ಸಾಧನಾವೃದ್ಧಿ ಸತ್ಸಂಗ (15)

ಭಾವಜಾಗೃತಿ (ಕೃತಿಗೆ ಭಾವವನ್ನು ಜೋಡಿಸುವುದು)

ಹಿಂದೆ ನಾವು ಭಾವ ಎಂದರೇನು? ಸಾಧನಾ ಪ್ರವಾಸದಲ್ಲಿ ಭಾವಜಾಗೃತಿಯ ಮಹತ್ವವೇನು? ಎಂದು ತಿಳಿದುಕೊಂಡಿದ್ದೆವು. ಇಂದಿನ ಸತ್ಸಂಗದಲ್ಲಿ ನಮ್ಮಲ್ಲಿರುವ ಭಾವವನ್ನು ಹೆಚ್ಚಿಸಲು ಇನ್ನು ಏನೇನು ಪ್ರಯತ್ನಗಳನ್ನು ಹೇಗೆ ಮಾಡಬಹುದು ಎಂದು ತಿಳಿದುಕೊಳ್ಳೋಣ. ‘ಭಾವ ಇದ್ದಲ್ಲಿ ದೇವ’ ಎಂದು ಹೇಳಲಾಗುತ್ತದೆ. ಹಾಗಾಗಿ ಸಾಧನಾ ಮಾರ್ಗದಲ್ಲಿ ನಮ್ಮಲ್ಲಿ ದೇವರ ಕುರಿತಾಗಿ ಇರುವಂತಹ ಭಾವವನ್ನು ಹೆಚ್ಚಿಸಲು ಪ್ರಯತ್ನಿಸುವುದು ಆವಶ್ಯಕವಾಗಿದೆ.

ಅ. ಅಷ್ಟಸಾತ್ತ್ವಿಕಭಾವದ ಲಕ್ಷಣಗಳು

ಭಾವಜಾಗೃತಿಯ ಪ್ರಯತ್ನಗಳಿಂದ ನಮ್ಮಲ್ಲಿರುವ ಭಕ್ತಿಭಾವವು ಹೆಚ್ಚಾಗುತ್ತದೆ. ಮನಸ್ಸಿನ ನಿರರ್ಥಕ ವಿಚಾರಗಳು ಕಡಿಮೆಯಾಗುತ್ತವೆ. ಹಾಗೂ ಚಿತ್ತದ ಏಕಾಗ್ರತೆಯು ಹೆಚ್ಚಾಗುತ್ತದೆ. ತಾವು ಅಷ್ಟಸಾತ್ತ್ವಿಕಭಾವ ಎಂಬ ಶಬ್ದವನ್ನು ಕೇಳಿರಬಹುದು. ಅಷ್ಟಸಾತ್ತ್ವಿಕಭಾವ ಎಂದರೇನು? ೧. ಸ್ತಂಭನ (ಅಂದರೆ ಸ್ತಂಭಿಭೂತರಾಗುವುದು) ೨. ಸ್ವೇದ (ಬೆವರುವುದು) ೩. ರೋಮಾಂಚನ, ೪. ವೈಸ್ವರ್ಯ (ಸ್ವರಭಂಗ) ೫. ಕಂಪನ ೬. ವೈವರ್ಣ್ಯ (ಬಣ್ಣ ಬದಲಾಗುವುದು) ೭. ಅಶ್ರುಪಾತ ೮. ಪ್ರಲಯ-ಚೇಷ್ಟಾ ನಿರೋಧ (ಮೂರ್ಛೆ ತಪ್ಪುವುದು) ಈ ಎಂಟು ಲಕ್ಷಣಗಳು ಯಾರಾದರೊಬ್ಬರಲ್ಲಿ ಕಂಡುಬರುವುದೋ ಆಗ ಅಷ್ಟಸಾತ್ತ್ವಿಕಭಾವ ಜಾಗೃತವಾಗಿದೆ ಎಂದು ಹೇಳುತ್ತಾರೆ.

ಆ. ಭಾವದ ಘಟಕಗಳು

ತಾವು ಸಂತರ ಉದಾಹರಣೆಗಳನ್ನು ಕೇಳಿರಬಹುದು. ಉತ್ಕಟ ಭಾವಾವಸ್ಥೆಯಿಂದಾಗಿ ಪ್ರತ್ಯಕ್ಷ ದೇವರೇ ಭಕ್ತರಿಗಾಗಿ ಅವತರಿಸುತ್ತಾರೆ. ಪ್ರಹ್ಲಾದನ ಭಕ್ತಿಯಿಂದ ಪ್ರತ್ಯಕ್ಷ ನರಸಿಂಹನು ಪ್ರತ್ಯಕ್ಷವಾಗಬೇಕಾಯಿತು. ಸಂತ ಮೀರಾಬಾಯಿಯವರಿಗೂ ಶ್ರೀಕೃಷ್ಣನಲ್ಲಿ ಅಚಲವಾದ ಭಕ್ತಿ ಇದ್ದುದರಿಂದ ಅನೇಕ ಮಾರಣಾಂತಿಕ ಪ್ರಸಂಗಗಳಲ್ಲಿ ಶ್ರೀಕೃಷ್ಣನು ಅವರನ್ನು ರಕ್ಷಿಸಿದ್ದನು. ನಾವೂ ಸಹ ಉತ್ಕಟಭಾವದ ದಿಶೆಯಲ್ಲಿ ಸಾಗಬೇಕಾಗಿದೆ. ಆದರೆ ಭಾವದಲ್ಲಿರುವ ಉತ್ಕಟತೆಯು ಹೆಚ್ಚಾಗಿ ಅನುಭವಕ್ಕೆ ಬರುವುದಿಲ್ಲ ಹಾಗಾಗಿ ಅದಕ್ಕಾಗಿ ಉದ್ದೇಶಪೂರ್ವಕವಾಗಿ ಪ್ರಯತ್ನಿಸುವುದು ಆವಶ್ಯವಾಗಿದೆ. ಅದಕ್ಕಾಗಿ ಮೊದಲು ನಾವು ಭಾವದ ಘಟಕಗಳು ಯಾವುವು ಅಂದರೆ ಯಾವ ಘಟಕಗಳಿಂದ ಭಾವವು ಉತ್ಪತ್ತಿಯಾಗುತ್ತದೆ ಎಂದು ತಿಳಿದುಕೊಳ್ಳೋಣ. ಪ್ರಾರ್ಥನೆ, ಕೃತಜ್ಞತೆ, ಸೇವೆ, ಪ್ರೀತಿ, ಆನಂದ ಮತ್ತು ಶಾಂತಿ ಇವು ಭಾವದ ಘಟಕಗಳಾಗಿವೆ. ಇವುಗಳಲ್ಲಿ ಪ್ರಾರ್ಥನೆ, ಕೃತಜ್ಞತೆ, ಸೇವೆ, ಪ್ರೀತಿ ಇವು ಸಾಧನೆಯಲ್ಲಿನ ಕೃತಿಯ ಭಾಗಗಳಾಗಿವೆ; ಅಂದರೆ ಆ ರೀತಿ ನಾವು ಪ್ರತ್ಯಕ್ಷ ಕೃತಿಯನ್ನು ಮಾಡಬೇಕಾಗುತ್ತದೆ ಅಥವಾ ವರ್ತಿಸಬೇಕಾಗುತ್ತದೆ. ಆನಂದ ಮತ್ತು ಶಾಂತಿ ಈ ಘಟಕಗಳು ಅದರ ಪರಿಣಾಮಸ್ವರೂಪವಾಗಿವೆ. ಇದರ ಅರ್ಥವೇನೆಂದರೆ ಭಾವಾವಸ್ಥೆಯಿಂದ ಆನಂದಾವಸ್ಥೆ ಮತ್ತು ಶಾಂತಿಯನ್ನು ಅನುಭವಿಸಲು ಆಗುತ್ತದೆ. ಬುದ್ಧಿಯು ಭಾವದ ಘಟಕವಲ್ಲ ಹಾಗಾಗಿ ಭಾವವು ಯಾವಾಗಲೂ ಮುಗ್ಧವಾಗಿರುತ್ತದೆ.

ಇ. ಭಾವವು ಉತ್ಪತ್ತಿಯಾಗುವಲ್ಲಿರುವ ಅಡಚಣೆಗಳು

ಅಜ್ಞಾನ, ಕರ್ತೃತ್ವ ಮತ್ತು ಅಹಂಭಾವ ಇವು ಭಾವ ಉತ್ಪತ್ತಿಯಾಗುವಲ್ಲಿನ ಮೂರು ಮುಖ್ಯ ಅಡಚಣೆಗಳಾಗಿವೆ.

೧. ಅಜ್ಞಾನ

ಅಂದರೆ ಈಶ್ವರನ ಗುಣ ಮತ್ತು ಸ್ವರೂಪ, ಅವರ ಕಾರ್ಯವನ್ನು ಮಾಡುವ ಪದ್ಧತಿಯ ಬಗ್ಗೆ ಇರುವ ಅಜ್ಞಾನ. ಹೆಚ್ಚಾಗಿ ಪರಿಸ್ಥಿತಿಯನ್ನು ಸ್ವೀಕರಿಸಲು ನಮ್ಮಿಂದಾಗುವುದಿಲ್ಲ ಮತ್ತು ನಮಗೆ ಸಂಘರ್ಷವಾಗುತ್ತದೆ. ಆದರೆ ಪ್ರತಿಯೊಂದು ಪರಿಸ್ಥಿತಿ ಎಂದರೆ ನಮ್ಮ ಪೂರ್ವಜನ್ಮದ ಕರ್ಮಗಳ ಫಲಗಳಾಗಿರುತ್ತವೆ. ಭಗವಂತನು ಪ್ರೀತಿಸ್ವರೂಪನಾಗಿದ್ದಾನೆ. ಅವನು ಯಾರಿಗೂ ಅನ್ಯಾಯ ಮಾಡುವುದಿಲ್ಲ. ಸಾಧನೆಯನ್ನು ಮಾಡುವುದು ಇದೊಂದೇ ಎಲ್ಲ ಸಮಸ್ಯೆಗಳಿಗಿರುವ ಮೂಲ ಸಮಾಧಾನವಾಗಿದೆ. ಇಂತಹ ಕೆಲವು ದೃಷ್ಟಿಕೋನಗಳು ನಮ್ಮ ಅಂತರ್ಮನದಲ್ಲಿ ಬಿಂಬಿತವಾದೊಡನೆ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಭಗವಂತನ ಕೃಪೆಯ ಪ್ರಚೀತಿಯನ್ನು ಅನುಭವಿಸಲು ಆಗುತ್ತದೆ ಮತ್ತು ಅದರಿಂದ ಭಾವವು ಉತ್ಪತ್ತಿಯಾಗುತ್ತದೆ.

೨. ಕರ್ತೃತ್ವ

ಕರ್ತೃತ್ವ ಎಂದರೇನು? ಕರ್ತೃತ್ವ ಎಂದರೆ ಜೀವನದ ವಿವಿಧ ವಿಷಯಗಳು ಈಶ್ವರನಿಂದಲ್ಲ, ನನ್ನಿಂದಾಗಿ ಆಗುತ್ತಿದೆ ಎಂದು ಅನಿಸುವುದು! ವಾಸ್ತವಿಕವಾಗಿ ಒಂದು ಮರದ ಎಲೆ ಸಹ ಭಗವಂತನ ಇಚ್ಛೆಯಿಲ್ಲದೇ ಅಲುಗಾಡಲಾರದು. ಹೀಗಿರುವಾಗ ‘ಇದನ್ನು ನಾನು ಮಾಡಿದೆ’ ‘ನನ್ನಿಂದಾಗಿ ಇದು ಸಾಧ್ಯವಾಯಿತು’, ಅಥವಾ ‘ನಾನು ಇಷ್ಟು ಮಾಡಿಯೂ ನನ್ನ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ’ ಎಂಬಂತಹ ವಿಚಾರಗಳಿರುವುದು ಎಂದರೆ ಕರ್ತೃತ್ವ. ಕರ್ತೃತ್ವದ ತೀವ್ರ ಅರಿವು ಇದ್ದಲ್ಲಿ ಭಾವವು ಉತ್ಪತ್ತಿಯಾಗಲು ಅಡಚಣೆಗಳು ಉಂಟಾಗುತ್ತವೆ.

೩. ಅಹಂಭಾವ

ಅಹಂಭಾವ ಎಂದರೇನು? ‘ನಾನು ಈಶ್ವರನಿಗಿಂತ ಬೇರೆ ಏನೋ ಇದ್ದೇನೆ’ ಎಂಬ ಅರಿವು! ಅಹಂಭಾವ ಎಷ್ಟು ಜಾಸ್ತಿ ಇರುತ್ತದೆಯೋ ಅಷ್ಟು ಈಶ್ವರನ ಬಗ್ಗೆ ಭಾವವು ಉತ್ಪನ್ನವಾಗುವ ಸಾಧ್ಯತೆ ಕಮ್ಮಿಯಿರುತ್ತದೆ.

ನಮ್ಮಲ್ಲಿ ಪ್ರತಿಯೊಬ್ಬರಲ್ಲಿ ಅಜ್ಞಾನ, ಕರ್ತೃತ್ವ, ಮತ್ತು ಅಹಂಭಾವ ಎಂಬ ಸಾಧನೆಯ ಅಡಚಣೆಗಳು ಹೆಚ್ಚು ಕಮ್ಮಿ ಪ್ರಮಾಣದಲ್ಲಿ ಇರುತ್ತವೆ. ಭಾವವು ಉತ್ಪನ್ನವಾಗಲು ಅರಿವಿಟ್ಟು ಪ್ರಯತ್ನಿಸಿದರೆ ಸಾಧನೆಯನ್ನು ಮನಸ್ಸಿಟ್ಟು ಜಿಗುಟುತನದಿಂದ ಮತ್ತು ಪ್ರಾಮಾಣಿಕವಾಗಿ ಮಾಡಿದರೆ, ಗುರುಕೃಪೆಯಿಂದ ಈ ಅಡಚಣೆಗಳು ದೂರವಾಗಬಲ್ಲವು.

ಈ. ಭಾವದ ಲಾಭಗಳು

ಭಾವದಿಂದ ಮನಸ್ಸಿನಲ್ಲಿರುವ ಅಯೋಗ್ಯ ಪ್ರತಿಕ್ರಿಯೆಗಳು, ಅಯೋಗ್ಯ ವಿಚಾರಗಳು ಕಮ್ಮಿಯಾಗಿ ಅಯೋಗ್ಯ ಕೃತಿಗಳು ತಡೆಗಟ್ಟಲ್ಪಡುತ್ತವೆ!

೧. ಅಯೋಗ್ಯ ವಿಚಾರಗಳು, ಪ್ರತಿಕ್ರಿಯೆಗಳು ಕಡಿಮೆಯಾಗುವುದು

ಎಲ್ಲ ಸಂತರು ನಮಗೆ ಭಕ್ತಿ ಭಾವವು ಹೆಚ್ಚಿಸುವಂತೆ ಉಪದೇಶವನ್ನು ಮಾಡಿದ್ದಾರೆ. ಭಕ್ತಿ ಎಂದರೆ ಭಗವಂತನ ವಿಷಯದಲ್ಲಿ ಗಾಢ ಪ್ರೇಮ. ಆ ಅವಸ್ಥೆಯನ್ನು ತಲುಪಲು ‘ದೇವರಿದ್ದಾನೆ’ ಎಂಬ ಅರಿವು ಉತ್ಕಟವಾಗಿರಬೇಕಾಗುತ್ತದೆ. ಇದನ್ನೇ ಭಾವ ಎನ್ನುತ್ತಾರೆ. ಭಾವಜಾಗೃತಿಯ ಪ್ರಯತ್ನಗಳನ್ನು ಮಾಡಿದುದರಿಂದ ಈಶ್ವರ ಮತ್ತು ಗುರುಗಳ ಅಸ್ತಿತ್ವದ ವಿಷಯದ ಅರಿವು ಸತತವಾಗಿ ಜಾಗೃತವಾಗಿರುತ್ತದೆ ಮತ್ತು ಮನಸ್ಸು ಮತ್ತು ಬುದ್ಧಿ ಸಾತ್ತ್ವಿಕವಾಗಲು ಸಹಾಯವಾಗುತ್ತದೆ. ಹಾಗಾಗಿ ನಮ್ಮ ಮನಸ್ಸಿನಲ್ಲಿರುವ ಅಯೋಗ್ಯ ಪ್ರತಿಕ್ರಿಯೆಗಳು, ಅಯೋಗ್ಯ ವಿಚಾರಗಳು ಕಡಿಮೆಯಾಗಿ ಅಯೋಗ್ಯ ಕೃತಿಗಳು ತಡೆಗಟ್ಟಲ್ಪಡುತ್ತವೆ. ಹಾಗಾಗಿ ಸತತವಾಗಿ ಭಾವಜಾಗೃತಿಯ ಪ್ರಯತ್ನಗಳನ್ನು ಮಾಡುತ್ತಿರಬೇಕು.

೨.ಆಧ್ಯಾತ್ಮಿಕ ಸ್ತರದ ಸಾಧನೆಯು ಆರಂಭವಾಗುವುದು

ಭಾವದಲ್ಲಿ ಆನಂದವಿದೆ. ಸಕ್ಕರೆಯ ಸಿಹಿತನವನ್ನು ಹೇಗೆ ಶಬ್ದಗಳಲ್ಲಿ ಹೇಳಲು ಆಗುವುದಿಲ್ಲವೋ ಅದೇರೀತಿ ಭಾವವನ್ನು ಸಹ ಶಬ್ದಗಳಿಂದ ವ್ಯಕ್ತಪಡಿಸಲು ಆಗುವುದಿಲ್ಲ. ಭಗವಂತನ ಅನುಸಂಧಾನದಲ್ಲಿ ಸತತವಾಗಿರಲು ಅತ್ಯಂತ ಸಮೀಪದ ಮಾರ್ಗ ಎಂದರೆ ಭಾವಾವಸ್ಥೆಯಲ್ಲಿರಲು ಪ್ರಯತ್ನಿಸುವುದು. ಭಾವ ಎಂದರೆ ಅಧ್ಯಾತ್ಮದಲ್ಲಿನ ಅ ಆಗಿದೆ. ಅದು ಉತ್ಪನ್ನವಾಗುವ ತನಕ ಸಾಧಕರ ಸಾಧನೆಯು ಮಾನಸಿಕ ಸ್ತರದಲ್ಲಿ ಆಗುತ್ತಿರುತ್ತದೆ. ಸ್ವಲ್ಪದರಲ್ಲಿ ಭಾವ ಎಂದರೆ ದೇವರೆಡೆಗೆ ಹೋಗುವ ಪಾರಪತ್ರ (ಪಾಸ್ ಪೋರ್ಟ) ಆಗಿದೆ. ಭಾವ-ಭಕ್ತಿ ಹೆಚ್ಚಾದಂತೆ ಶಕ್ತಿಯೂ ಹೆಚ್ಚಾಗುತ್ತದೆ.

ನಾವು ಹಿಂದೊಮ್ಮೆ ಭಾವಜಾಗೃತಿಗಾಗಿ ಪ್ರಯತ್ನವೆಂದು ಮಾನಸಪೂಜೆಯನ್ನು ಹೇಗೆ ಮಾಡಬೇಕು ಎಂದು ತಿಳಿದುಕೊಂಡಿದ್ದೆವು. ಈಗ ನಾವು ಪ್ರತಿದಿನ ಕೃತಿಯನ್ನು ಜೋಡಿಸಿಕೊಂಡು ಭಾವಜಾಗೃತಿಯನ್ನು ಹೇಗೆ ಮಾಡಬಹುದು ಎಂದು ತಿಳಿದುಕೊಳ್ಳೋಣ.

ಉ. ಕೃತಿಗೆ ಭಾವವನ್ನು ಜೋಡಿಸುವ ಪ್ರಯತ್ನ

ಭಾವಜಾಗೃತಿಯ ಪ್ರಯತ್ನಗಳನ್ನು ಮಾಡಲು ನಮಗೆ ಸ್ಥಳ, ಕಾಲ, ಸಮಯ ಇವುಗಳ ಯಾವುದೇ ಬಂಧನವಿಲ್ಲ. ಏಕೆಂದರೆ ಭಾವಜಾಗೃತಿಯ ಪ್ರಯತ್ನಗಳನ್ನು ಮಾಡಲು ನಮಗೆ ಬೇರೆ ಸಮಯವನ್ನು ಮೀಸಲಿಡಬೇಕಾಗುವುದಿಲ್ಲ, ನಾವು ಮಾಡುತ್ತಿರುವ ಕೃತಿಯನ್ನೇ ಜೋಡಿಸಿಯೇ ಭಾವದ ಪ್ರಯತ್ನಗಳನ್ನು ಮಾಡಬೇಕಾಗಿದೆ. ನಾವು ನಮ್ಮ ದೈನಂದಿನ ಕೃತಿಗಳಿಗೆ ಯಾವ ರೀತಿ ಭಾವವನ್ನು ಜೋಡಿಸಬಹುದು ಎಂದು ನೋಡೋಣ. ಉದಾಹರಣೆಗೆ : ಅಡುಗೆ ತಯಾರಿಸುವಾಗ ನಾವು ಅನ್ನಪೂರ್ಣಾಮಾತೆಗೆ ಪ್ರಾರ್ಥನೆ ಮಾಡಬಹುದು. ದೇವರಿಗೆ ಪ್ರಸಾದವನ್ನು ತಯಾರಿಸುತ್ತಿದ್ದೇನೆ ಎಂಬ ಭಾವವನ್ನು ಇಡಬಹುದು. ಕಸ ಗುಡಿಸುವಾಗ ‘ಗುರುಗಳ ಆಶ್ರಮದಲ್ಲಿ ಕಸ ಗುಡಿಸುತ್ತಿದ್ದೇನೆ’ ಎಂಬ ಭಾವವನ್ನು ಇಡಬಹುದು. ಕಸವನ್ನು ಗುಡಿಸುವಾಗ ಮನೆಯಲ್ಲಿರುವ ಎಲ್ಲ ನಕಾರತ್ಮಕ ಮತ್ತು ಅನಿಷ್ಟ ಶಕ್ತಿಗಳನ್ನು ಹೊರ ಹಾಕಲಾಗಿದ್ದು ನೆಲದ ಮೇಲೆ ಎಲ್ಲೆಡೆ ಚೈತನ್ಯ ಹರಡುತ್ತಿದೆ ಎಂಬ ಭಾವವನ್ನು ಇಡಬಹುದು. ಸ್ನಾನವನ್ನು ಮಾಡುವಾಗ ‘ಸಪ್ತನದಿಗಳ ಪವಿತ್ರ ಜಲದಿಂದ ನಾನು ಸ್ನಾನ ಮಾಡುತ್ತಿದ್ದೇನೆ ಹಾಗಾಗಿ ನನ್ನ ಸ್ಥೂಲದೇಹದ ಜೊತೆಗೆ ನನ್ನ ಸೂಕ್ಷ್ಮದೇಹವೂ ಶುದ್ಧವಾಗುತ್ತಿದೆ’, ಎಂಬ ಭಾವವನ್ನು ಇಟ್ಟುಕೊಳ್ಳಬಹುದು. ಬಟ್ಟೆ ಎಂದರೆ ದೇವಿಯದ್ದೇ ವಸ್ತ್ರಗಳಾಗಿವೆ. ಆ ವಸ್ತ್ರಗಳನ್ನು ನಾನು ದೇವಿಯ ಚರಣಗಳಲ್ಲಿಟ್ಟಿದ್ದೇನೆ. ಆ ವಸ್ತ್ರಗಳು ಚೈತನ್ಯದಿಂದ ತುಂಬಿದ್ದು ನಾನು ಅದನ್ನು ಧರಿಸಿದುದರಿಂದ ದೇವರ ಸಂರಕ್ಷಣಾ ಕವಚವು ನನ್ನ ಸುತ್ತಲೂ ನಿರ್ಮಾಣವಾಗಿದೆ ಎಂಬ ಭಾವವನ್ನು ಇಟ್ಟುಕೊಳ್ಳಬಹುದು. ಹಣೆಗೆ ಕುಂಕುಮವನ್ನು ಹಚ್ಚುವಾಗ ‘ನಾನು ದೇವಿಯ ಕುಂಕುಮವನ್ನು ಹಚ್ಚಿಕೊಳ್ಳುತ್ತಿದ್ದೇನೆ. ಆ ಮಾಧ್ಯಮದಿಂದ ಆಜ್ಞಾಚಕ್ರದಿಂದ ದೇವಿಯ ಚೈತನ್ಯವು ಶರೀರದೊಳಗೆ ಹೋಗುತ್ತಿದೆ’ ಎಂಬ ಭಾವವನ್ನು ಇಡಬಹುದು. ನೀರನ್ನು ಕುಡಿಯವಾಗ ನೀರು ಎಂದರೆ ತೀರ್ಥವೇ ಆಗಿದೆ; ಅದರಿಂದ ಅಂತರ್ದೇಹದ ಶುದ್ಧಿಯಾಗುತ್ತಿದೆ ಎಂಬ ಭಾವವನ್ನು ಇಟ್ಟುಕೊಳ್ಳಬಹುದು. ಆಹಾರವನ್ನು ಸೇವಿಸುವಾಗ ಅಥವಾ ಊಟ ಮಾಡುತ್ತಿರುವಾಗ ‘ಅನ್ನ ಎಂದರೆ ದೇವರ ಪ್ರಸಾದವಾಗಿದೆ. ಅನ್ನ ಸೇವನೆಯಿಂದ ನನಗೆ ಸಾಧನೆ ಮತ್ತು ಸೇವೆಯನ್ನು ಮಾಡಲು ಶಕ್ತಿಯು ಸಿಗುತ್ತಿದೆ. ಆ ಶಕ್ತಿಯಿಂದ ಮನಸ್ಸಿನಲ್ಲಿರುವ ನಕಾರಾತ್ಮಕ ವಿಚಾರಗಳು ನಾಶವಾಗುತ್ತಿವೆ’ ಎಂಬ ಭಾವವನ್ನು ಇಟ್ಟುಕೊಳ್ಳಬಹುದು. ರಾತ್ರಿ ಮಲಗುವಾಗ ‘ನಾನು ಭಗವಂತನ ಚರಣಗಳಲ್ಲಿ ಒಂದೊಂದೇ ಹೂವನ್ನು ಅರ್ಪಣೆ ಮಾಡುತ್ತಿದ್ದೇನೆ’ ಎಂಬ ಭಾವವನ್ನು ಇಟ್ಟುಕೊಳ್ಳಬಹುದು. ನಾಮಜಪದ ಅಕ್ಷರಗಳು ನಮ್ಮ ಶರೀರದೊಳಗೆ ಹೋಗುತ್ತಿವೆ ಮತ್ತು ನಾವು ನಾಮಮಯವಾಗುತ್ತಿದ್ದೇವೆ ಎಂಬ ಭಾವವನ್ನು ಇಟ್ಟುಕೊಳ್ಳಬಹುದು. ನಮಗೂ ಸಹ ದೇವರು ಬೇರೆ ಬೇರೆ ಭಾವವನ್ನು ಸೂಚಿಸುವನು. ನಾವು ದಿನವಿಡೀ ಕೃತಿಯನ್ನು ಮಾಡುವಾಗ ಮನಸ್ಸಿನಲ್ಲಿ ಬರುವ ವಿಚಾರಗಳು ನಿರರ್ಥಕ ಅಥವಾ ಅನಾವಶ್ಯಕವಾಗಿರುತ್ತವೆ. ಭವಿಷ್ಯದ ಅಥವಾ ಭೂತಕಾಲದಲ್ಲಿನ ನಿರರ್ಥಕ ವಿಚಾರ ಮಾಡುವುದಕ್ಕಿಂತ ವರ್ತಮಾನದಲ್ಲಿ ಮಾಡುತ್ತಿರುವ ಕೃತಿಯತ್ತ ಗಮನ ಹರಿಸಿ ಅದನ್ನು ದೇವರೊಂದಿಗೆ ಯಾಕೆ ಜೋಡಿಸಬಾರದು? ನಾವು ಸಹ ಇಂತಹ ಕೃತಿಗೆ ಭಾವವನ್ನು ಜೋಡಿಸಿ ಭಾವಜಾಗೃತಿಗಾಗಿ ಪ್ರಯತ್ನಿಸಿದರೆ ನಮಗೆ ಹತಾಶೆ ಅಥವಾ ಆಯಾಸದ ಅರಿವಾಗಲಾರದು. ನಮ್ಮ ಮನಸ್ಸಿನಲ್ಲಿರುವ ವಿಚಾರಗಳು ಶಾಂತವಾದ ಅನುಭವ ನಮಗಾಗುವುದು. ಆರಂಭದಲ್ಲಿ ನಮಗೆ ಈ ಪ್ರಯತ್ನಗಳಲ್ಲಿ ಕೃತ್ರಿಮತೆಯ ಅರಿವಾದರೂ ಏನೂ ತೊಂದರೆಯಿಲ್ಲ. ಪ್ರಯತ್ನಗಳಲ್ಲಿ ಸಾತತ್ಯವಿಟ್ಟುಕೊಂಡರೆ ಸ್ವಲ್ಪ ಸಮಯದಲ್ಲಿ ತಮಗೂ ಭಾವದ ಆರ್ದ್ರತೆಯನ್ನು ಖಂಡಿತವಾಗಿಯೂ ಅನುಭವಿಸಲು ಆಗುವುದು.

Leave a Comment