ಕಾಲಾನುಸಾರ ಬದಲಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ವಿವಿಧ ಬಿರುದುಗಳ ಬಗೆಗಿನ ವಿವೇಚನೆ !

Article also available in :

‘ಗುರುಕೃಪಾಯೋಗಾ’ನುಸಾರ ಸಾಧನೆ ಮಾಡಿ ಸಾಧಕನು ಶೇ. ೭೦ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದರೆ, ಅವನಿಗೆ ‘ಸಂತ’ ಅಥವಾ ‘ಗುರು’ ಎನ್ನಲಾಗುತ್ತದೆ ಮತ್ತು ಅವನ ಹೆಸರಿಗೆ ‘ಪೂ. / ಪೂಜ್ಯ’ ಎಂಬ ಬಿರುದನ್ನು ಸೇರಿಸಲಾಗುತ್ತದೆ. ವ್ಯಷ್ಟಿ ಅಥವಾ ಸಮಷ್ಟಿ ಸಂತರು ಶೇ. ೮೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದರೆ, ಅವರಿಗೆ ‘ಸದ್ಗುರು’ ಎನ್ನಲಾಗುತ್ತದೆ ಮತ್ತು ಅವರ ಹೆಸರಿಗೆ ಆ ಬಿರುದನ್ನು ಸೇರಿಸಲಾಗುತ್ತದೆ. ಅವರು ಶೇ. ೯೦ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದ ನಂತರ ಅವರಿಗೆ ‘ಪರಾತ್ಪರ ಗುರು’ ಎಂಬ ಬಿರುದನ್ನು ಸೇರಿಸಲಾಗುತ್ತದೆ.

ಗುರು ಪದವಿಯಿಂದ ಪರಾತ್ಪರ ಗುರು ಪದವಿಯ ವರೆಗಿನ ಡಾ. ಜಯಂತ ಆಠವಲೆಯವರ ಪ್ರವಾಸ

೧೯೯೧ ರಲ್ಲಿ ಡಾ. ಜಯಂತ ಆಠವಲೆಯವರ ಆಧ್ಯಾತ್ಮಿಕ ಮಟ್ಟ ಶೇ. ೭೦ ರಷ್ಟಿತ್ತು. ಆಗ ಪ.ಪೂ. ಭಕ್ತರಾಜ ಮಹಾರಾಜರು ಡಾ. ಆಠವಲೆಯವರ ಸಂತತ್ವವನ್ನು ಪರೋಕ್ಷವಾಗಿ ಘೋಷಿಸಿದ್ದರು. ಹೀಗಿದ್ದರೂ ಡಾ. ಆಠವಲೆಯವರು ತಮ್ಮನ್ನು ‘ಪ.ಪೂ. ಭಕ್ತರಾಜ ಮಹಾರಾಜರ ಶಿಷ್ಯ’ರೆಂದು ತಿಳಿಯುತ್ತಿದ್ದುದರಿಂದ ಅವರು ಸನಾತನದ ಸಾಧಕರಿಗೆ ”ನನನ್ನು ‘ಡಾಕ್ಟರ್’ ಎಂದೇ ಕರೆಯಿರಿ” ಎಂದು ಹೇಳಿದ್ದರು. ಆದ್ದರಿಂದ ಎಲ್ಲ ಸಾಧಕರು ಅವರನ್ನು ‘ಡಾಕ್ಟರ್’ ಎಂದೇ ಕರೆಯುತ್ತಿದ್ದರು. ೧೯೯೫ ರಲ್ಲಿ ಡಾ. ಆಠವಲೆಯವರ ಆಧ್ಯಾತ್ಮಿಕ ಮಟ್ಟವು ಶೇ. ೮೦ ಕ್ಕಿಂತ ಹೆಚ್ಚಾಯಿತು. ಈ ಕಾಲಾವಧಿಯಲ್ಲಿ ಡಾ. ಆಠವಲೆಯವರ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಮಾಡಿದ ಅನೇಕ ಸಾಧಕರಿಗೆ ಡಾ. ಆಠವಲೆಯವರ ಬಗ್ಗೆ ವಿವಿಧ ಅನುಭೂತಿಗಳು ಬಂದಿದ್ದವು. ಸಾಧಕರಿಗೆ ಅವರ ಮೇಲಿನ ಶ್ರದ್ಧೆಯು ಹೆಚ್ಚಾಗುತ್ತಿತ್ತು ಮತ್ತು ಸಾಧಕರು ಅವರನ್ನು ಗುರುಸ್ಥಾನದಲ್ಲಿ ನೋಡಲಾರಂಭಿಸಿದ್ದರು. ೧೯೯೫ ರಿಂದ ಕೆಲವು ಸಾಧಕರು ಅವರನ್ನು ‘ಪ.ಪೂ. ಡಾಕ್ಟರ್’ ಎಂದು ಕರೆಯತೊಡಗಿದರು. ೨೦೦೩ ರಿಂದ ಹೆಚ್ಚುಕಡಿಮೆ ಎಲ್ಲ ಸಾಧಕರು ಅವರನ್ನು ‘ಪ.ಪೂ. ಡಾಕ್ಟರ್’ ಎಂದು ಕರೆಯುತ್ತಿದ್ದರು. ಆಗ ಓರ್ವ ಸಂತರು ಹೇಳಿದುದರಿಂದ ಡಾ. ಆಠವಲೆಯವರ ಹೆಸರಿಗೆ ‘ಪ.ಪೂ. (ಪರಮ ಪೂಜ್ಯ)’ ಎಂಬ ಬಿರುದನ್ನು ಸೇರಿಸಲು ಆರಂಭಿಸಲಾಯಿತು. ೨೦೦೮ ರಲ್ಲಿ ಅವರ ಆಧ್ಯಾತ್ಮಿಕ ಮಟ್ಟ ಶೇ. ೯೧ ರಷ್ಟಾಗಿದ್ದರೂ, ೨೦೧೩ ರಿಂದ ಓರ್ವ ಸಂತರು ಸೂಚಿಸಿದಂತೆ ಪ.ಪೂ. ಡಾಕ್ಟರರ ಹೆಸರಿಗೆ ‘ಪರಾತ್ಪರ ಗುರು’ ಎಂಬ ಬಿರುದನ್ನು ಸೇರಿಸಲು ಆರಂಭವಾಯಿತು.

ಡಾ. ಆಠವಲೆಯವರಲ್ಲಿರುವ ಈಶ್ವರೀ ತತ್ತ್ವದಿಂದ ಎಲ್ಲರಿಗೂ ಲಾಭವಾಗಬೇಕೆಂದು ೧೩.೭.೨೦೨೨ ರಿಂದ ಅವರನ್ನು ‘ಸಚ್ಚಿದಾನಂದ ಪರಬ್ರಹ್ಮ’ ಎಂದು ಸಂಬೋಧಿಸಲು ಸಪ್ತರ್ಷಿಗಳು ಹೇಳುವುದು

ಪರಾತ್ಪರ ಗುರು ಡಾ. ಆಠವಲೆಯವರ ೭೮ ನೇ ಜನ್ಮೋತ್ಸವದ ದಿನ (ವೈಶಾಖ ಕೃಷ್ಣ ಸಪ್ತಮಿಯಂದು [೧೩.೫.೨೦೨೦]) ‘ಸಪ್ತರ್ಷಿ ಜೀವನಾಡಿಪಟ್ಟಿ’ಯ ಮಾಧ್ಯಮದಿಂದ ಸಪ್ತರ್ಷಿಗಳು ಪರಾತ್ಪರ ಗುರು ಡಾ. ಆಠವಲೆಯವರಿಗೆ ‘ಸಚ್ಚಿದಾನಂದ ಪರಬ್ರಹ್ಮ’ ಎಂಬ ಬಿರುದನ್ನು ಪ್ರದಾನಿಸಿದರು. ಅನಂತರ ಗುರುಪೂರ್ಣಿಮೆಯಂದು (೧೩.೭.೨೦೨೨ ರಂದು) ಸಪ್ತರ್ಷಿಗಳು ಈ ಬಿರುದು ಜನಮಾನಸದಲ್ಲಿ ರೂಢಿಯಾಗಲು ನಾಡಿಪಟ್ಟಿಯ ಮೂಲಕ ‘ಪರಾತ್ಪರ ಗುರು ಡಾ. ಆಠವಲೆ’ ಇವರಿಗೆ ‘ಸಚ್ಚಿದಾನಂದ ಪರಬ್ರಹ್ಮ’ ಎಂಬ ಬಿರುದು ಸೇರಿಸಬೇಕು ಎಂದು ಆಜ್ಞೆ ಮಾಡಿದರು. ಈ ಆಜ್ಞೆಗನುಸಾರ ೧೩.೭.೨೦೨೨ ರಿಂದ ಪರಾತ್ಪರ ಗುರು ಡಾಕ್ಟರರನ್ನು ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ’ ಎಂದು ಸಂಬೋಧಿಸಲು ಆರಂಭಿಸಲಾಯಿತು.

‘ಸಚ್ಚಿದಾನಂದ ಎಂದರೆ ‘ಸತ್-ಚಿತ್-ಆನಂದ’ ಇದು ಪರಮಾತ್ಮ ಪರಬ್ರಹ್ಮನ ಸ್ವರೂಪದ ಲಕ್ಷಣಗಳಾಗಿವೆ. ಯಾರು ಸತ್‌ಘನ, ಚಿತ್‌ಘನ ಮತ್ತು ಆನಂದಘನರಾಗಿದ್ದಾರೆಯೋ, ಅಂತಹ ಗುರುದೇವರಲ್ಲಿರುವ ಪರಬ್ರಹ್ಮ ಪರಮಾತ್ಮ ಶಕ್ತಿಗೆ ನಮ್ಮ ನಮಸ್ಕಾರವಿರಲಿ’ ಎಂದು ಸಪ್ತರ್ಷಿಗಳು ಅತ್ಯಂತ ಶ್ರದ್ಧೆಯಿಂದ ಹೇಳಿದ್ದಾರೆ. ‘ಸಚ್ಚಿದಾನಂದ ಪರಬ್ರಹ್ಮ’ ಎಂದು ಸಂಬೋಧಿಸುವುದರಿಂದ ‘ಪರಾತ್ಪರ ಗುರು ಡಾ. ಆಠವಲೆಯವರಲ್ಲಿರುವ ಈಶ್ವರೀ ತತ್ತ್ವದಿಂದ ಎಲ್ಲರಿಗೂ ಲಾಭವಾಗಬೇಕು’ ಎಂಬುದು ಸಪ್ತರ್ಷಿಗಳ ಈ ಸಂಬೋಧನೆಯ ಹಿಂದಿನ ಉದ್ದೇಶವಾಗಿದೆ. ‘ಮುಂದಿನ ೨೦೦೦ ವರ್ಷಗಳ ಕಾಲ ಅವರು ಈ ಹೆಸರಿನಿಂದಲೇ ಗುರುತಿಸಲ್ಪಡುವರು’ ಎಂದೂ ಸಪ್ತರ್ಷಿಗಳು ಹೇಳಿದ್ದಾರೆ. ಈ ರೀತಿ ಸಪ್ತರ್ಷಿಗಳ ಆಜ್ಞೆಗನುಸಾರ ಪ್ರಸ್ತುತ ಜಾಲತಾಣದಲ್ಲಿ ಆವಶ್ಯಕವಿರುವ ಕಡೆಗಳಲ್ಲಿ ಹೀಗೆ ಉಲ್ಲೇಖಿಸಲಾಗಿದೆ.’ (ಕೆಲವೊಮ್ಮೆ ಸಾಧಕರು ೧೩.೭.೨೦೨೨ ರ ನಂತರ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಬಗ್ಗೆ ಬರೆದು ಕೊಟ್ಟಿರುವ ಬರಹಗಳಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಸಾಧನೆಯ ಪ್ರಾರಂಭದ ಕಾಲದ ವಿಷಯವೂ ಇರುತ್ತದೆ. ಸಾಧಕರು ಭಾವದಿಂದಾಗಿ ಆ ಕಾಲದ ಬರಹಗಳಲ್ಲೂ ‘ಸಚ್ಚಿದಾನಂದ ಪರಬ್ರಹ್ಮ’ ಎಂಬ ಬಿರುದು ಸೇರಿಸಿದ್ದಲ್ಲಿ ಅದನ್ನು ಹಾಗೆಯೇ ಇಡಲಾಗಿದೆ. ವೀರ ಸಾವರಕರ, ಲೋಕಮಾನ್ಯ ತಿಲಕ್, ಸ್ವಾಮಿ ವಿವೇಕಾನಂದ ಮುಂತಾದವರಿಗೆ ಅವರ ಬಿರುದುಗಳು ಪ್ರಾಪ್ತವಾಗುವ ಮೊದಲಿನ ಅವರ ಕಾರ್ಯದ ಇತಿಹಾಸವನ್ನು ಬರೆಯುವಾಗ ಅವರ ಹೆಸರನ್ನು ಬಿರುದಿನೊಂದಿಗೆ ಉಲ್ಲೇಖಿಸಲಾಗುತ್ತದೆ. ಇದೂ ಅದೇ ರೀತಿಯಾಗಿದೆ.)

– ಸನಾತನ ಸಂಸ್ಥೆ

Leave a Comment