್ರೇತಾಯುಗದ ತುಲನೆಯಲ್ಲಿ ಕಡಿಮೆ ಸಾತ್ತ್ವಿಕತೆ ಇರುವ ಮೂರನೇ ಕ್ರಮಾಂಕದ ದ್ವಾಪರಯುಗದಲ್ಲಿ ಶ್ರೀಕೃಷ್ಣನ ಅವತಾರವಾಯಿತು. ಆದುದರಿಂದ ಅವನ ನಾಮಜಪವನ್ನು ಮಾಡುವಾಗ ಅನುಭೂತಿಗಳಲ್ಲಿ ಮೂರನೆಯ ಕ್ರಮಾಂಕದಲ್ಲಿರುವ ಆನಂದದ ಅನುಭೂತಿ ಬಂತು.

೨ ಆ. ಶ್ರೀರಾಮನ ತತ್ತ್ವವು ಶ್ರೀವಿಷ್ಣುವಿನ ನಿರ್ಗುಣ ರೂಪಕ್ಕೆ ಹೆಚ್ಚು ಸಂಬಂಧಿಸಿದೆ; ಆದುದರಿಂದ ಶ್ರೀರಾಮನ ನಾಮಜಪವನ್ನು ಮಾಡುವಾಗ ನಿರ್ಗುಣ ರೂಪಕ್ಕೆ ಸಂಬಂಧಿಸಿದ ಶಾಂತಿಯ ಅನುಭೂತಿ ಬಂತು. ಶ್ರೀಕೃಷ್ಣನ ತತ್ತ್ವವು ಶ್ರೀವಿಷ್ಣುವಿನ ಸಗುಣ ರೂಪಕ್ಕೆ ಹೆಚ್ಚು ಸಂಬಂಧಿಸಿದೆ; ಆದುದರಿಂದ ಶ್ರೀಕೃಷ್ಣನ ನಾಮಜಪ ಮಾಡುವಾಗ ನಿರ್ಗುಣ ರೂಪಕ್ಕೆ ಕಡಿಮೆ ಸಂಬಂಧಿಸಿದ ಆನಂದದ ಅನುಭೂತಿ ಬಂದಿತು. ಯುಗಗಳಿಗನುಸಾರ ದೇವತೆಗಳ ಆಯಾ ರೂಪಗಳಲ್ಲಿ ಕಾರ್ಯವನ್ನು ಮಾಡುವ ಸ್ತರ ಬದಲಾಗುತ್ತದೆ. ಆದುದರಿಂದ ಆ ರೂಪಗಳಿಗನುಸಾರ ಅನುಭೂತಿ ಬರುವ ಸ್ವರೂಪವೂ ಬದಲಾಗುತ್ತದೆ.

೨ ಇ. ದೇವತೆಗಳ ಗುಣವೈಶಿಷ್ಟ್ಯಗಳಿಗನುಸಾರವೂ ಅನುಭೂತಿಗಳು ಬಂದವು. ಶ್ರೀರಾಮನ ಹೆಸರನ್ನು ಉಚ್ಚರಿಸಿದರೆ, ಶ್ರೀರಾಮನ ಶಾಂತ ಮುದ್ರೆಯಿರುವ ರೂಪವು ಕಣ್ಣುಗಳೆದುರು ಬರುತ್ತದೆ. ಅದೇ ಶ್ರೀಕೃಷ್ಣನ ಹೆಸರು ಉಚ್ಚರಿಸಿದರೆ, ಶ್ರೀಕೃಷ್ಣನ ಆನಂದದ ಮುದ್ರೆಯಿರುವ ರೂಪವು ಕಣ್ಣುಗಳೆದುರು ಬರುತ್ತದೆ. ‘ಶ್ರೀಕೃಷ್ಣನು ಬಾಲಲೀಲೆಗಳ ಮಾಧ್ಯಮದಿಂದ ಭಕ್ತರಿಗೆ, ಹಾಗೆಯೇ ರಾಸಕ್ರೀಡೆಯ ಮಾಧ್ಯಮದಿಂದ ಗೋಪಿಯರಿಗೆ ಬಹಳ ಅನಂದವನ್ನು ನೀಡಿದನು’, ಎಂದು ಶ್ರೀಕೃಷ್ಣನ ಚರಿತ್ರೆಯಲ್ಲಿದೆ. ಶ್ರೀರಾಮನ ನಾಮಜಪ ಮಾಡುವಾಗ ಶ್ರೀರಾಮನ ಶಾಂತಮಯ ರೂಪಕ್ಕೆ ಹೊಂದುವ ಶಾಂತಿಯ ಮತ್ತು ಶ್ರೀಕೃಷ್ಣನ ನಾಮಜಪ ಮಾಡುವಾಗ ಶ್ರೀಕೃಷ್ಣನ ಆನಂದದಾಯಕ ರೂಪಕ್ಕೆ ಹೊಂದುವ ಆನಂದದ ಅನುಭೂತಿಗಳು ಬಂದವು.

– (ಸಚ್ಚಿದಾನಂದ ಪರಬ್ರಹ್ಮ) ಡಾ. ಆಠವಲೆ (೨೬.೩.೨೦೨೦)

Leave a Comment