ಸಾಧನಾವೃದ್ಧಿ ಸತ್ಸಂಗ (16)

ಆವರಣವನ್ನು ತೆಗೆಯುವುದು

ಹಿಂದೆ ನಾವು ಆಧ್ಯಾತ್ಮಿಕ ತೊಂದರೆ ಹಾಗೂ ಆಧ್ಯಾತ್ಮಿಕ ಉಪಚಾರಗಳು, ಹಾಗೂ ಉಪ್ಪು ನೀರಿನ ಉಪಾಯದ ಬಗ್ಗೆಯೂ ತಿಳಿದುಕೊಂಡಿದ್ದೆವು. ಈಗ ನಾವು ಆಧ್ಯಾತ್ಮಿಕ ಉಪಚಾರಗಳ ಅಂತರ್ಗತ ಆವರಣವನ್ನು ತೆಗೆಯುವುದು ಎಂದರೇನು ಎಂಬ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ. ಆವರಣ ಬಂದಿದೆಯೇನು? ಇದನ್ನು ಹೇಗೆ ಗುರುತಿಸುವುದು, ಹಾಗೂ ಆವರಣವನ್ನು ದೂರಗೊಳಿಸಲು ಯಾವ್ಯಾವ ಆಧ್ಯಾತ್ಮಿಕ ಉಪಚಾರಗಳನ್ನು ಮಾಡಬೇಕು ಇದರ ಬಗ್ಗೆ ತಿಳಿದುಕೊಳ್ಳೋಣ. ಕೆಲವೊಮ್ಮೆ ನಮಗೆ ಏನೂ ಹೊಳೆಯದಿರುವುದು, ಮನಸ್ಸು ಅಸ್ವಸ್ಥವಾಗುವುದು, ಕಿರಿಕಿರಿಯಾಗುವುದು, ಶಾರೀರಿಕ ಕಾರಣಗಳೇನೂ ಇಲ್ಲದಿದ್ದರೂ ಬಹಳ ಸುಸ್ತಾಗುವುದು, ತುಂಬಾ ಆಯಾಸವೆನಿಸುವುದು, ನಾಮಜಪಿಸುವ ಇಚ್ಛೆಯಾಗದಿರುವುದು, ಮುಂತಾದ ತೊಂದರೆಗಳ ಅನುಭವವಾಗುತ್ತದೆ. ಕೆಲವು ಜನರಿಗೆ ನಿರುತ್ಸಾಹವೆನಿಸುವುದು, ಏನೂ ಹೊಳೆಯದಿರುವುದು, ಜಡತ್ವ ಅನಿಸುವುದು ಮುಂತಾದ ಅನುಭವಗಳಾಗುತ್ತವೆ. ಹೀಗಾಗುವಾಗ ನೀವೆಲ್ಲ ಏನು ಮಾಡುತ್ತೀರಿ? ಅದಕ್ಕೆ ಉಪಾಯವೆಂದು ವಿಶ್ರಾಂತಿ ಪಡೆಯುವುದು ಅಥವಾ ಮನಸ್ಸಿಗೆ ಇಷ್ಟವಾದ ವಿಷಯದಲ್ಲಿ ವ್ಯಸ್ತರಾಗಿ ಬಿಡುವುದು ಇತ್ಯಾದಿಗಳನ್ನು ಮಾಡಲಾಗುತ್ತದೆ. ಆದರೆ ಅದರಿಂದ ವಿಶೇಷ ವ್ಯತ್ಯಾಸವೇನೂ ಆಗುವುದಿಲ್ಲ. ಏಕೆಂದರೆ ಈ ಲಕ್ಷಣಗಳಿಗೆ ಹೆಚ್ಚಾಗಿ ಆಧ್ಯಾತ್ಮಿಕ ಕಾರಣವೇ ಇರುತ್ತದೆ ಮತ್ತು ಆಧ್ಯಾತ್ಮಿಕ ಉಪಚಾರ ಮಾಡಿದ ನಂತರ ಸ್ಥಿತಿಯಲ್ಲಿ ಪರಿವರ್ತನೆಯಾಗುತ್ತದೆ. ನಮ್ಮ ಮೇಲೆ ಬಂದಿರುವ ನಕಾರಾತ್ಮಕ ಶಕ್ತಿಗಳ ಆವರಣವನ್ನು ತೆಗೆಯುವುದು ಒಂದು ಮಹತ್ವಪೂರ್ಣ ಆಧ್ಯಾತ್ಮಿಕ ಉಪಾಯವಾಗಿದೆ.

ಅ. ಆವರಣ ಎಂದರೇನು

ಮೊದಲು ನಾವು ಆವರಣ ಎಂದರೇನು ಎಂಬುದನ್ನು ತಿಳಿದುಕೊಳ್ಳೋಣ. ಕಲಿಯುಗದಲ್ಲಿ ಹೆಚ್ಚಿನ ಜನರು ಸಾಧನೆಯನ್ನು ಮಾಡುವುದಿಲ್ಲ ಹಾಗಾಗಿ ಇಂದಿನ ಕಾಲದಲ್ಲಿ ನಮ್ಮ ನಾ‌ಲ್ಕೂ ದಿಕ್ಕುಗಳಲ್ಲಿರುವ ವಾತಾವರಣವು ಬಹಳ ರಜ-ತಮಾತ್ಮಕವಾಗಿದೆ. ಈ ವಾತಾವರಣದಿಂದ ನಮ್ಮ ಮೇಲೆ ಪ್ರಭಾವವಾಗುತ್ತದೆ. ಅದರಿಂದ ನಮ್ಮ ಮೇಲೆ ಆವರಣ ಬರುತ್ತದೆ. ನಾವು ಕೆಟ್ಟದಾದ ರಸ್ತೆಯಲ್ಲಿ ಹೋಗುತ್ತಿರುವಾಗ ನಮ್ಮ ಕೈಕಾಲುಗಳಿಗೆ ಗಲೀಜು ತಗಲುತ್ತದೆ. ಅದೇ ರೀತಿ ನಮ್ಮ ನಾಲ್ಕೂ ದಿಕ್ಕುಗಳಲ್ಲಿರುವ ರಜತಮಾತ್ಮಕ ವಾತಾವರಣದಿಂದ ನಮ್ಮ ಮೇಲೆ ಸೂಕ್ಷ್ಮ ಸ್ತರದಲ್ಲಿ ಪರಿಣಾಮವಾಗುತ್ತಿರುತ್ತದೆ. ಯಾರಿಗಾದರೂ ಅನಿಷ್ಟ ಶಕ್ತಿಗಳಿಂದ ತೊಂದರೆಯಿದ್ದಲ್ಲಿ ಅದರಿಂದಲೂ ಆವರಣವು ಬರುತ್ತದೆ. ಹೆಚ್ಚು ಕಮ್ಮಿ ಪ್ರಮಾಣದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಮೇಲೆಯೂ ಆವರಣ ಬರುತ್ತದೆ. ಆಧ್ಯಾತ್ಮಿಕ ಉಪಾಯಗಳನ್ನು ಮಾಡಿ ಈ ಆವರಣವನ್ನು ದೂರಗೊಳಿಸಲು ಸಾಧ್ಯವಾಗುತ್ತದೆ.

ಆ. ನಮ್ಮ ಮೇಲೆ ಆವರಣ ಬಂದಿದೆಯೋ ಇಲ್ಲವೋ ಎಂದು ಹೇಗೆ ಗುರುತಿಸುವುದು ?

ಮೇಲೆ ಹೇಳಿದಂತೆ ಆವರಣದಿಮದ ವ್ಯಕ್ತಿಗೆ ಏನೂ ಹೊಳೆಯದಿರುವುದು, ಮನಸ್ಸು ಅಸ್ವಸ್ಥವಾಗುವುದು, ಕಿರಿಕಿರಿಯಾಗುವುದು, ಶಾರೀರಿಕ ಕಾರಣಗಳೇನೂ ಇಲ್ಲದಿದ್ದರೂ ಬಹಳ ಸುಸ್ತಾಗುವುದು, ತುಂಬಾ ಆಯಾಸವೆನಿಸುವುದು, ತಲೆ ನೋವು, ತಲೆಭಾರ, ಕಣ್ಣುಗಳು ಉರಿಯುವುದು, ನಿದ್ದೆ ಬರದಿರುವುದು, ನಾಮಜಪಿಸುವ ಇಚ್ಛೆ ಇಲ್ಲದಿರುವುದು ಮತ್ತು ಆಧ್ಯಾತ್ಮಿಕ ಉಪಚಾರಗಳಿಂದ ಏನೂ ಪರಿಣಾಮ ಆಗದಿರುವುದು ಮುಂತಾದ ತೊಂದರೆಗಳಾಗುತ್ತವೆ. ಕೆಲವೊಮ್ಮೆ ಶರೀರದ ಕೆಲವೊಂದು ಭಾಗಗಳಲ್ಲಿ ವೇದನೆಯಾಗುವುದು, ಪಿತ್ತವಾಗುವುದು, ಮುಂತಾದ ತೊಂದರೆಗಳಾಗುತ್ತವೆ. ಕಲಿಯುಗದಲ್ಲಿ ಹೆಚ್ಚುಕಮ್ಮಿ ಪ್ರತಿಯೊಬ್ಬ ವ್ಯಕ್ತಿಯ ಮೇಲೆ ನಕಾರಾತ್ಮಕ ಅಥವಾ ಕೆಟ್ಟ ಶಕ್ತಿಗಳ ಆವರಣವು ಬರುತ್ತದೆ.

ಇ.  ಆವರಣ ಬರುವುದರ ಪರಿಣಾಮಗಳು

ಆವರಣವು ಬರುವುದರ ಆಧ್ಯಾತ್ಮಿಕ ಸ್ತರದಲ್ಲಿ ಏನು ಪರಿಣಾಮವಾಗುತ್ತದೆ ಅಂದರೆ ಅದರಿಂದ ಆಧ್ಯಾತ್ಮಿಕ ಉಪಚಾರಗಳ ಸ್ಪಂದನಗಳು ವ್ಯಕ್ತಿಯ ತನಕ ತಲುಪುವುದಿಲ್ಲ. ಇದನ್ನು ನೀವು ಸಹ ಅನುಭವಿಸಿರಬಹುದು ಕೆಲವೊಮ್ಮೆ ಜಪ ಮಾಡಿದ ನಂತರ ತುಂಬಾ ಒಳ್ಳೆಯದೆನಿಸುತ್ತದೆ ಮತ್ತು ಕೆಲವೊಮ್ಮೆ ನಾಮಜಪವಾದ ನಂತರ  ಏನೂ ಅನುಭವಕ್ಕೆ ಬರುವುದಿಲ್ಲ. ನಾಮಜಪವನ್ನು ಏಕಾಗ್ರತೆಯಿಂದ ಮಾಡಲು ಪ್ರಯತ್ನಿಸಿದರೂ ಮನಸ್ಸು ಅಲೆದಾಡುತ್ತದೆ. ಆವರಣದಿಂದ ಉಪಚಾರಗಳ ಸ್ಪಂದನಗಳು ವ್ಯಕ್ತಿಯ ತನಕ ತಲುಪುವುದಿಲ್ಲ ಮತ್ತು ಅದರಿಂದ ಅವನ ತೊಂದರೆಗಳ ನಿವಾರಣೆಯಾಗುವುದಿಲ್ಲ. ಇಂತಹ ಸಮಯದಲ್ಲಿ ಆಧ್ಯಾತ್ಮಿಕ ಉಪಾಯವನ್ನು ಮಾಡಿ ನಮ್ಮ ಮೇಲೆ ಬಂದಿರುವ ಆವರಣವನ್ನು ದೂರಗೊಳಿಸಿ ನಾಮಜಪಿಸಲು ಪ್ರಯತ್ನಿಸೋಣ.

೧. ಆವರಣ ತೆಗೆಯುವ ಸಾತ್ತ್ವಿಕ ಸಾಧನಗಳು

ಆವರಣವು ರಜ-ತಮವಾಗಿರುವುದರಿಂದ ಅದನ್ನು ದೂರಗೊಳಿಸಲು ಸಾತ್ತ್ವಿಕ ವಸ್ತುಗಳನ್ನು ಉಪಯೋಗಿಸುವುದು ಆವಶ್ಯಕವಿರುತ್ತದೆ. ಈ ಸಾತ್ತ್ವಿಕ ವಸ್ತುಗಳು ಯಾವುವು? ಅದನ್ನು ತಿಳಿದುಕೊಳ್ಳೋಣ. ನವಿಲುಗರಿಯ ಗುಚ್ಛ, ಉರಿಸದೇ ಇರುವ ಸಾತ್ತ್ವಿಕ ಊದುಬತ್ತಿ, ಅಥವಾ ‘ಸನಾತನ ಪ್ರಭಾತ’ ಪತ್ರಿಕೆ! ನವಿಲುಗರಿಯಿಂದ ಕೃಷ್ಣತತ್ತ್ವವು ಇರುತ್ತದೆ. ‘ಸನಾತನ ಪ್ರಭಾತ’ ವರ್ತಮಾನ ಪತ್ರಿಕೆಯ ಹಿಂದೆ ಸಂತರ ಸಂಕಲ್ಪವಿರುವುದರಿಂದ ಜೊತೆಗೆ ಅದರಲ್ಲಿ ಕೇವಲ ಸಾಧನೆಗೆ ಸಂಬಂಧಿಸಿದ, ರಾಷ್ಟ್ರ ಮತ್ತು ಧರ್ಮಕ್ಕೆ ಸಂಬಂಧಿಸಿದ ಲೇಖನಗಳಿರುವುದರಿಂದ ಅದರಲ್ಲಿ ಬ್ರಾಹ್ಮತೇಜ ಮತ್ತು ಕ್ಷಾತ್ರತೇಜದ ಸಂಗಮವಿದೆ. ಮಹಾನ್ ಸಂತರಾದ ಪರಾತ್ಪರ ಗುರು ಪಾಂಡೆ ಮಹಾರಾಜರು ‘‘ಸನಾತನ ಪ್ರಭಾತ’ ವರ್ತಮಾನ ಪತ್ರಿಕೆಯ ಬಗ್ಗೆ ಗೌರವೋದ್ಗಾರವನ್ನು ತೆಗೆಯುತ್ತ ‘ಇದು ಆತ್ಮಚೈತನ್ಯದ ಮೇಲೆ ಬಂದಿರುವ ಆವರಣವನ್ನು ದೂರಗೊಳಿಸುವ ಸಮಾಚಾರ ಪತ್ರಿಕೆಯಾಗಿದೆ’ ಎಂದು ಹೇಳಿದ್ದರು. ಹಾಗಾಗಿ ನಾವು ಆವರಣವನ್ನು ತೆಗೆಯಲು ‘ಸನಾತನ ಪ್ರಭಾತ’ವನ್ನು ಸಹ ಉಪಯೋಗಿಸಬಹುದು. ಈ ಸಾತ್ತ್ವಿಕ ವಸ್ತುಗಳಿಂದ ಆವರಣವನ್ನು ತೆಗೆಯುವುದರಿಂದ ಅನೇಕ ಜನರಿಗೆ ಹಗುರ ಅನಿಸುವುದು ನಕಾರಾತ್ಮಕ ವಾತಾವರಣ ಇಲ್ಲವಾದುದು ಮುಂತಾದ ಅನುಭೂತಿಗಳು ಬಂದಿವೆ.

೨. ಆವರಣವನ್ನು ಹೇಗೆ ತೆಗೆಯಬೇಕು ?

ಮೊಟ್ಟಮೊದಲಿಗೆ ನವಿಲುಗರಿ, ಸಾತ್ತ್ವಿಕ ಊದುಬತ್ತಿ ಅಥವಾ ಸನಾತನ ಪ್ರಭಾತ ಪತ್ರಿಕೆಯನ್ನು ಕೈಯಲ್ಲಿ ಹಿಡಿದು ಕೈಯನ್ನು ನೇರ ಮಾಡಿ ಶರೀರದ ಮೇಲೆ ಹೊರಗಿನ ದಿಕ್ಕಿನಿಂದ ಪಕ್ಕದಲ್ಲಿ ಬಂದಿರುವ ಆವರಣವನ್ನು ತೆಗೆಯಬೇಕು. ಈ ಸಮಯದಲ್ಲಿ ಯಾವುದಾದರೊಂದು ವಸ್ತುವನ್ನು ನಾವು ದೂರ ತಳ್ಳುವಾಗ ಹೇಗೆ ಮಾಡುತ್ತೇವೆಯೋ ಅದೇ ರೀತಿ ಮಾಡಬೇಕು. ಅನಂತರ ಕೈಯನ್ನು ನಿಧಾನವಾಗಿ (ಮೆಲ್ಲ ಮೆಲ್ಲ) ಶರೀರದ ಹತ್ತಿರ ತಂದು ಅಲ್ಲಿನ ಆವರಣವನ್ನು ತೆಗೆಯಬೇಕು. ಅದನ್ನು ಮಾಡಿದ ನಂತರ ಕೈಯನ್ನು ಇನ್ನಷ್ಟು ಹತ್ತಿರ ತಂದು ಅಲ್ಲಿನ ಆವರಣವನ್ನು ತೆಗೆಯಬೇಕು. ಪ್ರತಿಯೊಂದು ಬಾರಿ ಕಡಿಮೆಪಕ್ಷ ಅರ್ಧದಿಂದ ಒಂದು ನಿಮಿಷದ ತನಕ ಆವರಣವನ್ನು ತೆಗೆಯಬೇಕು. ಇದನ್ನು ಮಾಡುವಾಗ ಸಾಧ್ಯವಿದ್ದಲ್ಲಿ ಸಾತ್ತ್ವಿಕ ವಸ್ತು ನಮ್ಮ ಶರೀರವನ್ನು ಸ್ಪರ್ಶಿಸದಂತೆ ತೆಗೆಯಬೇಕು. ಇದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು. ಶರೀರದ ಹತ್ತಿರದಲ್ಲಿ ಬಂದಿರುವ ಆವರಣವನ್ನು ತೆಗೆಯುವಾಗ ಶರೀರದಿಂದ ೨-೩ ಇಂಚು ದೂರದಲ್ಲಿ ಸಾತ್ತ್ವಿಕ ವಸ್ತುವನ್ನು ಹಿಡಿದು ಅದನ್ನು ಸಹಸ್ರಾರ ಚಕ್ರದಿಂದ ಪ್ರಾರಂಭಿಸಿ ಮೂಲಾಧಾರ ಚಕ್ರದ ತನಕ ಅಂದರೆ ತಲೆಯಿಂದ ಹಿಡಿದು ಮುಂದೆ ಹೊಟ್ಟೆಯ ಕೆಳಭಾಗದ ತನಕ ಮೇಲಿನಿಂದ ಕೆಳಗೆ ಈ ಪದ್ಧತಿಯಿಂದ ಆ ಸಾತ್ತ್ವಿಕ ವಸ್ತುವನ್ನು ೭-೮ ಸಲ ತಿರುಗಿಸಬೇಕು. ನಮ್ಮ ಸಹಸ್ರಾರ ಚಕ್ರದ ಮೇಲೆ ಆವರಣದ ಪರಿಣಾಮವು ಹೆಚ್ಚು ಇರುತ್ತದೆ. ಹಾಗಾಗಿ ಸಪ್ತಚಕ್ರಗಳ ಮೇಲೆ ಮೇಲಿನಿಂದ ಕೆಳಗಿನ ದಿಕ್ಕಿನಲ್ಲಿ ಸಾತ್ತ್ವಿಕ ವಸ್ತುವನ್ನು ತಿರುಗಿಸಿ ಆವರಣವನ್ನು ದೂರಗೊಳಿಸಬೇಕು.ಈ ಪದ್ಧತಿಯಿಂದ ಕಡಿಮೆಪಕ್ಷ ನಿರಂತರ ೫ ನಿಮಿಷದ ತನಕ ಆವರಣವನ್ನು ತೆಗೆಯಬೇಕು. ಸಾತ್ತ್ವಿಕ ವಸ್ತುಗಳಲ್ಲಿ ವಿದ್ಯಮಾನವಾಗಿರುವ ಒಳ್ಳೆಯ ಶಕ್ತಿಯಿಂದ ಶರೀರದ ಮೇಲೆ ಬಂದಿರುವ ಆವರಣವು ದೂರವಾಗಲು ಸಹಾಯವು ಸಿಗುತ್ತದೆ. ಊದುಬತ್ತಿಯಿಂದ ಆವರಣವನ್ನು ತೆಗೆಯುವಾಗ ಉರಿಸದಿರುವ ಊದುಬತ್ತಿಯನ್ನು ನಮ್ಮ ಶರೀರದ ಮೇಲೆ ಮೇಲಿನಿಂದ ಕೆಳಗಿ ಈ ಪದ್ಧತಿಯಿಂದ ಕುಂಡಲಿನಿಯ ಸಪ್ತಚಕ್ರಗಳ ಮೇಲೆ ತಿರುಗಿಸಬೇಕು. ಹೀಗೆ ಮಾಡುವುದರಿಂದ ಅಲ್ಲಿನ ಕಪ್ಪು ಶಕ್ತಿಯು ನಾಶವಾಗುತ್ತದೆ. ಹಿಂದಿನ ಲೇಖನದಲ್ಲಿ ಕೃತಿಗೆ ಭಾವವನ್ನು ಜೋಡಿಸುವುದುರ ಮಹತ್ವವನ್ನು ತಿಳಿದುಕೊಂಡಿದ್ದೆವು. ನಾವು ಭಾವವನ್ನಿಟ್ಟುಕೊಂಡು ಮತ್ತು ಪ್ರಾರ್ಥನೆಯನ್ನು ಮಾಡಿ ಆವರಣವನ್ನು ತೆಗೆದರೆ ಉಪಾಯಗಳ ಪರಿಣಾಮವು ಹೆಚ್ಚಾಗಿ ಆವರಣವು ಬೇಗನೇ ದೂರವಾಗುತ್ತದೆ.

೩. ಕೈಗಳಿಂದ ಆವರಣವನ್ನು ಹೇಗೆ ತೆಗೆಯಬೇಕು?

ಸಾಧ್ಯವಿದ್ದಲ್ಲಿ ಸಾತ್ತ್ವಿಕ ವಸ್ತುಗಳ ಸಹಾಯದಿಂದ ಆವರಣವನ್ನು ತೆಗೆಯಬೇಕು; ಆದರೆ ಅದು ಲಭ್ಯವಿಲ್ಲದಿದ್ದಲ್ಲಿ ಅದನ್ನು ನಾವು ನಮ್ಮ ಕೈಗಳಿಂದಲೇ ಆವರಣವನ್ನು ತೆಗೆಯಬಹುದು. ನಮ್ಮ ಕೈಗಳ ಬೆರಳುಗಳಿಂದ ಪ್ರಾಣಶಕ್ತಿಯು ವಹನ (ಸಾಗಾಟ) ಆಗುತ್ತಿರುತ್ತದೆ. ಹಾಗಾಗಿ ಆವರಣವನ್ನು ದೂರಗೊಳಿಸಲು ಸಹಾಯವು ಸಿಗುತ್ತದೆ. ನಮ್ಮ ಕೈಗಳಿಂದಲೇ ನಮ್ಮ ಮೇಲೆ ಬಂದಿರುವ ಆವರಣವನ್ನು ಹೇಗೆ ದೂರಗೊಳಿಸಬೇಕು ಎಂದರೆ

೧. ಸೆಖೆಯಾಗುತ್ತಿರುವಾಗ ಕೆಲವೊಮ್ಮೆ ನಾವು ಹೇಗೆ ನಮ್ಮ ಕೈಗಳಿಂದ ಹೇಗೆ ಗಾಳಿಯನ್ನು ತೆಗೆದುಕೊಳ್ಳುತ್ತೇವೆಯೋ ಅದೇ ರೀತಿ ನಾವು ನಮ್ಮ ಎರಡೂ ಕೈಗಳಿಂದ ನಮ್ಮ ಶರೀರದ ಮೇಲೆ ಬಂದಿರುವ ಆವರಣವನ್ನು ಶರೀರದಿಂದ ದೂರಗೊಳಿಸೋಣ.

೨. ಅಥವಾ ಶರೀರದ ಸಪ್ತಚಕ್ರಗಳ ಮೇಲೆ ಬಂದಿರುವ ಆವರಣವನ್ನು ನಮ್ಮ ಕೈಗಳ ಮುಷ್ಠಿಯನ್ನು ಒಟ್ಟು ಮಾಡಿ ಅದನ್ನು ಕುಳಿತುಕೊಂಡ ಕಡೆಯಿಂದಲೇ ದೂರಗೊಳಿಸಬೇಕು.

ಉ. ಆವರಣವು ವ್ಯಕ್ತಿಯ ಸುತ್ತಲೂ ಎಷ್ಟು ದೂರ ದ ತನಕ ಹರಡುತ್ತದೆ?

ಕೆಟ್ಟ ಶಕ್ತಿಗಳಿಂದ ಬಂದಿರುವ ಆವರಣವು ವ್ಯಕ್ತಿಯ ಸುತ್ತಲೂ ಸುಮಾರು  ೨-೩ ಸೆ.ಮಿ. ನಿಂದ ೧೫ ಸೆ.ಮೀ. ಅಥವಾ ಕೆಲವೊಮ್ಮೆ ೨-೩ ಮೀ. ದೂರದ ತನಕ ಹರಡಬಲ್ಲದು.

೧. ಆವರಣವನ್ನು ತೆಗೆಯುವ ಸಮಯದಲ್ಲಿ ಇಷ್ಟದೇವತೆಯಲ್ಲಿ ಮಾಡಬೇಕಾದ ಆವಶ್ಯಕ ಪ್ರಾರ್ಥನೆ : ಆವರಣವನ್ನು ತೆಗೆಯಲು ಆರಂಭಿಸುವ ಸಮಯದಲ್ಲಿ ಮೊದಲು ಇಷ್ಟದೇವತೆಯಲ್ಲಿ ಭಾವಪೂರ್ಣವಾಗಿ ಪ್ರಾರ್ಥನೆಯನ್ನು ಮಾಡೋಣ. ಹೇ ಭಗವಂತಾ, ತಮ್ಮ ಕೃಪೆಯಿಂದ ನನಗೆ ನನ್ನ ಶರೀರದ ಮೇಲೆ ಬಂದಿರುವ ಆವರಣವನ್ನು ತೆಗೆಯಲು ಸಾಧ್ಯವಾಗಲಿ ಮತ್ತು ಅದರಿಂದ ನನಗಾಗುತ್ತಿರುವ ಕೆಟ್ಟ ಶಕ್ತಿಗಳ ತೊಂದರೆಯು ಬೇಗನೇ ದೂರವಾಗಲಿ ಇದೇ ತಮ್ಮ ಚರಣಗಳಲ್ಲಿ ಪ್ರಾರ್ಥನೆ !

೨. ಆವರಣವನ್ನು ತೆಗೆಯುವ ಸಮಯದಲ್ಲಿ ನಮ್ಮ ಇಷ್ಟದೇವತೆ ಅಥವಾ ಭಗವಂತ ಶ್ರೀಕೃಷ್ಣನ ‘ಓಂ ನಮೋ ಭಗವತೇ ವಾಸುದೇವಾಯ’ ಈ ನಾಮಜಪವನ್ನು ಮಾಡಬೇಕು. ಪ್ರಾರ್ಥನೆ ಮತ್ತು ನಾಮಜಪವನ್ನು ಮಾಡುವುದರಿಂದ ಈಶ್ವರನಿಂದ ಸಹಾಯ ದೊರಕಿ ಆವರಣ ಹಾಗೂ ಜೊತೆಗೆ ಕೆಟ್ಟ ಶಕ್ತಿಗಳ ತೊಂದರೆಯಿಂದ ನಮ್ಮ ರಕ್ಷಣೆಯಾಗಲು ಸಹಾಯವು ಸಹ ಸಿಗುತ್ತದೆ.

೩. ಆವರಣವನ್ನು ತೆಗೆಯುವ ಸಮಯದಲ್ಲಿ ಕಣ್ಣುಗಳು ತೆರೆದಿರಬೇಕು : ಆವರಣವನ್ನು ತೆಗೆಯುವ ಸಮಯದಲ್ಲಿ ಕಣ್ಣುಗಳು ತೆರೆದಿರಬೇಕು. ಅದರಿಂದ ಆವರಣವು ಬೇಗನೇ ದೂರವಾಗುತ್ತದೆ. ಏಕೆಂದರೆ ಆ ಸಮಯದಲ್ಲಿ ಆವರಣವನ್ನು ತೆಗೆಯಲು ನಮ್ಮ ಕಣ್ಣುಗಳಿಂದ ಪ್ರಕ್ಷೇಪಿತವಾಗುವ ತೇಜತತ್ತ್ವದ ಸಹಾಯ ಸಿಗುತ್ತದೆ.

೪. ಆವರಣವನ್ನು ತೆಗೆದಾದ ನಂತರ ಇಷ್ಟದೇವತೆಯ ಬಗ್ಗೆ ಭಾವಪೂರ್ಣ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.

ಊ. ಆವರಣವು ದೂರವಾಗಿದೆ ಎಂದು ಹೇಗೆ ಗುರುತಿಸುವುದು?

ಆವರಣವನ್ನು ತೆಗೆಯುವಾಗ ಆಕಳಿಕೆ ಬರುವುದು, ತೇಗು ಬರುವುದು, ಜೊತೆಗೆ ಲೇಖನದ ಆರಂಭದಲ್ಲಿ ಆವರಣ ಬಂದಿರುವುದರ ಬಗ್ಗೆ ತಿಳಿದುಕೊಂಡಂತಹ ಲಕ್ಷಣಗಳು ಕಡಿಮೆಯಾಗುತ್ತದೆ. ಅವುಗಳಲ್ಲಿ ಪರಿವರ್ತನೆಯಾಗಿರುವುದು ಗಮನಕ್ಕೆ ಬರುತ್ತದೆ.   ಶರೀರ ಮತ್ತು ಮನಸ್ಸು ಹಗುರ ಹಾಗೂ ಉತ್ಸಾಹಿಯಾಗಿರುವುದು ಇವೆಲ್ಲವೂ ಗಮನಕ್ಕೆ ಬರುತ್ತದೆ.

ಎ. ಪ್ರಾಯೋಗಿಕ ಭಾಗ

ಈಗ ನಾವು ಪ್ರಾಯೋಗಿಕವಾಗಿ ನಮ್ಮ ಮೇಲೆ ಬಂದಿರುವ ಆವರಣವನ್ನು ದೂರಗೊಳಿಸುವ ಕೃತಿಯನ್ನು ಸಹ ಮಾಡಿ ನೋಡೋಣ. ತಮ್ಮ ಬಳಿ ಸನಾತನ ಪ್ರಭಾತದ ಸಂಚಿಕೆ ಇದ್ದಲ್ಲಿ ಅದನ್ನು, ಅಥವಾ ಸಾತ್ತ್ವಿಕ ಊದುಬತ್ತಿ ಅಥವಾ ನವಿಲುಗರಿ ಇದ್ದಲ್ಲಿ ಅದನ್ನು ತೆಗೆದುಕೊಳ್ಳಿ. ಈ ವಸ್ತುಗಳ ಪೈಕಿ ಯಾವುದೂ ಇಲ್ಲವಾದರೆ ಪೆನ್ ಹಿಡಿದುಕೊಂಡು ಅದು ಸಾತ್ತ್ವಿಕ ಊದುಬತ್ತಿಯಾಗಿದೆ ಎಂಬ ಭಾವವನ್ನು ಇಟ್ಟುಕೊಳ್ಳಿ. ಭಗವಂತನಲ್ಲಿ ಆರ್ತರಾಗಿ ಪ್ರಾರ್ಥನೆಯನ್ನು ಮಾಡಿ. ‘ಹೇ ಭಗವಂತಾ, ನನ್ನ ಮೇಲೆ ಬಂದಿರುವ ಕೆಟ್ಟ ಶಕ್ತಿಗಳ ಆವರಣವು ನಾಶವಾಗಲಿ. ನನ್ನ ಸುತ್ತಲೂ ನಿಮ್ಮ ನಾಮಜಪದ ಸಂರಕ್ಷಣಾ ಕವಚವು ನಿರ್ಮಾಣವಾಗಲಿ. ನಾನು ನಿಮ್ಮ ಚರಣಗಳಲ್ಲಿ ಶರಣಾಗಿದ್ದೇನೆ’. ಈಗ ನಾವು ಮೊಟ್ಟಮೊದಲಿಗೆ ನಮ್ಮ ಕೈಯು ಎಷ್ಟು ದೂರದ ತನಕ ನೇರವಾಗಿ ಹೋಗುತ್ತದೆ ಅಷ್ಟು ದೂರ ತೆಗೆದುಕೊಂಡು ಹೋಗಿ ಅವರಣವನ್ನು ದೂರಗೊಳಿಸೋಣ. ಆ ಸಮಯದಲ್ಲಿ ನಾವು ಸಾತ್ತ್ವಿಕ ವಸ್ತುಗಳ ಸಹಾಯದಿಂದ ಆವರಣವನ್ನು ದೂರ ತಳ್ಳುತ್ತಿದ್ದೇವೆ ಎಂಬ ರೀತಿಯಲ್ಲಿ ಪ್ರಯತ್ನಿಸೋಣ. ಅದರ ನಂತರ ಮೆಲ್ಲ ಮೆಲ್ಲ ನಮ್ಮ ಶರೀರದ ಸುತ್ತಲಿರುವ ಆವರಣವನ್ನು ದೂರಗೊಳಿಸೋಣ. ಅದರ ನಂತರ ಸಪ್ತಚಕ್ರಗಳ ಮೇಲಿನಿಂದ ಕೆಳಗಿನ ದಿಕ್ಕಿನಲ್ಲಿ ೪-೫ ಸಲ ಸಾತ್ತ್ವಿಕ ವಸ್ತುಗಳನ್ನು ತಿರುಗಿಸೋಣ. ಅದರ ನಂತರ ಮೇಲಿನಿಂದ ಕೆಳಗೆ ಒಂದೊಂದೇ ಚಕ್ರದ ಮೇಲೆ ಸಾತ್ತ್ವಿಕ ವಸ್ತುಗಳನ್ನು ತಿರುಗಿಸೋಣ. ಭಗವಂತನ ಚೈತನ್ಯದಿಂದ ನಮ್ಮ ಮೇಲೆ ಬಂದಿರುವ ಆವರಣವು ದೂರವಾಗುತ್ತಿದೆ ಎಂಬ ಭಾವವನ್ನು ಇಟ್ಟುಕೊಳ್ಳೋಣ. ಈಗ ನಾವು ಭಗವಂತನ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸೋಣ.

ಏ. ಆವರಣವನ್ನು ತೆಗೆಯುವುದರಿಂದಾಗುವ ಲಾಭಗಳು

ಸೇವೆಯನ್ನು ಆರಂಭಿಸುವ ಮೊದಲು ಆವರಣವನ್ನು ತೆಗೆಯುವುದರಿಂದ ಸೇವೆಯು ಭಾವಪೂರ್ಣ ಹಾಗೂ ದೋಷರಹಿತವಾಗಿ ಆಗಲು ಸಹಾಯ ಸಿಗುತ್ತದೆ. ಆವರಣವನ್ನು ತೆಗೆದು ನಾಮಜಪವನ್ನು ಆರಂಭಿಸುವುದರಿಂದ ನಾಮಜಪವು ಏಕಾಗ್ರತೆಯಿಂದ ಮತ್ತು ಭಾವಪೂರ್ಣವಾಗಿ ಆಗುತ್ತದೆ. ನಾಮಜಪದಿಂದ ಯೋಗ್ಯ ಚೈತನ್ಯ ಶಕ್ತಿಯನ್ನು ಗ್ರಹಿಸಿಕೊಳ್ಳಲು ಸಾಧ್ಯವಾಗುತ್ತದೆ. ಸ್ವಭಾವದೋಷಗಳಿಗೆ ನೀಡಲಾಗುವ ಸ್ವಯಂಸೂಚನೆಯ ಸತ್ರವು ನಮ್ಮ ಅಂತರ್ಮನದ ತನಕ ತಲುಪಿ ಅದರ ಪರಿಣಾಮವು ಹೆಚ್ಚಾಗುತ್ತದೆ. ಇದರಿಂದ ನಾವು ಕಡಿಮೆ ಕಾಲಾವಧಿಯಲ್ಲಿ ನಾವು ದೋಷಗಳ ಮೇಲೆ ವಿಜಯ ಸಾಧಿಸಬಹುದು. ಭಾವಜಾಗೃತಿಯೂ ಆಗುತ್ತದೆ. ಸಾಧನೆಯ ಯಾತ್ರೆಯಲ್ಲಿ ಕೆಟ್ಟ ಶಕ್ತಿಗಳಿಂದಾಗುವ ತೊಂದರೆಯಿಂದ ಸುರಕ್ಷಿತವಾಗಿರಲು ಆಧ್ಯಾತ್ಮಿಕ ಉಪಾಯವು ಒಂದು ಮಹತ್ವಪೂರ್ಣ ಮಜಲು ಎನ್ನಬಹುದು. ಹೆಚ್ಚಿನ ಸಂಪ್ರದಾಯಗಳಲ್ಲಿ ಇದನ್ನು ಕಲಿಸದ ಕಾರಣ ಅನೇಕ ಜನರ ಸಾಧನೆಯು ಒಂದೇ ಸ್ತರದಲ್ಲಿ ಸಿಲುಕಿಕೊಳ್ಳುತ್ತದೆ. ಪ್ರಾಚೀನ ಕಾಲದಲ್ಲಿ ಅಸುರರು ಋಷಿ-ಮುನಿಗಳ ಯಜ್ಞಗಳಲ್ಲಿ ವಿಘ್ನಗಳನ್ನು ಹಾಕುತ್ತಿದ್ದರು ಇದು ಸಹ ಅದೇ ರೀತಿಯಾಗಿದೆ. ಸುರ-ಅಸುರರ ನಡುವಿನ ಸಂಗ್ರಾಮವು ಅನಾದಿ ಕಾಲದಿಂದ ನಡೆಯುತ್ತಾ ಬಂದಿದೆ. ಈ ಕಲಿಯುಗದಲ್ಲಿ ಸಹ ಕೆಟ್ಟ ಶಕ್ತಿಗಳು ಸಾಧನೆಯನ್ನು ಮಾಡುತ್ತಿರುವ ಜೀವಗಳ ಸಾಧನೆಯಾಗಬಾರದು ಎಂದು ಅವರಿಗೆ ಅನೇಕ ರೀತಿಯ ಕಷ್ಟಗಳನ್ನು ನೀಡಲು ಪ್ರಯತ್ನಿಸುತ್ತವೆ. ಹೀಗಿದ್ದರೂ ದೇವಾಸುರ ಸಂಗ್ರಾಮದಲ್ಲಿ ಕೊನೆಗೆ ದೇವರಿಗೆನೇ ವಿಜಯವಾಗುತ್ತದೆ ಇದು ತ್ರಿಕಾಲಾಬಾಧಿತ ಸತ್ಯವಾಗಿದೆ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು.

ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ. ಆಠವಲೆಯವರು ಸ್ವಯಂ ಪ್ರಯೋಗ ಮತ್ತು ಸಂಶೋಧನೆ ಮಾಡಿ ಆಧ್ಯಾತ್ಮಿಕ ಉಪಚಾರಗಳ ಬೇರೆ ಬೇರೆ ರೀತಿಯ ಅಗ್ಗದ ಸರಳ ಪದ್ಧತಿಗಳನ್ನು ಹುಡುಕಿ ತೆಗೆದಿದ್ದಾರೆ. ನಮ್ಮ ಜೀವನದಲ್ಲಿ ಬರುವ ಸಮಸ್ಯೆಗಳ ಮೇಲೆ ವಿಜಯವನ್ನು ಗಳಿಸಲು ನಾವು ಈ ಆಧ್ಯಾತ್ಮಿಕ ಪದ್ಧತಿಗಳನ್ನು ಉಪಯೋಗಿಸಿದರೆ ಅದರಿಂದ ನಮ್ಮ ಸಾಧನೆಯಲ್ಲಿ ಬರುವ ಸಮಸ್ಯೆಗಳು ದೂರವಾಗುತ್ತವೆ.

ಐ.  ಆವರಣವನ್ನು ಎಷ್ಟು ಸಲ ತೆಗೆಯಬೇಕು?

ನಾವು ದಿನದಲ್ಲಿ ಕಡಿಮೆಪಕ್ಷ ೭ರಿಂದ ೮ ಸಲ ಪ್ರತಿ ಸಲ ೫ ನಿಮಿಷದ ತನಕ ನಮ್ಮ ಮೇಲೆ ಬಂದಿರುವ ಆವರಣವನ್ನು ತೆಗೆಯಬೇಕು. ಬೆಳಗ್ಗೆ ಎದ್ದ ನಂತರ ನಮ್ಮ ನಿತ್ಯಕ್ರಮವನ್ನು ಆರಂಭಿಸುವ ಮೊದಲು, ರಾತ್ರಿ ಮಲಗುವ ಮೊದಲು ಹಾಗೂ ದಿನವಿಡೀ ಸ್ವಲ್ಪ ಸ್ವಲ್ಪ ಸಮಯ ಬಿಟ್ಟು ೫-೬ ಸಲ ನಮ್ಮ ಮೇಲೆ ಬಂದಿರುವ ಆವರಣವನ್ನು ತೆಗೆಯೋಣ. ನಿಯಮತವಾಗಿ ಆವರಣವನ್ನು ತೆಗೆಯುವುದರಿಂದ ನಮಗೆ ಖಂಡಿತವಾಗಿ ಹಗುರತನದ ಅರಿವಾಗುವುದು ಮತ್ತು ನಮ್ಮಲ್ಲಿ ಸಕಾರಾತ್ಮಕತೆಯು ಹೆಚ್ಚಾಗುವುದು.

Leave a Comment