ಶ್ರೀರಾಮ ಜನ್ಮ ತಾಳುವ ಹಿಂದೆ ಇರುವ ಹಲವು ಉದ್ದೇಶಗಳು

ಶ್ರೀರಾಮಚರಿತಮಾನಸದಲ್ಲಿ ‘ಹರಿಯ ಅವತಾರಕ್ಕೆ ಯಾವ ಕಾರಣವಿರುತ್ತದೆಯೋ, ಆ ಕಾರಣವೇ ಮೂಲ ಎಂದು ಹೇಳಲಾಗುವುದಿಲ್ಲ’. ಶ್ರೀಹರಿಯ ಶ್ರೀರಾಮಾವತಾರದ ವಿಷಯದಲ್ಲಿಯೂ ಇಂತಹ ಅನೇಕ ತಿಳಿದಿರುವ ಮತ್ತು ಅಜ್ಞಾತ ಕಾರಣಗಳಿವೆ. ಅವು ಪ್ರತಿ ಕಲ್ಪ-ಯುಗದಲ್ಲಿ ಪ್ರಭು ಶ್ರೀರಾಮನ ಜನ್ಮ ಧರಿಸುವುದನ್ನು ನಿಶ್ಚಯಿಸುತ್ತವೆ.

ಅನಾವರಣಗೊಳ್ಳದ ಶ್ರೀರಾಮನ ಸ್ವರೂಪಕ್ಕೆ ಶತ ಪ್ರಣಾಮಗಳು !

ಶ್ರೀರಾಮಪ್ರಭು! ತಾವು ‘ಅಧೋಕ್ಷಜ’, ಅಂದರೆ ಇಂದ್ರಿಯಗಳಿಗೆ ತಿಳಿಯುವಂತಹ ಜ್ಞಾನಕ್ಕಿಂತ ಮಿಗಿಲಾಗಿರುವಿರಿ. ವಿಶೇಷವಾಗಿ ‘ಅವ್ಯಯ’ ಅಂದರೆ ಅವಿನಾಶಿ ಆಗಿರುವುದರಿಂದ ಇಂದಿನವರೆಗೂ ನಮಗೆ ತಮ್ಮ ಸ್ವರೂಪ ಅರ್ಥಮಾಡಿಕೊಳ್ಳಲಾಗಿಲ್ಲ. ಆ ಅನಾವರಣಗೊಳ್ಳದ ಸ್ವರೂಪಕ್ಕೆ ಶತ ಪ್ರಣಾಮಗಳು!

– ಗುರುದೇವ ಡಾ. ಕಾಟೇಸ್ವಾಮಿ (ಆಧಾರ – ಮಾಸಿಕ ‘ಘನಗರ್ಜಿತ್’, ಫೆಬ್ರವರಿ 2018)

ಅತ್ಯುತ್ತಮ ಆದರ್ಶ ಶ್ರೀರಾಮ!

ಶ್ರೀರಾಮನಂತಹ ಆದರ್ಶ ಪತಿ, ಮಗ, ರಾಜ, ಪುರುಷ, ಶತ್ರುವೂ ಮತ್ತೊಬ್ಬರಿಲ್ಲ. ಇಂತಹ ಆದರ್ಶ ಹಿಂದೆಂದೂ ಹುಟ್ಟಲಿಲ್ಲ, ಮುಂದೆಂದೂ ಕಾಣಿಸಲಾರದು.

– ಗುರುದೇವ ಡಾ. ಕಾಟೇಸ್ವಾಮೀಜಿ (ಆಧಾರ – ಮಾಸಿಕ ‘ಘನಗರ್ಜಿತ್’, ಫೆಬ್ರವರಿ 2017)

೧. ಜಯ-ವಿಜಯರಿಗೆ ತಗುಲಿದ ಶಾಪ, ಅವರನ್ನು ಮುಕ್ತಗೊಳಿಸಲು ಜನ್ಮತಾಳಿದ ಶ್ರೀ ರಾಮಚಂದ್ರ

ಶ್ರೀಹರಿಯ ಇಬ್ಬರು ಪ್ರೀತಿಯ ದ್ವಾರಪಾಲಕರಾದ ಜಯ ಮತ್ತು ವಿಜಯ ಎಂದು ನಮಗೆಲ್ಲರಿಗೂ ತಿಳಿದಿದೆ. ಸನಕಾದಿಯ ಶಾಪದಿಂದಾಗಿ ಇಬ್ಬರೂ ಸಹೋದರರು ರಾಕ್ಷಸರ ತಾಮಸಿಕ ದೇಹಗಳನ್ನು ಪಡೆದರು. ಒಂದು ಜನ್ಮದಲ್ಲಿ, ಅವರು ಭೂಮಿಗೆ ಬಂದು ರಾವಣ ಮತ್ತು ಕುಂಭಕರ್ಣ ಎಂಬ ಹೆಸರಿನ, ದೇವತೆಗಳ ಮೇಲೆಯೇ ಜಯ ಸಾಧಿಸಿದ, ಅತ್ಯಂತ ಶಕ್ತಿಶಾಲಿ ಮತ್ತು ಮಹಾವೀರ ರಾಕ್ಷಸರಾದರು. ಅವರ ಸಂಹಾರಕ್ಕಾಗಿ ಶ್ರೀ ರಾಮಚಂದ್ರನ ಜನ್ಮವಾಯಿತು.

೨. ಜಾಲಂಧರನೆಂಬ ದೈತ್ಯನನ್ನು ಯುದ್ಧದಲ್ಲಿ ವಧಿಸಿ ಅವನಿಗೆ ಪರಮಪದವನ್ನು ನೀಡಿದ ಶ್ರೀರಾಮ

ಒಂದು ಕಲ್ಪದಲ್ಲಿ, ಜಾಲಂಧರನೆಂಬ ಪ್ರಬಲ ರಾಕ್ಷಸನು ಯುದ್ಧದಲ್ಲಿ ಎಲ್ಲಾ ದೇವತೆಗಳನ್ನು ಸೋಲಿಸಿದನು. ದೇವತೆಗಳು ದುಃಖಿತರಾದುದನ್ನು ನೋಡಿದ ಶಿವನು ಜಾಲಂಧರನೊಡನೆ ಘೋರ ಯುದ್ಧವನ್ನು ಮಾಡಿದನು; ಆದರೆ ಆ ಮಹಾಬಲಿ ರಾಕ್ಷಸನ ಹತ್ತಿ ಸಾವು ಸಳಿಯುತ್ತಿರಲಿಲ್ಲ. ಆ ದೈತ್ಯ ರಾಜನ ಪತ್ನಿ ವೃಂದಾ ಮಹಾ ಪತಿವ್ರತೆ, ಇದರಿಂದಾಗಿ ತ್ರಿಪುರಾಸುರನಂತಹ ಅಜೇಯ ಶತ್ರುವನ್ನು ನಾಶಪಡಿಸಿದ ಶಿವನೂ ಆ ಜಾಲಂಧರ ದೈತ್ಯನನ್ನು ಜಯಿಸಲು ಸಾಧ್ಯವಾಗಲಿಲ್ಲ. ಆಗ ಭಗವಾನ ಶ್ರೀಹರಿ ವಿಷ್ಣುವು ಮೋಸದಿಂದ ಆ ಪತಿವ್ರತೆ ವೃಂದಾಳ ವ್ರತವನ್ನು ಭಗ್ನಗೊಳಿಸಿ ದೇವತೆಗಳ ಕಾರ್ಯ ನೆರವೇರಿಸಿದನು. ವ್ರಂದಾಳಿಗೆ ರಹಸ್ಯ ತಿಳಿದಾಗ, ಅವಳು ಕೋಪಗೊಂಡು ಭಗವಾನ ಶ್ರೀಹರಿಯನ್ನು ಶಪಿಸಿದಳು. ಆಗ ಲೀಲಾಸಾಗರ ಕೃಪಾಳು ಹರಿಯು ಆ ಸ್ತ್ರೀಯ ಶಾಪವನ್ನು ಪ್ರಮಾಣವಾಗಿ ಸ್ವೀಕರಿಸಿದನು. ಅದೇ ಜಾಲಂಧರನು ಆ ಕಲ್ಪದಲ್ಲಿ ರಾವಣನಾದನು, ಅವನು ಶ್ರೀರಾಮನಿಂದ ಯುದ್ಧದಲ್ಲಿ ವಧಿಸಲ್ಪಟ್ಟನು ಮತ್ತು ಉನ್ನತ ಸ್ಥಾನವನ್ನು ಪಡೆದನು.

೩. ದೇವರ್ಷಿ ನಾರದರ ಶಾಪವನ್ನು ಶಿರೋಧಾರ್ಯವೆಂದು ಪರಿಗಣಿಸಿ ಮನುಜಾವತಾರವನ್ನು ತಾಳಿದ ಶ್ರೀಹರಿ

ಈ ಪ್ರಸಂಗವು ನಾರದರ ಅಭಿಮಾನ ಮತ್ತು ಮೋಹದೊಂದಿಗೆ ಸಂಬಂಧ ಹೊಂದಿರುವುದರಿಂದ ಬಹಳ ಸ್ವಾರಸ್ಯಕರವಾಗಿದೆ. ಈ ಘಟನೆಗೆ ಸಾಕ್ಷಿಯಾಗಿರುವ ಎರಡು ಗಣಗಳೂ ಶಾಪಗ್ರಸ್ತರಾಗಿದ್ದು, ಶ್ರೀಹರಿ ವಿಷ್ಣುವೂ ಬ್ರಹ್ಮರ್ಷಿ ನಾರದರಿಂದ ಶಾಪಗ್ರಸ್ತರಾಗಿದ್ದಾರೆ.

ರಾಜಕುಮಾರಿ ಶ್ರೀಮತಿಯ ವ್ಯಾಮೋಹದಲ್ಲಿ ಸಿಕ್ಕಿದ ನಾರದಮುನಿಗಳು, ಸ್ವಯಂವರದಲ್ಲಿ ರಾಜಕುಮಾರಿ ತನ್ನನ್ನೇ ಪತಿಯಾಗಿ ಸ್ವೀಕರಿಸುವಂತಾಗಲು ಶ್ರೀವಿಷ್ಣುವಿಗೆ ತನ್ನ ಮೋಹಕ ಹರಿ ರೂಪವನ್ನು ಪ್ರದಾನಿಸುವಂತೆ ಬೇಡಿದರು. ಶ್ರೀವಿಷ್ಣು ಆಗಲಿ ಎಂದು ಹೇಳಲು, ನಾರದಮುನಿಗಳು ಸ್ವಯಂವರದಲ್ಲಿ ‘ತಾನೇ ವರಮಾಲೆಯನ್ನು ಪಡೆಯುವೆನು’ ಎಂಬಂತೆ ಉಪಸ್ಥಿತರಾದರು. ಆದರೆ ರಾಜಕುಮಾರಿಯು, ಅವರನ್ನು ದುರ್ಲಕ್ಷಿಸಿ ಶ್ರೀಹರಿ ಅಂದರೆ ಶ್ರೀವಿಷ್ಣುವಿಗೆ  ವಿವಾಹವಾದರು ಮತ್ತು ವಧುವನ್ನು ಕರೆದುಕೊಂಡು ಹೋದರು. ವಿಫಲರಾದ ಇತರ ರಾಜರು ನಿರಾಶೆಯಿಂದ ಮರಳಿದರು. ಪ್ರಲೋಭನೆಗೆ ಒಳಗಾಗಿ ನಾರದಮುನಿಯ ಬುದ್ಧಿಯು ಭ್ರಷ್ಟವಾಯಿತು, ರಾಜಕುಮಾರಿಯು ತನಗೆ ಸಿಗದ ಕಾರಣ ಅವನು ಬಹಳ ಚಿಂತಾಕ್ರಾಂತನಾದರು. ಆಗ ಶಿವನ ಗಣಗಳು ಮುಗುಳ್ನಕ್ಕು, ‘ಹೇ ಮುನಿ! ಒಮ್ಮೆ ಹೋಗಿ ನಿಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿ’ ಎಂದು ಹೇಳಿ, ಇಬ್ಬರೂ ಓಡಿಹೋದರು. ನಾರದಮುನಿಯು ನೀರಿನಲ್ಲಿ ಸ್ವಂತ ಮುಖವನ್ನು ನೋಡಿದರು. ತನ್ನ ರೂಪವನ್ನು ನೋಡಿ ಅವರು ತುಂಬಾ ಕೋಪಗೊಂಡರು. ಅವರು ಶಿವನ ಆ ಗಣಗಳನ್ನು ಕಠೋರವಾಗಿ ಶಾಪ ನೀಡುತ್ತ, “ನೀವಿಬ್ಬರೂ ಮೋಸಗೊಳಿಸುವ-ಪಾಪಿ ರಾಕ್ಷಸರಾಗುವಿರಿ, ನೀವು ನನ್ನನ್ನು ಗೇಲಿ ಮಾಡಿದ್ದೀರಿ, ಈಗ ಅದರ ಫಲವನ್ನು ಅನುಭವಿಸಿ. ನಂತರ ಯಾರಾದರೂ ಋಷಿಗಳನ್ನು ಗೇಲಿ ಮಾಡಿ.”

ನಂತರ, ಆ ಶಿವಗಣಗಳು ನಾರದರ ಶಾಪದಿಂದ ಮುಕ್ತಿಗಾಗಿ ಪ್ರಾರ್ಥಿಸಿದಾಗ, ನಾರದರಿಗೆ ಅವರ ಮೇಲೆ ಕರುಣೆ ಬಂದು, “ನೀವಿಬ್ಬರೂ ರಾಕ್ಷಸರಾಗುವಿರಿ (ರಾವಣ ಮತ್ತು ಕುಂಭಕರ್ಣ). ನೀವು ಉತ್ತಮ ಸಮೃದ್ಧಿ, ತೇಜಸ್ಸು ಮತ್ತು ಶಕ್ತಿಯನ್ನು ಪಡೆಯುತ್ತೀರಿ. ನೀವು ಶಸ್ತ್ರಾಸ್ತ್ರಗಳ ಬಲದಿಂದ ಇಡೀ ಜಗತ್ತನ್ನು ಗೆದ್ದಾಗ, ಭಗವಾನ್ ವಿಷ್ಣುವು ಮನುಷ್ಯನ ದೇಹವನ್ನು (ಶ್ರೀ ರಾಮಾವತಾರ) ಧರಿಸಿಕೊಳ್ಳುತ್ತಾನೆ ಮತ್ತು ನೀವು ಶ್ರೀ ಹರಿಯ ಕೈಯಲ್ಲಿ ವಧಿಸಲ್ಪಡುವಿರಿ. ಆದ್ದರಿಂದ ನೀವು ಮಕ್ತರಾಗಿ ಮತ್ತೆ ಭೂಮಿಯ ಮೇಲೆ ಎಂದಿಗೂ ಜನ್ಮ ಪಡೆಯುವುದಿಲ್ಲ.”

ನಾರದಮುನಿಯು ಶ್ರೀಹರಿಯನ್ನುದ್ದೇಶಿಸಿ ಹೇಳುತ್ತಾರೆ, “ಯಾವ ಶರೀರವನ್ನು ಧರಿಸಿ ನನ್ನನ್ನು ವಂಚಿಸಿದ್ದೀರೋ, ಅದೇ ಶರೀರವನ್ನು ನೀವೂ ಧರಿಸುತ್ತೀರಿ ಎಂದು ನಾನು ನಿಮಗೆ ಶಾಪ ನೀಡುತ್ತೇನೆ. ನೀವು ನನಗೆ ವಾನರನ ದೇಹ ಕೊಟ್ಟಿದ್ದಕ್ಕೆ, ನಿಮಗೆ ವಾನರರೇ ಸಹಾಯ ಮಾಡುತ್ತವೆ. ನಾನು ಹಂಬಲಿಸುತ್ತಿದ್ದ ಸ್ತ್ರೀಯನ್ನು ನನ್ನಿಂದ ಬೇರ್ಪಡಿಸಿ ನನಗೆ ಅಹಿತವನ್ನುಂಟು ಮಾಡಿದ್ದೀರಿ. ಆದುದರಿಂದ ನೀವು ಕೂಡ ನಿಮ್ಮ ಹೆಂಡತಿಯನ್ನು ಕಳೆದುಕೊಂಡು ದುಃಖಪಡಬೇಕಾಗುವುದು”. ಆ ಕಲ್ಪದಲ್ಲಿ ದೇವರ್ಷಿ ನಾರದರ ಶಾಪವು ಶ್ರೀರಾಮನ ಜನನಕ್ಕೆ ಕಾರಣವಾಯಿತು.

೪. ರಾಕ್ಷಸನಾಗುವ ಶಾಪಕ್ಕೊಳಗಾದ ಪ್ರತಾಪಭಾನು ಎಂಬ ರಾಜನ ಮುಕ್ತಿಗಾಗಿ ಶ್ರೀ ರಾಮಾವತಾರವಾಗುವುದು

ಮಹರ್ಷಿ ಯಾಜ್ಞವಲ್ಕ್ಯ ಮತ್ತು ಭಾರದ್ವಾಜ ಮುನಿ ಶ್ರೀರಾಮನ ಅವತಾರವನ್ನು ತಾಳಿದ ಮತ್ತೊಂದು ಕಾರಣವನ್ನು ನೀಡುವಾಗ ಚಕ್ರವರ್ತಿ ರಾಜ ಪ್ರತಾಪಭಾನುವಿನ ಕಥೆಯನ್ನು ಹೇಳುತ್ತಾರೆ. ಪ್ರತಾಪಭಾನು ರಾಜನು ಯಾರೋ ಋಷಿಗಳನ್ನು ಮೋಸ ಮಾಡಿದ್ದನು, ಅದಕ್ಕಾಗಿಯೇ ಆ ಮುನಿಗಳು ರಾಜನನ್ನು ಶಪಿಸಿದರು ಮತ್ತು “ಎಲೈ ಮೂರ್ಖ ರಾಜನೇ! ನಿನ್ನ ಕುಟುಂಬದೊಂದಿಗೆ ನೀನು ರಾಕ್ಷಸನಾಗುವಿ”. ಕಾಲಕ್ರಮೇಣ ಆ ರಾಜ ಪ್ರತಾಪಭಾನು ಪರಿವಾರ ಸಹಿತ ರಾವಣನೆಂಬ ರಾಕ್ಷಸನಾದನು. ಅವನಿಗೆ 10 ತಲೆಗಳು ಮತ್ತು 20 ತೋಳುಗಳಿದ್ದವು. ರಾವಣನೋ ಮಹಾಪರಾಕ್ರಮಿ. ಪ್ರತಾಪಭಾನುವಿಗೆ ಕಿರಿಯ ಸಹೋದರನಾಗಿದ್ದ ಅರಿಮರ್ದನನು ಬಲಶಾಲಿ ಕುಂಭಕರ್ಣನಾದನು. ಅವನ ಮಂತ್ರಿ, ಹೆಸರು ಧರ್ಮರುಚಿ, ರಾವಣನ ಮಲ ಸಹೋದರ ವಿಭೀಷಣನಾದ. ಅವರು ವಿಷ್ಣುವಿನ ಭಕ್ತರಾಗಿದ್ದರು ಮತ್ತು ಜ್ಞಾನ ಮತ್ತು ವಿಜ್ಞಾನದ ನಿಧಿಯಾಗಿದ್ದರು. ರಾಜನ ಮಕ್ಕಳು ಮತ್ತು ಸೇವಕರು ಎಲ್ಲಾ ಭಯಾನಕ ರಾಕ್ಷಸರಾದರು. ಅವರ ದಬ್ಬಾಳಿಕೆಯಿಂದ ತ್ರಿಲೋಕಗಳನ್ನು ಮುಕ್ತಗೊಳಿಸುವುದೇ ಆ ಕಲ್ಪದಲ್ಲಿ ಶ್ರೀ ರಾಮಾವತಾರದ ಉದ್ದೇಶವಾಗಿತ್ತು.

೫. ಭಗವಾನ್ ವಿಷ್ಣು ಮಹರ್ಷಿ ಭೃಗುವಿನಿಂದ ಶಾಪಗ್ರಸ್ತರಾಗಿ ಮನುಷ್ಯಲೋಕದಲ್ಲಿ ಜನಿಸುವುದು

ವಾಲ್ಮೀಕಿ-ರಾಮಾಯಣದ ಉತ್ತರಕಾಂಡದ ೯೧ನೇ ಖಂಡದಲ್ಲಿ ಮುಂದಿನ ಪ್ರಸಂಗವಿದೆ. ‘ಇದು ಬಹಳ ಹಿಂದಿನ ವಿಷಯ. ಒಮ್ಮೆ ದೇವಾಸುರರ ಯುದ್ಧದಲ್ಲಿ, ದೇವತೆಗಳಿಂದ ಕಿರುಕುಳದಿಂದ ತಪ್ಪಿಸಿಕೊಳ್ಳಲು ರಾಕ್ಷಸರು ಮಹರ್ಷಿ ಭೃಗುವಿನ  ಪತ್ನಿಯಲ್ಲಿ ಆಶ್ರಯ ಪಡೆದರು. ಆ ಸಮಯದಲ್ಲಿ, ಭೃಗುಪತ್ನಿ ರಾಕ್ಷಸರಿಗೆ ರಕ್ಷಣೆ ನೀಡಿದರು ಮತ್ತು ಅವರು ಆಶ್ರಮದಲ್ಲಿ ನಿರ್ಭಯವಾಗಿ ವಾಸಿಸಲು ಪ್ರಾರಂಭಿಸಿದರು. ಭೃಗುಪತ್ನಿಯು ರಾಕ್ಷಸರಿಗೆ ಆಶ್ರಯ ನೀಡಿದುದನ್ನು ಕಂಡು ಕೋಪಗೊಂಡ ವಿಷ್ಣುವು ಸುದರ್ಶನ ಚಕ್ರದಿಂದ ಅವರ ಶಿರಚ್ಛೇದವನ್ನು ಮಾಡಿದರು. ಭಾರ್ಗವ ವಂಶದ ಪ್ರವರ್ತಕರಾದ ಭೃಗುವು ತನ್ನ ಪತ್ನಿಯ ವಧೆಯ ವಿಷಯ ತಿಳಿದ ತಕ್ಷಣ ಕೋಪಗೊಂಡು ಭಗವಾನ್ ಶ್ರೀಹರಿವಿಷ್ಣುವಿಗೆ ಶಾಪ ನೀಡಿದರು, “ಹೇ ಜನಾರ್ದನ! ನನ್ನ ಪತ್ನಿಯು ವಧೆಯಂತಹ ಶಿಕ್ಷೆಗೆ ಗುರಿಯಾಗಿಸುವಂತಹ ತಪ್ಪಿತಸ್ಥಳಲ್ಲ; ಆದರೆ ನೀವು ಕೋಪದ ಭರದಲ್ಲಿ ಅವಳನ್ನು ಕೊಂದಿದ್ದೀರಿ. ಆದುದರಿಂದ ನೀವೂ ಮಾನವ ಲೋಕದಲ್ಲಿ ಹುಟ್ಟಿ ಅಲ್ಲಿ ಅನೇಕ ವರ್ಷಗಳ ಕಾಲ ಹೆಂಡತಿಯನ್ನು ಕಳೆದುಕೊಂಡ ದುಃಖವನ್ನು ಸಹಿಸಬೇಕಾಗುತ್ತದೆ”. ಆದರೆ ಈ ರೀತಿಯ ಶಾಪ ನೀಡಿದ ನಂತರ ಭೃಗು ಮಹರ್ಷಿಗಳಿಗೆ ಪಶ್ಚಾತ್ತಾಪವಾಯಿತು.

೬. ಮನು-ಶತರೂಪಾ ಎಂಬ ತಪಸ್ವಿ ದಂಪತಿಗಳ ಮಗನಾಗಿ ಹುಟ್ಟಿದ ಶ್ರೀಹರಿ

ಇನ್ನೊಂದು ಕಲ್ಪದಲ್ಲಿ, ಶ್ರೀಹರಿಯ ಮನುಜಾವತಾರವನ್ನು ವಿವರಿಸುವಾಗ, ಶಿವನು ಗಿರಿರಾಜಕುಮಾರಿಗೆ (ಪಾರ್ವತಿ) ಹೇಳುತ್ತಾನೆ, ‘ಹೇ ಗಿರಿರಾಜಕುಮಾರಿ (ಪಾರ್ವತಿ), ಈಗ ಭಗವಂತನ ಅವತಾರಕ್ಕೆ ಎರಡನೇ ಕಾರಣವನ್ನು ಕೇಳು. ಆಜನ್ಮ, ನಿರ್ಗುಣ ಮತ್ತು ನಿರಾಕಾರ (ಸುಪ್ತ ಸಚ್ಚಿದಾನಂದಘನ) ಬ್ರಹ್ಮನನ್ನು ಅಯೋಧ್ಯಾಪುರಿಯ ರಾಜನನ್ನಾಗಿ ಮಾಡಿದ ಆ ವಿಲಕ್ಷಣ ಕಥೆಯನ್ನು ನಾನು ವಿವರವಾಗಿ ಹೇಳುತ್ತೇನೆ.

ನಂತರ ಅವರು ಪಾರ್ವತಿಯನ್ನು ಸ್ವಯಂಭೂ ಮನು ಮತ್ತು ಅವರ ಪತ್ನಿ ಶತರೂಪಾ ಅವರ ಅನನ್ಯ ತಪಸ್ಸಿಗಾಗಿ ಶ್ಲಾಘಿಸುತ್ತಾರೆ. ಅದೇ ರೀತಿ ಆ ಕಲ್ಪದಲ್ಲಿ ಶ್ರೀರಾಮಾವತಾರ ಆಗುವ ಹಿಂದಿರುವ ವರ ಮತ್ತು ತಪಸ್ವಿ ದಂಪತಿಗಳಾದ ಮನು-ಶತರೂಪಾರವರು ಶ್ರೀಹರಿಯಲ್ಲಿ ಆ ವರವನ್ನು ಕೇಳುವುದನ್ನೂ ವಿವರಿಸುತ್ತಾರೆ. ಹಾಗೆಯೇ ಶ್ರೀಹರಿಯು ತಪಸ್ವಿ ದಂಪತಿಗಳಿಗೆ “ಹೇ ರಾಜ! ನನ್ನಲ್ಲಿ ವರ ಬೇಡಲು ಹಿಂಜರಿಯಬೇಡಿ. ನಿನಗೆ ಕೊಡಲಾಗದಂತಹದ್ದು ಏನೂ ಇಲ್ಲ.” ಇದನ್ನು ಕೇಳಿದ ಮನು ರಾಜನು ಕೈ ಜೋಡಿಸಿ ಶ್ರೀಹರಿವಿಷ್ಣುವಿಗೆ ಹೇಳಿದನು. “ಹೇ ದಾನಶೂರರ ಶಿರೋಮಣಿ! ಹೇ ಕೃಪಾನಿಧಿ! ಹೇ ನಾಥ್! ನಾನು ನಿಮಗೆ ನನ್ನ ಮನದಾಳದ ಮಾತನ್ನು ಹೇಳುತ್ತೇನೆ, ನನಗೆ ನಿಮ್ಮಂತಹ ಮಗ ಬೇಕು. ನಾವು ಭಗವಂತನಿಂದ ಏನನ್ನೂ ಏಕೆ ಮುಚ್ಚಿಡಬೇಕು?” ರಾಜ ಮತ್ತು ರಾಣಿಯ ಅಂತಹ ಅದ್ಭುತವಾದ ಭಕ್ತಿಯನ್ನು ನೋಡಿ ಮತ್ತು ಅವರ ಅಮೂಲ್ಯವಾದ ಮಾತುಗಳನ್ನು ಕೇಳಿದ ಕರುಣಾನಿಧಿ ಭಗವಂತನು “ಹಾಗೇ ಆಗಲಿ! ಹೇ ರಾಜನ್, ನನ್ನಂಥವನ್ನನ್ನು ಬೇರೆಲ್ಲಿ ಹುಡುಕಲಿ? ಹಾಗಾಗಿ ನಾನೇ ನಿನ್ನ ಮಗನಾಗಿ ಬರುತ್ತೇನೆ.” ಈಗ ನನ್ನ ಆಜ್ಞೆಯೆಂದು ಪಾಲಿಸಿ, ದೇವರಾಜ ಇಂದ್ರನ ರಾಜಧಾನಿ ಅಮರಾವತಿಯಲ್ಲಿ ಹೋಗಿ ನೆಲೆಸಿ. ತೀರ್ಥರೂಪ! ಅಲ್ಲಿ ಅನೇಕ ಆನಂದಗಳನ್ನು ಅನುಭವಿಸಿದ ನಂತರ, ಸ್ವಲ್ಪ ಸಮಯದ ನಂತರ ನೀವು ಅವಧ (ಅಂದರೆ ಅಯೋಧ್ಯೆಯ) ರಾಜರಾಗುತ್ತೀರಿ. ಆಗ ನಾನು ನಿಮ್ಮ ಮಗನಾಗಿ ಹುಟ್ಟಲಿದ್ದೇನೆ.”

ದೇವರ ಅವತಾರದ ಹಿಂದೆ ಅನಂತ ಉದ್ದೇಶಗಳಿರುತ್ತವೆ, ಇದನ್ನು ‘ನೇತಿ-ನೇತಿ’ ಎಂದು ವಿವರಿಸಲಾಗಿದೆ.

– ಡಾ. ರಮೇಶ್ ಮಂಗಲಜಿ ವಾಜಪೇಯಿ

(ಆಧಾರ : ಮಾಸಿಕ ‘ಕಲ್ಯಾಣ’, ಏಪ್ರಿಲ್ 2021)

1 thought on “ಶ್ರೀರಾಮ ಜನ್ಮ ತಾಳುವ ಹಿಂದೆ ಇರುವ ಹಲವು ಉದ್ದೇಶಗಳು”

Leave a Comment